ಟೇಗಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಟೇಗಸ್ ನದಿ
Tajo, Tejo
River
none View of Tagus River in Toledo, Spain
View of Tagus River in Toledo, Spain
ದೇಶಗಳು ಸ್ಪೇನ್, ಪೋರ್ಚುಗಲ್
ಉಪನದಿಗಳು
 - ಎಡಬದಿಯಲ್ಲಿ Guadiela, Algodor, Gévalo, Ibor, Almonte, Salor, Sever, Sorraia
 - ಬಲಬದಿಯಲ್ಲಿ Gallo, Jarama, Guadarrama, Alberche, Tiétar, Alagón, Zêzere
ಮೂಲ Fuente de García
 - ಸ್ಥಳ Montes Universales, Sierra de Albarracín Comarca, Teruel, Aragon, Spain
 - ಸಮುದ್ರ ಮಟ್ಟದಿಂದ ಎತ್ತರ ೧,೫೯೩ m (೫,೨೨೬ ft)
ಸಾಗರಮುಖ Estuary of the Tagus
 - ಸ್ಥಳ Atlantic Ocean near Lisbon, Portugal
 - ಸಮುದ್ರ ಮಟ್ಟದಿಂದ ಎತ್ತರ ೦ m (೦ ft)
ಉದ್ದ ೧,೦೦೭ km (೬೨೬ mi)
ಜಲಾನಯನ ೮೦,೧೦೦ km² (೩೦,೯೨೭ sq mi)
ನೀರಿನ ಬಿಡುಗಡೆ
 - ಸರಾಸರಿ ೫೦೦ /s (೧೭,೬೫೭ cu ft/s)
Path of the Tagus through the Iberian Peninsula
Path of the Tagus through the Iberian Peninsula
Wikimedia Commons: Tagus
Website: Confederación Hidrográfica del Tajo
The Tagus near Vila Velha de Ródão, close to the Spanish border
Map of the Tagus river Basinಟೇಗಸ್ - ಸ್ಪೇನ್ ಮತ್ತು ಪೋರ್ಚುಗಲ್ಗಳಲ್ಲಿ ಹರಿಯುವ ನದಿ. ಐಬೀರಿಯನ್ ಪರ್ಯಾಯದ್ವೀಪದಲ್ಲಿ ಅತ್ಯಂತ ಉದ್ದವಾದ್ದು (625 ಮೈ. [1,006 ಕಿಮೀ.]).

ಉಗಮ[ಬದಲಾಯಿಸಿ]

ಪೂರ್ವ ಮಧ್ಯ ಸ್ಪೇನಿನಲ್ಲಿ, ಮೆಡಿಟರೇನಿಯನ್ ಸಮುದ್ರದಿಂದ 110 ಮೈ. (177 ಕಿಮೀ.) ದೂರದಲ್ಲಿ, ಮಡ್ರಿಡ್‍ನಿಂದ 80 ಮೈ. ಪೂರ್ವಕ್ಕೆ, ಉಗಮಿಸಿ, ಮಧ್ಯ ಸ್ಪೇನಿನಲ್ಲಿ ಪಶ್ಚಿಮಾಭಿಮುಖವಾಗಿ ಪೋರ್ಚುಗೀಸ್ ಗಡಿಯ ಬಳಿಗೆ ಹರಿದು, ಸ್ಪೇನ್ ಪೋರ್ಚುಗಲ್‍ಗಳ ಗಡಿಯ ಮೇಲೇಯೇ ಸು.25 ಮೈ. ಸಾಗಿ, ಅನಂತರ ನೈಋತ್ಯದ ಕಡೆಗೆ ತಿರುಗಿ ಮುಂದುವರಿದು ಲಿಸ್ಬನ್ ಬಳಿಯಲ್ಲಿ ಅಟ್ಲಾಂಟಿಕ್ ಸಾಗರವನ್ನು ಸೇರುತ್ತದೆ.

ಜಲಾಯನ ಪ್ರದೇಶ[ಬದಲಾಯಿಸಿ]

ಅದರ ಜಲಾಯನ ಪ್ರದೇಶದ ವಿಸ್ತೀರ್ಣ 31,159 ಚ.ಮೈ. (80,701) ಚ.ಕಿಮೀ.).

