ವಿಷಯಕ್ಕೆ ಹೋಗು

ಟೇಕ್ವಾಂಡೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Taekwondo
A WTF taekwondo sparring match
ಹೀಗೂ ಕರೆಯಲ್ಪಡುತ್ತದೆTaekwon-Do, Tae Kwon-Do, Tae Kwon Do
ಗಮನStriking (Kicking)
ಮೂಲ ದೇಶ ದಕ್ಷಿಣ ಕೊರಿಯಾ
ಒಲಂಪಿಕ್ ಆಟಗಳುSince 2000 (WTF regulations)
ಟೇಕ್ವಾಂಡೋ
Hangul태권도
Hanja跆拳道
Revised RomanizationTaegwondo
McCune–ReischauerT'aekwŏndo
This article contains Korean text. Without proper rendering support, you may see question marks, boxes, or other symbols instead of Hangul and hanja.

ಟೇಕ್ವಾಂಡೋ (태권도; 跆拳道; Korean pronunciation: [tʰɛkwʌndo])[a] ಎಂಬುದು ಕೊರಿಯಾಕದನ/ಸಮರ ಕಲೆ ಹಾಗೂ ದಕ್ಷಿಣ ಕೊರಿಯಾರಾಷ್ಟ್ರೀಯ ಕ್ರೀಡೆಯಾಗಿದೆ. ಕೊರಿಯನ್‌ ಭಾಷೆಯಲ್ಲಿ, ಟೇ (태, ) ಎಂದರೆ "ಹೊಡೆಯುವಿಕೆ ಅಥವಾ ಕಾಲಿನಿಂದ ಒದ್ದು ಮುರಿಯುವಿಕೆ"; ಕ್ವಾನ್‌ (권, ) ಎಂದರೆ "ಹೊಡೆಯುವಿಕೆ ಅಥವಾ ಮುಷ್ಠಿಯಿಂದ ಗುದ್ದಿ ಮುರಿಯುವಿಕೆ"; ಹಾಗೂ ಡೋ (도, ) ಎಂದರೆ "ಕ್ರಮ," "ವಿಧಾನ," ಅಥವಾ "ಕಲೆ" ಎಂದು ಅರ್ಥ. ಆದ್ದರಿಂದ, ಟೇಕ್ವಾಂಡೋ ವನ್ನು "ಕಾಲು ಹಾಗೂ ಮುಷ್ಠಿಗಳನ್ನು ಬಳಸುವ ಕ್ರಮ " ಅಥವಾ "ಒದೆಯುವಿಕೆ ಹಾಗೂ ಗುದ್ದುವಿಕೆಯ ಕ್ರಮ" ಎಂದು ಸಾಧಾರಣ ಭಾಷಾಂತರಿಸಬಹುದು."

ಟೇಕ್ವಾಂಡೋ ಅಭ್ಯಾಸಿ/ವೃತ್ತಿಪರರ ಸಂಖ್ಯೆಯ ದೃಷ್ಠಿಯಿಂದ ವಿಶ್ವದ ಅತ್ಯಂತ ಜನಪ್ರಿಯ ಕದನ/ಸಮರ ಕಲೆಯಾಗಿದೆ.[೧] ಇದರ ಜನಪ್ರಿಯತೆಯಿಂದಾಗಿ ವೈವಿಧ್ಯಮಯ ಅಭಿವೃದ್ಧಿಗಳನ್ನು ಹೊಂದಿ ಕದನ/ಸಮರ ಕಲೆಯು ವಿವಿಧ ಕ್ಷೇತ್ರಗಳಾಗಿ ಬೆಳವಣಿಗೆ ಹೊಂದಲು ಕಾರಣವಾಗಿದೆ : ಇತರ ಇನ್ನೂ ಅನೇಕ ಕಲೆಗಳ ಹಾಗೆ, ಇದೂ ಕೂಡ ಹೋರಾಟ ತಂತ್ರಗಳನ್ನು, ಸ್ವರಕ್ಷಣೆ, ಕ್ರೀಡೆ, ಕಸರತ್ತು, ಧ್ಯಾನ ಹಾಗೂ ಸಿದ್ಧಾಂತಗಳನ್ನು ಒಳಗೊಂಡಿದೆ. ದಕ್ಷಿಣ ಕೊರಿಯಾದ ಸೇನೆಯು ತನ್ನ ತರಬೇತಿಯ ಭಾಗವಾಗಿ ಟೇಕ್ವಾಂಡೋವನ್ನು ಅಳವಡಿಸಿಕೊಂಡಿದೆ.[೨] ಗಿಯೋರುಗಿ (pronounced [ɡjʌɾuɡi]), ಎಂಬುದು ಒಂದು ವಿಧದ ಮುಷ್ಠಿಯುದ್ಧ ವರಸೆಯಾಗಿದ್ದು, 2000ನೇ ಇಸವಿಯಿಂದ ಇದೊಂದು ಒಲಿಂಪಿಕ್‌ ಆಟವಿಶೇಷವಾಗಿದೆ.

ರೂಢಿಗತವಾಗಿ ಟೇಕ್ವಾಂಡೋನ ಎರಡು ಪ್ರಧಾನ ಶೈಲಿಗಳಿವೆ. ಒಂದು ಶೈಲಿಯು ಸಿಹಾಪ್‌ ಗಿಯೋರುಗಿ ಎಂಬ ಮುಷ್ಠಿಯುದ್ಧ ವರಸೆಯ ವ್ಯವಸ್ಥೆಯ ಮೂಲವಾದ ಕುಕ್ಕಿವಾನ್‌ನಿಂದ ಬಂದಿದ್ದು, ವರ್ಲ್ಡ್‌ ಟೇಕ್ವಾಂಡೋ ಫೆಡರೇಷನ್‌ (WTF)ನಿಂದ ನಿರ್ವಹಿಸಲ್ಪಡುತ್ತಿದ್ದು ಪ್ರಸ್ತುತ ಬೇಸಿಗೆಯ ಒಲಿಂಪಿಕ್‌ ಪಂದ್ಯಗಳಲ್ಲಿನ ಒಂದು ಆಟವಿಶೇಷವಾಗಿದೆ. ಮತ್ತೊಂದು ಶೈಲಿಯು ಇಂಟರ್‌ನ್ಯಾಷನಲ್‌ ಟೇಕ್ವಾನ್‌-ಡೋ ಫೆಡರೇಷನ್‌ (ITF)ನ ಮೂಲದ್ದಾಗಿದೆ.[೩]

ವಿವಿಧ ಟೇಕ್ವಾಂಡೋ ಸಂಸ್ಥೆಗಳಿಂದ ಪ್ರತ್ಯೇಕವಾಗಿ, ಟೇಕ್ವಾಂಡೋ ಬೆಳವಣಿಗೆ/ಅಭಿವೃದ್ಧಿಯಲ್ಲಿ ಎರಡು ಪ್ರಧಾನ ಶಾಖೆಗಳಿವೆ : ಅವುಗಳೆಂದರೆ ಸಾಂಪ್ರದಾಯಿಕ ಹಾಗೂ ಕ್ರೀಡೆ. "ಸಾಂಪ್ರದಾಯಿಕ ಟೇಕ್ವಾಂಡೋ" ಎಂಬ ಪದವನ್ನು ಸಾಧಾರಣವಾಗಿ 1950ರ ದಶಕ ಹಾಗೂ 1960ರ ದಶಕಗಳಲ್ಲಿ ದಕ್ಷಿಣ ಕೊರಿಯಾದ ಸೇನಾಪಡೆಗಳು ಸ್ಥಾಪಿಸಿದ ಕದನ/ಸಮರ ಕಲೆಗೆ ಅವರು ಅದನ್ನು ಬಳಸಿದ್ದ ರೀತಿಗೆ ಅನುಗುಣವಾಗಿ ನೀಡಲಾಗುತ್ತದೆ; ನಿರ್ದಿಷ್ಟವಾಗಿ ಸಾಂಪ್ರದಾಯಿಕ ನಮೂನೆಗಳು/ಮಾದರಿಗಳ ಹೆಸರುಗಳು ಹಾಗೂ ಸಂಕೇತಗಳು ಅನೇಕವೇಳೆ ಕೊರಿಯಾದ ಇತಿಹಾಸದ ಅನೇಕ ಅಂಶಗಳ ಮೇಲೆ ಆಧಾರಿತವಾಗಿವೆ. ಟೇಕ್ವಾಂಡೋ ಕ್ರೀಡೆಯು ಆಗಿನಿಂದ ದಶಕಗಳ ಅವಧಿಯಲ್ಲಿ ವಿಕಸನ ಹೊಂದುತ್ತಾ ಬಂದು ತಕ್ಕ ಮಟ್ಟಿಗೆ ಬೇರೆಯೇ ಆದ ಕೇಂದ್ರಬಿಂದುವನ್ನು ಹೊಂದಿದೆ, ಅದರಲ್ಲೂ ವಿಶೇಷವಾಗಿ ವೇಗ ಹಾಗೂ ಸ್ಪರ್ಧಾನೈಪುಣ್ಯತೆಗಳಿಗೆ ನೀಡುವ ಪ್ರಾಧಾನ್ಯತೆ ಗಮನಾರ್ಹ (ಒಲಿಂಪಿಕ್‌ ಮುಷ್ಠಿಯುದ್ಧ ವರಸೆಯಂತೆ), ಆದರೆ ಸಾಂಪ್ರದಾಯಿಕ ಟೇಕ್ವಾಂಡೋ ಶಕ್ತಿ ಹಾಗೂ ಸ್ವರಕ್ಷಣೆಗೆ ಹೆಚ್ಚು ಪ್ರಾಧಾನ್ಯತೆ ನೀಡುತ್ತದೆ. ಈ ಎರಡೂ ಶಾಖೆಗಳು ಪರಸ್ಪರ ವಿಪರೀತ ಏಕಮಾತ್ರ ವೈಶಿಷ್ಟ್ಯತೆಯನ್ನು ಹೊಂದಿಲ್ಲ ಹಾಗೂ ಎರಡರ ನಡುವಿನ ಪ್ರತ್ಯೇಕತೆಗಳು ಅನೇಕವೇಳೆ ಅಸ್ಪಷ್ಟವಾಗಿರುತ್ತವೆ.

ಈ ಎರಡೂ ಪ್ರಧಾನ ಶೈಲಿಗಳ ನಡುವೆ ಹಾಗೂ ವಿವಿಧ ಸಂಸ್ಥೆಗಳ ನಡುವೆ ಸೈದ್ಧಾಂತಿಕ ಹಾಗೂ ತಾಂತ್ರಿಕ ಭಿನ್ನತೆಗಳಿದ್ದಾಗ್ಯೂ, ಇದರಲ್ಲಿನ ಕಲಾತ್ಮಕತೆಯು ಪ್ರಧಾನವಾಗಿ ಚಂಚಲ/ಸಂಚಾರಿ ನಿಲುವಿನಿಂದ ಕಾಲಿನ ಹರವಿನ ಹಾಗೂ ಶಕ್ತಿಯ ಪರಾಕಾಷ್ಠೆಯಲ್ಲಿ (ತೋಳಿಗೆ ಹೋಲಿಸಿದಂತೆ) ನೀಡಲಾಗುವ ಹೊಡೆತಗಳು/ಒದೆತಗಳಲ್ಲಿದೆ. ವಿವಿಧ ಶೈಲಿಗಳ ನಡುವಿನ ಗರಿಷ್ಠತಮ ವ್ಯತ್ಯಾಸ ಅಥವಾ ಕನಿಷ್ಠ ಮಟ್ಟಿಗೆ ಅತ್ಯಂತ ಸುಸ್ಪಷ್ಟವಾದಂತಹವನ್ನು ಸಾಧಾರಣವಾಗಿ ಕ್ರೀಡೆಗಳು ಹಾಗೂ ಸ್ಪರ್ಧೆಗಳಲ್ಲಿನ ಶೈಲಿಗಳು ಹಾಗೂ ನಿಯಮಗಳ ನಡುವಿನ ವ್ಯತ್ಯಾಸವೆಂದು ಪರಿಗಣಿಸಲಾಗುತ್ತದೆ. ಟೇಕ್ವಾಂಡೋ ತರಬೇತಿಯು ಸಾಮಾನ್ಯವಾಗಿ ಪಟ್ಟುಗಳು/ಬ್ಲಾಕ್‌ಗಳು, ಒದೆತಗಳು, ಗುದ್ದುವಿಕೆಗಳು, ಹಾಗೂ ಮುಕ್ತ ಹಸ್ತದ ಹೊಡೆತಗಳ ವ್ಯವಸ್ಥೆ ಹಾಗೂ ವಿವಿಧ ಟೇಕ್‌ಡೌನ್‌ಗಳು ಅಥವಾ ಬೀಸುಗಳು, ಎಸೆತ/ಒಗೆತಗಳು ಹಾಗೂ ಜಾಯಿಂಟ್‌ಲಾಕ್‌ಗಳನ್ನೂ ಒಳಗೊಂಡಿರುತ್ತದೆ. ಕೆಲ ಟೇಕ್ವಾಂಡೋ ತರಬೇತಿದಾರರು ಜಿಯಾಪ್ಸುಲ್ ‌ ಎಂದು ಹೆಸರಾದ ಒತ್ತಡ ಪ್ರದೇಶಗಳ ಬಳಕೆಯನ್ನು ಹಾಗೂ ಹಾಪ್ಕಿಡೊ ಹಾಗೂ ಜೂಡೋಗಳಂತಹಾ ಇತರೆ ಕದನ/ಸಮರ ಕಲೆಗಳಿಂದ ಸ್ವಯಂರಕ್ಷಣೆಯ ತಂತ್ರಗಳನ್ನು ಪಡೆದು ಸಂಘಟಿಸಿ ಅಳವಡಿಸಿಕೊಳ್ಳುತ್ತಾರೆ.

ಇತಿಹಾಸ[ಬದಲಾಯಿಸಿ]

ಟೇಕ್ವಾಂಡೋನ ಇತಿಹಾಸವು ಒಂದು ಚರ್ಚಾಸ್ಪದ ವಿಷಯವಾಗಿದೆ. ಮಾಹಿತಿಯ ಮೂಲಕ್ಕೆ ಅನುಗುಣವಾಗಿ ಗಮನಾರ್ಹವಾಗಿ ಬದಲಾದ ಅಭಿಪ್ರಾಯವನ್ನು/ನೋಟವನ್ನು ಹೊಂದಬಹುದು. ಕುಕ್ಕಿವಾನ್‌ನಂತಹಾ ದಕ್ಷಿಣ ಕೊರಿಯಾದ ಟೇಕ್ವಾಂಡೋ ಸಂಘಟನಾ ಸಂಸ್ಥೆಗಳು ಅಧಿಕೃತವಾಗಿ ಟೇಕ್ವಾಂಡೋ ಕೊರಿಯಾದ ಪ್ರಾಚೀನ ಕದನ/ಸಮರ ಕಲೆಗಳಿಂದ ವ್ಯುತ್ಪನ್ನವಾಗಿದೆ ಎಂದು ಹೇಳುತ್ತವೆ.[೪][೫][೬][೭][೮][೯] ಇತರೆ ಸಂಸ್ಥೆಗಳು ಟೇಕ್ವಾಂಡೋ ಕೊರಿಯಾದ ಸ್ಥಳೀಯ ಕದನ/ಸಮರ ಕಲೆಗಳಿಂದ ವ್ಯುತ್ಪನ್ನಗೊಂಡು ನೆರೆಹೊರೆಯ ರಾಷ್ಟ್ರಗಳ ಪ್ರಭಾವಕ್ಕೊಳಗಾಗಿದೆ [೧೦][೧೧][೧೨][೧೩][೧೪] ಅಥವಾ ಅದು ಜಪಾನೀಯರ ಆಕ್ರಮಣದ ಸಮಯದಲ್ಲಿ ಭಾಗಶಃ ಕರಾಟೆಯಿಂದ ಪ್ರಭಾವಿತವಾಗಿದೆ ಎಂದು ಹೇಳಿಕೆ ನೀಡಿವೆ.[೧೫][೧೬][೧೭]

ಕೊರಿಯಾದ ಅತಿ ಹಳೆಯದಾದ ಕದನ/ಸಮರ ಕಲೆ ಕೊರಿಯಾದ ಮೂರು ಶತೃ ಸಾಮ್ರಾಜ್ಯಗಳಾದ ಗೋಗುರ್ಯೋ, ಸಿಲ್ಲಾ ಹಾಗೂ ಬೇಕ್‌ಜೇ,[೧೮] ಗಳು ಅಭಿವೃದ್ಧಿಪಡಿಸಿದ ಶಸ್ತ್ರರಹಿತ ಹೋರಾಟಶೈಲಿಗಳ ಮಿಶ್ರಣವಾಗಿದ್ದು ಅದರಲ್ಲಿ ಸಾಮರ್ಥ್ಯ, ವೇಗ ಹಾಗೂ ಅಸ್ತಿತ್ವ ಉಳಿಸಿಕೊಳ್ಳುವ ಕುಶಲತೆ ಪಡೆಯಲು ಶಸ್ತ್ರರಹಿತ ಹೋರಾಟದ ತಂತ್ರಗಳನ್ನು ಯುವಕರಿಗೆ ತರಬೇತಿ ಕೊಡಲಾಗುತ್ತಿತ್ತು. ಈ ತಂತ್ರಗಳಲ್ಲೇ ಅತ್ಯಂತ ಜನಪ್ರಿಯವಾದುದೆಂದರೆ ಸುಬಾಕ್ ‌ ಹಾಗೂ, ಸುಬಾಕ್ ‌ನ ಭಾಗಗಳಲ್ಲೇ ಅತ್ಯಂತ ಜನಪ್ರಿಯವಾದ ಭಾಗ ಟೇಕ್ಕೆಯಾನ್ ‌ ಆಗಿದೆ. ಆ ಯುವಕರಲ್ಲಿ ದೃಢಸಹಜ ಯೋಗ್ಯತೆ/ಸಾಮರ್ಥ್ಯಗಳುಳ್ಳವರನ್ನು ಹ್ವಾರಂಗ್‌ ಎಂಬ ಹೆಸರಿನ ನವೀನ ವಿಶೇಷ ಯೋಧ ದೈಹಿಕಕ್ಷಮತಾ ತರಬೇತಿಗೆ ಆಯ್ಕೆ ಮಾಡಲಾಗುತ್ತಿತ್ತು. ಉದಾರ ಶಾಸ್ತ್ರಗಳಲ್ಲಿ ಪ್ರತಿಭೆ ಹೊಂದಿರುವ ಯುವಕರು ಸಶಕ್ತ ಯೋಧರಾಗುವ ಅರ್ಹತೆಯನ್ನು ಹೊಂದಿರುತ್ತಾರೆ ಎಂಬುದು ಆಗಿನ ಅನಿಸಿಕೆಯಾಗಿತ್ತು. ಈ ಯೋಧರುಗಳಿಗೆ ಶೈಕ್ಷಣಿಕ ವಿಚಾರಗಳಲ್ಲದೇ ಕದನ/ಸಮರ ಕಲೆಗಳು, ತತ್ವಶಾಸ್ತ್ರದ ಅಧ್ಯಯನ, ಇತಿಹಾಸ, ನೀತಿಸಂಹಿತೆಗಳನ್ನು ಹಾಗೂ ಕುದುರೆಸವಾರಿಯ ಕ್ರೀಡೆಗಳಲ್ಲಿ ತರಬೇತಿ ನೀಡಲಾಗುತ್ತದೆ. ಅವರ ಸೇನಾ ತರಬೇತಿಯಲ್ಲಿ ಅಶ್ವಾರೋಹಿತರಾಗಿ ಹಾಗೂ ನೆಲದ ಮೇಲೆ ನಡೆಸುವ ಕತ್ತಿವರಸೆ ಹಾಗೂ ಬಿಲ್ಲುಗಾರಿಕೆಗಳು ಸೇರಿದಂತಹಾ ವ್ಯಾಪಕ ಆಯುಧಬಳಕೆಯ ಕಾರ್ಯಾಗಾರಗಳ ಜೊತೆಗೆ ಸೇನಾ ಕಾರ್ಯಾಚರಣೆಗಳಲ್ಲಿನ ಚಾಕಚಕ್ಯತೆಗಳ ಬಗ್ಗೆ ಹಾಗೂ ಸುಬಾಕ್ ‌ನ ಮೂಲಕ ಆಯುಧರಹಿತ ಹೋರಾಟದ ಪ್ರಶಿಕ್ಷಣಗಳೂ ಸೇರಿದ್ದವು. ಗೋಗುರ್ಯೋದಲ್ಲಿ ಸುಬಾಕ್ ‌ ಕಾಲನ್ನು ಪ್ರಮುಖವಾಗಿ ಬಳಸುವುದಾದರೂ, ಸಿಲ್ಲಾ'ದ ಪ್ರಭಾವವು ಕೆಲವು ಹಸ್ತ ತಂತ್ರಗಳನ್ನೂ ಕೂಡಾ ಸುಬಾಕ್‌ ನ ಬಳಕೆಗೆ ಸೇರಿಸಿದೆ.[ಸೂಕ್ತ ಉಲ್ಲೇಖನ ಬೇಕು]

