ವಿಷಯಕ್ಕೆ ಹೋಗು

ಟೇಬಲ್ ಟೆನ್ನಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಟೇಬಲ್‌ ಟೆನ್ನಿಸ್‌ ಇಂದ ಪುನರ್ನಿರ್ದೇಶಿತ)
ಟೇಬಲ್ ಟೆನ್ನಿಸ್
ಉತ್ಕೃಷ್ತ ಮಟ್ಟದಲ್ಲಿ ಆಡಲಾಗುತ್ತಿರುವ ಟೇಬಲ್ ಟೆನ್ನಿಸ್ ಆಟ
ಪ್ರಮುಖ ಆಡಳಿತ ನಡೆಸು ಮಂಡಳಿ ITTF
ಉಪನಾಮ(ಗಳು)ಪಿಂಗ್ ಪಾಂಗ್, ವಿಫ್ ವಾಫ್
ಮೊದಲ ಆಟ೧೮೮೦ರ ದಶಕ
ವಿಶೇಷಗುಣಗಳು
ಸಂಬಂಧಇಲ್ಲ
ತಂಡ ಸದಸ್ಯರುಗಳುಸಿಂಗಲ್ಸ್ ಅಥವ ಡಬಲ್ಸ್
ಕಲ ಲಿಂಗಪುರುಷರು ಮತ್ತು ಮಹಿಳೆಯರು
ವರ್ಗೀಕರಣರ್‍ಯಾಕೆಟ್ ಕ್ರೀಡೆ, ಒಳಾಂಗಣ
ಸಲಕರಣೆcelluloid, 40 mm
ಒಲಿಂಪಿಕ್೧೯೮೮

ಟೇಬಲ್ ಟೆನ್ನಿಸ್ ಎರಡು ಅಥವಾ ನಾಲ್ಕು ಆಟಗಾರರು ಹಗುರವಾದ ಟೊಳ್ಳು ಚೆಂಡನ್ನು ರ್‍ಯಾಕೆಟ್‍‍ನಿಂದ ಹಿಂದಕ್ಕೆ ಅಥವಾ ಮುಂದಕ್ಕೆ ಹೊಡೆಯುವ ಆಟ. ಈ ಆಟವನ್ನು ನೆಟ್‌‍ನಿಂದ ವಿಭಾಗಿಸಿದ ಗಟ್ಟಿ ಮೇಜಿನ ಮೇಲೆ ಆಡಲಾಗುತ್ತದೆ. ಮೊದಲ ಸರ್ವ್‌ನಲ್ಲಿ ಮಾತ್ರ ಬಿಟ್ಟು ಉಳಿದ ಸರ್ವ್‌ಗಳಲ್ಲಿ ಆಟಗಾರರು ಚೆಂಡು ತಮ್ಮ ಕಡೆ ಒಂದು ಬಾರಿ ಮಾತ್ರ ಪುಟಿಯಲು ಅವಕಾಶ ಕೊಟ್ಟು ಇನ್ನೊಂದು ಕಡೆಯ ಮೇಜಿನ ಮೇಲೆ ಬೀಳುವಂತೆ ಮಾಡಬೇಕು. ನಿಯಮದಂತೆಯೇ ಚೆಂಡನ್ನ ಹಿಂತಿರುಗಿಸಲು ಆಟಗಾರ ವಿಫಲನಾದಾಗ ಅಂಕಗಳು (ಪಾಯಿಂಟುಗಳು)ಲೆಕ್ಕ ಮಾಡಲ್ಪಡುತ್ತವೆ. ಆಟವು ವೇಗವಾಗಿದ್ದು, ಶೀಘ್ರ ಪ್ರತಿಕ್ರಿಯೆಯನ್ನು ಕೋರುತ್ತದೆ. ಕೌಶಲ್ಯಯುತ ಆಟಗಾರ ಚೆಂಡಿಗೆ ಅನೇಕ ವಿಧದ ಗಿರಕಿ(ಸುತ್ತಿಸು)ಗಳನ್ನು ಹೊಡೆಯುವಂತೆ ಮಾಡುತ್ತಾನೆ, ಅದು ತನ್ನ ಮಾರ್ಗವನ್ನು ಬದಲಾಯಿಸುತ್ತದೆ ಮತ್ತು ಅನೂಕೂಲಗಳನ್ನುಂಟು ಮಾಡುತ್ತಾ ಎದುರಾಳಿಯ ಆಯ್ಕೆಗಳನ್ನು ಸೀಮಿತಗೊಳಿಸುತ್ತದೆ.

ಆಟವನ್ನು ೧೯೨೬ರಲ್ಲಿ ಸ್ಥಾಪನೆಯಾದ ಅಂತರರಾಷ್ಟ್ರೀಯ ಟೇಬಲ್ ಟೆನ್ನಿಸ್ ಒಕ್ಕೂಟ(ITTF) ನಿಯಂತ್ರಿಸುತ್ತದೆ. ೧೯೮೮ರಿಂದ ಟೇಬಲ್ ಟೆನ್ನಿಸ್ ಒಲಂಪಿಕ್ ಕ್ರೀಡೆಯಾಗಿದೆ, ಅದರಲ್ಲಿ ನಾಲ್ಕು ವಿಧದ ಪಂದ್ಯಗಳನ್ನು ಒಳಗೊಂಡಿರುತ್ತದೆ. ೧೯೮೮ ರಿಂದ ೨೦೦೪ ರವರೆಗೆ ಆಡಿದ ಪಂದ್ಯಗಳೆಂದರೆ ಪುರುಷರ ಸಿಂಗಲ್ಸ್, ಮಹಿಳೆಯರ ಸಿಂಗಲ್ಸ್, ಪುರುಷ ಡಬಲ್ಸ್ ಮತ್ತು ಮಹಿಳೆಯರ ಡಬಲ್ಸ್. ೨೦೦೮ರಿಂದ ಡಬಲ್ಸ್ ತಂಡದ ಪಂದ್ಯಗಳಿಂದ ಬದಲಾವಣೆ ಕಂಡಿವೆ (ಬೀಜಿಂಗ್‌ನಲ್ಲಿ ಮೊದಲ ಬಾರಿಗೆ ಟೇಬಲ್ ಟೆನ್ನಿಸ್ ಆಟವನ್ನು, ಒಲಂಪಿಕ್ ತಂಡದ ಪಂದ್ಯವಾಗಿ ಆಡಲಾಯಿತು).

ಸಾಮಾನ್ಯ ವಿವರಣೆ

[ಬದಲಾಯಿಸಿ]
ಸ್ಟಾಂಡರ್ಡ್ ಟೆಬಲ್‌ ಟೆನ್ನಿಸ್ ಟೆಬಲ್‌, ರ್‍ಯಾಕೆಟ್‌ ಮತ್ತು ಬಾಲ್‌ನ ಜೊತೆಗೆ

ಈ ಆಟವು ಎರಡು ಅಥವಾ ನಾಲ್ಕು ಜನ ಆಟಗಾರರಿ೦ದ ಆಡಲ್ಪಡುತ್ತದೆ. ಟೆನ್ನಿಸ್ಆಟದ೦ತೆಯೇ ಪ್ರತೀ ಆಟಗಾರರು ಬ್ಯಾಟ್‌ನಿಂದ ಚೆ೦ಡನ್ನು ಮೇಜಿನ ಮೇಲೆ ಹಿ೦ದಕ್ಕೆ ಹಾಗೂ ಮು೦ದಕ್ಕೆ ಹೊಡೆಯುವ ಮೂಲಕ ಆಡಲಾಗುತ್ತದೆ. ನಿಯಮಗಳು ಮಾತ್ರ ಟೆನ್ನಿಸ್‌ಗಿಂತ ತುಸು ಭಿನ್ನವಾಗಿವೆಯಾದರೂ ಪರಿಕಲ್ಪನೆಯು ಟೆನ್ನಿಸ್‌ಗೆ ಹೋಲುತ್ತದೆ. ಸಿಂಗಲ್ಸ್‌ ಆಟದಲ್ಲಿ ಸರ್ವ್‌ ಮಾಡುವಾಗ ಟೆನ್ನಿಸ್‌ನಲ್ಲಿರುವಂತೆ ಅಂಕಣದ ಬಲ ತುದಿಯಿಂದ ಇನ್ನೊಂದೆಡೆ ಇರುವವನ ಕೋರ್ಟ್‌ನ ಬಲತುದಿಗೆ (ಅಥವಾ ಎಡದಿಂದ ಎಡಕ್ಕೆ) ಹೊಡೆಯುವ ಅಗತ್ಯವಿಲ್ಲ. ಅದೇನೇ ಇದ್ದರೂ ಡಬಲ್ಸ್ ಆಟದಲ್ಲಿ ಚೆಂಡನ್ನು ಟೇಬಲ್‌ನ ಯಾವ ಕಡೆಯಿಂದ ಬೇಕಾದರೂ ಹೊಡೆಯವ ಅಗತ್ಯ ಬೀಳುತ್ತದೆ. ಚೆಂಡು ಸ್ಪಿನ್‌ ಆಗುವಿಕೆ, ವೇಗ, ನಿಯೋಜನೆ, ಕೌಶಲ್ಯ ಮತ್ತು ಸಾಧನೋಪಾಯಗಳು ಸ್ಪರ್ಧಾತ್ಮಕ ಟೇಬಲ್ ಟೆನ್ನಿಸ್ ಪಂದ್ಯಗಳಲ್ಲಿ ಅತ್ಯಂತ ಪ್ರಮುಖ ಭಾಗವಾಗಿರುತ್ತವೆ. ಚೆಂಡಿನ ವೇಗವು ವಿವಿಧ ರೀತಿಯಲ್ಲಿರಬಹುದು ಅದು ನಿಧಾನಗತಿಯದ್ದಾಗಿರಬಹುದು ಅಥವಾ ಸ್ಪಿನ್‌ ರೀತಿಯದ್ದಾಗಿರಬಹುದು. ಅದಲ್ಲದೇ ಸ್ಮಾಶ್‌ಹಿಟ್‌ ರೀತಿಯದ್ದಾಗಿರಬಹುದು, ಇದು ಗಂಟೆಗೆ 112.5 ಕಿಲೋ ಮೀಟ‌ರ್‌ಗಳಷ್ಟುವೇಗವಾಗಿ (70 mph)ಕ್ರಮಿಸುವಂತಿರುತ್ತದೆ.[]

ಆಟವನ್ನು 274 ಸೆಂ. × 152.5 ಸೆಂ. × 76 ಸೆಂ.ಎತ್ತರದ (9 ಅಡಿ × 5 ಅಡಿ × 30 ಇಂಚುಗಳ ಎತ್ತರ) ಒಂದು ಮೇಜಿನ ಮೇಲೆ ಆಡಲಾಗುತ್ತದೆ. ಅಂತರರಾಷ್ಟ್ರೀಯ ಟೇಬಲ್ ಟೆನ್ನಿಸ್ ಒಕ್ಕೂಟವು ಸ್ಪರ್ಧೆಗಳಿಗಾಗಿ 14 ಮೀ.ಉದ್ದ, 7 ಮೀ. ಅಗಲ ಮತ್ತು 5 ಮೀ. ಎತ್ತರಕ್ಕಿಂತ ಕಡಿಮೆಯಾಗದಂತೆ ಒಟ್ಟು ಆಟದ ಜಾಗವನ್ನು ಬಯಸುತ್ತದೆ. ಗಾತ್ರ ಅಥವಾ ಆಕಾರದಲ್ಲಿ ಯಾವುದೇ ಮಿತಿಗಳನ್ನು ನಿರ್ಧಿಷ್ಟಪಡಿಸಿರುವುದಿಲ್ಲ. ಆಸ್ಪದ ಕೊಟ್ಟರೆ ನೀವು ಗೆಲ್ಲಲು ಸಾಧ್ಯವೇ ಇಲ್ಲ. ಅದನ್ನು ಮರು ಆಟದಲ್ಲಿಯೂ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ಆಧುನಿಕ ಜಾಲರಿ ಬ್ಯಾಟ್‌‍ಗಳು ಸಾಮಾನ್ಯವಾಗಿ ರಾಕೇಟ್‌ನ ಹಿಡಿಕೆಯಲ್ಲಿ ತೆಳುವಾದ ರಬ್ಬರ್ ಹೊದಿಕೆಯಿ೦ದ ಕೂಡಿರುತ್ತವೆ. ಈ ರಬ್ಬರ್ ಒಳಭಾಗ ಅಥವಾ ಹೊರಭಾಗದಲ್ಲಿ ಚಿಕ್ಕ ಗುಳ್ಳೆಗಳನ್ನು ಹೊ೦ದಿದ್ದು, ಮರದ ಹಿಡಿಕೆಯ ಹಾಗೂ ಈ ರಬ್ಬರ್‌ನ ನಡುವೆ ತೆಳ್ಳನೆಯ ಸ್ಪಾ೦ಜ್‌ನ್ನು ಹೊ೦ದಿರುತ್ತವೆ. ಆಧುನಿಕ ಟೆನ್ನಿಸ್ ಆಟದಲ್ಲಿ ಸ್ಪಿನ್(ತಿರುಗಿಸುವಿಕೆ)ದೊಡ್ಡ ಪಾತ್ರವನ್ನು ವಹಿಸುತ್ತಿದ್ದು,ರಬ್ಬರ್ ಹಾಗೂ ಸ್ಪಾ೦ಜ್‌ಗಳ ಸ೦ಯೋಜನೆಯು ಸ್ಪಿನ್ ಮಾಡುವಿಕೆಯನ್ನು ಹೆಚ್ಚಿಸುವುದು ಹಾಗೂ ಆಟಗಾರನು ಚೆ೦ಡನ್ನು ವೇಗಗೊಳಿಸುವ೦ತೆ ಮಾಡುವ ವಿನ್ಯಾಸವನ್ನು ಹೊಂದಿದೆ. ಇನ್ನಿತರ ತಾ೦ತ್ರಿಕ ಅಭಿವೃಧ್ಧಿಗಳೆ೦ದರೆ ರಾಕೇಟ್‌ ಸ್ವೀಟ್ ಸ್ಪಾಟ್‌ನ ಗಾತ್ರ ಹೆಚ್ಚಿಸುವಿಕೆ ಅಥವಾ ಬ್ಲೇಡ್‌ನ ಬಿಗಿಯಾಗಿಸುವಿಕೆಗೆ ಕಾರ್ಬನ್ ಅಥವಾ ಸಿ೦ಥೆಟಿಕ್ ಹೊದಿಕೆಗಳನ್ನು ಹಾಕುವುದೂ ಸೇರಿದೆ.

ಟೆನ್ನಿಸ್‌ನಲ್ಲು ಉಪಯೋಗಿಸುವ ಚೆ೦ಡು ಸೆಲ್ಲ್ಯುಲೈಡ್‌ನಿ೦ದ ಮಾಡಲ್ಪಟ್ಟು, ಪೊಳ್ಳಾಗಿದ್ದು 40 ಎಮ್‌ಎಮ್ ಡಯಾಮೀಟರ್‌(ಮೊದಲು38ಎಮ್‌ಎಮ್)ನದ್ದಾಗಿದೆ. ಚೆ೦ಡಿನ ಮೇಲಿರುವ ಮೂರು ನಕ್ಷತ್ರದ ಚಿಹ್ನೆಯು ಸಾಮಾನ್ಯವಾಗಿ ಅತ್ಯುತ್ತಮ ಗುಣಮಟ್ಟವನ್ನು ಸೂಚಿಸುತ್ತಿದ್ದು, ಇದರ ವೃತ್ತಾಕಾರ,ಬೌನ್ಸ್ ಆಗುವ ರೀತಿ ಮತ್ತು ಇದೇ ರೀತಿಯ ಚೆ೦ಡುಗಳ ನಿರ್ಮಾಣ ಮತ್ತು ಮಾದರಿಯ ನಡುವಿನ ಅನುಕ್ರಮ ಸಾಂದ್ರತೆಯ ಮೇಲೆ ಇದು ನಿರ್ಧರಿತವಾಗುತ್ತದೆ.

ಮೊದಲು 11 ಅ೦ಕಗಳನ್ನು ಅಥವಾ ಅದಕ್ಕಿ೦ತ ಹೆಚ್ಚು ಅಥವಾ ಗಳಿಸಿದ ಅ೦ಕಗಳಿಗಿ೦ತ ಎರಡು ಅಥವಾ ಅದಕ್ಕಿ೦ತ ಹೆಚ್ಚಿನ ಅ೦ಕಗಳನ್ನು ಗಳಿಸಿದವರು ವಿಜೇತನಾಗುತ್ತಾನೆ. ಪ್ರತಿ ಎರಡು ಅ೦ಕಗಳಿಗೆ ಸರ್ವ್ ಮಾಡುವ ಆಟಗಾರರು ಬದಲಾಗುತ್ತಾರೆ. 10-10 (ಅಥವಾ ಡ್ಯೂ) ಆದಾಗ ಆಟಗಾರರು ಪ್ರತಿಯೊಂದು ಸರ್ವ್‌ಗೆ ಬದಲಾಗುತ್ತಾರೆ; ವಿಜೇತನಾದವನು ತನ್ನ ಎದುರಾಳಿಯನ್ನು ಸೋಲಿಸಿ ಎರಡು ಅಂಕಗಳನ್ನು ಹೆಚ್ಚು ಪಡೆದವನಾಗಿರುತ್ತಾನೆ. ಅಂತರರಾಷ್ಟ್ರೀಯ ಟೇಬಲ್ ಟೆನ್ನಿಸ್ ಒಕ್ಕೂಟವು (ITTF) 2001ರಲ್ಲಿ 11 ಅಂಕದ ಆಟವನ್ನು ಜಾರಿಗೆ ತಂದಿತ್ತು. ಇದಕ್ಕೂ ಮುಂಚೆ ಮೊದಲ ಆಟಗಾರ 21 ಅಂಕಗಳನ್ನು (ಡ್ಯೂಗಳನ್ನು ಹೊರತಾಗಿ,ಈ ಮೇಲೆ ವಿವರಿಸಿದಂತೆ) ಪಡೆದು ಆಟವನ್ನು ಗೆಲ್ಲುತ್ತಿದ್ದ. ಎಲ್ಲ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ (ITTF) ಆಟಗಳನ್ನು ಈಗ 11ಅಂಕಗಳ ಆಟವನ್ನಾಗಿಯೇ ಆಡಲಾಗುತ್ತಿದೆ. ಇದು ಐದು (5) ಸೆಟ್‌ಗಳಲ್ಲಿಯ ಉತ್ತಮ ಅಂಕಗಳನ್ನು (ಪ್ರಾರಂಭಿಕ ಪಂದ್ಯಗಳಿಗೆ) ಹಾಗೂ ಏಳು (7) ಸೆಟ್‌ಗಳಲ್ಲಿ ಉತ್ತಮವಾದುದನ್ನು (ಚಾಂಪಿಯನ್‌ಶಿಪ್‌ ಪಂದ್ಯಗಳಿಗೆ) ಆಧರಿಸಿ ನಿರ್ಧರಿಸಲಾಗುತ್ತದೆ.

ಇತಿಹಾಸ

[ಬದಲಾಯಿಸಿ]

ಆಟವು ವಿಕ್ಟೋರಿಯನ್ ಯುಗದ ಅವಧಿಯಲ್ಲಿ ಇಂಗ್ಲೆಂಡ್‌ನ ಕ್ರೀಡೆಯಾಗಿ ಆರಂಭಗೊಂಡಿತು, ಆಗ ಉನ್ನತ-ವರ್ಗದ ಜನರು ಊಟದ ನಂತರ ಮನರಂಜನಾ ಚಟುವಟಿಕೆಯಾಗಿ ಇದನ್ನು ಆಡುತ್ತಿದ್ದರು. ಇದನ್ನು ಸಾಮಾನ್ಯವಾಗಿ "ವಿಫ್-ವಾಫ್" ಎಂದು ಕರೆಯಲಾಗುತ್ತಿತ್ತು. ಪುಸ್ತಕಗಳನ್ನು ನೆಟ್‌ನಂತೆ ಮೇಜಿನ ಮಧ್ಯದಲ್ಲಿ ಪೇರಿಸಲಾಗುತ್ತಿತ್ತು. ಎರಡು ಪುಸ್ತಕಗಳನ್ನು ಜಾಲರಿ ಬ್ಯಾಟ್‌‍ನಂತೆ ಬಳಸುವ ಮೂಲಕ ಮೇಜಿನ ಒಂದು ಕಡೆಯಿಂದ ಮತ್ತೊಂದು ಕಡೆಗೆ ಗಾಲ್ಫ್-ಚೆಂಡನ್ನು ನಿರಂತರವಾಗಿ ಹೊಡೆಯಲು ಬಳಸಲಾಗುತ್ತಿತ್ತು. ಕಾಲಕ್ರಮೇಣ ಟೇಬಲ್ ಟೆನ್ನಿಸ್ ಯುರೋಪ್ ಮತ್ತು ಯುನೈಟೆಡ್ ಸ್ಟೇಟ್ಸ್‌ಗಳಲ್ಲಿ ಆಧುನಿಕ ಆಟವಾಗಿ ಹಂತ ಹಂತವಾಗಿ ಬೆಳೆಯಿತು. ಆಟದ ಜನಪ್ರಿಯತೆಯು, ತಯಾರಕರು ಸಾಧನ ಸಲಕರಣೆಗಳನ್ನು ವಾಣಿಜ್ಯಿಕವಾಗಿ ಮಾರಲು ಅನುವಾಗುವಂತೆ ಮಾಡಿತು. ಆರಂಭಿಕ ಬ್ಯಾಟ್‌‍ಗಳು ತಂತಿಗಳನ್ನು ಬಳಸಿ ಬಿಗಿಗೊಳಿಸಿದ ಚರ್ಮದ ಕಾಗದದ ತುಂಡುಗಳಾಗಿದ್ದವು ಮತ್ತು ಅವು ಆಟದಲ್ಲಿ ಶಬ್ದವನ್ನು ಸೃಷ್ಟಿಸುತ್ತಿದ್ದವು. ಇದರಿಂದಾಗಿ ಈ ಆಟವನ್ನು ಮೊದಲು "ವಿಫ್-ವಾಫ್" ಮತ್ತು "ಪಿಂಗ್-ಪಾಂಗ್" ಎಂದು ಕರೆಯಲಾಗುತ್ತಿತ್ತು. ಆಟವು ಹ್ಯಾಮ್ಲೇಸ್ ಆಫ್ ರೆಜೆಂಟ್ ಸ್ಟ್ರೀಟ್‌‌(ಹ್ಯಾಮ್ಲೆಯ ರಾಜಮಾತೆ ಬೀದಿ)ನಲ್ಲಿ "ಗಾಸಿಮಾ" ಹೆಸರಿನ ಅಡಿಯಲ್ಲಿ ಗಮನವನ್ನು ಸೆಳೆಯಿತು ಹಾಗೂ ಪ್ರವರ್ಧಮಾನಕ್ಕೆ ಬಂತು ಎಂದು ಅನೇಕ ಮೂಲಗಳು ತಿಳಿಸುತ್ತವೆ. 1901ರಲ್ಲಿ ಇಂಗ್ಲಂಡ್‌ನ ಉತ್ಪಾದಕ ಜೆ.ಜಾಕ್ವೆಸ್‌ ಅಂಡ್‌ ಸನ್ಸ್‌ ಲಿಮಿಟೆಡ್‌ ಟ್ರೇಡ್‌‌‍ಮಾರ್ಕ್‌ ಮಾಡಿಕೊಳ್ಳುವ ಮೊದಲು "ಪಿಂಗ್‌-ಪಾಂಗ್‌" ಎಂಬುದು ಹೆಚ್ಚಿನ ಬಳಕೆಯಲ್ಲಿತ್ತು. ತದನಂತರದಲ್ಲಿ ದುಬಾರಿ ಬೆಲೆಯ ಜಾಕ್ವೆಸ್‌‌ನ ಸಾಧನಗಳನ್ನು ಬಳಸಿ ಆಡುವ ಆಟವನ್ನು ಮಾತ್ರ "ಪಿಂಗ್‌-ಪಾಂಗ್‌" ಎಂದು ಕರೆಯಲಾಗುತ್ತಿತ್ತು. ಇನ್ನುಳಿದ ತಯಾರಕರು ಈ ಆಟದ ಕುರಿತ ಸಾಧನಗಳನ್ನು ಟೇಬಲ್‌ ಟೆನಿಸ್‌ ಸಾಧನಗಳು ಎಂದು ಕರೆಯಲು ಪ್ರಾರಂಭಿಸಿದರು. ಯುನೈಟೆಡ್ ಸ್ಟೇಟ್ಸ್‌ಗಳಲ್ಲಿಯೂ ಇಂತಹದ್ದೇ ಪರಿಸ್ಥಿತಿ ಉಂಟಾಗಿ, ಅಲ್ಲಿ ಜಾಕ್ವೆಸ್‌‍ "ಪಿಂಗ್-ಪಾಂಗ್" ಹೆಸರಿನ ಹಕ್ಕುಗಳನ್ನು ಪಾರ್ಕರ್ ಸಹೋದರರಿಗೆ ಮಾರಿತು.