ಉಪನದಿಗಳು[ಬದಲಾಯಿಸಿ]

ಇದರ ಮುಖ್ಯ ಉಪನದಿಗಳೆಲ್ಲ ಉತ್ತರದಿಂದ ಬಂದು ಸೇರುತ್ತವೆ. ಪರ್ವತಗಳಿಂದ ಇಳಿದು ಬರುವ ಇವುಗಳಿಂದ ಟೇಗಸ್ ನದಿಯಲ್ಲಿ ಪದೇಪದೇ ಅತಿಯಾದ ಪ್ರವಾಹ ಸಂಭವಿಸುತ್ತದೆ. ಟೇಗಸ್ ನದಿಯ ಮೇಲ್ದಂಡೆಯಲ್ಲಿ. ಅದನ್ನು ಸೇರುವ ಅತ್ಯಂತ ದೊಡ್ಡ ಉಪನದಿ ಹರಾಮ. ಸ್ಪೇನ್-ಪೋರ್ಚುಗಲ್ ಬಳಿ ಉತ್ತರ ದಂಡೆಯಲ್ಲಿ ಅದನ್ನು ಸೇರುವ ಉಪನದಿ ಆಲಗಾನ್ ಕಾನ್‍ಸ್ಟಾನ್ಷಿಯದ ಬಳಿ ಸಂಗಮಿಸುವ ಜೆಜರ ಇದರ ಅತ್ಯಂತ ದೊಡ್ಡ ಉಪನದಿ. ಪ್ರವಾಹಕಾಲದಲ್ಲಿ ಟೇಗಸ್ ನದಿ ಅಗಾಧ ಜಲರಾಶಿಯಿಂದ ಕೂಡಿರುತ್ತದೆ. 1876 ರ ಡಿಸೆಂಬರಿನಲ್ಲಿ ಇದರಲ್ಲಿ ಸೆಕಂಡಿಗೆ 15,850 ಘ.ಮೀ. ನೀರು ಹರಿಯುತ್ತಿತ್ತು. ಯೂರೋಪಿನ ನದಿಗಳಲ್ಲಿ ಯಾವುದರಲ್ಲೂ ಎಂದೂ ಇಷ್ಟೊಂದು ಎಂದೂ ಹರಿವು ಇಲ್ಲದ್ದು ಇದರ ವಿಕ್ರಮ.

ಆಣೆಕಟ್ಟುಗಳು[ಬದಲಾಯಿಸಿ]

ಸ್ಪೇನಿನಲ್ಲಿ ಟೇಗಸ್ ನದಿಗೆ ಒಂದು ಕಟ್ಟೆಯನ್ನೂ ಅದರ ಉಪನದಿಗಳಿಗೆ 19 ಕಟ್ಟೆಗಳನ್ನೂ ಕಟ್ಟಲಾಗಿದೆ. ಇವುಗಳಿಂದ ಉತ್ಪತ್ತಿಯಾಗುವ ವಿದ್ಯುಚ್ಛಕ್ತಿ 59,16,00,000 ಕಿವಾಗಂ. ಗ್ವಾಡೀಲ ನದಿಗೆ ಕಟ್ಟಲಾದ ಕಟ್ಟೆಯೊಂದರಲ್ಲೆ ಇದರಲ್ಲಿ ಅರ್ಧದಷ್ಟು ಉತ್ಪತಿಯಾಗುತ್ತದೆ. ಈ ಕಟ್ಟೆಗಳಿಂದ 7,00,000 ಎಕರೆಗಳಿಗೆ (28,000 ಹೆಕ್ಟೇರ್) ನೀರಾವರಿ ಸೌಲಭ್ಯ ಒದಗಿದೆ. ಅಂತಿಮವಾಗಿ ಈ ವ್ಯವಸ್ಥೆಗೆ ಒಳಪಡುವ ಜಮೀನು 7,00,000 ಎಕರೆ. ನದಿಯ ಮೇಲೆ ಪಶ್ಚಿಮ ಮಧ್ಯ ಪೋರ್ಚುಗಲ್ಲಿನಲ್ಲಿರುವ ಸ್ಯಾಂತರೆಮ್ ಪಟ್ಟಣದ ವರೆಗೂ ನೌಕಸಾರಿಗೆ ಸಾಧ್ಯ. ನದಿಯ ಪ್ರವಾಹ ಅನುಕೂಲವಾಗಿರುವಾಗ ವಿಲಾ ವೆಲ್ಹಾ ಡೇ ರೊಡಾವೋ ವರೆಗೊ ಸಣ್ಣ ದೋಣಿಗಳು ಹೋಗಿ ಬರಬಹುದು. ಲಿಸ್ಬನ್ ಬಳಿ ನದಿಯ ಅಳಿವೆ 3 ಮೈ. ಅಗಲವಾಗಿದೆ.

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಟೇಗಸ್&oldid=740101" ಇಂದ ಪಡೆಯಲ್ಪಟ್ಟಿದೆ