ಈ ಅವಧಿಯಲ್ಲಿ ಕೆಲವು ಆಯ್ದ ಸಿಲ್ಲಾ ಯೋಧರಿಗೆ ಕೋಗುರ್ಯೋದ ಪ್ರಾಚೀನ ನಿಪುಣಬೋಧಕರು ಟೇಕ್ಕೆಯಾನ್ ‌ನಲ್ಲಿ ತರಬೇತಿ ನೀಡಿದರು. ನಂತರ ಈ ಯೋಧರುಗಳು ಹ್ವಾರಂಗ್‌ ಎಂಬ ಹೆಸರಿನಿಂದ ಕರೆಯಲ್ಪಟ್ಟರು. ಹ್ವಾರಂಗ್‌ ಯೋಧರು ಸಿಲ್ಲಾ ರಾಜಸನ್ನದು ಹೊಂದಿರುವ ವಂಶೀಯರ ಪುತ್ರರಿಗೆಂದು "ಮಾನವತೆ/ಪುರುಷತ್ವ ವಿಕಸಿಸುವ ವಿಧಾನ" ಎಂಬರ್ಥ ಬರುವ ಹ್ವಾರಂಗ್‌ -ಡೋ ಎಂಬ ಹೆಸರಿನ ಸೇನಾ ಶಿಕ್ಷಣಸಂಸ್ಥೆಯೊಂದನ್ನು ಸ್ಥಾಪಿಸಿದರು. ಹ್ವಾರಂಗ್‌ ವಿದ್ಯಾರ್ಥಿಗಳು ಟೇಕ್ಕೆಯಾನ್‌ , ಇತಿಹಾಸ, ಕನ್‌ಫ್ಯೂಷಿಯಸ್‌ ತತ್ವಶಾಸ್ತ್ರ, ನೀತಿಶಾಸ್ತ್ರ, ಬೌದ್ಧ ಶಿಷ್ಟಾಚಾರ/ನೈತಿಕತೆ, ಸಾಮಾಜಿಕ ಕೌಶಲ್ಯಗಳು ಹಾಗೂ ಸೇನಾಕಾರ್ಯಾಚರಣೆಯ ಚಾಚಕ್ಯತೆಗಳನ್ನು ಅಭ್ಯಸಿಸುತ್ತಿದ್ದರು. ಹ್ವಾರಂಗ್‌ ಯೋಧರ ಮಾರ್ಗದರ್ಶಿ ಮೂಲಭೂತ ತತ್ವಗಳು ವಾನ್‌ ಗ್ವಾಂಗ್‌'ರ ನಿಷ್ಠೆ, ಪೋಷಕರ ಬಾಧ್ಯತೆ/ಸಂತತೀಯ ಬಾಧ್ಯತೆ, ನಂಬಲರ್ಹವಾಗಿರುವಿಕೆ, ಶೌರ್ಯ ಹಾಗೂ ನ್ಯಾಯಬದ್ಧತೆಗಳು ಸೇರಿದಂತಹಾ ಮಾನವ ನಡತೆಗೆ ಸಂಬಂಧಿಸಿದ ಐದು ನೀತಿಸಂಹಿತೆಗಳ ಮೇಲೆ ಆಧಾರಿತವಾಗಿತ್ತು. ಹ್ವಾರಂಗ್‌ ಯೋಧರು ಇಡೀ ಪರ್ಯಾಯದ್ವೀಪದುದ್ದಕ್ಕೂ ಇತರೆ ಪ್ರದೇಶಗಳು ಹಾಗೂ ಅಲ್ಲಿನ ಜನರ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ ಸಂಚರಿಸಿದ್ದರಿಂದ ಟೇಕ್ಕೆಯಾನ್‌ ಕೊರಿಯಾದಾದ್ಯಂತ ಹರಡಿತು.[ಸೂಕ್ತ ಉಲ್ಲೇಖನ ಬೇಕು]

ಪ್ರಾಚೀನ ಹಾಗೂ ಸಾಂಪ್ರದಾಯಿಕ ಕದನ/ಸಮರ ಕಲೆಗಳ ಕೊರಿಯಾ'ದ ಶ್ರೀಮಂತ ಇತಿಹಾಸ ಇದ್ದಾಗ್ಯೂ, ಕೊರಿಯಾದ ಕದನ/ಸಮರ ಕಲೆಗಳು ಜೋಸೆಯನ್‌ ರಾಜವಂಶದ ಆಳ್ವಿಕೆಯ ಕಾಲದಲ್ಲಿ ಮಸುಕಾಗಿ ತೆರೆಮರೆಗೆ ಸರಿದವು. ಕೊರಿಯನ್‌ ಕನ್‌ಫ್ಯೂಷಿಯಸ್‌ ತತ್ವದ ಪಾಲನೆಯಡಿ ಕೊರಿಯಾದ ಸಮಾಜವು ಬಹುವಾಗಿ ಕೇಂದ್ರೀಕರಿಸಲ್ಪಟ್ಟಿತಲ್ಲದೇ ವಿದ್ವಾಂಸ-ರಾಜರುಗಳನ್ನು ತನ್ನ ಆದರ್ಶವನ್ನಾಗಿ ಹೊಂದಲಿಚ್ಛಿಸುವ ಸಮಾಜದಲ್ಲಿ ಕದನ/ಸಮರ ಕಲೆಗಳನ್ನು ಆದರವಾಗಿ ಕಾಣಲಾಗುತ್ತಿರಲಿಲ್ಲ.[೧೯] ಸುಬಾಕ್ ‌ ಹಾಗೂ ಟೇಕ್ಕೆಯಾನ್‌ ನಂತಹಾ ಸಾಂಪ್ರದಾಯಿಕ ಕದನ/ಸಮರ ಕಲೆಗಳ ಔಪಚಾರಿಕ ಅನುಷ್ಠಾನಗಳು ಕೇವಲ ಮಂಜೂರಾತಿ ಪಡೆದ ಸೇನಾಬಳಕೆಗಾಗಿ ಮಾತ್ರವೇ ಮೀಸಲಿತ್ತು. ಟೇಕ್ಕೆಯಾನ್ ‌ನ ನಾಗರಿಕ ಅಭ್ಯಾಸ/ಅನುಷ್ಠಾನವು ಒದೆಯುವ ಕ್ರೀಡೆಯಾಗಿ 19ನೇ ಶತಮಾನದಲ್ಲಿ ಕೂಡ ಚಾಲ್ತಿಯಲ್ಲಿತ್ತು/ಉಳಿದಿತ್ತು.[೧೮]

ಆಧುನಿಕ ಅಭಿವೃದ್ಧಿ/ಬೆಳವಣಿಗೆ[ಬದಲಾಯಿಸಿ]

ಕೊರಿಯಾವನ್ನು ಜಪಾನೀಯರು ಸ್ವಾಧೀನಪಡಿಸಿಕೊಂಡಿದ್ದ ಅವಧಿಯಲ್ಲಿ ಕೊರಿಯಾದ ಅನನ್ಯತೆ/ಚಹರೆಯ ಜಾನಪದ ಸಂಸ್ಕೃತಿ, ಭಾಷೆ, ಹಾಗೂ ಇತಿಹಾಸಗಳೂ ಸೇರಿದಂತೆ ಎಲ್ಲಾ ಪಾರ್ಶ್ವಗಳನ್ನೂ ಕೊರಿಯಾದ ಸಂಸ್ಕೃತಿಯನ್ನೇ ಅಳಿಸಿ ಹಾಕುವ ಪ್ರಯತ್ನದಲ್ಲಿ ನಿಷೇಧಿಸಲಾಗಿತ್ತು.[೨೦] ಕೊರಿಯನ್ನರಿಗೆ ಜಪಾನೀ ಹೆಸರನ್ನು ಅಳವಡಿಸಿಕೊಳ್ಳಲು ಒತ್ತಾಯ ಹೇರಲಾಯಿತಲ್ಲದೇ ಅವರು ಷಿಂಟೋ ದೇವಾಲಯಗಳಲ್ಲಿ ಆರಾಧನೆ ನಡೆಸಬೇಕಾಯಿತು; ಕೊರಿಯನ್‌ -ಭಾಷಿಕ ವೃತ್ತಪತ್ರಿಕೆಗಳು ಹಾಗೂ ನಿಯತಕಾಲಿಕೆಗಳನ್ನು ನಿಷೇಧಿಸಲಾಯಿತು; ಹಾಗೂ ಯುದ್ಧ ಸಮಯದಲ್ಲಿ, ನೂರಾರು ಸಾವಿರಾರು ಕೊರಿಯನ್ನರನ್ನು ಜಪಾನೀ ಯುದ್ಧ ಯೋಜನೆಗಳಿಗೆ ಬೆಂಬಲಿಸುವಂತೆ ಸೇನೆಯ ಸೇವೆ ಕೈಗೊಳ್ಳಲು ಒತ್ತಾಯ ಹೇರಲಾಯಿತು.[೨೧] ಟೇಕ್ಕೆಯಾನ್‌ (ಅಥವಾ ಸುಬಾಕ್ ‌)ನಂತಹಾ ಕದನ/ಸಮರ ಕಲೆಗಳನ್ನು ಕೂಡಾ ಈ ಸಮಯದಲ್ಲಿ ನಿಷೇಧಿಸಲಾಗಿತ್ತು;[೨೨] ಆದಾಗ್ಯೂ ಭೂಗತ ಬೋಧನೆಗಳ ಮೂಲಕ ಹಾಗೂ ಜಾನಪದ ಪದ್ಧತಿಗಳ ಸಹಾಯದಿಂದ ಟೇಕ್ಕೆಯಾನ್‌ ಉಳಿದುಕೊಳ್ಳಲು ಯಶಸ್ವಿಯಾಯಿತು.[೪][೨೩][೨೪][೨೫] ಸ್ವಾಧೀನದ ಅವಧಿಯಲ್ಲಿ, ಜಪಾನ್‌ನಲ್ಲಿ ಅಧ್ಯಯನ ನಡೆಸಲು ಸಾಧ್ಯವಾದ ಕೆಲ ಕೊರಿಯನ್ನರು ಜಪಾನೀಯರ ಕದನ/ಸಮರ ಕಲೆಗಳ ಪರಿಚಯವನ್ನು ಪಡೆದರಲ್ಲದೇ ಕೆಲ ಸಂದರ್ಭಗಳಲ್ಲಿ ಈ ಕಲೆಗಳಲ್ಲಿ ಬ್ಲಾಕ್‌ ಬೆಲ್ಟ್‌ ಶ್ರೇಯಾಂಕವನ್ನು ಕೂಡಾ ಗಳಿಸಿದರು.[೨೬] ಇತರರು ಚೀನಾ ಹಾಗೂ ಮಂಚೂರಿಯಾದಲ್ಲಿನ ಕದನ/ಸಮರ ಕಲೆಗಳ ಪರಿಚಯವನ್ನು ಪಡೆದರು.[೧೨][೨೭][೨೮]

1945ರಲ್ಲಿ ಸ್ವಾಧೀನವು ಕೊನೆಗೊಂಡಾಗ, ಕೊರಿಯಾದ ಕದನ/ಸಮರ ಕಲೆಗಳ ಶಾಲೆಗಳು (ಕ್ವಾನ್‌ ಗಳು) ಕೊರಿಯಾದಲ್ಲಿ ವಿವಿಧ ಪ್ರಭಾವಗಳ ಆಧಾರದ ಮೇಲೆ ಆರಂಭವಾಗಲು ಮೊದಲುಮಾಡಿದವು.[೧೨][೨೯] ಈ ಶಾಲೆಗಳಲ್ಲಿ ಕಲಿಸಲಾಗುತ್ತಿದ್ದ ಕಲೆಗಳ ಮೂಲಗಳ ಬಗ್ಗೆ ವಿಭಿನ್ನ ರೀತಿಯ ಅಭಿಪ್ರಾಯಗಳಿವೆ. ಕೆಲವರ ನಂಬಿಕೆಯ ಪ್ರಕಾರ ಸಾಂಪ್ರದಾಯಿಕ ಕೊರಿಯಾದ ಕದನ/ಸಮರ ಕಲೆಗಳಾದ ಟೇಕ್ಕೆಯಾನ್ ‌ ಹಾಗೂ ಸುಬಾಕ್‌ ಗಳ ಮೇಲೆ ಮೂಲಭೂತವಾಗಿ ಆಧಾರಿತವಾದ ಕದನ/ಸಮರ ಕಲೆಗಳನ್ನು,[೪][೬][೨೯][೩೦] ಅಥವಾ ಕುಂಗ್‌ ಫೂ ಹಾಗೂ ಕರಾಟೆಗಳೂ ಸೇರಿದಂತೆ ಒಟ್ಟಾರೆಯಾಗಿ ವೈವಿಧ್ಯಮಯ ಕದನ/ಸಮರ ಕಲೆಗಳನ್ನು ಅವರು ಕಲಿಸುತ್ತಿದ್ದರು.[೩೧] ಇತರರ ನಂಬಿಕೆಯ ಪ್ರಕಾರ ಈ ಶಾಲೆಗಳು ಬಹುಪಾಲು ಪೂರ್ಣವಾಗಿ ಕರಾಟೆಯ ಮೇಲೆ ಆಧಾರಿತವಾದ ರಕ್ಷಣಾಕಲೆಗಳನ್ನು ಕಲಿಸುತ್ತಿದ್ದವು.[೧೭][೩೨][೩೩] 5,000 ಇಯರ್ಸ್ ಆಫ್‌ ಕೊರಿಯನ್‌ ಮಾರ್ಷಲ್‌ ಆರ್ಟ್ಸ್ ‌ ಎಂಬ ಗ್ರಂಥವು ಕೊರಿಯಾದ ಅನೇಕ ಸಂಪ್ರದಾಯಗಳು ಹಾಗೂ ಪದ್ಧತಿಗಳನ್ನು ಬದಲಾಯಿಸುವ ಮೂಲಕ ಜಪಾನ್‌ ಕೊರಿಯಾದ ಕದನ/ಸಮರ ಕಲೆಗಳ ಇತಿಹಾಸವನ್ನು ಹೇಗೆ ಅಳಿಸಿಹಾಕಲು ಪ್ರಯತ್ನಿಸಿತು ಎಂದು ಎತ್ತಿ ತೋರಿಸುತ್ತದೆ. ಇಂದಿನ ಇತಿಹಾಸದ ಗ್ರಹಿಕೆಯನ್ನು ಈ ಪ್ರಕ್ರಿಯೆಯು ಎಷ್ಟರಮಟ್ಟಿಗೆ ಪ್ರಭಾವಿಸಿದೆ ಎಂಬುದನ್ನು ನಿರ್ಣಯಿಸುವುದು ಕಷ್ಟಸಾಧ್ಯ. ಜಪಾನೀಯರ ಈ ಪ್ರಯತ್ನಗಳು ಕೊರಿಯಾದ ಜೈತ್ರಯಾತ್ರೆಗಳು/ಸಾಧನೆಗಳ ಸ್ಮಾರಕಗಳಿಗೆ ಹಾನಿ ಉಂಟುಮಾಡುವಂತಹಾ ಮಾರ್ಪಾಡುಗಳಿಂದ ಹಿಡಿದು ಕೊರಿಯಾ'ದ ಸಾಂಪ್ರದಾಯಿಕ ಭೂಪಟ/ನಕ್ಷೆಗಳ ಚಿತ್ರವನ್ನು ಹುಲಿಯ ರೂಪದಿಂದ ಮೊಲದ ರೂಪಕ್ಕೆ ಸರಾಗವಾಗಿ ಬದಲಾಯಿಸುವವರೆಗೆ ಇದ್ದವು.[೩೪] ಆಗಿನ ಜಪಾನೀಯ ನಾಯಕತ್ವವು ಯುವ ಕೊರಿಯನ್ನರ ಜ್ಞಾನಾಭಿವೃದ್ಧಿಯನ್ನು ತಡೆಹಿಡಿಯುವುದರ ಮೂಲಕ, ಅವರನ್ನು ತಾವು ಇತಿಹಾಸದಲ್ಲಿ ಯೋಧರಲ್ಲ ಬದಲಿಗೆ ವಿನಮ್ರ/ವಿಧೇಯ/ಪ್ರತಿಭಟಿಸದ ಜನಾಂಗ ಮಾತ್ರವಷ್ಟೇ ಎಂದು ನಂಬುವ ಹಾಗೆ ಮಾಡಲು ಸಾಧ್ಯ ಹಾಗೂ ಅದರಿಂದ ಸ್ವಾಧೀನತೆಯು ಸುಲಭಸಾಧ್ಯ ಎಂದು ನಂಬಿತ್ತು.[೩೪] ಆ ಸಮಯದಲ್ಲಿನ ಇತಿಹಾಸಕಾರರ ಹೇಳಿಕೆಯಂತೆ, "ಜಪಾನೀಯ ಕದನ/ಸಮರ ಕಲೆಗಳ ಬೋಧಕರು ಅನುಮತಿ ಪಡೆದವರು ಮಾತ್ರವೇ ಆಗಬೇಕಿತ್ತು. ಈ ಸನ್ನಿವೇಶದಿಂದಾಗಿ ಜಪಾನೀಯ ಕದನ/ಸಮರ ಕಲೆಗಳನ್ನು ಆಗಲೂ ಸಾಮಾನ್ಯವಾಗಿ ಪ್ರಚಲಿತವಾಗಿ ಉಳಿದಿದ್ದ ಕೊರಿಯಾದ ಪದ್ಧತಿಗಳ ಅಳಿದುಳಿದ ಭಾಗಗಳೊಂದಿಗೆ ಮಿಶ್ರಣ ಆಗಲು ಕಾರಣವಾಯಿತು."[೩೪] ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡಾಗ ವಿವಿಧ ಕದನ/ಸಮರ ಕಲೆಗಳಲ್ಲಿ ಬಳಸಲಾಗುವ ಮೂಲ ತಂತ್ರಗಳನ್ನು ಯಾರು ಅಭಿವೃದ್ಧಿಪಡಿಸಿದ್ದು ಎಂದು ಕಂಡುಹಿಡಿಯುವುದು ಕಷ್ಟಸಾಧ್ಯವೇ ಸರಿ. ಯಾವುದೇನೇ ಇರಲಿ, ಸ್ವಾಧೀನದ ಅಂತ್ಯದ ನಂತರ ಕೊರಿಯನ್ನರು ಪ್ರಾಚೀನ ಕೊರಿಯಾದ ಕಲೆಗಳನ್ನು ಮರುಪರಿಶೀಲನೆಗೊಳಪಡಿಸಿ ಟೇಕ್ವಾಂಡೋವನ್ನು 1971ರಲ್ಲಿ ರಾಷ್ಟ್ರೀಯ ಕದನ/ಸಮರ ಕಲೆಯನ್ನಾಗಿ ನಾಮಕರಣ ಮಾಡಿದರು/ಘೋಷಿಸಿದರು.[೩೫]

