ಜಿಂದಾಲ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್
ಚಿತ್ರ:JSPL logo.PNG | |
ಸಂಸ್ಥೆಯ ಪ್ರಕಾರ | Public (ಬಿಎಸ್‌ಇ: 532286) |
---|---|
ಸ್ಥಾಪನೆ | 1952 |
ಸಂಸ್ಥಾಪಕ(ರು) | O P Jindal |
ಮುಖ್ಯ ಕಾರ್ಯಾಲಯ | ನವ ದೆಹಲಿ, India[೧] |
ಪ್ರಮುಖ ವ್ಯಕ್ತಿ(ಗಳು) | Savitri Jindal, (Chairman) |
ಉದ್ಯಮ | Conglomerate |
ಉತ್ಪನ್ನ | Steel, Power, Mining, Oil & Gas, Infrastructure. |
ಆದಾಯ | US$2.3 billion (2010) |
ಉದ್ಯೋಗಿಗಳು | 7,001 |
ಪೋಷಕ ಸಂಸ್ಥೆ | Jindal Group |
ಜಾಲತಾಣ | JindalSteelpower.com |
ಜಿಂದಾಲ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್ (JSPL ) (ಬಿಎಸ್‌ಇ: 532286) ಎಂಬುದು ಭಾರತದಲ್ಲಿನ ಅತ್ಯಂತ ಮೌಲ್ಯಯುತವಾದ ಖಾಸಗಿ ಉಕ್ಕು ಉತ್ಪಾದಕನಾಗಿದ್ದು, 2.1 ಶತಕೋಟಿ US$ಗೂ (10,000 ಕೋಟಿ ರೂಪಾಯಿಗಳು) ಹೆಚ್ಚಿರುವ ಒಂದು ವಾರ್ಷಿಕ ವಹಿವಾಟನ್ನು ಹೊಂದಿದೆ; ಜಿಂದಾಲ್ ಸ್ಟೀಲ್ & ಪವರ್ ಲಿಮಿಟೆಡ್ (JSPL), 12 ಶತಕೋಟಿ US$ನಷ್ಟು (60,000 ಕೋಟಿ ರೂಪಾಯಿಗಳಿಗೂ ಹೆಚ್ಚು) ಮೌಲ್ಯದ ಜಿಂದಾಲ್ ಸಮೂಹದ ಒಂದು ಭಾಗವೆನಿಸಿಕೊಂಡಿದೆ. ಉಕ್ಕು, ವಿದ್ಯುತ್, ಗಣಿಗಾರಿಕೆ, ತೈಲ ಮತ್ತು ಅನಿಲ ಹಾಗೂ ಮೂಲಭೂತ ಸೌಕರ್ಯಗಳ ವಲಯದಲ್ಲಿ JSPL ಓರ್ವ ಅಗ್ರಗಣ್ಯ ವೃತ್ತಿನಿರತನಾಗಿದೆ. ದಿವಂಗತ ಶ್ರೀ O.P. ಜಿಂದಾಲ್‌ರವರ ಕಿರಿಯ ಮಗನಾದ ಶ್ರೀಮಾನ್ ನವೀನ್ ಜಿಂದಾಲ್, JSPL ಮತ್ತು ಅದರ ಸಮೂಹ ಕಂಪನಿಗಳಿಗೆ ಚಾಲಕಶಕ್ತಿಯಾಗಿದ್ದಾರೆ. ಜಿಂದಾಲ್ ಪವರ್ ಲಿಮಿಟೆಡ್, ಜಿಂದಾಲ್ ಪೆಟ್ರೋಲಿಯಂ ಲಿಮಿಟೆಡ್, ಜಿಂದಾಲ್ ಸಿಮೆಂಟ್ ಲಿಮಿಟೆಡ್ ಮತ್ತು ಜಿಂದಾಲ್ ಸ್ಟೀಲ್ ಬೊಲಿವಿಯಾ ಇವು ಈ ಸಮೂಹದ ಕಂಪನಿಗಳಾಗಿವೆ. ಸ್ವಯಂಪೂರ್ಣತೆಯ ಪರಿಕಲ್ಪನೆಯಲ್ಲಿ ತಾನಿಟ್ಟಿರುವ ಒಂದು ನಂಬಿಕೆಯನ್ನು ಕಂಪನಿಯು ಘೋಷಿಸುತ್ತದೆ. ತನ್ನದೇ ವಶದಲ್ಲಿರುವ ಕಲ್ಲಿದ್ದಲಿನ ಮತ್ತು ಕಬ್ಬಿಣದ-ಅದಿರಿನ ಗಣಿಗಳಿಂದ ಲಭ್ಯವಾಗುವ ಹಿಮ್ಮೊಗ ಸಮಗ್ರೀಕರಣದ ಮೂಲಕ ಕಂಪನಿಯು ಉಕ್ಕು ಮತ್ತು ವಿದ್ಯುತ್ತನ್ನು ಉತ್ಪಾದಿಸುತ್ತದೆ.
