ಜೆಫ್ ಬೆಜೊಸ್
ಜೆಫ್ರಿ ಪ್ರೆಸ್ಟನ್ ಬೆಜೊಸ್ | |
---|---|
ಜನನ | ಆಲ್ಬುಕರ್ಕ್, ನವ ಮೆಕ್ಸಿಕೋ | ೧೨ ಜನವರಿ ೧೯೬೪
ಶಿಕ್ಷಣ ಸಂಸ್ಥೆ | ಪ್ರಿನ್ಸ್ಟನ್ ವಿಶ್ವವಿದ್ಯಾಲಯ(ಬ್ಯಾಚುಲರ್ ಆಫ್ ಸೈನ್ಸ್ - ಬಿ.ಎಸ್) |
ವೃತ್ತಿ | ಅಮೆಜಾನ್.ಕಾಂ ನ ಮುಖ್ಯಸ್ಥ ಹಾಗು ಸಿ.ಇ.ಓ |
ಪ್ರಶಸ್ತಿಗಳು | ಟೈಮ್ಸ್ ನಿಯತಕಾಲಿಕೆಯ ವರ್ಷದ ವ್ಯಕ್ತಿ - ೧೯೯೯ ವಾಷಿಂಗ್ ಟನ್ ನ ವರ್ಷದ ಸಿ.ಇ.ಓ-೧೯೯೯ |
ಜೆಫ್ರಿ ಪ್ರೆಸ್ಟನ್ "ಜೆಫ್" ಬೆಜೊಸ್ (ಜನನ: 1964ರ ಜನವರಿ 12), ಅಮೆಜಾನ್.ಕಾಂ ನ ಸಂಸ್ಥಾಪಕ, ಅಧ್ಯಕ್ಷ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಮಂಡಳಿಯ ಸಭಾಪತಿಯಾಗಿದ್ದಾನೆ. ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದ ಓರ್ವ ಟೌ ಬೀಟಾ ಪೈ ಪದವೀಧರನಾದ ಬೆಜೊಸ್, 1994ರಲ್ಲಿ ಅಮೆಜಾನ್‌ನ್ನು ಸಂಸ್ಥಾಪಿಸುವುದಕ್ಕೆ ಮುಂಚಿತವಾಗಿ ಡಿ.ಈ.ಷಾ & ಕೊ ಸಂಸ್ಥೆಗಾಗಿ ಓರ್ವ ಹಣಕಾಸಿನ ವಿಶ್ಲೇಷಕನಾಗಿ ಕಾರ್ಯನಿರ್ವಹಿಸಿದ.
ಆರಂಭಿಕ ಜೀವನ ಮತ್ತು ಹಿನ್ನೆಲೆ
[ಬದಲಾಯಿಸಿ]ಬೆಜೊಸ್‌ನ ತಾಯಿಯ ಕಡೆಯ ಪೂರ್ವಜರು ಮೊದಲ ನೆಲಸಿಗರಾಗಿದ್ದು ಟೆಕ್ಸಾಸ್‌ನಲ್ಲಿ ಅವರು ನೆಲೆಸಿದ್ದರು, ಮತ್ತು ತಲೆಮಾರುಗಳು ಕಳೆಯುತ್ತಾ ಹೋದಂತೆ, ಕೊಟಲ್ಲಾ ಎಂಬಲ್ಲಿದ್ದ 25,000 ಎಕರೆಯಷ್ಟು (101 ಕಿ.