ಜೋಶ್ ಹೇಜಲ್​ವುಡ್

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಜೋಶ್ ಹೇಜಲ್​ವುಡ್

ಜೋಶ್ ರೇಗಿನಾಲ್ಡ್ ಹೇಜಲ್​ವುಡ್, ಓರ್ವ ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರ. ಆಸ್ಟ್ರೇಲಿಯಾದ ಕೆಳ ಕ್ರಮಾಂಕದ ಎಡಗೈ ಆಟಗಾರ. ಇವರು ಬಲಗೈ ಮಧ್ಯಮ ವೇಗದ ಬೌಲರ್. ದೇಶೀಯ ಕ್ರಿಕೆಟ್ನಲ್ಲಿ ನ್ಯೂ ಸೌತ್ ವೇಲ್ಸ್ ಹಾಗೂ ಸಿಡ್ನಿ ಸಿಕ್ಸರ್ಸ್ ತಂಡಗಳಿಗೆ ಆಡುತ್ತಾರೆ. ೨೦೧೫ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಕೊನೆಯ ಬಾರಿ ಆಡಿದ್ದರು. ೨೦೧೫ರ ನಂತರ ಐಪಿಎಲ್ ಸರಣಿಯಲ್ಲಿ ಪಾಲ್ಗೊಳ್ಳಲಿಲ್ಲ.[೧][೨][೩][೪][೫][೬]

ಆರಂಭಿಕ ಜೀವನ[ಬದಲಾಯಿಸಿ]

ಮಿಚೆಲ್ ರವರು ಜನವರಿ ೦೮, ೧೯೯೧ರಲ್ಲಿ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ನ ಟ್ಯಾಮ್ವರ್ಥ್ ನಲ್ಲಿ ಜನಿಸಿದರು. ಇವರು ಅನ್ನೆ ಹಾಗೂ ತ್ರೇವೋರ್ ದಂಪತಿಯ ಕಿರಿಯ ಮಗ. ಇವರ ಸಹೋದರಿ ಕ್ಯಾಸಿ ಹಾಗೂ ಹಿರಿಯ ಸಹೋದರ ಆರೋನ್. ಜೋಶ್ ನ್ಯೂ ಸೌತ್ ವೇಲ್ಸ್ ನ ಬೆಂದಿಮೀರ್ ಎಂಬ ಸಣ್ಣ ಊರಿನಲ್ಲಿ ಬೆಳೆದರು. ತಮ್ಮ ಬಾಲ್ಯದಲ್ಲಿ ಇವರ ಹಿರಿಯ ಸಹೋದರನ ಜೊತೆಯಲ್ಲಿ ಇವರು ಕ್ರಿಕೆಟ್ ಆಡುತ್ತಿದ್ದರು. ತಮ್ಮ ೧೨ನೇ ವಯಸ್ಸಿನಲ್ಲೇ ಇವರು ನ್ಯೂ ಸೌತ್ ವೇಲ್ಸ್ ನ ಹಿರಿಯರ ಕ್ರಿಕೆಟ್ ತಂಡದಲ್ಲಿ ಆಡುತಿದ್ದರು. ತಮ್ಮ ೧೭ನೇ ವಯಸ್ಸಿನಲ್ಲಿ ಇವರು ನ್ಯೂ ಸೌತ್ ವೇಲ್ಸ್ ನ ರಾಜ್ಯ ಮಟ್ಟದ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವ ಮೂಲಕ ನ್ಯೂ ಸೌತ್ ವೇಲ್ಸ್ ತಂಡದ ಅತೀ ಕಿರಿಯ ವೇಗದ ಬೌಲರ್ ಎಂಬ ಹಿರಿಮೆಗೆ ಪಾತ್ರರಾದರು.[೭][೮][೯][೧೦][೧೧][೧೨]

ವೃತ್ತಿ ಜೀವನ[ಬದಲಾಯಿಸಿ]

