ವಿಷಯಕ್ಕೆ ಹೋಗು

ಜಾರ್ಜ್‌ ಸೊರೊಸ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
George Soros
George Soros at the World Economic Forum Annual Meeting 2010
Born (1930-08-12) ಆಗಸ್ಟ್ ೧೨, ೧೯೩೦ (ವಯಸ್ಸು ೯೪)
Budapest, Hungary
Alma materLondon School of Economics
Occupation(s)Entrepreneur, currency trader, investor, philosopher, philanthropist, political activist
Spouse(s)Twice divorced (Annaliese Witschak and Susan Weber Soros)
ChildrenRobert, Andrea, Jonathan, Alexander, Gregory
Websitewww.georgesoros.com

ಜಾರ್ಜ್‌ ಸೊರೊಸ್‌ (pronounced /ˈsɔroʊs/ ಅಥವಾ /ˈsɔrəs/,[] ಹಂಗರಿಯನ್‌ ಟೆಂಪ್ಲೇಟು:IPA2; ಹುಟ್ಟಿದ್ದು 1930ರ ಆಗಸ್ಟ್‌ 12ರಂದು, ಜನ್ಮನಾಮ: ಷ್ವಾರ್ಟ್ಜ್‌ ಜಿಯಾರ್ಜಿ ) ಹಂಗರಿಯ-ಅಮೆರಿಕಾದ‌ ಓರ್ವ ಹಣ ಚಲಾವಣಾ ಸಟ್ಟಾ ವ್ಯಾಪಾರಿ, ಸ್ಟಾಕ್‌ ಹೂಡಿಕೆದಾರ, ಉದ್ಯಮಿ, ಲೋಕೋಪಕಾರಿ, ಮತ್ತು ರಾಜಕೀಯ ಕ್ರಿಯಾವಾದಿಯಾಗಿದ್ದಾನೆ.[] 1992ರ ಕರಾಳ ಬುಧವಾರದ UK ಹಣ ಚಲಾವಣಾ ಬಿಕ್ಕಟ್ಟಿನ ಸಮಯದಲ್ಲಿ ಈತ 1 ಶತಕೋಟಿ $ನಷ್ಟು ಮೊತ್ತದ ಹಣಮಾಡಿಕೊಂಡ ಎಂದು ವರದಿಯಾದ ನಂತರ, "ಬ್ಯಾಂಕ್‌ ಆಫ್‌ ಇಂಗ್ಲಂಡ್‌ನ್ನು ದಿವಾಳಿ ಮಾಡಿದಂಥ ಮನುಷ್ಯ" ಎಂದೇ ಈತ ಚಿರಪರಿಚಿತನಾದ.[][]

ಸೊರೊಸ್‌ ಫಂಡ್‌ ಮ್ಯಾನೇಜ್‌ಮೆಂಟ್‌ ಮತ್ತು ಓಪನ್‌ ಸೊಸೈಟಿ ಇನ್‌ಸ್ಟಿಟ್ಯೂಟ್‌‌ಗಳಿಗೆ ಸೊರೊಸ್‌ ಸಭಾಪತಿಯಾಗಿದ್ದಾನೆ ಹಾಗೂ ವಿದೇಶೀ ಸಂಬಂಧಗಳ ಕುರಿತಾದ ಪರಿಷತ್ತಿನ ನಿರ್ದೇಶಕರ ಮಂಡಲಿಯ ಓರ್ವ ಹಿಂದಿನ ಸದಸ್ಯನಾಗಿದ್ದಾನೆ. ಹಂಗರಿಯಲ್ಲಿ (1984–89)[] ಸಾಮುದಾಯಿಕ ಸಿದ್ಧಾಂತದಿಂದ ಬಂಡವಾಳಶಾಹಿಯೆಡೆಗೆ ನಡೆದ ಶಾಂತಿಯುತ ರೂಪಾಂತರದಲ್ಲಿ ಅವನು ಒಂದು ಗಮನಾರ್ಹವಾದ ಪಾತ್ರವನ್ನು ವಹಿಸಿದ ಮತ್ತು ಬುಡಾಪೆಸ್ಟ್‌‌‌ನಲ್ಲಿನ ಸೆಂಟ್ರಲ್‌ ಯುರೋಪಿಯನ್‌ ಯೂನಿವರ್ಸಿಟಿಗೆ ಹಿಂದೆಂದಿಗಿಂತ ದೊಡ್ಡದಾದ ಯುರೋಪ್‌ನ ಉನ್ನತ ಶಿಕ್ಷಣದ ದತ್ತಿಯನ್ನು ಅಥವಾ ಶಾಶ್ವತ ವರಮಾನ ದಾನವನ್ನು ಒದಗಿಸಿದ.[] ನಂತರದಲ್ಲಿ, ಅವನ ಬಂಡವಾಳ ಒದಗಿಸುವಿಕೆ ಹಾಗೂ ಜಾರ್ಜಿಯಾಗುಲಾಬಿ ಕ್ರಾಂತಿ‌ಯ ಸಂಘಟನೆಯು ಅದರ ಯಶಸ್ಸಿಗೆ ಸಂಬಂಧಿಸಿದಂತೆ ನಿರ್ಣಾಯಕ ಪಾತ್ರವನ್ನು ವಹಿಸಿತು ಎಂದು ರಷ್ಯಾದ ಮತ್ತು ಪಾಶ್ಚಾತ್ಯ ವೀಕ್ಷಕರಿಂದ ಪರಿಗಣಿಸಲ್ಪಟ್ಟಿತು. 2004ರಲ್ಲಿ ನಡೆದ ಮರು-ಚುನಾವಣೆಗೆ ಸಂಬಂಧಿಸಿದ ಅಧ್ಯಕ್ಷ ಜಾರ್ಜ್‌ W. ಬುಷ್‌‌ನ ಸವಾಲನ್ನು ಸೋಲಿಸುವ ಪ್ರಯತ್ನವೊಂದರಲ್ಲಿ ಈತ ದೊಡ್ಡ ಮೊತ್ತದ ಹಣವನ್ನು ದೇಣಿಗೆಯಾಗಿ ನೀಡಿದ್ದಕ್ಕಾಗಿ, ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಚಿರಪರಿಚಿತನಾಗಿದ್ದಾನೆ. ಸೆಂಟರ್‌ ಫಾರ್‌ ಅಮೆರಿಕನ್‌ ಪ್ರೋಗ್ರೆಸ್‌ ಸಂಸ್ಥೆಗೆ ಧನಸಹಾಯ ನೀಡುವಲ್ಲಿ ಅವನು ನೆರವಾದ.

ಫೆಡರಲ್‌ ರಿಸರ್ವ್‌‌ನ ಹಿಂದಿನ ಸಭಾಪತಿಯಾದ ಪಾಲ್‌ ವೋಲ್ಕರ್‌ ಎಂಬಾತ ದಿ ಆಲ್ಕೆಮಿ ಆಫ್‌ ಫೈನಾನ್ಸ್‌ ಎಂಬ ಸೊರೊಸ್‌ನ ಪುಸ್ತಕಕ್ಕೆ 2003ರಲ್ಲಿ ಬರೆದ ಮುನ್ನುಡಿಯಲ್ಲಿ ಹೀಗೆ ಹೇಳಿದ್ದಾನೆ:

ಅಗಾಧ ಪ್ರಮಾಣದಲ್ಲಿ ಯಶಸ್ವಿಯಾಗಿರುವ ಓರ್ವ ಸಟ್ಟಾ ವ್ಯಾಪಾರಿಯಾಗಿ ಜಾರ್ಜ್‌ ಸೊರೊಸ್‌ ತನ್ನ ಛಾಪು ಮೂಡಿಸಿದ್ದು, ಆಟದಲ್ಲಿ ಸಾಕಷ್ಟು ಮುಂದಿರುವಾಗಲೇ ದೊಡ್ಡ ಪ್ರಮಾಣದಲ್ಲಿ ಹಿಂದೆಗೆದುಕೊಳ್ಳುವಷ್ಟರ ಮಟ್ಟಿಗಿನ ವ್ಯಾವಹಾರಿಕ ಜಾಣತನವನ್ನು ಅವನು ಹೊಂದಿದ್ದಾನೆ. ಅವನ ಅಗಾಧ ಗಳಿಕೆಗಳ ಅಧಿಕಾಂಶವು, ಪರಿವರ್ತನೆಯ ಅಥವಾ ಸಂಕ್ರಮಣ ಕಾಲದ ಮತ್ತು ಆವಿರ್ಭವಿಸುತ್ತಿರುವ ರಾಷ್ಟ್ರಗಳು 'ಮುಕ್ತ ಸಮಾಜಗಳಾಗಿ' ಮಾರ್ಪಡುವಂತೆ ಉತ್ತೇಜಿಸುವುದರ ಕಡೆಗೆ ಈಗ ಅರ್ಪಿಸಲ್ಪಟ್ಟಿದೆ. ಮುಕ್ತ ಸಮಾಜಗಳೆಂದರೆ ವಾಣಿಜ್ಯದ ಅಥವಾ ವ್ಯಾಪಾರದ ಸ್ವಾತಂತ್ರ್ಯದ ಅರ್ಥದಲ್ಲಿ ಮಾತ್ರವೇ ಅಲ್ಲದೇ -ಅದಕ್ಕಿಂತ ಮುಖ್ಯವಾಗಿ- ಹೊಸ ಪರಿಕಲ್ಪನೆಗಳ ಮತ್ತು ಚಿಂತನೆ ಹಾಗೂ ನಡವಳಿಕೆಗಳ ವೈವಿಧ್ಯಮಯ ವಿಧಾನಗಳ ಕುರಿತು ಸಹಿಷ್ಣುವಾಗಿರುವ ಅರ್ಥದಲ್ಲಿಯೂ ಸ್ವತಂತ್ರವಾಗಿರುವ ಸಮಾಜಗಳಾಗಿರಬೇಕಿದೆ.

ಕುಟುಂಬ

[ಬದಲಾಯಿಸಿ]

ಎಸ್ಪರ್ಯಾಂಟ್‌ ಭಾಷೆಯ ಬರಹಗಾರನಾದ ಟಿವಾಡರ್‌ ಸೊರೊಸ್‌ ಎಂಬಾತನ ಮಗನಾಗಿ, ಹಂಗರಿಯ ಬುಡಾಪೆಸ್ಟ್‌‌ನಲ್ಲಿ ಸೊರೊಸ್‌ ಜನಿಸಿದ. ಟಿವಾಡರ್‌ (ಈತ ಟಿಯೊಡೊರೊ ಎಂದೂ ಹೆಸರಾಗಿದ್ದ) ಓರ್ವ ಹಂಗರಿಯ ಯೆಹೂದಿಯಾಗಿದ್ದು, Iನೇ ಜಾಗತಿಕ ಯುದ್ಧದ ಅವಧಿಯಲ್ಲಿ ಹಾಗೂ ನಂತರದಲ್ಲಿ ಓರ್ವ ಯುದ್ಧದ ಸೆರೆಯಾಳಾಗಿದ್ದ ಮತ್ತು ಬುಡಾಪೆಸ್ಟ್‌‌‌‌‌‌ನಲ್ಲಿನ ತನ್ನ ಕುಟುಂಬವನ್ನು ಮತ್ತೆ ಸೇರಿಕೊಳ್ಳಲು ಈತ ಅಂತಿಮವಾಗಿ ರಷ್ಯಾದಿಂದ ತಪ್ಪಿಸಿಕೊಂಡ.[][]

ಉಗ್ರ ಬಲಪಂಥೀಯ ತತ್ತ್ವದ ಹುಟ್ಟುವಿಕೆಯೊಂದಿಗೆ ಬೆಳೆಯುತ್ತಲೇ ಇದ್ದ ಯೆಹೂದ್ಯ ಪಕ್ಷಪಾತ-ವಿರೋಧಿ ನೀತಿಗೆ ಪ್ರತಿಕ್ರಿಯೆಯಾಗಿ, 1936ರಲ್ಲಿ ಈ ಕುಟುಂಬವು ತನ್ನ ಹೆಸರನ್ನು ಷ್ವಾರ್ಟ್ಜ್‌ ಎಂಬುದರಿಂದ ಸೊರೊಸ್ ಎಂಬುದಕ್ಕೆ ಬದಲಿಸಿಕೊಂಡಿತು. ಸದರಿ ಹೊಸ ಹೆಸರು ಒಂದು ಸಮಾನ ಪೂರ್ವಾಪರವಾಗಿದ್ದರಿಂದ ಮತ್ತು ಅದು ಒಂದು ಅರ್ಥವನ್ನು ಹೊಂದಿದ್ದರಿಂದ, ಈ ಹೊಸ ಹೆಸರನ್ನು ಟಿವಾಡರ್‌ ಇಷ್ಟಪಟ್ಟ. ಕೌಫ್‌ಮನ್‌ನ ಜೀವನಚರಿತ್ರೆಯಲ್ಲಿ ಇದರ ನಿರ್ದಿಷ್ಟ ಅರ್ಥವು ವಿವರಿಸಲ್ಪಟ್ಟಿಲ್ಲವಾದರೂ, ಹಂಗರಿ ಭಾಷೆಯಲ್ಲಿ ಸೊರೊಸ್‌ ಎಂದರೆ "ಸರದಿಯಲ್ಲಿ ಮುಂದಿನ, ಅಥವಾ ನಿಯೋಜಿತ ಉತ್ತರಾಧಿಕಾರಿ" ಎಂಬ ಅರ್ಥಬರುತ್ತದೆ, ಮತ್ತು ಎಸ್ಪೆರಾಂಟೋ ಭಾಷೆಯಲ್ಲಿ ಇದು "ಎತ್ತರಕ್ಕೆ ಏರಲಿರುವ" ಎಂಬ ಅರ್ಥವನ್ನು ನೀಡುತ್ತದೆ.[೧೦] ಅವನ ಮಗ ಜಾರ್ಜ್‌ಗೆ ಹುಟ್ಟಿನಿಂದಲೇ ಎಸ್ಪೆರಾಂಟೋ ಭಾಷೆಯಲ್ಲಿ ಮಾತಾಡುವುದನ್ನು ಕಲಿಸಲಾಯಿತು. ಹೀಗಾಗಿ ಅವನು ಅಪರೂಪದ, ಎಸ್ಪೆರಾಂಟೋ ಮಾತನಾಡುವ ಸ್ಥಳೀಯರ ಪೈಕಿ ಒಬ್ಬನಾಗಿದ್ದಾನೆ. ಜಾರ್ಜ್‌ ಸೊರೊಸ್‌ ನಂತರದಲ್ಲಿ ಹೇಳಿದ ಪ್ರಕಾರ, ಅವನು ಯೆಹೂದಿ ಸಂಸ್ಕೃತಿಯಿರುವ ಮನೆಯೊಂದರಲ್ಲಿ ಬೆಳೆದು ದೊಡ್ಡವನಾದ. ಹೀಗಾಗಿ ಅವನ ಹೆತ್ತವರು ತಮ್ಮ ಧಾರ್ಮಿಕ ಮೂಲಗಳೊಂದಿಗೆ ಜಾಗರೂಕರಾಗಿದ್ದರು.[೧೧]

