ವಿಷಯಕ್ಕೆ ಹೋಗು

ಲಾಲ್ಗುಡಿ ಜಯರಾಮನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲಾಲ್ಗುಡಿ ಜಯರಾಮನ್
ಹೆಸರುಲಾಲ್ಗುಡಿ ಜಯರಾಮನ್
ಜನನಸೆಪ್ಟೆಂಬರ್ ೧೭, ೧೯೩೦
ಚೆನ್ನೈ
ನಿಧನಏಪ್ರಿಲ್ ೨೨, ೨೦೧೩
ವೃತ್ತಿಗಳುಪಿಟೀಲು ವಾದಕರು, ಗಾಯಕರು ಮತ್ತು ಸಂಗೀತ ಸಂಯೋಜಕರು
ಸಕ್ರಿಯ ಅವಧಿ೧೯೪೨-೨೦೧೩

ಲಾಲ್ಗುಡಿ ಗೋಪಾಲ ಐಯರ್ ಜಯರಾಮನ್ (೧೭ ಸೆಪ್ಟೆಂಬರ್ ೧೯೩೦ – ೨೨ ಏಪ್ರಿಲ್ ೨೦೧೩) ಅವರು ಕರ್ಣಾಟಕ ಸಂಗೀತದ ವಯಲಿನ್ ವಾದಕರು, ಗಾಯಕರು ಮತ್ತು ಸಂಗೀತ ರಚನಾಕಾರರು. ಅವರು ಸಾಮಾನ್ಯವಾಗಿ ಎಮ್.ಎಸ್. ಗೋಪಾಲಕೃಷ್ಣನ್ ಮತ್ತು ಟಿ.ಎನ್.ಕೃಷ್ಣನ್ ಅವರನ ಕರ್ಣಾಟಕ ಸಂಗೀತದ ವಯಲಿನ್ ತಂಡದಲ್ಲಿ ಇರುತ್ತಿದ್ದರು. ೨೦೦೧ ಭಾರತ ಸರ್ಕಾರದಿಂದ ಪದ್ಮ ಭೂಷಣ ಪ್ರಶಸ್ತಿ ಪಡೆದರು.

ಆರಂಭಿಕ ಜೀವನ

[ಬದಲಾಯಿಸಿ]

ತಮ್ಮ ತಂದೆಯವರಾದ ವಿ. ಆರ್. ಗೋಪಾಲ ಐಯರ್ ನವರಲ್ಲಿ ಸಂಗೀತ ಶಿಕ್ಷಣವನ್ನು ಆರಂಭಿಸಿದರು. ಗೋಪಾಲ್ ಅವರು ಸಂಗೀತ ತ್ರಯರ ಶಿಷ್ಯರಾಗಿದ್ದರು. ಅವರು ಕಠಿಣ ಸಂಗೀತ ಶಿಕ್ಷಣವನ್ನು ತಂದೆಯಿಂದ ಪಡೆದರು.[]

ವೃತ್ತಿ ಜೀವನ

[ಬದಲಾಯಿಸಿ]

ತಮ್ಮ ೧೨ನೇ ವಯಸ್ಸಿಗೆ ಲಾಲ್ಗುಡಿ ಅವರು ಕರ್ನಾಟಕ ಸಂಗೀತಗಾರಿಗೆ ಸಹ ಪಿಟೀಲು ವಾದಕರಾಗಿ ಸಂಗೀತ ಕಛೇರಿಗಳಲ್ಲಿ ಭಾಗವಹಿಸುತ್ತಿದ್ದರು.