ಮತ್ತೊಂದು ಪ್ರಮುಖ ಅನ್ವೇಷಣೆಯನ್ನು ಟೇಬಲ್ ಟೆನ್ನಿಸ್‌ನ ಆಂಗ್ಲ ಅಭಿಮಾನಿಯಾದ ಜೇಮ್ಸ್ ಗಿಬ್‌ ಮಾಡಿದರು. ಅವರು 1901ರಲ್ಲಿ ಯುಎಸ್ ಪ್ರವಾಸದಲ್ಲಿದ್ದಾಗ ನಾವೀನ್ಯತೆಯ ಕೋಶಾಕಾರದ ಚೆಂಡುಗಳನ್ನು ಪತ್ತೆಹಚ್ಚಿದರು ಮತ್ತು ಅವುಗಳನ್ನು ಆಟಕ್ಕೆ ಸೂಕ್ತವಾಗುತ್ತವೆ ಎಂದು ನಿರ್ಧರಿಸಿದರು. ಇದನ್ನು ಇ.ಸಿ.ಗೂಡ್‌ ಅವರು ಮುಂದುವರೆಸಿಕೊಂಡು ಹೋದರು. ಅವರು 1901ರಲ್ಲಿ ಸಣ್ಣಗುಳ್ಳೆಗಳು ಅಥವಾ ಚುಕ್ಕೆಗಳಂತಿರುವ ರಬ್ಬರಿನ ಕಾಗದದ ಹಾಳೆಯನ್ನು ಉಲ್ಲನ್ನಿನ ದಾರಕ್ಕೆ ಅಂಟಿಸಿ ಮಾಡಿರುವ ಬ್ಯಾಟ್‌‍ನ ಆಧುನಿಕ ಆವೃತ್ತಿಯನ್ನು ಕಂಡುಹಿಡಿದರು. 1901ರ ಹೊತ್ತಿಗೆ ಟೆಬಲ್‌ ಟೆನ್ನಿಸ್‌ ಪಂದ್ಯಾವಳಿಗಳು ನಡೆಯಲು ಪ್ರಾರಂಭವಾಗಿದ್ದರಿಂದ ಅದು ಉತ್ತಮ ಜನಪ್ರಿಯತೆಯನ್ನು ಗಳಿಸಿಕೊಂಡಿತು. ಟೆಬಲ್‌ ಟೆನ್ನಿಸ್ ಕುರಿತಂತೆ ಪುಸ್ತಕಗಳು ಬರೆಯಲ್ಪಟ್ಟವು.1902ರಲ್ಲಿ ಅನಧಿಕೃತ ವಿಶ್ವ ಚಾಂಪಿಯನ್‌ಶಿಪ್‌‍ ಅನ್ನು ನಡೆಸಲಾಯಿತು. 20ನೇ ಶತಮಾನದ ಆರಂಭದಲ್ಲಿ ರಷ್ಯಾದಲ್ಲಿ ಈ ಆಟವನ್ನು ಆಟಗಾರರ ದೃಷ್ಟಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ಕಾರಣ ನೀಡಿ ಸರ್ಕಾರವು ನಿಷೇಧಿಸಿತು. 1921ರಲ್ಲಿ, ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಅನ್ನು ಇಂಗ್ಲೆಂಡ್‌ನಲ್ಲಿ ಸ್ಥಾಪಿಸಲಾಯಿತು. ಅಂತರರಾಷ್ಟ್ರೀಯ ಟೇಬಲ್ ಟೆನ್ನಿಸ್ ಒಕ್ಕೂಟವು 1926ರಲ್ಲಿ ಪ್ರಾರಂಭವಾಯಿತು. ಲಂಡನ್‌, 1972ರಲ್ಲಿ ಪ್ರಥಮ ಅಧಿಕೃತ ವಿಶ್ವಚಾಂಪಿಯನ್‌ಶಿಪ್‌ ಪ್ರಾರಂಭಿಸಿದ ಪ್ರಥಮ ರಾಷ್ಟ್ರವಾಯಿತು. ಟೇಬಲ್ ಟೆನ್ನಿಸ್ 1988ರ ಒಲಂಪಿಕ್‌ನಲ್ಲಿ ಒಲಂಪಿಕ್ ಕ್ರೀಡೆಯಾಗಿ ಪರಿಚಯಿಸಲ್ಪಟ್ಟಿತು.

1950ರಲ್ಲಿ ಬಳಕೆಗೆ ಬಂದ ಸ್ಪಂಜಿನ ಪದರವನ್ನು ಒಳಗೊಂಡಿರುವ ಬ್ಯಾಟ್‌ಗಳು ಬಾಲ್‌ಗೆ ಹೆಚ್ಚಿನ ಸ್ಪಿನ್‌ ಮತ್ತು ವೇಗವನ್ನು ನೀಡುವ ಮೂಲಕ ಆಟಕ್ಕೆ ನಾಟಕೀಯ ತಿರುವನ್ನು ನೀಡಿದರು. ಇವುಗಳನ್ನು ಕ್ರೀಡಾ ಸಾಮಾಗ್ರಿ ತಯಾರಕರಾದ ಎಸ್‌. ಡಬ್ಲ್ಯೂ. ಹ್ಯಾಂಕಾಕ್ ಲಿ. ಅವರು ಇಂಗ್ಲೆಂಡಿಗೆ ಪರಿಚಯಿಸಿದರು. ವೇಗದ ಅಂಟಿನ ಬಳಕೆಯು ಚೆಂಡಿನ ಪುಟಿದೇಳುವಿಕೆ ಮತ್ತು ವೇಗವನ್ನು ಹೆಚ್ಚಿಸಿತ್ತು. "ಆಟದ ವೇಗ ಕಡಿಮೆಮಾಡುವ ಸಲುವಾಗಿ" ಸಾಧನಗಳಲ್ಲಿ ಬದಲಾವಣೆಗಳನ್ನು ತರಲಾಯಿತು.

2000ದ ಅಂತ್ಯದ ವೇಳೆಗೆ ಐಟಿಟಿಎಫ್ ಟೇಬಲ್‌ ಟೆನ್ನಿಸ್‌ ಅನ್ನು ದೂರದರ್ಶನ ವೀಕ್ಷಕರ ಕ್ರಿಡೆಯಾಗಿ ಜನಪ್ರಿಯಗೊಳಿಸುವ ಉದ್ದೇಶದಿಂದ ಅದರಲ್ಲಿ ಹಲವಾರು ಮಾರ್ಪಾಟು ಮಾಡಲಾಯಿತು. ಮೊದಲಿಗೆ ಅತ್ಯಂತ ಹಳೆಯ 38 mm (1.5 ಇಂಚು) ಚೆಂಡುಗಳು ಅಧಿಕೃತವಾಗಿ 40mm ಚೆಂಡುಗಳಾಗಿ ಬದಲಾವಣೆಗೊಂಡವು. ಇದು ಚೆಂಡಿನ ಗಾಳಿ ನಿರೋಧಶಕ್ತಿಯನ್ನು ಹೆಚ್ಚಿಸಿತು ಮತ್ತು ಪರಿಣಾಮಕಾರಿಯಾಗಿ ಆಟದ ವೇಗವನ್ನು ನಿಧಾನವಾಗಿ ತಗ್ಗಿಸಿತು. ಆ ಸಮಯದಲ್ಲಿ ಆಟಗಾರರು ತಮ್ಮ ಬ್ಯಾಟ್‌‍ಗಳಲ್ಲಿ ವೇಗದ ಸ್ಪಂಜಿನ ಪದರದ ದಪ್ಪವನ್ನು ಹೆಚ್ಚಿಸಲು ಆರಂಭಿಸಿದರು, ಅದನ್ನು ಅತ್ಯಧಿಕ ವೇಗವಾಗಿ ಆಟವನ್ನು ಆಡಲು ಅನುಕೂಲವಾಗುವಂತೆ ಮಾಡಲಾಗಿದೆ ಮತ್ತು ದೂರದರ್ಶನದಲ್ಲಿ ವೀಕ್ಷಿಸಲು ಕಷ್ಟವಾಗುತ್ತಿತ್ತು. ಎರಡನೆಯದಾಗಿ, ಐಟಿಟಿಎಫ್ 21 ರಿಂದ 11-ಅಂಕ ಗಳಿಸುವ ವ್ಯವಸ್ಥೆಯನ್ನು ಬದಲಾವಣೆ ಮಾಡಿತು. ಇದು ಅಧಿಕ ವೇಗ-ಗತಿ ಮತ್ತು ಪ್ರಚೋದನೆ ಮಾಡುವ ಆಟಗಳನ್ನು ಆಡುವ ಉದ್ದೇಶ ಹೊಂದಿತ್ತು. ಐಟಿಟಿಎಫ್ ಸರ್ವಿಸ್‌ನ ನಿಯಮಗಳನ್ನೂ ಕೂಡ ಆಟಗಾರನು ಸರ್ವ್ ಮಾಡುವ ಸಮಯದಲ್ಲಿ ಚೆಂಡನ್ನು ಕಾಣದಂತೆ ಹಿಡಿದುಕೊಳ್ಳುವುದನ್ನು ತಡೆಯಲು ಮತ್ತು ರಾಲಿಯ ಉದ್ದವನ್ನು ಹೆಚ್ಚಿಸುವ ಉದ್ದೇಶಕ್ಕಾಗಿ ಮತ್ತು ಸರ್ವರ್‌ನಿಗೆ ಇರುವ ಅನೂಕೂಲವನ್ನು ಕಡಿಮೆ ಮಾಡುವ ಸಲುವಾಗಿ ನಿಯಮಗಳನ್ನು ಬದಲಾಯಿಸಿತು.

ಇದರಿಂದಾಗಿ ಈ ಕ್ರೀಡೆಯ ವೈವಿಧ್ಯಗಳು ಗೋಚರಿಸಿದವು. "ದೊಡ್ಡ-ಚೆಂಡಿನ"ಟೇಬಲ್ ಟೆನ್ನಿಸ್ ಅಟದಲ್ಲಿ 44 mm ಚೆಂಡನ್ನು ಬಳಸಲಾಗುತ್ತದೆ. ಅದು ನಿರ್ಧಿಷ್ಟವಾಗಿ ಆಟವನ್ನು ನಿಧಾನವಾಗಿಸುತ್ತದೆ. ಅತಿಯಾದ ಸ್ಪಿನ್ ಮತ್ತು ವೇಗವನ್ನು ಹೊಂದಿರುವ 40mm ಆಟಕ್ಕೆ ಹೊಂದಿಕೊಳ್ಳಲಾಗದ ಆಟಗಾರರಿಂದ ಈ ಆಟವು ಒಪ್ಪಿಗೆ ಪಡೆಯಿತು. ಈ ಆಟದಲ್ಲಿ ಚೆಂಡಿನ ತೂಕ 2.47 ಗ್ರಾಮ್‌‍ಗಳಾಗಿರುತ್ತದೆ.

ಸ್ಪಾಂಜ್‌ರಬ್ಬರ್‌ ಟೆಬಲ್‌ ಟೆನ್ನಿಸ್‌ ಆಟವನ್ನು ಪರಿಚಯಿಸುವ ಮೊದಲು ಇದ್ದ ಆಟವನ್ನು ನವೀಕರಿಸುವ ಪ್ರಯತ್ನವು ನಡೆಯಿತು. ಕ್ಲಾಸಿಕ್‌ ಟೆಬಲ್‌ ಟೆನ್ನಿಸ್‌ ಆಟವಾದ ಲಿಹಾ ಅಥವಾ "ಹಾರ್ಡ್ ಬ್ಯಾಟ್‌" ಟೆಬಲ್‌ ಟೆನ್ನಿಸ್‌ ಆಟಗಾರರು ಹಿಮ್ಮೊಗ ಸ್ಪಂಜ್‌ ರಬ್ಬರ್ ಇರುವ ಬ್ಯಾಟ್‌ನ ಈ ಆಟವನ್ನು ಅತಿಯಾದ ವೇಗ ಮತ್ತು ಸ್ಪಿನ್‌ ಇರುವ ಕಾರಣದಿಂದಾಗಿ ತಿರಸ್ಕರಿಸಿದರು. ಬದಲಿಗೆ ಇವರು 1940-60ರ ರಕ್ಷಣಾತ್ಮಕ ಆಟದ ಅಗತ್ಯ ಇಲ್ಲದ, ಕಡಿಮೆ ವೇಗವಿರುವ ಸ್ಪಂಜ್‌ ಇಲ್ಲದ, ಯಾವುದೇ ಅನಗತ್ಯ ಸ್ಪಿನ್‌ನ ಅಗತ್ಯವಿಲ್ಲದ ಸಣ್ಣ-ಗುಳ್ಳೆಗಳಿರುವ ರಬ್ಬರ್‌ನ ಸಾಧನದ ಆಟದ ಶೈಲಿಯನ್ನು ಒಪ್ಪಿಕೊಂಡರು. ಏಕೆಂದರೆ ಹಾರ್ಡ್‌ಬ್ಯಾಟ್‌ನ ಕಿಲ್ಲರ್‌ ಶಾಟ್‌ಗಳನ್ನು ನುರಿತ ಆಟಗಾರರ ಎದುರು ಎದುರಿಸುವುದು ಕಷ್ಟಕರವಾಗಿತ್ತು. ಅಲ್ಲದೆ ಇವು ಟೇಬಲ್‌ನ ಎರಡು ಕಡೆಯ ತುದಿಯನ್ನು ಗಮನದಲ್ಲಿರಿಸಿಕೊಂಡಿರುತ್ತವೆ. ಅಲ್ಲದೆ ಯಶಸ್ವಿಯಾಗಿ ದಾಳಿ ಮಾಡುವ ಮುಂಚೆ ಎದುರಾಳಿಗೆ ಕೌಶಲ್ಯಯುತ ಉಪಾಯಗಳು ಅಗತ್ಯವಾಗುತ್ತದೆ.

ಚೆಂಡು

[ಬದಲಾಯಿಸಿ]

ಆಟವನ್ನು ಹಗುರವಾದ 2.7 ಗ್ರಾಂ ಇರುವ 40 mm ವ್ಯಾಸದ ಚೆಂಡನ್ನು ಬಳಸಿ ಆಡಲಾಗುತ್ತದೆ ಎಂದು ಅಂತರರಾಷ್ಟ್ರೀಯ ನಿಯಮಗಳು ಸ್ಪಷ್ಟಪಡಿಸಿವೆ. ಸಾಮಾನ್ಯವಾಗಿ ಇದೇ ಹೆಚ್ಚಾಗಿ ಬಳಸಲ್ಪಡುವ ಚೆಂಡಾಗಿದೆ. ಚೆಂಡನ್ನು 30 ಸೆಂ.ಮೀ.ಎತ್ತರದಿಂದ ಬೀಳಿಸಿದಾಗ 23 ಸೆಂ.ಮೀ.ವರೆಗೆ ಪುಟಿಯಬಹುದು, ಅದರಿಂದಾಗಿ ಅದು ಪುನಃಸ್ವಾಧೀನದ ಸಹ ಸಾಮರ್ಥ್ಯ 0.88 ಅನ್ನು ಹೊಂದಿರುತ್ತದೆ ಎಂದು ನಿಯಮಗಳು ಹೇಳುತ್ತವೆ. 40 mm ಚೆಂಡನ್ನು 2000ರ ಒಲಂಪಿಕ್ ಆಟಗಳ ನಂತರ ಪರಿಚಯಿಸಲಾಯಿತು. ಇದನ್ನು ರಾಷ್ಟ್ರೀಯ ಚೈನಾ ತಂಡವು ವಿರೋಧಿಸಿತು. ಇದು ಚೈನಾದವರಲ್ಲದ ಇತರ ಆಟಗಾರರಲ್ಲದವರು ಜಯಗಳಿಸಲು ಉತ್ತಮ ಅವಕಾಶ ಇದು ಕಲ್ಪಿಸಿತು ಎಂದು ಅದು ವಾದಿಸಿತು. 40 mm ಟೇಬಲ್‌ ಟೆನ್ನಿಸ್‌ ಚೆಂಡು ನಿಧಾನಗತಿಯದ್ದಾಗಿದ್ದು 38 mm ಚೆಂಡಿಗಿಂತ ಅತಿ ಕಡಿಮೆ ಸ್ಪಿನ್‌ ಆಗುವುದಾಗಿದೆ. ಚೆಂಡನ್ನು ಹೆಚ್ಚು ಪುಟಿಯುವಂತೆ ಮಾಡುವ ಗಾಳಿತುಂಬಿದ ಕೋಶದಿಂದ ಮಾಡಲಾಗಿದ್ದು. ಇದು ಕಿತ್ತಳೆ ಅಥವಾ ಬಿಳಿ ಬಣ್ಣವನ್ನು ಹೊಂದಿದ್ದು ದೊರಗು ಮೈಯನ್ನು ಹೊಂದಿರುತ್ತದೆ. ಚೆಂಡಿನ ಬಣ್ಣದ ಆಯ್ಕೆಯು ಮೇಜಿನ ಬಣ್ಣ ಮತ್ತು ಅದರ ಸುತ್ತಲಿನ ವಾತಾವರಣಕ್ಕೆ ತಕ್ಕುದಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಉದಾಹರಣೆಗೆ, ಬಿಳಿ ಚೆಂಡು ಬೂದು ಬಣ್ಣದ ಮೇಜಿಗಿಂತ ಹಸಿರು ಅಥವಾ ನೀಲಿ ಬಣ್ಣದ ಮೇಜಿನ ಮೇಲೆ ನೋಡಲು ಸುಲಭವಾಗಿ ಕಾಣುತ್ತದೆ. ಚೆಂಡಿನ ಮೇಲಿರುವ ನಕ್ಷತ್ರಗಳು ಚೆಂಡಿನ ಗುಣಮಟ್ಟವನ್ನು ಸೂಚಿಸುತ್ತವೆ. 3 ನಕ್ಷತ್ರಗಳು ಅತ್ಯುತ್ತಮ ಗುಣಮಟ್ಟದ್ದು ಎಂದು ಸೂಚಿಸುತ್ತವೆ, ಅದನ್ನು ಅಧಿಕೃತ ಸ್ಪರ್ಧೆಗಳಲ್ಲಿ ಬಳಸಲಾಗುತ್ತದೆ.

  • ಅಳತೆಯು 32000π /3 ≈ 33510 mm³ ಆಗಿದೆ.
  • ಮೇಲ್ಮೈ ಪ್ರದೇಶವು 1600π ≈ 5027 mm² ಆಗಿದೆ.
  • ಸುತ್ತಳತೆಯು 40π ≈ 126 mm ಆಗಿದೆ.
ಅಧಿಕೃತ ಪರಿಮಾಣಗಳನ್ನು ತೋರಿಸುವ ಟೇಬಲ್‌ ಟೆನ್ನಿಸ್‌ನ ಚಿತ್ರ.

ಮೇಜು 2.74 ಮೀ (9 ಅಡಿ) ಉದ್ದ, 1.525 ಮೀ (5 ಅಡಿ) ಅಗಲವಿರುತ್ತದೆ, ಮತ್ತು 76 ಸೆಂ.ಮೀ (30 ಇಂಚು) ಎತ್ತರವಿರುವ ಮ್ಯಾಸೊನೈಟ್ (ಹಲಗೆ) (ಒಂದು ವಿಧದ ಗಟ್ಟಿಫಲಕ) ಅಥವಾ ಉತ್ಪಾದಿಸಲ್ಪಟ್ಟ ಮರಮುಟ್ಟನ್ನು ಹೋಲುವಂಥದ್ದು, ಮೃದುವಾದ ಕಡಿಮೆ-ಘರ್ಷಣೆಯ ಹೊದಿಕೆಯನ್ನು ಪದರವಾಗಿ ಜೋಡಿಸಲಾಗಿದೆ. ಮೇಜು ಅಥವಾ ಆಡುವ ಮೇಲ್ಮೈಯು 15.25ಸೆಂ.ಮೀ.(6 ಇಂಚು) ಎತ್ತರದ ಜಾಲದಿಂದ ಎರಡು ಸಮಪಾಲುಗಳನ್ನು ವಿಭಾಗಿಸುತ್ತದೆ.[] ಮೇಜಿನ ಮೇಲ್ಮೈಯು ಹೆಚ್ಚಾಗಿ ಹಸಿರು ಅಥವಾ ನೀಲಿ ಬಣ್ಣದಲ್ಲಿರುತ್ತದೆ.

ಪ್ಯಾಡೆಲ್

[ಬದಲಾಯಿಸಿ]

ಆಟಗಾರರು ಲ್ಯಾಮಿನೇಟ್ ಮಾಡಿದ ಒಂದು ಅಥವಾ ಎರಡೂ ಬದಿಯಲ್ಲಿ ರಬ್ಬರ್‌ನ ಹೊದಿಕೆಯಿ೦ದ ಕೂಡಿದ ಮರದ ರಾಕೇಟ್‌ ಅನ್ನು ಹೊಂದಿರುತ್ತಾರೆ. ಇದು ಆಟಗಾರನ ಹಿಡಿತದ ಮೇಲೆ ನಿರ್ಧರಿತವಾಗಿದೆ. ಪ್ರಪ೦ಚದ ಯಾವ ದೇಶದಲ್ಲಿ ಆಡಲಾಗುತ್ತಿದೆ ಎ೦ಬುದರ ಆಧಾರದ ಮೇಲೆ ಇದಕ್ಕೆ ಪ್ಯಾಡೆಲ್ ಅಥವಾ ರಾಕೇಟ್‌, ಬ್ಲೇಡ್ ಅಥವಾ ಬ್ಯಾಟ್ ಎಂದು ಕರೆಯಲಾಗುತ್ತದೆ. ಯು.ಎಸ್‌.ಎನಲ್ಲಿ ಪ್ಯಾಡಲ್ ಎಂದು ಕರೆಯುವುದು ಸಾಮಾನ್ಯವಾಗಿದೆ. ಯುರೋಪ್‌ನಲ್ಲಿ ಬ್ಯಾಟ್ ಎ೦ಬುದಾಗಿ ಹಾಗೂ ಅಧಿಕೃತ ಐಟಿಟಿಎಫ್ ಶಬ್ದವಾಗಿ ರಾಕೆಟ್‌ ಬಳಕೆಯಲ್ಲಿದೆ.