ಜಾರ್ಜ್‌ ಸೊರೊಸ್‌ ಎರಡು ಬಾರಿ ಮದುವೆಯಾದ ಮತ್ತು ಎರಡು ಬಾರಿ ವಿಚ್ಛೇದನವನ್ನು ಪಡೆದ. ಅನ್ನಾಲೀಸೆ ವಿಟ್ಸ್‌ಚಾಕ್‌, ಮತ್ತು ಸುಸಾನ್‌ ವೆಬರ್‌ ಸೊರೊಸ್‌ ಅವನ ವಿವಾಹಿತ ಮತ್ತು ವಿಚ್ಛೇದಿತ ಪತ್ನಿಯರಾಗಿದ್ದರು. ಆತ ಐದು ಮಕ್ಕಳನ್ನು ಹೊಂದಿದ್ದಾನೆ: ರಾಬರ್ಟ್‌, ಆಂಡ್ರಿಯಾ, ಜೋನಾಥನ್‌ (ಅವನ ಮೊದಲ ಪತ್ನಿ ಅನ್ನಾಲೀಸೆಯೊಂದಿಗಿನ ಸಂಬಂಧದಿಂದ ಹುಟ್ಟಿದ ಮಕ್ಕಳು); ಅಲೆಕ್ಸಾಂಡರ್‌, ಗ್ರೆಗರಿ (ಅವನ ಎರಡನೇ ಪತ್ನಿ ಸುಸಾನ್‌ಳೊಂದಿಗಿನ ಸಂಬಂಧದಿಂದ ಹುಟ್ಟಿದ ಮಕ್ಕಳು‌). ಓರ್ವ ಖಾಸಗಿ ಹೂಡಿಕೆದಾರ ಮತ್ತು ಲೋಕೋಪಕಾರಿಯಾಗಿರುವ ಅವನ ಹಿರಿಯ ಸೋದರನಾದ ಪಾಲ್‌ ಸೊರೊಸ್‌, ಓರ್ವ ನಿವೃತ್ತ ಎಂಜಿನಿಯರ್‌ ಆಗಿದ್ದಾನೆ. ನ್ಯೂಯಾರ್ಕ್ ಮೂಲದ ಒಂದು ಅಂತರರಾಷ್ಟ್ರೀಯ ಎಂಜಿನಿಯರಿಂಗ್‌ ಸಂಸ್ಥೆಯಾದ ಸೊರೊಸ್‌ ಅಸೋಸಿಯೇಟ್ಸ್‌ನ ನೇತೃತ್ವ ಇವನದಾಗಿತ್ತು, ಮತ್ತು ಪಾಲ್‌ ಅಂಡ್‌ ಡೈಸಿ ಸೊರೊಸ್‌ ಫೆಲೋಷಿಪ್ಸ್‌ ಫಾರ್‌ ಯಂಗ್‌ ಅಮೆರಿಕನ್ಸ್‌ ಎಂಬ ಸಂಸ್ಥೆಯನ್ನು ಈತ ಸ್ಥಾಪಿಸಿದ.[೧೨][೧೩] ಜಾರ್ಜ್‌ ಸೊರೊಸ್‌ನ ಸೋದರ ಸಂಬಂಧಿಯಾದ ಪೀಟರ್‌ ಸೊರೊಸ್ ಎಂಬಾತ ಪಾಲ್‌ ಸೊರೊಸ್‌ನ ಓರ್ವ ಮಗನಾಗಿದ್ದು, ಫ್ಲೋರಾ ಫ್ರೇಸರ್‌ ಎಂಬ ರೂಪರಚಕಿಯನ್ನು ಅವನು ಮದುವೆಯಾಗಿದ್ದಾನೆ. ಈಕೆ ಲೇಡಿ ಆಂಟೋನಿಯಾ ಫ್ರೇಸರ್‌ ಮತ್ತು ದಿವಂಗತ ಸರ್‌ ಹ್ಯೂ ಫ್ರೇಸರ್‌‌ ದಂಪತಿಗಳ ಮಗಳು, ಹಾಗೂ 2005ರ ನೊಬೆಲ್‌ ಪ್ರಶಸ್ತಿ ವಿಜೇತನಾದ ದಿವಂಗತ ಹೆರಾಲ್ಡ್‌ ಪಿಂಟರ್‌‌‌ನ ಓರ್ವ ಮಲಮಗಳಾಗಿದ್ದಾಳೆ.[೧೪]

ಆರಂಭಿಕ ಜೀವನ

[ಬದಲಾಯಿಸಿ]

1944ರ ಮಾರ್ಚ್‌ನಲ್ಲಿ ಹಂಗರಿಯ ಮೇಲೆ ನಾಜಿ ಜರ್ಮನಿಯು ಸೇನಾ ನಿಯಂತ್ರಣವನ್ನು ತೆಗೆದುಕೊಂಡಾಗ ಸೊರೊಸ್‌ ಹದಿಮೂರು ವರ್ಷ ವಯಸ್ಸಿನವನಾಗಿದ್ದ.[೧೫] ನಾಜಿ ಮತ್ತು ಹಂಗರಿಯ ಸರ್ಕಾರದ ಯೆಹೂದ್ಯ-ವಿರೋಧಿ ಕ್ರಮಗಳನ್ನು ಬಲವಂತವಾಗಿ ಕೈಗೊಳ್ಳಲೆಂದು, ಹಂಗರಿಯು ನಾಜಿ ಸ್ವಾಧೀನದಲ್ಲಿದ್ದ ಅವಧಿಯಲ್ಲಿ ಸ್ಥಾಪನೆಯಾಗಿದ್ದ ಯೆಹೂದಿ ಪರಿಷತ್ತಿಗಾಗಿ[] ಸೊರೊಸ್‌ ಕಾರ್ಯನಿರ್ವಹಿಸಿದ. ಬರಹಗಾರ ಮೈಕೇಲ್‌ ಲೆವಿಸ್‌‌ಗೆ ನಂತರ ಬರೆದ ಪತ್ರದಲ್ಲಿ ಆ ಅವಧಿಯನ್ನು ಸೊರೊಸ್‌ ಹೀಗೆ ವಿವರಿಸಿದ:

ದೇಶಭ್ರಷ್ಟಗೊಳಿಸುವಿಕೆಯ ಸೂಚನಾಪತ್ರಗಳನ್ನು ವೃತ್ತಪತ್ರಿಕೆಗಳಿಗೆ ನೀಡುವಂತೆ ಯೆಹೂದಿ ಪರಿಷತ್ತು ಪುಟ್ಟ ಮಕ್ಕಳಿಗೆ ಕೇಳಿಕೊಂಡಿತು. ಯೆಹೂದಿ ಪರಿಷತ್ತಿಗೆ ಹೋಗುವಂತೆ ನನಗೆ ಹೇಳಲಾಯಿತು. ಮತ್ತು ಅಲ್ಲಿ ನನಗೆ ಕಾಗದದ ಈ ಸಣ್ಣ ಚೂರುಗಳನ್ನು ನೀಡಲಾಯಿತು...ಬೆಳಗ್ಗೆ 9 ಗಂಟೆಗೆ ರ್ಯಾಬೈ ಯೆಹೂದ್ಯ ಧಾರ್ಮಿಕ ಮುಖಂಡನ ಸೆಮಿನರಿಯಲ್ಲಿ (ಶಿಕ್ಷಣ ಸಂಸ್ಥೆಗೆ) ಹಾಜರಾಗಲು ಅದರಲ್ಲಿ ಬರೆದಿತ್ತು....ಮತ್ತು ನನಗೆ ಈ ಹೆಸರುಗಳ ಪಟ್ಟಿಯನ್ನು ನೀಡಲಾಯಿತು. ಈ ಕಾಗದದ ತುಣುಕನ್ನು ನನ್ನ ತಂದೆಯ ಬಳಿಗೆ ತೆಗೆದುಕೊಂಡು ಹೋದೆ. ಅವನು ಅದನ್ನು ತಕ್ಷಣವೇ ಗುರುತಿಸಿದ. ಇದು ಹಂಗರಿಯ ಯೆಹೂದ್ಯ ಮತದ ವಕೀಲರ ಒಂದು ಪಟ್ಟಿಯಾಗಿತ್ತು. "ಕಾಗದದ ಈ ಚೂರುಗಳನ್ನು ನೀನು ವಿತರಿಸು ಮತ್ತು ಒಂದು ವೇಳೆ ಜನರು ಅಲ್ಲಿ ಹಾಜರಾದರೆ, ಅವರನ್ನು ದೇಶಭ್ರಷ್ಟಗೊಳಿಸಲಾಗುತ್ತದೆ ಎಂದು ಅವರಿಗೆ ಹೇಳು" ಎಂದು ಅವನು ಹೇಳಿದ.[೧೬]

ನಾಜಿಗಳಿಂದ ತನ್ನ ಮಗನು ಬಂಧಿಸಲ್ಪಡುವುದನ್ನು ತಪ್ಪಿಸಲು ಸೊರೊಸ್‌ನ ತಂದೆಯು ಕೃಷಿ ಇಲಾಖೆಯ ನೌಕರನೊಬ್ಬನಿಗೆ ಹಣಕೊಟ್ಟು, 1944ರ ಬೇಸಿಗೆಯನ್ನು ಸೊರೊಸ್‌ ಅವನ ಬಳಿ ಕಳೆಯಲು ಅವಕಾಶ ಮಾಡಿಕೊಡಲು ಮತ್ತು ಅವನನ್ನು ಧರ್ಮಪುತ್ರನಂತೆ ತೋರಿಸಲು ತಿಳಿಸಿದ. ಯೆಹೂದಿಗಳ ಸ್ವತ್ತಿನ ಮುಟ್ಟುಗೋಲನ್ನು ಅಧಿಕಾರಿಯು ಪರಿಶೀಲನೆ ನಡೆಸುವಾಗಲೂ ಸಹ, ಕಿರಿಯ ಸೊರೊಸ್‌ ತನ್ನ ಹೆಹೂದ್ಯತನವನ್ನು ಮಚ್ಚಿಟ್ಟುಕೊಳ್ಳಬೇಕಾಗಿತ್ತು.[೧೭]

ನಂತರದ ವರ್ಷದಲ್ಲಿ ನಡೆದ ಬುಡಾಪೆಸ್ಟ್‌‌ನ ಕದನ‌‌‌ದ ಸಮಯದಲ್ಲಿ ಸೊರೊಸ್‌ ಬದುಕುಳಿದ. ಈ ಕದನದ ಸಮಯದಲ್ಲಿ ಸೋವಿಯೆಟ್‌ ಹಾಗೂ ಜರ್ಮನ್‌ ಜರ್ಮನ್‌ ಪಡೆಗಳು ನಗರದಾದ್ಯಂತ ಮನೆಯಿಂದ-ಮನೆಗೆ ಕಾದಾಡಿದವು. 1945–1946ರ ಅವಧಿಯಲ್ಲಿ ಕಂಡುಬಂದ ಹಂಗರಿಯ ಮಿತಿಮೀರಿದ ಹಣದುಬ್ಬರದ ಸಮಯದಲ್ಲಿ ಸೊರೊಸ್‌ ಮೊದಲು ಹಣ ಚಲಾವಣೆಗಳು ಹಾಗೂ ರತ್ನಾಭರಣಗಳ ವ್ಯಾಪಾರ ಮಾಡಿದ.

1947ರಲ್ಲಿ ಸೊರೊಸ್‌ ಇಂಗ್ಲಂಡ್‌ಗೆ ವಲಸೆ ಹೋದ ಮತ್ತು 1952ರಲ್ಲಿ ಲಂಡನ್‌ ಸ್ಕೂಲ್‌ ಆಫ್‌ ಇಕನಾಮಿಕ್ಸ್‌‌‌ನಿಂದ ಪದವಿಯನ್ನು ಪಡೆದ. ಕಾರ್ಲ್‌ ಪೊಪ್ಪರ್‌‌ ಎಂಬ ದಾರ್ಶನಿಕನ ಓರ್ವ ವಿದ್ಯಾರ್ಥಿಯಾಗಿರುವಾಗ, ಓರ್ವ ರೈಲಿನ ಹಮಾಲಿ ಹಾಗೂ ಓರ್ವ ಹೊಟೇಲು ಮಾಣಿಯಾಗಿ ಸೊರೊಸ್‌ ಕೆಲಸ ಮಾಡಿದ. ಸೊರೊಸ್‌ಗೆ ನೆರವು ಬೇಕಾಗಿದೆಯೆಂದು ವಿಶ್ವವಿದ್ಯಾಲಯದ ಬೋಧಕನೋರ್ವ ಮನವಿ ಮಾಡಿಕೊಂಡಾಗ, ಕ್ವೇಕರ್‌ ದತ್ತಿಸಂಸ್ಥೆಯಿಂದ ಆತ 40 ಪೌಂಡುಗಳಷ್ಟು ಧನಸಹಾಯವನ್ನು ಸ್ವೀಕರಿಸಿದ.[೧೮] ಅಂತಿಮವಾಗಿ ಅವನು ಸಿಂಗರ್‌ & ಫ್ರೀಡ್‌ಲ್ಯಾಂಡರ್‌‌ ಎಂಬ ಲಂಡನ್‌ ವ್ಯಾಪಾರಿ ಬ್ಯಾಂಕ್‌ನಲ್ಲಿ ಒಂದು ಪ್ರವೇಶ-ಮಟ್ಟದ ಸ್ಥಾನವನ್ನು ಗಿಟ್ಟಿಸಿಕೊಂಡ.

1956ರಲ್ಲಿ ನ್ಯೂಯಾರ್ಕ್‌ ನಗರಕ್ಕೆ ತೆರಳಿದ ಸೊರೊಸ್‌, ಅಲ್ಲಿ 1956ರಿಂದ 1959ರವರೆಗೆ F. M. ಮೇಯರ್‌ ಜೊತೆಯಲ್ಲಿ ಓರ್ವ ಮಧ್ಯಸ್ಥಿಕೆ ಕಾರ್ಯದ ವ್ಯಾಪಾರಿಯಾಗಿ ಹಾಗೂ 1959ರಿಂದ 1963ರವರೆಗೆ ವೆರ್ಥೀಮ್‌ ಅಂಡ್‌ ಕಂಪನಿಯಲ್ಲಿ ಓರ್ವ ವಿಶ್ಲೇಷಕನಾಗಿ ಕೆಲಸ ಮಾಡಿದ. ಈ ಅವಧಿಯಾದ್ಯಂತ, ಕಾರ್ಲ್‌ ಪೊಪ್ಪರ್‌‌‌ನ ಪರಿಕಲ್ಪನೆಗಳನ್ನು ಆಧರಿಸಿದ "ಆತ್ಮಾರ್ಥಕತೆ"ಯ ಒಂದು ತತ್ತ್ವವನ್ನು ಸೊರೊಸ್‌ ಬೆಳೆಸಿಕೊಂಡ. ಯಾವುದೇ ಮಾರುಕಟ್ಟೆಯ ಸಹಭಾಗಿಗಳು ಅದರ ಮೌಲ್ಯವನ್ನು ಅವಲೋಕಿಸುವುದರ ಕ್ರಮವು, ಕಾಲಚಕ್ರದ ಪರವಾಗಿರುವ ಒಂದು 'ಸದ್ಗುಣಿಯಾದ ಅಥವಾ ದುರಾಚಾರದ' ವರ್ತುಲದಲ್ಲಿರುವ ಮಾರುಕಟ್ಟೆಯ ಹೇಳಲ್ಪಟ್ಟ ಮೌಲ್ಯನಿರ್ಣಯದ ಮೇಲೆ ಪರಿಣಾಮಬೀರುತ್ತದೆ ಎಂಬ ನಂಬಿಕೆಯೇ ಸೊರೊಸ್‌ನಿಂದ ಬಳಸಲ್ಪಡುವ ಆತ್ಮಾರ್ಥಕತೆಯ ಪರಿಕಲ್ಪನೆಯಾಗಿದೆ.[೧೯]

ಆದಾಗ್ಯೂ, ತನ್ನದೇ ಸ್ವಂತದ ಹಣಹೂಡಿಕೆ ಮಾಡಲು ತಾನು ತೊಡಗಿಸಿಕೊಳ್ಳುವವರೆಗೂ, ಆತ್ಮಾರ್ಥಕತೆಯ ಪರಿಕಲ್ಪನೆಯಿಂದ ತಾನು ಯಾವುದೇ ಹಣವನ್ನು ಮಾಡುವುದಿಲ್ಲ ಎಂಬುದನ್ನು ಸೊರೊಸ್‌ ಅರಿತುಕೊಂಡ. ಹೂಡಿಕೆಗಳಲ್ಲಿ ಹೇಗೆ ವ್ಯವಹರಿಸುವುದು ಎಂಬುದರ ಕುರಿತು ಕ್ರಮಬದ್ಧವಾಗಿ ವಿಚಾರಿಸಲು ಅವನು ಶುರುಮಾಡಿದ. 1963ರಿಂದ 1973ರವರೆಗೆ ಆರ್ನ್‌ಹೋಲ್ಡ್‌ ಅಂಡ್‌ S. ಬ್ಲೀಕ್ರೋಡರ್‌ ಸಂಸ್ಥೆಯಲ್ಲಿ ಕೆಲಸ ಮಾಡಿದ ಆತ, ಅಲ್ಲಿ ಉಪಾಧ್ಯಕ್ಷನ ಸ್ಥಾನವನ್ನು ಪಡೆದುಕೊಂಡ. ತಾನೊಬ್ಬ ದಾರ್ಶನಿಕ ಅಥವಾ ಓರ್ವ ಅಧಿಕಾರಿ ಆಗಿದ್ದುದಕ್ಕಿಂತ ಹೆಚ್ಚಾಗಿ ತಾನೊಬ್ಬ ಉತ್ತಮ ಹೂಡಿಕೆದಾರನಾಗಿದ್ದೆ ಎಂಬುದನ್ನು ಸೊರೊಸ್‌ ಅಂತಿಮವಾಗಿ ತೀರ್ಮಾನಿಸಿದ. ತಾನು ನಡೆಸಿಕೊಂಡು ಹೋಗುವುದಕ್ಕಾಗಿ, ಫಸ್ಟ್‌ ಈಗಲ್ ಎಂಬ ಒಂದು ಕಡಲಾಚೆಯ ಅಥವಾ ವಿದೇಶಿ ಹೂಡಿಕಾ ನಿಧಿಯನ್ನು ಸ್ಥಾಪಿಸುವಂತೆ 1967ರಲ್ಲಿ ಅವನು ಕಂಪನಿಯ ಮನವೊಲಿಸಿದ; ಕಂಪನಿಯು 1969ರಲ್ಲಿ ಸೊರೊಸ್‌ಗಾಗಿ ಡಬಲ್‌ ಈಗಲ್‌ ಹೆಡ್ಜ್‌ ಫಂಡ್‌ ಎಂಬ ಎರಡನೇ ಹೂಡಿಕಾ ನಿಧಿಯನ್ನು ಸ್ಥಾಪಿಸಿತು.[೧೯]

ತಾನು ಬಯಸಿದಂತೆ ಹೂಡಿಕಾ ನಿಧಿಗಳನ್ನು ನಡೆಸುವಲ್ಲಿನ ಅವನ ಸಾಮರ್ಥ್ಯವನ್ನು ಹೂಡಿಕಾ ಕಟ್ಟುಪಾಡುಗಳು ನಿರ್ಬಂಧಿಸಿದಾಗ, 1973ರಲ್ಲಿ ತನ್ನ ಸ್ಥಾನವನ್ನು ತೊರೆದ ಆತ ಒಂದು ಖಾಸಗಿ ಹೂಡಿಕಾ ಕಂಪನಿಯನ್ನು ಸ್ಥಾಪಿಸಿದ. ಅಂತಿಮವಾಗಿ ಅದು ಒಂದು ಕ್ವಾಂಟಂ ಫಂಡ್‌ ಎಂಬ ಸಂಸ್ಥೆಯಾಗಿ ಹೊರಹೊಮ್ಮಿತು. ಓರ್ವ ಲೇಖಕನಾಗಿ ಮತ್ತು ದಾರ್ಶನಿಕನಾಗಿ ತನಗೆ ತಾನೇ ಬೆಂಬಲ ಒದಗಿಸಿಕೊಳ್ಳಲು ವಾಲ್‌ಸ್ಟ್ರೀಟ್‌ ಮೂಲಕ ಸಾಕಷ್ಟು ಹಣವನ್ನು ಗಳಿಸುವುದು ತನ್ನ ಉದ್ದೇಶವಾಗಿತ್ತೆಂದು ಅವನು ಹೇಳಿಕೊಂಡಿದ್ದಾನೆ. ಐದು ವರ್ಷಗಳ ನಂತರ 500,000 $ನಷ್ಟು ಮೊತ್ತದ ಹಣವನ್ನು ಗಳಿಸಲು ಸಾಧ್ಯವಿದ್ದು, ಅದು ಸಾಕಾಗುವಷ್ಟಾಗುತ್ತದೆ ಎಂಬುದು ಅವನ ಲೆಕ್ಕಾಚಾರವಾಗಿತ್ತು.