ಅವರು ಭಾರತೀಯ ಸಂಗೀತದ ಅಗತ್ಯಗಳನ್ನು ಪೂರೈಸಲು ಪಿಟೀಲಿನ ಹೊಸ ತಂತ್ರವನ್ನು ಕಂಡುಹಿಡಿದು, ಸಂಗೀತದ ಶೈಲಿಯನ್ನು ವಿಸ್ತಾರಗೊಳಿಸಿದರು ಮತ್ತು ಆ ಶೈಲಿಗೆ ಲಾಲ್ಗುಡಿ ಕರೆಯಲಾಗುವ ವಿಭಿನ್ನ ಶೈಲಿಯನ್ನು ಸ್ಥಾಪಿಸಿದರು. ಜಯರಾಮನ್ ಹಲವಾರು 'ಕೃತಿಗಳು', 'ತಿಲ್ಲಾನಗಳು' ಮತ್ತು 'ವರ್ಣಗಳನ್ನು' ನೃತ್ಯಕ್ಕಾಗಿಯೇ ರಚಿಸಿದ್ದಾರೆ, ಅವರ ರಚನೆಗಳಲ್ಲಿ ರಾಗ, ಭಾವ, ಸಂಗೀತದ ತಾಳ ಮತ್ತು ಸಾಹಿತ್ಯದ ಸೌಂದರ್ಯವನ್ನು ಕಾಣಬಹುದು. ಅವರು ಹಾಡುಗಾರಿಗೆ ಶೈಲಿಯನ್ನು, ಪಿಟೀಲು ನುಡಿಸುವ ವಿಧಾನಕ್ಕೆ ಒದಗಿಸಿದ್ದಾರೆ. ಅವರ ಈ ನಿರೂಪಣೆಗಳು ಸಂಗೀ, ಸಾಹಿತ್ಯದ ವಿಷಯದ ಬಗ್ಗೆಅವರಿಗಿರುವ ಅರಿವನ್ನು ತೋರಿಸುತ್ತವೆ. ಲಾಲ್ಗುಡಿಯವರು ತಮ್ಮ ಪ್ರದರ್ಶನಗಳಿಗೆ ತಾವೇ ಕ್ರಿಯಾತ್ಮಕವಾಗಿ, ವಿವರವಾದ ವಿಮರ್ಶೆಗಳನ್ನು ಬರೆಯುತ್ತಿದ್ದರು. ಇದನ್ನು ತಮ್ಮ ತಂದೆ ಮತ್ತು ಗುರುನಿಯಿಂದ ಕಲಿತರು.

ಅವರು ಪ್ರಸಿದ್ಧ ಗಾಯಕರಿಗೆ ಹಿಮ್ಮೇಳದಲ್ಲಿ ಪಿಟೀಲು ನುಡಿಸಲು ಬೇಡಿಕೆಯಲ್ಲಿದ್ದರು. ಅರಿಯಕುಡಿ ರಾಮಾನುಜ ಐಯಂಗರ್, ಚೇಂಬೈ ವೈದ್ಯನಾಥಭಾಗವತರ, ಎಮ್. ಡಿ. ರಾಮನಾಥನ್, ಸೆಮ್ಮಂಗುಡಿ ಶ್ರೀನಿವಾಸ ಐಯರ್, ಜಿ. ಎನ್. ಬಾಲಸುಬ್ರಮಣಿಯಮ್, ಮದುರೈ ಮಾಣಿ ಐಯರ್, ಆಲತುರ್ ಸಹೋದರರು, ವೋಲೆಟಿ ವೆಂಕಟೇಶ್ವರಲು, ನೆದುನೂರಿ ಕೃಷ್ಣಮೂರ್ತಿ, ಕೆ. ವಿ. ನಾರಾಯಣಸ್ವಾಮಿ, ಮಹಾರಾಜಪುರಂ ಸಂತನಾಮ್, ಡಿ. ಕೆ. ಜಯಾರಾಮನ್, ಎಮ್. ಬಾಲಮುರಳಿಕೃಷ್ಣ, ಟಿ. ವಿ. ಸಂಕರಣಾರಾಯಣನ್, ಟಿ. ಎನ್. ಶೇಶಗೋಪಾಲಾನ್ ಮತ್ತು ಕೊಳಲು ವಾದಕ ಎನ್. ರಾಮಣಿಯನ್ನು ಒಳಗೊಂಡು ಹಲವಾರು ಕಲಾವಿದರಿಗೆ ಸಹ ವಾದಕರಾಗಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಲಾಲ್ಗುಡಿ ಅವರು ತಮ್ಮ ತಂದೆಗೆ ನೀಡಿದ ಮಾತಿನಂತೆ ಮಹಿಳಾ ಕಲಾವಿದರಿಗೆ ಸಹ ವಾದಕರಾಗಿ ಕಾರ್ಯಕ್ರಮಗಳನ್ನು ನೀಡಲಿಲ್ಲ. ಅವರು ಭಾರತದಲ್ಲಷ್ಟೆ ಅಲ್ಲದೆ ವಿದೇಶದಲ್ಲಿ ಸಾಕಷ್ಟು ಸಂಗೀತಮೇಳಗಳಲ್ಲಿ ಭಾಗವಹಿಸಿದ್ದಾರೆ. ಭಾರತದ ಸರ್ಕಾರವು ಅವರಿಗೆ ಭಾರತೀಯ ಸಾಂಸ್ಕೃತಿಕ ಪ್ರತಿನಿಧಿಯಾಗಿ ರಷ್ಯಾಕ್ಕೆ ಕಳಿಸಿದ್ದಾರೆ. ಅವರು ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಪಿಟೀಲು ವಾದನವನ್ನು ಅಂತರರಾಷ್ಟ್ರ ಮಟ್ಟದಲ್ಲಿ ಗಮನಾರ್ಹವಾದ ವ್ಯಕ್ತಿಯಾಗಿದ್ದಾರೆ. ೧೯೬೬ರಲ್ಲಿ ವಯಲಿನ್, ಕೊಳಲು ಮತ್ತು ವೀಣಾ ವಾದನದ ಸಂಗೀತ ಕಛೇರಿಗಳನ್ನು ಪ್ರಾರಂಭಿಸಿದರು.

