ಜಿವೊಸುಯೆ ಕಾರ್ಡುಚ್ಚಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಿವೊಸುಯೆ ಕಾರ್ಡುಚ್ಚಿ
ಜನನ(೧೮೩೫-೦೭-೨೭)೨೭ ಜುಲೈ ೧೮೩೫
ಪೀಟ್ರಾಸ್ತಾಂತ, ಟಸ್ಕೆನಿ, ಇಟಲಿ
ಮರಣFebruary 16, 1907(1907-02-16) (aged 71)
ಬೊಲೋನ, ಇಟಲಿ
ವೃತ್ತಿಕವಿ
ರಾಷ್ಟ್ರೀಯತೆಇಟಲಿಗ
ಪ್ರಮುಖ ಪ್ರಶಸ್ತಿ(ಗಳು)Nobel Prize in Literature
1906

ಜಿವೊಸುಯೆ ಕಾರ್ಡುಚ್ಚಿ,(ಜುಲೈ ೨೭, ೧೮೩೫ಫೆಬ್ರುವರಿ ೧೬, ೧೯೦೭) ಎನೋಟ್ರಿಯೋ ರೊಮಾನೋ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದ ಇಟಾಲಿಯನ್ ಕವಿ. ಅವರನ್ನು ಇಟಲಿಯ ಶ್ರೇಷ್ಠ ಕವಿ ಹಾಗೂ ಅನಧಿಕೃತ ರಾಷ್ಟ್ರಕವಿ ಯೆಂದು ಗುರುತಿಸಲಾಗುತ್ತದೆ. ಜಿವೊಸುಯೆ ಕಾರ್ಡುಚ್ಚಿರವರನ್ನು ಇಟಲಿಯ ಮೊಟ್ಟಮೊದಲ ನೊಬೆಲ್ ಪ್ರಶಸ್ತಿ ವಿಜೇತನೆಂಬ ಹೆಗ್ಗಳಿಕೆ ಕೂಡಾ ಉಂಟು. ಜಿವೊಸುಯೆ ಕಾರ್ಡುಚ್ಚಿ ಇಟಲಿಯ ಪೀಸಾದ ಸಮೀಪದ ಹಳ್ಳಿಯೊಂದರಲ್ಲಿ ಜನಿಸಿದರು. ಪೀಸಾ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರವನ್ನು ಅಭ್ಯಾಸಮಾಡಿ ಕೆಲವು ಹೈಸ್ಕೂಲುಗಳಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸಿ, ನಂತರ ಪಿ.ಎಚ್.ಡಿ. ಗಳಿಸಿದರು. ಜಿವೊಸುಯೆ ಕಾರ್ಡುಚ್ಚಿ ಬೊಲೋನಾ ವಿಶ್ವವಿದ್ಯಾಲಯದ ಇಟಾಲಿಯನ್ ಸಾಹಿತ್ಯ ಪೀಠದ ಮುಖ್ಯಸ್ಥರಾಗಿ ನೇಮಕಗೊಂಡು ೧೯೦೪ರ ವರೆವಿಗೂ ದುಡಿದರು.

ಜಿವೊಸುಯೆ ಕಾರ್ಡುಚ್ಚಿ ಗಣ್ಯಸಾಹಿತಿ, ಹಾಗೂ ಚಿಂತಕರು[ಬದಲಾಯಿಸಿ]

ಜಿವೊಸುಯೆ ಕಾರ್ಡುಚ್ಚಿ ಇಟಾಲಿಯನ್‍ ಕಾವ್ಯಪರಂಪರೆಗಳನ್ನು ಆಳವಾಗಿ ಅಭ್ಯಾಸಮಾಡಿದರು. ತಮ್ಮ ೨೨ ನೆಯ ವಯಸ್ಸಿನಲ್ಲಿ ನಿಯಮಿತವಾಗಿ ಕವನಸಂಗ್ರಹಗಳನ್ನು ರಚಿಸಿ ಪ್ರಕಟಿಸುತ್ತಿದ್ದರು. ೧೮೬೫ ರಲ್ಲಿ ಅವರು ಪ್ರಟಿಸಿದ ಇನೋ ಎ ಸಟಾನಾ (ಸೈತಾನ ಸೂಕ್ತ) ತನ್ನ ಆಧುನಿಕ ಕ್ರಾಂತಿಕಾರಕ ದೃಷ್ಟಿಕೋನದಿಂದ ಎಲ್ಲರ ಗಮನ ಸೆಳೆಯಿತು. ಅವರ 'ಕವನ-ಸಂಕಲನ' ರಾಜಕಾರಣಿಗಳನ್ನು ತೀವ್ರವಾಗಿ ವಿಡಂಬಿಸಿತು. ತಮ್ಮ ಕಾವ್ಯಕೃತಿಗಳ ಹೊರತಾಗಿಯೂ ಜಿವೊಸುಯೆ ಕಾರ್ಡುಚ್ಚಿ ರವರ ಕೊಡುಗೆ ಬಹಳ ಮಹತ್ವದ್ದಾಗಿತ್ತು. ಜಿವೊಸುಯೆ ಕಾರ್ಡುಚ್ಚಿ ಇಟಾಲಿಯನ್ ಸಾಹಿತ್ಯದ ಇತಿಹಾಸವನ್ನು ತಮ್ಮ ಆಳವಾದ ಅಭ್ಯಾಸದಿಂದ ಪ್ರಸಿದ್ಧಿಪಡಿಸಿದರು. ಜಸ್ವೇ ಕರ್ ಡೂಚಿ, ಅದ್ಭುತ ಭಾಷಣಕಾರಾಗಿದ್ದರು. ಸೆನೆಟ್ ಸದಸ್ಯರಾಗಿ ಆಯ್ಕೆಗೊಂಡು , ಇಟಾಲಿಯನ್ ರಾಜಕೀಯರಂಗದಲ್ಲೂ ಪ್ರವೇಶಿ, ಪ್ರಮುಖವ್ಯಕ್ತಿಯಾಗಿದ್ದರು. ಜಿವೊಸುಯೆ ಕಾರ್ಡುಚ್ಚಿ ಸ್ವಲ್ಪಕಾಲ ವಿಶ್ವವಿದ್ಯಾಲಯದಿಂದ ಅಮಾನತುಗೊಂಡಿದ್ದರು. ನೋಬೆಲ್ ಪ್ರಶಸ್ತಿಪಡೆಯುವ ಮೊದಲೇ, ಜಿವೊಸುಯೆ ಕಾರ್ಡುಚ್ಚಿರವರು ಗಣ್ಯ ಸಾಹಿತಿಯಾಗಿದ್ದರು.