ಆತ ಕಾರ್ಲೈಲ್‌ ಗ್ರೂಪ್‌‌‌‌ನ ಓರ್ವ ಹಿಂದಿನ ಸದಸ್ಯನೂ ಆಗಿದ್ದ.[೧೯]

ವ್ಯವಹಾರ

[ಬದಲಾಯಿಸಿ]

ಸೊರೊಸ್‌, ಸೊರೊಸ್‌ ಫಂಡ್‌ ಮ್ಯಾನೇಜ್‌ಮೆಂಟ್‌‌ನ ಸಂಸ್ಥಾಪಕನಾಗಿದ್ದಾನೆ. ಜಿಮ್‌ ರೋಜರ್ಸ್‌ ಎಂಬಾತನ ಜೊತೆಗೆ ಸೇರಿಕೊಂಡು ಸೊರೊಸ್‌ 1970ರಲ್ಲಿ ಕ್ವಾಂಟಂ ಫಂಡ್‌ ಎಂಬ ಸಂಸ್ಥೆಯ ಸಹ-ಸಂಸ್ಥಾಪಕನ ಪಾತ್ರವನ್ನು ವಹಿಸಿದ. ಇದು ಸೊರೊಸ್‌ನ ಸಂಪತ್ತಿನ ಹೆಚ್ಚಿನಂಶವನ್ನು ಸೃಷ್ಟಿಸಿತು. 1980ರಲ್ಲಿ ಕ್ವಾಂಟಂ ಫಂಡ್‌ನಿಂದ ರೋಜರ್ಸ್‌ ನಿವೃತ್ತಿ ಹೊಂದಿದ. ಇತರ ಪಾಲುದಾರರಲ್ಲಿ ವಿಕ್ಟರ್‌ ನೀಡೆರ್‌ಹಾಫ್ಟರ್‌‌ ಮತ್ತು ಸ್ಟಾನ್ಲೆ ಡ್ರಕನ್‌ಮಿಲ್ಲರ್‌ ಸೇರಿದ್ದರು.

2007ರಲ್ಲಿ, ಸುಮಾರು 32%ನಷ್ಟು ಆದಾಯವನ್ನು ಕ್ವಾಂಟಂ ಫಂಡ್‌ ನೀಡಿತು. ಇದರಿಂದ ಸೊರೊಸ್‌ಗೆ 2.9 ಶತಕೋಟಿ $ನಷ್ಟು ಮೊತ್ತದ ನಿವ್ವಳ ಲಾಭವು ದೊರಕಿತು.[೨೦]

ಹಣ ಚಲಾವಣೆಯ ಸಟ್ಟಾ ವ್ಯಾಪಾರ

[ಬದಲಾಯಿಸಿ]

ಐರೋಪ್ಯ ವಿನಿಮಯ ದರ ಕಾರ್ಯವಿಧಾನವನ್ನು ಹೊಂದಿರುವ ಇತರ ದೇಶಗಳ ಬ್ಯಾಂಕುಗಳ ಬಡ್ಡಿದರಗಳಿಗೆ ಹೋಲುವಂತಿರುವ ಮಟ್ಟಗಳಿಗೆ ತನ್ನ ಬಡ್ಡಿದರಗಳನ್ನು ಏರಿಸಲಾಗಲೀ ಅಥವಾ ತನ್ನ ಹಣವನ್ನು ಚಲಾವಣೆಗೆ ತರುವುದರ ಕಡೆಗಾಗಲೀ ಬ್ಯಾಂಕ್‌ ಆಫ್‌ ಇಂಗ್ಲಂಡ್‌ ತೋರಿದ ಇಷ್ಟವಿಲ್ಲದಿರುವಿಕೆಯಿಂದ ಲಾಭವನ್ನು ಪಡೆದ ಸೊರೊಸ್‌ನ ನಿಧಿಯು, ಕರಾಳ ಬುಧವಾರದಂದು (1992ರ ಸೆಪ್ಟೆಂಬರ್‌ 16ರಂದು), 10 ಶತಕೋಟಿ $ನಷ್ಟು ಮೊತ್ತಕ್ಕೂ ಹೆಚ್ಚಿನ ಮೌಲ್ಯದ ಪೌಂಡ್ಸ್‌ ಸ್ಟರ್ಲಿಂಗ್‌‌ನ್ನು[ಸೂಕ್ತ ಉಲ್ಲೇಖನ ಬೇಕು] ಕೆಳಕ್ಕಿಳಿಸಿತು.

ಅಂತಿಮವಾಗಿ, ಪೌಂಡ್‌ ಸ್ಟರ್ಲಿಂಗ್‌‌‌ನ್ನು ಅಪಮೌಲ್ಯೀಕರಿಸುವ ಮೂಲಕ ಐರೋಪ್ಯ ವಿನಿಮಯ ದರ ಕಾರ್ಯವಿಧಾನದಿಂದ ಹಣ ಚಲಾವಣೆಯನ್ನು ಬ್ಯಾಂಕ್‌ ಆಫ್‌ ಇಂಗ್ಲಂಡ್ ಹಿಂತೆಗೆದುಕೊಂಡಿತು‌, ಮತ್ತು ಈ ಪ್ರಕ್ರಿಯೆಯಲ್ಲಿ ಒಂದು ಅಂದಾಜಿನ ಪ್ರಕಾರ ಸುಮಾರು 1.1 ಶತಕೋಟಿ US$ನಷ್ಟು ಹಣವನ್ನು ಸೊರೊಸ್‌ ಗಳಿಸಿದ. ಇದರಿಂದಾಗಿ, "ಬ್ಯಾಂಕ್‌ ಆಫ್‌ ಇಂಗ್ಲಂಡ್‌ನ್ನು ದಿವಾಳಿ ಮಾಡಿದಂಥ ಮನುಷ್ಯ" ಎಂಬ ಅಡ್ಡಹೆಸರು ಅವನಿಗೆ ಬಂದಿತು. ಕರಾಳ ಬುಧವಾರದ ಬೆಲೆಯು 3.4 ಶತಕೋಟಿ £ನಷ್ಟು ಎಂದು UK ಸರ್ಕಾರದ ಖಜಾನೆಯು 1997ರಲ್ಲಿ ಅಂದಾಜಿಸಿತು.

1992ರ ಅಕ್ಟೋಬರ್‌ 26ರ ಸೋಮವಾರದ ದಿ ಟೈಮ್ಸ್‌ ಪತ್ರಿಕೆಯು ಸೊರೊಸ್‌ ಹೇಳಿದನೆನ್ನಲಾದ ಮಾತನ್ನು ಹೀಗೆ ಉಲ್ಲೇಖಿಸಿತು: "ಕರಾಳ ಬುಧವಾರದ ವೇಳೆಗೆ ನಮ್ಮ ಒಟ್ಟಾರೆ ಸ್ಥಾನದ ಮೌಲ್ಯವು ಹೆಚ್ಚೂಕಮ್ಮಿ 10 ಶತಕೋಟಿ $ನಷ್ಟಿರಬೇಕಿತ್ತು. ಅದಕ್ಕಿಂತ ಹೆಚ್ಚಿನದನ್ನು ಮಾರಲು ನಾವು ಯೋಜಿಸಿದ್ದೆವು. ವಾಸ್ತವವಾಗಿ, ಸ್ಟರ್ಲಿಂಗ್‌ನ್ನು ಸಂರಕ್ಷಿಸುವ ಸಲುವಾಗಿ ತಾನು ಸುಮಾರು 15 ಶತಕೋಟಿ $ನಷ್ಟು ಖರೀದಿಯನ್ನು ಮಾಡುವುದಾಗಿ ಅಪಮೌಲ್ಯೀಕರಣಕ್ಕಿಂತ ಸ್ವಲ್ಪ ಮುಂಚಿತವಾಗಿ ನೋರ್ಮನ್‌ ಲ್ಯಾಮಂಟ್‌ ಹೇಳಿದಾಗ ನಾವು ಖುಷಿಪಟ್ಟಿದ್ದೆವು, ಏಕೆಂದರೆ ಅದು ನಾವು ಮಾರಾಟಮಾಡಲು ಬಯಸಿದ್ದಷ್ಟು ಪ್ರಮಾಣದಲ್ಲಿತ್ತು."

ಸೊರೊಸ್‌ ಅಡಿಯಲ್ಲಿ ವ್ಯವಹಾರವನ್ನು ನಡೆಸಿದ್ದ ಸ್ಟಾನ್ಲೆ ಡ್ರಕನ್‌ಮಿಲ್ಲರ್‌ ಎಂಬಾತ ಪೌಂಡ್‌ನಲ್ಲಿದ್ದ ದುರ್ಬಲತೆಯನ್ನು ಅಥವಾ ನ್ಯೂನತೆಯನ್ನು ಮೂಲತಃ ಕಂಡ. "ಒಂದು ದೈತ್ಯಸ್ವರೂಪದ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಸೊರೊಸ್‌ನ ಕೊಡುಗೆಯು ಅವನನ್ನು ತಳ್ಳುತ್ತಿತ್ತು."[೨೧][೨೨]

1997ರಲ್ಲಿ, ಏಷ್ಯಾದ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ, ಮಲೇಷಿಯಾದ ಆಗಿನ ಪ್ರಧಾನ ಮಂತ್ರಿಯಾಗಿದ್ದ ಮಹಾತಿರ್‌ ಬಿನ್‌ ಮೊಹಮದ್‌ ಸೊರೊಸ್‌ ಮೇಲೆ ಆರೋಪವನ್ನು ಹೊರಿಸುತ್ತಾ, ಮೈನ್‌ಮಾರ್‌‌ನ್ನು ಓರ್ವ ಸದಸ್ಯದೇಶವಾಗಿ ಸ್ವಾಗತಿಸಿದ್ದಕ್ಕಾಗಿ ASEANನ್ನು ಶಿಕ್ಷಿಸಲು ತನ್ನ ನಿಯಂತ್ರಣದ ಅಡಿಯಲ್ಲಿರುವ ಸಂಪತ್ತನ್ನು ಸೊರೊಸ್‌ ಬಳಸುತ್ತಿದ್ದಾನೆ ಎಂದು ಆರೋಪಿಸಿದ. ಮಹಾತಿರ್‌ನ ಆರೋಪಗಳನ್ನು ಸೊರೊಸ್‌ ಅಲ್ಲಗಳೆದ. ASEANನ ನಾಮಮಾತ್ರದ US ಡಾಲರು GDPಯು 1997ರಲ್ಲಿ 9.2 ಶತಕೋಟಿ US$ನಷ್ಟು ಹಾಗೂ 1998ರಲ್ಲಿ 218.2 ಶತಕೋಟಿ $ನಷ್ಟು (31.7%) ಕುಸಿಯಿತು.

ಸಾರ್ವಜನಿಕ ಭವಿಷ್ಯವಾಣಿಗಳು

[ಬದಲಾಯಿಸಿ]

2008ರ ಮೇ ತಿಂಗಳಲ್ಲಿ ಬಂದ ದಿ ನ್ಯೂ ಪ್ಯಾರಡೈಮ್‌ ಫಾರ್‌ ಫೈನಾನ್ಷಿಯಲ್‌ ಮಾರ್ಕೆಟ್ಸ್‌ ಎಂಬ ಸೊರೊಸ್‌ನ ಪುಸ್ತಕವು, ಕಳೆದ 25 ವರ್ಷಗಳಿಂದ ನಿರ್ಮಿಸಲ್ಪಟ್ಟಿದ್ದ ಮತ್ತು ಕುಸಿಯಲು ಸಿದ್ಧವಾಗಿದ್ದ ಒಂದು "ಬೃಹತ್‌ ಗಾತ್ರದ ಗುಳ್ಳೆಯ" (ಯೋಜನೆಯ ಅಥವಾ ಉದ್ಯಮದ ನಿರಾಧಾರವಾದ ಪ್ರಯತ್ನ) ಕುರಿತು ವಿವರಿಸಿತು. ದುರ್ಘಟನೆಯನ್ನು ಮುಂಚಿತವಾಗಿ ಊಹಿಸಿ ಅವನು ಬರೆದ ಪುಸ್ತಕಗಳ ಒಂದು ಸರಣಿಯಲ್ಲಿ ಇದು ಮೂರನೆಯದಾಗಿತ್ತು. ಅವನೇ ಹೇಳಿಕೊಳ್ಳುವಂತೆ:

I have a record of crying wolf.... I did it first in The Alchemy of Finance (in 1987), then in The Crisis of Global Capitalism (in 1998) and now in this book. So it's three books predicting disaster. (After) the boy cried wolf three times . . . the wolf really came.[೨೩]

ತನ್ನ ಊಹೆಗಳು ಯಾವಾಗ ತಪ್ಪಾಗಿವೆ ಎಂಬುದನ್ನು ಗುರುತಿಸಬಲ್ಲ ಸಾಮರ್ಥ್ಯನ್ನು ಹೊಂದಿರುವುದೇ ತನ್ನ ಯಶಸ್ಸಿಗೆ ಕಾರಣ ಎಂದು ಅವನು ಹೇಳುತ್ತಾನೆ.

I'm only rich because I know when I'm wrong... I basically have survived by recognizing my mistakes. I very often used to get backaches due to the fact that I was wrong. Whenever you are wrong you have to fight or [take] flight. When [I] make the decision, the backache goes away.[೨೩]

ವಿಶ್ವದ ಹಣಕಾಸು ವ್ಯವಸ್ಥೆಯು ಸಂಪೂರ್ಣವಾಗಿ ಚೂರುಚೂರಾಗಿ ಹೋಗಿದ್ದು, ಈ ಬಿಕ್ಕಟ್ಟು ಸದ್ಯದಲ್ಲಿಯೇ ಪರಿಹಾರವಾಗುವ ಯಾವುದೇ ಸಂಭಾವ್ಯತೆಯಿಲ್ಲ ಎಂದು 2009ರ ಫೆಬ್ರುವರಿಯಲ್ಲಿ, ಜಾರ್ಜ್‌ ಸೊರೊಸ್‌ ಹೇಳಿದ. [೨೪] "ಹಣಕಾಸಿನ ವ್ಯವಸ್ಥೆಯ ಕುಸಿಯುವಿಕೆಯನ್ನು ನಾವು ಕಣ್ಣಾರೆ ಕಂಡೆವು[...]ಜೀವಾಧಾರಕ ವ್ಯವಸ್ಥೆಯನ್ನು ಅವಲಂಬಿಸಿಕೊಂಡಿರುವಂತೆ ಅದನ್ನು ಇರಿಸಲಾಯಿತು, ಮತ್ತು ಈಗಲೂ ಅದು ಜೀವಾಧಾರಕ ವ್ಯವಸ್ಥೆಯ ಮೇಲೆಯೇ ಅವಲಂಬಿತವಾಗಿದೆ. ನಾವೀಗ ತಳಭಾಗದ ಸಮೀಪದಲ್ಲಿದ್ದೇವೆಯೇ ಎಂಬುದರ ಕುರಿತೂ ಯಾವ ಸೂಚನೆಯೂ ಇಲ್ಲ."