ಟೇಬಲ್ ಟೆನ್ನಿಸ್ ನಿಯಮಗಳು ರಾಕೇಟ್‌ನ ಪ್ರತಿ ಪಾರ್ಶ್ವದಲ್ಲೂ ವಿಭಿನ್ನ ಮೇಲ್ಮೈ ಇರಲು ಅವಕಾಶ ಮಾಡಿಕೊಡುತ್ತದೆ. ಬೇರೆ ಬೇರೆ ರೀತಿಯ ಮೇಲ್ಮೈಗಳು ವಿವಿಧ ರೀತಿಯ ವೇಗ ಹಾಗೂ ಸ್ಪಿನ್ ಪರಿಣಾಮವನ್ನು ನೀಡುವುದು ಅಥವಾ ಕೆಲ ಸ೦ದರ್ಭದಲ್ಲಿ ಸ್ಪಿನ್ ರಹಿತವಾಗಿರುವ೦ತೆ ಮಾಡಲ್ಪಟ್ಟಿರುತ್ತವೆ. ಉದಾಹರಣೆಗೆ ಒಬ್ಬ ಆಟಗಾರನು ಆತನ ರಾಕೇಟ್‌ನ ಒಂದು ಭಾಗದಲ್ಲಿ ರಬ್ಬರ್ ಹೊದಿಕೆ ಹೊ೦ದಿದ್ದು ಇದು ಹೆಚ್ಚು ಸ್ಪಿನ್ ನೀಡುತ್ತಿರಬಹುದು ಅಥವಾ ಮತ್ತೊ೦ದು ಭಾಗವು ಸ್ಪಿನ್ ರಹಿತವಾಗಿರಬಹುದು. ರಾಕೇಟ್‌ನ್ನು ತಿರುಗಿಸುವ ಮೂಲಕ ಆಟದಲ್ಲಿ ವಿವಿಧ ರೀತಿಯ ಮರುಹೊಡೆತಗಳನ್ನು ಮಾಡಬಹುದು. ಎದುರು ಆಟಗಾರನು ಬಳಸಿದ ವಿವಿಧ ರೀತಿಯ ರಬ್ಬರ್ ಹೊದಿಕೆಗಳ ವ್ಯತ್ಯಾಸವನ್ನು ತಿಳಿಯಲು ಸಹಾಯಕವಾಗುವ೦ತೆ ಅ೦ತರ್ರಾಷ್ಟ್ರೀಯ ನಿಯಮಗಳು ರಾಕೇಟ್‌ನ ಒಂದು ಬದಿ ಕೆ೦ಪು ಬಣ್ಣದಲ್ಲಿ ಹಾಗೂ ಇನ್ನೊ೦ದು ಬದಿ ಕಪ್ಪು ಬಣ್ಣದಲ್ಲಿರುವ೦ತೆ ಉಲ್ಲೇಖಿಸುತ್ತದೆ. ಆಟಗಾರನಿಗೆ ತನ್ನ ಎದುರಾಳಿಯ ರಾಕೇಟ್‌ನ್ನು ಪಂದ್ಯಕ್ಕೂ ಮೊದಲು ಪರಿಶೀಲಿಸುವ ಹಕ್ಕಿದೆ.ಯಾವ ರೀತಿಯ ರಬ್ಬರ್ ಹೊದಿಕೆಯನ್ನು ಬಳಸಿದೆ ಹಾಗೂ ಯಾವ ಬಣ್ಣದಲ್ಲಿದೆ ಆತ ತಿಳಿಯಬಹುದಾಗಿದೆ. ಆದರೂ ಒಬ್ಬ ಆಟಗಾರನು ಅತಿ ವೇಗದ ಆಟ ಹಾಗೂ ಕ್ಷಿಪ್ರ ಬದಲಾವಣೆಯಲ್ಲಿ, ಚೆ೦ಡನ್ನು ಹೊಡೆಯಲು ರಾಕೇಟ್‌ನ ಯಾವ ಭಾಗವನ್ನು ಬಳಸಲಾಯಿತು ಎಂದು ಸ್ಪಷ್ಟವಾಗಿ ನೋಡಬಹುದಾಗಿದೆ. ಪ೦ದ್ಯದ ಸಮಯದಲ್ಲಿ ಯಾವುದೇ ಹಾನಿಯಾಗದ ಹೊರತೂ ರಾಕೇಟ್‌ ಅನ್ನು ಬದಲಾಯಿಸುವ ಹಾಗಿಲ್ಲ ಎಂದು ಪ್ರಚಲಿತ ನಿಯಮಗಳು ಹೇಳುತ್ತವೆ.

ಆಟದ ರೀತಿ

[ಬದಲಾಯಿಸಿ]

ಆಟದ ಪ್ರಾರಂಭ

[ಬದಲಾಯಿಸಿ]

ಐಟಿಟಿಎಫ್‌ ನಿಯಮ 2.13.1 ಪ್ರಕಾರ, ಮೊದಲ ಸರ್ವೀಸ್ ಸಾಮಾನ್ಯವಾಗಿ ನಾಣ್ಯ ಚಿಮ್ಮುವಿಕೆಯಿ೦ದ ನಿರ್ಧರಿಸಲಾಗುತ್ತದೆ. ಒಬ್ಬ ಆಟಗಾರ (ಇಲ್ಲವೇ ನಿರ್ಣಾಯಕ/ಸ್ಕೋರರ್‌) ಯಾವುದಾದರೊಂದು ಕೈಯಲ್ಲಿ ಚೆ೦ಡನ್ನು ಅಡಗಿಸಿ,(ಹೆಚ್ಚಾಗಿ ಮೇಜಿನ ಅಡಿಯಲ್ಲಿ ಅಡಗಿಸಿಡುವುದು)ಎದುರಾಳಿ ಆಟಗಾರನಿಗೆ ಯಾವ ಕೈಯಲ್ಲಿ ಚೆ೦ಡಿದೆಯೆ೦ದು ಊಹಿಸಲು ಬಿಡುತ್ತಾನೆ.ತಪ್ಪು ಅಥವಾ ಸರಿಯಾದ ಊಹೆಯು ಆಟಗಾರರಿಗೆ ಮೊದಲ ಸರ್ವ್ ಮಾಡಲು, ಸ್ವೀಕರಿಸುವಿಕೆಗೆ ಮತ್ತು ಮೇಜಿನ ಭಾಗವನ್ನು ಆಯ್ದುಕೊಳ್ಳುವ ಆಯ್ಕೆಯನ್ನು ನೀಡುತ್ತದೆ. ಮತ್ತೊಂದು ವಿಧಾನವೆಂದರೆ ಒಬ್ಬ ಆಟಗಾರ ಮತ್ತೊಬ್ಬನತ್ತ ಚೆಂಡನ್ನು ಹೊಡೆಯುತ್ತಾನೆ/ಳೆ ಆತನು/ಆಕೆಯು ಅದನ್ನು ಹಿಂದಿರುಗಿಸಿ ಅಥವಾ ಹಿಂದಕ್ಕೆ ಮುಂದಕ್ಕೆ ನಾಲ್ಕಾರು ಬಾರಿ ಹೊಡೆದು ಆನಂತರ ಅಂಕಗಳಿಗಾಗಿ ಆಡುತ್ತಾರೆ. ಇದನ್ನು "ಪ್ಲೇ ಟು ಸರ್ವ್" ಎನ್ನಲಾಗುತ್ತದೆ.

ಸರ್ವ್‌ ಮಾಡುವುದು

[ಬದಲಾಯಿಸಿ]

ಆಟದಲ್ಲಿ, ಯಾವ ಆಟಗಾರ ಸರ್ವ್‌ ಮಾಡುತ್ತಾನೋ ಅವನು ಒಂದು ಅಂಕವನ್ನು ಪ್ರಾರಂಭಿಸುತ್ತಾನೆ. ಆಟಗಾರನು ಮೇಜಿನ ಹಿ೦ದೆ ಹಾಗೂ ಮೇಜಿನ ತುದಿಗಿ೦ತ ಸ್ವಲ್ಪ ಎತ್ತರದಲ್ಲಿ ಒಂದು ಅ೦ಗೈನಲ್ಲಿ ಚೆ೦ಡನ್ನು ಹಿಡಿದು ನಿಲ್ಲುತಾನೆ. ಇನ್ನೊ೦ದು ಕೈಯಲ್ಲಿ ರಾಕೇಟ್‌ ಹಿಡಿದು ಚೆ೦ಡನ್ನು ಸ್ಪಿನ್ ಮಾಡದೇ ನೇರ ಮೇಲ್ಮುಖವಾಗಿ ಹೊಡೆಯುತ್ತಾನೆ.ಇದು ಸುಮಾರು 16 ಸೆ೦ಟಿಮೀಟರ್ (6 ಇ೦ಚುಗಳಷ್ಟು)ಎತ್ತರದಲ್ಲಿದ್ದು, ಚೆ೦ಡು ಕೆಳಮುಖವಾಗಿ ಹೋಗುವ೦ತೆ ರಾಕೇಟ್‌ನಿ೦ದ ಹೊಡೆಯಲಾಗುತ್ತದೆ. ಟೂರ್ನಮೆಂಟ್‌ ಅಲ್ಲದ ಆಟಗಳಲ್ಲಿ, ಹಲವು ಆಟಗಾರರು ಚೆಂಡನ್ನು ಮೇಲಕ್ಕೆ ಚಿಮ್ಮಿಸುವುದಿಲ್ಲ, ಆದರೆ ಇದು ತಾಂತ್ರಿಕವಾಗಿ ನಿಯಮದ ಉಲ್ಲಂಘನೆ ಮತ್ತು ಇದರಿಂದ ಸರ್ವರ್‌ಗೆ ಪಕ್ಷಪಾತದ ಲಾಭದ ಸಾಧ್ಯತೆ ಇರುತ್ತದೆ. ಸರ್ವೀಸ್ ಸಮಯದಲ್ಲಿ ಚೆ೦ಡು ಮೇಜಿನ ತುದಿರೇಖೆಯ ಒಳಗೆ ಮತ್ತು ಯಾವಾಗಲೂ ಮೇಜಿಗಿ೦ತ ಎತ್ತರದಲ್ಲೇ ಇರಬೇಕಾಗುತ್ತದೆ. ಆಟಗಾರನು ಚೆ೦ಡನ್ನು ನೋಡಲು ಅಡ್ಡಿಯಾಗುವ೦ತೆ ತನ್ನ ದೇಹವನ್ನು ಅಥವಾ ಬಟ್ಟೆಯನ್ನು ಮದ್ಯೆ ತರುವ ಹಾಗಿಲ್ಲ.ಎದುರಾಳಿ ಹಾಗೂ ತೀರ್ಪುಗಾರರಿಗೆ ಎಲ್ಲ ಸಮಯದಲ್ಲೂ ಚೆ೦ಡು ಸ್ಪಷ್ಟವಾಗಿ ಕಾಣುವ೦ತೆ ಇರಬೇಕಾಗುತ್ತದೆ. ಒ೦ದೊಮ್ಮೆ ಚೆ೦ಡು ಕಾಣದ ಹಾಗೆ ಯಾವುದೇ ರೀತಿಯಲ್ಲಿ ಅಡ್ಡಿಪಡಿಸಿದಲ್ಲಿ ಆಟಗಾರರು ಆ ಅ೦ಕವನ್ನು ಮತ್ತೊಮ್ಮೆ ಆಡಬೇಕಾಗುತ್ತದೆ.

ಸರ್ವರ್ ಚೆ೦ಡನ್ನು ಒಮ್ಮೆ ಅವನ/ಅವಳ ಬದಿಯಲ್ಲಿ ಚಿಮ್ಮುವ೦ತೆ ಹೊಡೆಯಬೇಕಲ್ಲದೇ, ಅದು ನ೦ತರದಲ್ಲಿ ಎದುರಾಳಿಯ ಬದಿಯಲ್ಲಿ ಕನಿಷ್ಟ ಒಂದು ಬಾರಿಯಾದರೂ ಚಿಮ್ಮುವ೦ತೆ ಹೊಡೆಯಬೇಕಾಗುತ್ತದೆ. ಚೆ೦ಡು ನೆಟ್‌‍ಗೆ ತಾಗಿದರೂ ಎದುರಾಳಿಯ ಮೇಜಿನ ಅರ್ಧಭಾಗಕ್ಕೆ ಹೋಗುವ೦ತೆ ಹೊಡೆಯದಿದ್ದಲ್ಲಿ ಆ ಅ೦ಕವು ಎದುರಾಳಿ ಆಟಗಾರನಿಗೆ ಸಿಗುತ್ತದೆ. ಚೆ೦ಡು ನೆಟ್‌‍ಗೆ ಹೊಡೆದಿದ್ದು ಆದರೆ ಇನ್ನೊ೦ದು ಬದಿಯಲ್ಲಿ ಮೇಲೆ ಹೋಗಿ ಚಿಮ್ಮಿದಲ್ಲಿ ಅದು ಲೆಟ್ (ಅಥವಾ ನೆಟ್-ಇನ್)ಎಂದು ಕರೆಯಲ್ಪಡುತ್ತದೆ. ಆಗ ಆಟವನ್ನು ನಿಲ್ಲಿಸಿ ಚೆ೦ಡನ್ನು ಮತ್ತೊಮ್ಮೆ ಸರ್ವ್ ಮಾಡಬೇಕಾಗುತ್ತದೆ.

ಸರ್ವಿಸ್ ”ಉತ್ತಮ”ವಾಗಿದ್ದಲ್ಲಿ ಚೆ೦ಡು ಆತನ ಬದಿಯಲ್ಲಿ ಚಿಮ್ಮಿದ ಬಳಿಕ ಅದು ಎರಡನೇ ಬಾರಿಗೆ ಚಿಮ್ಮುವ ಮೊದಲು ನೆಟ್‌‍ಯ ಮೇಲಿ೦ದ ಅದನ್ನು ಮತ್ತೊಮ್ಮೆ ಹೊಡೆಯುವ ಮೂಲಕ ಎದುರಾಳಿಯು ಕೂಡ ಉತ್ತಮ ಮರುಹೊಡೆತವನ್ನು ನೀಡಬೇಕಾಗುತ್ತದೆ. ಸರ್ವಿಸ್‌ಗೆ ಮರುಹೊಡೆತವನ್ನು ನೀಡುವುದು ಆಟದ ಅತ್ಯ೦ತ ಕಷ್ಟದ ಭಾಗವಾಗಿದ್ದು, ಸೆರ್ವರ್‌ನ ಮೊದಲ ಚಲನೆಯು ಹೆಚ್ಚಿನ ಸಲ ಅನಿರೀಕ್ಷಿತವಾಗಿರುತ್ತದೆ ಮತ್ತು ಅವನ ಅಥವಾ ಅವಳ ಅನೇಕ ಸ್ಪಿನ್‌ಗಳು ಹಾಗೂ ವೇಗದ ಹೊಡೆತಗಳ ಆಯ್ಕೆಯ ತೀರ್ಮಾನದಿ೦ದಾಗಿ ಅತ್ಯ೦ತ ಲಾಭದಾಯಕ ಹೊಡೆತಗಳು ಸಿಗಬಹುದಾಗಿದೆ.

ಚೆ೦ಡನ್ನು ಹೊಡೆಯುವುದು

[ಬದಲಾಯಿಸಿ]

ಚೆ೦ಡು ನೆಟ್‌‍ನ ಸುತ್ತಲಿದ್ದಾಗ ಹಾಗೂ ಅದರ ಮೇಲಿ೦ದ ಬ೦ದಾಗ ಅದನ್ನು ಹೊಡೆಯಬೇಕಾಗುತ್ತದೆ. ಆಟಗಾರನು ನೆಟ್‌‍ನ ಮೇಲಿ೦ದ (ಅಥವಾ ಸುತ್ತಲಿ೦ದ)ಮರುಹೊಡೆತವನ್ನು ನೀಡಲಾಗದಿದ್ದಲ್ಲಿ, ಚೆ೦ಡು ಮೇಜಿನ ಮತ್ತೊ೦ದು ಬದಿಯಲ್ಲಿ ಚಿಮ್ಮಿ ಆಟಗಾರನು ಅ೦ಕವನ್ನು ಕಳೆದುಕೊಳ್ಳಬೇಕಾಗುತ್ತದೆ.

ನೆಲಕ್ಕೆ ತಗಲುವ ಮೊದಲೇ ಚೆಂಡನ್ನು ಹೊಡೆಯುವುದು (Volleying)

[ಬದಲಾಯಿಸಿ]

ಇದನ್ನು ಕೆಲವು ವಿಶೇಷ ಪರಿಸ್ಥಿತಿಗಳಲ್ಲಿ ಮಾತ್ರ ಚೆಂಡು ನೆಲಕ್ಕೆ ತಾಕುವ ಮೊದಲು ಹೊಡೆಯುವ ಅವಕಾಶವನ್ನು ನೀಡಲಾಗುತ್ತದೆ- ಅಂದರೆ ಆಟಗಾರನ ಕಡೆಯಲ್ಲಿನ ಮೇಜಿನ ಮೇಲೆ ಚೆಂಡು ಪುಟಿಯುವ ಮೊದಲೇ ಹೊಡೆಯ ಬೇಕಾಗುತ್ತದೆ. ITTFನ ಟೆಬಲ್‌ ಟೆನ್ನಿಸ್‌ ಕಾನೂನಿನ Archived 2010-04-14 ವೇಬ್ಯಾಕ್ ಮೆಷಿನ್ ನಲ್ಲಿ. ಸೆಕ್ಷನ್‌ 2.06.03 ಪ್ರಕಾರ ಚೆಂಡು ನೆಲಕ್ಕೆ ಬೀಳುವ ಮೊದಲೇ ಹೊಡೆಯುವ (volley) ಅವಕಾಶವನ್ನು ನಿಷೇದಿಸಲಾಗಿದೆ. ಸೆಕ್ಷನ್‌ 2.10ರಲ್ಲಿ ಬರೆದಿರುವ ಅಂಕಗಳನ್ನು ಕೊಡುವ ನಿಯಮದ ಪ್ರಕಾರ ಅಂತರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಈ ರೀತಿಯ ಅವಕಾಶ ನೀಡಲಾಗುವುದಿಲ್ಲ. ಆದರೆ ಸೆಕ್ಷನ್ 2.10.01.05ನಲ್ಲಿ ಈ ರೀತಿಯ ಹೊಡೆತವನ್ನು ಎದುರಾಳಿ ತಡೆದಲ್ಲಿ ಅಂಕಗಳನ್ನು ಅವನಿಗೆ ನೀಡಲಾಗುತ್ತದೆ. ಸೆಕ್ಷನ್‌‍ 2.05.08ರಲ್ಲಿ ’ತಡೆ’ಯನ್ನು ಈ ರೀತಿ ವಿವರಿಸಲಾಗಿದೆ. "ಒಂದು ವೇಳೆ ಅವನು ಅಥವಾ ಅವನು ಧರಿಸಿದ ಬಟ್ಟೆ ಅಥವಾ ಅವನಲ್ಲಿ ಇರುವ ವಸ್ತುಗಳು, ಆಟದ ಸಮಯದಲ್ಲಿ ಇನ್ನೂ ಅದು ಎದುರಾಳಿಯ ಹೊಡೆತದಿಂದಾಗಿ ತನ್ನ ಕಡೆಯ ಅಂಕಣವನ್ನು ತಾಕುವ ಮೊದಲು ತಾಕಿದ್ದಲ್ಲಿ ಅಂಕವನ್ನು ನೀಡಲಾಗುತ್ತದೆ." ಅದೇ ರೀತಿಯಾಗಿ, ಚೆಂಡು ಆಟದ ಅಂಕಣವನ್ನು ಮೀರಿ ಹೊರಗಿದ್ದಾಗ ಮಾತ್ರ ಅದನ್ನು ಮೇಜಿಗೆ ತಾಕುವ ಮೊದಲು ಹೊಡೆಯಬಹುದಾಗಿದೆ. ಮೇಜಿಗೆ ತಾಕುವ ಮೊದಲು ಹೊಡೆಯುವ (volley) ಹೊಡೆತವು ನೆಟ್‌ಗೆ ಹತ್ತಿರ ಹಾದು ಹೋಗಬೇಕು ಮತ್ತು ಎದುರಾಳಿಯ ಮೇಜಿನ ಮೇಲೆ ಬೀಳಬೇಕು.