ಮೀ.2 ಅಥವಾ 39 ಮೈಲುಗಳು2) ವಿಸ್ತೀರ್ಣದ ವ್ಯವಸಾಯ ಕ್ಷೇತ್ರವೊಂದನ್ನು ಅವರು ಸ್ವಾಧೀನಪಡಿಸಿಕೊಂಡಿದ್ದರು. ಬೆಜೊಸ್‌ನ ತಾಯಿಯ ಕಡೆಯ ತಾತನು ಆಲ್ಬುಕರ್ಕ್‌ನಲ್ಲಿನ ಅಮೆರಿಕಾ ಸಂಯುಕ್ತ ಸಂಸ್ಥಾನದ ಪರಮಾಣು ಶಕ್ತಿ ಆಯೋಗದ ಓರ್ವ ಪ್ರಾದೇಶಿಕ ನಿರ್ದೇಶಕನಾಗಿದ್ದ. ಸಾಕಷ್ಟು ಮುಂಚೆಯೇ ನಿವೃತ್ತನಾದ ಆತ ವ್ಯವಸಾಯ ಕ್ಷೇತ್ರವನ್ನು ಪ್ರವೇಶಿಸಿದ. ಬೆಜೊಸ್ ತನ್ನ ತಾರುಣ್ಯದ ಬಹುಪಾಲು ಬೇಸಿಗೆಗಳನ್ನು ಇಲ್ಲಿಯೇ ಕಳೆದ ಮತ್ತು ಕಾರ್ಯಾಚರಣೆಗೆ ಅವಶ್ಯಕವಾಗಿದ್ದ, ಅಗಾಧವಾಗಿ ವೈವಿಧ್ಯತೆಯಿಂದ ಕೂಡಿದ್ದ ಕಾರ್ಯಭಾರಗಳನ್ನು ತನ್ನ ತಾತನೊಂದಿಗೆ ನಿರ್ವಹಿಸುತ್ತಾ ಕೆಲಸವನ್ನು ರೂಢಿಸಿಕೊಂಡಿದ್ದ. ತುಂಬಾ ಚಿಕ್ಕವಯಸ್ಸಿನಲ್ಲಿಯೇ ಅವನು ಯಂತ್ರಶಾಸ್ತ್ರಕ್ಕೆ ಸಂಬಂಧಿಸಿದ ಒಂದು ಎದ್ದುಕಾಣುವ ಸಹಜ ಒಲವನ್ನು ಪ್ರದರ್ಶಿಸಿದ – ಓರ್ವ ದಟ್ಟಗಾಲಿಡುವ ಮಗುವಾಗಿರುವಾಗಲೇ ಒಂದು ಸ್ಕ್ರ್ಯೂಡ್ರೈವರ್ ಬಳಸಿಕೊಂಡು ತನ್ನ ಕಟಕಟೆಯಿರುವ ತೊಟ್ಟಿಲನ್ನು ಕಳಚಿಡುವ ಪ್ರಯತ್ನಕ್ಕೆ ಅವನು ಕೈಹಾಕಿದ್ದ.[೨]
ನ್ಯೂ ಮೆಕ್ಸಿಕೊದ ಆಲ್ಬುಕರ್ಕ್ ಎಂಬಲ್ಲಿ ಜಾಕಿ ಎಂಬ ಹೆಸರಿನ ಓರ್ವ ಹದಿಹರೆಯದ ತಾಯಿಗೆ ಜೆಫ್ ಬೆಜೊಸ್ ಜನಿಸಿದ. ಜೆಫ್‌ನ ತಂದೆಯೊಂದಿಗಿನ ಅವಳ ವೈವಾಹಿಕ ಜೀವನವು ಒಂದು ವರ್ಷಕ್ಕಿಂತ ಸ್ವಲ್ಪವೇ ಹೆಚ್ಚಿನ ಅವಧಿಯವರೆಗೆ ಸಾಗಿತು. ಜೆಫ್ ಐದು ವರ್ಷದವನಾಗಿದ್ದಾಗ, ಅವಳು ಮರುಮದುವೆಯಾದಳು. ಈ ಬಾರಿ ಅವಳ ಸಂಗಾತಿಯಾದವನು ಮಿಗುಯೆಲ್ ಬೆಜೊಸ್. ಕ್ಯೂಬಾದಲ್ಲಿ ಜನಿಸಿದ್ದ ಮಿಗುಯೆಲ್ ತನ್ನ 15ನೇ ವಯಸ್ಸಿನಲ್ಲಿ ಏಕಾಂಗಿಯಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಗೆ ವಲಸೆ ಹೋಗಿದ್ದ, ಮತ್ತು