ಜೋನಸ್ ಸಹೋದರರು
Jonas Brothers | |
---|---|
ಹಿನ್ನೆಲೆ ಮಾಹಿತಿ | |
ಮೂಲಸ್ಥಳ | United States |
ಸಂಗೀತ ಶೈಲಿ | Pop,[೧] soft rock[೨], post-grunge[೧] |
ಸಕ್ರಿಯ ವರ್ಷಗಳು | 2005–present |
Labels | Columbia, Daylight, Fascination, Hollywood, INO |
ಅಧೀಕೃತ ಜಾಲತಾಣ | www.jonasbrothers.com/ |
ಸಧ್ಯದ ಸದಸ್ಯರು | Joe Jonas Kevin Jonas Nick Jonas |
ಜೋನಸ್ ಬ್ರದರ್ಸ್ ಅಮೇರಿಕದ ಪಾಪ್ ರಾಕ್ ಯುವಕರ ತಂಡ.[೩][೪][೫][೬] ತಂಡವು ತನ್ನ ಜನಪ್ರಿಯತೆಯನ್ನು ಡಿಸ್ನಿ ವಾಹಿನಿಯ ಮಕ್ಕಳ ದೂರದರ್ಶನ ಕಾರ್ಯಕ್ರಮದಿಂದ ಗಳಿಸಿತು. ನ್ಯೂ ಜರ್ಸಿ ರಾಜ್ಯದ, ವೈಕಾಫ್ ನಗರದ ಈ ತಂಡವು, ಮೂವರು ಸಹೋದರರಾದ ಪೌಲ್ ಕೆವಿನ್ ಜೊನಸ್ II(ಕೆವಿನ್ ಜೊನಸ್), ಜೋಸೆಫ್ ಆಡಮ್ ಜೊನಸ್(ಜಾಯ್ ಜೊನಸ್), ಮತ್ತು ನಿಖೊಲಸ್ ಜೆರ್ರಿ ಜೊನಸ್ (ನಿಕ್ ಜೊನಾಸ್)ರನ್ನು ಒಳಗೊಂಡಿದೆ. 2008 ರ ಬೇಸಿಗೆಯಲ್ಲಿ,ಇವರು ಡಿಸ್ನಿ ವಾಹಿನಿಯ ಮೂಲ ಚಿತ್ರ ಕ್ಯಾಂಪ್ ರಾಕ್ ನಲ್ಲಿ ಅಭಿನಯಿಸಿದರು. ಈ ತಂಡವು ನಾಲ್ಕು ಅಲ್ಬಮ್‌ಗಳನ್ನು ಬಿಡುಗಡೆ ಮಾಡಿತು: ಇಟ್ಸ್ ಎಬೌಟ್ ಟೈಮ್ , ಜೋನಸ್ ಬ್ರದರ್ಸ್ , ಎ ಲಿಟ್ಲ್ ಬಿಟ್ ಲಾಂಗರ್ ಹಾಗೂ ಲೈನ್ಸ್,ವೈನ್ಸ್ ಎಂಡ್ ಟ್ರೈಯಿಂಗ್ ಟೈಮ್ . 2008ರ 51ನೆ ಗ್ರಾಮೀ ಪ್ರಶಸ್ತಿಯಲ್ಲಿ, ಶ್ರೇಷ್ಠ ಹೊಸ ಕಲಾವಿದರು ವಿಭಾಗಕ್ಕೆ ಇವರ ಹೆಸರು ಸೂಚಿಸಲ್ಪಟ್ಟಿತು ಮತ್ತು ಅಮೇರಿಕನ್ ಮ್ಯೂಸಿಕ್ ಅವಾರ್ಡ್ಸ್ ನಲ್ಲಿ ಬ್ರೇಕ್ ಥ್ರೋ ಆರ್ಟಿಸ್ಟ್ ಪ್ರಶಸ್ತಿಯನ್ನು ಇವರು ಗೆದ್ದರು. 2009 ಮೇನಲ್ಲಿ, ಅವರು ಲೈನ್ಸ್,ವೈನ್ಸ್ ಎಂಡ್ ಟ್ರೈಯಿಂಗ್ ಟೈಮ್ ಬಿಡುಗಡೆಗೆ ಮುಂಚೆ,ಜಗತ್ತಿನಾದ್ಯಂತ ಎಂಟು ಮಿಲಿಯನ್ ಅಲ್ಬಮ್‌ಗಳನ್ನು ಮಾರಾಟಮಾಡಿದರು.[೭]
ಇತಿಹಾಸ
[ಬದಲಾಯಿಸಿ]ನಿಕ್ ಜೋನಸ್: ಅನ್ವೇಷಣೆ ಮತ್ತು ಒಬ್ಬರಿಂದಲೇ ಅಲ್ಬಮ್(1999–2005)
[ಬದಲಾಯಿಸಿ]ಈ ತಂಡವು ನಿಕ್ ಜೋನಸ್ ಪರವಾಗಿ ಅವರ ಏಕೈಕ ಪ್ರದರ್ಶನದ ಕಾರ್ಯಕ್ರಮಗಳನ್ನು ಪ್ರಾರಂಭಿಸಿತು.[೮][೯][೧೦] ನಿಖೋಲಸ್ ತಮ್ಮ 7 ನೇ ವರ್ಷದಲ್ಲಿ ಬ್ರಾಡ್ ವೇನಲ್ಲಿ ಪ್ರದರ್ಶನ ನೀಡಲು ಪ್ರಾರಂಭಿಸಿದರು.[೧೧][೧೨] ಇವರು, ಎ ಕ್ರಿಸ್ ಮಸ್ ಕರೋಲ್ (2000 ದಲ್ಲಿ ಟಿನಿ ಟಿಮ್ ಮತ್ತು ಎಂಟರಲ್ಲಿ ಸ್ಕ್ರೂಜ್ ಆಗಿ),ಎನಿ ಗೆಟ್ ಯುವರ್ ಗನ್ (2001 ರಲ್ಲಿ ಲಿಟ್ಲ್ ಜ್ಯಾಕ್ ಆಗಿ),ಬ್ಯೂಟಿ ಎಂಡ್ ದಿ ಬೀಸ್ಟ್ (2002 ರಲ್ಲಿ ಚಿಪ್ ಆಗಿ) ಮತ್ತು ಲೆಸ್ ಮಿಸರೇಬಲ್ಸ್ (2003 ರಲ್ಲಿ ಗವ್ರೊಚೆ ಆಗಿ) ಹಲವು ನಾಟಕಗಳಲ್ಲಿ ಅಭಿನಯಿಸಿದರು.[೧೨][೧೩][೧೪][೧೫] ಲೆಸ್ ಮಿಸರೇಬಲ್ಸ್ ಮುಗಿದ ನಂತರ, ಇವರು ಪೇಪರ್ ಮಿಲ್ ಪ್ಲೇಹೌಸ್ ನಲ್ಲಿ ದಿ ಸೌಂಡ್ ಆಫ್ ಮ್ಯುಸಿಕ್ ನಲ್ಲಿ(ಕರ್ಟ್ ಆಗಿ)ಅಭಿನಯಿಸಿದರು.[೧೬]
2002 ರಲ್ಲಿ,ಬ್ಯೂಟಿ ಎಂಡ್ ಬೀಸ್ಟ್ ಪ್ರದರ್ಶನ ನಡೆಯುವಾಗ, ನಿಕ್ ಅವರು ತಮ್ಮ ತಂದೆಯ ಜೊತೆಗೂಡಿ "ಜಾಯ್ ಟು ದಿ ವರ್ಲ್ಡ್(ಕ್ರಿಸ್ ಮಸ್ ಪ್ರಾರ್ಥನೆ)" ಪದ್ಯ ಬರೆದರು. ಬ್ಯೂಟಿ ಎಂಡ್ ಬೀಸ್ಟ್ ನಟವರ್ಗದವರ ಹಿಮ್ಮೇಳನ ಸಂಗೀತದಲ್ಲಿ ನಿಕ್ 2002ರ ವಾರ್ಷಿಕ ಬ್ರಾಡ್ ವೇ ಅಲ್ಬಮ್ "ಈಕ್ವಿಟಿ ಫೈಟ್ಸ್ ಏಡ್ಸ್" ನಲ್ಲಿ ಬ್ರಾಡ್ ವೇ ಯ ಶ್ರೇಷ್ಠ ಕಾಣಿಕೆ: ಕರೋಲ್ಸ್ ಫಾರ್ ಎ ಕ್ಯೂರ್, ಭಾಗ 4 ಈ ಗೀತೆಯನ್ನು ಹಾಡಿದರು.[೧೭][೧೮] 2003 ನವೆಂಬರ್ ನಲ್ಲಿ ಐಎನ್ ಒ ರೆಕಾರ್ಡ್ಸ್ "ಜಾಯ್ ಟು ದಿ ವರ್ಲ್ಡ್ (ಕ್ರಿಸ್‌ಮಸ್ ಪ್ರಾರ್ಥನೆ)" ಸಂಗೀತ ಪ್ರದರ್ಶನದ ಪ್ರತಿಯನ್ನು ತರಿಸಿಕೊಂಡಿತು.[೧೯] ಇದು ಕ್ರಿಶ್ಚಿಯನ್ ರೇಡಿಯೊದಲ್ಲಿ ಈ ಗೀತೆಯನ್ನು ಬಿಡುಗಡೆ ಮಾಡಿತು. ಆದ್ದರಿಂದ ಇದು ಶೀಘ್ರದಲ್ಲಿಯೇ ಜನಪ್ರಿಯತೆ ಗಳಿಸಿತು ಹಾಗೂ ರೇಡಿಯೋದ ಕ್ರಿಶ್ಚಿಯನ್ ಅಡಲ್ಟ್ ಕಂಟೆಂಪೊರರಿ ಚಾರ್ಟ್‌ನಲ್ಲಿ ದಾಖಲೆ ಮಾಡಿತು.[೧೮] ನಿಕ್ ಅವರು ತಮ್ಮ ಏಕ ಪ್ರದರ್ಶನದ ಕೆಲಸದಲ್ಲಿ ನಿರತರಾದಾಗ,ಜಾಯ್ ಅವರು ಬ್ರಾಡ್ ವೇ ನಲ್ಲಿ ನಿಕ್ ರ ಹೆಜ್ಜೆಗುರುತಿನಂತೆ ಪ್ರವೇಶನೀಡಿದರು ಮತ್ತು ಬಝ್ ಲುರ್ಹಮನ್‌ರ ತಯಾರಿಕೆಯ ಲಾ ಬೊಹೆಮೆ ನಲ್ಲಿ ಕಾಣಿಸಿಕೊಂಡರು. ನಿಕ್ ಪ್ರಕಾರ ಆ ವರ್ಷ ಅದೇ ಮೊದಲ ಬಾರಿಗೆ ಮೂರೂ ಸಹೋದರರು ಸೇರಿ ಗೀತೆ ಬರೆಯಲು ಪ್ರಾರಂಭಿಸಿದರು ಕೂಡ.[೨೦]
2004ಸೆಪ್ಟೆಂಬರ್ ನಲ್ಲಿ,ಕೋಲಂಬಿಯಾ ರೆಕಾರ್ಡ್ಸ್ ನ ಕಾರ್ಯನಿರ್ವಾಹಕ ಅಧಿಕಾರಿ ನಿಕ್ ರ ಹಾಡಿನ ಬಗ್ಗೆ ಕೇಳಿದರು.[೧೭][೧೮] ನಿಕ್ ಅವರು ಜಂಟಿಯಾಗಿ ಐಎನ್ ಒ ರೆಕಾರ್ಡ್ಸ್ ಮತ್ತು ಕೋಲಂಬಿಯಾ ರೆಕಾರ್ಡ್ಸ್ ಗೆ ಸಹಿ ಹಾಕಿದರು ಹಾಗೂ "ಡಿಯರ್ ಗಾಡ್" ಹಾಡನ್ನು ಬಿಡುಗಡೆ ಮಾಡಿದರು.[೨೧] ನಂತರ ಒಬ್ಬರೇ ಮುದ್ರಿಸಿದ ಹೊಸ "ಜಾಯ್ ಟು ದಿ ವರ್ಲ್ಡ್(ಕ್ರಿಸ್ ಮಸ್ ಪ್ರಾರ್ಥನೆ)" ಅನ್ನು ನವೆಂಬರ್ 16 ರಂದು ಬಿಡುಗಡೆ ಮಾಡಿದರು.[೨೨] ಅವರೊಬ್ಬರದೇ ಸ್ವ ಶೀರ್ಷಿಕೆಯ ಅಲ್ಬಮ್ ನಿಖೊಲಸ್ ಜೋನಸ್ ಡಿಸೆಂಬರ್ ನಲ್ಲಿ ಬಿಡುಗಡೆಯಾಗುವುದಿತ್ತು,ಹಾಗಿದ್ದರೂ ಅಲ್ಬಮ್ ಸ್ವಲ್ಪ ತಡವಾಗಿ[೨೩] ಬಿಡುಗಡೆಯಾಯಿತು.[೨೪] ಅಲ್ಬಮ್‌ಗಾಗಿ,ನಿಕ್ ತಮ್ಮ ಸಹೋದರರಾದ ಕೆವಿನ್ ಹಾಗೂ ಜಾಯ್ ಜೊತೆಗೂಡಿ ಇನ್ನೂ ಹಲವು ಗೀತೆಗಳನ್ನು ರಚಿಸಿದರು.[೧೭] 2005 ರ ಪೂರ್ವದಲ್ಲಿ,ಕೊಲಂಬಿಯಾ ರೆಕಾರ್ಡ್ಸ್ ನ ಹೊಸ ಅಧ್ಯಕ್ಷರಾದ ಸ್ಟೀವ್ ಗ್ರೀನ್ ಬರ್ಗ್ ನಿಕ್‌ರ ಮುದ್ರಣವನ್ನು ಕೇಳಿದರು. ಗ್ರೀನ್ ಬರ್ಗ್ ನಿಕ್ ಅವರ ಧ್ವನಿಯನ್ನು ಇಷ್ಟಪಟ್ಟರು.[೨೫] ನಿಕ್ ಅವರ ಭೇಟಿಯ ನಂತರ ಮತ್ತು ಮೂವರು ಸಹೋದರರಿಂದ ಬರೆದ ಹಾಗೂ ನಿರ್ವಹಿಸಿದ ಅವರ ಗೀತೆ "ಪ್ಲೀಸ್ ಬಿ ಮೈನ್" ಕೇಳಿದ ನಂತರ,ಡೇಲೈಟ್/ಕೋಲಂಬಿಯಾ ರೆಕಾರ್ಡ್ಸ್ ಗುಂಪಿನ ನಟನೆಗೆ ಈ ಮೂವರ ಜೊತೆ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿತು.[೧೭][೨೬][೨೭]