ನವಂಬರ್ ೦೮, ೨೦೦೮ರಲ್ಲಿ ಸಿಡ್ನಿಯಲ್ಲಿ ನ್ಯೂ ಜೀಲ್ಯಾನ್ದರ್ಸ್ ಹಾಗೂ ನ್ಯೂ ಸೌತ್ ವೇಲ್ಸ್ ವಿರುಧ್ಧ ನಡೆದ ಪಂದ್ಯದ ಮೂಲಕ ಇವರು ಪ್ರಥಮ ದರ್ಜೆ ಕ್ರಿಕೆಟಿಗೆ ಪಾದಾರ್ಪನೆ ಮಾಡಿದರು.[೧೩]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಜೂನ್ ೨೨, ೨೦೧೦ ರಂದು ಇಂಗ್ಲೆಂಡ್ ನ ಸೌತ್ ಹ್ಯಾಂಥಮ್ ನಲ್ಲಿ ಇಂಗ್ಲೆಂಡ್ ವಿರುಧ್ಧ ನಡೆದ ಮೊದಲನೇ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೧೪] ಫೆಬ್ರವರಿ ೧೩, ೨೦೧೩ ರಂದು ಬ್ರಿಸ್ಬೇನ್ ನಲ್ಲಿ ವೆಸ್ಟ್ ಇಂಡೀಸ್ ವಿರುಧ್ಧ ನಡೆದ ಏಕೈಕ ಟಿ-೨೦ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೧೫] ಡಿಸೆಂಬರ್ ೧೨, ೨೦೧೪ ರಂದು ಬ್ರಿಸ್ಬೇನ್ ನಲ್ಲಿ ಭಾರತದ ವಿರುದ್ಧ ನಡೆದ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಲ್ಲಿ ಪಾದಾರ್ಪಣೆ ಮಾಡಿದರು.[೧೬]

ಪಂದ್ಯಗಳು[ಬದಲಾಯಿಸಿ]

 • ಏಕದಿನ ಕ್ರಿಕೆಟ್ : ೪೪ ಪಂದ್ಯಗಳು[೧೭][೧೮]
 • ಟೆಸ್ಟ್ ಕ್ರಿಕೆಟ್ : ೪೭ ಪಂದ್ಯಗಳು
 • ಟಿ-೨೦ ಕ್ರಿಕೆಟ್ : ೦೭ ಪಂದ್ಯಗಳು

ವಿಕೇಟ್[ಬದಲಾಯಿಸಿ]

 1. ಟೆಸ್ಟ್ ಪಂದ್ಯಗಳಲ್ಲಿ: ೧೮೨
 2. ಏಕದಿನ ಪಂದ್ಯಗಳಲ್ಲಿ: ೭೨
 3. ಟಿ-೨೦ ಪಂದ್ಯಗಳಲ್ಲಿ: ೦೮

ಉಲ್ಲೇಖಗಳು[ಬದಲಾಯಿಸಿ]

 1. https://www.iplt20.com/teams/mumbai-indians/squad
 2. http://www.espncricinfo.com/indian-premier-league-2015/content/squad/832943.html
 3. https://www.news18.com/cricketnext/profile/josh-hazlewood/4255.html
 4. https://m.timesofindia.com/topic/Josh-Hazlewood
 5. https://www.icc-cricket.com/champions-trophy/players/857
 6. https://www.cricketcountry.com/players/josh-hazlewood/
 7. https://www.couriermail.com.au/sport/cricket/australia-v-india-2014-josh-hazlewoods-hostile-backyard-games-prepare-him-for-test-brimstone/news-story/f72a2cb964c0a4cf7e5a97101401f86e
 8. https://www.smh.com.au/sport/cricket/josh-hazlewood-and-nathan-lyon-credit-country-upbringing-for-success-20151204-glfnhc.html
 9. http://www.espncricinfo.com/england-v-australia-2010/content/story/464269.html
 10. https://www.kookaburra.biz/en-in/cricket/team-kookaburra/international/josh_hazlewood_aus/
 11. https://www.wisden.com/players/josh-hazlewood
 12. https://www.mykhel.com/cricket/players/josh-hazlewood-p4818/
 13. https://www.espncricinfo.com/series/13817/scorecard/351676/new-south-wales-vs-new-zealanders-tour-match-new-zealand-tour-of-australia-2008-09
 14. https://www.espncricinfo.com/series/13240/scorecard/426387/england-vs-australia-1st-odi-australia-tour-of-england-and-ireland-2010
 15. https://www.espncricinfo.com/series/12230/scorecard/573027/australia-vs-west-indies-only-t20i-west-indies-tour-of-australia-2012-13
 16. https://www.espncricinfo.com/series/8525/scorecard/754739/australia-vs-india-2nd-test-border-gavaskar-trophy-2014-15
 17. https://www.cricbuzz.com/profiles/6258/josh-hazlewood
 18. http://www.espncricinfo.com/australia/content/player/288284.html