೧೯೬೫ರಲ್ಲಿ ಎಡಿನ್‌ಬರ್ಗ್ ಉತ್ಸವದಲ್ಲಿ ಇವರ ಪ್ರದರ್ಶನವನ್ನು ವಿಕ್ಷಿಸಿ, ಮೆಚ್ಚಿಕೊಂಡ ಪ್ರಸಿದ್ಧ ಪಿಟೀಲು ವಾದಕರಾದ ಯೆಹೂದಿ ಮೆನುಹಿನ್, ಲಾಲ್ಗುಡಿಯವರಿಗೆ ತನ್ನ ಇಟಾಲಿಯನ್ ಪಿಟೀಲು ನೀಡಿದರು. ಮೆನುವಿನ್ ಭಾರತಕ್ಕೆ ಭೇಟಿ ನೀಡಿದಾಗ, ಲಾಲ್ಗುಡಿಯವರು ಹರಿಪ್ರಿಯ ನಾಟರಾಜನನ್ನು ಬೆಲ್ಲಿ ಪ್ರಶಸ್ತಿಯೊಂದಿಗೆ ಮೆನುವಿನ್‌ಗೆ ನೀಡಿದರು. ಅವರು ಸಿಂಗಪುರ್, ಮಾಲೇಶಿಯಾ, ಮನೀಲಾ ಮತ್ತು ಪೂರ್ವ ಯೂರೋಪಿಯನ್ ದೇಶಗಳಲ್ಲಿಯೂ ಪ್ರದರ್ಶನವನ್ನು ನೀಡಿದರು. ೧೯೭೯ರಲ್ಲಿ ಎ ಐ ಆರ್, ಡೆಹ್ಲಿಯಿಂದ ಅವರ ಧ್ವನಿ ಮುದ್ರಣಗಳು ಅಂತಾರಾಷ್ಟ್ರೀಯ ಸಂಗೀತ ಪರಿಷತ್ತು, ಬಗ್ದಾದ್, ಏಷಿಯನ್ ಪ್ಯಾಸಿಫಿಕ್ ಮ್ಯೂಸಿಕ್ ರೊಸ್ಟ್ರಮ್ ಮತ್ತು ಮತ್ತು ಇರಾಕ್ ಬ್ರಾಡ್ಕ್ಯಾಸ್ಟಿಂಗ್ ಏಜೆನ್ಸಿ ಗೆ ಸಲ್ಲಿಸಲಾಗಿತ್ತು. ೭೭ ದೇಶಗಳಿಂದ ಬಂದ ಧ್ವನಿ ಮುದ್ರಣಗಳಲ್ಲಿ, ಲಾಲ್ಗುಡಿ ಅವರ ಧ್ವನಿ ಮುದ್ರಣವು ಉತ್ತಮ ಧ್ವನಿ ಮುದ್ರಣವೆಂದು ಪ್ರಶಂಸೆಗೆ ಕಾರಣವಾಗಿದೆ.[]