ಆಂತರ್ಯದವರ ವ್ಯಾಪಾರದ ಅಪರಾಧ ನಿರ್ಣಯ

[ಬದಲಾಯಿಸಿ]

1988ರಲ್ಲಿ, ಸೋಷಿಯೇಟ್‌ ಜೆನೆರೇಲ್‌ ಎಂಬ ಫ್ರೆಂಚ್‌ ಬ್ಯಾಂಕಿನ ಸ್ವಾಧೀನದ ಪ್ರಯತ್ನಕ್ಕೆ ಕೈಜೋಡಿಸುವಂತೆ ಅವನನ್ನು ಕೇಳಿಕೊಳ್ಳಲಾಯಿತು. ಇದಕ್ಕೆ ಸಂಬಂಧಿಸಿದ ಸವಾಲು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವನು ನಿರಾಕರಿಸಿದನಾದರೂ, ಆ ಕಂಪನಿಯಲ್ಲಿನ ಅನೇಕ ಷೇರುಗಳನ್ನು ನಂತರ ಆತ ಖರೀದಿಸಿದ. 1989ರಲ್ಲಿ ಫ್ರೆಂಚ್‌ ಅಧಿಕಾರಿಗಳು ತನಿಖೆಯೊಂದನ್ನು ಕೈಗೆತ್ತಿಕೊಂಡರು, ಮತ್ತು ಇದೊಂದು ಆಂತರ್ಯದವರ ವ್ಯಾಪಾರವಾಗಿತ್ತು ಎಂದು ಫ್ರೆಂಚ್‌ ನ್ಯಾಯಾಲಯವೊಂದು 2002ರಲ್ಲಿ ತೀರ್ಪುನೀಡಿತು. ಫ್ರೆಂಚ್‌ ಭದ್ರತೆಗಳ ಕಾನೂನುಗಳ ಅಡಿಯಲ್ಲಿ ವ್ಯಾಖ್ಯಾನಿಸಲಾಗಿರುವಂತೆ ಇದು ಒಂದು ಕಾನೂನು ಭಂಜಕ ಅಪರಾಧ ನಿರ್ಣಯ ಎಂದು ಉಲ್ಲೇಖಿಸಿದ ಸದರಿ ನ್ಯಾಯಾಲಯವು, ಅವನಿಗೆ 2.3 ದಶಲಕ್ಷ $ನಷ್ಟು ಮೊತ್ತದ ದಂಡವನ್ನು ವಿಧಿಸಿತು. ಇದು ಸಂಸ್ಥೆಯ ಆಂತರ್ಯದವರಿಂದ ಅಥವಾ ಗುಟ್ಟುಬಲ್ಲವರಿಂದ ಪಡೆದ ಮಾಹಿತಿಯನ್ನು ಬಳಸಿಕೊಂಡು ಅವನು ಮಾಡಿಕೊಂಡ ಹಣದ ಮೊತ್ತವಾಗಿತ್ತು.

ಸದರಿ ಪ್ರಕರಣವನ್ನು ನ್ಯಾಯಾಂಗ ವಿಚಾರಣೆಗೆ ತರುವಲ್ಲಿ ಆದ ವಿಳಂಬದಿಂದಾಗಿ ಪುಂಡುದಂಡಗಳನ್ನು ಅವನಿಂದ ಪಡೆಯಲಾಗಲಿಲ್ಲ. ತಾನು ಯಾವುದೇ ತಪ್ಪೆಸಗಿಲ್ಲ ಎಂದು ಸಮರ್ಥಿಸಿಕೊಂಡ ಸೊರೊಸ್‌, ಸ್ವಾಧೀನದ ಸುದ್ದಿಗಳು ಸಾರ್ವಜನಿಕ ಜ್ಞಾನವಾಗಿತ್ತು ಎಂದು ತಿಳಿಸಿದ.[೨೫]

ಫ್ರಾನ್ಸ್‌ನಲ್ಲಿನ ಸರ್ವೋಚ್ಚ ನ್ಯಾಯಾಲಯವು 2006ರ ಜೂನ್‌ 14ರಂದು ಅವನ ಆಂತರ್ಯದವರ ವ್ಯಾಪಾರದ ಅಪರಾಧ ನಿರ್ಣಯವನ್ನು ಎತ್ತಿಹಿಡಿಯಿತು.[೨೬] 2006ರ ಡಿಸೆಂಬರ್‌ನಲ್ಲಿ, ಯುರೋಪ್‌ನ ಮಾನವ ಹಕ್ಕುಗಳ ನ್ಯಾಯಾಲಯಕ್ಕೆ ಮೇಲ್ಮನವಿಯನ್ನು ಸಲ್ಲಿಸಿದ ಆತ, ಸದರಿ ಪ್ರಕರಣವನ್ನು ನ್ಯಾಯಾಂಗ ವಿಚಾರಣೆಗೆ ತರುವಲ್ಲಿನ 14-ವರ್ಷಗಳ ವಿಳಂಬದಿಂದಾಗಿ ಒಂದು ನ್ಯಾಯಸಮ್ಮತ ವಿಚಾರಣೆಗೆ ಅಡ್ಡಿಯುಂಟಾಗಿದೆ ಎಂದು ಪ್ರತಿಪಾದಿಸಿದ.[೨೭]

ಕ್ರೀಡೆ

[ಬದಲಾಯಿಸಿ]

2005ರಲ್ಲಿ, ನ್ಯಾಷನಲ್‌ ಲೀಗ್‌‌ವಾಷಿಂಗ್ಟನ್‌ ನ್ಯಾಷನಲ್ಸ್‌‌‌‌ನ್ನು ಖರೀದಿಸಲು ಪ್ರಯತ್ನಿಸಿದ ಸಮೂಹವೊಂದರಲ್ಲಿ ಸೊರೊಸ್‌ ಓರ್ವ ಅಲ್ಪಸಂಖ್ಯಾತ ಪಾಲುದಾರನಾಗಿದ್ದ. ಒಂದು ವೇಳೆ, ಯಾವುದೇ ಬೇಸ್‌ಬಾಲ್‌ ತಂಡದಲ್ಲಿ ಸೊರೊಸ್‌ ಯಾವುದೇ ಹಿತಾಸಕ್ತಿಯನ್ನು ಹೊಂದಿದ್ದಲ್ಲಿ, ಬೇಸ್‌ಬಾಲ್‌ನ ಟ್ರಸ್ಟ್‌ವಿರೋಧಿ ವಿನಾಯಿತಿಯನ್ನು ಅವರು ಅಕ್ರಮವಾಗಿ-ತಿದ್ದಬಹುದು ಎಂದು ರಿಪಬ್ಲಿಕನ್‌ ಪಕ್ಷದ ಕೆಲವೊಂದು ಶಾಸಕರು ಸಲಹೆನೀಡಿದರು.[೨೮] 2008ರಲ್ಲಿ, AS ರೋಮಾ ಎಂಬ ಇಟಲಿಯ ಒಂದು ಫುಟ್‌ಬಾಲ್‌ ತಂಡದೊಂದಿಗೆ ಸೊರೊಸ್‌ನ ಹೆಸರು ತಳುಕುಹಾಕಿಕೊಂಡಿತ್ತು. ಆದರೆ ಆ ಕ್ಲಬ್‌ ಮಾರಾಟಗೊಳ್ಳಲಿಲ್ಲ. ವಾಷಿಂಗ್ಟನ್‌ ಸಾಕರ್‌‌ L.P.ಗೆ ಸೊರೊಸ್‌ ಓರ್ವ ಹಣಕಾಸಿನ ಬೆಂಬಲಿಗನೂ ಆಗಿದ್ದ. 1995ರಲ್ಲಿ ಮೇಜರ್‌ ಲೀಗ್‌ ಸಾಕರ್‌ ಸಂಸ್ಥಾಪನೆಗೊಂಡಾಗ, ಅದರ D.C. ಯುನೈಟೆಡ್‌ ಕ್ಲಬ್‌ಗೆ ಸಂಬಂಧಿಸಿದ ನಿರ್ವಹಣಾ ಹಕ್ಕುಗಳು ವಾಷಿಂಗ್ಟನ್‌ ಸಾಕರ್‌‌ L.P. ಸಮೂಹದ ಸ್ವಾಮ್ಯದಲ್ಲಿದ್ದವು. ಆದರೆ ಈ ಸಮೂಹವು 2000ನೇ ಇಸವಿಯಲ್ಲಿ ಈ ಹಕ್ಕುಗಳನ್ನು ಕಳೆದುಕೊಂಡಿತು.[೨೯]

ಲೋಕೋಪಕಾರ

[ಬದಲಾಯಿಸಿ]
ಜಾರ್ಜ್‌ ಸೊರೊಸ್‌ (ಎಡಭಾಗ) ಮತ್ತು ಜೇಮ್ಸ್‌ H. ಬಿಲಿಂಗ್ಟನ್‌.

1970ರ ದಶಕದಿಂದಲೂ ಸಹ ಓರ್ವ ಲೋಕೋಪಕಾರಿಯಾಗಿ ಸೊರೊಸ್‌ ಸಕ್ರಿಯನಾಗಿದ್ದಾನೆ. ಪ್ರತ್ಯೇಕತಾ ನೀತಿಯನ್ನು ಅನುಸರಿಸುತ್ತಿರುವ ದಕ್ಷಿಣ ಆಫ್ರಿಕಾದಲ್ಲಿನ ಕೇಪ್‌ಟೌನ್‌ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯಲು ನೀಗ್ರೋ ವಿದ್ಯಾರ್ಥಿಗಳಿಗೆ ನೆರವಾಗಲು ಸಹಾಯಧನಗಳನ್ನು ಒದಗಿಸಲು ಅವನು ಈ ಅವಧಿಯಲ್ಲೇ ಶುರುಮಾಡಿದ್ದು. ಕಬ್ಬಿಣದ ಪರದೆಯ ಮರೆಯಲ್ಲಿ ನಡೆಯುತ್ತಿದ್ದ ಭಿನ್ನಮತೀಯ ಚಟುವಟಿಕೆಗಳಿಗೆ ಹಣ ಒದಗಿಸುವುದನ್ನೂ ಅವನು ಇದೇ ಅವಧಿಯಲ್ಲಿ ಶುರುಮಾಡಿದ್ದು.

ಸೋವಿಯೆಟ್‌-ನಂತರದ ರಾಷ್ಟ್ರಗಳಲ್ಲಿ ಅಹಿಂಸಾತ್ಮಕ-ಪ್ರಜಾಪ್ರಭುತ್ವೀಕರಣವನ್ನು ಉತ್ತೇಜಿಸುವಲ್ಲಿನ ಪ್ರಯತ್ನಗಳು ಸೊರೊಸ್‌ನ ಲೋಕೋಪಕಾರಿತನದ ಧನಸಹಾಯ ಕಾರ್ಯದಲ್ಲಿ ಸೇರಿಕೊಂಡಿವೆ. ಬಹುಪಾಲು ಮಧ್ಯಭಾಗದ ಹಾಗೂ ಪೂರ್ವಭಾಗದ ಯುರೋಪ್‌‌ನಲ್ಲಿ ಕಂಡುಬರುವ ಈ ಪ್ರಯತ್ನಗಳು, ಓಪನ್‌ ಸೊಸೈಟಿ ಇನ್‌ಸ್ಟಿಟ್ಯೂಟ್‌ (OSI) ಹಾಗೂ ರಾಷ್ಟ್ರೀಯ ಸೊರೊಸ್‌ ಪ್ರತಿಷ್ಠಾನಗಳ ಮೂಲಕ ಮುಖ್ಯವಾಗಿ ನಡೆಯುತ್ತವೆ. ಸೊರೊಸ್‌ ಪ್ರತಿಷ್ಠಾನಗಳು ಕೆಲವೊಮ್ಮೆ ಬೇರೆ ಹೆಸರುಗಳ ಅಡಿಯಲ್ಲೂ (ಪೋಲೆಂಡ್‌ನಲ್ಲಿರುವ ಸ್ಟೆಫನ್‌ ಬೆಟೊರಿ ಪ್ರತಿಷ್ಠಾನದಂತೆ) ಕಾರ್ಯನಿರ್ವಹಿಸುತ್ತವೆ. 2003ರ ವೇಳೆಗೆ ಇದ್ದಂತೆ, ಆತ ಒಟ್ಟಾರೆಯಾಗಿ 4 ಶತಕೋಟಿ $ನಷ್ಟು ಮೊತ್ತವನ್ನು ದಾನವಾಗಿ ನೀಡಿದ್ದಾನೆ ಎಂದು PBS ಅಂದಾಜಿಸಿದೆ.[೨೫] OSI ಹೇಳುವ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ವಾರ್ಷಿಕವಾಗಿ ಸುಮಾರು 400 ದಶಲಕ್ಷ $ನಷ್ಟು ಹಣವನ್ನು ಅದು ಖರ್ಚುಮಾಡಿದೆ.

2007ರಲ್ಲಿ ಟೈಮ್‌ ನಿಯತಕಾಲಿಕವು ಎರಡು ನಿರ್ದಿಷ್ಟ ಯೋಜನೆಗಳನ್ನು ಉಲ್ಲೇಖಿಸಿತು- ಪ್ರಾದೇಶಿಕವಾಗಿರುವ ರಷ್ಯಾದ ವಿಶ್ವವಿದ್ಯಾಲಯಗಳಿಗೆ ಅಂತರ್ಜಾಲದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದರ ಕಡೆಗಿನ 100 ದಶಲಕ್ಷ $ನಷ್ಟು ಮೊತ್ತದ ಸಹಾಯ; ಮತ್ತು ಆಫ್ರಿಕಾದಲ್ಲಿನ ಅತೀವವಾದ ಬಡತನವನ್ನು ತೊಡೆದುಹಾಕಲು ಹಮ್ಮಿಕೊಂಡಿರುವ ಮಿಲೆನಿಯಂ ಪ್ರಾಮಿಸ್‌ ಯೋಜನೆಯೆಡೆಗಿನ 50 ದಶಲಕ್ಷ $ನಷ್ಟು ಮೊತ್ತದ ಸಹಾಯ. ಟೈಮ್‌ ನಿಯತಕಾಲಿಕವು ತನ್ನ ಉಲ್ಲೇಖಗಳನ್ನು ಮುಂದುವರಿಸುತ್ತಾ, U.S.ನಲ್ಲಿನ ಯೋಜನೆಗಳಿಗೆ ಸೊರೊಸ್‌ 742 ದಶಲಕ್ಷ $ನಷ್ಟು ಮೊತ್ತವನ್ನು ನೀಡಿದ್ದಾನೆ, ಮತ್ತು ಒಟ್ಟಾರೆಯಾಗಿ 6 ಶತಕೋಟಿ $ಗೂ ಹೆಚ್ಚಿನ ಮೊತ್ತದ ಹಣವನ್ನು ನೀಡಿದ್ದಾನೆ ಎಂದು ತಿಳಿಸಿತು.[೩೦]

ಮಧ್ಯಭಾಗದ ಮತ್ತು ಪೂರ್ವಭಾಗದ ಯುರೋಪ್‌ನಾದ್ಯಂತವಿರುವ ವಿಜ್ಞಾನಿಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ನೀಡಲಾದ ನೆರವು, ಸರಾಜೆವೊನ ಮುತ್ತಿಗೆಯ ಅವಧಿಯಲ್ಲಿ ನಾಗರಿಕರಿಗೆ ನೀಡಿದ ನೆರವು, ಮತ್ತು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌‌ ಸಂಘಟನೆ ಇವು ಇತರ ಗಮನಾರ್ಹವಾದ ಯೋಜನೆಗಳಲ್ಲಿ ಸೇರಿವೆ. ಸೆಂಟ್ರಲ್‌ ಯುರೋಪಿಯನ್‌ ಯೂನಿವರ್ಸಿಟಿಗೆ (CEU) 420 ದಶಲಕ್ಷ €ನಷ್ಟು ಮೊತ್ತದ ಒಂದು ಶಾಶ್ವತ ವರಮಾನದಾನವನ್ನು ನೀಡಲೂ ಸಹ ಸೊರೊಸ್‌ ವಾಗ್ದಾನ ಮಾಡಿದ್ದಾನೆ. ನೊಬೆಲ್‌ ಶಾಂತಿ ಪ್ರಶಸ್ತಿಯ ವಿಜೇತನಾದ ಮುಹಮ್ಮದ್‌ ಯುನುಸ್‌ ಹಾಗೂ ಅವನ ಕಿರು ಹಣಕಾಸು ಸಹಾಯದ ಬ್ಯಾಂಕ್‌ ಆಗಿರುವ ಗ್ರಾಮೀಣ ಬ್ಯಾಂಕ್‌ OSIನಿಂದ ಬೆಂಬಲವನ್ನು ಸ್ವೀಕರಿಸಿದ್ದಾರೆ.

