ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ತಿರುಮಕೂಡಲು ಚೌಡಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಟಿ.ಚೌಡಯ್ಯ ಇಂದ ಪುನರ್ನಿರ್ದೇಶಿತ)
ತಿರುಮಕೂಡಲು ಚೌಡಯ್ಯ
ಹಿನ್ನೆಲೆ ಮಾಹಿತಿ
ಮೂಲಸ್ಥಳತಿರುಮಕೂಡಲು ನರಸೀಪುರ, ಮೈಸೂರು ಜಿಲ್ಲೆ, ಕರ್ನಾಟಕ
ಸಂಗೀತ ಶೈಲಿಕರ್ನಾಟಕ ಸಂಗೀತ
ವೃತ್ತಿಪಿಟೀಲು ವಾದಕ

ಮೈಸೂರ್ ಪಿಟೀಲು ಚೌಡಯ್ಯ, (ಜನವರಿ ೧.೧೮೯೫ - ಜನವರಿ ೧೯, ೧೯೬೭) ಖ್ಯಾತರಾಗಿರುವ ಪಿಟೀಲ್ ವಾದಕರು, ಶಾಸ್ತ್ರೀಯ ಸಂಗೀತ ವಲಯದಲ್ಲಿ ಚಿರಸ್ಮರಣೀಯವಾಗಿದೆ. ತಮ್ಮ ಸಂಗೀತ ಪಾಂಡಿತ್ಯ ಮತ್ತು ಹೆಚ್ಚುಗಾರಿಕೆಯಿಂದ ಹೆಸರಾದವರು. ಇಂದಿಗೂ ಕರ್ನಾಟಕದಲ್ಲಿ ಪಿಟೀಲಿನೊಂದಿಗೆ ಜೋಡಿಸಿದ ಹೆಸರೆಂದರೆ ಚೌಡಯ್ಯನವರದ್ದೇ.'ಬೆಂಗಳೂರಿನ ವೈಯಾಲಿಕಾವಲ್‌'ನಲ್ಲಿರುವ ಚೌಡಯ್ಯ ಸ್ಮಾರಕ ಭವನ “ಪಿಟೀಲಿನ’ ಆಕಾರದಲ್ಲೇ ಇದೆ.

ಜನನ, ಬಾಲ್ಯ

[ಬದಲಾಯಿಸಿ]

'ತಿರುಮಕೂಡಲು ಚೌಡಯ್ಯ' ಆಗತ್ಸ್ಯ ಗೌಡ, ಹಾಗೂ ಸುಂದರಮ್ಮ ದಂಪತಿಗಳ ಮಗನಾಗಿ ಜನಿಸಿದರು. ಚಿಕ್ಕವಯಸ್ಸಿನಿಂದಲೇ ಬಾಲಕ ಚೌಡಯ್ಯನಿಗೆ ಸಂಗೀತದಲ್ಲಿ ಸಂಗೀತ ವಾದ್ಯಗಳನ್ನು ನುಡಿಸುವುದರಲ್ಲಿ ಅಪರಿಮಿತ ಆಸಕ್ತಿಯಿತ್ತು.ಬಿಡಾರಮ್ ಕೃಷ್ಣಪ್ಪನವರಲ್ಲಿ ಹದಿನೆಂಟು ವರ್ಷ ಸಂಗೀತಾಬ್ಯಾಸ ಮಾಡಿದ ಚೌಡಯ್ಯನವರು ಅಸಾಧಾರಣ ಪಾಂಡಿತ್ಯ ಪಡೆದರು. ತಿರುಚಿ ಗೋವಿಂದ ಸ್ವಾಮಿಗಳಿಂದ ಹೆಚ್ಹಿನ ಪರಿಣತಿ ಪಡೆದರು.ಕರ್ನಾಟಕ ಸಂಗೀತ ಪ್ರಕಾರದ ಒಬ್ಬ ಪ್ರಮುಖ ಪಿಟೀಲು ವಾದಕರಾಗಿದ್ದವರು. ಪಿಟೀಲು ಟಿ.ಚೌಡಯ್ಯನವರು ಅಭಿನಯಿಸಿದ ಚಿತ್ರದ ಹೆಸರು “ವಾಣಿ”. ಅದರಲ್ಲಿ ಅವರೇ ನಾಯಕ. ವಿಶೇಷವೆಂದರೆ ಪಂಡರೀಬಾಯಿ ಮತ್ತು ಮುಸುರಿ ಕೃಷ್ಣಮೂರ್ತಿಯವರ ಮೊದಲ ಚಿತ್ರವೂ ಅದೇ.

ವಾಣಿ ಚಿತ್ರದಲ್ಲಿ ಅಭಿನಯಿಸಿದ್ದರು

[ಬದಲಾಯಿಸಿ]

ಇಂಥ ಸಂಗೀತ ವಿದ್ವಾಂಸ ನಾಯಕ ನಟನಾಗಿ ಚಿತ್ರದಲ್ಲಿ ಅಭಿನಯಿಸಿದ್ದರು. 'ನಟ ಅಂಬರೀಷನ ತಾತ'ನವರಾದ ಚೌಡಯ್ಯನವರು ೧೯೪೩ ರಲ್ಲಿ ಬಿಡುಗಡೆಯಾದ “ವಾಣಿ’ ಚಿತ್ರದಲ್ಲಿ ತಂದೆ ಮತ್ತು ಮಗನಾಗಿ ದ್ವಿಪಾತ್ರದಲ್ಲಿ ಅಭಿನಯಿಸಿದ್ದರು, ಅದರ ಇಂಗ್ಲಿಷ್ ನ ಟೈಟಲ್ “violinist’. ಸಂಗೀತ ಪ್ರಧಾನವಾದ ಚಿತ್ರ. ಇದರಲ್ಲಿನ ಹಾಡಿಗೆ ಸ್ವತಃ ಅವರೇ ಸಂಗೀತ ಸಂಯೋಜಿಸಿದ್ದರು. ಇಡೀ ಚಿತ್ರದ ಸಂಗೀತ ನಿರ್ದೇಶನವನ್ನು ಮತ್ತೊಬ್ಬ ಸಹಾಯಕನೊಂದಿಗೆ ಪೂರೈಸಿದ್ದರು. ಚೌಡಯ್ಯನವರು, ೧೯೫೨-೧೯೫೮ ರವರೆಗೆ 'ವಿದಾನ ಪರಿಷತ್ ಸದಸ್ಯ'ರಾಗಿದ್ದರು.

ಪ್ರಶಸ್ತಿ ಪುರಸ್ಕಾರಗಳು

[ಬದಲಾಯಿಸಿ]
  • ಚೌಡಯ್ಯನವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ನೀಡಿದ "ಸಂಗೀತ ರತ್ನ'(೧೯೪೧)
  • ಮದ್ರಾಸ್ ಸಂಗೀತ ಅಕಾಡೆಮಿ ನೀಡಿದ "ಸಂಗೀತ ಕಲಾನಿದಿ"
  • ಮೈಸೂರ್ ಸಂಗೀತ ಪರಿಷತ್ ನೀಡಿದ "ಗಾನ ಕಲಾ ಸಿಂಧು" ಮುಂತಾದ ಅನೇಕ ಪ್ರಶಸ್ತಿಗಳು ಲಭಿಸಿವೆ.

[೧]