ಅವರು ಕೊಲೊನ್, ಬೆಲ್ಜಿಯಮ್ ಮತ್ತು ಫ್ರಾನ್ಸ್ ನಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಭಾರತ ಸರ್ಕಾರವು ಅವರನ್ನು ಅಮೆರಿಕ, ಲಂಡನಿನ ಭಾರತೋತ್ಸವದಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದರು ಮತ್ತು ಅವರು ಲಂಡನಲ್ಲಿಯೂ, ಜರ್ಮನಿ ಮತ್ತು ಇಟಲಿಯಲ್ಲಿಯೂ ಏಕವ್ಯಕ್ತಿ ಮತ್ತು ಜುಗಲ್‌ಬಂದಿ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಶ್ಲಾಘನೆಯೆಲ್ಲವನ್ನು ಪಡೆದಿದ್ದಾರೆ. ಲಾಲ್ಗುಡಿಯವರು ೧೯೮೪ರಲ್ಲಿ ಓಮಾನ್, ಯುಎಇ, ಕತಾರ್ ಮತ್ತು ಬಾಹ್ರೈನ್ ನಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ

ಲಾಲ್ಗುಡಿಯವರು ೧೯೯೪ರಲ್ಲಿ ಓಹಿಯೋದಲ್ಲಿ ಕ್ಲೀವ್‌ಲ್ಯಾಂಡ್‌ನಲ್ಲಿ ಹಮ್ಮಿಕೊಂಡಿದ್ದ, ಜಯಜಯ ದೇವಿ ಎಂಬ ನೃತ್ಯನಾಟಕಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇದು ಅಮೇರಿಕಾದ ಇತರ ನಗರದಗಳಲ್ಲಿ ಪ್ರದರ್ಶನಗೊಂಡಿತ್ತು.

ಅಕ್ಟೋಬರ್ ೧೯೯ರಲ್ಲಿ, ಯುಕೆಯಲ್ಲಿ ಲಾಲ್ಗುಡಿಯವರು ಈಶ್ವರ ಶ್ರುತಿ ಲಯ ಸಂಗಮ್ (ಇನ್ಸ್ಟಿಟ್ಯೂಟ್ ಆಫ್ ಫೈನ್ ಆರ್ಟ್ಸ್)ದ ಆಶ್ರಯದಲ್ಲಿ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಇವರ ಕಛೇರಿಯ ನಂತರ ಲಾಲ್ಗುಡಿಯವರು ಬರೆದ ಪಾಂಚೇಶ್ವರಮ್ ಎಂಬ ನೃತ್ಯ ನಾಟಕವನ್ನು ಪ್ರದರ್ಶನಗೊಂಡಿತ್ತು. ೨೦೧೩ರಲ್ಲಿ ಇವರ ಜೀವನ ಚರಿತ್ರೆಯನ್ನು ಮಹಾನ್ ಪ್ರೇಮಿಎಂದು ಖ್ಯಾತರಾದ ಲಕ್ಷ್ಮಿ ದೇವನಾಥ್ ಅವರಿಂದ, ಬಿಡುಗಡೆ ಮಾಡಿದರು. ಇದರಲ್ಲಿ ಸಿತಾರ್ ವಾದಕ ರಾಮ್ ಶಂಕರ್ ಅವರ ಮುಂದೆ ಬರಹವಿದೆ ಮತ್ತು ಸಂಗೀತ ಕ್ಷೇತ್ರದಲ್ಲಿ ಅವರ ೭೦ವರ್ಷಗಳ ಕೊಡುಗೆಯನ್ನು ವಿವರಿಸುತ್ತದೆ.[]