ನ್ಯಾಷನಲ್‌ ರಿವ್ಯೂ [೩೧] ಪತ್ರಿಕೆಯ ಅನುಸಾರ, ಲಿನ್ನೆ ಸ್ಟೀವರ್ಟ್‌‌‌ನ ರಕ್ಷಣಾ ಸಮಿತಿಗೆ 2002ರ ಸೆಪ್ಟೆಂಬರ್‌ನಲ್ಲಿ 20,000 $ನಷ್ಟು ಮೊತ್ತದ ಹಣವನ್ನು ಓಪನ್‌ ಸೊಸೈಟಿ ಇನ್‌ಸ್ಟಿಟ್ಯೂಟ್‌ ನೀಡಿತು. ಲಿನ್ನೆ ಸ್ಟೀವರ್ಟ್ ಓರ್ವ ವಕೀಲನಾಗಿದ್ದು, ಆಪಾದಿತ ಭಯೋತ್ಪಾದಕರ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿ ಸಮರ್ಥಿಸಿಕೊಂಡಿದ್ದ ಮತ್ತು ಓರ್ವ ಕಕ್ಷಿದಾರನಿಗಾಗಿದ್ದ ಒಂದು ಪತ್ರಿಕಾಗೋಷ್ಠಿಯ ಮೂಲಕ "ಒಂದು ಭಯೋತ್ಪಾದಕ ಪಿತೂರಿಗೆ ಸಂಬಂಧಿಸಿದಂತೆ ಬೆಂಬಲವನ್ನು ಒದಗಿಸಿದ್ದಕ್ಕಾಗಿ" ಸೆರೆಮನೆಯಲ್ಲಿ 2⅓ ವರ್ಷಗಳನ್ನು ಕಳೆಯುವ ಶಿಕ್ಷೆಗೆ ಈಡಾಗಿದ್ದ. ಈ ಕುರಿತು OSIನ ಓರ್ವ ವಕ್ತಾರ ಹೀಗೆ ಹೇಳಿದ: "ನಮ್ಮ ಬೆಂಬಲಕ್ಕೆ ಯೋಗ್ಯವಾಗಿದ್ದ ವಿವಾದಾಂಶವನ್ನು ಸಮಾಲೋಚಿಸುವ-ಹಕ್ಕೊಂದು-ಅಸ್ತಿತ್ವದಲ್ಲಿತ್ತು ಎಂದು ಆ ಸಮಯದಲ್ಲಿ ನಮಗೆ ಕಂಡುಬಂತು."

2006ರ ಸೆಪ್ಟೆಂಬರ್‌ನಲ್ಲಿ, ಪ್ರಜಾಪ್ರಭುತ್ವವನ್ನು ನಿರ್ಮಿಸುವ ಕಾರ್ಯಸೂಚಿಗಳ ತನ್ನ ವಿಶಿಷ್ಟವಾದ ಪ್ರಾಯೋಜಕತ್ವದಿಂದ ಸೊರೊಸ್‌ ಬೇರ್ಪಟ್ಟ. ಆಫ್ರಿಕಾದಲ್ಲಿನ ಅತೀವವಾದ ಬಡತನವನ್ನು ತೊಡೆದುಹಾಕಲು ನೆರವಾಗುವಲ್ಲಿನ ಜೆಫ್ರಿ ಸ್ಯಾಕ್ಸ್‌-ನೇತೃತ್ವದ ಮಿಲೆನಿಯಂ ಪ್ರಾಮಿಸ್‌ ಸಂಸ್ಥೆಗೆ 50 ದಶಲಕ್ಷ $ನಷ್ಟು ಮೊತ್ತದ ಹಣವನ್ನು ನೀಡುವ ವಾಗ್ದಾನವನ್ನೂ ಅವನು ಇದೇ ಸಮಯದಲ್ಲಿ ಮಾಡಿದ. ಕೆಟ್ಟ ಆಡಳಿತ ಹಾಗೂ ಬಡತನದ ನಡುವಿನ ಸಂಬಂಧವನ್ನು ಗುರುತಿಸಿದ ಅವನು, ಯೋಜನೆಯ ಮಾನವಹಿತ ಪ್ರತಿಪಾದಕ ಮೌಲ್ಯದ ಕುರಿತಾಗಿ ಟೀಕಿಸಿದ.[೩೨]

1980ರಲ್ಲಿ ನ್ಯೂ ಸ್ಕೂಲ್‌ ಫಾರ್‌ ಸೋಷಿಯಲ್‌ ರಿಸರ್ಚ್‌‌‌ನಿಂದ (ನ್ಯೂಯಾರ್ಕ್‌), ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದಿಂದ, 1991ರಲ್ಲಿ ಬುಡಾಪೆಸ್ಟ್‌ನ ಕಾರ್ವಿನಸ್‌ ವಿಶ್ವವಿದ್ಯಾಲಯದಿಂದ, ಹಾಗೂ ಯೇಲ್‌ ವಿಶ್ವವಿದ್ಯಾಲಯದಿಂದ ಅವನು ಗೌರವಾರ್ಥ ಡಾಕ್ಟರೇಟ್‌ ಪದವಿಗಳನ್ನು ಸ್ವೀಕರಿಸಿದ. 2000ನೇ ಇಸವಿಯಲ್ಲಿ, ಯೇಲ್‌ ಸ್ಕೂಲ್‌ ಆಫ್‌ ಮ್ಯಾನೇಜ್‌ಮೆಂಟ್‌‌ನಿಂದ ಯೇಲ್‌ ಇಂಟರ್‌ನ್ಯಾಷನಲ್‌ ಸೆಂಟರ್‌ ಫಾರ್‌ ಫೈನಾನ್ಸ್‌ ಪ್ರಶಸ್ತಿಯನ್ನೂ ಸಹ ಸೊರೊಸ್‌ ಸ್ವೀಕರಿಸಿದ. ಅಷ್ಟೇ ಅಲ್ಲ, ಬೊಲೊಗ್ನಾ ವಿಶ್ವವಿದ್ಯಾಲಯದ 'ಲೌರಿಯಾ ಆನರಿಸ್‌ ಕೌಸಾ' ಎಂಬ ಅತ್ಯುನ್ನತ ಗೌರವವನ್ನು 1995ರಲ್ಲಿ ಅವನು ಸ್ವೀಕರಿಸಿದ.

ರಾಜಕೀಯ ದೇಣಿಗೆಗಳು ಮತ್ತು ಕ್ರಿಯಾವಾದ

[ಬದಲಾಯಿಸಿ]

ಅಮೆರಿಕಾ ಸಂಯುಕ್ತ ಸಂಸ್ಥಾನಗಳು

[ಬದಲಾಯಿಸಿ]

2003ರ ನವೆಂಬರ್‌ 11ರಂದು ದಿ ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಸೊರೊಸ್‌ ಮಾತನಾಡುತ್ತಾ, ಅಧ್ಯಕ್ಷ ಜಾರ್ಜ್‌ W. ಬುಷ್‌‌ನನ್ನು ಅಧಿಕಾರದಿಂದ ಕೆಳಗಿಳಿಸುವುದು "ತನ್ನ ಜೀವನದ ಪ್ರಮುಖ ಗುರಿಯಾಗಿತ್ತು" ಮತ್ತು "ಜೀವನ ಮತ್ತು ಮರಣದ ಒಂದು ವಿಷಯವಾಗಿತ್ತು" ಎಂದು ನುಡಿದ. ಅಧ್ಯಕ್ಷ ಬುಷ್‌ನ ಸೋಲಿನ ಬಗೆಗೆ "ಯಾರಾದರೂ ಖಾತರಿ ನೀಡುವುದಾದರೆ", ಬುಷ್‌ನನ್ನು ಸೋಲಿಸಲು ತನ್ನೆಲ್ಲಾ ಐಶ್ವರ್ಯವನ್ನೂ ತಾನು ತ್ಯಾಗ ಮಾಡುವುದಾಗಿ ಅವನು ತಿಳಿಸಿದ.[೩೩] ಸೆಂಟರ್‌ ಫಾರ್‌ ಅಮೆರಿಕನ್‌ ಪ್ರೋಗ್ರೆಸ್‌‌ಗೆ 3 ದಶಲಕ್ಷ $, ಮೂವ್‌ಆನ್‌‌‌‌ಗೆ 5 ದಶಲಕ್ಷ $, ಮತ್ತು ಅಮೆರಿಕಾ ಕಮಿಂಗ್‌ ಟುಗೆದರ್‌‌‌ಗೆ 10 ದಶಲಕ್ಷ $ನಷ್ಟು ಮೊತ್ತದ ದೇಣಿಗೆಗಳನ್ನು ಸೊರೊಸ್‌ ನೀಡಿದ. 2004 ಚುನಾವಣೆರ ಚುನಾವಣೆಯಲ್ಲಿ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲು ಈ ಗುಂಪುಗಳು ಕೆಲಸಮಾಡಿದವು. 2004ರ ಸೆಪ್ಟೆಂಬರ್‌ 28ರಂದು ಪ್ರಚಾರಕ್ಕಾಗಿ ಆತ ಇನ್ನೂ ಹೆಚ್ಚಿನ ಹಣವನ್ನು ಸಮರ್ಪಿಸಿದ ಮತ್ತು ವಾಷಿಂಗ್ಟನ್‌, DCಯಲ್ಲಿನ ನ್ಯಾಷನಲ್‌ ಪ್ರೆಸ್‌ ಕ್ಲಬ್‌‌ನಲ್ಲಿ ನೀಡಿದ ವೈ ವೀ ಮಸ್ಟ್‌ ನಾಟ್‌ ರೀ-ಎಲೆಕ್ಟ್‌ ಪ್ರೆಸಿಡೆಂಟ್‌ ಬುಷ್‌ [೩೪] ಎಂಬ ಭಾಷಣದೊಂದಿಗೆ ತನ್ನದೇ ಆದ ಬಹು-ಸಂಸ್ಥಾನದ ಪ್ರವಾಸವನ್ನು ಆತ ಶುರುಮಾಡಿದ. ಉಪಾಧ್ಯಕ್ಷೀಯ ಚರ್ಚೆಯಲ್ಲಿ ಡಿಕ್‌ ಚೆನೆಯು ಅಕಸ್ಮಾತ್ತಾಗಿ FactCheck.orgನ್ನು "factcheck.com" ಎಂದು ಉಲ್ಲೇಖಿಸಿದಾಗ, ಆ ನಿರ್ದಿಷ್ಟ ವೆಬ್‌ತಾಣದ ಮಾಲೀಕನು ಅದರೆಲ್ಲಾ ವೆಬ್‌ದಟ್ಟಣೆಯನ್ನೂ ಸೊರೊಸ್‌ನ ವೆಬ್‌ಸೈಟ್‌ಗೆ ಮರುನಿರ್ದೇಶನ ಮಾಡಬೇಕಾಗಿ ಬಂದ ನಂತರ, ಸೊರೊಸ್‌ನ ಈ ಭಾಷಣದ ಆನ್‌ಲೈನ್‌ ಪ್ರತಿಲೇಖನವು ತಾಣದ ಅನೇಕ ಭೇಟಿಗಳನ್ನು ಕಂಡಿತು.[೩೫]

2004ರ ಅಧ್ಯಕ್ಷೀಯ ಚುನಾವಣೆಯಾಗುವವರೆಗೂ ಸೊರೊಸ್‌ USನ ರಾಜಕೀಯ ಕಾರಣಗಳಿಗೆ ಸಂಬಂಧಿಸಿದಂತೆ ಓರ್ವ ದೊಡ್ಡ ದಾನಿಯಾಗಿರಲಿಲ್ಲ. ಆದರೆ ಸೆಂಟರ್‌ ಫಾರ್‌ ರೆಸ್ಪಾನ್ಸಿವ್‌ ಪಾಲಿಟಿಕ್ಸ್‌ನ ಪ್ರಕಾರ, 2003-2004ರ ಚುನಾವಣಾ ಶ್ರೇಣಿಯಲ್ಲಿ ಅಧ್ಯಕ್ಷ ಬುಷ್‌ನನ್ನು ಸೋಲಿಸುವುದಕ್ಕೆಂದೇ ತಮ್ಮನ್ನು ಅರ್ಪಿಸಿಕೊಂಡಿದ್ದ ವಿವಿಧ 527 ಗುಂಪುಗಳಿಗೆ ಸೊರೊಸ್‌ 23,581,000 $ನಷ್ಟು ಮೊತ್ತವನ್ನು ದೇಣಿಗೆ ನೀಡಿದ. ಒಂದು 527 ಗುಂಪು ಅಮೆರಿಕಾದ ತೆರಿಗೆ-ವಿನಾಯಿತಿ ಪಡೆದ ಸಂಘಟನೆಯ ಒಂದು ಬಗೆಯಾಗಿದ್ದು, ಅಮೆರಿಕಾ ಸಂಯುಕ್ತ ಸಂಸ್ಥಾನಗಳ ತೆರಿಗೆ ಸಂಹಿತೆಯ ಒಂದು ಖಂಡವಾದ 26 U.S.C. § 527ನ ಹೆಸರನ್ನು ಅದು ಇಟ್ಟುಕೊಂಡಿದೆ. ಸೊರೊಸ್‌ನ ಪ್ರಯತ್ನಗಳ ಹೊರತಾಗಿಯೂ, ಅಧ್ಯಕ್ಷನಾಗಿ ಬುಷ್‌ ಎರಡನೇ ಅವಧಿಯೊಂದಕ್ಕೆ ಮರುಚುನಾಯಿತನಾದ.

ಬುಷ್‌ನ ಮರು-ಚುನಾವಣೆಯ ನಂತರ, ಸೊರೊಸ್‌ ಮತ್ತು ಇತರ ದಾನಿಗಳು, U.S. ಡೆಮಾಕ್ರಟಿಕ್‌ ಪಕ್ಷದ ಗುರಿಗಳನ್ನು ಬೆಂಬಲಿಸಿದ ಡೆಮಾಕ್ರಸಿ ಅಲಯೆನ್ಸ್‌ ಎಂಬ ಒಂದು ಹೊಸ ರಾಜಕೀಯ ದುಡ್ಡೆತ್ತುಗ (ಫಂಡ್‌ರೈಸಿಂಗ್‌) ಗುಂಪಿಗೆ ಆಧಾರವಾಗಿ ನಿಂತರು.[೩೬] 2002ರ ಮೆಕ್‌ಕೇನ್‌-ಫೀನ್‌ಗೋಲ್ಡ್‌ ಉಭಯಪಕ್ಷೀಯ ಪ್ರಚಾರ ಸುಧಾರಣಾ ಕಾಯಿದೆಯನ್ನು ಸೊರೊಸ್‌ ಬೆಂಬಲಿಸಿದ. ಇದರಿಂದಾಗಿ ಒಕ್ಕೂಟದ ಚುನಾವಣೆ ಪ್ರಚಾರಗಳಿಗೆ ಬರುವ "ರಾಜಕೀಯ ದೇಣಿಗೆ" ಕೊಡುಗೆಗಳು ಕೊನೆಗೊಳ್ಳಬಹುದು ಎಂದು ಅನೇಕರು ಆಶಿಸಿದರು. 527 ಸಂಘಟನೆಗಳಿಗೆ ಸೊರೊಸ್‌ ರಾಜಕೀಯ ದೇಣಿಗೆಯನ್ನು ನೀಡಿದ್ದು, ಅವನು ಹೇಳುವಂತೆ ಇವು ಅಭ್ಯರ್ಥಿಗಳಿಗಾಗಲೀ ಅಥವಾ ರಾಜಕೀಯ ಪಕ್ಷಗಳಿಗಾಗಲೀ ನೇರವಾಗಿ ನೀಡಿದ ದೇಣಿಗೆಗಳಂತೆ ಅದೇ ಭ್ರಷ್ಟಾಚಾರದ ವಿವಾದಾಂಶಗಳನ್ನು ಎತ್ತುವುದಿಲ್ಲ.