ಆಲ್ಬುಕರ್ಕ್ ವಿಶ್ವವಿದ್ಯಾಲಯದಲ್ಲಿ ತನ್ನ ಕಾರ್ಯದಲ್ಲಿ ಆತ ಪ್ರಗತಿ ಸಾಧಿಸಿದ್ದ. ಮದುವೆಯ ನಂತರ ಕುಟುಂಬವು ಟೆಕ್ಸಾಸ್‌ನ ಹೂಸ್ಟನ್‌ಗೆ ತೆರಳಿತು ಮತ್ತು ಮಿಗುಯೆಲ್ ಎಕ್ಸಾನ್ ಎಂಬ ಸಂಸ್ಥೆಯಲ್ಲಿ ಓರ್ವ ಎಂಜಿನಿಯರ್ ಆಗಿ ಸೇರಿಕೊಂಡ. ಹೂಸ್ಟನ್‌ನಲ್ಲಿನ ರಿವರ್ ಓಕ್ಸ್ ಎಲಿಮೆಂಟರಿ ಎಂಬ ಶಾಲೆಯಲ್ಲಿ 4ನೇ ದರ್ಜೆಯಿಂದ 6ನೇ ದರ್ಜೆಗೆ ಜೆಫ್ ಸೇರಿಕೊಂಡ.
ತನ್ನ ಚಿಕ್ಕ ವಯಸ್ಸಿನಲ್ಲಿಯೇ ಬೆಜೊಸ್ ತೀವ್ರ ಸ್ವರೂಪದ ಮತ್ತು ವೈವಿಧ್ಯತೆಯಿಂದ ಕೂಡಿದ್ದ ವೈಜ್ಞಾನಿಕ ಆಸಕ್ತಿಗಳನ್ನು ತೋರಿಸಿದ. ತನ್ನ ಕಿರಿಯ ಒಡಹುಟ್ಟಿದವರನ್ನು ತನ್ನ ಕೋಣೆಯಿಂದ ಆಚೆಯಿರಿಸಲು ಮತ್ತು ತನ್ನ ಖಾಸಗಿತನವನ್ನು ಕಾಯ್ದುಕೊಂಡು ಹೋಗಲು, ಅವನು ವಿದ್ಯುತ್ತಿನ ಎಚ್ಚರಿಕೆ ಗಂಟೆಯೊಂದನ್ನು ಸಜ್ಜುಗೊಳಿಸಿದ. ತನ್ನ ವಿಜ್ಞಾನ ವಿಷಯದ ಯೋಜನೆಗಳನ್ನು ನಿರ್ವಹಿಸುವುದಕ್ಕಾಗಿ ಆತ ತನ್ನ ಹೆತ್ತವರ ಗ್ಯಾರೇಜನ್ನೇ ಒಂದು ಪ್ರಯೋಗಾಲಯವಾಗಿ ಪರಿವರ್ತಿಸಿದ. ಸದರಿ ಕುಟುಂಬವು ಫ್ಲೋರಿಡಾದ ಮಿಯಾಮಿಗೆ ತೆರಳಿತು; ಅಲ್ಲಿ ಮಿಯಾಮಿ ಪಾಮೆಟೋ ಸೀನಿಯರ್ ಹೈಸ್ಕೂಲ್‌ನ್ನು ಬೆಜೊಸ್ ಸೇರಿಕೊಂಡ.[೩] ಪ್ರೌಢಶಾಲೆಯಲ್ಲಿರುವಾಗ, ಫ್ಲೋರಿಡಾ ವಿಶ್ವವಿದ್ಯಾಲಯದಲ್ಲಿನ ವಿದ್ಯಾರ್ಥಿಗಳ ವಿಜ್ಞಾನ ತರಬೇತಿ ಕಾರ್ಯಸೂಚಿಗೆ ಅವನು ಸೇರಿಕೊಂಡ; 1982ರಲ್ಲಿ ಸಿಲ್ವರ್ ನೈಟ್ ಪ್ರಶಸ್ತಿಯೊಂದನ್ನು ಅವನು ಸ್ವೀಕರಿಸುವುದಕ್ಕೆ ಇದು ಅವನಿಗೆ ನೆರವಾಯಿತು.