(2005–2006)ರ ಕಾಲಾವಧಿ
[ಬದಲಾಯಿಸಿ]ಕೋಲಂಬಿಯಾಕ್ಕೆ ಸಹಿ ಮಾಡಿದ ನಂತರ,ಸಹೋದರರು "ಜೋನಸ್ ಬ್ರದರ್ಸ್"ಎಂದು ತಮ್ಮ ತಂಡಕ್ಕೆ ನಿಶ್ಚಿತ ನಾಮಕರಣ ಮಾಡುವ ಮೊದಲು,"ಸನ್ಸ್ ಆಫ್ ಜೊನಸ್" ಎಂದು ಹೆಸರಿಟ್ಟರು.[೨೮] 2005 ರ ಪೂರ್ತಿ, ಈ ಸಹೋದರರು ಜಂಪ್5, ಕೆಲ್ಲಿ ಕ್ಲಾರ್ಕ್ ಸನ್, ಜೆಸ್ಸಿ ಮೆಕ್ ಕಾರ್ಟ್ನಿ, ಬ್ಯಾಕ್ ಸ್ಟ್ರೀಟ್ ಬಾಯ್ಸ್ ಮತ್ತು ದಿ ಕ್ಲಿಕ್ ಫೈವ್ ಸೇರಿದಂತೆ ಅನೇಕ ಕಲಾವಿದರ ಅನಾವರಣ ಕಾರ್ಯಕ್ರಮಗಳಿಗೆ ಹಲವು ಪ್ರವಾಸಗಳನ್ನು ಕೈಗೊಂಡರು.[೮][೨೯] ವರ್ಷದ ನಂತರದ ಭಾಗದಲ್ಲಿ ಇವರು ಅಲೈ & ಎಜೆ ಮತ್ತು ದಿ ಚೀತಾ ಗರ್ಲ್ಸ್ ಜೊತೆ ಮಾದಕ ವಸ್ತು ವಿರೋಧಿ ಪ್ರವಾಸದಲ್ಲಿ ತೊಡಗಿದರು.[೨೯][೩೦] ಅದರ ಜೊತೆಗೆ, 2006 ರ ಪೂರ್ವದಲ್ಲಿ ಇವರು ದಿ ವೆರೊನಿಕಾಸ್ ಅನಾವರಣಗೊಳಿಸಿದರು.[೧೭] ಇಟ್ಸ್ ಎಬೌಟ್ ಟೈಮ್ ಶೀರ್ಷಿಕೆಯ ಅಲ್ಬಮ್‌ಗಾಗಿ ತಂಡವು ಹಲವು ಬರಹಗಾರರ ಸಹಾಯವನ್ನು ಪಡೆಯಿತು. ಅವರೆಂದರೆ ಆದಮ್ ಶ್ಲೆಸಿಂಗರ್(ಫೌಂಟೇನ್ಸ್ ಆಫ್ ವೇನ್), ಮೈಕೆಲ್ ಮಂಗಿನಿ (ಜಾಸ್ ಸ್ಟೋನ್), ಡೆಸ್ಮಂಡ್ ಚೈಲ್ಡ್ (ಏರೊಸ್ಮಿಥ್,ಬೊನ್ ಜೊವಿ), ಬಿಲ್ಲಿ ಮನ್ (ಡೆಸ್ಟಿನೀಸ್ ಚೈಲ್ಡ್, ಜೆಸ್ಸಿಕಾ ಸಿಂಪ್ಸನ್) ಮತ್ತು ಸ್ಟೀವ್ ಗ್ರೀನ್ ಬರ್ಗ್.[೩೦] ಪ್ರಾರಂಭದಲ್ಲಿ ಈ ಅಲ್ಬಮ್ ಅನ್ನು 2006 ಫೆಬ್ರುವರಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು ಆದರೆ ಇದು ಹಲವು ಬಾರಿ ಮುಂದೂಡಲ್ಪಟ್ಟಿತು.[೧೭][೨೬][೨೯][೩೦] ಸೋನಿಯ ಕಾರ್ಯಾಂಗದಲ್ಲಿನ ಬದಲಾವಣೆಯಿಂದಾಗಿ ಇದು ಮುಂದೂಡಲ್ಪಟ್ಟಿತು(ಸೋನಿಯು ಕೋಲಂಬಿಯಾದ ಮೂಲ ಕಂಪೆನಿ) ಕಾರಣ ಇದು ಅಲ್ಬಮ್‌ನಲ್ಲಿ "ಇನ್ನೊಂದು ಮುಖ್ಯ ಏಕೈಕ" ಪಾತ್ರಧಾರಿಯನ್ನು ಅಪೇಕ್ಷಿಸಿತ್ತು. ಈ ಅಲ್ಬಮ್‌ಗಾಗಿ ಜೊನಸ್ ಸಹೋದರರು ಯು.ಕೆ. ಬ್ಯಾಂಡ್ ಬಸ್ಟೆಡ್‌ನ ಎರಡು ಯಶಸ್ವಿ ಗೀತೆ-"ಇಯರ್ 3000" ಮತ್ತು "ವಾಟ್ ಐ ಗೋ ಟು ಸ್ಕೂಲ್ ಫಾರ್" ಅನ್ನು ಬಳಸಿಕೊಂಡರು.[೨೫] ಜೊನಸ್ ಸಹೋದರರ ಮೊದಲ ಒಂಟಿ ಅಲ್ಬಮ್ "ಮ್ಯಾಂಡಿ" ಡಿಸೆಂಬರ್ 27, 2005ರಂದು ಬಿಡುಗಡೆಯಾಯಿತು.[೩೧] ಇದರ ಮ್ಯುಸಿಕ್ ವೀಡಿಯೊವನ್ನು ಫೆಬ್ರುವರಿ 22, 2006ರಲ್ಲಿ [77]ಎಮ್ ಟಿವಿ ಯ ಟೋಟಲ್ ರಿಕ್ವೆಸ್ಟ್ ಲೈವ್ ಕಾರ್ಯಕ್ರಮದಲ್ಲಿ ತೋರಿಸಲಾಯಿತು ಮತ್ತು ಇದು ನಾಲ್ಕನೇ ಸ್ಥಾನವನ್ನು ಪಡೆಯಿತು. ಮತ್ತೊಂದು ಗೀತೆ "ಟೈಮ್ ಫಾರ್ ಮಿ ಟು ಫ್ಲೈ" ಅಕ್ವಾಮರಿನ್ ಧ್ವನಿವಾಹಿನಿಯಲ್ಲಿ ಫೆಬ್ರುವರಿಯಲ್ಲಿ ಬಿಡುಗಡೆಯಾಯಿತು.[೩೨] ಮಾರ್ಚ್‌ನಲ್ಲಿ "ಮ್ಯಾಂಡಿ" ಅಲ್ಬಮ್ ನಿಕಲೋಡಿಯನ್ ಟೆಲಿವಿಷನ್ ಚಿತ್ರದಲ್ಲಿ ಜಾಯ್ 101:ಸ್ಪ್ರಿಂಗ್ ಬ್ರೇಕ್ ಅಪ್ ಮತ್ತುZoey 101: Music Mix ಸೌಂಡ್ ಟ್ರ್ಯಾಕ್ ಅಲ್ಬಮ್ ನಲ್ಲಿ ತೋರಿಸಲ್ಪಟ್ಟಿತು. ನಟವರ್ಗದಲ್ಲಿ ನಿಖೋಲಸ್ ಜೊನಸ್ ಅವರನ್ನು ತೋರಿಸಲಾಯಿತು.[೩೨] ಇವರ ಗುಂಪು ಸಂಗೀತವನ್ನು ಕಾರ್ಟೂನ್ ನೆಟ್ ವರ್ಕ್ ನ ಕಾರ್ಟೂನ್ ಕಾರ್ಟೂನ್ ಫ್ರೈಡೇಸ್ ನಲ್ಲಿ ಕೂಡ ತೋರಿಸಲಾಯಿತು.[೮][೩೨] ಏಪ್ರಿಲ್ 4, 2006ರಂದು ಬಿಡುಗಡೆಗೊಂಡ ಡಿಸ್ನಿಮನಿಯಾ 4 ಅಲ್ಬಮ್ ಗೆ ಈ ತಂಡ ಪೈರೇಟ್ಸ್ ಆಫ್ ದಿ ಕೆರೇಬಿಯನ್ ನಿಂದ "ಯೋ ಹೋ(ಎ ಪೈರೇಟ್ಸ್ ಲೈಫ್ ಫಾರ್ ಮಿ) "ಯನ್ನು ಬಳಸಿಕೊಂಡಿತು.[೩೩] 2006ರ ಬೇಸಿಗೆಯ ನಂತರ ಜೊನಸ್ ಸಹೋದರರು ಅಲೈ & ಎಜೆ ಜೊತೆ ಪ್ರವಾಸ ಕೈಗೊಂಡರು.[೩೪] ಜೂನ್ 2006 ರಿಂದ ಸೆಪ್ಟೆಂಬರ್ 2007 ರ ವರೆಗೆ ಡಿಸ್ನಿ ಚಾನೆಲ್ ನಲ್ಲಿ ನಡೆಯುವ ಎರಡನೆ ಅವಧಿಯ ಅಮೇರಿಕನ್ ಡ್ರ್ಯಾಗನ್ ಜೇಕ್ ಲಾಂಗ್ ನ ವಿಷಯ ಸೂಚಿಸುವ ಗೀತೆಯನ್ನು ಜೊನಸ್ ಸಹೋದರರು ರಚಿಸಿದರು.[೩೨][೩೫] ಕೊನೆಗೂ ಇಟ್ಸ್ ಎಬೌಟ್ ಟೈಮ್ ಆಗಸ್ಟ್ 8, 2006ರಂದು ಬಿಡುಗಡೆಯಾಯಿತು.[೩೬] ತಂಡದ ಕಾರ್ಯನಿರ್ವಾಹಕಾಧಿಕಾರಿಯ ಪ್ರಕಾರ ಅಲ್ಬಮ್ ಅನ್ನು 50,000 ಪ್ರತಿಗಳ "ಅಲ್ಪ ಪ್ರಮಾಣದ ಬಿಡುಗಡೆ" ಮಾಡಲಾಯಿತು. ಇದರಿಂದ ಅಲ್ಬಮ್ ಅನ್ನು ಇಬೆಯಂತಹ ಹರಾಜು ತಾಣದಲ್ಲಿ $200–$೩೦೦ ಯುಎಸ್ ಡಿಗೆ ಮಾರಾಟ ಮಾಡಲಾಯಿತು. ಸೋನಿ ಈ ಸಹೋದರರಿಗೆ ಮುಂದೆ ಬೆಂಬಲ ನೀಡಲು ಇಚ್ಛಿಸದ ಕಾರಣ ಜೊನಸ್ ಸಹೋದರರು ತಮ್ಮ ಬ್ರಾಂಡ್ ಅನ್ನು ಸೀಓನಿ ಕಂಪೆನಿಯಿಂದ ಹಿಂತೆಗೆದುಕೊಳ್ಳಲು ನಿರ್ಧರಿಸಿದರು. 2004 ರಲ್ಲಿ ನಿಕ್ ಅವರ ಸೋಲೋ ಸಿಂಗಲ್,"ಜಾಯ್ ಟು ದಿ ವರ್ಲ್ಡ್(ಕ್ರಿಸ್ ಮಸ್ ಪ್ರಾರ್ಥನಾ ಗೀತೆ), ಅಕ್ಟೋಬರ್ 3, 2006ರಲ್ಲಿ ಜಾಯ್ ಟು ದಿ ವರ್ಲ್ಡ್:ದಿ ಅನ್ ಲಿಮಿಟೆಡ್ ಕ್ರಿಸ್ಮಸ್ ಕಲೆಕ್ಷನ್ ಎಂದು ಮರು ಬಿಡುಗಡೆ ಹೊಂದಿತು.[೩೭] ಅಕ್ಟೋಬರ್‌ನಲ್ಲಿ ಜೊನಸ್ ಸಹೋದರರು ದಿ ಲಿಟ್ಲ್ ಮರ್ಮೇಡ್ ನಿಂದ" ಪೂರ್ ಅನ್ ಫಾರ್ಚುನೇಟ್ ಸೌಲ್ಸ್" ಅನ್ನು ಬಳಸಿಕೊಂಡರು. ಒಂದು ಮ್ಯೂಸಿಕ್ ವೀಡಿಯೊ ಜೊತೆಯಲ್ಲಿ, ಈ ಗೀತೆಯು ಎರಡು ಡಿಸ್ಕ್ ನಲ್ಲಿ ದಿ ಲಿಟ್ಲ್ ಮರ್ ಮೇಡ್ ಸೌಂಡ್ ಟ್ರ್ಯಾಕ್ ಎಂಬ ವಿಶೇಷ ಮುದ್ರಣದಲ್ಲಿ ಬಿಡುಗಡೆಗೊಂಡಿತು.[೩೮] ಇಟ್ಸ್ ಎಬೌಟ್ ಟೈಂ ನ ಎರಡನೆ ಸಿಂಗಲ್ "ಇಯರ್ 3000". ಈ ಗೀತೆಯು ರೇಡಿಯೊ ಡಿಸ್ನಿಯಲ್ಲಿ ಬಹಳ ಜನಪ್ರಿಯವಾಯಿತು ಮತ್ತು ಇದರ ಮ್ಯೂಸಿಕ್ ವೀಡಿಯೊ 2007 ಜನೆವರಿಯಲ್ಲಿ ಡಿಸ್ನಿ ಚಾನೆಲ್‌ನಲ್ಲಿ ಪ್ರಥಮ ಪ್ರಸಾರ ಕಂಡಿತು. ಅಂತಿಮವಾಗಿ 2007 ರ ಪೂರ್ವದಲ್ಲಿ ತಂಡವು ಕೋಲಂಬಿಯಾ ರೆಕಾರ್ಡ್ಸ್ ಜೊತೆ ಸಂಬಂಧವನ್ನು ಕಳಚಿಕೊಂಡಿತು.