ಆದಾಗ್ಯೂ, ಟನ್‌ಮಾನದ ಆಧಾರದ ಮೇಲೆ ಹೇಳುವುದಾದರೆ, ಇದು ಭಾರತದಲ್ಲಿನ ಮೂರನೇ ಅತಿದೊಡ್ಡ ಉಕ್ಕು ಉತ್ಪಾದಕನಾಗಿದೆ. ಮೆದು ಕಬ್ಬಿಣ, ಲಘು ಉಕ್ಕಿನ ಚಪ್ಪಡಿಗಳು, ಫೆರೋ ಕ್ರೋಮ್, ಕಬ್ಬಿಣ ಅದಿರು, ಲಘು ಉಕ್ಕು ಇವುಗಳನ್ನಷ್ಟೇ ಅಲ್ಲದೇ, ರಾಚನಿಕ ಬಳಕೆಯ, ಬಿಸಿಯಿರುವಾಗಲೇ ಆಕಾರನೀಡಲ್ಪಟ್ಟ ಪಟ್ಟಿಗಳು ಮತ್ತು ಸುರುಳಿಗಳನ್ನು ಹಾಗೂ ಕಲ್ಲಿದ್ದಲು ಆಧರಿತ ಮೆದು ಕಬ್ಬಿಣ ಸ್ಥಾವರವನ್ನು ಕಂಪನಿಯು ತಯಾರಿಸುತ್ತದೆ ಮತ್ತು ಮಾರಾಟಮಾಡುತ್ತದೆ. ಈ ಕಂಪನಿಯು ವಿದ್ಯುತ್ ಉತ್ಪಾದನೆಯಲ್ಲಿಯೂ ತೊಡಗಿಸಿಕೊಂಡಿದೆ.
O.P. ಜಿಂದಾಲ್‌ರಿಂದ (1930–2005) ಸಂಸ್ಥಾಪಿಸಲ್ಪಟ್ಟ ಜಿಂದಾಲ್ ಸಮೂಹ ದಲ್ಲಿ ಜಿಂದಾಲ್ ಸ್ಟೀಲ್ ಅಂಡ್ ಪವರ್ ಒಂದು ಭಾಗವಾಗಿದೆ. ಅವರ ವ್ಯವಹಾರ ಸಾಮ್ರಾಜ್ಯದ ಹಿಂದಿನ ಅವತಾರಗಳ ಪೈಕಿ ಒಂದಾದ ಪೈಪ್ ಯುನಿಟ್ ಜಿಂದಾಲ್ ಇಂಡಿಯಾ ಲಿಮಿಟೆಡ್ ನ್ನು 1969ರಲ್ಲಿ ಅವರು ಆರಂಭಿಸಿದರು. 2005ರಲ್ಲಿ ಜಿಂದಾಲ್‌ರವರ ಮರಣವಾದ ನಂತರ, ಅವರ ಸ್ವತ್ತುಗಳ ಪೈಕಿಯ ಬಹುಭಾಗಗಳು ಅವರ ಹೆಂಡತಿ ಸಾವಿತ್ರಿ ಜಿಂದಾಲ್‌ರವರಿಗೆ ವರ್ಗಾಯಿಸಲ್ಪಟ್ಟವು. ಆಮೇಲೆ ಜಿಂದಾಲ್ ಸಮೂಹದ ಆಡಳಿತ ಮಂಡಳಿಯು ಅವರ ನಾಲ್ವರು ಗಂಡುಮಕ್ಕಳ ನಡುವೆ ವಿಭಾಗಿಸಲ್ಪಟ್ಟಿತು ಮತ್ತು ಜಿಂದಾಲ್ ಸ್ಟೀಲ್ ಅಂಡ್ ಪವರ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ನವೀನ್ ಜಿಂದಾಲ್ ಅಧಿಕಾರ ವಹಿಸಿಕೊಂಡರು. ಅವರ ಹಿರಿಯ ಸೋದರರಾದ ಸಜ್ಜನ್ ಜಿಂದಾಲ್, ಪ್ರಸಕ್ತವಾಗಿ ASSOCHAMನ ಮುಖ್ಯಸ್ಥರಾಗಿದ್ದು, ಇದು ವಾಣಿಜ್ಯ ಮಂಡಲಿಗಳ ಒಂದು ಪ್ರಭಾವಶಾಲಿ ಘಟಕವಾಗಿದೆ; O.P. ಜಿಂದಾಲ್ ಸಮೂಹದ ಭಾಗವಾಗಿರುವ JSW ಸಮೂಹದ ಮುಖ್ಯಸ್ಥರಾಗಿಯೂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.