ಪ್ರಶಸ್ತಿಗಳು

[ಬದಲಾಯಿಸಿ]
  • ಜಯರಾಮನ್ ೧೯೬೩ರಲ್ಲಿ ಲಾಲ್ಗುಡಿಯ ಸಂಗೀತಪ್ರಿಯರು ಸಂಘದ ಮೂಲಕ 'ನಾಡ ವಿದ್ಯಾ ತಿಲಕ' ಬಿರುದು ಪಡೆದಿದ್ದಾರೆ.
  • ೧೯೭೨ರಲ್ಲಿ ಭಾರತೀಯ ಸರ್ಕಾರದಿಂದ 'ಪದ್ಮ ಶ್ರೀ' ಪ್ರಶಸ್ತಿ ಪಡೆದಿದ್ದಾರೆ. []
  • ನ್ಯೂಯಾರ್ಕ್‌ನ ಈಸ್ಟ್ ವೆಸ್ಟ್ ಎಕ್ಸ್‌ಚೇಂಜ್ ಮೂಲಕ 'ನಾಡ ವಿದ್ಯಾ ರತ್ನಾಕರ' ಬಿರುದು ಪಡೆದಿದ್ದಾರೆ.
  • ನ್ಯೂಯಾರ್ಕ್‌ ನಲ್ಲಿ ಭಾರತಿ ಸಾಮಾಜಿಕ ದ್ವಾರ 'ವಾದ್ಯ ಸಂಗೀತ ಕಲಾರತ್ನ' ಬಿರುದು ಪಡೆದಿದ್ದಾರೆ.
  • ೧೯೭೧ರಲ್ಲಿ ಚೆನ್ನೈನಲ್ಲಿ ಶ್ರೀ ಕೃಷ್ಣ ವ್ಯಾಸ ಸಭೆಯಿಂದ 'ಸಂಗೀತ ಚೂಡಮನಿ' ಬಿರುದು ಪಡೆದಿದ್ದಾರೆ.
  • ತಮಿಳುನಾಡು ರಾಜ್ಯ ಸರ್ಕಾರದಿಂದ 'ರಾಜ್ಯ ವಿಜ್ಞಾನಿ' ಬಿರುದು ಪಡೆದಿದ್ದಾರೆ.
  • ೧೯೭೯ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
  • ಕರ್ನಾಟಕದ ಮುಖ್ಯಮಂತ್ರಿಯಿಂದ ಶ್ರೀ ಜಯರಾಮ ಅವರಿಗೆ ಮೊದಲ ಚೌಡಯ್ಯ ಸ್ಮಾರಕ ರಾಷ್ಟ್ರೀಯ ಮಟ್ಟದ ಪ್ರಶಸ್ತಿ ನೀಡದ್ದಾರೆ.
  • ಅವರು ೧೯೯೪ರಲ್ಲಿ ಯುಎಸ್‌ನ ಮೆರಿಲ್ಯಾಂಡ್‌ನ ಗೌರವಿತ ನೆಲೆಯನ್ನೂ ಪಡೆದಿದ್ದಾರೆ.
  • ೨೦೦೧ರಲ್ಲಿ ಭಾರತೀಯ ಸರ್ಕಾರದಿಂದ 'ಪದ್ಮ ಭೂಷಣ' ಪ್ರಶಸ್ತಿ ಪಡೆದುಕೊಂಡಿದ್ದಾರೆ.
  • ೨೦೦೬ರಲ್ಲಿ 'ಶ್ರಿಂಗಾರಂ' ಚಲನಚಿತ್ರಕ್ಕೆ ಉತ್ತಮ ಸಂಗೀತ ನಿರ್ದೇಶನಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು.
  • ೨೦೧೦ರಲ್ಲಿ ಜಯರಾಮನ್ ಸಂಗೀತ ನಾಟಕ ಅಕಾಡೆಮಿಯ ಫೆಲ್ಲೋ ಆಗಿ ಆಯ್ಕೆಯಾಗಿದರು.

ವಯಕ್ತಿಕ ಜೀವನ

[ಬದಲಾಯಿಸಿ]

ಲಾಲ್ಗುಡಿ ಜಯರಾಮನ್ ಅವರು ಶ್ರೀಮತಿ ರಾಜಲಕ್ಷ್ಮಿಯವರನ್ನು ವಿವಾಹವಾಗಿದ್ದಾರೆ. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅವರ ಪುತ್ರ ಜಿ.ಜೇರ್.ಕೃಷ್ಣನ್ ಮತ್ತು ಪುತ್ರಿ ಲಲ್ಗುಡಿ ವಿಜಯಲಕ್ಷ್ಮಿ, ಇಬ್ಬರೂ ತಮ್ಮ ತಂದೆಯ ಹಾದಿಯಲ್ಲಿ ಸಾಗುತ್ತಿದ್ದಾರೆ ಮತ್ತು ತಮ್ಮದೇ ಆದ ಖ್ಯಾತಿಯನ್ನು ಪಡೆದಿದ್ದಾರೆ. ಜಯರಾಮನ್ ಅವರಿಗೆ ಮೂವರು ಸಹೋದರಿಯರಿದ್ದಾರೆ. ಮೊದಲ ಸಹೋದರಿ ಪದ್ಮಾವತಿಯವರು ಒಂದು ವೀಣಾವಾದಕಿಯಾಗಿದ್ದಾರೆ. ಎರಡನೇ ಸಹೋದರಿ ರಾಜಲಕ್ಷ್ಮಿ ಮತ್ತು ಶ್ರಿಮತಿ ಯವರು ಪಿಟೀಲು ವಾದಕರಾಗಿದ್ದಾರೆ. ಪ್ರಸಿದ್ಧ ವೀಣಾ ವಾದಕಿಯಾಗಿರುವ ಜಯಂತಿ ಕುಮಾರೆಶ್ ಅವರು ಲಾಲ್ಗುಡಿ ಅವರ ಸಹೋದರಿ ರಾಜಲಕ್ಷ್ಮಿಯವರ ಪುತ್ರಿ.