1952ರಲ್ಲಿ, ಕೊರಿಯನ್‌ ಯುದ್ಧದ ಪರಾಕಾಷ್ಠೆಯ ಸಮಯದಲ್ಲಿ, ಕದನ/ಸಮರ ಕಲೆಗಳ ಪ್ರದರ್ಶನ ಏರ್ಪಡಿಸಲಾಗಿದ್ದಾಗ ಅಲ್ಲಿ ಕ್ವಾನ್‌ಗಳು ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಿದರು. ಒಂದು ಪ್ರದರ್ಶನದಲ್ಲಿ, ನಾಮ್‌ ಟೇ ಹೈ 13 ಛಾವಣಿ ಹೆಂಚುಗಳನ್ನು ಮುಷ್ಠಿಗುದ್ದಿನಿಂದ ನುಚ್ಚುನೂರು ಮಾಡಿದರು. ಈ ಪ್ರದರ್ಶನವಾದ ನಂತರ ದಕ್ಷಿಣ ಕೊರಿಯಾದ ಅಧ್ಯಕ್ಷ ಸಿಂಗ್‌ಮನ್‌ ರೀ ಚೊಯ್‌ ಹಾಂಗ್‌ ಹೈರಿಗೆ ಈ ಕದನ/ಸಮರ ಕಲೆಗಳನ್ನು ಕೊರಿಯಾದ ಸೇನೆಗೆ ಪರಿಚಯಿಸಲು ಆದೇಶಿಸಿದರು.[೩೬] 1950ರ ದಶಕದ ಮಧ್ಯದ ಹೊತ್ತಿಗೆ ಒಂಬತ್ತು ಮಂದಿ ಕ್ವಾನ್ ‌ಗಳು ಹೊರಹೊಮ್ಮಿದ್ದರು. ಸಿಂಗ್‌ಮನ್‌ ರೀ ವಿವಿಧ ಶಾಲೆಗಳನ್ನು ಒಂದೇ ವ್ಯವಸ್ಥೆಯಡಿ ಒಗ್ಗೂಡುವಂತೆ ಆದೇಶಿಸಿದರು. "ಟೇಕ್ವಾಂಡೋ" ಎಂಬ ಹೆಸರನ್ನು (ಓಹ್‌ ಡೊ ಕ್ವಾನ್‌ದ) ಚೊಯ್‌ ಹಾಂಗ್‌ ಹೈ ಅಥವಾ (ಚುಂಗ್‌‌ ಡೋ ಕ್ವಾನ್‌ದ) ಸಾಂಗ್‌ ಡುಕ್‌ ಸಾನ್‌ರವರುಗಳಲ್ಲಿ ಒಬ್ಬರು ಸೂಚಿಸಿದ್ದಿರಬಹುದು, ಅದನ್ನು ಏಪ್ರಿಲ್‌ 11, 1955ರಂದು ಅಂಗೀಕರಿಸಲಾಯಿತು. ಇಂದಿಗೂ ಸ್ಥಾಯಿಯಾಗಿರುವ ಮಾಹಿತಿಯ ಪ್ರಕಾರ ಎಲ್ಲಾ ಕ್ವಾನ್ ‌ಗಳೂ ಈ ಹೆಸರನ್ನು ಬಳಸದಿದ್ದರೂ ಒಂಬತ್ತು ಮಂದಿ ಕ್ವಾನ್‌ ಗಳು ಟೇಕ್ವಾಂಡೋದ ಸ್ಥಾಪಕರು[೩೭]. ಕೊರಿಯನ್‌ ಟೇಕ್ವಾಂಡೋ ಅಸೋಸಿಯೇಷನ್‌ಅನ್ನು (KTA) 1959/1961ರಲ್ಲಿ ಈ ಒಗ್ಗೂಡುವಿಕೆಗೆ ಅನುವು ಮಾಡಲೆಂದು ರೂಪಿಸಲಾಯಿತು.[೬][೨೬][೩೮][೩೯][೪೦] ಟೇಕ್ವಾಂಡೋನ ಮೂಲ ನಿಪುಣ ಬೋಧಕರನ್ನು ವಿವಿಧ ರಾಷ್ಟ್ರಗಳಿಗೆ ಬೋಧನೆ ಮಾಡಲು ನೇಮಿಸಿದುದರಿಂದ ಅದಾದ ಸ್ವಲ್ಪ ಕಾಲದಲ್ಲೇ ವಿಶ್ವದಾದ್ಯಂತ ಟೇಕ್ವಾಂಡೋ ಪ್ರಥಮ ಪರಿಚಯ ಪಡೆಯಿತು. ದಕ್ಷಿಣ ಕೊರಿಯಾದಲ್ಲಿ ಮಾನಕೀಕರಿಸುವ ಪ್ರಯತ್ನವು ಕ್ವಾನ್ ‌ಗಳು ವಿವಿಧ ಶೈಲಿಗಳನ್ನು ಕಲಿಸುವುದನ್ನು ಮುಂದುವರೆಸಿದುದರಿಂದ ಸ್ಥಗಿತಗೊಂಡಿತು. ಕೊರಿಯನ್‌ ಸರ್ಕಾರವು ಮಾಡಿದ ಒಗ್ಗೂಡುವಿಕೆಗೆ ಮತ್ತೊಂದು ಮನವಿಯು ಕೊರಿಯಾ ಟೇ ಸೂ ಡೊ ಅಸೋಸಿಯೇಷನ್‌ನ ಸ್ಥಾಪನೆಗೆ ಕಾರಣವಾಯಿತು, 1965ರಲ್ಲಿ ತನ್ನ ನಾಯಕತ್ವದ ಬದಲಾವಣೆಯ ನಂತರ ಸಂಸ್ಥೆಯು ಕೊರಿಯಾ ಟೇಕ್ವಾಂಡೋ ಅಸೋಸಿಯೇಷನ್‌ ಎಂಬ ತನ್ನ ಹಳೆಯ ಹೆಸರಿಗೆ ಮರಳಿತು.

ಒಂದು ಮೂಲದ ಪ್ರಕಾರ 123 ರಾಷ್ಟ್ರಗಳಲ್ಲಿ ಟೇಕ್ವಾಂಡೋವನ್ನು ಅನುಷ್ಠಾನ ಮಾಡಲಾಗುತ್ತಿದ್ದು, ವಿಶ್ವದಾದ್ಯಂತ 30 ದಶಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಅನುಷ್ಠಾನಿಗಳು ಹಾಗೂ 3 ದಶಲಕ್ಷ ಬ್ಲಾಕ್‌ಬೆಲ್ಟ್‌ ಪುರಸ್ಕೃತರು ಇದ್ದಾರೆ ಎಂದು ಅಂದಾಜಿಸಲಾಗಿದೆ.[೪೧] ದಕ್ಷಿಣ ಕೊರಿಯಾದ ಸರ್ಕಾರವು ಪ್ರಕಟಿಸಿದ ಅಂದಾಜು ಪಟ್ಟಿಯ ಪ್ರಕಾರ ಟೇಕ್ವಾಂಡೋವನ್ನು 70 ದಶಲಕ್ಷ ಮಂದಿ 190 ರಾಷ್ಟ್ರಗಳಲ್ಲಿ ಅನುಷ್ಠಾನ ಮಾಡುತ್ತಿದ್ದಾರೆ.[೪೨] ಈಗ ಇದು ಒಲಿಂಪಿಕ್‌ ಪಂದ್ಯಗಳಲ್ಲಿ ಸೇರಿಸಿಕೊಳ್ಳಲಾದ ಏಷ್ಯಾದ ಎರಡೇ ಕದನ/ಸಮರ ಕಲೆಗಳಲ್ಲಿ ಇದೂ ಒಂದಾಗಿದೆ (ಮತ್ತೊಂದು ಜೂಡೋ ಆಗಿದೆ); ಸಿಯೋಲ್‌ನಲ್ಲಿ ನಡೆದ 1988ರ ಪಂದ್ಯಗಳಲ್ಲಿ ಇದು ಪ್ರದರ್ಶನ ಕಲೆಯಾಗಿ ಆರಂಭಗೊಂಡಿತಾದರೂ, ಸಿಡ್ನಿಯಲ್ಲಿ ನಡೆದ 2000ನೇ ಸಾಲಿನ ಪಂದ್ಯಗಳಿಂದ ಅಧಿಕೃತವಾಗಿ ಪದಕ ನೀಡಲ್ಪಡುವ ಪಂದ್ಯವಾಗಿದೆ.

ವೈಶಿಷ್ಟ್ಯಗಳು[ಬದಲಾಯಿಸಿ]

ನಮ್ಯತೆಯನ್ನು ಹೆಚ್ಚಿಸಲು ಎಳೆಯುವಿಕೆಯು ಟೇಕ್ವಾಂಡೋ ತರಬೇತಿಯ ಪ್ರಮುಖ ಅಂಶವಾಗಿದೆ.

ಕರಾಟೆ ಅಥವಾ ಕುಂಗ್‌ ಫೂನ ದಾಕ್ಷಿಣಾತ್ಯ ಶೈಲಿಗಳ ಕದನ/ಸಮರ ಕಲೆಗಳಿಂದ ಇದನ್ನು ಪ್ರತ್ಯೇಕಿಸುವಂತಹಾ ಒದೆತದ ತಂತ್ರಗಳ ಮೇಲಿನ ಪ್ರಾಧಾನ್ಯತೆಗೆ ಟೇಕ್ವಾಂಡೋ ಹೆಸರಾಗಿದೆ. ಇದರ ತಾರ್ಕಿಕ ವಿವರಣೆಯೆಂದರೆ ಕದನ ಕಲಾಕೋವಿದನು ಹೊಂದಿರುವ ಉದ್ದವಾದ ಹಾಗೂ ಶಕ್ತಿಶಾಲಿಯಾದ ಆಯುಧವೆಂದರೆ ಕಾಲು, ಆದ್ದರಿಂದ ಒದೆತಗಳು ಸರಿಯಾದ ಪ್ರತೀಕಾರವಿಲ್ಲದೇ ಶಕ್ತಿಶಾಲಿ ಹೊಡೆತಗಳನ್ನು ನೀಡುವ ಸಾಮರ್ಥ್ಯವನ್ನು ಹೊಂದಿವೆ. ಐತಿಹಾಸಿಕವಾಗಿ, ಕೊರಿಯನ್ನರು ಕೈಗಳು ಹೋರಾಟದಲ್ಲಿ ಬಳಸುವುದಕ್ಕಿಂತ ಹೆಚ್ಚಿನ ಮೌಲ್ಯವುಳ್ಳದ್ದಾಗಿದೆ ಎಂದು ಭಾವಿಸಿದ್ದರು.[ಸೂಕ್ತ ಉಲ್ಲೇಖನ ಬೇಕು]

ಟೇಕ್ವಾಂಡೋ ಒಂದು ಕದನ/ಸಮರ ಕಲೆಯಾಗಿ ಎರಡೂ ಲಿಂಗಗಳ ವ್ಯಕ್ತಿಗಳಲ್ಲಿ ಹಾಗೂ ಅನೇಕ ವರ್ಷಗಳ ಕಾಲ ಜನಪ್ರಿಯವಾಗಿದೆ. ದೈಹಿಕವಾಗಿ, ಟೇಕ್ವಾಂಡೋ ಬಲ, ವೇಗ, ಸಮತೋಲನೆ, ನಮ್ಯತೆ ಹಾಗೂ ದಾರ್ಢ್ಯತೆಗಳನ್ನು ಬೆಳೆಸುತ್ತದೆ. ಇದರಲ್ಲಿನ ಮಾನಸಿಕ ಹಾಗೂ ದೈಹಿಕ ಶಿಸ್ತಿನ ಸಂಯೋಜನೆಯ ಉದಾಹರಣೆ ಮರದ ಫಲಕಗಳನ್ನು ಮುರಿದುಹಾಕುವುದು ಏಕೆಂದರೆ ಇದಕ್ಕೆ ಆ ತಂತ್ರದ ದೈಹಿಕ ನೈಪುಣ್ಯತೆ ಹಾಗೂ ಶಕ್ತಿಯನ್ನು ಕೇಂದ್ರೀಕರಿಸಲು ಬೇಕಾದ ಏಕಾಗ್ರತೆ ಎರಡೂ ಬೇಕಾಗುತ್ತದೆ.

ಓರ್ವ ಟೇಕ್ವಾಂಡೋ ವಿದ್ಯಾರ್ಥಿಯು ಪ್ರಾತಿನಿಧಿಕವಾಗಿ ಸಮವಸ್ತ್ರವೊಂದನ್ನು ಧರಿಸುತ್ತಾನೆ (ಡೊಬೊಕ್‌ 도복), ಅನೇಕವೇಳೆ ಇದು ಶ್ವೇತವರ್ಣದ್ದಾಗಿದ್ದು ಕೆಲವೊಮ್ಮೆ ಕಪ್ಪು (ಅಥವಾ ಇತರೆ ಬಣ್ಣಗಳು) ಬಣ್ಣದ್ದಾಗಿರುತ್ತದೆ ಜೊತೆಗೆ (ಟ್ಟಿ 띠) ನಡುವನ್ನು ಸುತ್ತುವರೆಯುವ ಸೊಂಟಪಟ್ಟಿಯೂ ಇರುತ್ತದೆ. ಒಟ್ಟಾರೆ ಡೊಬೊಕ್‌ನ ಕನಿಷ್ಟ ಮೂರು ಪ್ರಮುಖ ಶೈಲಿಗಳಿವೆ, ಅವುಗಳಲ್ಲಿ ಪ್ರಮುಖ ವ್ಯತ್ಯಾಸಗಳು ನಡುವಂಗಿ/ಜ್ಯಾಕೆಟ್‌ನ ಶೈಲಿಗಳಿಗೆ ಸಂಬಂಧಿಸಿವೆ : (1) ಮುಂಭಾಗದಲ್ಲಿ ದಾಟುಗೆರೆಗಳಿರುವ ನಡುವಂಗಿ/ಜ್ಯಾಕೆಟ್‌ ಸಾಂಪ್ರದಾಯಿಕ ಏಷ್ಯಾದ ವಸ್ತ್ರಶೈಲಿಯನ್ನು ಹೋಲುವ, (2) WTF ಅಭ್ಯಾಸಿಗಳು ಸಾಧಾರಣವಾಗಿ ಧರಿಸುವ V-ಕತ್ತಿನಪಟ್ಟಿಯ ನಡುವಂಗಿ/ಜ್ಯಾಕೆಟ್‌ (ದಾಟುಗೆರೆಗಳಿಲ್ಲ) ಹಾಗೂ (3)ITF ಅಭ್ಯಾಸಿಗಳು ಸಾಧಾರಣವಾಗಿ ಧರಿಸುವ ವಸ್ತ್ರವಾದ ಲಂಬವಾಗಿ ಕೊನೆಗೊಳ್ಳುವ ಮುಂಭಾಗದ ನಡುವಂಗಿ/ಜ್ಯಾಕೆಟ್‌ (ದಾಟುಗೆರೆಗಳಿಲ್ಲ). ಸೊಂಟಪಟ್ಟಿಯ ಬಣ್ಣ ಹಾಗೂ ಯಾವುದೇ ಲಾಂಛನಗಳು (ಯಾವುದಾದರೂ ಇದ್ದರೆ) ವಿದ್ಯಾರ್ಥಿಯ ಶ್ರೇಯಾಂಕವನ್ನು ಸೂಚಿಸುತ್ತದೆ. ಸಾಧಾರಣವಾಗಿ ಬಣ್ಣವು ಗಾಢವಾಗಿದ್ದಷ್ಟೂ, ಹೆಚ್ಚಿನ ಮಟ್ಟದ ಶ್ರೇಯಾಂಕವನ್ನು ಹೊಂದಿರುತ್ತಾರೆ. ತರಬೇತಿ ಅಥವಾ ಶಿಕ್ಷಣ ನೀಡುವ ಶಾಲೆ ಅಥವಾ ಸ್ಥಳವನ್ನು ಡೋಜಾಂಗ್ 도장 ಎಂದು ಕರೆಯಲಾಗುತ್ತದೆ.