ಎಲ್ ಮ್ಯುಟೂನ್ ಪ್ರದೇಶದಲ್ಲಿನ ವಿಶ್ವದ ಅತಿದೊಡ್ಡ ಕಬ್ಬಿಣ ಅದಿರು ಮೀಸಲುಗಳ ಪೈಕಿ ಒಂದಕ್ಕೆ ಸಂಬಂಧಿಸಿದ ಅಭಿವೃದ್ಧಿಯ ಹಕ್ಕುಗಳನ್ನು 2006ರ ಜೂನ್ 3ರಂದು ಜಿಂದಾಲ್ ಸ್ಟೀಲ್‌ಗೆ ಬೊಲಿವಿಯಾ ಮಂಜೂರು ಮಾಡಿತು. 1.5 ಶತಕೋಟಿ US$ನಷ್ಟು ಪ್ರಮಾಣದ ಒಂದು ಆರಂಭಿಕ ಹೂಡಿಕೆಯೊಂದಿಗೆ ಕಾರ್ಯಾರಂಭ ಮಾಡಿದ ಕಂಪನಿಯು, ದಕ್ಷಿಣ ಅಮೆರಿಕಾದ ದೇಶದಲ್ಲಿ ಮುಂಬರುವ ಎಂಟು ವರ್ಷಗಳ ಅವಧಿಯಲ್ಲಿ ಹೆಚ್ಚುವರಿಯಾಗಿ 2.1 ಶತಕೋಟಿ US$ನಷ್ಟು ಹಣವನ್ನು ಹೂಡಲು ಯೋಜಿಸುತ್ತಿದೆ.[೨]
ಫೋರ್ಬ್ಸ್ ನಿಯತಕಾಲಿಕದ ಅನುಸಾರ, O.P. ಜಿಂದಾಲ್‌ರ ವಿಧವೆಯಾದ ಸಾವಿತ್ರಿ ಜಿಂದಾಲ್ 19ನೇ ಅತ್ಯಂತ ಶ್ರೀಮಂತ ಭಾರತೀಯ ವ್ಯಕ್ತಿ ಎಂಬ ಶ್ರೇಯಾಂಕ ಪಡೆದಿದ್ದಾರೆ.