ಜಯರಾಮನ್ ೨೨ನೇ ಎಪ್ರಿಲ್ ೨೦೧೩ ರಂದು ಚೆನ್ನೈನಲ್ಲಿರುವ ತಮ್ಮ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ರಚನೆಗಳು

[ಬದಲಾಯಿಸಿ]

ತಿಲ್ಲಾನಗಳು ಮತ್ತು ವರ್ಣಗಳು ರಚನೆಗೆ ಹೆಸರುವಾಸಿಯಾಗಿರುವ ಶ್ರೀ ಲಲ್ಗುಡಿ ಜಯರಾಮನ್, ಆಧುನಿಕ ಕಾಲದ ಸಂಗೀತ ರಚನಕಾರರಲ್ಲಿ ಪ್ರಮುಖರಾಗಿದ್ದಾರೆ. ಅವರ ರಚನೆಗಳು ನಾಲ್ಕು ಭಾಷೆಗಳನ್ನು (ತಮಿಳು, ತೆಲುಗು, ಕನ್ನಡ ಮತ್ತು ಸಂಸ್ಕೃತ) ಒಳಗೊಂಡಿದೆ. ಇವರು ರಚಿಸುವ ವರ್ಣ, ತಿಲ್ಲಾನಗಳಲ್ಲಿ ಇರುವ ರಾಗಗಳು ಬಹಳ ವಿರಳವಾಗಿ ಉಪಯೋಗಿಸುವ ರಾಗಗಳಾಗಿವೆ. ಅವರ ರಚನೆಗಳನ್ನು ಭಾರತೀಯ ನೃತ್ಯ ಕಲಾವಿದರರು ಹೆಚ್ಚಾಗಿ ಬಳಸುತ್ತಿದ್ದಾರೆ. ಅವರ ರಚನೆಗಳು ಈ ಕೆಳಗಿನಂತಿವೆ.

ತಾನ ವರ್ಣಗಳು

[ಬದಲಾಯಿಸಿ]
ರಚನೆ ರಾಗ ಭಾಷೆ
ಚಲಮು ಸೇಯನೆಲ ವಲಚಿ ತೆಲುಗು
ಪರಮಕರುಣ ಗರುಡಧ್ವನಿ ತೆಲುಗು
ನೀವೆ ಗತಿಯೆನಿ ನಳಿನಕಾಂತಿ ತೆಲುಗು
ನೀವೇಗನಿ ಮಂಧಾರಿ ತೆಲುಗು
ವಲ್ಲಭಿ ನಾಯಕ ಮೋಹನ ಕಲ್ಯಾಣಿ ತಮಿಳು
ದೇವಿ ಉನ್ ಪಾದಮೇ ದೇವಗಾಂಧಾರಿ ತಮಿಳು
ರಾಮನೈ ರಘುನಾಥನೈ ಅಠಾಣ ತಮಿಳು
ತಿರುಮಾಲ್ ಮುರುಘ ಅಂದೋಲಿಕ ತಮಿಳು
ಉನೈ ಎನ್ದ್ರಿ ಕಲ್ಯಾಣಿ ತಮಿಳು
ಎಂತೊ ಪ್ರೇಮತೊ ಬಹುಧಾರಿ ತೆಲುಗು
ತರುನಾಮ್ ಎನ್ ತಾಯೇ ಸಮ ತಮಿಳು
ಜಲಜಾಕ್ಷ ನೀ ಪಾದಮೇ ಸಾವೇರಿ ತೆಲುಗು
ಇಂತ ತಮಾಷಮೇಲ್ಲ ಕನ್ನಡ ತೆಲುಗು
ಅರುನೋದಯಮೇ ಅನ್ಬಿನ್ ವದಿವಮೇ ಭೌಳಿ ತಮಿಳು
ನಂಬುಂಮ್ ಅನ್ಬರ್ಕರುಲುಂ ವರಮು ತಮಿಳು
ನಾದಸ್ವರೂಪಿಣಿ ನೀಲಾಂಬರಿ ತೆಲುಗು
ಇನ್ಗಮ್ ನಿರೈ ದೈವಮೇ ಹಂಸವಿನೋದಿನಿ ತಮಿಳು