ಪ್ರತಿ ಟೇಕ್ವಾಂಡೋ ಕ್ಲಬ್‌ ಅಥವಾ ಶಾಲೆಯು ಭಿನ್ನತೆಯನ್ನು ಹೊಂದಿದ್ದರೂ, ಓರ್ವ ಟೇಕ್ವಾಂಡೋ ವಿದ್ಯಾರ್ಥಿಯು ಕೆಳಗೆ ಪಟ್ಟಿ ಮಾಡಿದವುಗಳಲ್ಲಿ ಬಹಳಷ್ಟು ಚಟುವಟಿಕೆಗಳಲ್ಲಿ ಅಥವಾ ಎಲ್ಲ ಚಟುವಟಿಕೆಗಳಲ್ಲಿ ಪ್ರಾತಿನಿಧಿಕವಾಗಿ ಭಾಗವಹಿಸುವುದನ್ನು ನಿರೀಕ್ಷಿಸಬಹುದು:

 • ಟೇಕ್ವಾಂಡೋದ ತಂತ್ರಗಳು ಹಾಗೂ ಪಠ್ಯಕ್ರಮಗಳ ಕಲಿಕೆ
 • ಹಿಗ್ಗಿಸುವಿಕೆಯೂ ಸೇರಿದಂತೆ ಆಮ್ಲಜನಕರಹಿತ ತಾಲೀಮು ಹಾಗೂ ಆಮ್ಲಜನಕ ತಾಲೀಮು
 • ಸ್ವರಕ್ಷಣಾ ತಂತ್ರಗಳು (ಹೊಸಿನ್‌ಸುಲ್‌ 호신술)
 • ಮಾದರಿಗಳು/ನಮೂನೆಗಳು (ಫಾರ್ಮ್ಸ್‌, ಪುಂಸೇ 품새, ಟ್ಯೂಲ್‌ 틀, ಹೆಯಾಂಗ್ 형 ಎಂದೂ ಕರೆಯಲಾಗುತ್ತದೆ)
 • ಮುಷ್ಠಿಯುದ್ಧ ವರಸೆ (ITFನಲ್ಲಿ ಗಿಯೋರುಗಿ 겨루기, ಅಥವಾ ಮಟ್ಸೆಯೋಗಿ 맞서기 ಎಂದು ಕರೆಯಲಾಗುತ್ತದೆ), 7-, 3-, 2- 1-ಹಂತದ ಮುಕ್ತಶೈಲಿಯ ಮುಷ್ಠಿಯುದ್ಧ ವರಸೆ, ಏರ್ಪಟ್ಟ ಮುಷ್ಠಿಯುದ್ಧ ವರಸೆ, ಬಿಂದು ಕೇಂದ್ರಿತ ಮುಷ್ಠಿಯುದ್ಧ ವರಸೆ, ಹಾಗೂ ಇತರೆ ವಿಧಗಳನ್ನು ಹೊಂದಿರಬಹುದಾದ ಮುಷ್ಠಿಯುದ್ಧ ವರಸೆ
 • ವಿಶ್ರಾಂತಿ/ಶಮನಗೊಳ್ಳುವಿಕೆ ಹಾಗೂ ಧ್ಯಾನಗಳ ಕಸರತ್ತುಗಳು ದಾಟುಗೆರೆಗಳಿಲ್ಲ
 • ಎಸೆತಗಳ ಹಾಗೂ/ಅಥವಾ ಬೀಳುವಿಕೆಯ ತಂತ್ರಗಳು (ಡೇಯೋಂಜಿಗಿ 던지기 ಹಾಗೂ ಟ್ಟಿಯೋರಿಯೋಜಿಗಿ 떨어지기)
 • ಒಡೆದುಹಾಕುವಿಕೆ ಅಥವಾ (ಗ್ಯೋಕ್‌ಪಾ 격파 ಅಥವಾ ವೀರೋಕ್‌ ), ಪರೀಕ್ಷೆಯ, ತರಬೇತಿಯ ಹಾಗೂ ಕದನ ಕಲೆಗಳ ಪ್ರದರ್ಶನ ಉದ್ದೇಶಗಳಿಗೆಂದು ತಂತ್ರಗಳನ್ನು ಬಳಸಿ ಫಲಕಗಳನ್ನು ಮುರಿಯುವುದು. ಪ್ರದರ್ಶನಗಳಲ್ಲಿ ಸಾಧಾರಣವಾಗಿ ಇಟ್ಟಿಗೆಗಳನ್ನು, ಟೈಲ್‌ಗಳನ್ನು, ಅಥವಾ ಮಂಜುಗಡ್ಡೆಯ ಅಥವಾ ಇತರ ವಸ್ತುಗಳ ಅಚ್ಚುಗಳನ್ನು ಕೂಡಾ ಸೇರಿಸಿಕೊಳ್ಳಲಾಗುತ್ತದೆ. ಇವುಗಳನ್ನು ಮೂರು ವಿಧಗಳನ್ನಾಗಿ ಪ್ರತ್ಯೇಕಿಸಬಹುದು:
  • ಶಕ್ತಿಯುತ ಒಡೆಯುವಿಕೆ - ನೇರ ತಂತ್ರಗಳನ್ನು ಬಳಸಿ ಸಾಧ್ಯವಾದಷ್ಟು ಸಂಖ್ಯೆಯ ಫಲಕಗಳನ್ನು ಒಡೆಯುವುದು
  • ವೇಗವಾದ ಒಡೆಯುವಿಕೆ - ಒಂದು ಬದಿಯಲ್ಲಿ ಅಳ್ಳಕವಾಗಿ ಫಲಕಗಳು ಹಿಡಿದು ಕಟ್ಟಲಾಗಿರುತ್ತದೆ, ಇದರಲ್ಲಿ ಮುರಿಯಲು ಅಗತ್ಯವಾದ ವೇಗವನ್ನು ಗಳಿಸಿಕೊಳ್ಳುವುದರಲ್ಲಿ ಗಮನ ವಿಶೇಷವಾಗಿ ಕೇಂದ್ರೀಕೃತಗೊಂಡಿರುತ್ತದೆ
  • ವಿಶೇಷ ತಂತ್ರಗಳು - ನೆಗೆಯುವಿಕೆ ಅಥವಾ ಹಾರುವಿಕೆಯ ತಂತ್ರಗಳನ್ನು ಹೆಚ್ಚಿನ ಎತ್ತರ, ದೂರ ತಲುಪಲು ಅಥವಾ ತಡೆಗಳನ್ನು ಭೇದಿಸಲು ಬಳಸಿಕೊಂಡು ಕೆಲವೇ ಫಲಕಗಳನ್ನು ಒಡೆಯುವುದು
 • ಮುಂದಿನ ಶ್ರೇಯಾಂಕದೆಡೆಗೆ ಮುನ್ನಡೆಯಲು ಪರೀಕ್ಷೆಗಳನ್ನು ಎದುರಿಸುವುದು
 • ಮಾನಸಿಕ ಹಾಗೂ ನೈತಿಕ ಶಿಸ್ತುಗಳು, ನ್ಯಾಯ, ಶಿಷ್ಟಾಚಾರ, ಗೌರವ/ಮನ್ನಣೆ ಹಾಗೂ ಸ್ವಾಭಿಮಾನಗಳ ಮೇಲೆ ಗಮನವೀಯುವಿಕೆ

ಕೆಲ ಶಾಲೆಗಳು ಮಾದರಿ/ನಮೂನೆಗಳನ್ನು ಅಭ್ಯಸಿಸುವಾಗ "ಸೈನ್‌ ವೇವ್‌"ನ ಬಳಕೆಯನ್ನು ಹೇಳಿಕೊಡುತ್ತವೆ; ತಂತ್ರಗಳ ಪ್ರಯೋಗಗಳ ನಡುವೆ ಓರ್ವ ವ್ಯಕ್ತಿಯ ಗುರುತ್ವಾಕರ್ಷಣೆಯ ಕೇಂದ್ರವನ್ನು ಎತ್ತರಿಸಿಕೊಳ್ಳುವುದು ಹಾಗೂ ನಂತರ ತಂತ್ರದ ಪ್ರಕ್ರಿಯೆ ನಡೆಯುತ್ತಿರುವಂತೆಯೇ ಅದನ್ನು ಇಳಿಸಿಕೊಳ್ಳುವುದು ಇದರಲ್ಲಿ ಸೇರಿರುತ್ತದೆ, ಇದರಿಂದಾಗಿ ಉಂಟಾಗುವ ಮೇಲೆ ಕೆಳಗೆ ಹೋಗುವ ಚಲನೆಯಿಂದಾಗಿ ಇದರ ಹೆಸರು "ಸೈನ್‌ ವೇವ್‌" ಎಂಬುದು ಉತ್ಪನ್ನವಾಗಿದೆ. ಇತರೆ ಶಾಲೆಗಳಲ್ಲಿ ಪ್ರಸ್ತುತಪಡಿಸುವ ಮಾದರಿಯ ವಿವರಣೆಯಲ್ಲಿ ಸ್ಪಷ್ಟವಾಗಿ ನಮೂದಿಸದ ಹೊರತು ಒಂದು ಮಾದರಿ/ನಮೂನೆಯ ಪ್ರದರ್ಶನದ ಸಮಯಪರ್ಯಂತ ಓರ್ವ ವ್ಯಕ್ತಿಯ ಗುರುತ್ವಾಕರ್ಷಣಾ ಕೇಂದ್ರವು ಸಾಧಾರಣವಾಗಿ ಸ್ಥಿರವಾಗಿರಬೇಕು ಎಂದು ಹೇಳಿಕೊಡಲಾಗುತ್ತದೆ.

ಸಂಸ್ಥೆಗಳು[ಬದಲಾಯಿಸಿ]

ಟೇಕ್ವಾಂಡೋದ ಎರಡು ಜನಪ್ರಿಯ ಪದ್ಧತಿಗಳನ್ನು ಅನುಕ್ರಮವಾಗಿ ಅವುಗಳ ಸಂಸ್ಥೆಗಳ ಹೆಸರಿನ ಮೇಲೆ ಆಧಾರಿತವಾಗಿ ಕರೆಯಲಾಗುತ್ತದೆ, ಅವೆಂದರೆ ಇಂಟರ್‌ನ್ಯಾಷನಲ್‌ ಟೇಕ್ವಾನ್‌-ಡೋ ಫೆಡರೇಷನ್‌ (ITF) ಹಾಗೂ ಕುಕ್ಕಿವಾನ್‌ನೊಂದಿಗೆ ಸಮೀಪವರ್ತಿತ್ವ ಹೊಂದಿರುವ ವರ್ಲ್ಡ್‌ ಟೇಕ್ವಾಂಡೋ ಫೆಡರೇಷನ್‌ (WTF). ITF ಸಂಸ್ಥೆಯನ್ನು 1966ರಲ್ಲಿ ಚೊಯ್‌ ಹಾಂಗ್‌ ಹೈ ಸ್ಥಾಪಿಸಿದರು. 2002ರಲ್ಲಿ ಚೊಯ್‌ರ ಮರಣದ ನಂತರ, ಉತ್ತರಾಧಿಕಾರತ್ವದ ಮೇಲಿನ ಅನೇಕ ವಿವಾದಗಳಿಂದಾಗಿ ITF ತಾವೇ ಮೂಲ ಬಣ ಎಂದು ಹೇಳಿಕೊಳ್ಳುವ ಮೂರು ಪ್ರತ್ಯೇಕ ಬಣಗಳಾಗಿ ಒಡೆಯಿತು. ಈ ಮೂರೂ ಪ್ರತ್ಯೇಕ ಸಂಸ್ಥೆಗಳೂ ಖಾಸಗಿ ಸಂಘಟನೆಗಳಾಗಿವೆ. ಅವುಗಳಲ್ಲಿ ಎರಡು ಆಸ್ಟ್ರಿಯಾದಲ್ಲಿದ್ದರೆ, ಒಂದು ಕೆನಡಾದಲ್ಲಿದೆ. 1990ರ ದಶಕದ ಮಧ್ಯದಲ್ಲಿ ಸ್ಥಾಪಿಸಲ್ಪಟ್ಟ ITFನ ಅನಧಿಕೃತ ತರಬೇತಿ ಪ್ರಧಾನ ಕಚೇರಿಯು ಟೇಕ್ವಾಂಡೋ ಅರಮನೆ/ಪ್ಯಾಲೇಸ್‌ ಉತ್ತರ ಕೊರಿಯಾಪ್ಯೋನ್‌ಗ್ಯಾಂಗ್‌ನಲ್ಲಿದೆ.

ಚಿತ್ರ:Breaking concrete.jpg
ನಾಲ್ಕು ಜಲ್ಲಿಗಾರೆ ಹಾಸಿನ ಇಟ್ಟಿಗೆಗಳನ್ನು ಕತ್ತರಿ-ಹಸ್ತ ಹೊಡೆತದಿಂದ ಒಡೆದಿರುವುದು. ಒಡೆಯುವಿಕೆಯ ತಂತ್ರಗಳನ್ನು ಅನೇಕವೇಳೆ ಟೇಕ್ವಾಂಡೋಯಲ್ಲಿ ಕೈಗೊಳ್ಳಲಾಗುತ್ತದೆ.

ಕೊರಿಯಾ ಟೇಕ್ವಾಂಡೋ ಅಸೋಸಿಯೇಷನ್‌ ಸೆಂಟ್ರಲ್‌ ಡೋಜಾಂಗ್ ಸಂಸ್ಥೆಯನ್ನು ದಕ್ಷಿಣ ಕೊರಿಯಾದಲ್ಲಿ 1972ನೇ ಇಸವಿಯಲ್ಲಿ ತೆರೆಯಲಾಯಿತು. ಕೆಲ ತಿಂಗಳುಗಳ ನಂತರ, ಅದರ ಹೆಸರನ್ನು ಕುಕ್ಕಿವಾನ್‌ ಎಂಬುದಾಗಿ ಬದಲಾಯಿಸಲಾಯಿತು. ಅದರ ಮುಂದಿನ ವರ್ಷವೇ ವರ್ಲ್ಡ್‌ ಟೇಕ್ವಾಂಡೋ ಫೆಡರೇಷನ್‌ ಅನ್ನು ರೂಪಿಸಲಾಯಿತು. ಅಂತರರಾಷ್ಟ್ರೀಯ ಒಲಿಂಪಿಕ್‌ ಕಮಿಟಿಯು WTF ಹಾಗೂ ಟೇಕ್ವಾಂಡೋ ಮುಷ್ಠಿಯುದ್ಧ ವರಸೆಗಳಿಗೆ 1980ರಲ್ಲಿ ಮಾನ್ಯತೆ ನೀಡಿತು.

"WTF" ಹಾಗೂ "ಕುಕ್ಕಿವಾನ್‌" ಎಂಬ ಹೆಸರುಗಳನ್ನು ಅನೇಕವೇಳೆ ತಪ್ಪಾಗಿ ಒಂದೇ ಅರ್ಥದಲ್ಲಿ ಬಳಸಲಾಗುತ್ತಿದ್ದರೂ, ಕುಕ್ಕಿವಾನ್‌ ಎಂಬುದು ತರಬೇತಿ ನೀಡುವ ಹಾಗೂ ತರಬೇತುದಾರರಿಗೆ ದೃಢೀಕರಿಸುವ/ಪ್ರಮಾಣಿಸುವ ವಿಶ್ವದಾದ್ಯಂತ ಅಧಿಕೃತ ಡಾನ್‌ ಹಾಗೂ ಪಮ್ ‌ ಪ್ರಮಾಣಪತ್ರಗಳನ್ನು ನೀಡುವ ಸಂಪೂರ್ಣವಾಗಿ ಪ್ರತ್ಯೇಕವಾದ ಸಂಸ್ಥೆಯಾಗಿದೆ. ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿ ಕುಕ್ಕಿವಾನ್‌ನ (ವಿಶ್ವ ಟೇಕ್ವಾಂಡೋ ಪ್ರಧಾನ ಕಚೇರಿಗಳು) ಆಡಳಿತಾತ್ಮಕ ಕಚೇರಿಗಳನ್ನು ಹೊಂದಿರುವ ತನ್ನದೇ ಆದ ಪ್ರಾಕೃತಿಕ ಕಟ್ಟಡವನ್ನು ಹೊಂದಿದೆಯಲ್ಲದೇ ಕುಕ್ಕಿವಾನ್‌ ಟೇಕ್ವಾಂಡೋದ ಒಂದು ಪದ್ಧತಿಯಾಗಿದೆ. WTF ಎಂಬುದು ಒಂದು ಪಂದ್ಯಾವಳಿಗಳ ಸಮಿತಿಯಾಗಿದೆಯೇ ಹೊರತು ತಾಂತ್ರಿಕವಾಗಿ ಒಂದು ಶೈಲಿ ಅಥವಾ ಪದ್ಧತಿಯಲ್ಲ.

ಸೊಂಗಾಹ್ಮ್‌ ಶೈಲಿಯ ಟೇಕ್ವಾಂಡೋವನ್ನು ಪ್ರೋತ್ಸಾಹಿಸುವ ವಿಶ್ವ ಸಾಂಪ್ರದಾಯಿಕ ಟೇಕ್ವಾಂಡೋ ಒಕ್ಕೂಟ ಹಾಗೂ ಟೇಕ್ವಾಂಡೋದ ಸೇನಾ ಶೈಲಿಯನ್ನು ಕಲಿಸುವ ರ್ರ್ಹೀ ಟೇಕ್ವಾನ್‌-ಡೋನಂತಹಾ ಇನ್ನೂ ಅನೇಕ ಖಾಸಗಿ ಸಂಸ್ಥೆಗಳಿವೆ. ಖಾಸಗಿ ಸಂಸ್ಥೆಗಳು ಏರ್ಪಡಿಸುವ ಪಂದ್ಯಗಳು ಹಾಗೂ ಸ್ಪರ್ಧೆಗಳು ಇತರೆ ಟೇಕ್ವಾಂಡೋ ವಿದ್ಯಾರ್ಥಿಗಳಿಗೆ ಮುಕ್ತವಾಗಿರುವುದಿಲ್ಲ. ಆದಾಗ್ಯೂ WTF-ಅನುಮೋದಿತ ಪಂದ್ಯಗಳು ಆತ ಅಥವಾ ಆಕೆಯು WTF ಸದಸ್ಯತ್ವ ಹೊಂದಿರುವ ತನ್ನ ರಾಷ್ಟ್ರದ ಯಾರು ಬೇಕಾದರೂ ಸದಸ್ಯತ್ವ ಹೊಂದಬಹುದಾದ ರಾಷ್ಟ್ರೀಯ ಅಸೋಸಿಯೇಷನ್‌ನ ಸದಸ್ಯರಾಗಿರುವವರೆಗೆ ಶಾಲೆಗಳ ಅಂಗೀಕರಿಸುವಿಕೆ ಅಥವಾ ಕದನ ಕಲೆಗಳ ಶೈಲಿಗಳ ನಿರ್ಬಂಧಕ್ಕೊಳಪಡದೇ ಯಾವುದೇ ವ್ಯಕ್ತಿಗೆ WTF ಪಂದ್ಯಗಳಲ್ಲಿ ಭಾಗವಹಿಸುವುದಕ್ಕೆ ಅವಕಾಶ ನೀಡುತ್ತವೆ. ಇಷ್ಟೊಂದು ಸಂಸ್ಥೆಗಳ ನಡುವಿನ ತಾಂತ್ರಿಕ ಪ್ರಮುಖ ವ್ಯತ್ಯಾಸಗಳು ಸಾಧಾರಣವಾಗಿ ಹೆಯಾಂಗ್ 형, ಪುಂಸೇ 품새, ಅಥವಾ ಟ್ಯೂಲ್‌ 틀 ಎಂದು ಕರೆಯಲಾಗುವ ಮಾದರಿ/ನಮೂನೆಗಳಲ್ಲಿಯೇ ಅಡಕವಾಗಿವೆ/ಸುತ್ತುತ್ತಿರುತ್ತವೆ, ಸ್ಪರ್ಧೆಗಳಲ್ಲಿ ಪ್ರದರ್ಶನ ನೀಡಲು ಅಗತ್ಯವಾದ ಭಂಗಿ, ಸ್ಥಾನ ಹಾಗೂ ತಂತ್ರಗಳು, ಮುಷ್ಠಿಯುದ್ಧ ವರಸೆಯ ನಿಯಮಗಳಲ್ಲಿನ ಪರಿಣತಿ ಹಾಗೂ ಸಿದ್ಧಾಂತಗಳನ್ನು ನಿದರ್ಶಿಸುವ ನಿರೂಪಿತ ಔಪಚಾರಿಕ ಚಲನೆಗಳ ಸರಣಿಯನ್ನು ಹೊಂದಿರುತ್ತವೆ.