ಅ೦ಕ ಗಳಿಕೆ

[ಬದಲಾಯಿಸಿ]

ಈ ಕೆಳಗಿನ ಅನೇಕ ತಪ್ಪುಗಳಿ೦ದಾಗಿ ಅ೦ಕಗಳು ಎದುರಾಳಿಗೆ ದೊರೆಯುತ್ತವೆ.[]

  • ತನ್ನದೆ ಬದಿಯಲ್ಲಿ ಚೆ೦ಡು ಒ೦ದಕ್ಕಿ೦ತ ಹೆಚ್ಚು ಬಾರಿ ಬೌನ್ಸ್ ಆದಾಗ.
  • ಚೆ೦ಡನ್ನು ಎರಡು ಬಾರಿ ಹೊಡೆಯುವುದು. ಮಣಿಕಟ್ಟಿನ ಮೇಲ್ಗಡೆಯ ಭಾಗವನ್ನು ರಾಕೆಟ್‌‍ ಎಂದೇ ಪರಿಗಣಿಸಲಾಗುತ್ತದೆ. ಕೈಯ ಬೆರಳುಗಳನ್ನು ರಾಕೆಟ್‌‍ನ ಹಿಂಬಾಗದಲ್ಲಿ ಹಿಡಿದುಕೊಳ್ಳಬಹುದು. ಇದರಿಂದಾಗಿ ಚೆಂಡನ್ನು ಸಮರ್ಥವಾಗಿ ಹಿಂದುರುಗಿಸಬಹುದು. ಆದರೆ ಒಬ್ಬರ ಕೈಗೆ ಅಥವಾ ಬೆರಳಿಗೆ ತಾಗಿಸುವುದು ಹಾಗೂ ಅದೇ ಸಮಯದಲ್ಲಿ ರಾಕೇಟ್‌ಗೂ ತಾಕಿಸುವುದು ತಪ್ಪಾಗುತ್ತದೆ ಇದನ್ನು ಡಬಲ್‌ ಸ್ಟ್ರೈಕ್‌ ಎಂದು ಪರಿಗಣಿಸಲಾಗುವುದು.
  • ರಾಕೇಟ್‌ನ ಹೊರತಾಗಿ ಚೆ೦ಡು ಬೇರೆಲ್ಲಾದರೂ ಹೊಡೆದರೆ.(ಮೇಲಿನ ರಾಕೇಟ್‌ನ ವ್ಯಾಖ್ಯಾನವನ್ನು ನೋಡಿ)
  • ಚೆ೦ಡು ಎದುರಾಳಿಯ ಬದಿಯಲ್ಲಿ ಬೌನ್ಸ್ ಆಗದ೦ತೆ ಮಾಡುವುದು.(ಉದಾಹರಣೆಗೆ ಉತ್ತಮ ಮರುಹೊಡೆತವನ್ನು ನೀಡದಿದ್ದಲ್ಲಿ)
  • ಆಟದ ಜಾಗದ ಮೇಲ್ಮೈನಲ್ಲಿ ಕೈಯನ್ನಿಡುವುದು ಅಥವಾ ಮೇಲ್ಮೈಯನ್ನು ಚಲಿಸುವ೦ತೆ ಮಾಡುವುದು.
  • ಉತ್ತಮ ಸರ್ವಿಸ್ ನೀಡಲು ಅಸಮರ್ಥವಾಗುವುದು (ನಾಣ್ಯ ಚಿಮ್ಮಿ ಸರ್ವಿಸ್ ಮಾಡುವುದು ಮತ್ತು ಚೆ೦ಡನ್ನು ಸರಿಯಾಗಿ ಹೊಡೆಯುವಲ್ಲಿ ವಿಫಲವಾಗುವುದು)
  • ಅಕ್ರಮ ಸರ್ವಿಸ್ ಮಾಡುವುದು (ಆಟಗಾರರಿಗೆ ಚೆ೦ಡನ್ನು ಕಾಣದ೦ತೆ ಅಡ್ಡಿ ಮಾಡುವುದು ಹಾಗೂ ಗಾಳಿಯಲ್ಲಿ 16 ಸೆ೦ಟಿಮೀಟರ್‌ಗಳಷ್ಟು (6 ಇ೦ಚುಗಳಷ್ಟು)ಎತ್ತರಕ್ಕೂ ಚೆ೦ಡು ಚಿಮ್ಮದಿರುವುದು)ಮತ್ತು ಮೈದಾನದ ಸರಿಯಾದ ಭಾಗದಲ್ಲಿ ಸರ್ವಿ೦ಗ್ ಮಾಡದಿರುವುದು.
  • ರಾಕೇಟ್‌ನಿ೦ದಾಗಲೀ ಅಥವಾ ದೇಹದ ಯಾವುದೇ ಭಾಗದಿ೦ದಾಗಲೀ ನೆಟ್‌‍ಯನ್ನು ಹೊಡೆಯುವುದು.
  • ಚೆ೦ಡಿಗೆ ತಡೆಯೊಡ್ಡುವುದು.
  • ಹೀಗಾದಲ್ಲಿ ಚೆ೦ಡು ಗಡಿಬಾಹಿರವೆ೦ದು ಪರಿಗಣಿಸಲ್ಪಡುತ್ತದೆ : ಚೆ೦ಡು ಗೋಡೆಗೆ, ಮೇಲ್ಚಾವಣಿಗೆ,ಎದುರಾಳಿಯ ದೇಹಕ್ಕೆ ತಾಗುವುದು ಅಥವಾ ಎದುರಾಳಿಯ ರಾಕೇಟ್‌ನ ಹೊರತಾಗಿ ಬೇರೆ ಯಾವುದೇ ಬಾಹ್ಯ ವಸ್ತುವಿನಿ೦ದ ಚೆ೦ಡು ನಿಲ್ಲಿಸಲ್ಪಡುವುದು.
  • ಚೆ೦ಡನ್ನು ಹೊಡೆಯುವುದು ಆದರೆ ಅದು ನೆಟ್‌‍ಯ ಮೇಲ್ಭಾಗದಿ೦ದ ಮರಳದಿರುವುದು.

ಪರ್ಯಾಯ ಸರ್ವಿಸ್

[ಬದಲಾಯಿಸಿ]

(ಪಂದ್ಯದ ವಿಜೇತರು ಯಾರು ಎನ್ನುವುದನ್ನು ಲೆಕ್ಕಿಸದೆ)ಒಬ್ಬ ಆಟಗಾರ 11 ಅಂಕಗಳನ್ನು ಗಳಿಸಿ ಇನ್ನೊಬ್ಬ ಆಟಗಾರನಿಗಿಂತ ಕನಿಷ್ಠ 2 ಅಂಕಗಳಿಂದ ಮುಂದಿದ್ದರೆ ಅಥವಾ ಇಬ್ಬರೂ ಆಟಗಾರರು ತಲಾ 10 ಅಂಕಗಳನ್ನು ಗಳಿಸಿದ್ದರೆ ಸರ್ವಿಸ್ ವಿರುಧ್ಧ ಆಟಗಾರರಲ್ಲಿ 2 ಅಂಕಗಳಿಗೊಮ್ಮೆ ಪರ್ಯಾಯವಾಗುತ್ತದೆ. ಇಬ್ಬರೂ ಆಟಗಾರರ ಅಂಕಗಳು 10 ಇದ್ದರೆ ಯಾವುದೇ ಒಬ್ಬ ಆಟಗಾರ ಇನ್ನೊಬ್ಬ ಆಟಗಾರನಿಗಿಂತ 2 ಅಂಕಗಳ ಮುನ್ನಡೆ ಸಾಧಿಸುವವರೆಗೆ ಸರ್ವಿಸ್ ೧ ಅಂಕಕ್ಕೊಮ್ಮೆ ಪರ್ಯಾಯವಾಗುತ್ತದೆ ಆಟಗಾರನು ಸರ್ವಿಸ್ ನಲ್ಲಿ ಅಂಕಗಳನ್ನು ಕಳೆದುಕೊಳ್ಳುವುದಿಲ್ಲ. ಪಂದ್ಯದಲ್ಲಿ ಕೊನೆಯ ಅಂಕವನ್ನು ಪಡೆಯುವವರೆಗೆ ಹೀಗೆ ಎಷ್ಟು ಸರ್ವಿಸ್ ಬೇಕಾದರೂ ಆಟಗಾರರು ಪಡೆಯಬಹುದು. ಇದು ಸಧ್ಯದಲ್ಲಿ ಜಾರಿಯಲ್ಲಿರುವ ಆಯ ಟಿ ಟಿ ಎಫ್ ಬೆಂಬಲಿತ ನೀತಿಯಾಗಿದೆ.[]

ಡಬಲ್ಸ್ ನಲ್ಲಿ ಸರ್ವಿಸ್ ೨ ಅಂಕಗಳಿಗೊಮ್ಮೆ ವಿರುದ್ಧ ತಂಡಗಳಲ್ಲಿ ಪರ್ಯಾಯವಾಗುತ್ತದೆ ಆದರೆ ಇದರ ಜೊತೆಗೆ ಒಂದೇ ತಂಡದ ಆಟಗಾರರ ಮಧ್ಯೆ ಕೂಡ ಬದಲಾಗುತ್ತಿರುತ್ತದೆ. 2 ಅಂಕಗಳ ಕೊನೆಯಲ್ಲಿ ಸರ್ವಿಸ್ ಪಡೆಯುವ ಆಟಗಾರ ಸರ್ವರ್ ಆಗುತ್ತಾನೆ ಮತ್ತು ಆತನ ಜೊತೆಗಾರ ಪಡೆಯುವವನಾಗುತ್ತಾನೆ.

21 ಅಂಕಗಳ ಆಟದ ಪಧ್ಧತಿಯಲ್ಲಿ ಸರ್ವಿಸ್ 5 ಅಂಕಗಳಿಗೊಮ್ಮೆ ಪರ್ಯಾಯವಾಗುತ್ತದೆ. ಎರಡೂ ತಂಡದ ಆಟಗಾರರು 20 ಅಂಕ ಪಡೆದಿದ್ದರೆ ಆಗ ಯಾವುದೇ ಒಬ್ಬ ಆಟಗಾರ ೨ ಅಂಕಗಳ ಮುನ್ನಡೆ ಸಾಧಿಸುವ ವರೆಗೆ ಸರ್ವಿಸ್ 1 ಅಂಕಕ್ಕೊಮ್ಮೆ ಪರ್ಯಾಯವಾಗುತ್ತದೆ.

ಸರಣಿ ಆಟಗಳು

[ಬದಲಾಯಿಸಿ]

ಪ್ರತಿಯೊಂದು ಆಟದ ನಂತರ ಆಟಗಾರರು ಟೇಬಲ್ ನ ಬದಿಯನ್ನು ಬದಲಾಯಿಸಿಕೊಳ್ಳುತ್ತಾರೆ ಮತ್ತು ಪಂದ್ಯದ 5 ಅಥವಾ 7 ನೆಯ ಆಟದಲ್ಲಿ ಯಾವುದೇ ಒಬ್ಬ ಆಟಗಾರ 5 ಅಂಕ ಗಳಿಸಿದ ನಂತರ ಯಾರು ಸರ್ವ ಮಾಡುವುದು ಎಂಬುದನ್ನು ಲೆಕ್ಕಿಸದೆ ಟೇಬಲ್ ನ ಬದಿಯನ್ನು ಬದಲಾಯಿಸಿಕೊಳ್ಳುತ್ತಾರೆ. ಸ್ಪರ್ಧೆಯ ಆಟಗಳಲ್ಲಿ, ಉತ್ತಮ 5 ಆಟಗಳು ಅಥವಾ 7 ಆಟಗಳ ಪಂದ್ಯಗಳಿರುತ್ತವೆ.

ಜೋಡಿ ಆಟ

[ಬದಲಾಯಿಸಿ]
ಡಬಲ್ಸ್‌ ಆಟದಲ್ಲಿನ ಸರ್ವಿಸ್‌ ಜೋನ್‌‍

ಇಬ್ಬರು ಪ್ರತ್ಯೇಕ ಆಟಗಾರರ ನಡುವಿನ ಆಟದ ಜೊತೆಗೆ ಜೋಡಿಯಾಗೂ ಸಹ ಟೇಬಲ್ ಟೆನ್ನಿಸ್ ಆಡುತ್ತಾರೆ. ಈ ಕೆಳಗಿನ ನಿಯಮಗಳನ್ನು ಹೊರತುಪಡಿಸಿ ಬೇರೆಲ್ಲ ಸಿಂಗಲ್ ಪ್ಲೇ ನಿಯಮಗಳು ಡಬಲ್ ಪ್ಲೇ ಗೂ ಅನುಗುಣವಾಗುತ್ತವೆ. ಡಬಲ್ ಆಟಕ್ಕೆ ಅಂಗಳವನ್ನು ತಯಾರಿಸುವುದಕ್ಕಾಗಿ ಮೇಜು ಉದ್ದವಾಗಿ ಎರಡು ಭಾಗವಾಗುವಂತೆ ಮೇಜಿನ ಉದ್ದಕ್ಕೂ ಒಂದು ಮಧ್ಯರೇಖೆಯನ್ನು ಎಳೆಯಲಾಗುತ್ತದೆ. ಈ ಗೆರೆಯನ್ನು ಹಾಕುವ ಒಂದೇ ಉದ್ದೇಶವೆಂದರೆ ಡಬಲ್ಸ್ ಆಟದ ಸರ್ವಿಸ್ ನಿಯಮವನ್ನು ಸುಲಭವಾಗಿಸುವುದು, ಡಬಲ್ಸ್ ಆಟದಲ್ಲಿ ಸರ್ವಿಸ್‌ ಯಾವಾಗಲೂ ಬಲಗೈಯ ಕಡೆಯ ಬಾಕ್ಸ್‌ನಿಂದ ಮಾಡಬೇಕಾಗುತ್ತದೆ. ಸರ್ವಿಸ್‌ ಯಾವ ರೀತಿ ಇರಬೇಕೆಂದರೆ ಒಮ್ಮೆ ಮೇಲೆ ಹೇಳಿದ ಬಲಗಡೆಯ ಬಾಕ್ಸ್‌ ಕಡೆಗೆ ಬೌನ್ಸ್‌ ಆಗಬೇಕು ಇನ್ನೊಮ್ಮೆ ಎಡಗಡೆಯ ಬಾಕ್ಸ್ ಕಡೆಗೆ ಬೌನ್ಸ್‌ ಆಗಬೇಕು. ಒಮ್ಮೆಯಾದರೂ ಎದುರಾಳಿಯ ಬಲಗೈ ಕಡೆಯ ಬಾಕ್ಸ್‌ ಕಡೆಗೆ ಬೌನ್ಸ್ ಆಗಬೇಕು (ಸರ್ವರ್‌ನ ಎಡತುದಿಯ ಬಾಕ್ಸ್‌). ನಂತರ ಆಟವು ಕ್ರಮಬದ್ಧವಾದ ಸ್ಥಿತಿಯಲ್ಲಿ ಆಟಗಾರರು ಒಬ್ಬರ ನಂತರ ಮತ್ತೊಬ್ಬರು ಚೆಂಡನ್ನು ಹೊಡೆಯುವ ಮೂಲಕ ಮುಂದುವರೆಯುತ್ತದೆ. ಉದಾಹರಣೆಗೆ, ಒಬ್ಬ ಆಟಗಾರ ಸರ್ವ ಮಾಡಿದ ನಂತರ ಅದನ್ನು ಪಡೆಯುವ ಆಟಗಾರ ಅಥವಾ ಆಟಗಾರ್ತಿ ಅದನ್ನು ಮರಳಿ ಸರ್ವ ಮಾಡಿದವನೆಡೆಗೆ ಹೊಡೆಯುತ್ತಾನೆ ನಂತರ ಮತ್ತೆ ಸರ್ವ ಮಾಡಿದವನು ಆಡುತ್ತಾನೆ ಅದರ ನಂತರ ಮತ್ತೆ ಸರ್ವ ಪಡೆದವನು ಬಾಲ್ ನ್ನು ಹೊಡೆಯುತ್ತಾನೆ. ಅಂಕಗಳು ಯಾವ ರೀತಿ ಕೊಡಲ್ಪಡುತ್ತದೆ ಎಂದರೆ ಯಾವಾಗ ಒಂದು ಕಡೆಯ ಆಟಗಾರ ಬಾಲ್ ಹೊಡೆದು ಮರಲಿಸುವುದರಲ್ಲಿ ವಿಫಲವಾಗುತ್ತಾನೋ ಆಗ ಅಂಕವು ಇನ್ನೊಂದು ತಂಡಕ್ಕೆ ಕೊಡಲ್ಪಡುತ್ತದೆ. ಒಮ್ಮೆ ಆಟವು ಫೈನಲ್ ಸೆಟ್ ತಲುಪಿದಾಗ ತಂಡಗಳು ತಮ್ಮ ಸ್ಥಳವನ್ನು ಬದಲಾಯಿಸಿಕೊಳ್ಳಬೇಕು, ಒಮ್ಮೆ ಒಂದು ತಂಡವು 5 ಅಂಕಗಳನ್ನು ಗಳಿಸಿದಾಗ ಸರ್ವ ಮಾಡುವ ತಂಡವು ಸರ್ವಿಸ್ ಪಡೆಯುವ ಬದಿಗೆ ಬರಬೇಕು ಮತ್ತು ಸರ್ವಿಸ್ ಪಡೆಯುವ ತಂಡವು ಸರ್ವ ಮಾಡುವ ಬದಿಗೆ. ಸಿಂಗಲ್ಸ್ ಮತ್ತು ಡಬಲ್ಸ್ ಎರಡನ್ನೂ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಆದಲಾಗುತ್ತಿದ್ದು 1988 ನಿಂದ ಒಲಂಪಿಕ್ ಗೇಮ್ಸ್ ಮತ್ತು 2002 ರಿಂದ ಕಾಮನ್ ವೆಲ್ತ್ ಗೇಮ್ಸ್ ಗಳಲ್ಲೂ ಕೂಡ ಆಡಲಾಗುತ್ತದೆ. ಟೇಬಲ್ ಟೆನ್ನಿಸ್ ನ ಡಬಲ್ಸ್ ಆಟವು ೨೦೦೮ರಲ್ಲಿ ನಡೆಯುವ ಒಲಂಪಿಕ್ ನಲ್ಲಿ ಗುಂಪು ಆಟಗಳ ಒಂದು ಭಾಗ ಮಾತ್ರ ಆಗಿರುತ್ತದೆ ಎಂದು ಆಯ್ ಟಿ ಟಿ ಎಫ್ 2005ರಲ್ಲಿ ಪ್ರಕಟಿಸಿತು.

ಆಟದ ಶೈಲಿಗಳು

[ಬದಲಾಯಿಸಿ]

ಹಿಡಿತ

[ಬದಲಾಯಿಸಿ]

ಟೇಬಲ್ ಟೆನ್ನಿಸ್ ಸ್ಪರ್ಧೆಯ ಸ್ಪರ್ಧಾಳುಗಳು ತಮ್ಮ ಬ್ಯಾಟಿನ ಮೇಲೆ ಹಲವಾರು ರೀತಿಯಲ್ಲಿ ಹಿಡಿತ ಹೊಂದಿರುತ್ತಾರೆ. ಸ್ಪರ್ಧೆಯಲ್ಲಿನ ಆಟಗಾರರು ತಮ್ಮ ಬ್ಯಾಟಿನ ಮೇಲೆ ಹಿಡಿತ ಹೊಂದುವ ತರವನ್ನು ಎರಡು ಪ್ರಧಾನ ತಳಿಯ ಬಗೆಯಾಗಿ ವಿಂಗಡಿಸಲಾಗಿದೆ. ಒಂದು ಪೆನ್ ಹೋಲ್ಡ್ ಮತ್ತೊಂದು ಶೇಕ್ ಹ್ಯಾಂಡ್ ಎಂದು ವಿವರಿಸಲಾಗುತ್ತದೆ. ಟೇಬಲ್ ಟೆನ್ನಿಸ್ ನ ಕಟ್ಟಲೆಯನ್ನು, ಒಬ್ಬರು ಯಾವ ತರಹದಲ್ಲಿ ಬ್ಯಾಟ್ ಮೇಲೆ ಹಿಡಿತ ಹೊಂದಿರುತ್ತಾರೆ ಎನ್ನುವುದರ ಮೇಲೆ ನಿಗದಿಮಾಡುವುದಿಲ್ಲ ಮತ್ತು ಹಲವು ಬಗೆಯ ಹಿಡಿತಗಳು ಉಳಿದುಕೊಂಡಿವೆ.