ಜೋನಸ್ ಸಹೋದರರು (2007–2008)
[ಬದಲಾಯಿಸಿ]ಫೆಬ್ರುವರಿ 2007ರಲ್ಲಿ ಯಾವುದೇ ಗುರುತು ಪಟ್ಟಿ ಇಲ್ಲದೆ ಜೋನಸ್ ಸಹೋದರರು ಹಾಲಿವುಡ್ ರೆಕಾರ್ಡ್ಸ್ ಜೊತೆ ಒಪ್ಪಂದ ಮಾಡಿಕೊಂಡರು.[೩೯] ಅದೇ ವೇಳೆಯಲ್ಲಿ ಸಹೋದರರು ಬೇಬಿ ಬಾಟ್ಲ್ ಪಾಪ್‌ಗಳಲ್ಲಿ ಜಿಂಗಲ್ ಪದ್ಯ ಹೇಳುವುದರೊಂದಿಗೆ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು.[೪೦] ಮಾರ್ಚ್ 24 ಕ್ಕೆ, ಎರಡು ಬೇರೆ ಬೇರೆ ಅಲ್ಬಮ್ ಗಳ ಮತ್ತೆರಡು ಗೀತೆಗಳು ಬಿಡುಗಡೆಯಾದವು: ಮೀಟ್ ದಿ ರಾಬಿನ್ ಸನ್ಸ್ ಸೌಂಡ್ ಟ್ರ್ಯಾಕ್[೪೧] ನಿಂದ "ಕಿಡ್ಸ್ ಆಫ್ ದಿ ಫ್ಯೂಚರ್"(ಕಿಮ್ ವೈಲ್ಡ್ ರ "ಕಿಡ್ಸ್ ಇನ್ ಅಮೇರಿಕಾ"ವನ್ನು ಆದರಿಸಿದ್ದು) ಮತ್ತು ಡಿಸ್ನಿಮೇನಿಯಾ 5 ನ "ಐ ವನ್ನಾ ಬಿ ಲೈಕ್ ಯು".[೪೨] ಜೊನಸ್ ಸಹೋದರರು ಮೊದಲ ಬಾರಿಗೆ ಏಪ್ರಿಲ್ 9, 2007 ಸೋಮವಾರದಂದು ಶ್ವೇತ ಭವನವನ್ನು ಪ್ರವೇಶಿಸಿದರು ಮತ್ತು ಅಲ್ಲಿ ವಾರ್ಷಿಕ ವೈಟ್ ಹೌಸ್ ಈಸ್ಟರ್ ಎಗ್ ರೋಲ್‌ನಲ್ಲಿ ರಾಷ್ಟ್ರ ಗೀತೆಯನ್ನು ಹಾಡಿದರು.[೪೩] ಜೂನ್ 27, 2007 ಬುಧವಾರದಂದು, ಸೌತ್ ಲಾನ್‌ನಲ್ಲಿ ನಡೆದ ಮಹಿಳೆಯರ ಉತ್ಸವ ಟೀ ಬಾಲ್ ಸ್ಪೋರ್ಟ್ಸ್‌ನ ನಂತರ ಇವರು ಮರಳಿದರು. ಜೊನಸ್ ಸಹೋದರರು ಅಲ್ಲಿ ರಾಷ್ಟ್ರಗೀತೆಯನ್ನು ಹಾಡಿದರು ಮತ್ತು ಆಟದ ನಂತರ ವಿಹಾರಕೂಟದಲ್ಲಿ ತಮ್ಮ ಆಯ್ದ ಹಲವು ಯಶಸ್ವಿ ಗೀತೆಗಳಿಂದ ಎಲ್ಲರ ಮನ ರಂಜಿಸಿದರು.[೪೪] ಆಗಸ್ಟ್ 7, 2007 ರಂದು ಅವರ ಸ್ವ-ಶೀರ್ಷಿಕೆಯ ಎರಡನೆಯ ಅಲ್ಬಮ್ ಬಿಡುಗಡೆಯಾಯಿತು.[೪೫] ಇದು ಬಿಡುಗಡೆಯಾದ ಮೊದಲ ವಾರದಲ್ಲಿ, ಬಿಲ್ ಬೋರ್ಡ್ ಹಾಟ್ 200ರ ಪಟ್ಟಿಯಲ್ಲಿ ಐದನೇ ಸ್ಥಾನ ಗಳಿಸಿತು. ಎರಡು ಗೀತೆಗಳ ಜೊತೆ ಅದೇ ವೇಳೆಯಲ್ಲಿ ಮ್ಯೂಸಿಕ್ ವೀಡಿಯೊ ಕೂಡ ಬಿಡುಗಡೆಯಾಯಿತು-ಮ್ಯುಸಿಕ್ ವೀಡಿಯೊಕ್ಕೆ ಎರಡು ವಾರಗಳ ಮುಂಚೆ "ಹೋಲ್ಡ್ ಆನ್" ಮತ್ತು ಅದಕ್ಕೆ4 ದಿನ ಮುಂಚೆ "ಎಸ್.ಓ.ಎಸ್" ಬಿಡುಗಡೆಯಾಯಿತು. ಆಗಸ್ಟ್‌ನಲ್ಲಿ ಜೊನಸ್ ಸಹೋದರರು ದೂರದರ್ಶನದಲ್ಲಿ ಹಲವು ಬಾರಿ ಕಾಣಿಸಿಕೊಂಡರು. "ಆಗಸ್ಟ್ 17ರಂದು,ಇವರು ಡಿಸ್ನಿ ಚಾನೆಲ್‌ನ ಹನ್ನಾ ಮೊಂಟನಾದ " ಮಿ ಎಂಡ್ ಮಿಸ್ಟರ್.ಜೊನಸ್ ಎಂಡ್ ಮಿಸ್ಟರ್.ಜೊನಸ್ ಎಂಡ್ ಮಿಸ್ಟರ್.ಜೊನಸ್" ಶೀರ್ಷಿಕೆಯ ಕಾರ್ಯಕ್ರಮದಲ್ಲಿ ಅತಿಥಿ ನಟರಾಗಿ ಕಾಣಿಸಿಕೊಂಡರು. ಆ ದಿನ ಅವರು ಮಿಲಿ ಸೈರಸ್ ಜೊತೆಗೂಡಿ "ವಿ ಗಾಟ್ ದಿ ಪಾರ್ಟಿ" ಗೀತೆ ಕೂಡ ನುಡಿಸಿದರು. ಈ ಕಾರ್ಯಕ್ರಮ ಹೈ ಸ್ಕೂಲ್ ಮ್ಯುಸಿಕಲ್ 2 ನಂತರ ಪ್ರದರ್ಶಿಸಲ್ಪಟ್ಟಿತು ಮತ್ತು ಆ ರಾತ್ರಿ 10.7 ಮಿಲಿಯನ್ ಜನರು ಇದನ್ನು ವೀಕ್ಷಿಸಿದರು.[೪೬] ಆಗಸ್ಟ್ 24 ರಂದು,ಮಿಸ್ ಟೀನ್ ಯುಎಸ್ ಎ ಸ್ಪರ್ಧೆಯಲ್ಲಿ ಜೊನಸ್ ಸಹೋದರರು ಎರಡು ಹಾಡುಗಳನ್ನು ಪ್ರಸ್ತುತಪಡಿಸಿದರು.[೪೭] ನಂತರದ ದಿನದಲ್ಲಿ ಡಿಸ್ನಿ ಚಾನೆಲ್ ನಲ್ಲಿ ಪ್ರಾರಂಭವಾದ ಕ್ರೀಡೆಯ ಮುಕ್ತಾಯ ಸಮಾರಂಭದಲ್ಲಿ ಜೊನಸ್ ಸಹೋದರರ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. 2007 ಏಪ್ರಿಲ್ 27 ರಂದು ಫ್ಲೊರಿಡಾದ ಒರ್ಲ್ಯಾಂಡೋ ದಲ್ಲಿ ಕ್ರೀಡೆಯನ್ನು ಏರ್ಪಡಿಸಲಾಯಿತು.[೪೮] ಆಗಸ್ಟ್ 26 ಟೀನ್ ಚಾಯ್ಸ್ ಅವಾರ್ಡ್ಸ್ ನಲ್ಲಿ ಜೊನಸ್ ಸಹೋದರರು ಮಿಲಿ ಸೈರಸ್ ಜೊತೆ ಸೇರಿ ಸಹ ಪ್ರಶಸ್ತಿ ಪಡೆದರು. ನವೆಂಬರ್ 18, 2007ರಂದು ಅಮೇರಿಕನ್ ಮ್ಯುಸಿಕ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಇವರು "ಎಸ್.ಓ.ಎಸ್." ಗೀತೆಯನ್ನು ಪ್ರಸ್ತುತಪಡಿಸಿದರು. ನವೆಂಬರ್ 22ರಂದು, 81ನೇ ವಾರ್ಷಿಕ ಮ್ಯಾಕೀಸ್ ಥ್ಯಾಂಕ್ಸ್ ಗಿವಿಂಗ್ ಡೇ ಪರೇಡ್‌ನಲ್ಲಿ ಈ ಸಹೋದರರು ಭಾಗವಹಿಸಿದರು. 2007 ರ ಅವರ ಕೊನೆಯ ಪ್ರದರ್ಶನದಲ್ಲಿ ಮೂವರು ಸಹೋದರರು, ಡಿಕ್ ಕ್ಲಾರ್ಕ್‌ರ ಹೊಸ ವರ್ಷದ ರಾಕಿಂಗ್ ಈವ್ ನಲ್ಲಿ "ಹೋಲ್ಡ್ ಆನ್" ಮತ್ತು "ಎಸ್.ಓ.ಎಸ್" ಗೀತೆಗಳನ್ನು ಪ್ರತ್ಯೇಕವಾಗಿ ನುಡಿಸಿದರು. ಜೊನಸ್ ಸಹೋದರರು ತಮ್ಮ ಲುಕ್ ಮಿ ಇನ್ ದಿ ಐಸ್ ಟೂರ್ ಅನ್ನು ಅರಿಜೊನಾದ ಟುಕ್ಸನ್‌ನಲ್ಲಿ ಜನೆವರಿ 31, 2008ಕ್ಕೆ ಮುಂದೂಡಿದರು. ಅವರು ತಮ್ಮ ಪ್ರವಾಸದ ವೇಳೆ ಹಲವು ಹೊಸ ಗೀತೆಗಳನ್ನು ಪ್ರದರ್ಶಿಸಿದರು. ಅವೆಲ್ಲವೂ ಅವರ ಮೂರನೆಯ ಅಲ್ಬಮ್ ಎ ಲಿಟ್ಲ್ ಬಿಟ್ ಲಾಂಗರ್ ನಲ್ಲಿ ನಮೂದಿಸಲಾಯಿತು.
ಎ ಲಿಟ್ಲ ಬಿಟ್ ಲಾಂಗರ್ (2008–2009)
[ಬದಲಾಯಿಸಿ]ಜೊನಸ್ ಸಹೋದರರ ಮೂರನೆ ಸ್ಟೂಡಿಯೊ ಅಲ್ಬಮ್ ಎ ಲಿಟ್ಲ್ ಬಿಟ್ ಲಾಂಗರ್ ಆಗಸ್ಟ್ 12, 2008ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅವರ ಎರಡನೆಯ ಅಲ್ಬಮ್ ಜೊನಾಸ್ ಬ್ರದರ್ಸ್ ತರಹವೆ ಸಿಡಿವಿಯು+ ತಂತ್ರಜ್ಞಾನ ಬಳಸಿ ಬಿಡುಗಡೆಯಾಯಿತು. ಜೂನ್ 24, 2008ರಲ್ಲಿ ಐಟ್ಯೂನ್ ಸರಿಸುಮಾರು ಪ್ರತಿ ಎರಡು ವಾರಕ್ಕೊಂದರಂತೆ ಎ ಲಿಟ್ಲ್ ಬಿಟ್ ಲಾಂಗರ್ ನ ನಾಲ್ಕು ಗೀತೆಗಳನ್ನು ಬಿಡುಗಡೆ ಮಾಡುವುದಾಗಿ ಪ್ರಕಟಿಸಿತು.[೪೯] ಒಂದೊಂದು ಹಾಡನ್ನು ಕೊಳ್ಳುವುದು ಪೂರ್ತಿ ಅಲ್ಬಮ್ ನ ಬೆಲೆಯಷ್ಟಿತ್ತು. ಇದು ಐಟ್ಯೂನ್ಸ್ ಮುಖಾಂತರ ಕೊಳ್ಳಬೇಕಿತ್ತು ಮತ್ತು ಬಿಡುಗಡೆಯ ನಂತರವಷ್ಟೇ ಇದು ಅಲ್ಬಮ್‌ನ ಲಕ್ಷಣವನ್ನು ಪೂರ್ಣಗೊಳಿಸಿತ್ತು. ಪ್ರತಿ ಗೀತೆಯೂ ಬಿಡುಗಡೆಯಲ್ಲಿ ಪಾಡ್ ಕಾಸ್ಟ್ ಸೌಲಭ್ಯ ಹೊಂದಿತ್ತು. ಬಿಡುಗಡೆಯ ವೇಳಾಪಟ್ಟಿ ಈ ರೀತಿಯಾಗಿತ್ತು: ಜೂನ್ 24, 2008 ಕ್ಕೆ "ಬರ್ನಿನ್ ಅಪ್"; ಜುಲೈ 15, 2008 ಕ್ಕೆ "ಪುಶ್ಶಿಂಗ್ ಮಿ ಅವೆ"; ಜುಲೈ 29, 2008ಕ್ಕೆ "ಟುನೈಟ್"; ಮತ್ತು ಆಗಸ್ಟ್ 5, 2008ಕ್ಕೆ" ಎ ಲಿಟ್ಲ್ ಬಿಟ್ ಲಾಂಗರ್". ಇವೆಲ್ಲವೂ ಐಟ್ಯುನ್ಸ್ ಸ್ಥಾನಪಟ್ಟಿಯಲ್ಲಿ ಅತ್ಯಂತ ಕಡಿಮೆ ಎಂದರೂ 3 ದಿನ ನಂಬರ್ 1 ಸ್ಥಾನವನ್ನು ಹೊಂದಿದ್ದವು. ಮಾರ್ಚ್ 22, 2008ರಲ್ಲಿ ಲುಕ್ ಮಿ ಇನ್ ದಿ ಐಸ್ ಪ್ರವಾಸ ಮುಗಿದ ನಂತರ ಜೊನಸ್ ಸಹೋದರರು ಬಾಯ್ಸ್ ಲೈಕ್ ಗರ್ಲ್ಸ್ ಜೊತೆ ಎವ್ರಲ್ ಲವೀನ್‌ರ ಪ್ರಾರಂಭಿಕ ಬೆಸ್ಟ್ ಡ್ಯಾಮ್ ಪ್ರವಾಸದಲ್ಲಿ ಭಾಗವಹಿಸುವುದಾಗಿ ಘೋಷಿಸಿದರು. ಆದರೆ ಕೇವಲ ಎರಡನೆಯ ಭಾಗವೆನ್ನುವಂತೆ ಯುರೋಪಿನಲ್ಲಿ ಮೇ ಕೊನೆಯಿಂದ ಜೂನ್ 2008ರ ಕೊನೆಯವರೆಗೆ ಎಲ್ಲಿ ಅವರ ಪ್ರವಾಸ ಮುಗಿದಿತ್ತೋ ಅಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದರು. ಕ್ಯಾಂಪ್ ರಾಕ್ ಚಿತ್ರದ ಚಿತ್ರೀಕರಣ ಸಮಯದಲ್ಲಿ ಜೊನಸ್ ಸಹೋದರರು ತಮ್ಮ ಗೆಳತಿ ಮತ್ತು ಡಿಸ್ನಿ ಚಾನೆಲ್ ತಾರೆ ಡೆಮಿ ಲೊವ್ಯಾಟೊ ಅವರ ಮುಂಬರುವ ಡೋಂಟ್ ಫಾರ್ಗೆಟ್ ಅಲ್ಬಮ್ ನ ಆರು ಗೀತೆಗಳಿಗೆ ಸಹ ಬರಹಗಾರರು ಮತ್ತು ನಿರ್ಮಾಪಕರಾದರು.[೫೦] ಡಿಸ್ನಿ ಸಿಗ್ನೇಚರ್‌ಗಾಗಿ ಲೊವ್ಯಾಟೊ ತಮ್ಮ ಹಲವು ಗೀತೆಗಳನ್ನು ನವೀಕರಿಸಿದರು. "ನಾನು(ಲೊವ್ಯಾಟೊ) ಗೀತೆಗಳನ್ನು ಬರೆಯಲು ಇಚ್ಛಿಸುತ್ತೇನೆ. ಅವು, ನಾನು ಯೋಚಿಸುವಂತೆ ಸ್ವಲ್ಪ ಹೆಚ್ಚು ತೀಕ್ಷ್ಣವಾದದ್ದು ಹಾಗೂ ಕಡಿಮೆ ಆಕರ್ಷಣೆ ಉಳ್ಳದ್ದು ಮತ್ತು ನನಗೆ ಆಕರ್ಷಕ ಗೀತೆ ಬರೆಯಲು ಸಹಾಯ ಬೇಕು"ಎಂದು ಅವರು ಹೇಳಿದರು. ಜೊತೆಗೆ ಈ ಅಲ್ಬಮ್ ರೂನಿ ಫ್ರಂಟ್ ಮ್ಯಾನ್ ರಾಬರ್ಟ್ ಸ್ವಾಟ್ಜ್‌ಮನ್ ಅವರ ಅತಿಥಿ ಪಾತ್ರವನ್ನೂ ಒಳಗೊಂಡಿದೆ ಎಂದು ನುಡಿದರು. "ಆದ್ದರಿಂದ ಅವರು ನನ್ನ ಸಹಾಯಕ್ಕೆ ಒಳಬಂದರು. ನಾನು ಸಾಕಷ್ಟು ನನ್ನ ಸಂಗೀತದ ಪ್ರಯತ್ನವನ್ನು ಮತ್ತು ಸಾಹಿತ್ಯವನ್ನು ಈ ಗೀತೆಗಳಲ್ಲಿ ಬಳಸಿದ್ದೇನೆ ಮತ್ತು ಅವರು ಕೇವಲ ಕೊಂಡಿಯಂತೆ ಹಾಗೂ ಪದಾರ್ಥದಂತೆ ನನಗೆ ಸಹಾಯ ಮಾಡಿದ್ದಾರೆ." [೫೧]"ನಾನು ಹೆಚ್ಚಾಗಿ ಬರಹಗಾರ್ತಿ, ಆದರೆ ಇದು ಡಿಸ್ನಿ ಅಲ್ಬಮ್‌ನಲ್ಲಿ ಬಳಕೆಯಾಗುವುದಿಲ್ಲ. ಏಕೆಂದರೆ ಇದು ತೀರಾ ಗಡಿಬಿಡಿಯಲ್ಲಿ ಹೊರಬರುವ ಆಲ್ಬಮ್ ಆಗಿದೆ..."[೫೨] ಈ ಅಲ್ಬಮ್ ಸೆಪ್ಟೆಂಬರ್ 23, 2008ರಲ್ಲಿ ಬಿಡುಗಡೆಯಾಯಿತು. ಈ ಸಹೋದರರು ಲೊವ್ಯಾಟೊ ಅವರ ಅಲ್ಬಮ್ ನ ನಿರ್ಮಾಣದಲ್ಲಿಯೂ ಸಹಾಯ ಮಾಡಿದರು.