ಹುಡುಗಿಯರಿಗಾಗಿಯೇ ಮೀಸಲಾದ ವಿದ್ಯಾ ದೇವಿ ಜಿಂದಾಲ್ ಸ್ಕೂಲ್ ಎಂಬ ಒಂದು ವಸತಿ ಶಾಲೆಯನ್ನು ಜಿಂದಾಲ್ ಕುಟುಂಬವು 1984ರಲ್ಲಿ ಭಾರತದ ಹಿಸಾರ್‌ನಲ್ಲಿ ಸ್ಥಾಪಿಸಿತು. ಈ ಶಾಲೆಯ ಕುರಿತು ಅಷ್ಟೊಂದು ಹೆಚ್ಚಿನ ಪ್ರಚಾರ ಅಥವಾ ಮಾರುಕಟ್ಟೆ ಕಾರ್ಯವನ್ನು ಮಾಡಿಲ್ಲವಾದರೂ, ಇದಿರುವ ಖಾಸಗಿ ತಾಣ ಮತ್ತು ಗಮನಾರ್ಹ ಶ್ರೇಣಿಯ ಚಟುವಟಿಕೆಗಳ ಕಾರಣದಿಂದಾಗಿ, ಈ ಶಾಲೆಯು ಶ್ರೀಮಂತ ವಿದ್ಯಾರ್ಥಿಗಳ ಶೈಕ್ಷಣಿಕ ಅಗತ್ಯಕ್ಕಾಗಿ ಸ್ಥಾಪಿಸಲ್ಪಟ್ಟಿದೆ ಎಂದು ವ್ಯಾಪಕವಾಗಿ ತಿಳಿದುಬಂದಿದೆ. ಭಾರತದ ಸಿರಿವಂತ ವ್ಯವಹಾರಸ್ಥ ಕುಟುಂಬ ಮತ್ತು ರಾಜಕೀಯ ಕುಟುಂಬಗಳಿಗೆ ಸೇರಿದ ಹುಡುಗಿಯರನ್ನು ಈ ಶಾಲೆಯ ವಿದ್ಯಾರ್ಥಿವೃಂದವು ಒಳಗೊಳ್ಳುತ್ತದೆ.[೩]
ಭವಿಷ್ಯದ ದೃಷ್ಟಿಕೋನ
[ಬದಲಾಯಿಸಿ]ಹೊಸತಾದ ಪರಿಧಿಗಳೆಡೆಗೆ ವಿಸ್ತರಿಸುವ ದೃಷ್ಟಿಕೋನವನ್ನು ಹೊಂದಿರುವ JSPL, ಜೀವನದಲ್ಲಿ ಬದಲಾವಣೆಯೊಂದೇ ಸ್ಥಿರವಾಗಿದೆ ಎಂಬುದನ್ನು ದೃಢವಾಗಿ ನಂಬುತ್ತದೆ. ಹೀಗಾಗಿ, ತನ್ನ ಅಸ್ತಿತ್ವದಲ್ಲಿರುವ ತಂತ್ರಜ್ಞಾನಗಳನ್ನು ನಿರಂತರವಾಗಿ ಉನ್ನತೀಕರಿಸುವ, ಹೊಸ ತಂತ್ರಜ್ಞಾನಗಳನ್ನು ಸ್ವೀಕರಿಸುವ, ತನ್ನ ಸಿಬ್ಬಂದಿಯನ್ನು ಪ್ರೇರೇಪಿಸುವ ಹಾಗೂ ನಮ್ಮ ಸುತ್ತಮುತ್ತಲಿರುವ ಜನರ ಜೀವನ ಗುಣಮಟ್ಟಗಳನ್ನು ಮೇಲಕ್ಕೆತ್ತುವ ಅಗತ್ಯ ಅದಕ್ಕೆ ಕಂಡುಬರುತ್ತಿದೆ. ಈ ಮೌಲ್ಯಗಳಿಗೆ ಕಂಪನಿಯು ಅಂಟಿಕೊಂಡಿರುವ ಹಿನ್ನೆಲೆಯಲ್ಲಿ, ಪ್ರಮುಖ ವಿಸ್ತರಣಾ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತಿವೆ:
ರಾಯ್‌ಗಢ
- 2 MTPA ಸಿಮೆಂಟ್ ಸ್ಥಾವರ.
- 540 MWಗಳಷ್ಟಿರುವ ಹೆಚ್ಚುವರಿ ವಿದ್ಯುತ್ ಉತ್ಪಾದನೆ
- ಮಧ್ಯಮ ಗಾತ್ರದ ರಾಚನಿಕ ಬಳಕೆಯ ಗಿರಣಿ.
- ಗಣಿಗಳಿಂದ ಸ್ಥಾವರಕ್ಕೆ ಸಾಗುವ ಕೊಳವೆ ವಾಹಕ.
- ಪುಟ್ಟ ಊದು ಕುಲುಮೆಯ ಉನ್ನತೀಕರಣ
- ಕೈಗಾರಿಕಾ ಕ್ಷೇತ್ರದಲ್ಲಿನ ಫ್ಯಾಬ್ರಿಕೇಷನ್ ಘಟಕ.
