ವಿಷಯಕ್ಕೆ ಹೋಗು

ಜಿ. ಪ್ರಶಾಂತ ನಾಯಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಿ ಪ್ರಶಾಂತ ನಾಯಕ ‍‍( ಮಾರ್ಚ್ ೧೨, ೧೯೭೦) ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದು ಕನ್ನಡದ ಸಾಹಿತ್ಯ ಸಾಂಸ್ಕೃತಿಕ ಲೋಕದಲ್ಲಿ ತಮ್ಮ ಬರಹ, ಚಿಂತನೆ, ಸಂವಾದಗಳ ಮೂಲಕ ಗುರುತಿಸಲ್ಪಟ್ಟವರು. ಕವನ, ಕತೆ, ಪ್ರಬಂಧ, ಸಂಶೋಧನೆ, ವಿಮರ್ಶೆ ಸಂಪಾದನೆ ಇತ್ಯಾದಿ ಪ್ರಕಾರಗಳಲ್ಲಿ ಸಹಜತೆ ಮತ್ತು ಬದ್ಧತೆಯಿಂದ ವಿಚಾರಗಳನ್ನು ದಾಖಲಿಸುವ ಪ್ರಯತ್ನದಿಂದ ಮುಖ್ಯರಾಗುವ ಇವರು ಈಗಾಗಲೇ ನಲವತ್ತಕ್ಕೂ ಹೆಚ್ಚು ಕೃತಿಗಳನ್ನು ಬರೆದಿದ್ದಾರೆ.

ಡಾ. ಜಿ ಪ್ರಶಾಂತ ನಾಯಕ
ಜನನ
ಜಿ ಪ್ರಶಾಂತ ನಾಯಕ

೧೨ ಮಾರ್ಚ್ ೧೯೭೦
ಪಾಳ್ಯ, ಕೊಳ್ಳೇಗಾಲ (ತಾ), ಚಾಮರಾಜನಗರ ಜಿಲ್ಲೆ.
ರಾಷ್ಟ್ರೀಯತೆಭಾರತೀಯ
ವೃತ್ತಿಪ್ರಾಧ್ಯಾಪಕರು,ಕನ್ನಡ ವಿಭಾಗ, ಕುವೆಂಪು ವಿಶ್ವವಿದ್ಯಾಲಯ
ಜಾಲತಾಣhttps://preethiyabaduku.wixsite.com/manasu

ಜನನ, ಜೀವನ

[ಬದಲಾಯಿಸಿ]

ಜಿ ಪ್ರಶಾಂತ ನಾಯಕ ಇವರು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ 'ಪಾಳ್ಯ,' ಗ್ರಾಮದಲ್ಲಿ ೧೯೭೦ರಲ್ಲಿ ಜನಿಸಿದರು. ತಂದೆ ಡಾ. ಬಿ. ಗುರುಲಿಂಗ, ತಾಯಿ ಶ್ರೀಮತಿ ನಾಗವೇಣಿ. ವಿದ್ಯಾರ್ಥಿ ದೆಸೆಯಲ್ಲಿಯೇ ಇವರು ಉತ್ತಮ ಭಾಷಣಕಾರರಾಗಿದ್ದರು. ಕುವೆಂಪು, ಬಸವಣ್ಣ, ಅಂಬೇಡ್ಕರ್, ಪೆರಿಯಾರ್, ಲೋಹಿಯಾ ಮುಂತಾದವರ ವಿಚಾರಧಾರೆಗಳಿಂದ ಆಕರ್ಷಿತರಾಗಿದ್ದರು

ಕೃತಿಗಳು[ಬದಲಾಯಿಸಿ]

[ಬದಲಾಯಿಸಿ]

ಪಿ.ಎಚ್ ಡಿ ಸಂಶೋಧನಾ ಪ್ರಬಂಧ

[ಬದಲಾಯಿಸಿ]