ಜೂನ್ 17, 2008ರಲ್ಲಿ ಕ್ಯಾಂಪ್ ರಾಕ್ ಚಿತ್ರದ ಒಂದು ಧ್ವನಿಸುರಳಿ ಬಿಡುಗಡೆಯಾಯಿತು. ಇದರ ಮೊದಲ ವಾರದಲ್ಲಿ 188,000 ಪ್ರತಿಗಳು ಮಾರಾಟವಾಗುವುದರೊಂದಿಗೆ ಬಿಲ್ ಬೋರ್ಡ್ 200 ರ ಪಟ್ಟಿಯಲ್ಲಿ #3ನೇ ಸ್ಥಾನವನ್ನು ಪಡೆಯಿತು.[೫೩] 2008ರ ಬೇಸಿಗೆಯ ಕಾಲದಲ್ಲಿ ಜೊನಾಸ್ ಸಹೋದರರು ತಮ್ಮ ಎ ಲಿಟ್ಲ್ ಬಿಟ್ ಲಾಂಗರ್ ಮತ್ತು ಕ್ಯಾಂಪ್ ರಾಕ್ ಧ್ವನಿಸುರುಳಿ ಪ್ರಚಾರಕ್ಕಾಗಿ ಉತ್ತರ ಅಮೇರಿಕಾ ಪ್ರವಾಸ ದಿ ಬರ್ನಿಂಗ್ ಅಪ್ ಟೂರ್ ಕೈಗೊಂಡರು ಮತ್ತು ಅಲ್ಲಿ ತಮ್ಮ ಹಿಂದಿನ ಅಲ್ಬಮ್‌ಗಳ ಗೀತೆಗಳಾದ ಇಟ್ಸ್ ಎಬೌಟ್ ಟೈಮ್ ಹಾಗೂ ಜೊನಾಸ್ ಬ್ರದರ್ಸ್ ಗೀತೆಗಳನ್ನೂ ನುಡಿಸಿದರು. ಈ ಪ್ರವಾಸವು ಜುಲೈ 4, 2008ರಲ್ಲಿ ಒಂಟೇರಿಯೋದ ಟೊರಾಂಟೊದಲ್ಲಿ ಮೊಲ್ ಸನ್ ಎಂಪಿಥಿಯೇಟರ್‌ನಲ್ಲಿ ಕೊನೆಗೊಂಡಿತು. ಡಿಸ್ನಿ ಡಿಜಿಟಲ್ 3D ನಿರ್ಮಾಣದ ತಂಡ, ಕ್ಯಾಲಿಫೋರ್ನಿಯಾದ ಅನಹೇಮ್ ನಲ್ಲಿ ಜುಲೈ 13 ಮತ್ತು ಜುಲೈ 14[೫೪] ರಂದು ಟೇಲರ್ ಸ್ವಿಫ್ಟ್[೫೫] ಜೊತೆ ಎರಡು ಪ್ರದರ್ಶನಗಳನ್ನು ಆಯೋಜಿಸಿತು ಅಲ್ಲಿ ಅವರು ತಮ್ಮ ಸ್ವ-ಶೀರ್ಷಿಕೆಯ ಅಲ್ಬಮ್ ಟೇಲರ್ ಸ್ವಿಫ್ಟ್ ನ ಹಲವು ಗೀತೆಗಳನ್ನು ರಂಗಸ್ಥಳದ ಚಿತ್ರಕ್ಕಾಗಿ ಹಾಡಿದರು, ಅದು ೩ಡಿ ಸಂಗೀತ ಕಛೇರಿ ಚಿತ್ರ ಎಂದು ಫೆಬ್ರುವರಿ 22, 2009ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.[೫೬] ಜುಲೈ 14 ರಂದು ನಿಕ್ ಜೊನಾಸ್ ಅವರು, ಈಗಾಗಲೇ ತಮ್ಮ ನಾಲ್ಕನೇ ಸ್ಟುಡಿಯೊ ಅಲ್ಬಮ್ ಗಾಗಿ ಐದು ಹಾಡುಗಳನ್ನು ರಚಿಸಿದ್ದಾಗಿ ಘೋಷಿಸಿದರು(ಮೂರನೆಯದು ಹಾಲಿವುಡ್ ರೆಕಾರ್ಡ್ಸ್ ಜೊತೆ).[೫೫] ರೋಲಿಂಗ್ ಸ್ಟೋನ್ ಪತ್ರಿಕೆಯ ಜುಲೈ 2008 ರ ಸಂಚಿಕೆಯಲ್ಲಿ ತಂಡದ ಕುರಿತು ವಿಶೇಷವಾಗಿ ಬರೆಯಲಾಯಿತು ಮತ್ತು ಪತ್ರಿಕೆಯ ಮುಖಪುಟದಲ್ಲಿ ಕಾಣಿಸಿದ ಅತ್ಯಂತ ಕಿರಿಯ ತಂಡ ಎಂದು ಹೇಳಲಾಯಿತು.[೫೭] ಜೊನಾಸ್ ಸಹೋದರರು ಆಗಸ್ಟ್ 22, 2008ರ ಸಂಜೆ ಬ್ಲಾಸಮ್ ಮ್ಯುಸಿಕ್ ಸೆಂಟರ್ ಸಂಗೀತ ಕಛೇರಿಗೆ ಭೇಟಿ ಕೊಡುವ ಮುಂಚೆ ಒಹಿಯೋದ ಕ್ಲೆವ್ ಲ್ಯಾಂಡ್ ಡೌನ್ ಟೌನ್‌ನ ರಾಕ್ ಎಂಡ್ ರೋಲ್ ಹಾಲ್ ಆಫ್ ಫೇಮ್‌ಗೆ ಭೇಟಿ ನೀಡಿದ್ದರು. ರಾಕ್ ಎಂಡ್ ರೋಲ್ ಹಾಲ್ ಆಫ್ ಫೇಮ್‌ನ ಉಪಾಧ್ಯಕ್ಷರಾದ ಜಿಮ್ ಹೆನ್‌ಕೆ ಅವರಿಗೆ ಈ ತಂಡವು ಎ ಲಿಟ್ಲ್ ಬಿಟ್ ಲಾಂಗರ್ ನ ಕವರ್‌ನ ಚಿತ್ರಕ್ಕಾಗಿ ತೊಟ್ಟಿದ್ದ ಸೂಟು ಮತ್ತು ಪ್ಯಾಂಟುಗಳನ್ನು ಉಡುಗೊರೆಯಾಗಿ ನೀಡಿತು. ಆ ಸೂಟುಗಳು ರೈಟ್ ಹಿಯರ್, ರೈಟ್ ನೌ! ನ ಭಾಗವಾಗಿದೆ. ಇಂದಿನ ಕೆಲವು ಜನಪ್ರಿಯ ಕಲಾವಿದರು ಇದನ್ನು ಹೊಂದಿರುವುದನ್ನು ತೋರಿಸುತ್ತದೆ.[೫೮] ಡಿಸೆಂಬರ್ 2008ರ 51ನೇ ಗ್ರಾಮೀ ಪ್ರಶಸ್ತಿಯಲ್ಲಿ ಶ್ರೇಷ್ಠ ಹೊಸ ಕಲಾವಿದರು ವಿಭಾಗಕ್ಕೆ ಜೊನಾಸ್ ಸಹೋದರರ ಹೆಸರು ಸೂಚಿತವಾಗಿತ್ತು. ಈ ಸಹೋದರರು ಆರ್ &ಬಿ ನಿರ್ಮಾಪಕರಾದ ಟಿಂಬಲ್ಯಾಂಡ್ ಜೊತೆ ಅವರ ಹೊಸ ಅಲ್ಬಮ್ ಶಾಕ್ ವ್ಯಾಲ್ಯು 2 ರ ಗೀತೆ ಡಂಬ್‌ಗಾಗಿ ಸಹ ಕಾರ್ಯ ನಿರ್ವಹಿಸುವ ವಿಚಾರ ಇತ್ತೀಚೆಗೆ ಖಚಿತವಾಯಿತು.[೫೯] ಜಸ್ಟ್ ಜೇರ್ಡ್.ಕಾಮ್ ನ ಸಂದರ್ಶನದಲ್ಲಿ ಕ್ರಿಸ್ ಬ್ರೌನ್, ಜೊನಸ್ ಸಹೋದರರೊಂದಿಗೆ ಸಹಕಾರ್ಯ ನಡೆಸುತ್ತಿರುವುದಾಗಿ ಹೇಳಿದರು. "ಬಹುಶಃ ನಾನು ಅವರ ಜೊತೆ ಏನೋ ಮಾಡುತ್ತಿರುವೆ. ಒಂದು ವೇಳೆ ಅವರು ನನ್ನನ್ನು ದಾಖಲಿಸಲು ಇಚ್ಚಿಸಿದರೆ,ನಾನು ದಾಖಲೆಯಲ್ಲಿ ಇರುವೆ,ಆದರೆ ನಾನು ಆ ಹುಡುಗರಿಗಾಗಿ ದಾಖಲೆ ಬರೆಯಲು ಇಚ್ಛಿಸುತ್ತೇನೆ"ಎಂದು ಬ್ರೌನ್ ಹೇಳಿದರು. ಫೆಬ್ರುವರಿ 14 ರಂದು ಸ್ಯಾಟರ್ಡೆ ನೈಟ್ ಲೈವ್ ಕಾರ್ಯಕ್ರಮದಲ್ಲಿ ಜೊನಸ್ ಸಹೋದರರು ಸಂಗೀತದ ಅತಿಥಿಗಳಾಗಿ ಕಾಣಿಸಿಕೊಂಡರು. ಇದು SNL ನಲ್ಲಿ ಅವರ ಪ್ರಥಮ ಪ್ರವೇಶವಾಗಿತ್ತು.[೬೦]
ಲೈನ್ಸ್,ವೈನ್ಸ್ ಎಂಡ್ ಟ್ರೈಯಿಂಗ್ ಟೈಮ್ಸ್ (2009-ಇಂದಿನವರೆಗೆ)
[ಬದಲಾಯಿಸಿ]2009 ರ ಪ್ರಾರಂಭದಲ್ಲಿ ಅವರು ತಮ್ಮ ನಾಲ್ಕನೆಯ ಸ್ಟುಡಿಯೊ ಅಲ್ಬಮ್ ಲೈನ್ಸ್,ವೈನ್ಸ್ ಎಂಡ್ ಟ್ರೈಯಿಂಗ್ ಟೈಮ್ಸ್ ಪೂರ್ತಿಯಾಗುತ್ತಿದ್ದಂತೆ ಅದರ ಬಗ್ಗೆ ಮಾತನಾಡಲು ಪ್ರಾರಂಭಿಸಿದರು. 2008 ರ ಮಧ್ಯದಲ್ಲಿ ಬರ್ನಿನ್’ ಅಪ್ ಪ್ರವಾಸದಿಂದಲೇ ಈ ಅಲ್ಬಮ್‌ಗಾಗಿ ಗೀತೆಗಳನ್ನು ಬರೆದೆವು ಮತ್ತು ಮುದ್ರಣ ಕೂಡ ಮಾಡಿದೆವು ಎಂದು ಅವರು ಹಲವು ಸಂದರ್ಭಗಳಲ್ಲಿ ಹೇಳಿದರು.[೬೧] ಮಾರ್ಚ್ 11, 2009ರಂದು ಜೊನಸ್ ಸಹೋದರರು ತಮ್ಮ ನಾಲ್ಕನೆಯ ಸ್ಟುಡಿಯೊ ಅಲ್ಬಮ್ ಲೈನ್ಸ್,ವೈನ್ಸ್ ಎಂಡ್ ಟ್ರೈಯಿಂಗ್ ಟೈಮ್ಸ್ ,ಜೂನ್ 15, 2009ರಂದು ಬಿಡುಗಡೆ ಆಗುವುದೆಂದು ಘೋಷಿಸಿದರು.[೬೨]
ನಿಕ್ ಅವರು ಅಲ್ಬಮ್‌ನ ಶೀರ್ಷಿಕೆಯ ಕುರಿತು ರೋಲಿಂಗ್ ಸ್ಟೋನ್ಸ್ ಜೊತೆಗಿನ ಸಂದರ್ಶನದಲ್ಲಿ "ಲೈನ್ಸ್ ಎನ್ನುವುದು ಏನೋ ಒಂದು, ಯಾರಾದರು ನಿಮಗೆ ಒದಗಿಸುವುದು, ವೈನ್ಸ್ ಎನ್ನುವುದು ದಾರಿಯಲ್ಲಿ ಸಿಗುವಂಥದ್ದು ಮತ್ತು ಆದರೆ ನಿಮ್ಮ ಪ್ರಯತ್ನ, ಅದು ಮಾತ್ರ ಇರಲೇ ಬೇಕು." ಎಂದು ಹೇಳಿದರು. ನಿಕ್ ಜೊನಾಸ್ ಬಿಲ್ ಬೋರ್ಡ್ ಗೆ ಹೇಳಿದರು, "ನಾವು ಎಷ್ಟು ಸಾಧ್ಯವೋ ಅಷ್ಟು ಕಲಿಯಲು ಪ್ರಯತ್ನಿಸುತ್ತಿದ್ದೇವೆ, ಬೆಳೆಯುವುದನ್ನು ಮುಂದುವರಿಸಿದ್ದೇವೆ" ಎಂದು. ಜೊತೆಗೆ ಕೆವಿನ್ "ಇದರ ಒಟ್ಟೂ ಸಂದೇಶ ಹಿಂದಿನ ಜೊನಾಸ್ ಸಹೋದರರ ಸಂದೇಶವೇ ಆಗಿದೆ. ಅದರರ್ಥ, ವೈವಿಧ್ಯಮಯ ಸಂಗೀತದ ಉಪಕರಣಗಳನ್ನು ಬಳಸಿ, ನಾವು ಹೆಚ್ಚು ಹೆಚ್ಚು ಸಂಗೀತವನ್ನು ಕಲೆಹಾಕುತ್ತಿದ್ದೇವೆ. ಇದು ಆಗಲೇ ಇರುವ ಸಂಗೀತದ ಜೊತೆಗೂಡಲು ಮತ್ತು ಅದನ್ನು ಬೆಳೆಸಲು ಹೆಚ್ಚು ಉಪಯುಕ್ತವಾಗಿದೆ" ಎಂದು ಅಭಿಪ್ರಾಯ ಪಟ್ಟರು. ನಿಕ್ ಕೂಡ ಅಲ್ಬಮ್‌ನಲ್ಲಿರುವ ಹಾಡುಗಳು "ನಾವು ಸ್ವತಃ ಯಾವುದರಿಂದ ಸ್ಫೂರ್ತಿ ಪಡೆದೆವೊ ಅದರ ಅನುಭವ, ನಾವು ಕಳೆದುಬಂದ ಎಲ್ಲ ವಿಷಯಗಳೂ ಈ ಹಾಡಿನಲ್ಲಿದೆ" ಎಂದು ಹೇಳಿದರು. ನಮ್ಮ ಬದುಕಿನಲ್ಲಿ ಘಟಿಸಿದ ಘಟನೆಗಳನ್ನು ನೇರವಾಗಿ ಹೇಳದೆ ನಾವು ಕೂಡ ರೂಪಕಗಳನ್ನು ಬಳಸಿಕೊಳ್ಳುವ ಮೂಲಕ ಅದನ್ನು ಹೇಳಲು ಪ್ರಯತ್ನಿಸಿದ್ದೇವೆ.[೬೩]