[೪] ಭೌತಶಾಸ್ತ್ರವನ್ನು ಅಧ್ಯಯನ ಮಾಡಬೇಕೆಂದು ಯೋಜಿಸುತ್ತಾ ಅವನು ಪ್ರಿನ್ಸ್‌ಟನ್ ವಿಶ್ವವಿದ್ಯಾಲಯವನ್ನು ಪ್ರವೇಶಿಸಿದನಾದರೂ, ತನ್ನ ಪ್ರೀತಿಯ ವಿಷಯವಾದ ಕಂಪ್ಯೂಟರ್‌ಗಳಿಗೇ ಅವನು ಕೆಲವೇ ದಿನಗಳಲ್ಲಿ ಮರಳಿದ ಮತ್ತು ಇಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನದಲ್ಲಿ ಒಂದು ವಿಜ್ಞಾನದ ಸ್ನಾತಕ ಪದವೀಧರ ಪದವಿಯೊಂದಿಗೆ ಅವನು ಅತ್ಯುನ್ನತ ಮಟ್ಟದ (ಸುಮ ಕುಮ್ ಲೌಡೇ), ಅಂತರ ಕಾಲೇಜು ಗೌರವ ಸಂಘದ (ಫಿ ಬೀಟಾ ಕಪ್ಪಾ) ಸದಸ್ಯತ್ವವನ್ನು ಪಡೆದ. 2008ರಲ್ಲಿ ಕಾರ್ನೆಗಿ ಮೆಲನ್ ವಿಶ್ವವಿದ್ಯಾಲಯದ ವತಿಯಿಂದ ಬೆಜೊಸ್‌ಗೆ ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯದಲ್ಲಿ ಗೌರವಾರ್ಥ ಡಾಕ್ಟರೇಟ್ ಪದವಿಯೊಂದನ್ನು ನೀಡಲಾಯಿತು.
ವೃತ್ತಿಜೀವನ
[ಬದಲಾಯಿಸಿ]1986ರಲ್ಲಿ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ತೇರ್ಗಡೆಯಾದ ನಂತರ, ಕಂಪ್ಯೂಟರ್ ವಿಜ್ಞಾನದ ಕ್ಷೇತ್ರದಲ್ಲಿ ವಾಲ್ ಸ್ಟ್ರೀಟ್ ಕುರಿತಾಗಿ ಬೆಜೊಸ್ ಕಾರ್ಯನಿರ್ವಹಿಸಿದ.[೫] ನಂತರ, ಫಿಟೆಲ್ ಎಂದು ಹೆಸರಾಗಿದ್ದ ಒಂದು ಕಂಪನಿಗಾಗಿ ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಸಂಬಂಧಿಸಿದ ಜಾಲಬಂಧವೊಂದರ ರೂಪಿಸುವಿಕೆಯ ಕುರಿತಾಗಿ ಆತ ಕಾರ್ಯನಿರ್ವಹಿಸಿದ. ನಂತರ ಬ್ಯಾಂಕರ್ಸ್ ಟ್ರಸ್ಟ್ ಸಂಸ್ಥೆಗಾಗಿ ಓರ್ವ ಉಪಾಧ್ಯಕ್ಷನಾಗಿ ಬೆಜೊಸ್ ಕಾರ್ಯನಿರ್ವಹಿಸಿದ. ಆಮೇಲೆ ಡಿ.ಈ.ಷಾ & ಕೊ ಸಂಸ್ಥೆಗಾಗಿ ಕಂಪ್ಯೂಟರ್ ವಿಜ್ಞಾನದ ಕ್ಷೇತ್ರದಲ್ಲಿಯೂ ಅವನು ಕಾರ್ಯನಿರ್ವಹಿಸಿದ.