7.0 MTPA ಸಾಮರ್ಥ್ಯದ ಒಂದು ಹೆಚ್ಚುವರಿ ಉಕ್ಕಿನ ಸ್ಥಾವರವನ್ನು ಹಂತ ಹಂತವಾಗಿ ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ಹಾಗೂ 5.20 ಶತಕೋಟಿ US$ಗೂ ಹೆಚ್ಚಿನ (26,000 ಕೋಟಿ ರೂಪಾಯಿಗಳು) ಒಂದು ಹೂಡಿಕೆಯೊಂದಿಗೆ 1600 MW ಸಾಮರ್ಥ್ಯದ ಒಂದು ವಿದ್ಯುತ್ ಸ್ಥಾವರವನ್ನು ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ, JSPL ಮತ್ತು ಛತ್ತೀಸ್‌ಗಢ ಸರ್ಕಾರದ ನಡುವೆ ಒಂದು MOU ಸಹಿಹಾಕಲ್ಪಟ್ಟಿದೆ.
ಜಾರ್ಖಂಡ್
6.00 ಶತಕೋಟಿ US$ನಷ್ಟು ಮೊತ್ತದ (30,000 ಕೋಟಿ ರೂಪಾಯಿಗಳು) ಒಂದು ಒಟ್ಟು ಹೂಡಿಕೆಯೊಂದಿಗೆ, 11 ದಶಲಕ್ಷ ಟನ್ನುಗಳಷ್ಟು ಸಾಮರ್ಥ್ಯದ ಒಂದು ಸಂಯೋಜಿತ ಉಕ್ಕು ಸ್ಥಾವರ ಮತ್ತು 2600 MW ಸಾಮರ್ಥ್ಯದ, ವಶದಲ್ಲಿರುವ ವಿದ್ಯುತ್ ಸ್ಥಾವರವನ್ನು ಹಂತ ಹಂತವಾಗಿ ಸ್ಥಾಪಿಸಲು ಯೋಜಿಸಲಾಗಿದೆ.
ಒಡಿಶಾ
8.00 ಶತಕೋಟಿ US$ನಷ್ಟು ಮೊತ್ತದ (40,000 ಕೋಟಿ ರೂಪಾಯಿಗಳು) ಒಂದು ಒಟ್ಟು ಹೂಡಿಕೆಯೊಂದಿಗೆ, 12.5 ದಶಲಕ್ಷ ಟನ್ನುಗಳಷ್ಟು ಸಾಮರ್ಥ್ಯದ ಒಂದು ಸಂಯೋಜಿತ ಉಕ್ಕು ಸ್ಥಾವರ ಮತ್ತು 2600 MW ಸಾಮರ್ಥ್ಯದ, ವಶದಲ್ಲಿರುವ ವಿದ್ಯುತ್ ಸ್ಥಾವರವನ್ನು ಹಂತ ಹಂತವಾಗಿ ಸ್ಥಾಪಿಸಲು ಯೋಜಿಸಲಾಗಿದೆ. 3 ದಶಲಕ್ಷ ಟನ್ನುಗಳ ಸಾಮರ್ಥ್ಯದ ಮೊದಲ ಹಂತವು 2011ರ ವೇಳೆಗೆ ಕಾರ್ಯಸನ್ನದ್ಧವಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಕಲ್ಲಿದ್ದಲನ್ನು ದ್ರವ ಪೆಟ್ರೋಲಿಯಂ ಆಗಿ ಪರಿವರ್ತಿಸುವ ಯೋಜನೆ
ಭಾರತ ಸರ್ಕಾರದ ಕೇಂದ್ರ ಕಲ್ಲಿದ್ದಲು ಖಾತೆಯು ಹಮ್ಮಿಕೊಂಡಿರುವ ಕಲ್ಲಿದ್ದಲಿನಿಂದ ದ್ರವ ಪೆಟ್ರೋಲಿಯಂನ್ನು ಸಂಸ್ಕರಿಸುವ (CTL) ಯೋಜನೆಗೆ ಸಂಬಂಧಿಸಿದಂತೆ, ಒಡಿಶಾದಲ್ಲಿನ ರಾಮಚಾಂಡಿ ಪ್ರಮೋಷನಲ್ ಕೋಲ್ ಬ್ಲಾಕ್‌ನ್ನು ಜಿಂದಾಲ್ ಸ್ಟೀಲ್ ಅಂಡ್ ಪವರ್ ಕಂಪನಿಗೆ ಮಂಜೂರುಮಾಡಲಾಗಿದೆ. ಸದರಿ ಯೋಜನೆಯ ಯೋಜನಾ ವೆಚ್ಚವು ಸುಮಾರು 8.4 ಶತಕೋಟಿ US$ನಷ್ಟು (42,000 ಕೋಟಿ ರೂಪಾಯಿಗಳು) ಆಗಬಹುದು ಎಂದು ಅಂದಾಜಿಸಲಾಗಿದ್ದು, ಇದರಲ್ಲಿ CTL ಸ್ಥಾವರ, ಕಲ್ಲಿದ್ದಲು ಗಣಿಗಾರಿಕೆ ಮತ್ತು ವಿದ್ಯುತ್ ಸ್ಥಾವರ ಇವಿಷ್ಟು ಸೇರಿರುತ್ತವೆ. ಒಡಿಶಾದ ಅಂಗುಲ್ ಜಿಲ್ಲೆಯ ಕಿಶೋರ್ ನಗರ್ ತಾಲ್ಲೂಕಿನಲ್ಲಿ ಈ ಯೋಜನೆಯು ನೆಲೆಗೊಳ್ಳಲಿದೆ. ಜರ್ಮನಿಯ M/S ಲುರ್ಗಿ ಎಂಬ ಕಂಪನಿಯಿಂದ ಅಭಿವೃದ್ಧಿಪಡಿಸಲ್ಪಟ್ಟಿರುವ ಪರೋಕ್ಷ ಕಲ್ಲಿದ್ದಲು ದ್ರವೀಕರಣ ಎಂಬ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ಭಾರತದಲ್ಲಿ ಮೊದಲ ಬಾರಿಗೆ ಬಳಸಿಕೊಂಡು, ದಿನಂಪ್ರತಿ 80,000 ಪೀಪಾಯಿಗಳಷ್ಟು (4.0 MMTPA) ಕಚ್ಚಾ ತೈಲವನ್ನು ಈ ಸ್ಥಾವರವು ಉತ್ಪಾದಿಸಲಿದೆ. ಈ ಪ್ರತಿಷ್ಠಿತ CTL ಯೋಜನೆಯು JSPLನ ಮುಕುಟಕ್ಕೆ ಸಿಕ್ಕಿಸಲ್ಪಟ್ಟ ಮತ್ತೊಂದು ಗರಿಯಾಗಿದೆ.
ಜಿಂದಾಲ್ ಪೆಟ್ರೋಲಿಯಂ ಲಿಮಿಟೆಡ್
ಹಲವಾರು ಉದ್ಯಮಗಳಲ್ಲಿ ಬಂಡವಾಳವನ್ನು ಹಾಕುವ ತನ್ನ ಪ್ರಕ್ರಿಯೆಯ ಭಾಗವಾಗಿ JSPL ಇತ್ತೀಚೆಗಷ್ಟೇ ತೈಲ ಮತ್ತು ಅನಿಲ ವಲಯವನ್ನು ಪ್ರವೇಶಿಸಿದ್ದು, ಜಿಂದಾಲ್ ಪೆಟ್ರೋಲಿಯಂ ಲಿಮಿಟೆಡ್ ಎಂಬ ಹಣೆಪಟ್ಟಿಯ ಅಡಿಯಲ್ಲಿ ಅದು ಕಾರ್ಯಾಚರಣೆ ನಡೆಸಲಿದೆ. ವಿಶ್ವದಲ್ಲಿನ ವಿಭಿನ್ನ ಭಾಗಗಳಲ್ಲಿರುವ 7 ತೈಲ ಹಾಗೂ ಅನಿಲ ಘಟಕಗಳನ್ನು ಕಂಪನಿಯು ವಶಮಾಡಿಕೊಂಡಿದ್ದು, ಜಾರ್ಜಿಯಾದಲ್ಲಿರುವ 5 ಘಟಕಗಳು, ಬೊಲಿವಿಯಾದಲ್ಲಿರುವ 1 ಘಟಕ ಹಾಗೂ ಭಾರತದಲ್ಲಿರುವ 1 ಘಟಕ ಅವುಗಳಲ್ಲಿ ಸೇರಿವೆ. ಘಟಕಗಳ ಪರಿಶೋಧನೆ ಮತ್ತು ಉತ್ಪಾದನೆಗೆ ಸಂಬಂಧಿಸಿದಂತೆ ಜಾರ್ಜಿಯಾ ಸರ್ಕಾರದೊಂದಿಗಿನ ಒಪ್ಪಂದಗಳಿಗೆ ಸಹಿಹಾಕಲೆಂದು ಜಾರ್ಜಿಯಾಗೆ ಇತ್ತೀಚೆಗೆ ತೆರಳಿದ ನಿಯೋಗವೊಂದರ ನೇತೃತ್ವವನ್ನು ಶ್ರೀಮಾನ್ ನವೀನ್ ಜಿಂದಾಲ್ ವಹಿಸಿದ್ದರು; ಕಂಪನಿಯು ತನ್ನ ಪೆಟ್ರೋಲಿಯಂ ವ್ಯವಹಾರಕ್ಕೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ಇದು ಸೂಚಿಸುತ್ತದೆ. ಕಂಪನಿಯು ಇದುವರೆಗೆ 200 ದಶಲಕ್ಷ US$ನಷ್ಟು ಮೊತ್ತದ (1000 ಕೋಟಿ ರೂಪಾಯಿಗಳು) ಒಂದು ಹೂಡಿಕೆಗೆ ಬದ್ಧನಾಗಿದೆ ಹಾಗೂ ಈ ವಲಯದಲ್ಲಿನ ಇತರ ಹಲವಾರು ಯೋಜನೆಗಳ ಕುರಿತಾಗಿ ಕಾರ್ಯನಿರತವಾಗಿದೆ.