ಮಾರ್ಚ್ 11, 2009ರಂದು ತಂಡವು 2009ರ ಮಧ್ಯದಲ್ಲಿ ಅವರು ಇಡೀ ಜಗತ್ತಿನ ಪ್ರವಾಸ ಕೈಗೊಳ್ಳುವುದಾಗಿ ಪ್ರಕಟಿಸಿದರು.[೬೪] ಅವರು ತಮ್ಮ ಪ್ರಥಮ ಪ್ರದರ್ಶನವನ್ನು ಅಮೇರಿಕಾದಲ್ಲಿ ನಡೆಸಿದ ವಂಡರ್ ಗರ್ಲ್ಸ್ ತಂಡದ ಜನಪ್ರಿಯ ಕೊರಿಯನ್ ಹುಡುಗಿಯನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡರು.[೬೫]
ಈ ಹುಡುಗರು ಲೈನ್ಸ್,ವೈನ್ಸ್ ಎಂಡ್ ಟೈಮ್ಸ್ ಬಿಡುಗಡೆಗೆ ಮೊದಲು ಎರಡು ಒಂಟಿ ಗೀತೆ ಪರನೈಡ್ ಅನ್ನು ಒಂದು ತಿಂಗಳು ಮುಂಚೆ ಮತ್ತು ಫ್ಲೈ ವಿತ್ ಮಿಯನ್ನು 7 ದಿನ ಮುಂಚೆ ಬಿಡುಗಡೆ ಮಾಡಿದರು. ಲೈನ್ಸ್, ವೈನ್ಸ್ ಎಂಡ್ ಟ್ರೈಯಿಂಗ್ ಟೈಮ್ಸ್ ಈ ತಂಡದ ಎರಡನೆಯ ನಂಬರ್ 1 ಅಲ್ಬಮ್ ಎನಿಸಿತು.[೬೬] ಮೊದಲ ವಾರದಲ್ಲಿ ಇದು ಮೊದಲ ಸ್ಥಾನದಲ್ಲಿತ್ತು ಹಾಗೂ ಇದರ ಎರಡನೆಯ ವಾರದಲ್ಲಿ ಎರಡನೆಯ ಸ್ಥಾನಕ್ಕೆ ಕುಸಿಯಿತು. ಇವರು ಜುಲೈ 7, 2009ರಲ್ಲಿ ಹಾನರ್ ಸೊಸೈಟಿ ಜೊತೆ ಶೀರ್ಷಿಕೆ ಮುದ್ರಣಕ್ಕೆ ಒಪ್ಪಂದ ಮಾಡಿಕೊಂಡಿರುವುದಾಗಿ ಪ್ರಕಟಿಸಿದರು, ಮೊದಲು ಇವರು ಹಾಲಿವುಡ್ ರೆಕಾರ್ಡ್ಸ್ ನಲ್ಲಿ ಪ್ರಾರಂಭಿಸಿದ್ದರು.[೬೭] ಒಂದು ತಿಂಗಳ ನಂತರ, ರೇಡಿಯೋ ಡಿಸ್ನಿಯಲ್ಲಿ "ಸೆಂಡ್ ಇಟ್ ಆನ್" ಬಿಡುಗಡೆಯಾಯಿತು. ಡಿಸ್ನೀಸ್ ಫ್ರೆಂಡ್ಸ್ ಫಾರ್ ಚೇಂಜ್ ಕಾರ್ಯಕ್ರಮಕ್ಕಾಗಿ ರೇಡಿಯೊ ಒಂಟಿ ಗೀತೆಯು ಡೆಮಿ ಲೊವ್ಯಾಟೊ, ಮಿಲಿ ಸೈರಸ್ ಮತ್ತು ಸಲೀನಾ ಗೋಮೇಜ್ ಅವರಿಂದ ನಿರ್ವಹಿಸಲ್ಪಟ್ಟಿತು.[೬೮] ಆಗಸ್ಟ್ 14, 2009ರಂದು ಹಾಡಿನ ಮ್ಯುಸಿಕ್ ವೀಡಿಯೋದ ಪ್ರಥಮ ಪ್ರದರ್ಶನವನ್ನು ಡಿಸ್ನಿ ಚಾನೆಲ್ ನಡೆಸಿತು.[೬೯] ಆಗಸ್ಟ್ 9, 2009ರ ಟೀನ್ ಚಾಯ್ಸ್ ಅವಾರ್ಡ್ಸ್‌ನಲ್ಲಿ ಜೊನಸ್ ಸಹೋದರರು ಆತಿಥ್ಯವನ್ನು ಮತ್ತು ಪ್ರದರ್ಶನವನ್ನು ನೀಡಿದರು.[೭೦]
ಕೆನಡಾದ ಒಂಟೇರಿಯೋ ತುಂಬೆಲ್ಲ ಜಾಯ್ ಅವರು(ನಿಕ್ ಮತ್ತು ಕೆವಿನ್ ಬಿಟ್ಟು) ಅಮೇರಿಕನ್ ಐಡಲ್‌ನಲ್ಲಿ Camp Rock 2: The Final Jamಅತಿಥಿ ತೀರ್ಪುಗಾರರಾಗಲಿದ್ದಾರೆ ಎಂದು ಚಿತ್ರಿಸಲಾಯಿತು.[೭೧] ಸೆಪ್ಟೆಂಬರ್ 3, 2009 ರಂದು ಚಿತ್ರೀಕರಣ ಪ್ರಾರಂಭವಾಯಿತು ಮತ್ತು ಅಕ್ಟೋಬರ್ 16, 2009ರಂದು ಮುಚ್ಚಲಾಯಿತು.[೭೨] ಇದರ ಮೊದಲ ಪ್ರದರ್ಶನ 2010 ರ ಬೇಸಿಗೆಯಲ್ಲಿ ನಡೆಸಲು ನಿರ್ಧರಿಸಲಾಯಿತು.[೭೩][೭೪] ಹಾಲಿವುಡ್ ರೆಕಾರ್ಡ್ಸ್ ಯುಟ್ಯೂಬ್ ಮೂಲಕ ಡೆಮಿ ಲೊವ್ಯಾಟೊ ಮತ್ತು ಜೋನಸ್ ಸಹೋದರರ ವಾಲ್-ಮಾರ್ಟ್ CD-DVD ಸೌಂಡ್‌ಚೆಕ್.[೭೫] ನಿಕ್ ಅವರು (ಜಾಯ್ ಮತ್ತು ಕೆವಿನ್ ಬಿಟ್ಟು) ದಿ ನ್ಯೂ ಪವರ್ ಜನರೇಶನ್ ನ ಹಿಂದಿನ ಸದಸ್ಯರ ಜೊತೆಗೂಡಿ ನಿಕ್ ಜೋನಸ್ ಎಂಡ್ ದಿ ಎಡ್ಮಿನಿಸ್ಟ್ರೇಶನ್‌ನಲ್ಲಿ ಕೆಲಸ ಮಾಡುತ್ತಾರೆ.[೭೬] ಇವರು ಇತರ ಕಲಾವಿದರೊಂದಿಗೆ ಸೇರಿ ವಿ ಆರ್ ದಿ ವರ್ಲ್ಡ್:25 ಫಾರ್ ಹೈಟಿಯಲ್ಲಿ ಕೂಡ ಪಾಲ್ಗೊಳ್ಳುತ್ತಾರೆ ಎಂದು ಪ್ರಕಟಿಸಿತು.
ನಟನೆ ಮಾಡುವುದು
[ಬದಲಾಯಿಸಿ]ಆರಂಭಿಕ ಕಾರ್ಯಗಳು
[ಬದಲಾಯಿಸಿ]ಜೊನಸ್ ಸಹೋದರರು ಮೊದಲು ತಮ್ಮ ಅಭಿನಯ ಪ್ರಾರಂಭಿಸಿದ್ದು ಡಿಸ್ನಿ ವಾಹಿನಿಯ ಮೂಲ ಸಂಚಿಕೆ 2ನೆ ಋತುವಿನ ಹನ್ನಾ ಮೊಂಟನಾ ಕಾರ್ಯಕ್ರಮದಲ್ಲಿ, ಅತಿಥಿ ತಾರೆಗಳಾಗಿ "ಮಿ ಎಂಡ್ ಮಿಸ್ಟರ್.ಜೊನಸ್ ಎಂಡ್ ಮಿಸ್ಟರ್.ಜೊನಸ್ ಎಂಡ್ ಮಿಸ್ಟರ್.ಜೊನಸ್" ಉಪಾಖ್ಯಾನದಲ್ಲಿ ಕಾಣಿಸಿಕೊಂಡರು. ನಂತರ ಶಿಘ್ರದಲ್ಲಿ ಅವರು,ಮತ್ತೆಮಿಲಿ ಸೈರಸ್ ಜೊತೆಗೆ ಅವರ 3D ಕನ್ಸರ್ಟ್ ಚಿತ್ರದಲ್ಲಿ Hannah Montana & Miley Cyrus: Best of Both Worlds Concert ಸಹಕಾರ್ಯನಿರ್ವಹಿಸಿದರು. ಇದು ಸೈರಸ್ ಅವರ ಪ್ರಾರಂಭಿಕ ಕಾರ್ಯದ ಪ್ರವಾಸದ ವೇಳೆ ಪ್ರದರ್ಶಿಸಲ್ಪಟ್ಟಿತು. ಲುಕ್ ಮಿ ಇನ್ ದಿ ಐಸ್ ಪ್ರವಾಸದ ವೇಳೆ ಜೊನಸ್ ಸಹೋದರರು ಡಿಸ್ನಿ ಚಾನೆಲ್ ರಿಯಾಲಿಟಿ ಶಾರ್ಟ್ ಸಿರೀಸ್ ಚಿತ್ರೀಕರಿಸಿದರು. Jonas Brothers: Living the Dream ಇದು ಪ್ರಥಮವಾಗಿ ಮೇ 16, 2008ರಂದು ಡಿಸ್ನಿ ಚಾನೆಲ್ ನಲ್ಲಿ ಪ್ರಸಾರವಾಯಿತು. ಇದು ಪ್ರವಾಸದ ವೇಳೆ ಅವರ ಜೀವನವನ್ನು ಕುರಿತಾಗಿತ್ತು. ಈ ಕಾರ್ಯಕ್ರಮ ಸೆಪ್ಟೆಂಬರ್ 5, 2008ರ ವರೆಗೂ ನಡೆಯಿತು. ಇದು ತಂಡದ ಅಭ್ಯಾಸ, ಪ್ರಯಾಣ, ಪ್ರದರ್ಶನ, ಓದುವುದು ಮತ್ತು ಕುಟುಂಬ ಹಾಗೂ ಗೆಳೆಯರ ಜೊತೆಗಿನ ಅವರ ವೈಯಕ್ತಿಕ ಜೀವನವನ್ನು ತೋರಿಸುವ ತುಣುಕುಗಳನ್ನು ಒಳಗೊಂಡಿತ್ತು. ಜೊನಸ್ ಸಹೋದರರು ಡಿಸ್ನಿ ಚಾನೆಲ್ ನಲ್ಲಿStudio DC: Almost Live ಮುಪೆಟ್ ಹಾಗೂ ಡಿಸ್ನಿ ಚಾನೆಲ್ ನ ಬೇರೆ ತಾರೆಗಳನ್ನು ತೋರಿಸುವ ಅರ್ಧ ಘಂಟೆಯ ವಿಶೇಷ ಬಗೆಯ ಕಾರ್ಯಕ್ರಮವನ್ನೂ ಮಾಡಿದರು. ಈ ವೇಳೆಯಲ್ಲಿ ಜೊನಸ್ ಸಹೋದರರು, ಓಲಂಪಿಕ್ಸ್ ಆಧಾರಿತ ವಿಶೇಷ ಸಣ್ಣಸಂಚಿಕೆ, ಡಿಸ್ನಿ ಚಾನೆಲ್ ಗೇಮ್ಸ್ ಮೂರನೇ ವಾರ್ಷಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು.
2008—ಇಂದಿನವರೆಗೆ
[ಬದಲಾಯಿಸಿ]ತಂಡವು ಅವರ ಮೊದಲ ಚಿತ್ರ ಪ್ರದರ್ಶನವನ್ನು ಡಿಸ್ನಿ ಚಾನೆಲ್ ಒರಿಜಿನಲ್ ಮೂವಿ ನಿರ್ಮಾಣದ ಕ್ಯಾಂಪ್ ರಾಕ್‌ನಲ್ಲಿ ಆರಂಭಿಸಿದರು. ಅಲ್ಲಿ ಅವರ ತಂಡ ಕನೆಕ್ಟ್ ತ್ರೀ ಎಂದಾಗಿತ್ತು. ಜಾಯ್ ಜೊನಸ್ ಅವರು "ಶೇನ್ ಗ್ರೇ" ಹೆಸರಿನ ಮುಖ್ಯ ಪುರುಷ ಪಾತ್ರಧಾರಿಯಾಗಿ ಹಾಗೂ ಪ್ರಮುಖ ಹಾಡುಗಾರರಾಗಿ; ನಿಕ್ ಜೊನಸ್ ಅವರು "ನೇಟ್" ಹೆಸರಿನ ಗಿಟಾರ್ ವಾದಕರಾಗಿ; ಮತ್ತು ಕೆವಿನ್ ಜೊನಸ್ ಕೂಡ, "ಜೇಸನ್" ಹೆಸರಿನ ಗಿಟಾರ್ ವಾದಕರಾಗಿ ಕಾಣಿಸಿಕೊಂಡರು. ಚಿತ್ರವು ಮೊದಲು ಜೂನ್ 20 ರಂದು ಡಿಸ್ನಿ ಚಾನೆಲ್ ಯುಎಸ್ಎನಲ್ಲಿ ಮತ್ತು ಫ್ಯಾಮಿಲಿ ಕೆನಡಾದಲ್ಲಿ ಪ್ರದರ್ಶನ ಕಂಡಿತು. ಇದು ಮಿಶ್ರ ಪ್ರತಿಕ್ರಿಯೆಯನ್ನು ಪಡೆಯಿತು.[೭೭][೭೮] ಒಂದು ಡಿಸ್ನಿ ಡಿಜಿಟಲ್ 3-D ನಿರ್ಮಾಣ ತಂಡವು ಕ್ಯಾಲಿಫೋರ್ನಿಯಾದ ಅನಹೇಮ್ ನಲ್ಲಿ ಜುಲೈ 13 ಮತ್ತು ಜುಲೈ 14, 2008[೫೪] ರಂದು ಎರಡು ಕಾರ್ಯಕ್ರಮಗಳನ್ನು ಆಯೋಜಿಸಿತು,ಅದು ಚಿತ್ರಮಂದಿರಗಳಲ್ಲಿ ಫೆಬ್ರುವರಿ 27, 2009 ರಲ್ಲಿ 3D ಸಂಗೀತ ಸಂಜೆಯ ಸಿನೆಮಾ ಎಂಬ ಹೆಸರಿನಲ್ಲಿ ಬಿಡುಗಡೆಯಾಯಿತು.[೭೯] 2009ಏಪ್ರಿಲ್‌ನಲ್ಲಿ, ಜೊನಸ್ ಸಹೋದರರು ಅವರ ಡಿಸ್ನಿ ಚಾನೆಲ್ ಒರಿಜಿನಲ್ ಸಿರೀಸ್ನ ಜೊನಸ್ ಶೀರ್ಷಿಕೆಯ ಮೊದಲ ಋತುವಿನ ಚಿತ್ರೀಕರಣವನ್ನು ಪೂರೈಸಿದರು.[೮೦] ಈ ಸರಣಿಯು ಮೈಕೆಲ್ ಕರ್ಟೀಸ್(ಫಿಲ್ ಆಫ್ ದಿ ಫ್ಯುಚರ್ ಮತ್ತು ಫ್ರೆಂಡ್ಸ್ ) ಮತ್ತು ರೋಗರ್ ಎಸ್.ಎಚ್.ಸ್ಕಲ್ ಮನ್ (ಶ್ರೆಕ್) ಅವರಿಂದ ತಯಾರಿಸಲ್ಪಟ್ಟಿತ್ತು ಹಾಗೂ ಜೆರೆಮಿಯಾಹ್ ಎಸ್.ಚೆಚಿಕ್ (ನ್ಯಾಷನಲ್ ಲ್ಯಾಂಪ್ಸನ್ಸ್ ಕ್ರಿಸ್ಮಸ್ ವೆಕೇಷನ್) ,ದಿ ಬ್ರೊಂಕ್ಸ್ ಈಸ್ ಬರ್ನಿಂಗ್ ) ಅವರಿಂದ ನಿರ್ದೇಶಿಸಲ್ಪಟ್ಟಿತ್ತು. ಮೂಲದಲ್ಲಿ ಕಾರ್ಯಕ್ರಮದ ಶೀರ್ಷಿಕೆಯು "ಜೂನಿಯರ್ ಆಪರೇಟಿವ್ ನೆಟ್ ವರ್ಕಿಂಗ್ ಸ್ಪೈಸಸ್" ನ ಸಂಕ್ಷಿಪ್ತ ರೂಪ.[೮೧] ಮೂಲ ಪೈಲಟ್ ಸಂಚಿಕೆಯಲ್ಲಿ ಯುವ ರಾಕ್ ತಂಡವನ್ನು (ಜೊನಸ್ ಸಹೋದರರು) ಸರಕಾರವು ಗುಪ್ತಚರ ದಳದಲ್ಲಿ ಇಟ್ಟು ಕೊಂಡದ್ದರಿಂದ ಇವರು ಎರಡು ಬದುಕನ್ನು ಬದುಕುತ್ತಾರೆ. ವಿಮಾನ ಚಾಲಕನ ಮರಣದ ನಂತರ ಕಥೆಯಲ್ಲಿ ಬದಲಾವಣೆಯಾಗುತ್ತದೆ ಮತ್ತು ಈಗ ಮೂವರು ಸಹೋದರರ ತಂಡ ಒಂದು ಸಾಮಾನ್ಯ ಜೀವನ ನಡೆಸಲು ಪ್ರಯತ್ನಿಸುತ್ತಿರುವಾಗ ರಾಕ್ ತಾರೆಗಳಾಗುವುದನ್ನು ಕಥೆ ಹೇಳುತ್ತದೆ. ಮೇ 2, 2009ರಲ್ಲಿ ಸರಣಿಯು ಪ್ರಥಮವಾಗಿ ಪ್ರಾರಂಭವಾಯಿತು.[೮೨]ಕ್ಯಾಂಪ್ ರಾಕ್ ನ ಯಶಸ್ಸಿನ ನಂತರ ಇದರ ಮುಂದುವರೆದ ಭಾಗ ಪ್ರಗತಿಯಲ್ಲಿದೆ. ಜೊನಸ್ ಸಹೋದರರು ಕನ್ಸರ್ಟ್ ತ್ರೀಯಲ್ಲಿ ತಂಡಕ್ಕೆ ಮರಳುವರು ಮತ್ತು ಅವರ ಕಿರಿಯ ಸಹೋದರ ಫ್ರಾಂಕಿ ಜೊನಸ್ ಕೂಡ ತಾರೆಯಾಗುವ ನಿರೀಕ್ಷೆಯಿದೆ. ಡಿಸ್ನಿಯು, ಸಹೋದರರು ಸದ್ಯ ಸಾಹಿತ್ಯ ಬರವಣಿಗೆಯಲ್ಲಿ ನಿರತರಾಗಿದ್ದಾರೆ [೮೩] ಮತ್ತು ಚಿತ್ರೀಕರಣವನ್ನು 2009ರ ಚಳಿಗಾಲ ಇಲ್ಲವೆ ಬೇಸಿಗೆಯ ಕೊನೆಯಲ್ಲಿ ಪ್ರಾರಂಭಿಸುವುದಾಗಿ ಖಚಿತಪಡಿಸಿತು.[೮೪] 2009ರಲ್ಲಿ Night at the Museum: Battle of the Smithsonian ಚೆರಬ್ಸ್‌ನ ಧ್ವನಿಯಾಗಿ ಜೊನಸ್ ಸಹೋದರರು ದೊಡ್ಡ ಪರದೆಯ ಮೇಲೆ ತಮ್ಮ ಮೊದಲ ಪ್ರದರ್ಶನ ನೀಡಿದರು. ಇವರು ಮುಂದೆ ವಿಲಿಯಮ್ ಕೊಟ್ಜ್ ವಿಂಕಲ್ ಮತ್ತು ಗ್ಲೆನ್ ಮರ್ರೆ ಬರೆದ ವಾಲ್ಟರ್ ದಿ ಫಾರ್ಟಿಂಗ್ ಡಾಗ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ; ಅದೇ ಹೆಸರಿನಲ್ಲಿ ಉತ್ತಮ ಸರಣಿ ಮಾರಾಟದ ಒಂದು ಅಳವಡಿಕೆ. ಇದು ನಾಲ್ಕು ಸಹೋದರರ ಒಂದು ಕೌಟುಂಬಿಕ ಚಿತ್ರ.[೮೫] ಮೇ 29, 2009ರಲ್ಲಿ ಜೊನಸ್ ಸಹೋದರರನ್ನು ಎಬಿಸಿ ಟೆಲಿವಿಷನ್ ವಿಶೇಷ ಕಾರ್ಯಕ್ರಕ್ಕೆ ಕರೆದಾಗUn-broke: What You Need to Know About Money , ಸ್ಟಾಕ್ ಮಾರ್ಕೆಟ್ ಅನ್ನು ಅರ್ಥಮಾಡಿಕೊಳ್ಳುವ ಅಗತ್ಯತೆಯ ಬಗ್ಗೆ ಅವರು ಮಾತನಾಡಿದರು. ಜೊತೆಗೆ, ಡಿಸ್ನಿ ಚಾನೆಲ್ ಈ ಮೂವರ ಸಣ್ಣ ತರಹದ ನೈಜ ಸರಣಿ "ಜೊನಸ್ ಬ್ರದರ್ಸ್:ಲಿವಿಂಗ್ ದಿ ಡ್ರೀಮ್" ಅನ್ನು ಎರಡನೆಯ ಋತುವಿಗೆ ನವೀಕರಿಸಿದೆ. ಈಗಾಗಲೇ, ಮುಂದಿನ ವರ್ಷದ ಪೂರ್ವದಲ್ಲಿ ಚಿತ್ರೀಕರಣ ನಡೆಸಲು ತಯಾರಿ ನಡೆದಿದೆ.[೮೬]
ವೈಯಕ್ತಿಕ ಜೀವನ
[ಬದಲಾಯಿಸಿ]ಜೊನಸಸ್‌ರು ಅವರ ಆರೋಗ್ಯಕರ "ಕುಟುಂಬ-ಸ್ನೇಹಿ" ಕಲ್ಪನೆಗೆ ಹೆಸರುವಾಸಿಯಾಗಿದ್ದಾರೆ [೮೭] ಮತ್ತು ಈ ಸಹೋದರರು ಇವಾಂಜೆಲಿಕಲ್ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರ ತಂದೆಯು ಅಸೆಂಬ್ಲಿ ಆಫ್ ಗಾಡ್‌ನಲ್ಲಿ ಹಿಂದೆ ಪಾದ್ರಿಯಾಗಿದ್ದರು ಮತ್ತು ಇವರೆಲ್ಲರು ತಮ್ಮ ತಾಯಿಯಿಂದ ಮನೆಯಲ್ಲಿಯೇ ಪಾಠ ಕಲಿತರು. ಇದರ ಜೊತೆ ಮದುವೆಗೆ ಮುಂಚಿನ ಲೈಂಗೀಕ ಸಂಬಂಧದಿಂದ ದೂರವಿರುವ ಪ್ರತಿಜ್ಞೆಯನ್ನು ತೊಟ್ಟು. ಇದನ್ನು ತೋರ್ಪಡಿಸಲು ಅವರು ತಮ್ಮ ಎಡ ಕೈನ ಒಂದು ಬೆರಳಿಗೆ ಉಂಗುರ(purity ring)ವನ್ನು ತೊಡುತ್ತಾರೆ. ಜಾಯ್ ಅವರು ನಿರೂಪಿಸುವಂತೆ ಈ ಉಂಗುರವು"ಮದುವೆಗೆ ಮುಂಚೆ ಶುದ್ಧವಾಗಿರಲು ನಮಗೆ ನಾವೇ ಮತ್ತು ದೇವರಿಗೆ ನೀಡಿದ ಭಾಷೆ" ಹಾಗೂ ಈ ಉಂಗುರವು"ಕೇವಲ ಬೇರೆಯವರಿಗಿಂತ ಭಿನ್ನವಾಗಿರಲು ನಾವು ಕಂಡುಕೊಂಡ ಭಿನ್ನ ರೀತಿಯ ದಾರಿ" ಎಂದು ನಿಕ್ ಹೇಳುವರು.[೮೮] ಇವರ ಹೆತ್ತವರಾದ ಡೆನೀಸ್ ಹಾಗೂ ಕೆವಿನ್ ಸೀನಿಯರ್, ಉಂಗುರ ತೊಡಲು ಇಷ್ಟಪಡುತ್ತೀರೆ? ಎಂದು ಕೇಳಿದಾಗಿನಿಂದ ಇವರೆಲ್ಲರೂ ಉಂಗುರ ತೊಡುತ್ತಿರುವುದಾಗಿ ಸಹೋದರರು ಹೇಳುತ್ತಾರೆ.[೮೯] ಹಾಗೆಯೇ ಇವರೆಲ್ಲರೂ ಅಲ್ಕೋಹಾಲ್,ತಂಬಾಕು ಮತ್ತು ಇತರ ಮಾದಕ ವಸ್ತುಗಳಿಂದ ದೂರವಿದ್ದಾರೆ.[೯೦] 2008 ಎಂಟಿವಿ ವಿಡಿಯೋ ಮ್ಯುಸಿಕ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ರುಸೆಲ್ ಬ್ರ್ಯಾಂಡ್ ಪ್ಯುರಿಟಿ ರಿಂಗ್ ಬಗ್ಗೆ ಗೇಲಿ ಮಾಡಿದರು.[೯೧] ಬ್ರ್ಯಾಂಡ್ ಒಂದು ಬೆಳ್ಳಿಯ ಉಂಗುರವನ್ನು ಹಿಡಿದಿದ್ದರು, ಹಾಗೆಯೇ ಸಹೋದರರಲ್ಲಿ ಒಬ್ಬರ ಪರಿಶುದ್ಧತೆಯ[೯೧] ಬಗ್ಗೆ ಕೇಳಿದರು ಮತ್ತು "ಜೊನಸ್ ಸಹೋದರರು ಒಳ್ಳೆಯದನ್ನು ಮಾಡಿದ್ದಾರೆ. ಒಂದು ವೇಳೆ ಪ್ರತಿಯೊಬ್ಬರೂ ತಾವು ಸಂಭೋಗ ನಡೆಸುವುದಿಲ್ಲ ಎನ್ನುವುದಕ್ಕೆ ಒಂದು ಉಂಗುರವನ್ನು ಜನನಾಂಗದ ಸುತ್ತ ಧರಿಸಿದರೆ; ಅವರ ವಾದವನ್ನು ನಾನು ಪರಿಗಣಿಸುತ್ತೇನೆ"[೯೨] ಎಂದು ನುಡಿದರು. ನಂತರದಲ್ಲಿ ಬ್ರ್ಯಾಂಡ್ ಅವರು ಅನೇಕ ವಿಮರ್ಶೆಗಳನ್ನು ಎದುರಿಸಿದರು ಮತ್ತು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದರು. ನಂತರ ಅವರು2009ರ ಎಂಟಿವಿ ವೀಡಿಯೊ ಮ್ಯುಸಿಕ್ ಅವಾರ್ಡ್ಸ್ ನಲ್ಲಿ ತಾವು ಕ್ಷಮೆ ಕೇಳಿರುವುದನ್ನು ಖಚಿತಪಡಿಸಿದರು.[೯೨] ಜೊನಸ್ ಸಹೋದರರ ನಂಬಿಕೆಯ ಕುರಿತು ಸೌತ್ ಪಾರ್ಕ್ ಟೆಲಿವಿಷನ್ ನ ದಿ ರಿಂಗ್ ಎಪಿಸೋಡಿನಲ್ಲಿ ಅವರನ್ನು ಅಪಹಾಸ್ಯಮಾಡಲಾಯಿತು.[೯೩][೯೪][೯೫] ಜೇ-zರ "ಆನ್ ಟು ದಿ ನೆಕ್ಸ್ಟ್ ಒನ್ " ಎಂಬ ಹಾಡಿನಲ್ಲಿ ಕೂಡ ಇವರು ಈ ಕುರಿತು ಉಲ್ಲೇಖಿಸಿದ್ದರು.[೯೬] ಜೊನಸ್ ಸಹೋದರರು ಚೆರೊಕಿಗಳೂ,ಐರಿಶ್‌ಗಳೂ (ತಾಯಿಯ ಕಡೆ ಅಜ್ಜ), ಇಟಾಲಿಯನ್ ಮತ್ತು ಜರ್ಮನ್ ಕುಲದವರೂ[೯೭][೯೮] ಆಗಿದ್ದಾರೆ.