1994ರಲ್ಲಿ ಅಮೆಜಾನ್.ಕಾಂ ಅನ್ನು ಬೆಜೊಸ್ ಸಂಸ್ಥಾಪಿಸಿದ; ಇದಕ್ಕೂ ಮುಂಚಿತವಾಗಿ ಆತ ನ್ಯೂಯಾರ್ಕ್‌ನಿಂದ ಸಿಯಾಟಲ್‌ವರೆಗೆ ದೇಶಾದ್ಯಂತ ಚಾಲನೆಯೊಂದನ್ನು ಮಾಡಿದ, ದಾರಿಯಲ್ಲಿ ಹೋಗುವಾಗ ಅಮೆಜಾನ್ ವ್ಯವಹಾರ ಯೋಜನೆಯನ್ನು ಬರೆಯುತ್ತಾ ಹೋದ ಮತ್ತು ಮೂಲ ಕಂಪನಿಯನ್ನು ತನ್ನ ಗ್ಯಾರೇಜಿನಲ್ಲಿ ಸ್ಥಾಪಿಸಿದ.[೬] ಅಮೆಜಾನ್ ಜೊತೆಗಿನ ಅವನ ಕೆಲಸವು ಅಂತಿಮವಾಗಿ ಅವನನ್ನು ಅತ್ಯಂತ ಪ್ರಸಿದ್ಧ ಡಾಟ್-ಕಾಮ್ ವಾಣಿಜ್ಯೋದ್ಯಮಿಗಳಲ್ಲಿ ಒಬ್ಬನನ್ನಾಗಿ ಮತ್ತು ಓರ್ವ ಶತಕೋಟ್ಯಾಧಿಪತಿಯನ್ನಾಗಿ ಮಾಡಿತು. 2004ರಲ್ಲಿ, ಬ್ಲ್ಯೂ ಆರಿಜನ್ ಎಂಬ ಹೆಸರಿನ ಮಾನವ ಅಂತರಿಕ್ಷ ಯಾನದ ಒಂದು ಆರಂಭಕ ಕಂಪನಿಯನ್ನು ಅವನು ಸಂಸ್ಥಾಪಿಸಿದ.
ವ್ಯವಹಾರ ಪ್ರಕ್ರಿಯೆಯ ವಿವರಗಳ ಕುರಿತಾಗಿ ತಾನು ತೋರಿಸಿದ ಗಮನಕ್ಕೆ ಸಂಬಂಧಿಸಿದಂತೆ ಬೆಜೊಸ್ ಸುಪರಿಚಿತನಾಗಿದ್ದಾನೆ. ಕಾಂಡೆ ನ್ಯಾಸ್ಟ್‌ನ Portfolio.com ನಿಂದ ವಿವರಿಸಲ್ಪಟ್ಟಂತೆ, "ಅವನು ಏಕಕಾಲದಲ್ಲಿ, ಆದದ್ದಾಗಲೆಂಬ ಮನೋವೃತ್ತಿಯ ಓರ್ವ ಪ್ರಭಾವಿ ವ್ಯಕ್ತಿ ಹಾಗೂ ಓರ್ವ ಹೆಸರಾಂತ ಕಿರು-ವ್ಯವಸ್ಥಾಪಕನಾಗಿದ್ದಾನೆ. ... ಒಪ್ಪಂದದ ಖಚಿತ ವಿವರದಿಂದ ಮೊದಲ್ಗೊಂಡು ಅಮೆಜಾನ್‌ನ ಎಲ್ಲಾ ಪತ್ರಿಕಾ ಪ್ರಕಟಣೆಗಳಲ್ಲಿ ಅವನ ಕುರಿತು ಏನನ್ನು ಉಲ್ಲೇಖಿಸಲಾಗಿದೆ ಎಂಬುದರವರೆಗಿನ ಪ್ರತಿಯೊಂದರ ಕುರಿತೂ ತಿಳಿಯಲು ಬಯಸುವ ಓರ್ವ ಕಾರ್ಯನಿರ್ವಾಹಕನ ಕೆಲಸ ಅವನದಾಗಿದೆ." [೬]