2009ರ ಆಗಸ್ಟ್‌ನಲ್ಲಿ, ನ್ಯೂಯಾರ್ಕ್‌ ಸಂಸ್ಥಾನಕ್ಕೆ ಸೊರೊಸ್‌ 35 ದಶಲಕ್ಷ $ನಷ್ಟು ಮೊತ್ತವನ್ನು ದೇಣಿಗೆಯಾಗಿ ನೀಡಿದ. ಸಾಮಾನ್ಯ-ಜೀವನಾನುಕೂಲಗಳಿಲ್ಲದ ಮಕ್ಕಳಿಗಾಗಿ ಈ ಹಣವನ್ನು ಮೀಸಲಿಡಲು ಹಾಗೂ 3ರಿಂದ 17 ವರ್ಷಗಳವರೆಗಿನ ವಯೋಮಾನದಲ್ಲಿ ಬರುವ ಪ್ರತಿ ಮಗುವಿಗೂ 200 $ನಷ್ಟು ಪ್ರಮಾಣದಲ್ಲಿ ಪ್ರಯೋಜನದ ಕಾರ್ಡುಗಳನ್ನು ಹೊಂದಿದ್ದ ಹೆತ್ತವರಿಗೆ, ಅರ್ಹತೆಯನ್ನು ಪಡೆದ ಮಕ್ಕಳ ಸಂಖ್ಯೆಯ ಮೇಲೆ ಯಾವುದೇ ಮಿತಿಯನ್ನು ಹೇರದೆ ನೀಡಲೆಂದು ಈ ಹಣವನ್ನು ಸೊರೊಸ್‌ ದೇಣಿಗೆಯಾಗಿ ನೀಡಿದ. 2009ರ ಫೆಡರಲ್‌ ವಸೂಲಾತಿ ಕಾಯಿದೆಯಿಂದ ಸ್ವೀಕರಿಸಿದ ಹಣದಿಂದ ಪಡೆದ 140 ದಶಲಕ್ಷ $ನಷ್ಟು ಮೊತ್ತವನ್ನು ಈ ನಿಧಿಗೆ ಹೆಚ್ಚುವರಿಯಾಗಿ ನ್ಯೂಯಾರ್ಕ್‌ ಸಂಸ್ಥಾನವು ಸೇರಿಸಿತು.[೧೮]

ಪೂರ್ವಾತ್ಯ ಯುರೋಪ್

[ಬದಲಾಯಿಸಿ]

ನ್ಯೂ ಸ್ಟೇಟ್ಸ್‌ಮನ್‌ ಪತ್ರಿಕೆಯಲ್ಲಿನ ನೀಲ್‌ ಕ್ಲಾರ್ಕ್‌ನ ಅಭಿಪ್ರಾಯದ ಅನುಸಾರ, ಪೂರ್ವಾತ್ಯ ಯುರೋಪ್‌‌ನಲ್ಲಿ ಸಾಮುದಾಯಿಕ ಸಿದ್ಧಾಂತವು (ಕಮ್ಯುನಿಸಂ) ಕುಸಿಯುವಲ್ಲಿ ಸೊರೊಸ್‌ನದು ನಿರ್ಣಾಯಕ ಪಾತ್ರವಾಗಿತ್ತು. ಕ್ಲಾರ್ಕ್‌ ಹೇಳುವ ಪ್ರಕಾರ, ಪೋಲೆಂಡ್‌ನ ಐಕಮತ್ಯ ಚಳವಳಿ, ಜೆಕೊಸ್ಲೊವಾಕಿಯಾದಲ್ಲಿನ ಸನ್ನದು 77 ಮತ್ತು ಸೋವಿಯೆಟ್‌ ಒಕ್ಕೂಟದಲ್ಲಿನ ಆಂಡ್ರೀ ಸಖಾರೊವ್‌ ಸೇರಿದಂತೆ, 1979ರಿಂದಲೂ ಸೊರೊಸ್‌ ಭಿನ್ನಮತೀಯರಿಗೆ ವರ್ಷವೊಂದಕ್ಕೆ 3 ದಶಲಕ್ಷ $ನಷ್ಟು ಹಣವನ್ನು ವಿತರಿಸಿದ; 1984ರಲ್ಲಿ ಆತ ಹಂಗರಿಯಲ್ಲಿ ತನ್ನ ಮೊದಲ ಓಪನ್‌ ಸೊಸೈಟಿ ಇನ್‌ಸ್ಟಿಟ್ಯೂಟ್‌‌‌‌ನ್ನು ಸಂಸ್ಥಾಪಿಸಿದ ಮತ್ತು ಪ್ರತಿಭಟನಾ ಚಳವಳಿಗಳು ಹಾಗೂ ಸ್ವತಂತ್ರ ಮಾಧ್ಯಮಗಳಿಗೆ ಲಕ್ಷಗಟ್ಟಲೆ ಡಾಲರುಗಳನ್ನು ತುಂಬಿಸಿದ.[೩೭]

ಸೋವಿಯೆಟ್‌ ಒಕ್ಕೂಟದ ಕುಸಿತವಾದಾಗಿನಿಂದ, ಮುಂಚಿನ ಸೋವಿಯೆಟ್‌ ಕಾರ್ಯಕ್ಷೇತ್ರದಲ್ಲಿ ಸೊರೊಸ್‌ನ ಬಂಡವಾಳ ಒದಗಿಸುವಿಕೆಯು ಒಂದು ಪ್ರಮುಖ ಪಾತ್ರವನ್ನು ವಹಿಸುತ್ತಾ ಬಂದಿದೆ. ಅವನ ಬಂಡವಾಳ ಒದಗಿಸುವಿಕೆ ಹಾಗೂ ಜಾರ್ಜಿಯಾದ ಗುಲಾಬಿ ಕ್ರಾಂತಿ‌ಯ ಸಂಘಟನೆಯು ಅದರ ಯಶಸ್ಸಿಗೆ ಸಂಬಂಧಿಸಿದಂತೆ ನಿರ್ಣಾಯಕ ಪಾತ್ರವನ್ನು ವಹಿಸಿದೆ ಎಂದು ರಷ್ಯಾದ ಮತ್ತು ಪಾಶ್ಚಾತ್ಯ ವೀಕ್ಷಕರಿಂದ ಪರಿಗಣಿಸಲ್ಪಟ್ಟಿತು. ಆದರೂ ತನ್ನ ಪಾತ್ರವನ್ನು "ಅತೀವವಾಗಿ ಉತ್ಪ್ರೇಕ್ಷಿಸಲಾಗಿದೆ" ಎಂದು ಸೊರೊಸ್‌ ತಿಳಿಸಿದ್ದಾನೆ.[೩೮]

ಜಾರ್ಜಿಯಾದ ಭದ್ರತಾ ಮಂಡಳಿಯ ಕಾರ್ಯದರ್ಶಿ ಹಾಗೂ ಹಿಂದಿನ ಶಿಕ್ಷಣ ಮತ್ತು ವಿಜ್ಞಾನ ಸಚಿವನಾದ ಅಲೆಕ್ಸಾಂಡರ್‌ ಲೊಮೈಯಾ ಎಂಬಾತ ಓಪನ್‌ ಸೊಸೈಟಿ ಜಾರ್ಜಿಯಾ ಫೌಂಡೇಷನ್‌ನ (ಸೊರೊಸ್‌ ಫೌಂಡೇಷನ್‌) ಓರ್ವ ಹಿಂದಿನ ಕಾರ್ಯಕಾರಿ ನಿರ್ದೇಶಕನಾಗಿದ್ದು, 50 ಮಂದಿ ಸಿಬ್ಬಂದಿ ಹಾಗೂ 2,500,000 $ನಷ್ಟಿರುವ ಒಂದು ಆಯವ್ಯಯದ ಮೇಲ್ವಿಚಾರಣೆಯನ್ನು ವಹಿಸಿಕೊಂಡಿದ್ದಾನೆ.[೩೯]

ಜಾರ್ಜಿಯಾದ ಹಿಂದಿನ ವಿದೇಶಾಂಗ ಸಚಿವೆಯಾದ ಸಲೋಮೆ ಝೌರಾಬಿಚ್ವಿಲ್‌ ಎಂಬಾಕೆಯು ಬರೆದಿರುವ ಪ್ರಕಾರ, ಸೊರೊಸ್‌ ಫೌಂಡೇಷನ್‌ನಂಥ ಸಂಸ್ಥೆಗಳು ಪ್ರಜಾಪ್ರಭುತ್ವೀಕರಣದ ಉಗಮಸ್ಥಾನಗಳಾಗಿದ್ದವು ಮತ್ತು ಸೊರೊಸ್‌ ಫೌಂಡೇಷನ್‌ನ ಸುತ್ತಲೂ ಸುತ್ತುತ್ತಿದ್ದ ಎಲ್ಲಾ NGOಗಳು ನಿರ್ವಿವಾದವಾಗಿ ಕ್ರಾಂತಿಯನ್ನು ಹೊತ್ತೊಯ್ದವು. ಅವಳು ಅಭಿಪ್ರಾಯಪಡುವ ಪ್ರಕಾರ, ಕ್ರಾಂತಿಯ ನಂತರ ಸೊರೊಸ್‌ ಫೌಂಡೇಷನ್‌ ಹಾಗೂ NGOಗಳು ಅಧಿಕಾರದೊಳಗೆ ಸಂಘಟಿಸಲ್ಪಟ್ಟವು.[೪೦]

ಪ್ರಜಾಪ್ರಭುತ್ವದ-ಪರವಾಗಿರುವ ಮತ್ತು ಪಾರದರ್ಶಕತೆಯ-ಪರವಾಗಿರುವ NGOಗಳಿಗೆ ಸೊರೊಸ್‌ ನೀಡಿದ ಬೆಂಬಲವು ಅರೆ-ಸರ್ವಾಧಿಕಾರದ ಹಲವಾರು ದೇಶಗಳಲ್ಲಿ ಹೀಗಳೆಯಲ್ಪಟ್ಟಿದೆ: ಸೊರೊಸ್‌-ಬೆಂಬಲದ ಪ್ರಜಾಪ್ರಭುತ್ವದ-ಪರವಾಗಿರುವ ಕೆಲವೊಂದು ಉಪಕ್ರಮಗಳು ಕಜಕ್‌ಸ್ತಾನ್‌ ಮತ್ತು ತುರ್ಕ್‌ಮೆನಿಸ್ತಾನ್‌‌‌ ದೇಶಗಳಲ್ಲಿ ನಿಷೇಧಿಸಲ್ಪಟ್ಟಿವೆ.[೪೧] ಟರ್ಕಿಯಲ್ಲಿನ ಸೋಷಿಯಲ್‌ ಟ್ರಾನ್ಸ್‌ಪರೆನ್ಸಿ ಮೂವ್‌ಮೆಂಟ್‌ ಅಸೋಸಿಯೇಷನ್‌‌ನ ಮುಖ್ಯಸ್ಥನಾದ (TSHD) ಎರ್ಸಿಸ್‌ ಕುರ್ಟುಲಸ್‌ ಎಂಬಾತ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, "ಈ NGOಗಳನ್ನು ಬಳಸಿಕೊಳ್ಳುವ ಮೂಲಕ ಉಕ್ರೈನ್‌ ಮತ್ತು ಜಾರ್ಜಿಯಾದಲ್ಲಿ ತನ್ನ ಸಂಕಲ್ಪಿತ ಉದ್ದೇಶವನ್ನು ಸೊರೊಸ್‌ ಕಾರ್ಯರೂಪಕ್ಕೆ ತಂದಿದ್ದಾನೆ...ವಿದೇಶಿಯರಿಂದ NGOಗಳು ಹಣವನ್ನು ತೆಗೆದುಕೊಳ್ಳುವುದನ್ನು ಪ್ರತಿಬಂಧಿಸುವ ಒಂದು ವಿಶೇಷ ಕಾನೂನನ್ನು ರಷ್ಯಾ ಕಳೆದ ವರ್ಷ ಅನುಮೋದಿಸಿದೆ. ಇದನ್ನು ಟರ್ಕಿಯಲ್ಲೂ ಸಹ ನಿಷೇಧಿಸಬೇಕು ಎಂದು ನನಗನ್ನಿಸುತ್ತದೆ" ಎಂದು ತಿಳಿಸಿದ.[೪೨] "ತೆರಿಗೆ ಮತ್ತು ಹಣ ಚಲಾವಣಾ ಉಲ್ಲಂಘನೆಗಳಿಗಾಗಿ" ಬೆಲಾರಸ್‌ ಸರ್ಕಾರವು ತನ್ನ ಪ್ರತಿಷ್ಠಾನದ ಮೇಲೆ 3 ದಶಲಕ್ಷ $ನಷ್ಟು ಮೊತ್ತದ ದಂಡವನ್ನು ವಿಧಿಸಿದ ನಂತರ, ಬೆಲಾರಸ್‌ನಲ್ಲಿನ ತನ್ನ ಪ್ರತಿಷ್ಠಾನವನ್ನು 1997ರಲ್ಲಿ ಸೊರೊಸ್‌ ಮುಚ್ಚಬೇಕಾಗಿ ಬಂತು. ನ್ಯೂಯಾರ್ಕ್‌ ಟೈಮ್ಸ್‌‌ ಪತ್ರಿಕೆಯ ಅನುಸಾರ, ಬೆಲಾರಷ್ಯಾದ ಅಧ್ಯಕ್ಷನಾದ ಅಲೆಕ್ಸಾಂಡರ್‌ ಲ್ಯೂಕಾಶೆಂಕೊ ಎಂಬಾತ, ಬೆಲಾರಸ್‌ನ ಸೊರೊಸ್‌ ಫೌಂಡೇಷನ್‌ ಹಾಗೂ ಇತರ ಸ್ವತಂತ್ರ NGOಗಳನ್ನು ನಿಯಂತ್ರಿಸಲು ಹಾಗೂ ನಾಗರಿಕ ಹಕ್ಕು ಮತ್ತು ಮಾನವ ಹಕ್ಕುಗಳನ್ನು ದಮನಮಾಡಲು ತಾನು ಮಾಡಿದ ಪ್ರಯತ್ನಗಳಿಗಾಗಿ, ಪಶ್ಚಿಮದ ರಾಷ್ಟ್ರಗಳು ಹಾಗೂ ರಷ್ಯಾದಲ್ಲಿ ವ್ಯಾಪಕವಾಗಿ ಟೀಕಿಸಲ್ಪಟ್ಟಿದ್ದಾನೆ. ಆದರೆ ಸದರಿ ದಂಡಗಳು "ಸ್ವತಂತ್ರ ಸಮಾಜವನ್ನು ನಾಶಮಾಡುವಲ್ಲಿನ" ಪ್ರಚಾರವೊಂದರ ಭಾಗವಾಗಿದೆ ಎಂದು ಸೊರೊಸ್‌ ತಿಳಿಸಿದ.[೪೩]

ಬಡವರು, ಸ್ವಯಂಸೇವಕ ಗುಂಪುಗಳು ಹಾಗೂ ಸರ್ಕಾರೇತರ ಸಂಘಟನೆಗಳ ಮೇಲೆ ಉಂಟಾದ ಆರ್ಥಿಕ ಬಿಕ್ಕಟ್ಟಿನ ಪ್ರಭಾವವನ್ನು ಎದುರಿಸಲು, ಮಧ್ಯಭಾಗದ ಯುರೋಪ್‌ ಮತ್ತು ಪೂರ್ವಾತ್ಯ ಯುರೋಪ್‌‌ಗೆ 2009ರ ಜೂನ್‌ನಲ್ಲಿ 100 ದಶಲಕ್ಷ $ನಷ್ಟು ಮೊತ್ತದ ಹಣವನ್ನು ಸೊರೊಸ್‌ ದೇಣಿಗೆ ನೀಡಿದ.[೪೪]

ಆಫ್ರಿಕಾ

[ಬದಲಾಯಿಸಿ]

ಓಪನ್‌ ಸೊಸೈಟಿ ಇನಿಷಿಯೆಟಿವ್‌ ಫಾರ್‌ ಸೌತ್‌ ಆಫ್ರಿಕಾ ಎಂಬುದು ಸೊರೊಸ್‌ನ‌-ಮಾನ್ಯತೆಗೆ ಒಳಪಟ್ಟ ಒಂದು ಸಂಘಟನೆಯಾಗಿದೆ. [೧] Archived July 23, 2010[Date mismatch], ವೇಬ್ಯಾಕ್ ಮೆಷಿನ್ ನಲ್ಲಿ. ಗಾಡ್‌ಫ್ರೇ ಕೇನ್ಯೆಂಜೀ ಎಂಬಾತ ಈ ಸಂಘಟನೆಯ ಜಿಂಬಾಬ್ವೆ ಶಾಖೆಗೆ ನಿರ್ದೇಶಕನಾಗಿದ್ದು, ಜಿಂಬಾಬ್ವೆ ಕಾಂಗ್ರೆಸ್‌ ಆಫ್‌ ಟ್ರೇಡ್‌ ಯೂನಿಯನ್ಸ್‌ (ZCTU) ಎಂಬ ಸಂಘಟನೆಯನ್ನೂ ಸಹ ಈತ ನಿರ್ದೇಶಿಸುತ್ತಾನೆ. ಜಿಂಬಾಬ್ವೆಯಲ್ಲಿ ಪ್ರಭುತ್ವದ ಬದಲಾವಣೆಯನ್ನು ಉತ್ತೇಜಿಸುವಲ್ಲಿನ ಸ್ಥಾನಿಕ ಪ್ರಧಾನ ಸಂಘಟನೆಯಾದ ಮೂವ್‌ಮೆಂಟ್‌ ಫಾರ್‌ ಡೆಮಾಕ್ರಟಿಕ್‌ ಚೇಂಜ್‌ ಎಂಬುದರ ಸಂಸ್ಥಾಪನೆಯ ಹಿಂದಿನ ಪ್ರಮುಖ ಶಕ್ತಿಯಾಗಿ ಜಿಂಬಾಬ್ವೆ ಕಾಂಗ್ರೆಸ್‌ ಆಫ್‌ ಟ್ರೇಡ್‌ ಯೂನಿಯನ್ಸ್ ಪಾತ್ರ ವಹಿಸಿತ್ತು.