ಕೃತಿಗಳು

[ಬದಲಾಯಿಸಿ]
  1. ಪ್ರೀತಿ ಮತ್ತು ಸ್ಫೂರ್ತಿ (ಕವನಸಂಕಲನ - 1994)
  2. ಬಂಧ ಮತ್ತು ಸಂಬಂಧ (ಕಥಾ ಸಂಕಲನ - 1995)
  3. ನಿನ್ನೆಗಳ ಹಾದಿಯಲ್ಲಿ (ಕಥಾ ಸಂಕಲನ - 1999)
  4. ಭಾರತೀಯ ಕಾವ್ಯಮೀಮಾಂಸೆ (ಪರಿಚಯ - 2004)
  5. ಪ್ರೀತಿಯ ಬದುಕು (ಸಂಶೋಧನಾ ಪ್ರಬಂಧ - 2004)
  6. ಕೆ.ಎಸ್. ನರಸಿಂಹಸ್ವಾಮಿ ಕಾವ್ಯ (ಪರಿಚಯ - 2005)
  7. ಅನ್ನಿಸುವ ಅರ್ಥ (ವಿಮರ್ಶೆ - 2006)
  8. ಕನ್ನಡ ಸಾಹಿತ್ಯ ಮತ್ತು ದಲಿತ ಪರಂಪರೆ  (ಕಿರು ಸಂಶೋಧನೆ - 2007)
  9.   ಭಾವ-ಚಿತ್ರಗಳು (ವಿಮರ್ಶೆ - 2007)
  10. ಚಿಂತನ ಚಿತ್ತ  (ವಿಮರ್ಶೆ - 2008)
  11. ನೀಂ ಮಹಚ್ಛಿಲ್ಪಿ ದಿಟಂ (ವಿಮರ್ಶೆ - 2009)
  12. ಕನ್ನಡ ಸಿನಿಮಾಲೋಕ (ಅವಲೋಕನ - 2009)
  13. ಪ್ರಾಚೀನ ಕನ್ನಡ ಗದ್ಯಸಾಹಿತ್ಯ (2010)
  14. ಆ....ಭಾವ ಆ....ಬದುಕು   (ಪ್ರಬಂಧ - 2010)
  15. ಅರಿವಿನ ಅಕ್ಕರೆ  (ವಿಮರ್ಶೆ - 2012)
  16. ಹೀಗಿದ್ದೆವು ನಾವು  (ಕವನಸಂಕಲನ - 2012)
  17. ಕುವೆಂಪು : ಕಾವ್ಯ ಪದವಿವರಣ ಕೋಶ:   ಸಂಪುಟ 1( 2012)
  18. ಕನ್ನಡ ಭಾಷೆ  ಸಮಕಾಲೀನ ಸಮಸ್ಯೆಗಳು (2013)
  19. ನಾನಕ್ಕನೆನ್, ನಿನಗೆ ತಂಗೆ! (ವಿಮರ್ಶೆ - 2013)
  20. ಪ್ರೇಮ ನವೋದಯ (ವಿಮರ್ಶೆ - 2013)
  21. ಬೆಳಕಿನ ಬಯಲು (ವಿಮರ್ಶೆ - 2013)
  22. ಕುವೆಂಪು : ಖಂಡಕಾವ್ಯ-ಮಹಾಕಾವ್ಯ    ಪದವಿವರಣ ಕೋಶ: ಸಂಪುಟ 2 (2014)
  23. ಘಟ್ಟಿವಾಳಯ್ಯ (2015)
  24. ಮನೆಯೊಳಗಿನ ಮಾಯೆ (ಕನ್ನಡ ಕಿರುತೆರೆ ಲೋಕ) (ವಿಮರ್ಶೆ - 2015)
  25. ಬದುಕು ಭಾವಗೀತೆ.... (ಅಂಕಣ ಬರಹಗಳು - 2015)
  26. ಅಂಬೇಡ್ಕರ್ ಮತ್ತು ಕುವೆಂಪು (2016)
  27. ದಾರ್ಶನಿಕರ ದಾರಿ (ವಿಮರ್ಶೆ - 2017)
  28. ವಚನಕಾರರು ಮತ್ತು ಅಂಬೇಡ್ಕರ್ (2017)
  29. ಸಿನಿ ಸಂಪದ (2018)
  30. ಮಾತು-ಮನನ (2018)
  31. ಆ ಬದುಕು ಭಾವ : ಚಿತ್ರಗಳು (2019)
  32. ವಾಲ್ಮೀಕಿ ಮತ್ತುರಾಮಾಯಣ– (2020)
  33. ರಾಜರ್ಷಿ ಭರತ(ನಾಟಕ) – (2021)
  34. ಒಲವೆ ಜೀವನ ಸಾಕ್ಷಾತ್ಕಾರ (೨೦೨೧)
  35. ಶ್ರೀ ರಾಮಾಯಣದರ್ಶನಂ ಭಾವಾನುಸಂಧಾನ(೨೦೨೧)
  36. ನವೋದಯ (೨೦೨೨)
  37. ಅಕ್ಷರ ಮತ್ತು ಅರಿವು(೨೦೨೩)
  38. ಬಸವಣ್ಣ ಮತ್ತು ವಚನಗಳು (೨೦೨೩)
  39. ಅಕ್ಕಮಹಾದೇವಿ ಮತ್ತು ವಚನಗಳು (೨೦೨೩)
  40. ಮಹರ್ಷಿ ವಾಲ್ಮೀಕ (೨೦೨೪)
  41. ಕನ್ನಡ ಸಿನಿಮಾ ಹಾಡುಗಳು: ಭಾವಾನುಬಂಧ (೨೦೨೪)
  42. ಬುದ್ಧ : ಬೆಳಕು ಮತ್ತು ಎಚ್ಚರ (೨೦೨೪)