ಕೃತಕ ಬುದ್ಧಿಮತ್ತೆ
[ಬದಲಾಯಿಸಿ]ಮನುಷ್ಯಕೃತ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್-AAI) ಎಂಬುದು ಕೃತಕ ಬುದ್ಧಿಮತ್ತೆಗೆ (AI) ಸಂಬಂಧಿಸಿದಂತೆ ಜೆಫ್ ಬೆಜೊಸ್‌ನಿಂದ ರೂಪಿಸಲ್ಪಟ್ಟ ಒಂದು ಪರಿಭಾಷೆಯಾಗಿದೆ. ಒಂದು ಛಾಯಾಚಿತ್ರದಲ್ಲಿರುವ ಓರ್ವ ವ್ಯಕ್ತಿಯು ಪುರುಷನೋ ಅಥವಾ ಮಹಿಳೆಯೋ ಎಂಬುದನ್ನು ಗುರುತಿಸುವಂಥ ನಿಶ್ಚಿತ ಸಂಸ್ಕರಣಾ ಕಾರ್ಯಭಾರಗಳು ಈಗಲೂ ಕಂಪ್ಯೂಟರ್‌ಗಳಿಗಿಂತ ಉತ್ತಮವಾಗಿ ಮತ್ತು ವೇಗವಾಗಿ ಮಾನವರಿಂದ ನಿರ್ವಹಿಸಲ್ಪಡುತ್ತವೆ. ಇಂಥ ಕಾರ್ಯಭಾರಗಳ ಕುರಿತಾದ ಕಾರ್ಯಸೂಚಿಯ ರಚಿಸುವಿಕೆಗೆ ಸಂಬಂಧಿಸಿದಂತೆ AI ಇನ್ನೂ ಸಮರ್ಥವಾಗಿಲ್ಲ. ಕಂಪ್ಯೂಟರ್ ಕಾರ್ಯಸೂಚಿಯೊಂದರ ಆ ಭಾಗಗಳನ್ನು ಮಾನವರಿಗೆ ಹೊರಗುತ್ತಿಗೆಯಾಗಿ ನೀಡುವುದು AAIನ ಪರಿಕಲ್ಪನೆಯಾಗಿದೆ.[೭] ಅಮೆಜಾನ್ ಯಾಂತ್ರಿಕ ಟರ್ಕ್‌ನ ಹಿಂದಿರುವ ಆಧಾರವಾಗಿರುವ ತತ್ತ್ವವು AAI ಆಗಿದೆ.
ಮಾನ್ಯತೆ
[ಬದಲಾಯಿಸಿ]1999ರಲ್ಲಿ ಟೈಮ್ ನಿಯತಕಾಲಿಕವು ಅವನನ್ನು ವರ್ಷದ ವ್ಯಕ್ತಿ ಎಂದು ಹೆಸರಿಸಿತು.[೮] 2008ರಲ್ಲಿ, ಅವನನ್ನು ಅಮೆರಿಕಾದ ಅತ್ಯುತ್ತಮ ನಾಯಕರ ಪೈಕಿ ಒಬ್ಬ ಎಂಬುದಾಗಿ U.S. ನ್ಯೂಸ್ & ವರ್ಲ್ಡ್ ರಿಪೋರ್ಟ್ ಆಯ್ಕೆಮಾಡಿತು.[೯]
ಉಲ್ಲೇಖಗಳು
[ಬದಲಾಯಿಸಿ]- ↑ "Jeff Bezos". Forbes magazine. Retrieved 2010-10-31.