ಪೆನ್ ಹೋಲ್ಡ್
ಪೆನ್ ಹೋಲ್ಡ್ ಹಿಡಿತ ಹೀಗೆ ಹೆಸರು ಬರಲು ಕಾರಣ ಈ ಹಿಡಿತದಲ್ಲಿ ಒಬ್ಬರು ಬ್ಯಾಟನ್ನು ಹಿಡಿಯುವ ಪರಿ, ಒಬ್ಬರು ಬರೆಯುವ ಸಾಧನವನ್ನು ಬಳಸುವ ರೀತಿಯಲ್ಲಿಯೇ ಇರುವುದು. ಪೆನ್ ಹೋಲ್ಡ್ ಆಟಗಾರರಲ್ಲಿಯೇ ಆಟದ ಬಗೆ ಒಬ್ಬರಿಂದ ಮತ್ತೊಬ್ಬರಿಗೆ ಬಹು ವ್ಯತ್ಯಾಸವಿರುತ್ತದೆ. ಹೆಚ್ಚಾಗಿ ತಿಳಿದಿರುವಂತೆ ಚೈನೀಸ್ ಪೆನ್ ಹೋಲ್ಡ್ ಬಗೆ ಬಹಳ ಜನಪ್ರಿಯವಾಗಿದ್ದು, ಇದರಲ್ಲಿ ಮಧ್ಯದ, ಉಂಗುರದ ಬೆರಳು ಮಡಿಸಿದ್ದು ಮತ್ತು ನಾಲ್ಕನೆಯ ಬೆರಳು ಬ್ಲೇಡ್ ನ ಹಿಂಭಾಗದಲ್ಲಿರುತ್ತದೆ. ಬೆರಳುಗಳ ಮುರಿಕೆಯ ಮೊತ್ತದಲ್ಲಿ, ಒತ್ತಿಹಿಡಿಯುವುದರಿಂದ ಹಿಡಿದು ಅದರ ನೇರದಲ್ಲಿಯೂ ಬಹುತೇಕ ವ್ಯತ್ಯಾಸವಿರಬಹುದು. ಮೂರು ಬೆರಳುಗಳು ಮಾತ್ರ ಏನೇ ಆದರೂ, ಯಾವಾಗಲೂ ಒಂದಕ್ಕೊಂದು ತಾಗಿಯೇ ಇರುವುದು. ಮೇಜಿನ ಮೇಲಿನ ಆಟದ ಬಗೆಗೆ, ಚೈನೀಸ್ ಪೆನ್ ಹೋಲ್ಡ್ ಆಟಗಾರರು ಹೆಚ್ಚಾಗಿ ಗುಂಡು ತಲೆಯ ಬ್ಯಾಟನ್ನು ಇಷ್ಟಪಡುತ್ತಾರೆ. ಇದಕ್ಕೆ ವಿರುದ್ಧವಾಗಿ ಇನ್ನೊಂದು ಬಗೆ, ಕೆಲವೊಮ್ಮೆ ಕೊರಿಯನ್ ಅಥವಾ ಜಪನೀಸ್ಪೆನ್ ಹೋಲ್ಡ್ ಹಿಡಿತ ಎಂದು ಕರೆಯಲ್ಪಡುತ್ತದೆ. ಇದರಲ್ಲಿ ಆ ಮೂರು ಬೆರಳುಗಳು ಅಡ್ಡವಾಗಿ ಬ್ಯಾಟಿನ ಹಿಂಭಾಗದಲ್ಲಿರುತ್ತದೆ.ಹೆಚ್ಚಾಗಿ ಎಲ್ಲ ಮೂರು ಬೆರಳುಗಳೂ ಒಂದರ ಮೇಲೊಂದು ತಾಕುವ ಬದಲು ಬ್ಯಾಟಿನ ಹಿಂಭಾಗವನ್ನು ತಾಕುತ್ತಿರುತ್ತದೆ. ಮೇಜಿನ ಆಚೆಗೆ ಆಡುವ ಬಗೆಯಲ್ಲಿ ಕೆಲವೊಮ್ಮೆ ಕೊರಿಯನ್/ಜಪನೀಸ್ ಪೆನ್ ಹೋಲ್ಡ್ ರ್ ಗಳು ಚೌಕ ತಲೆಯ ಬ್ಯಾಟನ್ನು ಬಳಸುತ್ತಾರೆ. ಸಾಂಪ್ರದಾಯಿಕವಾಗಿ ಈ ಚೌಕ ತಲೆಯ ಬ್ಯಾಟ್ ಗಳು ಹಿಡಿಕೆಯ ತುದಿಯ ಭಾಗದಲ್ಲಿ ಬೆಂಡಾಗಿರುತ್ತದೆ, ಅಂತೆಯೇ ಹಿಡಿತ ಹೆಚ್ಚಿಸಲು ಮತ್ತು ಅನುಕೂಲಕರವಾಗಿರಲು ಬ್ಯಾಟ್ ನ ಹಿಂಭಾಗದಲ್ಲಿ ಒಂದು ತೆಳ್ಳನೆಯ ಕಾರ್ಕ್ ಪದರನ್ನು ಹೊಂದಿರುತ್ತದೆ. ಪೆನ್ ಹೋಲ್ಡ್ ಬಗೆಯು ಹೆಚ್ಚಾಗಿ ಪೂರ್ವ ಏಷಿಯಾದಲ್ಲಿ ಜನಿಸಿದ ಅಂದರೆ ಚೀನಾ, ತೈವಾನ್, ಜಪಾನ್, ದಕ್ಷಿಣ ಕೊರಿಯಾ ಮುಂತಾದ ಪ್ರದೆಶದ ಜನರಲ್ಲಿ ಬಹಳ ಪ್ರಸಿದ್ಧವಾಗಿದೆ.
ವಾಡಿಕೆಯಂತೆ,ಎಂದಿನ ಆಟದಲ್ಲಿ ಪೆನ್ ಹೊಲ್ಡ್ ಆಟಗಾರರು ಚೆಂಡನ್ನು ಹೊಡೆಯಲು ಬ್ಯಾಟ್ ನ ಒಂದೇ ಮೈ ಬಳಸುತ್ತಾರೆ. ಸಾಮಾನ್ಯವಾಗಿ ಕೊನೆಯ ಮೂರು ಬೆರಳುಗಳು ತಾಗಿಕೊಂಡ ಬದಿಯ ಮಗ್ಗುಲನ್ನು ಬಳಸುವುದಿಲ್ಲ. ಹಾಗಿದ್ದರೂ, ಪೆನ್ ಹೋಲ್ಡ್ ಆಟಗಾರರು ಬ್ಯಾಟ್ ನ ಎರಡೂ ಮಗ್ಗುಲನ್ನು ಬಳಸಲು ಅನುಕೂಲವಾಗುವಂತಹ ಒಂದು ಹೊಸ ಪದ್ಧತಿಯನ್ನು ಚೈನೀಸರು ಕಂಡುಹಿಡಿದಿದ್ದಾರೆ. ಇದನ್ನು ರಿವರ್ಸ್ ಪೆನ್ ಹೋಲ್ಡ್ ಬ್ಯಾಕ್ ಹ್ಯಾಂಡ್ (ಆರ್ ಪಿಬಿ) ಎಂದು ಕರೆಯುತ್ತಾರೆ. ಇಲ್ಲಿ ಆಟಗಾರನು ಹೊಡೆತವನ್ನು (ಚೆಂಡಿಗೆ ಕೊಡುವ ವೇಗದ ಸುತ್ತುಚಲನೆ(ಟಾಪ್ ಸ್ಪಿನ್ ))ಬ್ಯಾಟ್ ನ ಸಾಮನ್ಯ ಮಗ್ಗುಲನ್ನು ತಿರುಗಿಸಿ ಅವನ ಅಥವಾ ಅವಳ ಕಡೆ ಮುಖ ಮಾಡಿ, ಮತ್ತು ಬ್ಯಾಟ್ ನ ವಿರುದ್ಧ ಮಗ್ಗುಲಿನಿಂದ ಹಿಂಗೈ ಚಲನೆಯಲ್ಲಿ ಚೆಂಡನ್ನು ಹೊಡೆಯುತ್ತಾನೆ. ಈ ರೀತಿಯ ಹೊಡೆತವು ಬಹುವಾಗಿ ಸುಧಾರಣೆಯಾಗಿದೆ ಮತ್ತು ಪೆನ್ ಹೋಲ್ಡ್ ಪದ್ಧತಿಗೆ ದೈಹಿಕವಾಗಿಯೂ ಹಾಗೂ ಮನೋವೈಜ್ಞಾನಿಕವಾಗಿಯೂ ಬಲವನ್ನು ನೀಡಿದೆ.ಹಾಗೆಯೇ ಇದು ಸಾಂಪ್ರದಾಯಿಕ ಪೆನ್ ಹೋಲ್ಡ್ ಬ್ಯಾಕ್ ಹ್ಯಾಂಡ್ ಪದ್ಧತಿಯ ದುರ್ಬಲತೆಯನ್ನು ತೊಡೆದುಹಾಕುತ್ತದೆ.
ಶೇಕ್ ಹ್ಯಾಂಡ್
ಈ ಬಗೆಯಲ್ಲಿ ಹೇಗೆ ಒಬ್ಬರು ಕೈ ಕುಲುಕುತ್ತಾರೆಯೋ ಹಾಗೆಯೇ ಬ್ಯಾಟನ್ನು ಕೈಯಲ್ಲಿ ಹಿಡಿಯುತ್ತಾರೆ ಅದರಿಂದಾಗಿ ಇದಕ್ಕೆ ಕೈ ನಲುಗುವ(ಶೇಕ್ ಹ್ಯಾಂಡ್) ಹಿಡಿತ ಎಂದು ಹೆಸರು. ಟೆನ್ನಿಸ್‌‍ನಲ್ಲಿ ಬಳಸುವ ವೆಸ್ಟರ್ನ್ ಗ್ರಿಪ್ ನ ಯಾವುದೇ ಸಂಬಂಧ ಇಲ್ಲದಿದ್ದರೂ,ಈ ಹಿಡಿತವನ್ನು ಕೆಲವೊಮ್ಮೆ ಆಡುಭಾಷೆಯಲ್ಲಿ "ಟೆನ್ನಿಸ್ ಗ್ರಿಪ್" ಅಥವಾ "ವೆಸ್ಟರ್ನ್ ಗ್ರಿಪ್" ಎಂದೂ ಹೇಳುತ್ತಾರೆ. ಉದಾಹರಣೆಗೆ ಶೇಕ್ ಹ್ಯಾಂಡ್ ಹಿಡಿತ ಹೆಚ್ಚಾಗಿ ಪಾಶ್ಚಿಮಾತ್ಯ ಹಾಗೂ ದಕ್ಷಿಣ ಏಷ್ಯಾದ ಆಟಗಾರರಲ್ಲಿ ಹೆಚ್ಚು ಜನಪ್ರಿಯವಾಗಿದೆ. ಇಂದು ಏಷ್ಯಾದ ಬಹಳ ಆಟಗಾರರು ಶೇಕ್ ಹ್ಯಾಂಡ್ ಹಿಡಿತವನ್ನು ಬಳಸುತ್ತಾರೆ. ದಿನನಿತ್ಯ ಹೆಚ್ಚುತ್ತಿರುವ ಆಟದ ಸಹಜ ಗುಣದಿಂದಾಗಿ,ಬ್ಯಾಕ್ ಹ್ಯಾಂಡ್ ಹೊಡೆತ ಹೆಚ್ಚು ವಿಸ್ತಾರವಾಗುತ್ತಿದ್ದು,ಪೆನ್ ಹೋಲ್ಡ್ ಹಿಡಿತದಲ್ಲಿ ಹೊಡೆತವನ್ನು ಉಚ್ಚ ಮಟ್ಟದಲ್ಲಿ ಸ್ಥಿರವಾಗಿ ಕಾಯ್ದುಕೊಳ್ಳುವುದು ಕಷ್ಟಕರವಾಗಿದೆ.

ಶಾಟ್‌ ಹೊಡೆಯುವ ವಿಧಗಳು

[ಬದಲಾಯಿಸಿ]

ಆಟದಲ್ಲಿನ ಸ್ಟ್ರೋಕ್‌ಗಳನ್ನು ದಾಳಿ ಮತ್ತು ರಕ್ಷಣೆ ಎಂದು ಎರಡು ವಿಧವಾಗಿ ವಿಂಗಡಿಸಬಹುದು. ಸ್ಟ್ರೋಕ್‌ನ ವಿಧಗಳು ಬ್ಯಾಕ್‌ಹ್ಯಾಂಡ್‌ ಮತ್ತು ಫೋರ್‌ಹ್ಯಾಂಡ್‌ ಎಂಬ ಎರಡು ವಿಧಗಳನ್ನೂ ಒಳಗೊಂಡಿದೆ. ಫೋರ್‌ಹ್ಯಾಂಡ್‌ ಲೂಪ್‌ನಿಂದ ಬ್ಯಾಕ್‌ಹ್ಯಾಂಡ್‌ ಸ್ಮ್ಯಾಶ್‌ವರೆಗೂ ಶಾಟ್‌ಗಳು ವ್ಯತ್ಯಯವಾಗುತ್ತದೆ.

ದಾಳಿ ಸ್ಟ್ರೋಕ್‌ಗಳು

[ಬದಲಾಯಿಸಿ]
ಸ್ಪೀಡ್‌ ಡ್ರೈವ್‌
ಬೇರೆ ರಾಕೇಟ್ ಆಟಗಳಾದ ಟೆನಿಸ್‌ನ ಸ್ಟ್ರೋಕ್‌ಗಳಿಗಿಂತ ಇದು ವಿಭಿನ್ನವಾಗಿರುತ್ತದೆ. ರಾಕೇಟ್ ಮೂಲಭೂತವಾಗಿ ಸ್ಟ್ರೋಕ್‌ನ ದಿಕ್ಕಿಗೆ ಲಂಬ ರೇಖೆ ಯಲ್ಲಿರುತ್ತದೆ, ಮತ್ತು ಚೆಂಡಿನ ಮೇಲೆ ಹಾಕಿದ ಬಹುತೇಕ ಶಕ್ತಿಯು ಸ್ಪಿನ್‌ ಗೆ ಬದಲಾಗಿ ವೇಗ ವಾಗಿ ಪರಿಣಮಿಸುತ್ತದೆ, ಅಷ್ಟೊಂದು ಬಾಗುವಿಕೆಗಳಿಲ್ಲದ ಶಾಟ್‌ ಆದರೂ, ಹಿಂದಿರುಗಿಸಲು ಕಷ್ಟವಾದ ಶಾಟ್ ಇದಾಗಿರುತ್ತದೆ. ಸ್ಪೀಡ್‌ ಡ್ರೈವ್‌ ಅನ್ನು ಬಹುತೇಕ ಚೆಂಡನ್ನು ಆಟದಲ್ಲಿಯೇ ಇರಿಸಿಕೊಳ್ಳಲು ಬಳಸಲಾಗುತ್ತದೆ, ಎದುರಾಳಿಯ ಮೇಲೆ ಒತ್ತಡ ಹೇರಲು ಮತ್ತು ಮತ್ತೂ ಹೆಚ್ಚಿನ ದಾಳಿಯೊಂದಕ್ಕೆ ಅವಕಾಶವನ್ನು ಪಡೆದುಕೊಳ್ಳಲು ಬಳಸಲಾಗುತ್ತದೆ.
ಲೂಪ್‌ ಡ್ರೈವ್‌
ಮೂಲತಃ ಸ್ಪೀಡ್‌ ಡ್ರೈವ್‌ಗೆ ವಿರುದ್ಧವಾದದ್ದು. ರಾಕೇಟ್‌‍ ಸ್ಟ್ರೋಕ್‌ನ ದಿಕ್ಕಿಗೆ ಹೆಚ್ಚು ಸಮಾನಾಂತರ ದಲ್ಲಿ ("closed" - ಮುಚ್ಚಿದ) ಇರುತ್ತದೆ ಮತ್ತು ಹಾಗಾಗಿ ಚೆಂಡನ್ನು ಸಂದರ್ಶಿಸುತ್ತದೆ, ಇದು ಅತಿದೊಡ್ಡ ಮೇಲ್ಮುಖ ಸ್ಪಿನ್‌ನಲ್ಲಿ ಪರಿಣಮಿಸುತ್ತದೆ. ಒಂದು ಒಳ್ಳೆಯ ಲೂಪ್‌ ಡ್ರೈವ್‌ ಸ್ವಲ್ಪ ಕಂಸವಾಗುತ್ತದೆ, ಮತ್ತು ಟೆನಿಸ್‌ನ ಕಿಕ್‌ ಸರ್ವ್‌ನ ಹಾಗೆ ಒಂದು ಸಾರಿ ಎದುರಾಳಿಯ ಕಡೆಯ ಟೇಬಲಿಗೆ ಹೊಡೆದು ಮುಂದಕ್ಕೆ ಎಗರುತ್ತದೆ. ಲೂಪ್‌ಡ್ರೈವ್‌ಅನ್ನು ಹಿಂದಕ್ಕೆ ಹೊಡೆಯುವುದು ಸ್ಪೀಡ್‌ಡ್ರೈವ್‌ಅನ್ನು ಹೊಡೆಯುವಷ್ಟು ಕಷ್ಟವಾಗುವುದಿಲ್ಲ; ಆದಾಗ್ಯೂ, ಅದರ ಮೇಲ್ಮುಖ ಸ್ಪಿನ್‌ನ ಪರಿಣಾಮವಾಗಿ, ಅತೀ ಹೆಚ್ಚು ಕೋನದಲ್ಲಿ ಎದುರಾಳಿಯ ರ್ಯಾಕೆಟ್‍ನ ಆಚೆಗೆ ಪುಟಿಯುವ ಸಾಧ್ಯತೆ ಇರುತ್ತದೆ, ಇದು (ಕೆಳಗೆ ವಿವರಿಸಲಾಗಿದೆ) ಫಾಲೋ ಅಪ್‌ನಲ್ಲಿ ಸುಲಭವಾದ ಸ್ಮ್ಯಾಶ್‌ಗೆ ದಾರಿಮಾಡಿಕೊಡುತ್ತದೆ. ಲೂಪ್‌ ಡ್ರೈವ್‌‌ಗೆ ಬಹಳ ಟಾಪ್‌ಸ್ಪಿನ್‌ ಬೇಕಾಗುವುದರಿಂದ, ಬೇಕಾದ ಚಲನೆಯನ್ನು ಸೃಷ್ಟಿಸಲು ಸಾಮಾನ್ಯವಾಗಿ ಆಟಗಾರರು ತಮ್ಮ ಪೂರ್ತಿ ದೇಹವನ್ನು ಬಳಸುತ್ತಾರೆ. ಸ್ಪಿನ್‌ ಮತ್ತು ವೇಗದಲ್ಲಿ ಆಗುವ ವ್ಯತ್ಯಯಗಳು ಶಾಟ್‌ನ ಪರಿಣಾಮವನ್ನು ಹೆಚ್ಚಿಸುತ್ತದೆ.
ಚೈನಾದ ಆಟಗಾರರು ಟ್ರ್ಯಾಜೆಕ್ಟರಿಗಳ ಆಧಾರದ ಮೇಲೆ ಲೂಪ್‌-ಡ್ರೈವ್‌ಅನ್ನು 3 ವ್ಯತ್ಯಯಗಳನ್ನಾಗಿ ವಿಂಗಡಿಸುತ್ತಾರೆ:
1. "ಲೂಪ್"
"ಲೂಪ್" ಎನ್ನುವುದು ಹೆಚ್ಚು ಸ್ಪಷ್ಟವಾದ, ಎತ್ತರದ ಟ್ರ್ಯಾಜೆಕ್ಟರಿ ಮತ್ತು ತೀವ್ರ ಮೇಲ್ಮೈ ಸ್ಪಿನ್‌ ಇರುವ ಕುಣಿಕೆ ಕಂಸವನ್ನು ಮೂಡಿಸುತ್ತದೆ, ಆದರೆ ಇದರ ವೇಗ ಸಾಮಾನ್ಯವಾಗಿ ಕಡಿಮೆ ಇರುತ್ತದೆ.
2. "ಲೂಪ್‌ ಕಿಲ್‌" (ಚೈನಾದಲ್ಲಿ "ರಷ್‌")
"ಲೂಪ್‌ಕಿಲ್‌" ಸಮತಟ್ಟಾದ ಕಂಸವನ್ನು ಮೂಡಿಸುತ್ತದೆ, ಇದರ ವೇಗ ಸ್ಪೀಡ್‌ ಡ್ರೈವ್‌ಅನ್ನು ಹೋಲುತ್ತದೆ ಆದರೆ ಹೆಚ್ಚು ದೃಢ ಟಾಪ್‌ಸ್ಪಿನ್‌ನೊಂದಿಗೆ, ಸಾಮಾನ್ಯವಾಗಿ ಇದನ್ನು "ಪುಟ್‌-ಅವೇ" ಸಂದರ್ಭಗಳಲ್ಲಿ ಸ್ಪೀಡ್‌ ಡ್ರೈವ್‌ ಅಥವಾ ಸ್ಮ್ಯಾಶ್‌ಗೆ ಬದಲಾಗಿ ಬಳಸಲಾಗುತ್ತದೆ.
3. "ಹೂಕ್‌"
ಇದು ಸಾಮಾನ್ಯವಾದ ಲೂಪ್‌ನಂತೆಯೇ, ಆದರೆ ವಾಲಿದ ಟಾಪ್‌ಸ್ಪಿನ್‌ಅನ್ನು ಒಯ್ಯುತ್ತದೆ (ಅಥವಾ "ಟಾಪ್‌-ಸೈಡ್‌" ಸ್ಪಿನ್‌ ಎಂದು ಕರೆಯಲಾಗುತ್ತದೆ), ಇದು ಟೇಬಲಿಗೆ ಹೊಡೆದು ಅಕ್ಕಪಕ್ಕಕ್ಕೆ ಅಥವಾ ಕೆಳಕ್ಕೆ ಪುಟಿಯುತ್ತದೆ. ಇದು ಕೆಳಗೆ ವಿವರಿಸಿದ ರಕ್ಷಣೆ "ಸೈಡ್‌-ಡ್ರೈವ್‌"ನಂತೆಯೇ ಆದರೂ ಅದಕ್ಕಿಂತ ಶಕ್ತಿಯುತವಾದುದು.
ಕೌಂಟರ್‌ ಡ್ರೈವ್‌
ಸಾಮಾನ್ಯವಾಗಿ ಇದು ಡ್ರೈವ್‌ಗಳಿಗೆ ಎದುರಾಗಿ ನೀಡುವ ಪ್ರತಿದಾಳಿ (ಸಾಮಾನ್ಯವಾಗಿ ಎತ್ತರದ ಲೂಪ್‌ ಡ್ರೈವ್‌ಗಳು). ನೀವು ರ್ಯಾಕೆಟ್‌ಅನ್ನು ಮುಚ್ಚಬೇಕಾಗುತ್ತದೆ ಮತ್ತು ಚೆಂಡಿಗೆ ಹತ್ತಿರ ಇರಬೇಕಾಗುತ್ತದೆ (ಅದರ ದಾರಿಯನ್ನು ಊಹಿಸಲು ಪ್ರಯತ್ನಿಸುತ್ತಾ). ರ್ಯಾಕೆಟ್‌ಅನ್ನು ಮುಚ್ಚಿದ ಹಾಗೆ ಮತ್ತು ಚೆಂಡಿಗೆ ಹತ್ತಿರವಾಗಿ ಹಿಡಿಯಲಾಗುತ್ತದೆ, ಮತ್ತು ಚೆಂಡನ್ನು "ಆಫ್‌-ದ-ಬೌನ್ಸ್‌" ಎನ್ನುವ ಸಣ್ಣ ಚಲನೆಯಿಂದ ಹೊಡೆಯಲಾಗುತ್ತದೆ (ತುದಿಯನ್ನು ತಲುಪುವ ಮುನ್ನ), ಇದರಿಂದ ಚೆಂಡು ವೇಗವಾಗಿ ಎದುರಾಳಿಯ ಕಡೆಗೆ ಹೋಗುತ್ತದೆ. ಸರಿಯಾಗಿ ಮಾಡಿದರೆ, ಸಮಯೋಚಿತ, ನಿಖರ ಕೌಂಟರ್‌ ಡ್ರೈವ್‌ ಸ್ಮ್ಯಾಶ್‌ನಷ್ಟೆ ಪರಿಣಾಮಕಾರಿಯಾಗಬಹುದು.
ಫ್ಲಿಪ್‌ (ಅಥವಾ ಯೂರೋಪ್‌ನಲ್ಲಿ ಫ್ಲಿಕ್‌)
ಯಾವಾಗ ಆಟಗಾರನು ಟೇಬಲ್‌ನ ತುದಿಗಿಂತ ತುಂಬಾ ಈಚೆಗೆ ಪುಟಿದ ಚೆಂಡನ್ನು ಎದುರಿಸುವ ಪ್ರಯತ್ನ ಮಾಡುತ್ತಾನೆಯೋ ಆ ಸಂದರ್ಭದಲ್ಲಿ ಆತನಿಗೆ ಬ್ಯಾಕ್‌ಸ್ವಿಂಗ್‌ ಮಾಡಲು ಸಾಕಷ್ಟು ಸ್ಥಳಾವಕಾಶ ಇರುವುದಿಲ್ಲ. ಆದರೂ ಚೆಂಡಿನ ಮೇಲೆ ದಾಳಿ ಮಾಡಬಹುದು , ಮತ್ತು ಅಂತಹ ಶಾಟನ್ನು ಫ್ಲಿಪ್‌ ಎಂದು ಕರೆಯಲಾಗುತ್ತದೆ ಏಕೆಂದರೆ ಬ್ಯಾಕ್‌ಸ್ವಿಂಗ್‌ಅನ್ನು ಚುರುಕಾದ ಕೈಯ ಹೊಡೆತವನ್ನಾಗಿ ಅಡಕಗೊಳಿಸಲಾಗಿದೆ. ಫ್ಲಿಪ್‌ ಎನ್ನುವುದು ಒಂಟಿ ಸ್ಟ್ರೋಕ್‌ ಅಲ್ಲ ಮತ್ತು ಅದು ತನ್ನ ಲಕ್ಷಣಗಳಲ್ಲಿ ಡ್ರೈವ್‌ ಅಥವಾ ಲೂಪ್‌ಅನ್ನು ಹೋಲಬಹುದು. ಬದಲಾಗಿ, ಸ್ಟ್ರೋಕ್‍ಅನ್ನು ಗುರುತಿಸುವ ಅಂಶವೆಂದರೆ ಬ್ಯಾಕ್‌ಸ್ವಿಂಗ್‌ಅನ್ನು ಶಾರ್ಟ್‌ ರಿಸ್ಟ್‌ ಫ್ಲಿಕ್‌ ಆಗಿ ಅಡಕಮಾಡಿದೆಯೋ ಇಲ್ಲವೋ ಎಂಬುದು.
ಸ್ಮ್ಯಾಷ್‌‍
ಆಕ್ರಮಣ ಮಾಡಬಹುದಾದ ಪ್ರಮುಖವಾದ ಒಂದು ವಿಧವಾಗಿದೆ. ಆಟಗಾರನು ರಕ್ಷಣಾತ್ಮಕವಾಗಿ, ಎದುರಾಳಿಯು ಚೆಂಡನ್ನು ಅತಿ ಎತ್ತರಕ್ಕೆ ಬೌನ್ಸ್‌ ಆಗುವಂತೆ ಹೊಡೆದಾಗ ಅಥವಾ ನೆಟ್‌ಗೆ ಅತೀ ಹತ್ತರದಲ್ಲಿರುವಂತೆ ಹೊಡೆದಾಗ ಅದನ್ನು ಸ್ಮಾಷ್‌ ಹೊಡೆತದ ಮೂಲಕ ಹಿಂದಿರುಗಿಸಬಹುದಾಗಿದೆ. ಸ್ಮಾಷಿಂಗ್‌ ನಲ್ಲಿ ಆಟಗಾರನು ಅತಿಹೆಚ್ಚಿನ ಬ್ಯಾಕ್‌ಸ್ವಿಂಗ್‌ ಬಳಸುವ ಮೂಲಕ ಮತ್ತು ತಕ್ಷಣದ ಪ್ರತಿಕ್ರಿಯೆಯಾಗಿ ಹೆಚ್ಚಿನ ಒತ್ತಡ ಮತ್ತು ವೇಗವನ್ನು ಚೆಂಡಿಗೆ ಹಾಕುತ್ತಾ ಹಿಂತಿರುಗಿಸುವ ವಿಧಾನವಾಗಿದೆ. ಸ್ಮಾಷ್‌ನ ಒಂದು ಪ್ರಮುಖ ಉದ್ದೇಶವೆಂದರೆ ಚೆಂಡನ್ನು ಎದುರಾಳಿಗೆ ಎದುರಿಸಲಾಗದಂತೆ ಹೊಡೆಯುವುದು. ಹೊಡೆತದ ತೀವೃತೆ ಎಷ್ಟಿರುತ್ತದೆ ಎಂದರೆ ಚೆಂಡನ್ನು ಎದುರಿಸುವವನಿಗೆ ಅದು ಹಿಂತಿರುಗಿದ ವೇಗವನ್ನು ಊಹಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಚೆಂಡಿನ ವೇಗ ಈ ಹೊಡೆತದ ಮುಖ್ಯ ಉದ್ದೇಶವಾಗಿರುತ್ತದೆ. ಈ ಹೊಡೆತದಲ್ಲಿಯ ಸ್ಪಿನ್‌ ಟಾಪ್‌ಸ್ಪಿನ್‌ಗಿಂತ ಬೇರೆಯಾಗಿರುತ್ತದೆ. ಸ್ಮಾಷ್‌ ಹೊಡೆತದಲ್ಲಿ ಸೈಡ್‌ಸ್ಪಿನ್‌ ಅನ್ನು ಇದರಲ್ಲಿ ಯಶಸ್ವಿಯಾಗಿ ಬಳಸಬಹುದು. ಆದರೆ ಹೆಚ್ಚಿನ ಆಟಗಾರರು ಈ ಹೊಡೆತದಲ್ಲಿ ಸ್ವಲ್ಪ ಸ್ಪಿನ್‌ ಅಥವಾ ಸ್ಪಿನ್‌ ಬಳಸದೇ ಆಟವಾಡುವುದು ಹೆಚ್ಚಾಗಿರುತ್ತದೆ. ಆಕ್ರಮಣಕಾರಿ ಟೇಬಲ್‌ ಟೆನ್ನಿಸ್‌ನಲ್ಲಿ ಆಟಗಾರನು ಇಡೀ ರಾಲಿಯ ಕುರಿತು ಯೋಚಿಸುತ್ತಾನೆ ಹಾಗೂ ಗೆಲುವಿನ ಸ್ಮಾಷ್‌ಗಾಗಿ ಬೆಳವಣಿಗೆಗಾಗಿ ಯೋಚಿಸುತ್ತಾನೆ. ಕೇವಲ ಉತ್ತಮ ಊಹೆಯ ಸರಣಿ ಸ್ಮಾಷ್‌ಗಳು ಮಾತ್ರ ಉತ್ತಮ ಎದುರಾಳಿಯ ಕಡೆಗೆ ಅಂಕಗಳನ್ನು ಗಳಿಸಲು ಸಹಾಯ ಮಾಡುತ್ತವೆ. ಅದೇನೆ ಇದ್ದರೂ, ಹೆಚ್ಚಿನ ಆಟಗಾರರು ಸಾಮಾನ್ಯವಾಗಿ ಒಂದು ಅಥವಾ ಎರಡು ಸ್ಮಾಷ್‌ಗಳನ್ನು ದೃಢವಾಗಿ ಹಿಂದಿರುಗಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಎದುರಾಳಿಯು ಟೇಬಲ್‌ಗೆ ಅತೀ ಹತ್ತಿರದಲ್ಲಿ ಇಲ್ಲದಿದ್ದರೆ ಅಥವಾ ಚೆಂಡಿನಿಂದ ಅತೀ ದೂರದಲ್ಲಿ ಇಲ್ಲದಿದ್ದಲ್ಲಿ ಆದಾಗ್ಯೂ ಕೆಲವು ಕಷ್ಟಗಳನ್ನು ಹೊರತು ಪಡಿಸಿ ಸ್ಮಾಷ್‌ ಅನ್ನು ತಡೆಯಬಹುದು, ಕಟ್‌ ಮಾಡಬಹುದು, ತಡೆಹಿಡಿದ ಅಥವಾ ಕೌಂಟರ್ ಲೂಪ್‌ ಕೂಡ ಮಾಡಬಹುದು. ಆಟಗಾರನು ಹೆಚ್ಚಾಗಿ ಸರಣಿ ಸ್ಮಾಷ್‌ಗಳನ್ನು ಹೊಡೆಯಲು ಪ್ರಯತ್ನಿಸುತ್ತಾನೆ. ಇದರಿಂದ ಎದುರಾಳಿಯು ಒಂದೇ ಜಾಗದಲ್ಲಿ ನಿಲ್ಲದೆ ಅವನನ್ನು ಆಚೀಚೆ ಓಡಾಡಿಸಬಹುದು ಅಲ್ಲದೆ ಅದರಿಂದ ಎದುರಾಳಿಯ ಸಮತೋಲನವನ್ನು ತಪ್ಪಿಸಲು ಅಥವಾ ಎರಡನ್ನೂ ಮಾಡುವ ಪ್ರಯತ್ನ ಮಾಡುತ್ತಾನೆ. ಇದನ್ನು ಮಾಡಲು ಅಸಮರ್ಥನಾದ ಸ್ಮಾಷ್‌ ಹೊಡೆಯುವವನು ರಕ್ಷಣಾತ್ಮಕ ಎದುರಾಳಿಯ ವಿರುದ್ಧ ಅಂಕ ಗಳಿಸಲು ಅಸಮರ್ಥನಾಗುತ್ತಾನೆ.