ಬೊಲಿವಿಯಾ
ಗಣಿಗಾರಿಕೆಗೆ ಸಂಬಂಧಿಸಿದಂತೆ ಮತ್ತು 1.7 MT ಸಾಮರ್ಥ್ಯದ ಒಂದು ಸಂಯೋಜಿತ ಉಕ್ಕಿನ ಸ್ಥಾವರ, 450 MW ಸಾಮರ್ಥ್ಯದ ವಿದ್ಯುತ್ ಸ್ಥಾವರ, 6 MT ಸಾಮರ್ಥ್ಯದ ಮೆದು ಕಬ್ಬಿಣ ಸ್ಥಾವರ ಹಾಗೂ 10 MT ಸಾಮರ್ಥ್ಯದ ಕಬ್ಬಿಣ ಅದಿರಿನ ಸಣ್ಣ ಉಂಡೆಗಳ ಸ್ಥಾವರವನ್ನು ಮುಂಬರುವ ವರ್ಷಗಳಲ್ಲಿ ಸ್ಥಾಪಿಸುವುದಕ್ಕೆ ಸಂಬಂಧಿಸಿದಂತೆ ದಕ್ಷಿಣ ಅಮೆರಿಕಾದ ಬೊಲಿವಿಯಾದಲ್ಲಿ 2.1 ಶತಕೋಟಿ US$ನಷ್ಟು (10,500 ಕೋಟಿ ರೂಪಾಯಿಗಳು) ಮೊತ್ತವನ್ನು ಹೂಡಲು JSPL ಯೋಜಿಸುತ್ತಿದೆ.
ಇವನ್ನೂ ನೋಡಿ
[ಬದಲಾಯಿಸಿ]- O. P. ಜಿಂದಾಲ್
- ನವೀನ ಜಿಂದಾಲ್
- ಅಜಿತ್ ಜೋಗಿ
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2014-02-22. Retrieved 2011-01-22.
- ↑ "ಇಂಡಿಯಾ'ಸ್ ಬೊಲಿವಿಯನ್ ಓರ್ | ದಿ ಆಸ್ಟ್ರೇಲಿಯನ್". Archived from the original on 2007-12-05. Retrieved 2011-01-22.
- ↑ http://www.vdjs.edu.in/ - ವಿದ್ಯಾ ದೇವಿ ಜಿಂದಾಲ್ ಶಾಲೆಯ ಅಧಿಕೃತ ವೆಬ್‌ಸೈಟ್
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಅಧಿಕೃತ ವೆಬ್‌ಸೈಟ್ Archived 2011-02-24 ವೇಬ್ಯಾಕ್ ಮೆಷಿನ್ ನಲ್ಲಿ.
- ಬೊಲಿವಿಯಾದ ವ್ಯವಹಾರದ ಕುರಿತಾದ BBC ಲೇಖನ
- ಕಳಿಂಗನಗರದ ಕುರಿತಾದ PUCL ವರದಿ Archived 2011-07-18 ವೇಬ್ಯಾಕ್ ಮೆಷಿನ್ ನಲ್ಲಿ.