ಪದ ವರ್ಣಗಳು

[ಬದಲಾಯಿಸಿ]
ರಚನೆ ರಾಗ ಭಾಷೆ
ಇನ್ನಮ್ ಎನ್ ಮನಂ ಚಾರುಕೇಷಿ ತಮಿಳು
ಸೇನತಿಲ್ ನಗರ್ ಮೇವು ನೇಲಾಂಬರಿ ತಮಿಳು
ದೇವರ್ ಮುನಿವರ್ ಷಣ್ಮುಖಪ್ರಿಯ ತಮಿಳು
ಅನ್ಗಯರ್ ಕಣ್ಣಿ ಆನಂದಮ್ ಕೊಂಡಳೆ ರಾಗಮಾಲಿಕೆ (ನವರಸ ಪದವರ್ಣ

ರಾಗಗಳು: ಬಿಲಹರಿ, ಹುಸೇನಿ, ವಲಚಿ, ಅಠಾಣ, ರಸಿಕಪ್ರಿಯ, ಶಹಾನ, ಭೌಳಿ

ತಮಿಳು

ತಿಲ್ಲಾನಗಳು

[ಬದಲಾಯಿಸಿ]

ಸ್ವಾತಿ ತಿರುಣಾಳರ ಧನಶ್ರೀ ರಾಗದ 'ಧೀಂ ತದು ನಿಕುತಕ' ತಿಲ್ಲಾನಕ್ಕೆ ಲಾಲ್ಗುಡಿಯವರು ರಾಗ ಸಂಯೋಜನೆ ಮಾಡಿರುತ್ತಾರೆ. ಇದು ಪ್ರಸ್ತುತ ಕಾಲದಲ್ಲಿ ಬಹಳ ಪ್ರಚಲಿತವಿದೆ.

ಕೃತಿಗಳು

[ಬದಲಾಯಿಸಿ]
ಕೃತಿ ರಾಗ ಭಾಷೆ
ವಿನಾಯಕುನ್ನದೆವಾ ಧರ್ಮಾವತಿ ತೆಲುಗು
ಕಂದನ್ಫ಼್ ಸೇಯಲಾನದ್ರೋ ನಾಟಿಕುರಂಜಿ ತಮಿಳು
ತೆನ್ ಮದುರೈ ವಜ್ ಹಂಸರೂಪಿಣೀ ತಮಿಳು
ಕುಮಾರ ಗುರುಗುಹಮ್ ಶಣ್ಮುಖಪ್ರಿಯ ಸಂಸ್ಕೃತ
ನೀ ದಯೈ ಸೇಯ್ಯವಿದಿಲ್ ಬೇಗಡೆ ತಮಿಳು
ಶ್ರೀ ಜಗದೀಶ್ವರಿ ದುರ್ಗಾ ಅಹಿರ್ ಸಂಸ್ಕೃತ