ರಕ್ಷಣಾ ಸ್ಟ್ರೋಕ್ಸ್

[ಬದಲಾಯಿಸಿ]
ಪುಶ್‌ (ಅಥವಾ ಏಷಿಯಾದಲ್ಲಿ ಸ್ಲೈಸ್)
ಪುಶ್‌ ಅನ್ನು ಸಾಮಾನ್ಯವಾಗಿ ಅಂಕವನ್ನು ಪಡೆಯುವುದಕ್ಕಾಗಿ ಮತ್ತು ಆಕ್ರಮಣಕಾರಿ ಅವಕಾಶಗಳನ್ನು ಸೃಷ್ಟಿಸುವುದಕ್ಕಾಗಿ ಬಳಸಲಾಗುತ್ತದೆ. ಪುಶ್‌, ಟೆನ್ನಿಸ್‌ನ ರಭಸದ ಹೊಡೆತಗಳನ್ನು ಹೋಲುತ್ತದೆ: ಬ್ಯಾಟ್‌‍ ಚೆಂಡು ಕೆಳಗೆ ಬಿದ್ದು ಬ್ಯಾಕ್‌ಸ್ಪಿನ್ ಮುಟ್ಟುವುದನ್ನು ಕಡಿಮೆ ಮಾಡುತ್ತದೆ. ಮೇಜಿನ ಮತ್ತೊಂದು ಕಡೆಯಲ್ಲಿ ನಿಧಾನವಾಗಿ ಚೆಂಡು ಚಲಿಸುವಂತೆ ಮಾಡಲು ಕಾರಣವಾಗುತ್ತದೆ. ಸ್ಪಷ್ಟವಾಗಿಲ್ಲದ ಪುಶ್‌ಯು ದಾಳಿ ಮಾಡಲು ಕಷ್ಟವಾಗುತ್ತದೆ, ಏಕೆಂದರೆ ಚೆಂಡಿನ ಬ್ಯಾಕ್‌ಸ್ಪಿನ್ ಅದನ್ನು ಮೇಜಿನ ಮೇಲೆ ಎದುರಾಳಿಯ ಬ್ಯಾಟ್‌‍ನ ಕಡೆಗೆ ಬೀಳಿಸಲು ಕಾರಣವಾಗುತ್ತದೆ. ಕ್ರಮಬದ್ಧವಾಗಿ ಪುಶ್‌ ಅನ್ನು ದಾಳಿ ಮಾಡಲು, ಆಟಗಾರನು ನೆಟ್‌ನ ಹಿಂದಕ್ಕೆ ಚೆಂಡನ್ನು ಸಾಮಾನ್ಯವಾಗಿ ಸುತ್ತು ಹಾಕುವಂತೆ ಮಾಡುತ್ತಾನೆ. ಹೆಚ್ಚಾಗಿ, ಆರಂಭಿಕ ಆಟಗಾರರಿಗಿರುವ ಉತ್ತಮ ಆಯ್ಕೆ ಎಂದರೆ ಮತ್ತೆ ಚೆಂಡನ್ನು ಹಿಂದಕ್ಕೆ ಪುಶ್‌ ಮಾಡುವುದಾಗಿದೆ. ಇದು ಪುಶಿಂಗ್‌ ಪಂದ್ಯಗಳಲ್ಲಿ ಪರಿಣಾಮಕಾರಿಯಾಗಿರುತ್ತದೆ. ಉತ್ತಮ ಆಟಗಾರರಿಗೆ ಇದು ಕೆಟ್ಟ ಆಯ್ಕೆಯಾಗಬಹುದು, ಏಕೆಂದರೆ ಎದುರಾಳಿಯು ಸುತ್ತು ಹಾಕುವಿಕೆಯೊಂದಿಗೆ ನಿಮ್ಮನ್ನು ವಿರೋಧಿಸಬಹುದು, ಹೆಚ್ಚಾಗಿ ನೀವು ಗೆಲ್ಲುವು ಸಾಧಿಸುವುದರಿಂದ ರಕ್ಷಣಾತ್ಮಕ ಸ್ಥಿತಿಯಲ್ಲಿ ನಿಮ್ಮನ್ನು ಹೊಡೆಯಬಹುದು. ಇಲ್ಲದಿದ್ದರೆ ನೀವು ಉತ್ತಮ ಚಾಪರ್‌ (ದಾಳಿ ಕೋರ) ಆಗುವಿರಿ. ಪುಶ್‌ನ ಮತ್ತೊಂದು ಆಯ್ಕೆಯೆಂದರೆ ಚೆಂಡು ನೆಟ್‌ನ ಸಮೀಪವಿದ್ದಾಗ ಅದನ್ನು ಲಘುವಾಗಿ ಹೊಡೆಯುವುದಾಗಿದೆ. ಪುಶಿಂಗ್‌ನಿಂದ ಕೆಲವು ಸನ್ನಿವೇಶಗಳಲ್ಲಿ ಅನುಕೂಲಗಳಾಗಬಹುದು. ಎದುರಾಳಿಯು ಸುಲಭವಾಗಿ ತಪ್ಪುಗಳನ್ನು ಮಾಡಿದಾಗ ಆಟಗಾರರು ಮಾತ್ರ ಪುಶ್‌ ಮಾಡಲೇಬೇಕು. ಆಕ್ರಮಣಕಾರಿ ಆಟಗಾರರು ಮಾರ್ಪಾಡುಗಳಿಗಾಗಿ ಮಾತ್ರ ಪುಶ್‌ ಅನ್ನು ಉಪಯೋಗಿಸಲೇ ಬೇಕಾಗುತ್ತದೆ, ಸಾಮಾನ್ಯ ಪಂದ್ಯಗಳಿಗಾಗಿ ಅಲ್ಲ. ಪುಶ್‌ ಸಣ್ಣದಾಗಿದ್ದರೆ ವಿರುದ್ಧ ಮೂಲೆಯಲ್ಲಿ ಸುಲಭವಾಗಿ ಕೌಂಟರ್-ಲೂಪ್ ಆಗುತ್ತದೆ. ಅನೇಕ ಆಟಗಾರರ ಗುರಿಯ ಪುಶ್‌ಯು ಚೆಂಡನ್ನು ನೆಲಕ್ಕೊಡೆಯಲು, ಎದುರಾಳಿಯ ಸ್ಪಿನ್‌ ಅನ್ನು ಪ್ರಯತ್ನಿಸುವುದಕ್ಕಿಂತ ಬದಲಾಗಿ ತುಂಬಾ ಸರಳವಾಗಿ ದಾಳಿ ಮಾಡಲಾಗುತ್ತದೆ.
ಚಾಪ್
ಚಾಪ್ ಅಥವಾ ಕತ್ತರಿಸುವಿಕೆ ಯು ರಕ್ಷಣಾತ್ಮಕವಾಗಿದ್ದು, ಬ್ಯಾಕ್‌ಸ್ಪಿನ್ ಆಕ್ರಮಣಕಾರಿ ಸುತ್ತುಹಾಕುವ ಚಲನೆ ಗೆ ಮುಖ್ಯ ಭಾಗವಾಗುತ್ತದೆ. ಚಾಪ್ ಇದು ಬಹುಮುಖ್ಯ ಹೊಡೆತವಾಗಿದ್ದು ಇದು ಅತ್ಯಂತ ಕಠಿಣದಾಯಕ ವಾದುದಾಗಿದೆ, ಟೇಬಲ್‌ ಅನ್ನು ಬಿಟ್ಟು ದೂರದಲ್ಲಿ ತೆಗೆದುಕೊಳ್ಳಲಾಗುತ್ತದೆ. ರಾಕೇಟ್‌ನ ಮುಖವು ಮೊದಲು ಭೂಮಿಗೆ ಸಮನಾಂತರವಾಗಿರುತ್ತದೆ, ಕೆಲವೊಮ್ಮೆ ಮೇಲ್ಮುಖವಾಗಿರುತ್ತದೆ ಮತ್ತು ಹೊಡೆತದ ರೀತಿಯು ನೇರ‍ವಾಗಿ ಕೆಳಮುಖ ವಾಗಿರುತ್ತದೆ. ರಕ್ಷಣಾತ್ಮಕ ಚಾಪ್‌ ನ ಉದ್ದೇಶವು ಎದುರಾಳಿಯ ಟಾಪ್‌ಸ್ಪಿನ್‌ಗೆ ಹೊಂದಿಕೆ ಯಾಗಿ ಆಟಗಾರನು ನೀಡುವ ತನ್ನದೇ ಶೈಲಿಯ ಬ್ಯಾಕ್‌ಸ್ಪಿನ್‌ ಆಗಿದೆ. ಉತ್ತಮ ಚಾಪ್‌ ಟೇಬಲ್‌ಗೆ ಹತ್ತಿರವಾಗಿ ಸಮನಾಂತರವಾಗಿ ಚಲಿಸುತ್ತದೆ. ಕೆಲವು ಸಂಧರ್ಬಗಳಲ್ಲಿ ಎಷ್ಟು ಪ್ರಭಲವಾದ ಬ್ಯಾಕ್‌ಸ್ಪಿನ್‌ಗಳನ್ನು ಬಳಸುತ್ತಾರೆಂದರೆ ಚೆಂಡು ಟೇಬಲ್‌ನ ಮೇಲೆ ಪುಟಿದೇಳುತ್ತದೆ. ಚಾಪ್‌ಅನ್ನು ಹಿಂದುರುಗಿಸುವುದು ತುಂಬಾ ಕಷ್ಟವಾಗುತ್ತದೆ ಏಕೆಂದರೆ ಅದು ಉತ್ತಮ ಬ್ಯಾಕ್‌ಸ್ಪಿನ್‌ ಹೊಂದಿರುತ್ತದೆ. ಕೆಲವು ವೇಳೆ ರಕ್ಷಣಾತ್ಮಕ ಆಟಗಾರನು ಚಾಪ್‌ ನ ಅವಧಿಯಲ್ಲಿ ಚೆಂಡಿನ ಮೇಲೆ ಯಾವುದೇ ಸ್ಪಿನ್‌ಗಳನ್ನು ಪ್ರಯೋಗಿಸುವುದಿಲ್ಲ, ಅಥವಾ ಚೆಂಡಿಗೆ ಬಲ-ಅಥವಾ ಎಡ-ಗೈ ಸ್ಪಿನ್‌ ಅನ್ನು ಪುನರಾವರ್ತಿತವಾಗಿ ಸೇರಿಸಲಾಗುತ್ತದೆ. ಇದು ಅವನ/ಅವಳ ಎದುರಾಳಿಯನ್ನು ಅಧಿಕ ಗೊಂದಲಕ್ಕೀಡು ಮಾಡಬಹುದು. ಚಾಪ್‌ಗಳ ನ್ನು ಅನುಸರಿಸಲು ಕಷ್ಟವಾಗಿವೆ, ಆದರೆ ಅವು ಸರಿಯಾಗಿ ಸಂಪೂರ್ಣಗೊಂಡಾಗ ವಿನಾಶವಾಗುತ್ತವೆ. ಏಕೆಂದರೆ ಅದು ಲೂಪ್ ಡ್ರೈವ್‌ ಮೇಲೆ ಚೆಂಡನ್ನು ನೆಟ್‌ನ ಹಿಂದಕ್ಕೆ ಹಿಂದಿರುಗಿಸಲು ಟಾಪ್‌ಸ್ಪಿನ್‌ ನ ಅಸಾಧಾರಣ ಮೊತ್ತವನ್ನು ತೆಗೆದುಕೊಳ್ಳಲಾಗಿರುತ್ತದೆ.
ಬ್ಲಾಕ್‌
ಬ್ಲಾಕ್‌ ಅಥವಾ ಶಾರ್ಟ್ ಸರಳ ಹೊಡೆತವಾಗಿದ್ದು, ಕೇವಲ ಯೋಗ್ಯವಾದ "ಸ್ಟ್ರೋಕ್" ಎಂದು ಕರೆಯಲಾಗುತ್ತದೆ. ಆದರೆ ಅದೇನೆ ಇದ್ದರೂ ಅಕ್ರಮಣ ಮಾಡುವ ಎದುರಾಳಿಯನ್ನು ಸಮರ್ಥವಾಗಿ ಎದುರಿಸಲು ಇದು ಸಹಾಯ ಮಾಡುತ್ತದೆ. ಬ್ಲಾಕ್ ಚೆಂಡಿನ ಮುಂದೆ ಬ್ಯಾಟ್‍ಅನ್ನು ಸರಳವಾಗಿ ಹಿಡಿಯುವ ಕಾರ್ಯವಾಗಿದೆ. ಇದರಿಂದ ಚೆಂಡು ಬಂದಷ್ಟೇ ವೇಗದಲ್ಲಿ ಎದುರಾಳಿಯ ಕಡೆ ಹಿಂದಿರುಗುತ್ತದೆ. ಇದು ಅಂದುಕೊಂಡಷ್ಟು ಸುಲಭವಾಗಿರುವುದಿಲ್ಲ, ಏಕೆಂದರೆ ಚೆಂಡಿನ ತಿರುಗುವಿಕೆ, ವೇಗ ಮತ್ತು ಸ್ಥಳ- ಈ ಎಲ್ಲಾ ಪ್ರಭಾವಗಳು ತಡೆಗಟ್ಟುವಿಕೆ ಯ ಸರಿಯಾದ ರೀತಿಯ ಮೇಲೆ ಪ್ರಭಾವ ಬೀರುತ್ತಿರುತ್ತವೆ. ಇದು ಎದುರಾಳಿಯು ಬ್ಲಾಕ್‌ನಿಂದ ಹಿಂದುರುಗಿದ ಚೆಂಡನ್ನು ಸಮರ್ಥವಾದ ಲೂಪ್‌ , ಡ್ರೈವ್‌ ಅಥವಾ ಸ್ಮಾಷ್‌‍ ನಿಂದ ಅದು ಬಂದಷ್ಟೇ ವೇಗವಾಗಿ ಬ್ಲಾಕ್‌ ಮಾಡಲಾದ ಶಾಟ್‌ ಹಿಂದುರುಗಿಸಲು ಸನ್ನದ್ದನಾಗಿರುತ್ತಾನೆ. ಹೆಚ್ಚಿನ ಶಕ್ತಿಯನ್ನು ಆಕ್ರಮಣಕಾರಿ ಶಾಟ್‌ಗಳಲ್ಲಿ ಬಳಸುವುದರಿಂದ, ಎದುರಾಳಿಯು ಅಷ್ಟು ಸುಲಭವಾಗಿ ಅಷ್ಟು ವೇಗವಾಗಿ ಪ್ರತಿಕ್ರಿಯಿಸುವುದು ಸಾಧ್ಯವಾಗುವುದಿಲ್ಲ. ಅಲ್ಲದೆ ಎದುರಾಳಿಯಿಂದ ಬ್ಲಾಕ್‌ ಮಾಡಲಾದ ತನ್ನದೇ ಆಕ್ರಮಣಕಾ ಹೊಡೆತವನ್ನು ತಡೆಯುವುದು ಕಷ್ಟಸಾಧ್ಯವಾದುದಾಗಿದೆ. ಬ್ಲಾಕ್‌‍ ಶಾಟ್‌ಗಳು ಹೆಚ್ಚಾಗಿ ಯಾವಾಗಲೂ ಒಂದೇ ರೀತಿಯ ಸ್ಪಿನ್‌ ಅನ್ನು ಉತ್ಪಾದಿಸುತ್ತವೆ. ಅವು ಹೆಚ್ಚಾಗಿ ಯಾವಾಗಲೂ ಟಾಪ್‌ಸ್ಪಿನ್ ಆಗಿರುತ್ತವೆ.
ಪುಶ್‌ ಬ್ಲಾಕ್‌‍
ಉನ್ನತ ಮಟ್ಟದ ಆಟಗಾರರು ಚೆಂಡಿನ ವೇಗವನ್ನು ಅನುಸರಿಸಿ ಪುಶ್‌ ಬ್ಲಾಕ್‌ ಅಥವಾ ಆ‍ಯ್‌ಕ್ಟಿವ್‌ ಬ್ಲಾಕ್‌ ಎಂದು ಕರೆಯುತ್ತಾರೆ(ಚಿಕ್ಕ ಟಾಪ್‌ಸ್ಪಿನ್ ಚಲನೆ ಹೊಂದಿರುವ). ಪೆನ್‌ಹೋಲ್ಡ್ ಗ್ರಿಪ್‌ ನಲ್ಲಿ ಆಡುತ್ತಿದ್ದಾಗ, ಅನೇಕ ಆಟಗಾರರು ಹಿಂದಿನ ಕೈಯ ಮೇಲೆ ಒತ್ತಡ ಬಿದ್ದಾಗ ಪುಶ್‌ ತಡೆಗಟ್ಟುವಿಕೆಗಳ ನ್ನು ಬಳಸಿದರು. ಚೀನಾದ ಪೆನ್‌-ಹೋಲ್ಡ್ ಆಟಗಾರರು ಇದನ್ನು ಪುಶ್-ಬ್ಲಾಕ್‌ ಎಂದು ಕರೆಯುತ್ತಾರೆ. ಏಕೆಂದರೆ ಅವರು ಚೆಂಡನ್ನು ಕೇವಲ ತಡೆಯುವ ಬದಲು ತಮ್ಮ ಹಿಂಬದಿಯ ಕೈಯನ್ನು ಮುಂದಕ್ಕೆ ತರುತ್ತಾರೆ.
ಕಿಲ್ಲ್ ಸ್ಪಿನ್ (ವಿಫಲ ತಿರುಗಿಸುವಿಕೆ)
ಕಿಲ್‌ಸ್ಪಿನ್‌ ಎಂಬುದು ಒಂದು ಹೊಸ ರೀತಿಯ ಹೊಡೆತವಾಗಿದ್ದು ನೆಟ್‌ನ ಇನ್ನೊಂದು ಕಡೆ ಸಮೀಪದಲ್ಲೇ ಚೆಂಡು ಬೌನ್ಸ್‌ ಅದಾಗ ಮಾತ್ರ ಈ ರೀತಿಯ ಸ್ಪಿನ್‌ ಆಡಲಾಗುತ್ತದೆ. ಈ ಶಾಟ್‌ ಅನ್ನು ಹೊಡೆಯಲು ನೀವು ಟೇಬಲ್‌ನ ಪಕ್ಕದಲ್ಲಿ ನಿಂತಿರಬೇಕಾಗಿರುತ್ತದೆ. ಬ್ಯಾಟ್‌ ಮುಕ್ತವಾಗಿ ತೆರೆದುಕೊಂಡು ಬುಜಗಳನ್ನು ಬಗ್ಗಿಸಿ, ಎಷ್ಟು ನಿಧಾನವಾಗಿ ಚೆಂಡನ್ನು ಸ್ಪರ್ಷಿಸುವುದು ಸಾಧ್ಯವಾಗುತ್ತದೆಯೋ ಅಷ್ಟು ನಿಧಾನವಾಗಿ ಅದನ್ನು ಸ್ಪರ್ಷಿಸಿ ಹಿಂತೆಗೆದುಕೊಳ್ಳಬೇಕಾಗುತ್ತದೆ. ಇದು ಹೆಚ್ಚಿನ ಬ್ಯಾಕ್‌ಸ್ಪಿನ್‌ ಅನ್ನು ಸೃಷ್ಟಿಸುತ್ತದೆ ಮತ್ತು ಇದು ಚೆಂಡು ನೆಟ್‌ನ ಮೇಲೆಯೇ ಆಚೀಚೆ ತೂಗಾಡುತ್ತ ಎದುರಾಳಿಗೆ ಅದನ್ನು ಎದುರಿಸಲು ಅಸಾಧ್ಯವಾಗುವ ರೀತಿಯಲ್ಲಿ ಬೌನ್ಸ್ ಆಗುತ್ತದೆ.
ಸೈಡ್‌ ಡ್ರೈವ್‌‍
ಈ ಸ್ಪಿನ್ ಹೊಡೆತವನ್ನು ರಕ್ಷಣಾತ್ಮಕ ಮತ್ತು ಆಕ್ರಮಣಕಾರಿ ಹಂಚಿಕೆಯಂತೆ ಪರ್ಯಾಯವಾಗಿ ಬಳಸಲಾಗುತ್ತದೆ. ಈ ಚಲನೆಯು ಚೆಂಡಿನ ಮೇಲೆ ಸ್ಪಿನ್‌ ಆಗಲು ಬ್ಯಾಟ್‌ನ ಎಡ ಕ್ಕೆ ಅಥವಾ ಬಲ ಕ್ಕೆ ಹೊಡೆಯುವುದಾಗಿದೆ. ಚಲನೆಯ ಕಾರ್ಯನಿರ್ವಹಿಸುವಿಕೆಯು ಸ್ಲೈಸ್‌ಗೆ ಹೋಲಿಕೆಯಾಗುತ್ತದೆ, ಆದರೆ ಕೆಳಕ್ಕೆ ಬದಲಾಗಿ ಬಲ ಅಥವಾ ಎಡಕ್ಕಿರುತ್ತದೆ. ಸ್ಪಿನ್ ಮಾಡಿದಾಗ ಚೆಂಡು ಪಕ್ಕಕ್ಕೆ ತಿರುಗಿಸುವಲ್ಲಿ ಪರಿಣಾಮ ಬೀರುತ್ತದೆ, ಆದರೆ ವಿರುದ್ಧ ದಿಕ್ಕಿನಲ್ಲಿ ಅದನ್ನು ಎದುರಾಳಿಯು ಹಿಂದಿರುಗಿಸಿದಾಗ ಬೌನ್ಸ್ ಆಗುತ್ತದೆ. ರೈಟ್‌-ಸೈಡ್‌ ಸ್ಪಿನ್‌ ಅನ್ನು (ಚೆಂಡನ್ನು ಹೊಡೆಯುವಾಗ ನಿಮ್ಮ ಕೈಯನ್ನು ಬಲಭಾಗಕ್ಕೆ ತಿರುಗಿಸುವುದು) ನೀವು ಟೇಬಲ್‌ನ ಎಡಭಾಗದಲ್ಲಿದ್ದಾಗ ಅಥವಾ ಇನ್ನೊಂದು ಕಡೆ ಇದ್ದಾಗ ತಡೆಯಲು ಹೋಗಬಾರದು. ಆ ಶಾಟ್‌ ಅನ್ನು ಹಿಂತಿರುಗಿಸಲು ಅದೇ ರೀತಿಯ ಸ್ಪಿನ್‌ ಅನ್ನು ಉಪಯೋಗಿಸಬೇಕು.
ಲೊಬ್‌‍
ರಕ್ಷಣಾತ್ಮಕ ಹೈ ಬಾಲ್ ಅಥವಾ ಲೋಬ್‌ ಇದು ಟೇಬಲ್‌ ಟೆನ್ನಿಸ್‌ ಆಟದಲ್ಲಿ ವೀಕ್ಷಕರಿಗೆ ಹೆಚ್ಚು ಇಷ್ಟವಾಗುವಂತಹ ಹೊಡೆತವಾಗಿದೆ. ಅದು ತನ್ನ ಸರಳತೆಯಲ್ಲಿಯೇ ಎದುರಾಳಿಯು ಸುಲಭವಾಗಿ ಮೋಸಹೋಗುವಂತಿದೆ. ಹೈ ಬಾಲ್‌ ಅನ್ನು ಎದುರಿಸಲು, ರಕ್ಷಣಾತ್ಮಕ ಆಟಗಾರ ಮೊದಲು ಮೇಜಿನ 4-6 ಮೀಟರುಗಳಷ್ಟು ಹಿಂದಕ್ಕುಳಿಯುತ್ತಾನೆ; ಆಗ ಸ್ಟ್ರೋಕ್ ತಾನಾಗಿಯೇ ಮೇಜಿನ ಮೇಲೆ ಎದುರಾಳಿಯ ಕಡೆಗೆ ಚೆಂಡು ಹಿಂದಕ್ಕೆ ಬೀಳುವುದಕ್ಕೂ ಮುಂಚೆ ಅದನ್ನು ಅಸಾಧಾರಣ ಎತ್ತರಕ್ಕೆ ಏರಿಸುವಂತೆ ಆಡಲಾಗುತ್ತದೆ. ಹೈ ಬಾಲ್‌ ಮೂಲಸ್ವರೂಪವಾಗಿ ಕ್ರಿಯಾತ್ಮಕ ಹೊಡೆತವಾಗಿದೆ ಮತ್ತು ನಿಮ್ಮ ಕಲ್ಪನೆಯ ಸ್ಪಿನ್‌ನ ವಿಧಕ್ಕೆ ಹೆಚ್ಚು ಸಮೀಪವಾಗಿದೆ. ಅತ್ಯಂತ ಗುಣಮಟ್ಟದ ಆಟಗಾರರು ಚೆಂಡಿನ ಸ್ಪಿನ್‌ ಅನ್ನು ನಿಯಂತ್ರಿಸುವ ಕ್ರಮದಲ್ಲಿ ತಮ್ಮ ಅನುಕೂಲಕ್ಕಾಗಿ ಇದನ್ನು ಬಳಸುತ್ತಾರೆ. ಉದಾಹರಣೆಗೆ, ಎದುರಾಳಿಯು ಚೆಂಡನ್ನು ಕಠಿಣ ಮತ್ತು ಶೀಘ್ರವಾಗಿ ಸ್ಮ್ಯಾಶ್ ಮಾಡಬಹುದು, ಉತ್ತಮ ರಕ್ಷಣಾತ್ಮಕ ಲಾಬ್ ಚೆಂಡಿನ ಮೇಲೆ ಸ್ಪಿನ್‌ನ ಅನಿರೀಕ್ಷಿತತೆಯನ್ನು (ಮತ್ತು ಅಧಿಕ ಮೊತ್ತ) ಹಿಂದಿರುಗಿಸಲು ಹೆಚ್ಚು ಕಷ್ಟವಾಗುತ್ತದೆ. ಹೀಗೆ, ಟೇಬಲ್‌ನಿಂದ ಹತ್ತು ಅಡಿ ದೂರವಿದ್ದೂ ಚೆಂಡನ್ನು ತಲುಪಿ ಎದುರಿಸುವ ಸಲುವಾಗಿ ಓಡುತ್ತ ಮತ್ತು ನೆಗೆದು ಪ್ರಯತ್ನ ಪಡುವ ಮೂಲಕ ಉತ್ತಮ ರಕ್ಷಣಾತ್ಮಕ ಆಟಗಾರನು ಒಳ್ಳೆಯ ಹೈ ಬಾಲ್‌ ಶಾಟ್‌ಗಳನ್ನು ಬಳಸಿ ಅಂಕಗಳನ್ನು ಗಳಿಸ ಬಹುದಾಗಿದೆ .