ಗೌರವ, ಪ್ರಶಸ್ತಿಗಳು

[ಬದಲಾಯಿಸಿ]
  1. ಸ್ನೇಹ ಸೇತು: ‘ನೀಂ ಮಹಚ್ಛಿಲ್ಪಿ ದಿಟಂ’ ಕೃತಿಗೆ (ದಿನಾಂಕ: ೨೦-೧೨-೨೦೧೦, ಸಾಮಾಜಿಕ ಸಾಂಸ್ಕೃತಿಕ ಸಂಸ್ಥೆ ® ಬೆಂಗಳೂರು)
  2. ಸಮ್ಮೇಳನದ ಸರ್ವಾಧ್ಯಕ್ಷರು, ಗೌರವ ಪುರಸ್ಕಾರ, ಯಳಂದೂರು ತಾಲ್ಲೂಕು ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ
  3. ಸಾಹಿತ್ಯ ಶ್ರೀ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಸರ್ಕಾರ ೨೦೨೦
  4. ನೀಂ ಮಹಚ್ಛಿಲ್ಪಿ ದಿಟಂ’ ಕೃತಿಗೆ 'ಸ್ನೇಹ ಸೇತು' (ದಿನಾಂಕ: ೨೦-೧೨-೨೦೧೦, ಬೆಂಗಳೂರು)
  5. ಬದುಕು ಭಾವಗೀತೆ’ ಅಂಕಣಬರಹಕ್ಕೆ ೨೦೧೫ನೇ ಸಾಲಿನ ‘ಡಾ.ಹಾ.ಮಾ.ನಾಯಕ’ ಪ್ರಶಸ್ತಿ, ಕರ್ನಾಟಕ  ಸಂಘ(ರಿ.)ಶಿವಮೊಗ್ಗ 
  6. ಅಂಬೇಡ್ಕರ್ ಮತ್ತು ಕುವೆಂಪು  ಕೃತಿಗೆ  ‘ಎಲ್ ಬಸವರಾಜು ದತ್ತಿ’ ಪ್ರಶಸ್ತಿ

ಉಲ್ಲೇಖಗಳು

[ಬದಲಾಯಿಸಿ]

https://vijaykarnataka.com/news/karnataka/satyashree-awards-announced-by-karnataka-sahitya-academy/articleshow/74517699.cms