ಟ್ಯಾಕೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಟಾಕೊ ಇಂದ ಪುನರ್ನಿರ್ದೇಶಿತ)

ಟ್ಯಾಕೊ ಹೂರಣದ ಸುತ್ತ ಮಡಚಿದ ಅಥವಾ ಸುತ್ತಿದ ಮೆಕ್ಕೆ ಜೋಳ ಅಥವಾ ಗೋಧಿತೊರ್ತೀಯಾ ಸೇರಿ ಮಾಡಲ್ಪಟ್ಟಿರುವ ಒಂದು ಸಾಂಪ್ರದಾಯಿಕ ಮೆಕ್ಸಿಕನ್ ತಿನಿಸು. ಗೋಮಾಂಸ, ಹಂದಿಮಾಂಸ, ಕೋಳಿಮಾಂಸ, ಕಡಲಾಹಾರ, ತರಕಾರಿಗಳು ಮತ್ತು ಗಿಣ್ಣನ್ನು ಒಳಗೊಂಡಂತೆ, ಟ್ಯಾಕೊವನ್ನು ವಿವಿಧ ಹೂರಣಗಳಿಂದ ತಯಾರಿಸಬಹುದು, ಹಾಗಾಗಿ ಹೆಚ್ಚು ಉಪಯೋಗಿತ್ವ ಮತ್ತು ವೈವಿಧ್ಯಕ್ಕೆ ಅವಕಾಶವಿರುತ್ತದೆ. ಟ್ಯಾಕೊವನ್ನು ಸಾಮಾನ್ಯವಾಗಿ ಅಡುಕಲಗಳಿಲ್ಲದೇ ತಿನ್ನಲಾಗುತ್ತದೆ ಮತ್ತು ಹಲವುವೇಳೆ ಜೊತೆಗೆ ಸಾಲ್ಸಾ, ಆವಕಾಡೊ ಅಥವಾ ಗ್ವಾಕಮೋಲೆ, ಕೊತ್ತಂಬರಿ, ಟೊಮೇಟೊಗಳು, ರುಬ್ಬಿದ ಮಾಂಸ, ಈರುಳ್ಳಿ ಮತ್ತು ಲೆಟಿಸ್‍ನಂತಹ ಅಲಂಕರಣಗಳಿರುತ್ತವೆ.

ಟ್ಯಾಕೊ, ಮೆಕ್ಸಿಕೋದಲ್ಲಿ ಯೂರೋಯೂರೋಪಿಯನ್ನರುಪಿಯನ್ನರು ಬರುವ ಮುಂಚಿನಿಂದಲೂ ಇದೆ. ಮೆಕ್ಸಿಕೋ ಕಣಿವೆಯ ಸರೋವರದ ಪ್ರದೇಶದಲ್ಲಿ ವಾಸಿಸುವ ಸ್ಥಳೀಯ ಜನರನ್ನು ಸಾಂಪ್ರದಾಯಿಕವಾಗಿ ಸಣ್ಣ ಮೀನು ತುಂಬಿದ ಟ್ಯಾಕೋ ಆಹಾರ ಸೇವಿಸಿದ ಮಾನವಶಾಸ್ತ್ರೀಯ ಸಾಕ್ಷ್ಯಗಳಿವೆ. ಟ್ಯಾಕೊಗಳು ವಿವಿಧ ರೀತಿಯಲ್ಲಿ ಜಗತ್ತಿನ ಮೂಲೆ ಮೂಲೆಯಲ್ಲೂ ಪ್ರಸಿದ್ದವಾಗಿದೆ.

"https://kn.wikipedia.org/w/index.php?title=ಟ್ಯಾಕೊ&oldid=967631" ಇಂದ ಪಡೆಯಲ್ಪಟ್ಟಿದೆ