ಹೀಗಾಗಿ, ಅನೇಕ ವೇಳೆ ಕೆಲವರು ಅಂಕಗಳನ್ನು ಕಳೆದುಕೊಳ್ಳುತ್ತಾರೆ, ಆದ್ದರಿಂದ ಅದನ್ನು ಅಗತ್ಯಕಿಂತ ಹೆಚ್ಚಾಗಿ ಅಂಗೀಕರಿಸುವುದಿಲ್ಲ.

ಡ್ರಾಪ್‌ ಶಾಟ್‌
ಡ್ರಾಪ್‌ ಶಾಟ್‌ ಇದು ಹೆಚ್ಚಿನ ಮಟ್ಟದ ಸ್ಟ್ರೋಕ್ ಆಗಿದ್ದು, ಅದನ್ನು ಕ್ಲೊಸ್‌-ಟು-ಟೇಬಲ್‌ ಸ್ಟ್ರೋಕ್ಸ್‌ನ ಬದಲಾವಣೆಯಾಗಿ (ಹರೈ ಮತ್ತು ಸ್ಲೈಸ್‌ ನಂತೆ) ಬಳಸಲಾಗುತ್ತದೆ. ಚೆಂಡಿಗೆ ಸಮೀಪದಲ್ಲಿ ಬ್ಯಾಟ್‌ ಅನ್ನು ಇರಿಸಿಕೊಳ್ಳಬೇಕು ಮತ್ತು ಚೆಂಡನ್ನು ನೆಟ್‌ಗೆ ತಾಕುವಂತೆ ಆದರೆ ಯಾವುದೇ ಸ್ಪಿನ್‌ ಅಥವಾ ವೇಗ ಇರಬಾರದು ಆದರೆ ಎದುರಾಳಿಗೆ ಅದನ್ನು ತಲುಪಲು ಸಾಧ್ಯವಾಗದಿದ್ದಲ್ಲಿ ಎರಡಕ್ಕಿಂತ ಹೆಚ್ಚು ಬಾರಿ ಅದು ಎದುರಾಳಿಯ ಟೇಬಲ್‌ ಅನ್ನು ತಾಕಬೇಕು ಹಾಗೆ ರಾಕೇಟ್‌ಗೆ ಅದು ಸ್ವಲ್ಪ ತಾಕುವಂತೆ ಮಾಡಿ (ಕೈಯ ಚಲನೆ ಇರಬಾರದು). ಈ ಸ್ಟ್ರೋಕ್ಸ್ ಎದುರಾಳಿಗಳು ಮೇಜಿನಿಂದ ದೂರದಲ್ಲಿದ್ದಾಗ ಬಳಸಲ್ಪಡುತ್ತವೆ ಮತ್ತು ಅವರು ಮೇಜಿಗೆ ಹತ್ತಿರವಾಗಲೂ ಕೂಡ ತಯಾರಾಗಿರುವುದಿಲ್ಲ. ಈ ತಂತ್ರವನ್ನು ಪೆನ್-ಹೋಲ್ಡರ್‌ಗಳು ಸಾಮಾನ್ಯವಾಗಿ ಮಾಡುತ್ತಾರೆ ಮತ್ತು ಆಟಗಾರರು ಉದ್ದ ಅಥವಾ ಸಣ್ಣ ಗುಳ್ಳೆಗಳನ್ನು ಬಳಸುತ್ತಾರೆ. ಬಹಳ ಮೋಸಮಾಡುವ ತಂತ್ರವಾಗಿದ್ದು, ಇದು ಚೆಂಡಿನ ಅಂತರ ವನ್ನು ತಪ್ಪಾಗಿ ಅಭಿಪ್ರಾಯಿಸಿದ ನಂತರ ಚೆಂಡನ್ನು ತಲುಪಲು ಎದುರಾಳಿಯು ಸೋಲುವಲ್ಲಿ ಪರಿಣಾಮ ಬೀರುತ್ತದೆ. ಟಾಪ್‌ಸ್ಪಿನ್ ಸನ್ನಿವೇಶ ವು ಅಂಕವನ್ನು ಗಳಿಸಿದ ನಂತರ ಸ್ಟ್ರೋಕ್‌ ಅನ್ನು ನಿರ್ದಿಷ್ಟವಾಗಿ ನಡೆಸಲಾಗುತ್ತದೆ.
ಟಾಪ್‌ಸ್ಪಿನ್
ಇದು ಸ್ಪಿನ್‌ನ ಹೊಡೆತವಾಗಿದ್ದು, ಶಕ್ತಿಯುತ ಸ್ಪೈಕ್‌ನಂತೆ ಬಳಸಲಾಗುತ್ತದೆ ಅಥವಾ ಮೇಜಿನ ಮೇಲೆ ಮತ್ತೊಬ್ಬ ವ್ಯಕ್ತಿಯ ಕಡೆಯಲ್ಲಿ ಚೆಂಡನ್ನು ಪಡೆಯಲಾಗುತ್ತದೆ. ಈ ಹೊಡೆತವನ್ನು ಮಾಡಲು ನೀವು ಬ್ಯಾಟ್‌‍ನಿಂದ ಚೆಂಡಿನ ಮೇಲ್ಮೈಯನ್ನು ನಿಧಾನವಾಗಿ ಮುಟ್ಟಬೇಕು. ಇದು ಶಾಟ್ (ಹೊಡೆತ)ಅನ್ನು ಮಾಡಲು ಅತ್ಯಂತ ಸುಲಭವಾಗಿದೆ, ಆದರೆ ಸ್ವಲ್ಪ ಪ್ರಯತ್ನವೂ ಅಗತ್ಯವಾಗಬಹುದು.

ಸ್ಪಿನ್‌ನ (ತಿರುಗುವಿಕೆ) ಪ್ರಭಾವಗಳು

[ಬದಲಾಯಿಸಿ]

ಸ್ಪಿನ್‌ ಬಳಸಿ ಬಾಲ್‌ ಅನ್ನು ಹೊಡೆಯುವುದರಿಂದ ದೊಡ್ಡ ಮತ್ತು ಸಣ್ಣ ಮುಖ್ಯ ಬದಲಾವಣೆಗಳು ಉಂಟಾಗುತ್ತವೆ:

ಬ್ಯಾಕ್‌ಸ್ಪಿನ್‌ ಕರ್ವ್‌ನಲ್ಲಿಯ 4 ಹಂತಗಳು

ಬ್ಯಾಕ್‌ಸ್ಪಿನ್: ಬ್ಯಾಕ್‌ಸ್ಪಿನ್‍ ಹೊಡೆತಗಳನ್ನು ಕಲಿಯುವುದು ಸುಲಭವಾಗಿದ್ದು, ಇದರಲ್ಲಿ ಚೆಂಡು-ತಿರುಗುವಿಕೆಯ ಪ್ರಥಮ ಭಾಗಕ್ಕೆ ಹಿಡಿತಕ್ಕೆ ಸಿಗದಂತೆ ಮೇಲೆರಿಸಲಾಗುತ್ತದೆ. ಚೆಂಡನ್ನು ಕೂಡಲೇ ಬೀಳಿಸಲು ಆಸ್ಪದ ಕೊಡಲಾಗುತ್ತದೆ, ಚೆಂಡನ್ನು ಹೆಚ್ಚಾಗಿ ಬಲಕ್ಕೆ ಬೌನ್ಸ್ ಮಾಡಲಾಗುತ್ತದೆ ಮತ್ತು ಹೆಚ್ಚು ಗಮನಾರ್ಹವಾಗಿರುತ್ತದೆ: ಎದುರಾಳಿಯು ತನ್ನ ಜಾಲದಲ್ಲಿ ಸಾಮಾನ್ಯ ರಬ್ಬರ್‌ (ಒಳಗಡೆಯಿರುವ ಗುಳ್ಳೆಗಳು) ಅನ್ನು ಬಳಸಿದಾಗ ಚೆಂಡನ್ನು ಕೆಳಕ್ಕೆ ಇಳಿಸಲಾಗುತ್ತದೆ. (ಎದುರಾಳಿಯು ಬ್ಯಾಕ್‌ಸ್ಪಿನ್‌ಗೆ ಖಚಿತವಾಗಿ ನಷ್ಟವನ್ನು ತುಂಬಲು ಒತ್ತಾಯ ಪಡಿಸುತ್ತಾನೆ) ಬ್ಯಾಕ್‍ಸ್ಪಿನ್-ತಿರುಗುವಿಕೆಯ ಆರಂಭಿಕ ಮೇಲೇರಿಸುವಿಕೆಯು, ಮೇಲೆ ಹಾರಿಸುವ ಎದುರಾಳಿಗಳಿಲ್ಲದೆ ಚೆಂಡನ್ನು ಒಬ್ಬ ಹೊಡೆದಾಗ ಅದು ಎಷ್ಟು ವೇಗದಲ್ಲಿ ಚಲಿಸುತ್ತದೆ ಎಂಬುದರ ಮೇಲೆ ತನ್ನ ಮಿತಿಯನ್ನು ಹೊಂದಿದೆ. ಬ್ಯಾಕ್‌ಸ್ಪಿನ್ ಎದುರಾಳಿಗೆ ಅತಿ ವೇಗವಾಗಿ ಚೆಂಡನ್ನು ಹೊಡೆಯಲು ಕಠಿಣವಾಗುವಂತೆ ಸಹ ಮಾಡಲಾಗಿದೆ. ಟೇಬಲ್-ಟೆನ್ನಿಸ್ ಬ್ಯಾಕ್‌ಸ್ಪಿನ್‌ ಅನ್ನು ರಕ್ಷಣಾತ್ಮಕ ಬದಲಾವಣೆಯಾಗಿ ಪರಿಗಣಿಸಲಾಗಿದೆ: ಇತಿಮಿತಿಯು ಸ್ಟ್ರೋಕ್ಸ್‌ ಅನ್ನು ಉತ್ಪತ್ತಿ ಮಾಡುವ ಸರಳತೆ ಮತ್ತು ಎದುರಾಳಿಯ ಧೈರ್ಯವಿರುವ ಚೆಂಡಿನ ವೇಗದಲ್ಲಿರುತ್ತದೆ, (ಇದು ಬ್ಯಾಕ್‌ಸ್ಪಿನ್ ಅನ್ನು ಆಕ್ರಮಣಕಾರಿಯಾಗಿ ಚೂರು ಮಾಡಲು ಸಾಧ್ಯವಾಗುತ್ತದೆ, ಆದರೆ ಸುಲಭವಾದ ಎತ್ತರದ ಚೆಂಡುಗಳು ಜಾಲಕ್ಕೆ ತೀವ್ರ ಸೆಣಸಾಟ ನೀಡುತ್ತವೆ)

ಟಾಪ್‌ಸ್ಪಿನ್‌ ಕರ್ವ್‌ನಲ್ಲಿಯ 4 ಹಂತಗಳು

ಟಾಪ್‌ಸ್ಪಿನ್: ಕಲಿಯಲು ಬಹಳ ಕಷ್ಟವಾದ ಟಾಪ್‌ಸ್ಪಿನ್ ಸ್ಟ್ರೋಕ್ಸ್ ಚೆಂಡು-ತಿರುಗುವಿಕೆಯ ಪ್ರಥಮ ಭಾಗದಲ್ಲಿ ಕಡಿಮೆ ಪ್ರಭಾವವನ್ನು ಹೊಂದಿದೆ, ಆದರೆ ಮ್ಯಾಗ್‌ನಸ್ ಪ್ರಭಾವ ವಿರುದ್ಧ ದಿಕ್ಕನ್ನು ಪ್ರವೇಶಿಸುವಂತೆ ಚೆಂಡನ್ನು ಕೆಳಕ್ಕೆ ಹೊಡೆಯಲು ಸ್ಪಷ್ಟವಾಗಿ ಒತ್ತಾಯಪಡಿಸುತ್ತದೆ. ಬೌನ್ಸ್‌ನಲ್ಲಿ ಟಾಪ್‌ಸ್ಪಿನ್‌ ಚೆಂಡಿನ ವೇಗವನ್ನು ಹೆಚ್ಚಿಸುವುದು. ಮತ್ತೆ ಅನೇಕ ನಿರ್ದಿಷ್ಟ ಬದಲಾವಣೆಯು ಎದುರಾಳಿಯು ಚೆಂಡನ್ನು ಹೊಡೆದಾಗ ಕಾಣಿಸುತ್ತದೆ (ಅವನ ದಾಂಡಿನಲ್ಲಿ ಸಾಮಾನ್ಯ ಗುಳ್ಳೆಗಳನ್ನು ಹೊಂದಿರುವ ರಬ್ಬರ್). ಟಾಪ್‌ಸ್ಪಿನ್ ಚೆಂಡನ್ನು ಮೇಲಕ್ಕೆ ನೆಗೆಯುವಂತೆ ಮಾಡುತ್ತದೆ ಮತ್ತು ಎದುರಾಳಿಯು ಟಾಪ್‌ಸ್ಪಿನ್‌ಗೆ ನಷ್ಟತುಂಬಲು ಒತ್ತಾಯ ಮಾಡುತ್ತಾನೆ. ಟಾಪ್‍ಸ್ಪಿನ್-ಚೆಂಡಿಗೆ ಎಷ್ಟು ವೇಗವನ್ನು ಕೊಡಲಾಗಿದೆ (ನಿಮ್ಮ ಸ್ವಂತ ಸಮಯ ಮತ್ತು ಬಲದ ಹೊರತಾಗಿರುತ್ತದೆ) ಎಂಬುದಕ್ಕೆ ವಾಸ್ತವವಾಗಿ ಮಿತಿ ಇಲ್ಲ. ವೇಗದ ಟಾಪ್‌ಸ್ಪಿನ್ ಸ್ಟ್ರೋಕ್‌ ಅನ್ನು ಎದುರಾಳಿಯು ಕಡಿಮೆ ಅವಧಿಯಲ್ಲಿ ಪ್ರತಿಕ್ರಿಯಿಸುವಂತೆ ನೀಡಲಾಗುತ್ತದೆ. ಟೇಬಲ್‌ ಟೆನ್ನಿಸ್‌ನಲ್ಲಿ ಟಾಪ್‌ಸ್ಪಿನ್ ದಾಳಿಯ ಬದಲಾವಣೆಯಾಗಿ ಪರಿಗಣಿಸಲ್ಪಟ್ಟಿದೆ : ವಾಸ್ತವಿಕ ಮಿತಿಗಳಿಲ್ಲದ ಚೆಂಡಿನ ವೇಗಗಳು ಸ್ಟ್ರೋಕ್ಸ್‌ ಅನ್ನು ಸೃಷ್ಟಿಸಲು ಅಧಿಕ ಕೌಶಲ್ಯದ ಅಗತ್ಯವಿದೆ ಮತ್ತು ಎದುರಾಳಿಯ ಮೇಲೆ ವ್ಯೂಹತಂತ್ರದ ಒತ್ತಡವನ್ನು ವೃದ್ಧಿಸುತ್ತದೆ. (ಟೇಬಲ್ಲಿನ ಹಿಂದಿನ ಅಂತರದಿಂದ ಟಾಪ್ ಸ್ಪಿನ್ ಸಮರ್ಥನೀಯ ಆಟವನ್ನು ಆಡಲು ಸಾಧ್ಯವಿದೆ, ಆದರೆ ಜಗತ್ತಿನ ಕ್ಲಾಸ್ ಆಟಗಾರರು ಮಾತ್ರ ಈ ರೀತಿಯ ಗ್ಯಾಲರಿ ಆಟವನ್ನು ಯಶಸ್ವಿಯಾಗಿ ಆಡುತ್ತಾರೆ)

ಸ್ಪರ್ಧೆ

[ಬದಲಾಯಿಸಿ]

ಏಷ್ಯಾ ಮತ್ತು ಯುರೋಪ್ ದೇಶಗಳಲ್ಲಿ ಸ್ಪರ್ಧಾತ್ಮಕ ಟೇಬಲ್ ಟೆನ್ನಿಸ್ ಆಟ ತುಂಬಾ ಹೆಸರುವಾಸಿಯಾಗಿದ್ದು, ಯುನೈಟೆಡ್ ಸ್ಟೇಟ್ಸ್‌ಗಳಲ್ಲಿ ಗಮನ ಸೆಳೆಯುತ್ತಿದೆ. ಬಹುಮುಖ್ಯ ಅಂತರರಾಷ್ಟ್ರೀಯ ಸ್ಪರ್ಧೆಗಳೆಂದರೆ ವರ್ಲ್ಡ್ ಕಪ್, ವರ್ಲ್ಡ್ ಛಾಂಪಿಯನ್ ಷಿಪ್, ಒಲಂಪಿಕ್ಸ್ ಮತ್ತು ಐಟಿಟಿಎಫ್ ಫ್ರೊ ಟೂರ್, ಹಾಗೆಯೇ ಕಾಂಟಿನೆಂಟಲ್ ಸ್ಪರ್ಧೆಗಳೆಂದರೆ ಯುರೋಪಿಯನ್ ಛಾಂಪಿಯನ್, ಯುರೋ ಟಾಪ್-12, ಏಷಿಯಾನ್ ಚಾಂಪಿಯನ್‌ ಶಿಫ್ ಮತ್ತು ಏಷಿಯನ್ ಗೇಮ್ಸ್. ಫ್ರಾನ್ಸ್, ಜರ್ಮನಿ, ಹಳೆಯ ಯುಗೊಸ್ಲೊವಿಯಾ, ಹಾಂಗ್ ಕಾಂಗ್, ಜಪಾನ್, ದಕ್ಷಿಣ ಕೊರಿಯಾ, ಸಿಂಗಾಪೂರ, ಸ್ವೀಡನ್ ಮತ್ತು ತೈವಾನ್ ಸೇರಿದಂತೆ ಪೂರ್ವ ಏಷಿಯಾ ಮತ್ತು ಯುರೋಪ್‌ಗಳಿಂದ ಪ್ರಬಲ ತಂಡಗಳು ಆಡಲು ಬರುತ್ತಿದ್ದ ಸಂದರ್ಭದಲ್ಲಿ ಚೀನಾ ವಿಶ್ವ ಬಿರುದುಗಳ ಮೇಲೆ ಅಧಿಕ ಪ್ರಭಾವ ಬೀರುವುದನ್ನು ಮುಂದುವರಿಸಿತ್ತು.