ಅಂತಿಮವಾಗಿ ಕುಕ್ಕಿವಾನ್‌ಆಗಿ ಮಾರ್ಪಟ್ಟ ಸಂಸ್ಥೆಯಾಗಿ ರೂಪುಗೊಳ್ಳುವುದಕ್ಕೆ ಕಾರಣವಾದ ಈ ಖಾಸಗಿ ಸಂಸ್ಥೆಗಳೊಂದಿಗೆ, ಮೂಲಶಾಲೆಗಳು (ಕ್ವಾನ್‌ಗಳು ) WTF ಹಾಗೂ ಕುಕ್ಕಿವಾನ್‌ಗಳನ್ನು ಬೆಂಬಲಿಸುತ್ತಿರುವ ಸ್ವಾಯತ್ತ ಸೌಹಾರ್ದಭಾವದ ಸದಸ್ಯತ್ವದ ಸಂಸ್ಥೆಗಳಾಗಿ ಮುಂದುವರೆಯುತ್ತಿವೆ. ಕುಕ್ಕಿವಾನ್‌ನ ಪಠ್ಯಕ್ರಮವೇ ಕ್ವಾನ್‌ಗಳ ಅಧಿಕೃತ ಪಠ್ಯಕ್ರಮವಾಗಿದೆ. ಕ್ವಾನ್‌ಗಳು ತಮ್ಮ ಸದಸ್ಯರಿಗೆ ಕುಕ್ಕಿವಾನ್‌ ಡಾನ್‌ ಹಾಗೂ ಪಮ್‌ ಪ್ರಮಾಣೀಕರಣ(ಬ್ಲಾಕ್‌ಬೆಲ್ಟ್‌ ಪುರಸ್ಕೃತ ಶ್ರೇಯಾಂಕಗಳು)ದ ಚಟುವಟಿಕೆಗಳ ಮಾಧ್ಯಮಗಳಾಗಿ ಕಾರ್ಯನಿರ್ವಹಿಸುತ್ತವೆ.

ಶ್ರೇಯಾಂಕಗಳು, ಬೆಲ್ಟ್‌ಗಳು/ಸೊಂಟಪಟ್ಟಿಗಳು, ಹಾಗೂ ಪ್ರಚಾರ/ಅಭಿವೃದ್ಧಿ[ಬದಲಾಯಿಸಿ]

ಟೇಕ್ವಾಂಡೋ ಶ್ರೇಯಾಂಕಗಳನ್ನು ಪ್ರಾತಿನಿಧಿಕವಾಗಿ "ಕಿರಿಯ" ಮತ್ತು "ಹಿರಿಯ," ಅಥವಾ "ವಿದ್ಯಾರ್ಥಿ" ಹಾಗೂ "ಬೋಧಕ," ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಕಿರಿಯ ವಿಭಾಗವು ಪ್ರಾತಿನಿಧಿಕವಾಗಿ ಕೊರಿಯನ್‌ ಹೆಸರು ಗೆಯುಪ್ ‌ 급 (ಗುಪ್‌ ಅಥವಾ ಕುಪ್‌‌ ಎಂದು ರೋಮನೀಕರಿಸಲಾಗಿದೆ ಕೂಡ)ನಿಂದ ಸೂಚಿಸಲ್ಪಡುವಂತೆ ಹತ್ತು ಶ್ರೇಯಾಂಕಗಳನ್ನು ಹೊಂದಿದೆ. ಕಿರಿಯ ಶ್ರೇಯಾಂಕಗಳನ್ನು ಸಾಧಾರಣವಾಗಿ ಶಾಲೆಗಳ ಮೇಲೆ ಆಧಾರಿತವಾಗಿ ವಿವಿಧ ವರ್ಣಗಳ ಬೆಲ್ಟ್‌ಗಳು/ಸೊಂಟಪಟ್ಟಿಗಳ ಮೂಲಕ ಗುರುತಿಸಲ್ಪಡುವುದರಿಂದ, ಈ ಶ್ರೇಯಾಂಕಗಳನ್ನು ಕೆಲವೊಮ್ಮೆ "ವರ್ಣಮಯ ಬೆಲ್ಟ್‌ಗಳು/ಸೊಂಟಪಟ್ಟಿಗಳೆಂದು" ಕರೆಯಲಾಗುತ್ತದೆ. ಗೆಯುಪ್‌ ಶ್ರೇಯಾಂಕವನ್ನು ವರ್ಣಮಯ ಬೆಲ್ಟ್‌ಗಳು/ಸೊಂಟಪಟ್ಟಿಗಳ ಬದಲಿಗೆ ಬೆಲ್ಟ್‌ಗಳು/ಸೊಂಟಪಟ್ಟಿಗಳ ಮೇಲಿನ ಪಟ್ಟೆಗಳ ಮೂಲಕ ಸೂಚಿಸಲಾಗುತ್ತದೆ. ವಿದ್ಯಾರ್ಥಿಗಳು ಹತ್ತನೇ ಗೆಯುಪ್‌ ನಿಂದ (ಅನೇಕವೇಳೆ ಶ್ವೇತ ಬೆಲ್ಟ್‌/ಸೊಂಟಪಟ್ಟಿಯಿಂದ ಸೂಚಿಸಲ್ಪಡುತ್ತದೆ) ಆರಂಭಿಸಿ ಮೊದಲ ಗೆಯುಪ್ ‌ನೆಡೆಗೆ (ಅನೇಕವೇಳೆ ಕಪ್ಪು ಪಟ್ಟೆಯುಳ್ಳ ಕೆಂಪು ಬೆಲ್ಟ್‌/ಸೊಂಟಪಟ್ಟಿಯಿಂದ ಸೂಚಿಸಲ್ಪಡುತ್ತದೆ) ಮುನ್ನಡೆಯುತ್ತಾರೆ.

ಹಿರಿಯ ವಿಭಾಗವು ಪ್ರಾತಿನಿಧಿಕವಾಗಿ ಒಂಬತ್ತು ಶ್ರೇಯಾಂಕಗಳನ್ನು ಹೊಂದಿರುತ್ತದೆ. ಈ ಶ್ರೇಯಾಂಕಗಳನ್ನು ಡಾನ್‌ 단 ಎಂದು ಕರೆಯಲಾಗುತ್ತದೆ, "ಬ್ಲಾಕ್‌ಬೆಲ್ಟ್‌ ಪುರಸ್ಕೃತರು" ಅಥವಾ "ದರ್ಜೆಗಳು" ("ತೃತೀಯ ಡಾನ್‌ " ಅಥವಾ "ತೃತೀಯ-ದರ್ಜೆಯ ಬ್ಲಾಕ್‌ಬೆಲ್ಟ್‌ ಪುರಸ್ಕೃತ" ಎಂಬಂತೆ) ಎಂಬ ಹೆಸರುಗಳಿಂದಲೂ ಕೂಡ ಕರೆಯಲಾಗುತ್ತದೆ. ಬ್ಲಾಕ್‌ಬೆಲ್ಟ್‌ ಪುರಸ್ಕೃತರು ಮೊದಲ ದರ್ಜೆಯಿಂದ ಆರಂಭಿಸಿ, ಎರಡನೆಯ, ಮೂರನೆಯ ಹೀಗೆ ಮುಂದುವರೆದುಕೊಂಡು ಮುನ್ನಡೆ ಸಾಧಿಸುತ್ತಾರೆ. ಬೆಲ್ಟ್‌/ಸೊಂಟಪಟ್ಟಿಯ ಮೇಲಿನ ಪಟ್ಟೆಗಳಿಂದ, ರೋಮನ್‌ ಅಂಕಿಗಳಿಂದ ಅಥವಾ ಇತರೆ ವಿಧಾನಗಳ ಮೂಲಕ ಅನೇಕ ವೇಳೆ ದರ್ಜೆಯನ್ನು ಸೂಚಿಸಿರಲಾಗುತ್ತದೆ; ಆದರೆ ಕೆಲವು ಸಂದರ್ಭಗಳಲ್ಲಿ ಬ್ಲಾಕ್‌ಬೆಲ್ಟ್‌ ಪುರಸ್ಕೃತರು ಶ್ರೇಯಾಂಕಗಳ ಹೊರತಾಗಿಯೂ ಸರಳವಾಗಿದ್ದು ಯಾವುದೇ ಧಾರಕಗಳನ್ನು ಹೊಂದಿರುವುದಿಲ್ಲ.

ಒಂದು ಶ್ರೇಯಾಂಕದಿಂದ ಮತ್ತೊಂದು ಶ್ರೇಯಾಂಕದೆಡೆಗೆ ಮುನ್ನಡೆಯಲು, ವಿದ್ಯಾರ್ಥಿಗಳು ಪ್ರಾತಿನಿಧಿಕವಾಗಿ ತೀರ್ಪುಗಾರರ ಮಂಡಲಿ ಅಥವಾ ತಮ್ಮ ಬೋಧಕರೆದುರು ಕಲೆಯ ವಿವಿಧ ಮಗ್ಗಲುಗಳಲ್ಲಿ ತಮ್ಮ ಪಾರಮ್ಯತೆಯನ್ನು ಪ್ರದರ್ಶಿಸುವ ಪರೀಕ್ಷೆಗಳಲ್ಲಿ ತೇರ್ಗಡೆಯಾಗಬೇಕಾಗಿರುತ್ತದೆ. ಶಾಲೆಯಿಂದ ಶಾಲೆಗೆ ಉತ್ತೀರ್ಣತಾ ಪರೀಕ್ಷೆಗಳು ವ್ಯತ್ಯಾಸಗೊಳ್ಳುತ್ತವೆ, ಆದರೆ ಅವು ನಿರ್ದಿಷ್ಟ ಅನುಕ್ರಮದಲ್ಲಿ ವಿವಿಧ ನಿಗದಿತ ತಂತ್ರಗಳನ್ನು ಒಟ್ಟುಗೂಡಿಸಿ ನಡೆಸುವ ಮಾದರಿ/ನಮೂನೆಗಳ ನಿರ್ವಹಣೆಗಳ ಪ್ರದರ್ಶನ; ಫಲಕಗಳ ಮುರಿಯುವಿಕೆ, ಶಕ್ತಿ ಹಾಗೂ ನಿಯಂತ್ರಣಗಳೊಂದಿಗೆ ತಂತ್ರಗಳನ್ನು ಬಳಸುವ ಸಾಮರ್ಥ್ಯವನ್ನು ಪ್ರದರ್ಶಿಸುವಿಕೆ; ಮುಷ್ಠಿಯುದ್ಧ ವರಸೆ ಹಾಗೂ ಸ್ವರಕ್ಷಣೆ, ತಂತ್ರಗಳ ಪ್ರಾಯೋಗಿಕ ಅನ್ವಯಗಳು ಹಾಗೂ ನಿಯಂತ್ರಣವನ್ನು ಪ್ರದರ್ಶಿಸುವಿಕೆ; ಪರಿಭಾಷೆ, ಕಲ್ಪನೆಗಳು, ಇತಿಹಾಸ ಹಾಗೂ ಇನ್ನಿತರ ವಿಚಾರಗಳ ಮೇಲಿನ ಪ್ರಶ್ನೆಗಳ ಉತ್ತರಿಸುವಿಕೆ, ಕಲೆಯ ಬಗೆಗಿನ ಜ್ಞಾನ ಹಾಗೂ ಗ್ರಹಿಕೆಯನ್ನು ಪ್ರದರ್ಶಿಸುವಿಕೆ ಇವೆಲ್ಲವನ್ನೂ ಒಳಗೊಂಡಿರಬಹುದು. ಉನ್ನತ ಡಾನ್‌ ಪರೀಕ್ಷೆಗಳಿಗೆ, ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಯನ್ನು ಎದುರಿಸುವುದರೊಂದಿಗೆ ಕೆಲವೊಮ್ಮೆ ಲಿಖಿತ ಪರೀಕ್ಷೆಗಳನ್ನು ತೆಗೆದುಕೊಳ್ಳುವುದು ಅಥವಾ ಸಂಶೋಧನಾ ಪ್ರಬಂಧಗಳನ್ನು ಸಲ್ಲಿಸುವುದು ಅಗತ್ಯವಾಗಿರುತ್ತದೆ.

ಒಂದು ಗೆಯುಪ್‌ ನಿಂದ ಮತ್ತೊಂದಕ್ಕೆ ತೇರ್ಗಡೆಗೊಳ್ಳುವಿಕೆಯು ಕೆಲ ಶಾಲೆಗಳಲ್ಲಿ ಯುಕ್ತ ವೇಗದಲ್ಲಿಯೇ ಮುಂದುವರೆಯಬಹುದು, ಏಕೆಂದರೆ ಆ ಶಾಲೆಗಳು ಅನೇಕವೇಳೆ ಗೆಯುಪ್‌ ಉತ್ತೀರ್ಣತೆಗಳನ್ನು ಪ್ರತಿ ಎರಡು, ಮೂರು ಅಥವಾ ನಾಲ್ಕು ತಿಂಗಳುಗಳಿಗೆ ಹೊಂದಲು ಅವಕಾಶ ನೀಡುತ್ತವೆ. ಗೆಯುಪ್‌ ಶ್ರೇಯಾಂಕಗಳ ವಿದ್ಯಾರ್ಥಿಗಳು ಮೊದಲಿಗೆ ತೀರ ಪ್ರಾಥಮಿಕ ತಂತ್ರಗಳನ್ನು ಕಲಿತು, ನಂತರ ಹೆಚ್ಚು ಪರಿಣತಿಯ ತಂತ್ರಗಳೆಡೆಗೆ ಮುಂದುವರೆಯುತ್ತಾ ಮೊದಲನೇ ಡಾನ್‌ ದೆಡೆಗೆ ಸಾಗುತ್ತಾರೆ. ಪರೀಕ್ಷೆಗಳ ನಡುವೆ ನಿಗದಿತ ವಿರಾಮ ಅಗತ್ಯವಿರದಿರುವ ಹೊಸದಾದ ಹೆಚ್ಚು ಸಮಕಾಲೀನವಾದ ಶಾಲೆಗಳಿಗಿಂತ ಹಳೆಯ ಹಾಗೂ ಹೆಚ್ಚು ಸಾಂಪ್ರದಾಯಿಕ ಶಾಲೆಗಳಲ್ಲಿ ಅನೇಕವು ಸಾಧಾರಣವಾಗಿ ವಿದ್ಯಾರ್ಥಿಗಳಿಗೆ ಉನ್ನತ ಶ್ರೇಯಾಂಕಗಳನ್ನು ಪಡೆಯುವ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅನುಮತಿ ನೀಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ.

ಇದಕ್ಕೆ ತದ್ವಿರುದ್ಧವಾಗಿ ಒಂದು ಡಾನ್‌ ನಿಂದ ಮತ್ತೊಂದಕ್ಕೆ ಪದೋನ್ನತಿ ಹೊಂದಲು ಅನೇಕ ವರ್ಷಗಳೇ ತೆಗೆದುಕೊಳ್ಳಬಹುದು. ಒಂದು ಶ್ರೇಯಾಂಕದಿಂದ ಮತ್ತೊಂದಕ್ಕೆ ಪ್ರಸಕ್ತ ಶ್ರೇಯಾಂಕಕ್ಕೆ ಸಮನಾದ ವರ್ಷಗಳ ನಂತರವಷ್ಟೇ ಓರ್ವ ಬ್ಲಾಕ್‌ಬೆಲ್ಟ್‌ ಪುರಸ್ಕೃತ ಮುನ್ನಡೆ ಪಡೆಯಬಹುದು ಎಂಬುದು ಸಾರ್ವತ್ರಿಕ ನಿಯಮ. ಉದಾಹರಣೆಗೆ, ಆಗತಾನೇ ತೃತೀಯ ದರ್ಜೆ ಬ್ಲಾಕ್‌ಬೆಲ್ಟ್‌ ಪುರಸ್ಕೃತ ಓರ್ವ ವ್ಯಕ್ತಿ ನಾಲ್ಕನೇ ದರ್ಜೆಗೆ ತೇರ್ಗಡೆಹೊಂದುವ ಅವಕಾಶ ಹೊಂದಲು ಮೂರು ವರ್ಷಗಳು ಕಳೆಯುವವರೆಗೆ ಅವಕಾಶವಿರುವುದಿಲ್ಲ. ಇದರೊಂದಿಗೆ ಕೆಲ ಸಂಸ್ಥೆಗಳು ಡಾನ್ ‌ ಉತ್ತೀರ್ಣತೆಗಳಿಗೆ ಸಂಬಂಧಿಸಿದಂತೆ ವಯಸ್ಸಿನ ಮಿತಿಗಳನ್ನು ಕೂಡಾ ಹೊಂದಿದ್ದು, ಯುವ ವಿದ್ಯಾರ್ಥಿಗಳಿಗೆ ಅವರು ನಿಗದಿತ ವಯಸ್ಸು ತಲುಪುವವರೆಗೆ ಪಮ್‌ 품 (ಕಿರಿಯ ಬ್ಲಾಕ್‌ಬೆಲ್ಟ್‌ ಪುರಸ್ಕೃತ) ಶ್ರೇಯಾಂಕಗಳನ್ನು ಕೊಡುತ್ತವೆಯೇ ಹೊರತು ಡಾನ್ ‌ ಶ್ರೇಯಾಂಕಗಳನ್ನಲ್ಲ.