ಈ ರಚನೆಗಳ ಹೊರತಾಗಿ, ಶ್ರೀ ಲಾಲ್ಗುಡಿ ಜಯರಾಮನ್ ಜತಿಸ್ವರಗಳು ಮತ್ತು ಸ್ವರಜತಿಗಳನ್ನು ರಚಿಸಿದ್ದಾರೆ. ರಸಿಕಪ್ರಿಯ ರಾಗದಲ್ಲಿರುವ ಜತಿಸ್ವರ ಭರತನಾಟ್ಯದಲ್ಲಿ ಹೆಚ್ಚು ಬಳಕೆಯಲ್ಲಿದೆ. ಅವರು ಗ್ರಹಭೇದಂ ಸಂಕಲ್ಪವನ್ನು ವಿವರಿಸುವ ವಿಭಿನ್ನ ಸ್ವರಾಜಾತಿಯನ್ನೂ ರಚಿಸಿದ್ದಾರೆ, ಇದು ಸಿಂಧು ಭೈರವೀ, ಚೆಂಚುರಟ್ಟಿ, ಮೋಹನಕಲ್ಯಾಣಿ, ಬೆಹಾಗ್ ಮತ್ತು ತಿಲಂಗ್ ರಾಗಗಳಿವೆ. ಅಂಬುಜಾಮ್ ಕೃಷ್ಣನ ಅವರ ಕೃತಿಗಳೂ ಸೇರಿದಂತೆ ಅನೇಕ ಹಾಡುಗಳು ಮತ್ತು ರಚನೆಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ

ಶಿಷ್ಯರು

[ಬದಲಾಯಿಸಿ]

ಲಾಲ್ಗುಡಿ ಅವರ ಶಿಷ್ಯರಲ್ಲಿ ಅವರ ಇಬ್ಬರು ಮಕ್ಕಳು ಲಾಲ್ಗುಡಿ ಜಿ. ಜೆ. ಆರ್. ಕೃಷ್ಣನ್ ಮತ್ತು ಲಾಲ್ಗುಡಿ ವಿಜಯಲಕ್ಷ್ಮಿರೂ ಕೂಡ ಇದ್ದಾರೆ. ಲಾಲ್ಗುಡಿ ಅವರ ಸಹೋದರಿ ಲಾಲ್ಗುಡಿ ಶ್ರೀಮತಿ ಬ್ರಹ್ಮನಂದಮ್, ಅಖಿಲ ಭಾರತ ರೇಡಿಯೋಧಾನದ ವಾದ್ಯ ವೃಂದ ರಾಷ್ಟ್ರೀಯ ಆರ್ಚೆಸ್ಟ್ರಾ ದಲ್ಲಿ ರಚನಾಕಾರರಾದ ಪಿ. ಪೂರ್ಣಚಂದ್ರರಾಯ, ಸಂಗೀತಗಾರ ಎಸ್.ಪಿ. ರಾಮ್ (ಶ್ರಿ. ಜಿ.ಎನ್. ವ್ಯಂಡಾಪಾಣಿ ಐಯರ್ ಅವರ ಮೊಮ್ಮಕ್ಕಳು); ಹರಿಕಥಾ ಗಾಯಕಿ ವಿಶಾಖ ಹರಿ, ಸಂಗೀತಗಾರ ಸಾಕೆತರಾಮನ್, ವಿಟ್ಟಲ್ ರಾಮಮೂರ್ತಿ, ಡಾ. ಎನ್. ಶಶಿಧರ, ಚಲನಚಿತ್ರ ಸಂಗೀತಗಾರ ಗಿರೀಶ್ ಜಿ, ಪದ್ಮ ಶಂಕರ್, ಕಂಚನ್ ಚಂದ್ರನ್; ರಘುರಾಮ್ ಹೊಸಹಳ್ಳಿ, ಲಂಡನ್ ವಯಲಿನ್ ವಾದಕರಾದ ಶ್ರಿ ಎ ಜಿ ಎ ಗ್ನಾನಸುಂದರಂ, ಶ್ರೀನಿವಾಸಮೂರ್ತಿ, ಪಕ್ಕಳ ರಾಮದಾಸ್, ಶಂಕರಿ ಕೃಷ್ಣನ್, ಯಾಮಿನಿ ರಾಮೇಶ್, ಮುಂಬೈನ ಶಿಲ್ಪಾ, ಶ್ರೇಯ ದೇವನಾಥ್, ಕೃತಿಕಾ ನಟರಾಜನ್, ಸೇಲಂ ಸೋದರಿಯರು; ವೈಣಿಕ ಶ್ರಿಕಾಂತ್ ಚಾರಿ ಮತ್ತು ಬಾಂಬೆ ಜಯಶ್ರಿ ರಾಮನಾಥ್ ರವರು ಇವರ ಪ್ರಮುಖ ಶಿಷ್ಯರು. ಹೀಗೆ ಹಲವರು ಇವರ ಬಳಿ ಸಂಗೀತ ಅಭ್ಯಾಸ ಮಾಡಿ, ಸಂಗೀತ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]