ಮಾದಕವಸ್ತು ಕಾರ್ಯನೀತಿ ಸುಧಾರಣೆ

[ಬದಲಾಯಿಸಿ]

ಮಾದಕವಸ್ತು ಕಾರ್ಯನೀತಿ ಸುಧಾರಣೆಯನ್ನು ಉತ್ತೇಜಿಸುವಲ್ಲಿನ ವಿಶ್ವವ್ಯಾಪಿ ಪ್ರಯತ್ನಗಳಿಗೆ ಸೊರೊಸ್‌ ಧನಸಹಾಯ ಮಾಡಿದ್ದಾನೆ. ಮ್ಯಾಸಚೂಸೆಟ್ಸ್‌ ಸಂಸ್ಥಾನದಲ್ಲಿ 1 ಔನ್ಸಿಗಿಂತಲೂ (28ಗ್ರಾಂ) ಕಡಿಮೆಯಿರುವ ಮರಿಜುವಾನಾದ ಹೊಂದಿರುವಿಕೆಯನ್ನು ನಿರಪರಾಧೀಕರಿಸಿದ, ಮ್ಯಾಸಚೂಸೆಟ್ಸ್‌ ಸಂವೇದನಾಶೀಲ ಮರಿಜುವಾನಾ ಕಾರ್ಯನೀತಿ ಉಪಕ್ರಮ ಎಂದು ಹೆಸರಾಗಿರುವ, ಮ್ಯಾಸಚೂಸೆಟ್ಸ್‌ ಸಂಸ್ಥಾನದಲ್ಲಿನ ಒಂದು ಯಶಸ್ವೀ ಜನಮತದ ಕ್ರಮಕ್ಕೆ ಧನಸಹಾಯದ ಮೂಲಕ ನೆರವಾಗಲೆಂದು 2008ರಲ್ಲಿ ಸೊರೊಸ್‌ 400,000 $ನಷ್ಟು ಮೊತ್ತದ ಹಣವನ್ನು ದೇಣಿಗೆ ನೀಡಿದ. ಕ್ಯಾಲಿಫೋರ್ನಿಯಾ, ಅಲಾಸ್ಕಾ, ಒರೆಗಾಂವ್‌, ವಾಷಿಂಗ್ಟನ್‌, ಕೊಲೊರೆಡೊ, ನೆವಡಾ ಮತ್ತು ಮೈನ್‌ ಇವೇ ಮೊದಲಾದ ಕಡೆಗಳಲ್ಲಿದ್ದ ಇದೇ ರೀತಿಯ ಕ್ರಮಗಳಿಗೂ ಸಹ ಸೊರೊಸ್‌ ಧನಸಹಾಯ ಮಾಡಿದ.[೪೫] ಸೊರೊಸ್‌ನಿಂದ ಧನಸಹಾಯವನ್ನು ಸ್ವೀಕರಿಸಿದ ಮಾದಕವಸ್ತು ನಿರಪರಾಧೀಕರಣದ ಗುಂಪುಗಳ ಪೈಕಿ ಲಿಂಡೆಸ್ಮಿತ್‌ ಸೆಂಟರ್‌ ಮತ್ತು ಡ್ರಗ್‌ ಪಾಲಿಸಿ ಫೌಂಡೇಷನ್‌ ಸೇರಿವೆ.[೪೬]

2008ರಲ್ಲಿ ಬಂದ ಕ್ಯಾಲಿಫೋರ್ನಿಯಾದ ಪ್ರಪೋಸಿಷನ್‌ 5 ಎಂಬ ಒಂದು ವಿಫಲಗೊಂಡ ಜನಮತ ಸಂಗ್ರಹವನ್ನು ಬೆಂಬಲಿಸುವುದಕ್ಕಾಗಿದ್ದ ಪ್ರಚಾರದ ಪ್ರಯತ್ನಗಳಿಗೆ ಸೊರೊಸ್‌ 1.4 ದಶಲಕ್ಷ $ನಷ್ಟು ಮೊತ್ತದ ದೇಣಿಗೆಯನ್ನು ನೀಡಿದ. ಮಾದಕವಸ್ತು-ಸಂಬಂಧಿತ ಅಹಿಂಸಾತ್ಮಕ ಅಪರಾಧಗಳಿಂದಾಗಿ ತಪ್ಪಿತಸ್ಥರೆಂದು ನಿರ್ಣಯಿಸಲ್ಪಟ್ಟ ಜನರಿಗೆ ಸಂಬಂಧಿಸಿದಂತೆ, ಸೆರೆಮನೆಗೆ ಪರ್ಯಾಯ ವ್ಯವಸ್ಥೆಗಳಾಗಿ ಮಾದಕವಸ್ತು ಪುನರ್ವಸತಿ ಕಾರ್ಯಸೂಚಿಗಳನ್ನು ಈ ವಿಫಲಗೊಂಡ ಜನಮತ ಸಂಗ್ರಹದ ಕ್ರಮಗಳು ವಿಸ್ತರಿಸಲು ಸಾಧ್ಯವಿತ್ತು. [೨] Archived January 29, 2011[Date mismatch], ವೇಬ್ಯಾಕ್ ಮೆಷಿನ್ ನಲ್ಲಿ. [೪೭]

2009ರ ಅಕ್ಟೋಬರ್‌ನಲ್ಲಿ, ಸಂದರ್ಶನವೊಂದರಲ್ಲಿ ಸೊರೊಸ್‌ ನೀಡಿದ ಅಭಿಪ್ರಾಯಗಳ ಅನುಸಾರ, ಮರಿಜುವಾನಾ ಒಂದು ಕಡಿಮೆ ವ್ಯಸನಶೀಲ ವಸ್ತುವಾದರೂ ಸಹ, ಮಕ್ಕಳು ಹಾಗೂ ವಿದ್ಯಾರ್ಥಿಗಳು ಇದನ್ನು ಬಳಸುವುದು ಸೂಕ್ತವಲ್ಲ. ಸ್ವತಃ ಅವನೇ ಬಹಳ ವರ್ಷಗಳಿಂದ ಮರಿಜುವಾನಾವನ್ನು ಬಳಸಿಲ್ಲ.[೪೮]

ಮರಣ ಮತ್ತು ಸಾಯುವಿಕೆ

[ಬದಲಾಯಿಸಿ]

ಪ್ರಾಜೆಕ್ಟ್‌ ಆನ್‌ ಡೆತ್‌ ಇನ್‌ ಅಮೆರಿಕಾ ಎಂಬುದು ಓಪನ್‌ ಸೊಸೈಟಿ ಇನ್‌ಸ್ಟಿಟ್ಯೂಟ್‌ನ 2001ರಿಂದ 2003ರವರೆಗೆ ಸಕ್ರಿಯವಾಗಿದ್ದ ಯೋಜನೆಗಳ ಪೈಕಿ ಒಂದಾಗಿತ್ತು. "ಸಾಯುವಿಕೆ ಮತ್ತು ವಿಯೋಗಾವಸ್ಥೆಯ ಸಂಸ್ಕೃತಿ ಹಾಗೂ ಅನುಭವವನ್ನು ಅರ್ಥಮಾಡಿಕೊಳ್ಳುವುದರ ಹಾಗೂ ಮಾರ್ಪಡಿಸುವುದರ ಕಡೆಗೆ" ಇದು ಪ್ರಯತ್ನಿಸಿತು.[೪೯] 1994ರಲ್ಲಿ, ಸೊರೊಸ್‌ ತನ್ನ ಭಾಷಣವೊಂದರಲ್ಲಿ, ಹೆಮ್‌ಲಾಕ್‌ ಸೊಸೈಟಿಯ ಓರ್ವ ಸದಸ್ಯಳಾಗಿದ್ದ ತನ್ನ ತಾಯಿಯು ಆತ್ಮಹತ್ಯೆಯನ್ನು ಮಾಡಿಕೊಳ್ಳುವಲ್ಲಿ ಅವಳಿಗೆ ನೆರವಾಗುವ ಪ್ರಸ್ತಾವವನ್ನು ಮುಂದಿಟ್ಟಿದ್ದಾಗಿ ಹೇಳಿಕೊಂಡ.[೫೦] ಅದೇ ಭಾಷಣದಲ್ಲಿ ಆತ, ತಾನು ಧನಸಹಾಯ ಮಾಡಿದ್ದ ಗೌರವಯುತವಾದ ಸಾವಿನ ಕುರಿತಾದ ಒರೆಗಾಂವ್‌ ಕಾಯಿದೆ[೫೧] ಕುರಿತೂ ತನ್ನ ಅನುಮೋದನೆಯನ್ನು ತಿಳಿಸಿದ.[೫೨]

ತತ್ವಚಿಂತನೆ

[ಬದಲಾಯಿಸಿ]

ಶಿಕ್ಷಣ ಮತ್ತು ನಂಬಿಕೆಗಳು

[ಬದಲಾಯಿಸಿ]

ತತ್ತ್ವಶಾಸ್ತ್ರದಲ್ಲಿ ಸೊರೊಸ್‌ ಒಂದು ಆಳವಾದ ಆಸಕ್ತಿಯನ್ನು ಹೊಂದಿದ್ದಾನೆ, ಮತ್ತು ಓರ್ವ ದಾರ್ಶನಿಕನಾಗಿ ತನ್ನನ್ನು ತಾನು ಬೆಂಬಲಿಸಿಕೊಳ್ಳಲು ಸಮರ್ಥನಾಗುವಲ್ಲಿ ತಾನು ಹಣಕಾಸು ವಲಯವನ್ನು ಪ್ರವೇಶಿಸಿದುದಾಗಿಯೂ ಆತ ಹೇಳಿಕೊಂಡಿದ್ದಾನೆ. ಸೊರೊಸ್‌ನ ತಾತ್ತ್ವಿಕ ದೃಷ್ಟಿಕೋನವು ಕಾರ್ಲ್‌ ಪೊಪ್ಪರ್‌‌ನಿಂದ ಪ್ರಭಾವಿತಗೊಂಡಿದ್ದು, ಇವನ ನೇತೃತ್ವದಡಿಯಲ್ಲೇ ಸೊರೊಸ್‌ ಲಂಡನ್‌ ಸ್ಕೂಲ್‌ ಆಫ್‌ ಇಕನಾಮಿಕ್ಸ್‌‌‌ನಲ್ಲಿ (LSE) ತನ್ನ ಅಧ್ಯಯನವನ್ನು ನಡೆಸಿದ್ದ. ಪೊಪ್ಪರ್‌‌ನ ಎರಡು ಸಂಪುಟಗಳ ಪುಸ್ತಕವಾದ ದಿ ಓಪನ್‌ ಸೊಸೈಟಿ ಅಂಡ್‌ ಇಟ್ಸ್‌ ಎನಿಮೀಸ್‌‌‌ ನ ಹೆಸರಿನ ಪ್ರೇರಣೆಯಿಂದಲೇ ಅವನ ಓಪನ್‌ ಸೊಸೈಟಿ ಇನ್‌ಸ್ಟಿಟ್ಯೂಟ್‌ ಹೆಸರಿಸಲ್ಪಟ್ಟಿದೆ, ಮತ್ತು ತಪ್ಪುಮಾಡುವ ಸಂಭವನೀಯತೆಯ (ತಾನು ನಂಬುವ ಯಾವುದೇ ವಿಷಯವೂ ವಾಸ್ತವದಲ್ಲಿ ತಪ್ಪಾಗಿರಬಹುದು. ಆದ್ದರಿಂದ ಅದನ್ನು ಪ್ರಶ್ನಿಸಬೇಕು ಹಾಗೂ ಸುಧಾರಿಸಬೇಕು ಎಂಬ ತತ್ತ್ವ) ತತ್ತ್ವದ ಕುರಿತಾದ ಸೊರೊಸ್‌ನ ಚಾಲ್ತಿಯಲ್ಲಿರುವ ತಾತ್ತ್ವಿಕ ಬದ್ಧತೆಯು ಪೊಪ್ಪರ್‌‌ನ ತತ್ತ್ವದಿಂದ ಆವಿರ್ಭವಿಸಿದೆ. 60 ಮಿನಿಟ್ಸ್‌ ಜೊತೆಗಿನ ಸಂದರ್ಶನವೊಂದರಲ್ಲಿ, ತಾನು ದೇವರನ್ನು ನಂಬುವುದಿಲ್ಲ ಎಂದು ಸೊರೊಸ್‌ ಹೇಳಿಕೊಂಡ.[೫೩]

ಆತ್ಮಾರ್ಥಕತೆ, ಹಣಕಾಸು ಮಾರುಕಟ್ಟೆಗಳು, ಮತ್ತು ಆರ್ಥಿಕ ಸಿದ್ಧಾಂತ

[ಬದಲಾಯಿಸಿ]

ಆತ್ಮಾರ್ಥಕತೆಯ ಪರಿಕಲ್ಪನೆಯ ಮೇಲೆ ಸೊರೊಸ್‌ನ ಬರಹಗಳು ಅತೀವವಾಗಿ ಗಮನಹರಿಸುತ್ತವೆ. ಮಾರುಕಟ್ಟೆಯ ವ್ಯವಹಾರಗಳೊಳಗೆ ಪ್ರವೇಶಿಸುವ ವ್ಯಕ್ತಿಗಳ ಪೂರ್ವಗ್ರಹಗಳು ಆರ್ಥಿಕತೆಯ ಮೂಲಭೂತ ತತ್ತ್ವಗಳ ಗ್ರಹಿಕೆಯನ್ನು ಸಮರ್ಥವಾಗಿ ಬದಲಾಯಿಸುವುದು ಇಲ್ಲಿ ಕಂಡುಬರುತ್ತದೆ. ಸೊರೊಸ್‌ ವಾದಿಸುವ ಪ್ರಕಾರ, ಅರ್ಥಿಕತೆಯ ಆಧಾರತತ್ತ್ವಗಳ ಗ್ರಹಿಕೆಗಳಲ್ಲಿನ ಇಂಥ ಪರಿವರ್ತನೆಗಳು ಸಮತೋಲನಕ್ಕಿಂತ ಹೆಚ್ಚಾಗಿ ಅಸಮತೋಲನದಿಂದ ವಿಶಿಷ್ಟವಾದ ರೀತಿಯಲ್ಲಿ ಗುರುತಿಸಲ್ಪಡುತ್ತವೆ, ಮತ್ತು ಮಾರುಕಟ್ಟೆಯ ('ಸಮರ್ಥ ಮಾರುಕಟ್ಟೆ ಊಹಾಸಿದ್ಧಾಂತ') ಸಾಂಪ್ರದಾಯಿಕ ಆರ್ಥಿಕ ಸಿದ್ಧಾಂತವು ಈ ಸನ್ನಿವೇಶಗಳಲ್ಲಿ ಅನ್ವಯವಾಗುವುದಿಲ್ಲ. ಚಲನಶೀಲ ಅಸಮತೋಲನ , ಸ್ಥಿರ ಅಸಮತೋಲನ , ಮತ್ತು ಸಮತೋಲನಕ್ಕೆ-ಸಮೀಪವಿರುವ ಸನ್ನಿವೇಶಗಳ ಪರಿಕಲ್ಪನೆಗಳನ್ನು ಸೊರೊಸ್‌ ಜನಪ್ರಿಯಗೊಳಿಸಿದ್ದಾನೆ.[೧೯]

ಆತ್ಮಾರ್ಥಕತೆಯು ಮೂರು ಮುಖ್ಯ ಪರಿಕಲ್ಪನೆಗಳನ್ನು ಅವಲಂಬಿಸಿದೆ:[೧೯]

  1. ಹೂಡಿಕೆದಾರನ ಪೂರ್ವಗ್ರಹವು ಹೂಡಿಕೆಯ ಕಾರ್ಯಕ್ಷೇತ್ರದಾದ್ಯಂತ ಬೆಳೆಯುವ ಮತ್ತು ಹರಡಿಕೊಳ್ಳುವ ವಿಶೇಷ ಸನ್ನಿವೇಶಗಳ ಅಡಿಯಲ್ಲಿ ಆತ್ಮಾರ್ಥಕತೆಯು ಅತ್ಯುತ್ತಮವಾಗಿ ಕಂಡುಬರುತ್ತದೆ. ಈ ಪೂರ್ವಗ್ರಹವು ಹುಟ್ಟಿಕೊಳ್ಳಲು ಕಾರಣವಾಗಬಹುದಾದ ಅಂಶಗಳ ಉದಾಹರಣೆಗಳಲ್ಲಿ ಇವು ಸೇರಿವೆ: (ಎ) ಇಕ್ವಿಟಿಯ ಹತೋಟಿಯಿಟ್ಟುಕೊಳ್ಳುವಿಕೆ ಅಥವಾ (ಬಿ) ಪ್ರವೃತ್ತಿ-ಅನುಸರಿಸುವ ಸಟ್ಟಾ ವ್ಯಾಪಾರಿಗಳ ಅಭ್ಯಾಸಗಳು.
  2. ಆತ್ಮಾರ್ಥಕತೆಯು ನಿರ್ದಿಷ್ಟ ಸನ್ನಿವೇಶಗಳಡಿಯಲ್ಲಿ ಹೊರಗೆಡಹಲ್ಪಡುವ ಸಂಭವನೀಯತೆ ಇರುತ್ತದೆಯಾದ್ದರಿಂದ, ಅದು ಬಿಟ್ಟುಬಿಟ್ಟು ಬರುವಂತೆ ಕಾಣಿಸಿಕೊಳ್ಳುತ್ತದೆ; ಅಂದರೆ, ಸಮತೋಲನ ಪ್ರಕ್ರಿಯೆಯ ಲಕ್ಷಣವು ಸಂಭವನೀಯತೆಗಳ ಪರಿಭಾಷೆಯಲ್ಲಿ ಅತ್ಯುತ್ತಮವಾಗಿ ಪರಿಗಣಿಸಲ್ಪಡುತ್ತದೆ.
  3. ಬಂಡವಾಳ ಮಾರುಕಟ್ಟೆಗಳ ಕುರಿತಾದ ಹೂಡಿಕೆದಾರರ ವೀಕ್ಷಣೆ ಹಾಗೂ ಬಂಡವಾಳ ಮಾರುಕಟ್ಟೆಗಳಲ್ಲಿನ ಅವರ ಸಹಯೋಗವು ಕೆಲವೊಮ್ಮೆ ಮೌಲ್ಯನಿರ್ಣಯಗಳು ಮತ್ತು ಮೂಲಭೂತ ಸನ್ನಿವೇಶಗಳು ಅಥವಾ ಫಲಿತಾಂಶಗಳ ಮೇಲೆ ಪ್ರಭಾವ ಬೀರಬಹುದು.