Jeff Bezos; $12.6 B; Calculated July 2010
- ↑ 12/14/98 ದಿ ಟಾರೆಂಟ್ ಆಫ್ ಎನರ್ಜಿ ಬಿಹೈಂಡ್ ಅಮೆಜಾನ್
- ↑ ಪಾಮೆಟೋ ಸೀನಿಯರ್ ಪ್ರೌಢಶಾಲೆ
- ↑ ಮಿಯಾಮಿ-ಡೇಡ್ ಸಿಲ್ವರ್ ನೈಟ್ ಪ್ರಶಸ್ತಿಗಳ ವಿಜೇತರು
- ↑ Graduation date http://www.tbp.org/pages/About/People/DistinguishedMembers/Business.cfm Archived 2011-06-19 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ೬.೦ ೬.೧ ಟಾಪ್ ಎಕ್ಸ್ಇಕ್ಯುಟಿವ್ ಪ್ರೊಫೈಲ್ಸ್ - ಜೆಫ್ರಿ P. ಬೆಜೊಸ್ - Portfolio.com
- ↑ Jason Pontin (25 March 2007). "Artificial Intelligence, With Help From the Humans". New York Times. Retrieved 2010-10-31.
Jeff Bezos, the chief executive of Amazon.com, has created Amazon Mechanical Turk, an online service involving human workers, and he has also personally invested in a human-assisted search company called ChaCha. Mr. Bezos describes the phenomenon very prettily, calling it 'artificial artificial intelligence.'
{{cite news}}
: Cite has empty unknown parameter:|coauthors=
(help) - ↑ "ಪರ್ಸನ್ ಆಫ್ ದಿ ಇಯರ್" ಪ್ರೊಫೈಲ್ Archived 2006-08-18 ವೇಬ್ಯಾಕ್ ಮೆಷಿನ್ ನಲ್ಲಿ., ಟೈಮ್
- ↑ "America's Best Leaders: Jeff Bezos, Amazon.com CEO". Retrieved 2008-11-25.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Please use a more specific IMDb template. See the documentation for available templates.
- Works by or about ಜೆಫ್ ಬೆಜೊಸ್ in libraries (WorldCat catalog)
- ಜೆಫ್ ಬೆಜೊಸ್ collected news and commentary at The New York Times
- ಟೆಂಪ್ಲೇಟು:Nndb
- ಕಾಂಡೆ ನ್ಯಾಸ್ಟ್ ಪೋರ್ಟ್ಫೋಲಿಯೋ ಎಕ್ಸ್ಇಕ್ಯುಟಿವ್ ಪ್ರೊಫೈಲ್ - Portfolio.com (ಆಗಸ್ಟ್ 2007)
- ಇನ್ಸೈಡ್ ದಿ ಮೈಂಡ್ ಆಫ್ ಜೆಫ್ ಬೆಜೊಸ್ - Fastcompany.com (ಆಗಸ್ಟ್ 2004)
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: empty unknown parameters
- Pages using infobox person with unknown parameters
- Articles with hCards
- Persondata templates without short description parameter
- 1964ರಲ್ಲಿ ಜನಿಸಿದವರು
- Amazon.com ಜನರು
- ಅಮೆರಿಕಾದ ಶತಕೋಟ್ಯಾಧಿಪತಿಗಳು
- ಅಮೆರಿಕಾದ ಕಂಪ್ಯೂಟರ್ ವ್ಯವಹಾರಸ್ಥರು
- ಅಮೆರಿಕಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು
- ಅಂತರಜಾಲ ಚಿಲ್ಲರೆ ಮಾರಾಟಗಾರಿಕೆ ವಲಯದಲ್ಲಿನ ವ್ಯವಹಾರಸ್ಥರು
- ಬದುಕಿರುವ ಜನರು
- ನ್ಯೂ ಮೆಕ್ಸಿಕೊದ ಆಲ್ಬುಕರ್ಕ್ಗೆ ಸೇರಿದ ಜನರು
- ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿಗಳು