ಝಾಡಮಾಲಿ
ಝಾಡಮಾಲಿ ಪರಿಶಿಷ್ಟ ಜಾತಿಗೆ ಸೇರಿದ ಇವರನ್ನು ಅದಿ ದ್ರಾವಿಡರು ಎಂದು ಗುರುತಿಸಲಾಗುತ್ತದೆ. ಇವರ ವೇಷ ಭೂಷಣಗಳಿಂದ ಆಚಾರ-ಸಂಪ್ರದಾಯಗಳಿಂದ ಇವರನ್ನು ತಮಿಳು ಮೂಲದವರೆಂದು ಸುಲಭವಾಗಿ ಊಹಿಸಬಹುದಾದರೂ ಇವರ ಮನೆ ಭಾಷೆ ತೆಲಗು. ಹೀಗಾಗಿ ಬಹುಶ ತಮಿಳುನಾಡಿನಿಂದ ಆಂದ್ರಕ್ಕೆ ವಲಸೆ ಹೋದ ಇವರು ಅಲ್ಲಿಂದ ಇತ್ತ ಕಡೆ ಬಂದಿದ್ದಾರೆಂದು ಊಹಿಸಬಹುದು[೧]. ಈಗ ಇವರು ಶುದ್ಧ ಕನ್ನಡದಲ್ಲಿ ಮಾತನಾಡಬಲ್ಲರು. ಇವರಲ್ಲಿ ಸುಮಾರು ಜನ ಪುರಸಭೆ , ಗ್ರಾಮ ಪಂಚಾಯಿತಿಗಳಲ್ಲಿ ಪೌರಕಾರ್ಮಿಕರಾಗಿ ಉಳಿದವರು ಕೂಲಿ ಕೆಲಸದಲ್ಲಿ ,ಕಾರ್ಮಿಕರಾಗಿ, ಚಮ್ಮಾರರಾಗಿ ತಮ್ಮನು ತೊಡಗಿಸಿಕೋಂಡಿದ್ದಾರೆ. ಇವರ ಆರ್ಥಿಕ ಸ್ಥಿತಿ ತುಂಬಾ ದುರ್ಬಲವಾಗಿದೆ. ಇವರಲ್ಲಿ ಪ್ರೌಢ ವಿದ್ಯಾಭ್ಯಾಸ ಮುಗಿಸಿರುವವರು ಇಲ್ಲವೇ ಇಲ್ಲ ಎಂಬಷ್ಟು[೨]. ಇವರಲ್ಲಿ ವರದಕ್ಷಣೆ ಪದ್ಧತಿ ಇಲ್ಲ.
ಇವರ ಕುಲದೇವತೆ ಆಧಿಶಕ್ತಿ ಪಟಲದಮ್ಮ. ಈ ದೇವತೆಯ ಗುಡಿಯೊಂದನ್ನು ತಮ್ಮ ಕಾಲೋನಿಯಲ್ಲಿಯೇ ನಿರ್ಮಿಸಿಕೊಂಡಿರುತ್ತಾರೆ. ದೇವಿಗೆ ಪ್ರತಿ ಶಿಕ್ರವಾರವು ಪೂಜೆ ಸಲ್ಲಿಸುತ್ತಾರೆ. ಎರಡು ವರುಷಗಳಿಗೊಮ್ಮೆ ಏಪ್ರಿಲ್ ತಿಂಗಳಲ್ಲಿ ಉತ್ಸವ ಮಾಡುತ್ತಾರೆ. ಉತ್ಸವದಂದು ದೇವಿ ವಿಗ್ರಹವನ್ನು ಹೊಳೆಗೆ ತಗೆದುಕೊಂಡುಹೋಗಿ ಶುದ್ದೀಕರಿಸಿ ಅಲಂಕರಿಸಿ ಹೊಸ ನೀರಿನೊಂದಿಗೆ ತಮಿಳುನಾಡಿನ ತಂಜಾವೂರು, ಕೊಯಂಬತ್ತೂರುಗಳಿಂದ ಕರೆಸಿದ ಕರಗ ಮತ್ತು ವಾದ್ಯ ವಿಶೇಷಗಳೊಡನೆ ಮೆರವಣಿಗೆಯ ಮೂಲಕ ಗುಡಿಗೆ ತಂದು ಪೂಜೆ ಸಲ್ಲಿಸುತ್ತಾರೆ. ಈ ಉತ್ಸವದ ಮರುದಿನ ಕತ್ತಿಮುನ್ನೇಶ್ವರ ದೇವರಿಗೆ ಮರಿ ಒಪ್ಪಿಸುತ್ತಾರೆ. ಇವರ ಮನೆ ದೈವಗಳು ಶ್ರೀರಂಗನಾಥ, ಪೆರ್ಮಾಳು ಗೋಪಾಲಕೃಷ್ಣ, ಆಧಿ ಚಿಕ್ಕಲಮ್ಮ, ಬಣ್ಣಾರಿ ಅಮ್ಮ ಮೊದಲಾದ ತಮಿಳುನಾಡಿನ ದೈವಗಳೇ ಆಗಿವೆ. ವರುಷಕೋಮ್ಮೆಯಾದರು ತಮ್ಮ ಮನೆ ದೈವಗಳ ದರುಷನಕ್ಕೆ ಹೋಗ ಬಯಸುತ್ತಾರೆ. ಸಂಕ್ರಾತಿ ಅಥವಾ ಪೊಂಗಲ್ ಇವರು ಶ್ರಾದ್ಧ ಭಕ್ತಿಯಿಂದ ಆಚರಿಸುವ ಹಬ್ಬ [೩]
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Project, Joshua. "Adi Dravida in India". joshuaproject.net (in ಇಂಗ್ಲಿಷ್). Retrieved 2024-07-22.
- ↑ "ADI DRAVIDAR AND TRIBAL WELFARE | Kancheepuram District,Government of Tamilnadu | City of Thousand Temples | India" (in ಅಮೆರಿಕನ್ ಇಂಗ್ಲಿಷ್). Retrieved 2024-07-22.
- ↑ Government Press (1936). Annual Report Of The Mysore Archaeological Department For The Year 1934.