ಬ್ಲಾಕ್‌ಬೆಲ್ಟ್‌ ಪುರಸ್ಕೃತ ಶ್ರೇಯಾಂಕಗಳು ತಮ್ಮನ್ನು "ನಿಪುಣ/ಪರಿಣತ" ಹಾಗೂ "ಬೋಧಕ"ದಂತಹಾ ಕೆಲ ಬಿರುದುಗಳೊಂದಿಗೆ ಗುರುತಿಸಿಕೊಳ್ಳುವುದೂ ಉಂಟು, ಆದರೆ ಟೇಕ್ವಾಂಡೋ ಸಂಸ್ಥೆಗಳು ಶ್ರೇಯಾಂಕಗಳು ಹಾಗೂ ಬಿರುದುಗಳಿಗೆ ಸಂಬಂಧಿಸಿದ ನಿಯಮಗಳು ಹಾಗೂ ಮಾನಕಗಳಿಗೆ ಸಂಬಂಧಿಸಿದಂತೆ ಪರಸ್ಪರ ವ್ಯಾಪಕವಾದ ವ್ಯತ್ಯಾಸಗಳನ್ನು ಹೊಂದಿರುತ್ತವೆ. ಒಂದು ಸಂಸ್ಥೆಯಲ್ಲಿ ಮಾನ್ಯತೆ ಹೊಂದಿದ ವಿಚಾರವು ಮತ್ತೊಂದರಲ್ಲಿ ಮಾನ್ಯತಾರಹಿತವಾಗಿರಬಹುದು ಇದು ಅನೇಕ ಕದನ ಕಲಾ ಪದ್ಧತಿಗಳಿಗೂ ಅನ್ವಯಿಸುತ್ತದೆ. ಉದಾಹರಣೆಗೆ, ಮೂರು ವರ್ಷಗಳ ತರಬೇತಿಯೊಂದಿಗೆ 1ನೇ ಡಾನ್‌ ಶ್ರೇಯಾಂಕವನ್ನು ಹೊಂದುವುದು ಒಂದು ಸಂಸ್ಥೆಯ ವೈಶಿಷ್ಟ್ಯತೆಯಾಗಿರಬಹುದು, ಆದರೆ ಮತ್ತೊಂದು ಸಂಸ್ಥೆಯಲ್ಲಿ ಅದು ವೇಗದ ಗಳಿಕೆಯಾಗಿರಬಹುದು, ಇತರೆ ಶ್ರೇಯಾಂಕಗಳಿಗೂ ಹೀಗೆಯೇ ಇದು ಅನ್ವಯಿಸುತ್ತದೆ. ಅದೇ ರೀತಿ, ನಿಗದಿತ ಡಾನ್‌ ಶ್ರೇಯಾಂಕಕ್ಕೆ ಒಂದು ಸಂಸ್ಥೆಯಲ್ಲಿ ನೀಡಲಾಗುವ ಬಿರುದು ಮತ್ತೊಂದು ಸಂಸ್ಥೆಯಲ್ಲಿ ಅದೇ ಡಾನ್‌ ಶ್ರೇಯಾಂಕದ ಜೊತೆಗೆ ನೀಡುವ ಬಿರುದಿಗೆ ಸಮಾನವಾಗಿರಬೇಕೆಂದೇನಿಲ್ಲ. ಉದಾಹರಣೆಗೆ, ಇಂಟರ್‌ನ್ಯಾಷನಲ್‌ ಟೇಕ್ವಾನ್‌-ಡೋ ಫೆಡರೇಷನ್‌ನಲ್ಲಿ, 1ರಿಂದ 3ನೇ ಡಾನ್‌ ಶ್ರೇಯಾಂಕಗಳನ್ನು ಹೊಂದಿರುವ ಬೋಧಕರನ್ನು ಬೂಸಾಬಮ್‌ (ಸಹಾಯಕ ಬೋಧಕ)ರೆಂದು, 4ರಿಂದ 6ನೇ ಡಾನ್ ‌ ಶ್ರೇಯಾಂಕಗಳನ್ನು ಹೊಂದಿದವರನ್ನು ಸಾಬಮ್‌ (ಬೋಧಕ)ರೆಂದು, 7ರಿಂದ 8ನೇ ಡಾನ್‌ ಶ್ರೇಯಾಂಕಗಳನ್ನು ಹೊಂದಿದವರನ್ನು ಸಹ್ಯುನ್‌ (ನಿಪುಣ/ಪರಿಣತ)ಎಂದು, ಹಾಗೂ 9ನೇ ಡಾನ್ ‌ ಶ್ರೇಯಾಂಕ ಹೊಂದಿದವರನ್ನು ಸೇಸಿಯಾಂಗ್‌ (ಮಹಾ ನಿಪುಣ/ಪರಿಣತ) ಎಂದೂ ಕರೆಯಲಾಗುತ್ತದೆ.[೪೩] ಈ ಪದ್ಧತಿಯು ಇತರೆ ಟೇಕ್ವಾಂಡೋ ಸಂಸ್ಥೆಗಳಿಗೆ ಅಗತ್ಯವಾಗಿ ಅನ್ವಯಿಸಲೇಬೇಕೆಂದೇನಿಲ್ಲ.

ಸಿದ್ಧಾಂತ[ಬದಲಾಯಿಸಿ]

ಟೇಕ್ವಾಂಡೋ ವಿವಿಧ ಪ್ರತ್ಯೇಕ ಕ್ವಾನ್‌ ಗಳ ಆಶ್ರಯದಲ್ಲಿ ಅಭಿವೃದ್ಧಿ ಹೊಂದಿದ ಕಾರಣ, ಟೇಕ್ವಾಂಡೋ ಸಿದ್ಧಾಂತದ ಅನೇಕ ವಿಭಿನ್ನ ಅಭಿವ್ಯಕ್ತಿಗಳಿವೆ. ಉದಾಹರಣೆಗೆ, ITFನ ಸಿದ್ಧಾಂತಗಳು ITF ವಿದ್ಯಾರ್ಥಿ ಶಪಥ/ಪ್ರತಿಜ್ಞೆಯ ಕೊನೆಯ ಎರಡು ಪದಗುಚ್ಛಗಳಲ್ಲಿ ಸಾರಾಂಶವಾಗಿ ಅಡಕವಾಗಿವೆ : "ನಾನು ಓರ್ವ ನ್ಯಾಯ ಹಾಗೂ ಸ್ವಾತಂತ್ರ್ಯದ ಚಾಂಪಿಯನ್‌/ಸಮರ್ಥಕನಾಗಿರುತ್ತೇನೆ" ಹಾಗೂ "ನಾನು ಸುಧಾರಿತ ಹಾಗೂ ಶಾಂತಿಮಯ ವಿಶ್ವವನ್ನು ಕಟ್ಟುತ್ತೇನೆ."[೪೪] ಪರ್ಯಾಯವಾಗಿ, ಹಾನ್‌/ಹ್ಯಾನ್‌ ಸಿದ್ಧಾಂತವಾದ ಕುಕ್ಕಿವಾನ್‌ ಸಿದ್ಧಾಂತವು, ಸಮ್‌ಜೇ ಪದವು ಛೆ/ಚೆಯೋನ್‌ (천, ಅಂತರಿಕ್ಷ ಅಥವಾ ಸ್ವರ್ಗ), ಜಿ (지, ಭೂಮಿ), ಹಾಗೂ ಇನ್‌ (인, ಓರ್ವ ಮನುಷ್ಯ ಅಥವಾ ಒಬ್ಬ ವ್ಯಕ್ತಿ)ಗಳನ್ನು ಸೂಚಿಸುವಂತೆ (삼제, ಮೂರು ಅಂಶಗಳು), ಈಯಮ್ ‌ (음, ಯಿನ್‌ ; ನಕಾರಾತ್ಮಕ ಅಥವಾ ಅಂಧಕಾರತ್ವ) ಹಾಗೂ ಯಾಂಗ್‌ (양, ಸಕಾರಾತ್ಮಕ ಅಥವಾ ಉಜ್ವಲವಾದ) ಸಮ್ಜೆ ನ ಪಾಶ್ಚಿಮಾತ್ಯ ತತ್ವಗಳನ್ನು ಹೊಂದಿದೆ. ಈ ಕಲ್ಪನೆಗಳ ಮೂಲಗಳು ಪಶ್ಚಿಮ ಏಷ್ಯಾದ ಸಿದ್ಧಾಂತಗಳ/ತತ್ವಶಾಸ್ತ್ರದ ಪ್ರಮುಖ ಮೂಲಕೃತಿಗಳಲ್ಲಿ ಒಂದಾಗಿರುವ ಚೀನೀ ಮಹಾಗ್ರಂಥ "ಬುಕ್‌ ಆಫ್‌ ಚೇಂಜಸ್‌ " ಆಗಿದೆ.[೪೫]

ಸ್ಪರ್ಧೆ[ಬದಲಾಯಿಸಿ]

ಟೇಕ್ವಾಂಡೋ ಪೈಪೋಟಿ/ಸ್ಪರ್ಧೆಗಳು ಪ್ರಾತಿನಿಧಿಕವಾಗಿ ಮುಷ್ಠಿಯುದ್ಧ ವರಸೆ, ಒಡೆಯುವಿಕೆ/ಮುರಿಯುವಿಕೆ, ಮಾದರಿ/ನಮೂನೆಗಳು, ಹಾಗೂ ಸ್ವರಕ್ಷಣಾ ತಂತ್ರಗಳನ್ನು (ಹೊಸಿನ್‌ಸುಲ್ ‌) ಒಳಗೊಂಡಿರುತ್ತವೆ. ಒಲಿಂಪಿಕ್‌ ಟೇಕ್ವಾಂಡೋ ಪೈಪೋಟಿ/ಸ್ಪರ್ಧೆಗಳಲ್ಲಿ, ಆದಾಗ್ಯೂ, ಕೇವಲ ಮುಷ್ಠಿಯುದ್ಧ ವರಸೆಯಲ್ಲಿ ( WTF ಪೈಪೋಟಿ/ಸ್ಪರ್ಧೆ ನಿಯಮಗಳೊಂದಿಗೆ) ಮಾತ್ರವೇ ಸ್ಪರ್ಧಿಸಲಾಗುತ್ತದೆ.[೪೬]

ವರ್ಲ್ಡ್‌ ಟೇಕ್ವಾಂಡೋ ಫೆಡರೇಷನ್‌[ಬದಲಾಯಿಸಿ]

ಅಧಿಕೃತ WTF ಮುಂಡದ ರಕ್ಷಕ (ಹೊಗು/ಹೋಗು), ಮುಂದೋಳು ರಕ್ಷಕಗಳು ಹಾಗೂ ಮೊಣಕಾಲು ರಕ್ಷಕಗಳು

ವರ್ಲ್ಡ್‌ ಟೇಕ್ವಾಂಡೋ ಫೆಡರೇಷನ್‌ ಹಾಗೂ ಒಲಿಂಪಿಕ್‌ ನಿಯಮಗಳಡಿಯಲ್ಲಿ, ಮುಷ್ಠಿಯುದ್ಧ ವರಸೆ ಎಂಬುದು 10 ಚದರ ಮೀಟರ್‌ಗಳಷ್ಟು ವಿಸ್ತೀರ್ಣದ ಅಳತೆಯ ಪ್ರದೇಶದಲ್ಲಿ ಇಬ್ಬರು ಸ್ಪರ್ಧಿಗಳ ನಡುವೆ ನಡೆಯುವ ಸಂಪೂರ್ಣ-ಸಂಪರ್ಕಸಹಿತ ಕ್ರೀಡೆಯಾಗಿದೆ. ಪ್ರತಿ ಪಂದ್ಯವು ಸುತ್ತುಗಳ ನಡುವೆ ಒಂದು ನಿಮಿಷದ ಬಿಡುವಿನ ಜೊತೆಗೆ ಮೂರು ಸಂಪರ್ಕಸಹಿತದ ಉಪ-ಸತತ/ಅವಿಚ್ಛಿನ್ನ ಸುತ್ತುಗಳನ್ನು ಹೊಂದಿರುತ್ತದೆ. ಇದರಲ್ಲಿ ವಯಸ್ಸಿನ ಆಧಾರದಲ್ಲಿ ಎರಡು ಪ್ರಭೇದಗಳಿವೆ: 14–17 ವರ್ಷಗಳು ಹಾಗೂ 18 ವರ್ಷಗಳು ಹಾಗೂ ಹಿರಿಯರು.

ಸಕ್ರಮ ಅಂಕಗಳಿಕಾ ಕ್ಷೇತ್ರಗಳಾದ ಪರವಾನಗಿಯಿರುವ, ನಿಖರ, ಹಾಗೂ ಶಕ್ತಿಯುತ ತಂತ್ರಗಳಿಗೆ ಅಂಕಗಳನ್ನು ನೀಡಲಾಗುತ್ತದೆ. ಲಘು ಸಂಪರ್ಕವು ಯಾವುದೇ ಅಂಕಗಳನ್ನು ಗಳಿಸುವುದಿಲ್ಲ. ಬಹಳಷ್ಟು ಪೈಪೋಟಿ/ಸ್ಪರ್ಧೆಗಳಲ್ಲಿ, ವಿದ್ಯುನ್ಮಾನ ಅಂಕತಾಳೆಗಳನ್ನು ಬಳಸುವ ನಾಲ್ಕು ಮೂಲೆಗಳಲ್ಲಿ ಕುಳಿತಿರುವ ತೀರ್ಪುಗಾರರು ಅಂಕಗಳನ್ನು ನೀಡುತ್ತಾರೆ. ಆದಾಗ್ಯೂ ಅನೇಕ A-ವರ್ಗದ ಪಂದ್ಯಾವಳಿಗಳಲ್ಲಿ, ಈಗ ಪರೀಕ್ಷಣಾ ವಿದ್ಯುನ್ಮಾನ ಅಂಕನೀಡಿಕೆ ಉಪಕರಣಗಳನ್ನು ಸ್ಪರ್ಧಿಗಳ ಶರೀರ ಸಂರಕ್ಷಕಗಳಲ್ಲೇ ಅಳವಡಿಸಿರಲಾಗುತ್ತದೆ. ಇದರಿಂದಾಗಿ ಮೂಲೆಯಲ್ಲಿ ಕುಳಿತಿರುವ ತೀರ್ಪುಗಾರರು ಕೇವಲ ತಲೆಗೆ ಮಾಡುವ ದಾಳಿಗಳನ್ನು ಮಾತ್ರವೇ ಅಂಕ ನೀಡುವಿಕೆಗೆ ಸೀಮಿತಗೊಳಿಸುತ್ತದೆ. ತೀರ್ಪುಗಾರರಿತ್ತ ತೀರ್ಪುಗಳಲ್ಲಿನ ಇತ್ತೀಚಿನ ವಿವಾದಗಳು ಈ ಪ್ರಕ್ರಿಯೆಗಳಿಗೆ ಪ್ರಚೋದನೆ ನೀಡಿದೆ,[ಸೂಕ್ತ ಉಲ್ಲೇಖನ ಬೇಕು] ಆದರೆ ಈ ತಂತ್ರಜ್ಞಾನವು ಈಗಲೂ ಸಾರ್ವತ್ರಿಕವಾಗಿ ಒಲವನ್ನು ಪಡೆದಿಲ್ಲ. 2009ನೇ ಇಸವಿಯಿಂದ, ಪ್ರತಿಸ್ಪರ್ಧಿಯ ಹೊಗು/ಹೋಗು ವಿಗೆ ಸ್ಪರ್ಶಿಸುವ (ಅಂಕಗಳಿಕಾ ಗುರಿಯಾಗಿ ವರ್ತಿಸುವ ದೇಹಸಂರಕ್ಷಕ) ಒಂದು ಒದೆತ ಅಥವಾ ಗುದ್ದು ಒಂದು ಅಂಕ ಗಳಿಸುತ್ತದೆ; ಹೊಗು/ಹೋಗು ವಿಗೆ ಬೀಳುವ ಒದೆತವು ಅದಕ್ಕೆ ಗುರಿಯಾದ ಆಕ್ರಮಣಕಾರಿ ಸ್ಫರ್ಧಿಯೆಡೆಗೆ ಬೆನ್ನು ಮಾಡಿದ ಸ್ಪರ್ಧಿಯ ದೇಹವನ್ನು ಸಂಪೂರ್ಣವಾಗಿ ತಿರುಗಿಸುವ ತಂತ್ರದಿಂದ ಕೂಡಿದ್ದರೆ ಹೆಚ್ಚುವರಿ ಅಂಕವೊಂದನ್ನು ನೀಡಲಾಗುತ್ತದೆ; ತಲೆಗೆ ನೀಡುವ ಒದೆತವು ಮೂರು ಅಂಕಗಳನ್ನು ಗಳಿಸುತ್ತದೆ. ಪ್ರತಿಸ್ಪರ್ಧಿಯನ್ನು ಕೆಳಕ್ಕೆ ಕೆಡವುವ ಸಕ್ರಮ ಆಕ್ರಮಣಗಳು ಒಂದು ಹೆಚ್ಚುವರಿ ಅಂಕವನ್ನು ಗಳಿಸುತ್ತವೆ. ತಲೆಗೆ ಗುದ್ದುವಿಕೆಯ ಪ್ರಹಾರ ನೀಡುವಿಕೆಗೆ ಅನುಮತಿ ಇಲ್ಲ. ಅಂಕಗಳಿಕಾ ತಂತ್ರದಿಂದ ಓರ್ವ ಸ್ಪರ್ಧಿಯನ್ನು ಕೆಳಗೆ ಕೆಡವಿದ್ದು ರೆಫರೀಯು/ತೀರ್ಪುಗಾರರು ಎಣಿಕೆ ಮಾಡಲು ತೊಡಗಿದರೆ ದಾಳಿ ಮಾಡಿದ ಸ್ಪರ್ಧಿಗೆ ಹೆಚ್ಚುವರಿ ಅಂಕಗಳು ಸಿಗುತ್ತವೆ.

ಮೂರು ಸುತ್ತುಗಳ ಕೊನೆಯಲ್ಲಿ, ಅತಿ ಹೆಚ್ಚು ಅಂಕ ಗಳಿಸಿದ ಸ್ಪರ್ಧಿಯು ವಿಜೇತನಾಗುತ್ತಾನೆ. ಮೂರು ಸುತ್ತುಗಳ ಕೊನೆಯಲ್ಲಿ ಸರಿಸಮತೆ ಸಾಧಿತವಾಗಿದ್ದರೆ, ಒಂದು ನಿಮಿಷದ ವಿರಾಮದ ನಂತರ ನಾಲ್ಕನೇ "ದಿಢೀರ್‌ ಮರಣ/ಸಡನ್‌ ಡೆತ್‌" ಹೆಚ್ಚುವರಿ ಸಮಯದ ಸುತ್ತನ್ನು ವಿಜೇತರನ್ನು ನಿರ್ಣಯಿಸಲು ಏರ್ಪಡಿಸಲಾಗುತ್ತದೆ.