ಲೋಕೋಪಕಾರ
[ಬದಲಾಯಿಸಿ]2007ರಲ್ಲಿ ಜೊನಸ್ ಸಹೋದರರು ಅಂದಾಜು $12 ಮಿಲಿಯನ್ ಗಳಿಸಿದರು ಮತ್ತು ಅದರಲ್ಲಿ 10% ಗಳಿಕೆಯನ್ನು ಅವರ ಚ್ಯಾರಿಟಿ,ಚೇಂಜ್ ಫಾರ್ ದಿ ಚಿಲ್ಡ್ರನ್ ಫೌಂಡೇಶನ್ ಗೆ ನೀಡಿದರು.[೯೯][೧೦೦] ಚೇಂಜ್ ಫಾರ್ ದಿ ಚಿಲ್ಡ್ರನ್ ಫೌಂಡೇಶನ್ ನ್ನು ಜೊನಾಸ್ ಸಹೋದರರು ಸ್ಥಾಪಿಸಿದರು,ಇಲ್ಲಿ ದಾನಿಗಳಿಂದ ಬಂದ ಹಣವನ್ನು "ನಥಿಂಗ್ ಬಟ್ ನೆಟ್ಸ್", "ಅಮೇರಿಕನ್ ಡಯಾಬಿಟೀಸ್ ಫೌಂಡೇಷನ್", "ಸೇಂಟ್. ಜ್ಯೂಡ್ ಚಿಲ್ಡ್ರನ್ಸ್ ರೀಸರ್ಚ್ ಹಾಸ್ಪಿಟಲ್", "ಚಿಲ್ಡ್ರನ್ಸ್ ಹಾಸ್ಪಿಟಲ್ ಲಾಸ್ ಏಂಜಲೀಸ್", ಮತ್ತು "ಸಮ್ಮರ್ ಸ್ಟಾರ್ಸ್: ಕ್ಯಾಂಪ್ ಫಾರ್ ದಿ ಪರ್ ಫಾರ್ಮಿಂಗ್ ಆರ್ಟ್ಸ್" ನಂತಹ ಹಲವು ಚ್ಯಾರಿಟಿಗಳಿಗೆ ನೀಡಲಾಗುವುದು. ಈ ತಂಡ ಹೇಳಿರು ಪ್ರಕಾರ:
ಮಕ್ಕಳನ್ನು ಪ್ರತೀಕೂಲ ಪರಿಸ್ಥಿತಿಯಲ್ಲಿ ವಿಶ್ವಾಸದಿಂದ, ನಿಶ್ಚಯದಿಂದ ಮತ್ತು ಯಶಸ್ವಿಯಾಗುತ್ತೇವೆ ಎನ್ನುವ ನಂಬಿಕೆಯನ್ನು ಪ್ರೇರೇಪಿಸುವ ಹಾಗೂ ಸ್ಫೂರ್ತಿ ನೀಡುವ ಉದ್ದೇಶದಿಂದ ನಾವು ಚೇಂಜ್ ಫಾರ್ ದಿ ಚಿಲ್ಡ್ರನ್ ಫೌಂಡೇಶನ್ ಅನ್ನು ಪ್ರಾರಂಭಿಸಿದ್ದೇವೆ. ನಾವು ಯೋಚಿಸುವಂತೆ ಮಕ್ಕಳಿಗೆ ಸಹಾಯ ಮಾಡುವ ಉತ್ತಮ ಜನರು ಅವರದೇ ವರ್ಗದವರಾಗಿರುತ್ತಾರೆ-- ಮಕ್ಕಳು ತಮಗಿಂತ ಸ್ವಲ್ಪ ಅದೃಷ್ಟ ಕಡಿಮೆ ಇರುವ ಮಕ್ಕಳಿಗೆ ಸಹಾಯ ಮಾಡುವುದು ಉತ್ತಮವಾದುದು.
ಆಗಸ್ಟ್ 6, 2008ರಿಂದ ಬೇಯರ್ ಡಯಾಬಿಟಿಸ್ ಕೇರ್, ನಿಕ್ ಜೊನಸ್ ಜೊತೆ ಯುವ ಜನರಿಗೆ ಸಿಹಿ ಮೂತ್ರ ಖಾಯಿಲೆಯನ್ನು ನಿರ್ವಹಿಸುವ ಬಗ್ಗೆ ತಿಳುವಳಿಕೆ ನೀಡಲು ಡಯಾಬಿಟೀಸ್ ಪ್ರತಿನಿಧಿಯಾಗಿ ಸಹಭಾಗಿತ್ವ ಪಡೆಯಿತು. ನಿಕ್ ಅವರು ತಮ್ಮ 13 ನೆ ವರ್ಷದಲ್ಲಿಯೇ ಸಿಹಿಮೂತ್ರ ರೋಗಕ್ಕೆ ತುತ್ತಾಗಿದ್ದರು.[೧೦೧] ನಿಕ್ ಯು.ಎಸ್ ಸಂಸತ್ತಿನಲ್ಲಿ ಸಿಹಿಮೂತ್ರ ರೋಗ ಸಂಶೋಧನೆಗೆ ಹಣ ಸಂಗ್ರಹಿಸಲು ಬೆಂಬಲ ನೀಡುವಂತೆ ಅನುಮೋದಿಸಿದರು.[೧೦೨]
ಸದಸ್ಯರು
[ಬದಲಾಯಿಸಿ]ಪ್ರಸ್ತುತ ಬಳಕೆಯಲ್ಲಿರುವುದು:
[ಬದಲಾಯಿಸಿ]ಜೋ ಜೊನಸ್- ಮುಖ್ಯ ಗಾಯಕ,ಆನದ್ಧವಾದ್ಯ,ಗಿಟಾರ್, ಕೀಬೋರ್ಡ್
ಹಿನ್ನಲೆ ವಾದ್ಯ
[ಬದಲಾಯಿಸಿ]ಜಾಕ್ ಲಾಲೇಸ್-ಡ್ರಮ್ಸ್,ಆನದ್ಧವಾದ್ಯ
ಮಾಜಿ
[ಬದಲಾಯಿಸಿ]ಧ್ವನಿಮುದ್ರಿಕೆ ಪಟ್ಟಿ
[ಬದಲಾಯಿಸಿ]- 2006: ಇಟ್ಸ್ ಅಬೌಟ್ ಟೈಮ್
- 2007: ಜೊನಾಸ್ ಬ್ರದರ್ಸ್
- 2008: ಎ ಲಿಟ್ಲ್ ಬಿಟ್ ಲಾಂಗರ್
- 2009: ಲೈನ್ಸ್,ವಿನೆಸ್ ಆಯ್೦ಡ್ ಟ್ರೈಯಿಂಗ್ ಟೈಮ್ಸ್
ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]ವರ್ಷ | |||||
೨೦೦೭ | ಹನ್ನಾ ಮೊಂಟಾನಾ | ತಮ್ಮದೇ ನಿಜಜೀವನದ ಪಾತ್ರ | ತಮ್ಮದೇ ನಿಜಜೀವನದ ಪಾತ್ರ | ತಮ್ಮದೇ ನಿಜಜೀವನದ ಪಾತ್ರ | Episode: Me and Mr. Jonas and Mr. Jonas and Mr. Jonas |
೨೦೦೮ | Jonas Brothers: Living the Dream | ತಮ್ಮದೇ ನಿಜಜೀವನದ ಪಾತ್ರ | ತಮ್ಮದೇ ನಿಜಜೀವನದ ಪಾತ್ರ | ತಮ್ಮದೇ ನಿಜಜೀವನದ ಪಾತ್ರ | | ಮುಖ್ಯ ಪಾತ್ರ |
ಕ್ಯಾಂಪ್ ರಾಕ್ | Shane Gray | Nate | Jason | ಡಿಸಿ ಚಾನೆಲ್ ಒರಜಿನಲ್ ಮೂವಿ | |
೨೦೦೯ | Jonas Brothers: The 3D Concert Experience | ತಮ್ಮದೇ ನಿಜಜೀವನದ ಪಾತ್ರ | ತಮ್ಮದೇ ನಿಜಜೀವನದ ಪಾತ್ರ | ತಮ್ಮದೇ ನಿಜಜೀವನದ ಪಾತ್ರ | | ಮುಖ್ಯ ಪಾತ್ರ |
JONAS | Joe Lucas | Nick Lucas | Kevin Lucas | | ಮುಖ್ಯ ಪಾತ್ರ | |
Night at the Museum: Battle of the Smithsonian | Cherub | Cherub | Cherub | 20ಯತ್ ಸೆಂಚುರಿ ಫಾಕ್ಸ್ | |
೨೦೧೦ | Camp Rock 2: The Final Jam | Shane Gray | Nate | Jason | ಡಿಸಿ ಚಾನೆಲ್ ಒರಜಿನಲ್ ಮೂವಿ |
ಪ್ರಕಟಣೆಗಳು
[ಬದಲಾಯಿಸಿ]ಬರ್ನಿಂಗ್ ಅಫ್: ಅನ್ ಟೂರಿಂಗ್ ವಿಥ್ ದಿ ಜೊನಾಸ್ ಬ್ರದರ್ಸ್ (ನವೆಂಬರ್18,2008)
- ಎ ಬಿಹೈಂಡ್ ದಿ ಸೀನ್ಸ್ ಬುಕ್,ಡಾಕ್ಯುಮೆಂಟಿಂಗ್ ದಿ ಬರ್ನಿಂಗ್ ಅಪ್ ಟೂರ್
ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು
[ಬದಲಾಯಿಸಿ]ಆಕರಗಳು
[ಬದಲಾಯಿಸಿ]- ↑ ೧.೦ ೧.೧ Monger, James Christopher. "( Jonas Brothers > Overview )". Allmusic. Rovi Corporation. Retrieved 2009-10-22.
- ↑ Wallenfeldt, Jeff. "Jonas Brothers (American band)". Encyclopædia Britannica. Encyclopædia Britannica, Inc. Retrieved 2009-11-01.
- ↑ Kot, Greg (August 24, 2008). "Jonas Brothers: Not just another boy band". Archived from the original on 2008-08-29. Retrieved 2009-03-09.
- ↑ Quenqua, Douglas (August 4, 2008). "A Rare CD by Today's Hot Boy Band: Bids Start at $160. Do I Hear $200?". Retrieved 2009-03-09.
- ↑ Gardner, Elysa (March 26, 2008). "Jonas Brothers are "each other's best friends"". Retrieved 2009-03-09.
- ↑ "Jonas Brothers the latest, hottest thing". Archived from the original on 2008-09-19. Retrieved 2009-03-09.
- ↑ ಜೊನಾಸ್ ಬ್ರರರ್ಸ್ ಆರ್ ಸ್ಟಾರಿಂಗ್ ಟು ಫೀಲ್ ದಿ ಹಾರ್ಟ್
- ↑ ೮.೦ ೮.೧ ೮.೨ Moss, Corey (April 6, 2006). "More Blink-182 Than Hanson, It's Time For The Jonas Brothers". MTV. Archived from the original on 2010-07-22. Retrieved 2008-08-21.
- ↑ "Jonas Brothers Biography". CCM Magazine. Archived from the original on 2008-09-15. Retrieved 2008-08-21.
- ↑ "Jonas Brothers". YouTube. MTV News.
- ↑ "Jonas Brothers". Ken Phillips Publicity Group. January 20, 2006. Archived from the original on 2008-09-05. Retrieved 2008-08-21.
- ↑ ೧೨.೦ ೧೨.೧ Hadley, Suzanne. "Star Bright". Clubhouse Magazine. Archived from the original on 2008-06-05. Retrieved 2010-02-25.
- ↑ Gans, Andrew (August 4, 2002). "Beauty and the Beast Becomes 8th Longest-Running Show Aug. 4". Playbill.
- ↑ "Photo Call: Les Misérables: Leading Mann". Playbill. February 3, 2003. Retrieved 2008-08-22.
- ↑ "Playbill Biography: Nicholas Jonas". Playbill. Retrieved 2008-08-22.
- ↑ Gans, Andrew (September 20, 2003). "Playbill News: Meg Bussert Joins Paper Mill Sound of Music". Playbill. Archived from the original on 2008-08-21. Retrieved 2008-08-22.
- ↑ ೧೭.೦ ೧೭.೧ ೧೭.೨ ೧೭.೩ ೧೭.೪ ೧೭.೫ Askew, Claire. "Kansas City Star: Band interview: The Jonas Brothers, on the road, promoting their first CD". Ken Phillips Publicity Group. Archived from the original on 2008-09-05. Retrieved 2008-08-20.
- ↑ ೧೮.೦ ೧೮.೧ ೧೮.೨ Moser, John J. "Allentown Morning Call: The Jonas Brothers: hearththrobs of the Hanson kind". Ken Phillips Publicity Group. Archived from the original on 2011-10-02. Retrieved 2008-08-22.
- ↑ "Nicholas Jonas - Dear God". INOrecords. Archived from the original on 2011-07-13. Retrieved 2008-08-22.