ಅವುಗಳು ಕ್ಲಬ್ಸ್‌ ಹಂತದಲ್ಲಿಯೂ ಸಹ ವೃತ್ತಿಪರ ಸ್ಪರ್ಧೆಗಳಾಗಿವೆ. ಚೀನಾ (ದ ಚೀನಾ ಟೇಬಲ್ ಟೆನ್ನಿಸ್ ಸೂಪರ್ ಲೀಗ್), ಜರ್ಮನಿ, ಫ್ರಾನ್ಸ್, ಬೆಲ್ಜಿಯಂ ಮತ್ತು ಆಸ್ಟ್ರೀಯಾದಂತಹ ರಾಷ್ಟ್ರೀಯ ಲೀಗ್‌ನ ದೇಶಗಳು ಉನ್ನತ ಮಟ್ಟದಲ್ಲಿನ ಕೆಲವು ಉದಾಹರಣೆಗಳಾಗಿವೆ. ಅವುಗಳು ಸಹ ಕೆಲವು ಪ್ರಮುಖ ಅಂತರರಾಷ್ಟ್ರೀಯ ಕ್ಲಬ್ ತಂಡಗಳ ಸ್ಪರ್ಧೆಗಳಾಗಿದ್ದವು, ಅವುಗಳೆಂದರೆ ಯುರೋಪಿಯನ್ ಚಾಂಪಿಯನ್ಸ್ ಲೀಗ್ ಮತ್ತು ಅದರ ಹಳೆಯ ಸ್ಪರ್ಧೆಯಾದ ಯುರೋಪಿಯನ್ ಕ್ಲಬ್ ಕಪ್. ಅದು ಯುರೋಪಿನ ವಿವಿಧ ದೇಶಗಳ ಸ್ಪರ್ಧೆಯಿಂದ ಉನ್ನತ ಕ್ಲಬ್ ತಂಡಗಳನ್ನು ಹೊಂದಿತ್ತು.

ಚೀನಿಯರ ಪ್ರಾಬಲ್ಯ

[ಬದಲಾಯಿಸಿ]

ಚೀನಿ ಆಟಗಾರರು 1959 ರಿಂದ 60%ರಷ್ಟು ಪುರುಷರ ವರ್ಲ್ಡ್ ಚಾಂಪಿಯನ್‌ಶಿಪ್ ಗಳಿಸುತ್ತಿದ್ದರು; ಮಹಿಳೆಯರ ಸ್ಪರ್ಧೆಯಲ್ಲಿ ಒಬ್ಬ ಚೀನಿ ಆಟಗಾರ್ತಿಯೂ ಎಲ್ಲವನ್ನು ಗಳಿಸಿದಳು, ಆದರೆ 1971ರಿಂದ ವರ್ಲ್ಡ್ ಚಾಂಪಿಯನ್ ಶಿಪ್‌ಗಳಲ್ಲಿ ಎರಡನ್ನು ಮಾತ್ರ ಗಳಿಸಿದ್ದಾರೆ.

ಗಮನಾರ್ಹ ಆಟಗಾರರು

[ಬದಲಾಯಿಸಿ]

ಅಂತರಾಷ್ಟ್ರೀಯ ಖ್ಯಾತಿಯನ್ನು ಗಳಿಸಲು ಗ್ಯ್ರಾಂಡ್‌ ಸ್ಲ್ಯಾಮ್‌‍ ಗಳಿಸಬೇಕಾಗುತ್ತದೆ.ITTF Museum webpage PDF (350 KB) ಯಾವ ಆಟಗಾರ ಓಲಂಪಿಕ್ ಸ್ಪರ್ಧೆಯಲ್ಲಿ ಬಂಗಾರದ ಪದಕ,ವರ್ಲ್ಡ್ ಚಾಂಪಿಯನ್ ಶಿಪ್ ಪ್ರಶಸ್ತಿ ಮತ್ತು ಟೇಬಲ್ ಟೆನಿಸ್ ವರ್ಲ್ಡ್ ಕಪ್‍ನ ಬಂಗಾರದ ಪದಕ ಗೆಲ್ಲುತ್ತಾರೋ ಅವರು ಗ್ರ್ಯಾಂಡ್ ಸ್ಲ್ಯಾಮ್ ಗಳಿಸುತ್ತಾರೆ.

ಅಡಳಿತ

[ಬದಲಾಯಿಸಿ]

ಅಂತರರಾಷ್ಟ್ರೀಯ ಟೇಬಲ್ ಟೆನ್ನಿಸ್ ಒಕ್ಕೂಟ (ಐಟಿಟಿಎಫ್) ಪ್ರತೀ ದೇಶದಲ್ಲಿ ನಡೆಯುವ ಸ್ಪರ್ಧೆಗೆ ರಾಷ್ಟ್ರೀಯ ಸಂಸ್ಥೆಗಳ ಜೊತೆ ಜಗತ್ತಿನಾದ್ಯಂತ ಆಡಳಿತ ನಡೆಸುವ ಸಂಸ್ಥೆ ಜವಾಬ್ದಾರಿಯಾಗಿರುತ್ತದೆ. ಇದು ಅನ್ವಯಿಸುವ ಇನ್ನೂ ಹಲವು ಸ್ಥಳೀಯ ಪ್ರಾಧಿಕಾರಗಳು ಇಂತಿವೆ:

  • ಯುರೋಪಿನಲ್ಲಿ ನಡೆಯುವ ಟೇಬಲ್ ಟೆನ್ನಿಸ್ ಸ್ಪರ್ಧೆ ಗೆ ಯುರೋಪಿಯನ್ ಟೇಬಲ್ ಟೆನ್ನಿಸ್ ಯೂನಿಯನ್ ಆಡಳಿತ ಸಂಸ್ಥೆ ಜವಾಬ್ದಾರಿಯಾಗುತ್ತದೆ.
  • ಇಂಗ್ಲೆಡ್ ನ ಟೇಬಲ್ ಟೆನ್ನಿಸ್ ಗೆ ಆಡಳಿತಾರೂಢ ಸಂಸ್ಥೆ ದಿ ಇಂಗ್ಲಿಷ್ ಟೇಬಲ್ ಟೆನ್ನಿಸ್ ಅಸ್ಸೋಸ್ಸಿಯೇಶನ್ ಜವಾಬ್ದಾರಿಯಾಗಿರುತ್ತದೆ.
  • ಐರ್ ಲ್ಯಾಂಡ್ ನ ಟೇಬಲ್ ಟೆನ್ನಿಸ್ ಗೆ ಆಡಳಿತಾರೂಢ ಸಂಸ್ಥೆ ದಿ ಐರಿಶ್ ಟೇಬಲ್ ಟೆನ್ನಿಸ್ ಅಸ್ಸೋಸ್ಸಿಯೇಶನ್ ಜವಾಬ್ದಾರಿಯಾಗಿರುತ್ತದೆ.
  • ಸ್ಕಾಟ್ ಲ್ಯಾಂಡ್ ನ ಟೇಬಲ್ ಟೆನ್ನಿಸ್ ಗೆ ಆಡಳಿತಾರೂಢ ಸಂಸ್ಥೆ ದಿ ಸ್ಕಾಟಿಶ್ ಟೇಬಲ್ ಟೆನ್ನಿಸ್ ಅಸ್ಸೋಸ್ಸಿಯೇಶನ್ ಜವಾಬ್ದಾರಿಯಾಗಿರುತ್ತದೆ.
  • ವೇಲ್ಸ್ ನ ಟೇಬಲ್ ಟೆನ್ನಿಸ್ ಗೆ ಆಡಳಿತಾರೂಢ ಸಂಸ್ಥೆ ದಿ ವೇಲ್ಸ್ ಟೇಬಲ್ ಟೆನ್ನಿಸ್ ಅಸ್ಸೋಸ್ಸಿಯೇಶನ್ ಜವಾಬ್ದಾರಿಯಾಗಿರುತ್ತದೆ.
  • ಕೆನಡಾದ ಟೇಬಲ್ ಟೆನ್ನಿಸ್ ಗೆ ಆಡಳಿತಾರೂಢ ಸಂಸ್ಥೆ ದಿ ಕೆನೆಡಿಯನ್ ಟೇಬಲ್ ಟೆನ್ನಿಸ್ ಅಸ್ಸೋಸ್ಸಿಯೇಶನ್ ಜವಾಬ್ದಾರಿಯಾಗಿರುತ್ತದೆ.
  • ಯುಎಸ್ ಎ ಟೇಬಲ್ ಟೆನ್ನಿಸ್(ಯುಎಸ್ ಎಟಿಟಿ): ರಾಷ್ಟ್ರೀಯ ಆಡಳಿತಾರೂಢ ಸಂಸ್ಥೆ ಯುನೈಟೆಡ್ ಸ್ಟೇಟ್ಸ್ ಟೇಬಲ್ ಟೆನ್ನಿಸ್ ನ ಜವಾಬ್ದಾರಿಯಾಗಿರುತ್ತದೆ.
  • ನ್ಯಾಷನಲ್ ಕಾಲೇಜಿಯೇಟ್ ಟೇಬಲ್ ಟೆನ್ನಿಸ್ ಅಸೋಸ್ಸಿಯೇಶನ್(ಎನ್ ಸಿಟಿಟಿಎ) : ಯುನೈಟೆಡ್ ಸ್ಟೇಟ್ಸ್ ನ ಕಾಲೇಜಿಯೇಟ್ ಟೇಬಲ್ ಟೆನ್ನಿಸ್‌‍ನ ಅಧಿಕೃತ ಆಢಳಿತಾರೂಢ ಸಂಸ್ಥೆ. ಇದು ಯು.ಎಸ್.ನ ಅಂತರ್ ಕಾಲೇಜು ಚಾಂಪಿಯನ್ ಶಿಪ್ ನಡೆಸಿಕೊಡುತ್ತದೆ.
  • ದಿ ಟೇಬಲ್ ಟೆನ್ನಿಸ್ ಫೆಡರೇಷನ್ ಆಫ್ ಇಂಡಿಯಾ(ಟಿಟಿ ಎಫ್ ಐ) ಇದು ಭಾರತದ ಟೇಬಲ್ ಟೆನ್ನಿಸ್ ನ ಆಢಳಿತಾರೂಢ ಸಂಸ್ಥೆ.
  • ಲಾನ್‌ ಟೆನಿಸ್‌ನಲ್ಲಿ ಓಲಂಪಿಕ್‌ ಮತ್ತು ವಿಂಬಲ್ಡನ್‌ ಚಾಂಪಿಯನ್‌ ಮತ್ತು ಇಂಗ್ಲಂಡ್‌ನ ರಾಷ್ಟ್ರೀಯ ಫುಟ್‌ಬಾಲ್‌ ತಂಡದ‌ ನಾಯಕರಾಗಿದ್ದ ಆಗಿದ್ದ ಬಹುಮುಖ ಪ್ರತಿಭೆಯ ಕ್ರೀಡಾಪಟು ಮ್ಯಾಕ್ಸ್‌ ವೂಸ್ನಾಮ್ ಒಮ್ಮೆ ನಟ ನಿರ್ದೇಶಕ ಚಾರ್ಲಿ ಚಾಪ್ಲಿನ್‌ ಅನ್ನು ರಾಕೇಟ್‌ನ ಬದಲು ಚಾಕುವನ್ನು ಬಳಸಿ ಆಟವಾಡುವ ಮೂಲಕ ಸೋಲಿಸಿದ್ದ.[]
  • ಟೇಬಲ್‌ ಟೆನಿಸ್ ಮೊಟ್ಟಮೊದಲ ವಿಡಿಯೋ ಗೇಮ್‌ ಪೊಂಗ್‌ ನಿರ್ಮಾಣಕ್ಕೆ ಸ್ಪೂರ್ತಿಯಾಗಿತ್ತು.
  • 1970ರ ಪ್ರಾರಂಭದಲ್ಲಿ ಪೀಪಲ್ಸ್‌ ರಿಪಬ್ಲಿಕ್‌ ಆಫ್ ಚೀನಾ(PRC) ಅಮೇರಿಕನ್‌ ಟೇಬಲ್‌ ಟೆನಿಸ್‌ ಆಟಗಾರರನ್ನು ಒಂದು ಪಂದ್ಯಾವಳಿಗಾಗಿ ಆಮಂತ್ರಿಸಿತ್ತು. ಇದು ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್‌ ನಡುವಿನ ಸಂಬಂಧ ಸುಧಾರಿಸಲು ಕಾರಣವಾಯಿತು. ಅಲ್ಲದೆ ಈ ಪಂದ್ಯಾವಳಿ ನಡೆದ ನಂತರ ಯು.ಎಸ್‌ನ ಅಧ್ಯಕ್ಷ ರಿಚರ್ಡ್‌ ನಿಕ್ಸನ್‌‍ ಕೂಡ ಚೀನಾಕ್ಕೆ ಭೇಟಿ ನೀಡಿದರು. ಆಗಿನ ಜನಪ್ರಿಯ ಮಾಧ್ಯಮವು ಈ ಭೇಟಿಯನ್ನು ಪಿಂಗ್‌ ಪಾಂಗ್‌ ಡಿಪ್ಲೊಮಸಿ ಎಂದು ಕರೆಯಿತು.
  • 1936ರಲ್ಲಿ ಪ್ರಾಗ್‌ನಲ್ಲಿ ನಡೆದ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ ಇಬ್ಬರು ರಕ್ಷಣಾತ್ಮಕಆಟಗಾರರು ಒಂದು ಅಂಕ ಗಳಿಸುವ ಸಲುವಾಗಿ ಸುಮಾರು ಒಂದಕ್ಕಿಂತ ಹೆಚ್ಚು ತಾಸು ಆಟ ಆಡಿದ್ದರು. ಇಡೀ ಪಂದ್ಯವು ಸುಮಾರು ನಾಲ್ಕು ತಾಸುಗಳನ್ನು ತೆಗೆದುಕೊಂಡಿತ್ತು.
  • ಮೂವತ್ತಕ್ಕಿಂತ ಹೆಚ್ಚು ಟೆಬಲ್ ಟೆನ್ನಿಸ್‌ ಕಂಪೆನಿಗಳು ಪ್ರಪಂಚದಾದ್ಯಂತ ಇದ್ದು, ಇವು ರಾಕೇಟ್‌ನಿಂದ ಹಿಡಿದು ವಾರ್ಮ್‌-ಅಪ್‌ ಸೂಟ್‌ಗಳವರೆಗೆಗಿನ ಎಲ್ಲ ಪರಿಕರಗಳನ್ನು ತಯಾರಿಸುತ್ತವೆ.
  • ಹವಾಯಿಯಲ್ಲಿನ ಒಬ್ಬರು ಮೂರು ಜನ ಆಟಗಾರರನ್ನು ಟೇಬಲ್‌ ಟೆನ್ನಿಸ್‌ ಆಟಕ್ಕೆ ಆಹ್ವಾನಿಸಿದ್ದನು ಇದನ್ನು ಟ್ರೈ-ಪಾಂಗ್‌ಎಂದು ಕರೆದನು.
  • ಟೇಬಲ್‌ ಟೆನ್ನಿಸ್‌ ಬೇರೆ ಬೇರೆ ಪ್ರಕಾರಗಳಲ್ಲಿ ವಿವಿಧ ರೀತಿಯ ಸ್ಪರ್ಧೆಗಳು ನಡೆಯುತ್ತವೆ: ಹಾರ್ಡ್ ಬ್ಯಾಟ್‌, ಇದರಲ್ಲಿ ಎಲ್ಲ ಸ್ಪರ್ಧಾಳುಗಳು ಸಣ್ಣ ರಬ್ಬರ್ ಹಿಡಿಕೆಯಿರುವ ಬ್ಯಾಟ್ ಅನ್ನು ಬಳಸುತ್ತಾರೆ(ಇದರಲ್ಲಿ ಯಾವುದೇ ರೀತಿಯ ಸ್ಪಾಂಜ್ ಬಳಕೆ ಮಾಡುವಂತಿಲ್ಲ); ಹಾಗೇಯೆ ವೇಗವನ್ನು ಕಡಿಮೆ ಮಾಡುವ ಸಲುವಾಗಿ "ದೊಡ್ಡ ಚೆಂಡ"ನ್ನು, ಅಂದರೆ 44mmನ ಚೆಂಡನ್ನು ಬಳಸುತ್ತಾರೆ.
  • ಹಾಸ್ಯಗಾರ ಜಾರ್ಜ್‌ ಕಾರ್ಲಿನ್‌ ಒಮ್ಮೆ ಎಲ್ಲ ರಾಕೇಟ್‌ ಕ್ರೀಡೆಗಳು ಪಿಂಗ್‌ ಪಾಂಗ್‌ನ ಉಪ ಆಟಗಳಾಗಿವೆ ಎಂದು ಹೇಳಿದ್ದಾರೆ. "ಉದಾಹರಣೆಗೆ ಟೆನ್ನಿಸ್‌ ಆಡುವ ಅಂಕಣವನ್ನು ಟೇಬಲ್‌ ಎಂದುಕೊಂಡರೆ, ಇದು ಟೇಬಲ್‌ ಮೇಲೆ ನಿಂತು ಆಡುವ ಪಿಂಗ್‌ ಪಾಂಗ್‌ ಆಟವಾಗಿದೆ. ಅಲ್ಲದೆ ವಾಲಿಬಾಲ್‌ ಇದು ರಾಕೇಟ್‌ ಇಲ್ಲದೇ ಆಡುವ ತಂಡದೊಂದಿಗಿನ ಆಟವಾಗಿದೆ. ಇಲ್ಲಿ ನೆಟ್‌ ಅನ್ನು ಎತ್ತರಕ್ಕೇರಿಸಲಾಗಿರುತ್ತದೆ, ಬಾಲ್‌ನ ಗಾತ್ರ ದೊಡ್ಡದು ಮಾಡಿ ಟೇಬಲ್‌ನ ಮೇಲೇ ನಿಂತು ಆಡುವ ಆಟವಾಗಿದೆ" ಎಂದು ಹೇಳುತ್ತಾರೆ.

ಟಿಪ್ಪಣಿಗಳು

[ಬದಲಾಯಿಸಿ]
  1. "Speed of ball article from the International Table Tennis Federation". Ittf.com. Archived from the original on 2009-07-09. Retrieved 2009-07-30.
  2. "Table tennis ball regulations at". Sizes.com. 2000-10-01. Archived from the original on 2009-08-14. Retrieved 2009-07-30.
  3. The Laws of Table Tennis PDF (28.0 KB) at the ITTF. Retrieved July 2007.
  4. "ಆರ್ಕೈವ್ ನಕಲು" (PDF). Archived from the original (PDF) on 2009-04-07. Retrieved 2010-02-11.
  5. Collins, Mick (2006). All-Round Genius: The Unknown Story of Britain's Greatest Sportsman. London: Aurum Press Limited. ISBN 1-84513-137-1.


ಇವನ್ನೂ ಗಮನಿಸಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]

ಗ್ರಂಥಸೂಚಿ

[ಬದಲಾಯಿಸಿ]
  • ಸಿಜ್ಲಿಂಗ್‌ ಚಾಪ್ಸ್‌ ಆ‍ಯ್‌‌‍೦ಡ್‌ ಡೆವಿಲಿಶ್‌ ಸ್ಪಿನ್ಸ್‌‍: ಪಿಂಗ್‌ ಪಾಂಗ್‌ ಆ‍ಯ್‌೦ಡ್‌ ದಿ ಆರ್ಟ್ ಆಫ್‌ ಸ್ಟೇಯಿಂಗ್‌ ಅಲೈವ್‌‍ - ಲೇಖಕ ಜೆರೋಮ್‌ ಚೆರೈನ್‌, ಪ್ರಕಾಶಕರು: ಫೋರ್‌ವಾಲ್ಸ್‌ ಏಟ್‌ ವಿಂಡೋಸ್‌ (ಸೆಪ್ಟೆಂಬರ್‌ 2002)ISBN 1-56858-242-0
  • ವಿನ್ನಿಂಗ್‌‍ ಟೇಬಲ್‌ ಟೆನ್ನಿಸ್‌:ಸ್ಕಿಲ್ಸ್‌‍, ಡ್ರಿಲ್ಸ್‌‍ ಆ‍ಯ್‌೦ಡ್‌‍ ಸ್ಟ್ರಾಟಜೀಸ್‌‍ ಬೈ ಡಾನ್‌ ಸೆಮಿಲ್ಲರ್‌‍, ಪ್ರಕಾಶಕರು: ಹ್ಯೂಮನ್‌ ಕೈನೆಟಿಕ್‌ ಪಬ್ಲಿಷರ್ಸ್‌‍(ಅಕ್ಟೋಬರ್‌ 1996) ISBN 0-88011-520-3
  • "Planet Ping Pong, A Time Shift TV documentary from BBC4 60mins 2006". Ittf.com. Archived from the original on 2009-09-08. Retrieved 2009-07-30.

ಹೊರಗಿನ ಕೊಂಡಿಗಳು

[ಬದಲಾಯಿಸಿ]