2008ರವರೆಗೆ, ಓರ್ವ ಸ್ಪರ್ಧಿಯು ಮತ್ತೋರ್ವ ಸ್ಪರ್ಧಿಯ ವಿರುದ್ಧ 7-ಅಂಕಗಳ ಮುನ್ನಡೆ ಸಾಧಿಸಿದ್ದರೆ, ಅಥವಾ ಓರ್ವ ಸ್ಪರ್ಧಿ ಒಟ್ಟಾರೆ 12 ಅಂಕಗಳನ್ನು ಗಳಿಸಿದ್ದರೆ, ಆ ಸ್ಪರ್ಧಿಯನ್ನು ಆ ತತ್‌ಕ್ಷಣವೇ ವಿಜಯಿಯಾಗಿ ಘೋಷಿಸಲಾಗುತ್ತಿತ್ತು ಹಾಗೂ ಪಂದ್ಯವನ್ನು ಕೊನೆಗೊಳಿಸಲಾಗುತ್ತಿತ್ತು. WTF ಸಂಸ್ಥೆಯು ಈ ನಿಯಮಗಳನ್ನು 2009ನೇ ಇಸವಿಯ ಆರಂಭದಿಂದ ರದ್ದುಗೊಳಿಸಿತು.[೪೭]

ಹೊಡೆತಗಳು ಪೂರ್ಣ ರಭಸದಿಂದಿದ್ದು; WTF ಮುಷ್ಠಿಯುದ್ಧ ವರಸೆ ಪೈಪೋಟಿ/ಸ್ಪರ್ಧೆಯಲ್ಲಿ ನಾಕ್‌ಔಟ್‌ಗಳಿಗೆ ಅನುಮತಿ ನೀಡಿರುವುದರಿಂದ ಓರ್ವ ಸ್ಪರ್ಧಿಯನ್ನು ಸಕ್ರಮ ಆಕ್ರಮಣದ ಮೂಲಕ ಕೆಡವಲ್ಪಟ್ಟರೆ, ಆಕ್ರಮಣಕಾರಿ ಸ್ಪರ್ಧಿಯನ್ನು ವಿಜಯಿಯೆಂದು ಘೋಷಿಸಲಾಗುತ್ತದೆ. ಆದಾಗ್ಯೂ ಅವರು ಖಡಾಖಂಡಿತವಾಗಿ ಪಾಲಿಸಲೇಬೇಕಾದ ಕೆಲವು ನಿಯಮಗಳಿವೆ, ಉದಾಹರಣೆಗೆ ಹೆಸರಿಂದ ಕರೆಯುವುದು, ತಲೆಗೆ ಗುದ್ದುವಿಕೆ/ಹೊಡೆತ ನೀಡುವುದು, ಎಳೆದಾಡುವುದು ಹಾಗೂ ಇನ್ನಷ್ಟು ಚಟುವಟಿಕೆಗಳನ್ನು ಕೆಲ ನಿಯಮಗಳು ಪ್ರತಿಬಂಧಿಸುತ್ತವೆ.[ಸೂಕ್ತ ಉಲ್ಲೇಖನ ಬೇಕು]

ಇಂಟರ್‌ನ್ಯಾಷನಲ್‌ ಟೇಕ್ವಾನ್‌-ಡೋ ಫೆಡರೇಷನ್‌[ಬದಲಾಯಿಸಿ]

ಚಿತ್ರ:ITF TaeKwon-Do Sparring Gear.JPG
ITF ಮುಷ್ಠಿಯುದ್ಧ ವರಸೆ ಉಪಕರಣ/ಸಲಕರಣೆಗಳ ಸಾಧಾರಣ ಶೈಲಿಗಳು

ಇಂಟರ್‌ನ್ಯಾಷನಲ್‌ ಟೇಕ್ವಾನ್‌-ಡೋ ಫೆಡರೇಷನ್‌'ನ ಮುಷ್ಠಿಯುದ್ಧ ವರಸೆಯ ನಿಯಮಗಳು WTF'ನ ನಿಯಮಗಳಿಗೆ ಹೋಲುತ್ತವಾದರೂ, ಆದರೆ ಅನೇಕ ಮಗ್ಗಲುಗಳಲ್ಲಿ ವಿಭಿನ್ನವಾಗಿರುತ್ತವೆ. ತಲೆಗೆ ಕೈಯಿಂದ ಹೊಡೆಯುವುದನ್ನು ಅನುಮತಿಸಲಾಗುತ್ತಿರುತ್ತವೆ; ದೇಹಕ್ಕೆ ಹೊಡೆಯುವ ಒದೆತಗಳು ಎರಡು ಅಂಕಗಳನ್ನು ನೀಡಿದರೆ ತಲೆಗೆ ಹೊಡೆಯುವ ಹೊಡೆತಗಳು ಮೂರು ಅಂಕಗಳನ್ನು ನೀಡುತ್ತವೆ; ಪೈಪೋಟಿ/ಸ್ಪರ್ಧೆಯ ಪ್ರದೇಶವು ಸ್ವಲ್ಪ ಚಿಕ್ಕದಾಗಿರುತ್ತದೆ (10 ಚದರ ಮೀಟರ್‌ಗಳ ಬದಲು 9 ಚದರ ಮೀಟರ್‌ಗಳು); ಹಾಗೂ ಸ್ಪರ್ಧಿಗಳು (ಅನುಮೋದಿತ ಪಾದ ಹಾಗೂ ಹಸ್ತರಕ್ಷಣಾ ಪರಿಕರಗಳನ್ನು ಧರಿಸಬೇಕೆಂದಿದ್ದರೂ) ಹೊಗು/ಹೋಗು ವನ್ನು ಧರಿಸುವುದಿಲ್ಲ. ಸತತ ಅಂಕಗಳಿಕಾ ವ್ಯವಸ್ಥೆಯನ್ನು ಒಂದು ತಂತ್ರದ ಅಂಕಗಳಿಕೆಯ ನಂತರ ಸ್ಪರ್ಧಿಗಳಿಗೆ ಮುಂದುವರೆಸುವ ಅನುಮತಿ ಇರುವ ITF ಪೈಪೋಟಿ/ಸ್ಪರ್ಧೆಯಲ್ಲಿ ಬಳಸಿಕೊಳ್ಳಲಾಗುತ್ತದೆ. ಪೂರ್ಣಬಲದ ಹೊಡೆತಗಳಿಗೆ ಅನುಮತಿಯಿರುವುದಿಲ್ಲ (ಹಾಗೂ ಅಂತಹಾ ಚರ್ಯೆಯು ಅಂಕಗಳ ಕಳೆಯುವಿಕೆಗೆ ಕಾರಣವಾಗುತ್ತದೆ), ಹಾಗೂ ನಾಕ್‌ಔಟ್‌ಗಳಿಗೆ ಅವಕಾಶವಿರುವುದಿಲ್ಲ. ಎರಡು ನಿಮಿಷಗಳ ನಂತರ (ಅಥವಾ ಇತರೆ ನಿಗದಿತ ಸಮಯದ ನಂತರ) ತಂತ್ರಗಳಿಂದ ಹೆಚ್ಚು ಅಂಕಗಳನ್ನು ಗಳಿಸಿದ ಸ್ಪರ್ಧಿಯು ಗೆಲ್ಲುತ್ತಾನೆ.[೪೮]

ITF ಪೈಪೋಟಿ/ಸ್ಪರ್ಧೆಗಳು ಮಾದರಿ/ನಮೂನೆಗಳು, ಒಡೆಯುವಿಕೆ/ಮುರಿಯುವಿಕೆ ಹಾಗೂ 'ವಿಶೇಷ ತಂತ್ರಗಳ'ನ್ನೂ ಒಳಗೊಂಡಿರುತ್ತವೆ (ಇದರಲ್ಲಿ ಸ್ಪರ್ಧಿಗಳು ನಿರ್ದೇಶಿತ ಫಲಕ ಒಡೆಯುವಿಕೆಯನ್ನು ಹೆಚ್ಚಿನ ಎತ್ತರದಲ್ಲಿ ಸಾಧಿಸುತ್ತಾರೆ).[ಸೂಕ್ತ ಉಲ್ಲೇಖನ ಬೇಕು]

ಇತರೆ ಸಂಸ್ಥೆಗಳು[ಬದಲಾಯಿಸಿ]

US ಅಮೆಚೂರ್‌ ಅಥ್ಲೆಟಿಕ್‌ ಯೂನಿಯನ್‌ (AAU) ಪೈಪೋಟಿ/ಸ್ಪರ್ಧೆಗಳೂ ಕೂಡಾ ವಿವಿಧ ಶೈಲಿಗಳ ಮೆತ್ತೆ ಹಾಗೂ ಸಜ್ಜುಗೆ/ಸಲಕರಣೆ/ಉಡಿಗೆತೊಡಿಗೆಗಳನ್ನು ಹೊರತುಪಡಿಸಿದರೆ ಬಹಳಷ್ಟು ಹೋಲಿಕೆಯನ್ನು ಹೊಂದಿರುತ್ತವೆ. ಒಲಿಂಪಿಕ್‌ ಚಿಹ್ನೆ ಹೊಂದಿರುವ ಹಾಗೂ ತನ್ನ ಮೇಲೆ WTF ಲೋಗೋ ಹೊಂದಿರದ ಯಾವುದೇ ಸಜ್ಜುಗೆ/ಸಲಕರಣೆ/ಉಡಿಗೆತೊಡಿಗೆಯು ಅಂಗೀಕೃತಗೊಳ್ಳುತ್ತದೆ.[ಸೂಕ್ತ ಉಲ್ಲೇಖನ ಬೇಕು]

WTF ಹಾಗೂ ITF ಪಂದ್ಯಾವಳಿಗಳನ್ನು ಹೊರತುಪಡಿಸಿ, ಪ್ರಮುಖ ಟೇಕ್ವಾಂಡೋ ಪೈಪೋಟಿ/ಸ್ಪರ್ಧೆಗಳೆಂದರೆ:

ಸುರಕ್ಷತೆ[ಬದಲಾಯಿಸಿ]

ಟೇಕ್ವಾಂಡೋ ಸ್ಪರ್ಧಿಗಳು ಗಣನೀಯ ಪ್ರಮಾಣದ ಗಾಯಗೊಳ್ಳುವ ಅಪಾಯವನ್ನು ಹೊಂದಿದ್ದರೂ, ಬಹಳಷ್ಟು ಗಾಯಗೊಳ್ಳುವಿಕೆಗಳು ಅಲ್ಪಮಟ್ಟದ್ದಾಗಿರುತ್ತವೆ.[ಸೂಕ್ತ ಉಲ್ಲೇಖನ ಬೇಕು] ಕಾಲು ಅತಿ ಹೆಚ್ಚು ಗಾಯಗೊಳ್ಳುವ ಸಾಧ್ಯತೆ ಇರುವ ಪ್ರದೇಶವಾಗಿದ್ದು ಜಜ್ಜುವಿಕೆಯು ಅತಿ ಸಾಮಾನ್ಯ ಗಾಯಗೊಳ್ಳುವಿಕೆಯ ವಿಧವಾಗಿದೆ. 2008ರ ದ್ವಿತೀಯ/ಪಶ್ಚಾತ್‌-ವಿಶ್ಲೇಷಣೆಯ ವರದಿಯ ಪ್ರಕಾರ ಸರಿಸುಮಾರು ಈಡಾದ ಪ್ರತಿ ಪೈಪೋಟಿ/ಸ್ಪರ್ಧೆಗೆ ಅಂದಾಜು 8%ರಷ್ಟು ಸ್ಪರ್ಧಿಗಳು ಗಾಯಗೊಂಡಿದ್ದರು; ವಯಸ್ಸು, ಲಿಂಗ, ಹಾಗೂ ಕ್ರೀಡೆಯ ಹಂತಗಳು ಗಾಯಗೊಳ್ಳುವಿಕೆಯ ದರದಲ್ಲಿ ಗಮನಾರ್ಹ ಪಾತ್ರವನ್ನೂ ಹೊಂದಿರುವುದಿಲ್ಲ.[೪೯]

ಮಿಶ್ರ ಕದನ ಕಲೆಗಳು[ಬದಲಾಯಿಸಿ]

ಬಾಸ್‌ ರಟ್ಟೆನ್‌, ಆಂಡರ್‌ಸನ್‌ ಸಿಲ್ವಾ, ಜೇಮ್ಸ್‌ ವಿಲ್ಕ್‌ಸ್, ಬರ್ನಾಡ್‌ ಆಕಾಹ್‌, ಝೆಲ್ಗ್‌ ಗ್ಯಾಲೆಸಿಕ್‌, ಡೆಬಿ ಪರ್ಸೆಲ್, ಡೇವಿಡ್‌ ಲೂಯಿಸೆಯೌ, ಕೈಟ್‌ಲಿನ್‌ ಯಂಗ್, ಜ್ಯೂಲೀ ಕೆಡ್ಜೀ, ಚಂಗ್‌ ಲೀ/ಲೆ, ಕರೇನ್‌ ಡರಾಬೆಡ್ಯಾನ್‌, ಜೆರ್ರಿ ಫ್ಲಿನ್, ರಾಕ್ಸನ್ನೇ ಮೊಡಾಫ್ಫೆರೀ, ರಜಾಕ್‌ ಅಲ್‌-ಹಸನ್, ಅಲೆಕ್ಸ್‌ ರಾಬರ್ಟ್ಸ್‌ ಹಾಗೂ ಬೆನ್‌ ಹೆಂಡರ್‌ಸನ್‌ MMAನಲ್ಲಿ ಉತ್ತಮವಾದ ಸಾಧನೆ ಮಾಡಿದ ಕೆಲವು ಟೇಕ್ವಾಂಡೋ ಕದನ ಕಲಾಕಾರರಾಗಿದ್ದಾರೆ.

ಕೊರಿಯನ್‌ ಆದೇಶಗಳು[ಬದಲಾಯಿಸಿ]

ಟೇಕ್ವಾಂಡೋನಲ್ಲಿ, ಕೊರಿಯಾ ಭಾಷಿಕ ಆದೇಶಗಳನ್ನು ಅನೇಕ ವೇಳೆ ಬಳಸಲಾಗುವುದು. ಎಣಿಕೆಯಲ್ಲಿ ಬಳಸಲಾಗುವ ಪದಗಳಿಗೆ, ಕೊರಿಯಾದ ಸಂಖ್ಯೆಗಳು ಲೇಖನ ನೋಡಿ. ಅನೇಕ ವೇಳೆ, ವಿದ್ಯಾರ್ಥಿಗಳು ತರಗತಿಯ ಸಮಯದಲ್ಲಿ ಕೊರಿಯನ್‌ ಭಾಷೆಯಲ್ಲಿ ಎಣಿಕೆ ಮಾಡುತ್ತಾರಲ್ಲದೇ, ಪರೀಕ್ಷೆಯ ಸಮಯದಲ್ಲಿ ಅವರಿಗೆ ಸಾಮಾನ್ಯವಾಗಿ ನಿರ್ದಿಷ್ಟ (ತರಗತಿಯಲ್ಲಿ ಬಳಸಿದ) ಕೊರಿಯನ್‌ ಪದಗಳ ಅರ್ಥವೇನು ಎಂದು ಕೇಳಲಾಗುತ್ತದೆ.

ರೋಮನೀಕರಣ ಹಂಗುಲ್‌‌ ಹಂಜಾ ಅರ್ಥ
ಛಾರ್ಯೆಯೋಟ್‌ 차렷 ಗಣನೆ/ಗಮನ/ಧ್ಯಾನ
ಗಿಯೋಆಂಗ್‌ ರ್ರ್ಯೇ 경례 ಧನುಸ್ಸು
ಬಾರೋ/ಬರೋ 바로 ಮರಳುವಿಕೆ
ಸ್ವಿಯೋ 쉬어 ಸಮಾಧಾನವಾಗಿರುವಿಕೆ (ವಿರಾಮ)
ಕಿಹಾಪ್‌ 기합 ಹುಯಿಲಿಡು (ಕೂಗು)
ಜುನ್‌ಬಿ 준비 ಸಿದ್ಧ
ಸಿಜಕ್‌ 시작 ಆರಂಭ (ಉಪಕ್ರಮ)
ಗಲ್ಲ್ಯೆಯೋ 갈려 ಮುರಿ (ಪ್ರತ್ಯೇಕಿಸು)
ಗಿಯೋಸೊಕ್‌ 계속 ಮುಂದುವರಿಸು
ಗುಮನ್‌ 그만 ಕೊನೆಗೊಳಿಸು (ನಿಲ್ಲಿಸು)
ಡ್ವಿರೋ ಡೊರಾ 뒤로 돌아 ಸುತ್ತ ತಿರುಗು (ಹಿಂದುಮುಂದಾಗು)
ಹೇಸನ್‌ 해산 ವಜಾಮಾಡು/ತೆಗೆದುಹಾಕು

ಇವನ್ನೂ ನೋಡಿ[ಬದಲಾಯಿಸಿ]

ಟಿಪ್ಪಣಿಗಳು[ಬದಲಾಯಿಸಿ]

^ ಟೇಕ್ವಾಂಡೋ ಎಂಬ ಹೆಸರನ್ನು ಟೇಕ್ವಾನ್‌-ಡೋ , ಟೇ ಕ್ವಾನ್‌-ಡೋ , ಅಥವಾ ಟೇ ಕ್ವಾನ್‌ ಡೋ ಎಂಬ ರೀತಿಗಳಲ್ಲಿ ಕೂಡ ಅನೇಕ ಸಂಸ್ಥೆಗಳು ಐತಿಹಾಸಿಕ, ಸೈದ್ಧಾಂತಿಕ ಅಥವಾ ರಾಜಕೀಯ ಕಾರಣಗಳಿಂದಾಗಿ ಬರೆಯುತ್ತವೆ.