- ↑ Nick Jonas, Nick; Joe Jonas, Joe; Kevin Jonas, Kevin (2009). Jonas Fan Van. Interview with Nicole Anderson. Disney Channel.
- ↑ Jones, Kim. "INO Records Signs 12-Year Old Singer/Actor Nicholas Jonas". About.com. Archived from the original on 2012-01-27. Retrieved 2008-08-22.
- ↑ "Joy To The World (A Christmas Prayer) by Nicholas Jonas". Rhapsody. Retrieved 2008-08-22.
- ↑ Jones, Kim. "Jonas Brothers – It's About Time". About.com. Archived from the original on 2012-01-28. Retrieved 2008-08-22.
- ↑ "Nicholas Jonas". WalMart.com.
- ↑ ೨೫.೦ ೨೫.೧ "Jonas Brothers deliver squeaky clean "punk" music". Archived from the original on 2007-02-26. Retrieved 2010-02-25.
- ↑ ೨೬.೦ ೨೬.೧ Ferrucci, Patrick (February 16, 2006). "New Haven Register: Brothers In Arms". Ken Phillips Publicity Group. Archived from the original on 2008-09-05. Retrieved 2008-08-22.
- ↑ "BCSD – Nicholas Jonas". Boy Soloist. Archived from the original on 2017-07-07. Retrieved 2008-08-22.
- ↑ Kaufman, Gil (February 7, 2005). "The New Boy Bands". MTV. Archived from the original on 2014-11-28. Retrieved 2008-08-22.
- ↑ ೨೯.೦ ೨೯.೧ ೨೯.೨ "Get Out the Red Bull...Here Come the Jonas Brothers". Ken Phillips Publicity Group. October 14, 2005. Archived from the original on 2008-09-05. Retrieved 2008-08-22.
- ↑ ೩೦.೦ ೩೦.೧ ೩೦.೨ Christiano, Mary Anne (November 16, 2005). "The Montclair Times: It's About Time the Jonas Brothers come to Montclair". Ken Phillips Publicity Group. Archived from the original on 2008-09-05. Retrieved 2008-08-22.
- ↑ "Mandy - Jonas Brothers". SonyMusicStore. Archived from the original on 2007-10-14. Retrieved 2010-02-25.
- ↑ ೩೨.೦ ೩೨.೧ ೩೨.೨ ೩೨.೩ Black, Julie (January 2, 2007). "Fashion Show To Be Held In Rome". Greater Rome Times. Archived from the original on 2008-09-13. Retrieved 2008-08-22.
- ↑ "Disneymania, Vol. 4 > Overview". Allmusic. Retrieved 2008-08-29.
- ↑ Friss, Gwenn (June 18, 2006). "Aly & AJ pump up the volume". Cape Cod Times. Archived from the original on 2008-09-08. Retrieved 2008-08-29.
- ↑ "American Dragon: Jake Long episode guide". TV.com. Archived from the original on 2009-01-14. Retrieved 2008-08-29.
- ↑ "Jonas Brothers – It's About Time". Billboard. Archived from the original on 2007-12-11. Retrieved 2008-08-21.
- ↑ "Joy To The World: The Ultimate Christmas Collection". WorshipMusic.com. Retrieved 2008-09-01.
- ↑ "Little Mermaid Soundtrack (Special Edition)". Amazon.com. Retrieved 2008-09-01.
- ↑ "PR Newswire: The Jonas Brothers Sign Record Deal With Disney's Hollywood Records". Archived from the original on 2007-02-13. Retrieved 2008-09-01.
- ↑ Kosidowski, Paul (July 7, 2008). "Jonas Brothers thrill tween audience at Summerfest". Journal Sentinel. Archived from the original on 2009-02-14. Retrieved 2009-07-03.
- ↑ "Meet the Robinsons (soundtrack)". Amazon.com. Retrieved 2008-09-01.
- ↑ ಡಿಸ್ನೇಯ್ಮಾನಿಯಾ,ವಾಲ್ಯೂಮ್.5
- ↑ "White House Easter Egg Roll 2007".
- ↑ "White House Tee Ball Game".
- ↑ "Jonas Brothers – Jonas Brothers". Billboard. Archived from the original on 2007-08-17. Retrieved 2008-08-21.
- ↑ "Millions Sold on HSM2". Multichannel News. Archived from the original on 2008-05-09. Retrieved 2010-02-25.
- ↑ "Miss Teen USA 2007".
- ↑ "Disney Channel Games 2007". Archived from the original on 2012-02-05. Retrieved 2010-02-25.
- ↑ "Jonas Brothers countdown to A Little Bit Longer". Archived from the original on 2019-03-01. Retrieved 2010-02-25.
- ↑ "Camp Rock sets the stage for newcomer Demi Lovato". Reuters. June 15, 2008. Retrieved 2008-09-02.
- ↑ "Camp Rock sets the stage for newcomer Demi Lovato". Reuters. June 15, 2008. Archived from the original on 2010-08-03. Retrieved 2008-09-02.
- ↑ ""Camp Rock" sets the stage for newcomer Demi Lovato". Reuters.
- ↑ Hasty, Katie (June 25, 2008). "Coldplay Cruises To No. 1 On The Billboard 200". Billboard. Retrieved 2008-08-21.
- ↑ ೫೪.೦ ೫೪.೧ "Ticketmaster". Archived from the original on 2018-01-14. Retrieved 2010-02-25.
- ↑ ೫೫.೦ ೫೫.೧ "Jonas Brothers, Taylor Swift Performing for 3D Movie". YouTube.
- ↑ "Jonas Brothers return from their UK Trip".
- ↑ "The Clean Teen Machine". Rolling Stone. Archived from the original on 2008-07-25. Retrieved 2010-02-25.
- ↑ Vena, Jocelyn (August 22, 2008). "Jonas Brothers Donate Their Little Bit Longer Suits To Rock And Roll Hall Of Fame And Museum". MTV Newsroom. Archived from the original on 2012-05-27. Retrieved 2008-09-02.
- ↑ cherrybomb54 (December 27, 2008). "Jonas + Timbaland = Dumb". Sprinkle Pop. Archived from the original on 2009-01-23. Retrieved 2009-07-03.
{{cite web}}
: CS1 maint: numeric names: authors list (link) - ↑ "SNL's Valentine to You: Alec Baldwin and the Jonas Brothers". TVGuide. Archived from the original on 2009-05-25. Retrieved 2009-02-06.
- ↑ "MTV Interview (Fourth Album Confirmed)". YouTube. MTV. Retrieved 2009-03-11.
- ↑ Graff, Gary (2009-03-18). "Jonas Brothers' Fourth Album Due June 15". Billboard. Retrieved 2009-04-18.
- ↑ Eliscu, Jenny (March 2009). "Jonas Brothers Lines, Vines and Trying Times". Rolling Stone Magazine.
{{cite news}}
:|access-date=
requires|url=
(help); Unknown parameter|web=
ignored (help) - ↑ "World Tour Dates Announced --- More to Come". MySpace. Jonas Brothers. Archived from the original on 2009-03-21. Retrieved 2009-03-11.
- ↑ ನ್ಯೂಸ್ ಡೆಸ್ಕ್. ವಂಡರ್ ಗರ್ಲ್ಸ್ ಮೇಕ್ ವೇವ್ ಇನ್ ದಿ ಯು ಎಸ್ ಆಯ್‌ಸ್ ಒಪನಿಂಗ್ ಆಯ್‌ಕ್ಟ್ ಫಾರ್ ಜೊನಾಸ್ ಬ್ರದರ್ಸ್ ಟೂರ್ Archived 2009-08-28 ವೇಬ್ಯಾಕ್ ಮೆಷಿನ್ ನಲ್ಲಿ.. ಎಮ್‌ಟಿವಿ ಏಷಿಯಾ . ಜುಲೈ 24, 1999 ಅಗಸ್ಟ್ 20, 2009ರಲ್ಲಿ ಮರು ಸಂಪಾದನೆ.
- ↑ "Artist Chart History". Billboard. Retrieved 2009-07-03.
- ↑ "Honor Society signs with Jonas Brothers' label". STREETBRAND. Archived from the original on 2014-11-29. Retrieved 2009-07-07.
- ↑ "Radio Disney - Planet Premiere". Radio Disney. Archived from the original on 2009-09-25. Retrieved 2009-08-11.
- ↑ ಸೆಂಡ್ ಇಟ್ ಅನ್ ಪ್ರೆಸ್ ರಿಲೀಸ್
- ↑ "What's on TV Monday night". Daily News. August 10, 2009. Retrieved August 10, 2009.[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಆರ್ಕೈವ್ ನಕಲು". Archived from the original on 2009-12-08. Retrieved 2010-02-25.
- ↑ http://twitter.com/ddlovato/status/4921823344
- ↑ https://www.youtube.com/watch?v=6vxAnk_nTC8 Camp Rock 2: ದಿ ಫೈನಲ್ ಜಾಮ್ ಟೀಸರ್ ಟ್ರೇಲರ್
- ↑ "ಆರ್ಕೈವ್ ನಕಲು". Archived from the original on 2009-07-30. Retrieved 2010-02-25.
- ↑ https://www.youtube.com/watch?v=dAEoNvKHSjk&feature=sub
- ↑ "ಆರ್ಕೈವ್ ನಕಲು". Archived from the original on 2019-03-07. Retrieved 2010-02-25.
- ↑ "Jonas Brothers sign first ever book deal with Disney Group". Business of Cinema. Archived from the original on 2009-02-20. Retrieved 2010-02-25.
- ↑ "The Jonas Brothers to Rock Out Their First Book". TVGuide. Archived from the original on 2008-09-13. Retrieved 2010-02-25.
- ↑ "Jonas Brothers 3-D Concert Flick Gets A Release Date". MTV. Archived from the original on 2009-05-04. Retrieved 2010-02-25.
- ↑ "Catching You Up". Jonas Brothers via Blogging. April 8, 2009. Archived from the original on 2009-04-26. Retrieved 2009-05-26.
- ↑ "Jonas Bros show gets major changes". TV.com. Archived from the original on 2009-04-02. Retrieved 2010-02-25.
- ↑ "Disney Channel offers updates on "Hannah Montana", "Camp Rock", Jonas Brothers, Demi Lovato, "High School Musical", Disney Channel Games". Orlando Sentinel.
- ↑ "Disney Already Planning Sequel to Camp Rock". Archived from the original on 2008-09-12. Retrieved 2010-02-25.
- ↑ "Camp Rock sequel in the works". Hollywood Reporter. Archived from the original on 2008-06-26. Retrieved 2010-02-25.
- ↑ "Jonas Bros. whiff Fox's Farting Dog". Variety. Retrieved 2008-10-28.
- ↑ http://jbmoveonfansite.blogspot.com/2009/11/disney-channel-has-renewed-jonas-jonas.html
- ↑ Moore, Roger (2009-03-06). "They're family – and family-friendly". Orlando Sentinel. Archived from the original on 2009-04-26. Retrieved 2009-03-25.
- ↑ "Jonas Brothers: We are all virgins". US Magazine. February 22, 2008. Archived from the original on 2009-08-25. Retrieved 2009-05-31.
- ↑ "The Boy Band Next Door". Newsweek.
- ↑ Zeidler, Sue (February 1, 2008). "Straight-laced Jonas Brothers defy rocker image". Reuters. Retrieved 2009-03-13.
- ↑ ೯೧.೦ ೯೧.೧ Lewis, Jemima (September 14, 2008). "Jonas Brothers vs Russell Brand". The Telegraph. ಲಂಡನ್. Archived from the original on 2008-12-07. Retrieved 2008-11-25.
- ↑ ೯೨.೦ ೯೨.೧ "Russell Brand apologises for Jonas Brothers gag". Now. September 9, 2008. Retrieved 2008-11-25.
- ↑ Poniewozik, James (2009-03-12), "Is South Park the Most Moral Show on TV?", Time, retrieved 2009-03-12
- ↑ Fickett, Travis (2009-03-12), South Park: "The Ring" Review – The Jonas Bros. come to Colorado, ruin Kenny's would-be sex life, IGN, retrieved 2009-03-12
- ↑ Flanagan, Ben (2009-05-01). "Ben Around: "South Park: on a roll". The Tuscaloosa News. Tuscaloosa, Alabama. Archived from the original on 2011-06-06. Retrieved 2009-05-03.
- ↑ http://www.metrolyrics.com/on-to-the-next-one-lyrics-jayz.html
- ↑ https://www.youtube.com/watch?v=qM6JXZCm_yU
- ↑ https://www.youtube.com/watch?v=Lgjyo8J-IF8
- ↑ "Some teen stars are still well-scrubbed, others have gone wild". NY Daily News. Archived from the original on 2009-06-07. Retrieved 2010-02-25.
- ↑ "D-Vision". Change For The Children. Archived from the original on 2008-08-22. Retrieved 2008-09-02.
- ↑ "Bayer diabetes care partners with Nick Jonas to encourage young people to proactively manage their diabetes". Change For The Children. August 6, 2008. Archived from the original on 2008-08-07. Retrieved 2008-09-02.
- ↑ "Nick Jonas Meets Barack Obama, Lobbies For Diabetes Funding". Star Pulse. June 24, 2009. Archived from the original on 2016-03-05. Retrieved 2009-06-24.
ಹೊರಗಿನ ಕೊಂಡಿಗಳು
[ಬದಲಾಯಿಸಿ]- CS1 maint: numeric names: authors list
- CS1 errors: unsupported parameter
- CS1 errors: access-date without URL
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Articles with hCards
- Articles with hatnote templates targeting a nonexistent page
- Official website different in Wikidata and Wikipedia
- ಅಮೇರಿಕಾ ದೂರದರ್ಶನದ (ಕಿರುತೆರೆ) ವ್ಯಕ್ತಿಗಳು
- ಬಾಯ್ ಬ್ಯಾಂಡ್ಸ್
- ಜೊನಸ್ ಬ್ರದರ್ಸ್ (ಸೋದರರು)
- ನ್ಯೂಜರ್ಸಿಯ ಸಂಗೀತ ಸಮೂಹಗಳು
- ಅಮೇರಿಕಾ ರಾಕ್ ಸಂಗೀತ ಸಮೂಹಗಳು
- 1960ರ ಸಂಗೀತ ಸಮೂಹಗಳು
- ಅಮೇರಿಕಾ ಪಾಪ್ ಸಂಗೀತ ಸಮೂಹಗಳು
- ಸಮ್ಮೋಹನ ಧ್ವನಿಮುದ್ರಣಗಳ ಕಲಾವಿದರು
- ಹಾಲಿವುಡ್ ರೆಕಾರ್ಡ್ ಕಲಾವಿದರು
- 1965ರಲ್ಲಿ ಸ್ಥಾಪನೆಯಾದ ಸಂಗೀತ ಸಮೂಹಗಳು
- (ಸಿಬ್ಲಿಂಗ್ ಮ್ಯೂಸಿಕಲ್ ಟ್ರೈಯೋಸ್)
- ಪಾಶ್ಚಾತ್ಯ ಸಂಗೀತಗಾರರು
- ರಾಕ್ ಶೈಲಿಯ ಸಂಗೀತಗಾರರು