ಆಕರಗಳು[ಬದಲಾಯಿಸಿ]

 1. Park Yeon Hee (1989). Tae Kwon Do: The Ultimate Reference Guide to the World's Most Popular Martial Art. Checkmark Books. ISBN 978-0816038398. {{cite book}}: Unknown parameter |coauthors= ignored (|author= suggested) (help)
 2. Sung Il Oh. "What is the "World Taekwondo Federation"?". Korean Military Arts Federation. Archived from the original on 2010-06-22. Retrieved 2010-04-19. Taekwondo is the basis for the physical fitness program of the Korean army.
 3. "General Choi Hong Hi". The Daily Telegraph. London: Telegraph Media Group. 2002-06-26. Retrieved 2008-07-18.
 4. ೪.೦ ೪.೧ ೪.೨ "Kukkiwon: Taekwondo History". Archived from the original on 2008-06-20. Retrieved 2008-06-27.
 5. "About Tae Kwon Do". The World Taekwondo Federation. Archived from the original on 2010-07-26. Retrieved 2010-04-19.
 6. ೬.೦ ೬.೧ ೬.೨ "Historical Background of Taekwondo". The Korea Taekwondo Association (KTA). Archived from the original on 2012-12-20. Retrieved 2010-04-19.
 7. "Tae Kwon Do". Microsoft Encarta Online Encyclopedia. Microsoft Corporation. 2008. Archived from the original on 2009-08-29. Retrieved 2010-04-19.
 8. "Tae Kwon Do". Encyclopædia Britannica Online. Encyclopædia Britannica. 2008.
 9. "Comparing Styles of Taekwondo, Taekkyon and Karate(Video)". TaekwondoBible.com. we compare styles of Taekwondo, Taekkyon and Karate in their Kyorugi(sparring). In this comparison, we can see the clear and distinct similarity of Taekwondo and Taekkyon(the old style of Taekwondo). As far as the essence of martial arts is the technical system of attack and diffence, sparring style of each martial arts will show directly the similarities of martial arts.
 10. Lawler, Jennifer (1999). "The History of Tae Kwon Do". The Secrets of Tae Kwon Do. Chicago: Masters Press. ISBN 1-57028-202-1. Tae Kwon Do itself developed in Korea from Chinese origins.
 11. 허인욱 (In Uk Heo) (2004). "형성과정으로 본 태권도의 정체성에 관하여 (A Study on Shaping of the Taekwondo)". 체육사학회지 (Korean Journal of History for Physical Education) (in Korean with English abstract). 14 (1): 79–87. Archived from the original on 2008-09-24. Retrieved 2008-06-27. Some of grand masters of 5 do-jang(道場, Taekwondo Gymnasium)s, which is unified as TKD afterwards, trained Karate during their stay in Japan as students. And the others trained martial arts in Manchuria Therefore it can`t be described as TKD is developed by influence of Karate only. And considering the fact that the main curriculum of those five do-jangs was centered on Kicking technique originate from Korean folk, so we know that the current TKD seems to be affected by Korean traditional martial arts. {{cite journal}}: Unknown parameter |month= ignored (help)CS1 maint: unrecognized language (link)
 12. ೧೨.೦ ೧೨.೧ ೧೨.೨ Glen R. Morris. "The History of Taekwondo".
 13. Patrick Zukeran (2003). "The Origins and Popularity of the Martial Arts". Probe Ministries.
 14. Henning, Stanley E. (1981). "The Chinese Martial Arts in Historical Perspective". Military Affairs. Society for Military History. 45 (4): 173–179. ISSN 0899-3718. The Han Dynasty (206 B.C.-220 A.D.) was a period during which conscript armies, trained in the martial arts, expanded the Chinese empire to Turkestan in the west and Korea in the northeast, where commanderies were established. It is possible that Chinese shoubo was transmitted to Korea at this time, and that it was the antecedent to Korean Taekwondo. According to one recent Korean source, "Taekwondo is known to have had its beginning in the period 209-427 A.D. ..." {{cite journal}}: Unknown parameter |month= ignored (help)
 15. Capener, Steven D. (1995). "Problems in the Identity and Philosophy of T'aegwondo and Their Historical Causes". Korea Journal. Korean National Commission for UNESCO. ISSN 0023-3900. [dubious ] "... t'aegwondo was first brought into Korea from Japan in the form of Japanese karate around the time of the liberation of Korea from Japanese colonial rule ...". {{cite journal}}: Unknown parameter |month= ignored (help)
 16. Madis, Eric (2003). "The Evolution of Taekwondo from Japanese Karate". In Green, Thomas A. and Joseph R. Svinth (ed.). Martial Arts in the Modern World. Praeger Publishers. ISBN 0275981533. [dubious ] ... providing further evidence of Japanese influence.
 17. ೧೭.೦ ೧೭.೧ 이종우 국기원 부원장의 ‘태권도 과거’충격적 고백![dubious ] ಷಿನ್‌ಡೊಂಗಾ ನಿಯತಕಾಲಿಕೆ. (ಟಿಪ್ಪಣಿ : ಕುಕ್ಕಿವಾನ್‌ 2002ರಲ್ಲಿನ ಷಿನ್‌ಡೊಂಗಾ ನಿಯತಕಾಲಿಕೆಯೊಂದಿಗಿನ Mr. ಲೀ'ರವರ ಸಂದರ್ಶನವು ಕುಕ್ಕಿವಾನ್‌ನೊಂದಿಗಿನ ಅಧಿಕೃತ ಸಂದರ್ಶನವಲ್ಲ, ಬದಲಿಗೆ ವ್ಯಕ್ತಿಗತ ನಿಲುವಿನ ಚರ್ಚೆಯಾಗಿತ್ತಷ್ಟೇ ಎಂದು ಹೇಳಿಕೆ ನೀಡಿತ್ತು. ಆದ್ದರಿಂದ ಕುಕ್ಕಿವಾನ್‌ ಆ ವರದಿಯನ್ನು ಟೇಕ್ವಾಂಡೋದ ಇತಿಹಾಸದ ಆಕರವನ್ನಾಗಿ ಬಳಸುವುದು ಉಚಿತವಲ್ಲ ಎಂದು ಹೇಳಿಕೆ ನೀಡಿತ್ತು) ಕುಕ್ಕಿವಾನ್‌ ಸೂಚನಾಪತ್ರ no.30 Archived 2012-03-01 ವೇಬ್ಯಾಕ್ ಮೆಷಿನ್ ನಲ್ಲಿ. ಕೊರಿಯನ್‌ ಟೇಕ್ವಾಂಡೋ ಕ್ಲಬ್‌ನ ಪ್ರಕಾರ, Mr. ಲೀಯವರು ಸಂದರ್ಶನವನ್ನು "ತಿರುಚಲಾಗಿದೆ Archived 2011-11-04 ವೇಬ್ಯಾಕ್ ಮೆಷಿನ್ ನಲ್ಲಿ.".ಟೆಂಪ್ಲೇಟು:Ko
  ಮತ್ತೊಂದು ಸುದ್ದಿಪತ್ರಿಕೆಯೊಂದಿಗಿನ ಇನ್ನೊಂದು ಸಂದರ್ಶನ ದಲ್ಲಿನ ಪ್ರಕಾರ ಟೆಂಪ್ಲೇಟು:Ko, "... ಟೇಕ್ವಾಂಡೋ 'ಭಾಗಶಃ' ಕರಾಟೆಯ ಪ್ರಭಾವಕ್ಕೊಳಗಾಗಿತ್ತು. ಆದಾಗ್ಯೂ, ನಮಗೆ ಜಪಾನೀಯರ ಕರಾಟೆ ಎಲ್ಲಿಂದ ಬಂದಿತೆಂಬುದು ನಮಗೆ ತಿಳಿದಿರಬೇಕು. ಕರಾಟೆಯನ್ನು ಜಪಾನೀಯರು ರೂಪಿಸಿರಲಿಲ್ಲ. ಅದು ಚೀನಾದಿಂದ ಬಂದಿದ್ದು. ಕರಾಟೆಯು ಬಹಳವಾಗಿ ಚೀನಾದ ಪದ್ಧತಿಯಿಂದ ಪ್ರೇರಿತವಾಗಿದೆ. ಚೀನೀ ವುಷುವು ರಚನೆಯಾಗುವ ಮುನ್ನ, ಕೊರಿಯನ್ನರು ತಮ್ಮದೇ ಆದ ಕದನಕಲೆಯನ್ನು ಹೊಂದಿದ್ದರು ..."
 18. ೧೮.೦ ೧೮.೧ Capener, Steven D. (2000). Taekwondo: The Spirit of Korea (portions of). Ministry of Culture and Tourism, Republic of Korea. Korea has a long history of martial arts stretching well back into ancient times. Written historical records from the early days of the Korean peninsula are sparse, however, there are a number of well-preserved archeolgical artifacts that tell stores of Korea's early martial arts.", "taekwondo leaders started to experiment with a radical new system that would result in the development of a new martial sport different from anything ever seen before. This new martial sport would bear some important similarities to the traditional Korean game of taekkyon. {{cite book}}: Unknown parameter |coauthors= ignored (|author= suggested) (help)
 19. Cummings, B. (2005). Korea's Place in the Sun. New York, NY: W.W. Norton.
 20. "Culture of Resistance". Archived from the original on 2008-06-12. Retrieved 2008-08-22.
 21. Han, Woo-Keun (1970). The History of Korea. Korea: The Eul-Yoo Publishing Company. ISBN 978-8932450827.
 22. Kyungji Kim (1986). "Taekwondo: a brief history". Korea Journal. {{cite journal}}: |access-date= requires |url= (help); Cite journal requires |journal= (help)
 23. ಹಿಸ್ಟರಿ ಆಫ್‌ ಟೇಕ್ಕೆಯಾನ್‌. Archived 2009-08-22 ವೇಬ್ಯಾಕ್ ಮೆಷಿನ್ ನಲ್ಲಿ.ಟೇಕ್ಕೆಯಾನ್‌ ಕೊರಿಯಾ Archived 2009-08-22 ವೇಬ್ಯಾಕ್ ಮೆಷಿನ್ ನಲ್ಲಿ.ಟೆಂಪ್ಲೇಟು:Ko
 24. Yong-bok, Lee. Taekkyon: Traditional Korean Martial Art (2005). "Korea Taekkyon Association". ಟೇಕ್ಕೆಯಾನ್‌ ಎಂಬುದು ಕೊರಿಯಾದ ಸ್ಥಳೀಯ ಕದನ ಕಲೆಯಾಗಿದ್ದು 1900ರ ದಶಕದ ಆದಿಭಾಗದಲ್ಲಿ ಬಹುಪಾಲು ಕೊನೆಗೊಳ್ಳುವ ಹಂತ ತಲುಪಿತ್ತು. ಮರಣಿಸುವವರೆಗೆ ಮಹಾನಿಪುಣ/ಪರಿಣತ ಸಾಂಗ್‌ ಡುಕ್‌-ಕೀಯವರು ಕಾಪಾಡಿಕೊಂಡು ಬಂದಿದ್ದರಲ್ಲದೇ, ನಂತರ ಕೊರಿಯನ್‌ ಸರ್ಕಾರವು ಅದನ್ನು ಸಾಂಸ್ಕೃತಿಕ ಆಸ್ತಿಯೆಂದು ಪರಿಗಣಿಸಿತು
 25. Antonio Graceffo. "Korean Taekkyon: Tradition Martial Art Dance Form". Escape from America magazine. Archived from the original on 2011-06-04. Retrieved 2010-04-19.
 26. ೨೬.೦ ೨೬.೧ ಪಾರ್ಕ್, S. W. (1993): ಲೇಖಕರ ಬಗ್ಗೆ. H. H. ಚೊಯ್: ಟೇಕ್ವಾನ್‌-ಡೋ : ದ ಕೊರಿಯನ್‌ ಆರ್ಟ್‌ ಆಫ್‌ ಸೆಲ್ಫ್‌ ಡಿಫೆನ್ಸ್ ನಲ್ಲಿ, 3ನೇ ed. (Vol. 1, pp. 241–274). ಮಿಸ್ಸಿಸ್ಸೌಗಾ : ಇಂಟರ್‌ನ್ಯಾಷನಲ್‌ ಟೇಕ್ವಾನ್‌-ಡೋ ಫೆಡರೇಷನ್‌.
 27. Cook, Doug (2006). "Chapter 3: The Formative Years of Taekwondo". Traditional Taekwondo: Core Techniques, History and Philosophy. Boston: YMAA Publication Center. p. 19. ISBN 978-1594390661.
 28. Choi Hong Hi (1999). "interviews with General Choi". The Condensed Encyclopedia Fifth Edition. {{cite web}}: Unknown parameter |copyright= ignored (help) ಯುವ ಚೊಯ್‌ರ ತಂದೆ ಆತನನ್ನು ಕೊರಿಯಾದಲ್ಲಿ ಅತ್ಯಂತ ಪ್ರಸಿದ್ಧ ಶಿಕ್ಷಕರಾದ, Mr. ಹಾನ್‌/ಹ್ಯಾನ್‌ II ಡಾಂಗ್‌ರ ಆಶ್ರಯದಲ್ಲಿ ಚಿತ್ತಾರ/ಚಿತ್ರಬರೆಹವನ್ನು ಅಧ್ಯಯನ ಮಾಡಲು ಕಳಿಸುತ್ತಾರೆ. 'ಹಾನ್‌/ಹ್ಯಾನ್‌ ಚಿತ್ತಾರ/ಚಿತ್ರಬರೆಹಗಾರ ಮಾತ್ರವಲ್ಲದೇ ಪ್ರಾಚೀನ ಕೊರಿಯಾದ ಕಾಲು ಹೋರಾಟದ ಕಲೆಯಾದ ಟೇಕ್ಕೆಯಾನ್‌ ನಿಪುಣ/ಪರಿಣತರೂ ಆಗಿದ್ದರು. ತಮ್ಮ ಹೊಸ ವಿದ್ಯಾರ್ಥಿಯ ನಿಶ್ಶಕ್ತತೆಯಿಂದ ಚಿಂತಿತರಾದ ಆ ಶಿಕ್ಷಕರು ಆತನಿಗೆ, ಆತನ ದೇಹಧಾರ್ಢ್ಯವನ್ನು ಬೆಳೆಸಲು ಟೇಕ್ಕೆಯಾನ್‌ನ ಕಠೋರ ಕಸರತ್ತುಗಳನ್ನು ಹೇಳಿಕೊಡಲು ತೊಡಗಿದರು.
 29. ೨೯.೦ ೨೯.೧ Choi Young-ryul, Jeon Jeong-Woo (2006). "Comparative Study of the Techniques of Taekwondo and Taekkyon". Institution of physical exercise, Korea. pp. 197~206. {{cite web}}: Unknown parameter |type of publication= ignored (help)
 30. "Brief History of Taekwondo". Long Beach Press-Telegram. 2005.
 31. Jung Kun-Pyo, Lee Kang-Koo (2007). "An Analysis on the various views of Taekwondo History". Institution of Physical science, Korea. pp. 3~12(10 pages). Archived from the original on 2011-08-18. Retrieved 2010-04-19. {{cite web}}: Unknown parameter |type of publication= ignored (help)
 32. Capener, Steven D. (Winter 1995). "Problems in the Identity and Philosophy of T'aegwondo and Their Historical Causes". Korea Journal. Retrieved 2008-01-14. {{cite journal}}: Cite journal requires |journal= (help)
 33. Burdick, Dakin (1997). "People and Events of Taekwondo's Formative Years". volume 6, issue 1. Journal of Asian Martial Arts. {{cite journal}}: Cite journal requires |journal= (help)
 34. ೩೪.೦ ೩೪.೧ ೩೪.೨ ಹಾರ್ಮನ್, R. B. (2007): 5,000 ಇಯರ್ಸ್‌ ಆಫ್‌ ಕೊರಿಯನ್‌ ಮಾರ್ಷಲ್‌ ಆರ್ಟ್ಸ್‌ : ದ ಹೆರಿಟೇಜ್‌ ಆಫ್‌ ದ ಹರ್ಮಿಟ್‌ ಕಿಂಗ್‌ಡಮ್‌ ವಾರಿಯರ್ಸ್‌ ಇಂಡಿಯಾನಾಪೊಲಿಸ್‌: ಡಾಗ್‌ ಇಯರ್‌. ISBN 0-7624-2739-6
 35. ವರ್ಲ್ಡ್‌ ಟೇಕ್ವಾಂಡೋ ಫೆಡರೇಷನ್‌ : ಪ್ರೆಸೆಂಟ್‌ ಡೇ Archived 2010-01-21 ವೇಬ್ಯಾಕ್ ಮೆಷಿನ್ ನಲ್ಲಿ. ಪಡೆದ ದಿನಾಂಕ 2 ಜನವರಿ 2010.
 36. Oh Do Kwan (2006). "Taekwon-Do Pioneers". TaeKwon History. Oh Do Kwan. Archived from the original on 2007-09-28. Retrieved 2008-03-25. {{cite web}}: Cite has empty unknown parameter: |coauthors= (help)
 37. Sik, Kang Won (1999). A Modern History of Taekwondo. Seoul: Pogyŏng Munhwasa. ISBN 978-8935801244. {{cite book}}: Unknown parameter |coauthors= ignored (|author= suggested) (help)
 38. ಷಾ, S. (2001): ದ ಹಿಸ್ಟರಿ ಆಫ್‌ ದ ಕೊರಿಯನ್‌ ಮಾರ್ಷಲ್‌ ಆರ್ಟ್ಸ್‌ Archived 2010-01-30 ವೇಬ್ಯಾಕ್ ಮೆಷಿನ್ ನಲ್ಲಿ. ಪಡೆದ ದಿನಾಂಕ 23 ಜುಲೈ 2009.
 39. ಜ್ಯುವೆಲ್, D. (2005): ರ್ರ್ಹೀ ಟೇಕ್ವಾನ್‌-ಡೋ : ಎ ಹಿಸ್ಟರಿ ಆಫ್‌ ಟೇಕ್ವಾಂಡೋ ಪಡೆದ ದಿನಾಂಕ 23 ಜುಲೈ 2009.
 40. ರಿಪಬ್ಲಿಕ್‌ ಆಫ್‌ ಕೊರಿಯಾ : ಟೇಕ್ವಾಂಡೋದ ಅಧಿಕೃತ ಜಾಲತಾಣ Archived 2009-12-12 ವೇಬ್ಯಾಕ್ ಮೆಷಿನ್ ನಲ್ಲಿ. ಪಡೆದ ದಿನಾಂಕ 23 ಜುಲೈ 2009.
 41. ಬಾಯ್ಸ್ ಸರ್ಕಾರಿ ವಿಶ್ವವಿದ್ಯಾಲಯ ಟೇಕ್ವಾಂಡೋ ಕ್ಲಬ್‌ Archived 2010-06-17 ವೇಬ್ಯಾಕ್ ಮೆಷಿನ್ ನಲ್ಲಿ. ಪಡೆದ ದಿನಾಂಕ 20 ಅಕ್ಟೋಬರ್‌r 2009.
 42. ಕಿಂ, H.-S. (2009): ಟೇಕ್ವಾಂಡೋ : ಎ ನ್ಯೂ ಸ್ಟ್ರಾಟೆಜಿ ಫಾರ್‌ ಬ್ರಾಂಡ್‌ ಕೊರಿಯಾ (21 ಡಿಸೆಂಬರ್‌ 2009). ಪಡೆದ ದಿನಾಂಕ 8 ಜನವರಿ 2010.
 43. ಚೊಯ್, H. H. (1993): ಟೇಕ್ವಾನ್‌-ಡೋ : ದ ಕೊರಿಯನ್‌ ಆರ್ಟ್‌ ಆಫ್‌ ಸೆಲ್ಫ್‌-ಡಿಫೆನ್ಸ್ , 3ನೇ ed. (Vol. 1, p. 122). ಮಿಸ್ಸಿಸ್ಸೌಗಾ : ಇಂಟರ್‌ನ್ಯಾಷನಲ್‌ ಟೇಕ್ವಾನ್‌-ಡೋ ಫೆಡರೇಷನ್‌ .
 44. TKD ITF. "ITF Philosophy". TKD ITF. Archived from the original on 2010-03-29. Retrieved 2010-04-19.
 45. WTF. "WTF Philosophy". WTF. Archived from the original on 2009-03-30. Retrieved 2010-04-19.
 46. World Taekwondo Federation (2004). "Kyorugi rules". Rules. www.wtf.org. Archived from the original on 2009-03-30. Retrieved 2007-08-11. {{cite web}}: Cite has empty unknown parameter: |coauthors= (help)
 47. "New WTF Competition Rules". European Taekwondo Union. 05-02-09. Archived from the original on 2009-11-11. Retrieved 2009-03-04. {{cite web}}: Check date values in: |date= (help)
 48. International Taekwon-Do Federation (2000). "Competition Rules and Regulations". Rules. www.itf-information.com. Retrieved 2007-09-06. {{cite web}}: Cite has empty unknown parameter: |coauthors= (help)
 49. Lystad RP, Pollard H, Graham PL (2008). "Epidemiology of injuries in competition taekwondo: a meta-analysis of observational studies". J Sci Med Sport. 12 (6): 614–21. doi:10.1016/j.jsams.2008.09.013. PMID 19054714.{{cite journal}}: CS1 maint: multiple names: authors list (link)

ಬಾಹ್ಯ ಕೊಂಡಿಗಳು[ಬದಲಾಯಿಸಿ]

ಟೆಂಪ್ಲೇಟು:Manav by country