ಗೃಹನಿರ್ಮಾಣ ಮಾರುಕಟ್ಟೆಗಳ ಸಾಲ ಮತ್ತು ಇಕ್ವಿಟಿ ಸನ್ನಿವೇಶವು ಆಧುನಿಕ ಹಣಕಾಸು ಮಾರುಕಟ್ಟೆಗಳಲ್ಲಿನ ಆತ್ಮಾರ್ಥಕತೆಯ ಒಂದು ಪ್ರಸಕ್ತ ಉದಾಹರಣೆಯಾಗಿದೆ. 1990ರ ದಶಕದಲ್ಲಿ, ಮನೆಗಳನ್ನು ಕೊಳ್ಳಲು ಅನುವಾಗುವಂತೆ ಹೆಚ್ಚಿನ ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣವು ಲಭ್ಯವಾಗುವಂತೆ ಮಾಡಲು ಸಾಲಗಾರರು ಶುರುಮಾಡಿಕೊಂಡರು. ಈ ಬೃಹತ್‌ ಮೊತ್ತದ ಹಣದೊಂದಿಗೆ ಹೆಚ್ಚು ಜನರು ಮನೆಗಳನ್ನು ಖರೀದಿಸಿದರು. ಹೀಗಾಗಿ ಈ ಮನೆಗಳ ಬೆಲೆಗಳು ಹೆಚ್ಚಾಗುತ್ತಾ ಹೋದವು. ಸಾಲಗಾರರು ತಮ್ಮ ಆಯವ್ಯಯ ಪಟ್ಟಿಗಳನ್ನು ಅವಲೋಕಿಸಿದಾಗ, ತಾವು ಹೆಚ್ಚಿನ ಪ್ರಮಾಣದಲ್ಲಿ ಸಾಲಗಳನ್ನು ನೀಡಿರುವುದಷ್ಟೇ ಅವರಿಗೆ ಕಂಡುಬರದೆ, ಸಾಲಗಳಿಗೆ ಪೂರಕವಾಗಿ ನಿಂತ ಅವುಗಳ ಇಕ್ವಿಟಿ- ಅಂದರೆ ಮನೆಗಳ ಮೌಲ್ಯವು ಕೂಡಾ ಮೇಲೆ ಏರಿರುವುದು ಕಂಡುಬಂತು (ಏಕೆಂದರೆ, ಅದೇ ಪ್ರಮಾಣದ ಗೃಹನಿರ್ಮಾಣಕ್ಕೆ ಹೆಚ್ಚಿನ ಹಣವು ತುಲನಾತ್ಮಕವಾಗಿ ಹಿಂಬಾಲಿಸಿಕೊಂಡು ಬರುತ್ತಿತ್ತು). ಈ ರೀತಿಯಲ್ಲಿ ಅವರು ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ಸಾಲ ನೀಡಿದರು. ಏಕೆಂದರೆ ಅವರ ಆಯವ್ಯಯ ಪಟ್ಟಿಗಳು ಚೆನ್ನಾಗಿ ಕಂಡಿದ್ದವು, ಮತ್ತು ಬೆಲೆಗಳು ಮೇಲೇರಿದ್ದವು, ಮತ್ತು ಅವರು ಮತ್ತಷ್ಟು ಸಾಲ ನೀಡಿದರು. ಸಾರ್ವಜನಿಕ ಕಾರ್ಯನೀತಿಯಿಂದಾಗಿ ಇದು ಮತ್ತಷ್ಟು ವರ್ಧಿಸಿತು ಮನೆಯ ಮಾಲೀಕತ್ವವನ್ನು ಅನೇಕ ಸರ್ಕಾರಗಳು ಒಂದು ಗುಣಾತ್ಮಕ ಫಲಿತಾಂಶವಾಗಿ ನೋಡುತ್ತವೆ ಮತ್ತು ಆದ್ದರಿಂದ ಮೊದಲ ಮನೆಯ ಮಾಲೀಕರಿಗೆ ಮಾಡುವ ಸಾಲನೀಡಿಕೆ ಹಾಗೂ ಇತರ ಹಣಕಾಸು ಸಹಾಯಧನಗಳು - ಅಥವಾ ಮೂಲಧನ ಲಾಭಗಳ ತೆರಿಗೆ ವಿಧಿಸುವಿಕೆಯಿಂದ ಒಂದು ಮೊದಲಿನ ಮನೆಗೆ ವಿನಾಯಿತಿ ನೀಡುವಂಥ, ಮನೆಯೊಂದನ್ನು ಕೊಳ್ಳಲು ಇರುವ ಪ್ರಭಾವಗಳು - ಅರ್ಥೈಸುವುದೇನೆಂದರೆ ಮನೆಯ ಖರೀದಿಗಳನ್ನು ಒಂದು ಒಳ್ಳೆಯ ಸಂಗತಿಯಂತೆ ಕಾಣಲಾಗುತ್ತಿತ್ತು. ಬೆಲೆಗಳು ಕ್ಷಿಪ್ರವಾಗಿ ಹೆಚ್ಚಳಗೊಂಡವು, ಮತ್ತು ಸಾಲನೀಡಿಕೆಯ ಮಾನದಂಡಗಳು ಸಡಿಲಗೊಂಡವು. ಆತ್ಮಾರ್ಥಕತೆಗೆ ಸಂಬಂಧಿಸಿದ ಎದ್ದುಕಾಣುವ ನೀಡಿಕೆಯೆಂದರೆ, ಕಾಲದ ಮೇಲೆ ಮಾರುಕಟ್ಟೆಗಳು ಏಕೆ ಪರಿಭ್ರಮಿಸುತ್ತವೆ, ಮತ್ತು ಸಮತೋಲನಕ್ಕೆ ಸುಮ್ಮನೇ ಅಂಟಿಕೊಳ್ಳದೆಯೇ ಗುರಿಮೀರಿ ಸಾಗುವಲ್ಲಿನ ಅಥವಾ ಗುರಿಗೆ ತಲುವುದಕ್ಕೆ ಮುಂಚಿತವಾಗಿಯೇ ಇಳಿದುಬಿಡುವ ಪ್ರವೃತ್ತಿಯನ್ನು ಅವು ಏಕೆ ಹೊಂದಿರುತ್ತವೆ ಎಂಬುದನ್ನು ಇದು ವಿವರಿಸುತ್ತದೆ.[೧೯]

ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿನ ಸಂಭಾವ್ಯ ಸಮಸ್ಯೆಗಳ ನೋಟ

[ಬದಲಾಯಿಸಿ]

ಓರ್ವ ಹೂಡಿಕೆದಾರ ಮತ್ತು ಹಣ ಚಲಾವಣೆಯ ಸಟ್ಟಾ ವ್ಯಾಪಾರಿಯಾಗಿ ಕೆಲಸ ಮಾಡುತ್ತಿರುವುದರ ಹೊರತಾಗಿಯೂ, ಹಣಕಾಸಿನ ಸಟ್ಟಾ ವ್ಯಾಪಾರದ ಸದ್ಯದ ವ್ಯವಸ್ಥೆಯು ಅನೇಕ ಹಿಂದುಳಿದ ದೇಶಗಳಲ್ಲಿನ ಆರೋಗ್ಯಕರ ಆರ್ಥಿಕ ಬೆಳವಣಿಗೆಯನ್ನು ಒಳಗೊಳಗೇ ಶಿಥಿಲಗೊಳಿಸುತ್ತದೆ ಎಂದು ಸೊರೊಸ್‌ ವಾದಿಸುತ್ತಾನೆ. ವಿಶ್ವದ ಅನೇಕ ಸಮಸ್ಯೆಗಳಿಗೆ ಮಾರುಕಟ್ಟೆಯ ಮೂಲಭೂತವಾದ ಎಂದು ತನ್ನಿಂದ ವಿವರಿಸಲ್ಪಟ್ಟಿರುವ ಸ್ಥಿತಿಯಲ್ಲಿ ಅಂತರ್ಗತವಾಗಿರುವ ವೈಫಲ್ಯಗಳೇ ಕಾರಣ ಎಂದು ಸೊರೊಸ್‌ ಹೇಳುತ್ತಾನೆ. ಜಾಗತೀಕರಣದ ಹಲವು ಮಗ್ಗುಲುಗಳೆಡೆಗಿನ ಅವನ ಪ್ರತಿರೋಧವು ಅವನನ್ನು ಓರ್ವ ವಿವಾದಾತ್ಮಕ ವ್ಯಕ್ತಿಯನ್ನಾಗಿಸಿವೆ.

ವಿಕ್ಟರ್‌ ನೀಡೆರ್‌ಹಾಫ್ಟರ್‌‌ ಎಂಬಾತ ಸೊರೊಸ್‌ ಕುರಿತು ಹೀಗೆ ಹೇಳಿದ್ದಾನೆ: "ಎಲ್ಲಕ್ಕಿಂತ ಹೆಚ್ಚಾಗಿ, ಸಮ್ಮಿಶ್ರ ಆರ್ಥಿಕತೆಯೊಂದರಲ್ಲಿಯೂ ಸಹ ಒಂದು ಬಲವಾದ ಕೇಂದ್ರೀಯ ಅಂತರರಾಷ್ಟ್ರೀಯ ಸರ್ಕಾರದೊಂದಿಗಿನ ಓರ್ವರು ಮಿತಿಮೀರಿದ ಸ್ವಂತ-ಹಿತಾಸಕ್ತಿಯನ್ನು ಸರಿಪಡಿಸಬೇಕು ಎಂಬುದು ಜಾರ್ಜ್‌ನ ನಂಬಿಕೆಯಾಗಿತ್ತು."

ಮಾರುಕಟ್ಟೆಯಲ್ಲಿ ಓರ್ವ ಸಹಭಾಗಿಯಾಗಿರುವುದರ ಹಾಗೂ ಮಾರುಕಟ್ಟೆಯ ಸಹಯೋಗಿಗಳು ಅನುಸರಿಸಬೇಕಾದ ನಿಯಮಗಳನ್ನು ಬದಲಿಸಲು ಕೆಲಸ ಮಾಡುವುದರ ನಡುವೆ ಒಂದು ವ್ಯತ್ಯಾಸವನ್ನು ನಿರೂಪಿಸಬೇಕೆಂಬುದನ್ನು ಸೊರೊಸ್‌ ಪ್ರತಿಪಾದಿಸುತ್ತಾನೆ. 1981ರ ಜುಲೈನಿಂದ 2003ರವರೆಗೆ ಮಲೇಷಿಯಾದ ಪ್ರಧಾನ ಮಂತ್ರಿಯಾಗಿದ್ದ ಮಹಾತಿರ್‌ ಬಿನ್‌ ಮೊಹಮದ್‌ ಪ್ರಕಾರ, ಥಾಯ್‌ ಹಣವು ತನ್ನ ಹಿಡಿಕೆಯನ್ನು US ಡಾಲರಿಗೆ ಸಡಿಲಬಿಟ್ಟಾಗ 1997ರಲ್ಲಿ ಪೂರ್ವ ಏಷ್ಯಾದ ಮಾರುಕಟ್ಟೆಗಳ ಆರ್ಥಿಕ ನಷ್ಟಕ್ಕೆ ಸಂಬಂಧಿಸಿದಂತೆ ಸೊರೊಸ್‌ - ಕ್ವಾಂಟಂನ ಹೆಡ್ಜ್‌ ಫಂಡ್‌ ಮುಖ್ಯಸ್ಥನಾಗಿ - ಪ್ರಾಯಶಃ ಭಾಗಶಃವಾಗಿ ಜವಾಬ್ದಾರನಾಗಿದ್ದ. ಮಹಾತಿರ್ ಅನುಸಾರ‌, ನಷ್ಟಕ್ಕೆ ಕಾರಣವಾದ ಮೂರು ವರ್ಷಗಳಲ್ಲಿ, ಪೂರ್ವ ಏಷ್ಯಾದ ಸ್ಟಾಕ್‌ ಮಾರುಕಟ್ಟೆಗಳು ಹಾಗೂ ಸ್ಥಿರಾಸ್ತಿಗಳಲ್ಲಿನ ಅಲ್ಪಾವಧಿಯ ಸಟ್ಟಾವ್ಯಾಪಾರದ ಹೂಡಿಕೆಯಲ್ಲಿ ಸೊರೊಸ್‌ ಹಣಹೂಡಿಕೆ ಮಾಡಿದ, ಆಮೇಲೆ ಹಣದ ಅಪಮೌಲ್ಯೀಕರಣದ ಮೊದಲ ಸೂಚನೆಗಳು ಸಿಗುತ್ತಿದ್ದಂತೆ "ಅನುಚಿತವಾದ ತರಾತುರಿ"ಯೊಂದಿಗೆ ಅವನು ಅದನ್ನು ಪರಭಾರೆ ಮಾಡಿದ.[೫೪] ಇದಕ್ಕೆ ಉತ್ತರಿಸಿದ ಸೊರೊಸ್‌, "ಮಹಾತಿರ್‌ ಸ್ವತಃ ತಾನೇ ಮಾಡಿದ ತಪ್ಪುಗಳಿಗಾಗಿ ತನ್ನನ್ನು ಒಂದು ಬಲಿಪಶುವಾಗಿ ಬಳಸುತ್ತಿದ್ದಾನೆ" ಎಂದು ಹೇಳುತ್ತಾ, ಹಣ ಚಲಾವಣಾ ವ್ಯಾಪಾರವನ್ನು (ಇದನ್ನು ಮಲೇಷಿಯಾದ ಹಣಕಾಸು ಇಲಾಖೆಯ ಅಧಿಕಾರಿಗಳು ತರಾತುರಿಯಿಂದ ಹಿಂದಕ್ಕೆಳೆದುಕೊಂಡರು) ನಿಷೇಧಿಸುವುದಾಗಿ ಮಹಾತಿರ್‌ ನೀಡಿದ ಭರವಸೆಗಳು "ದುರ್ಘಟನೆಗೆ ಸಂಬಂಧಿಸಿದ ಒಂದು ಸೂತ್ರದಂತಿದ್ದವು" ಮತ್ತು ಮಹಾತಿರ್‌ "ತನ್ನದೇ ಸ್ವಂತ ದೇಶಕ್ಕೆ ಓರ್ವ ಅಪಾಯಕಾರಿ ವ್ಯಕ್ತಿಯಾಗಿದ್ದಾನೆ" ಎಂದು ತಿಳಿಸಿದ.[೫೫]

2008ರ ಆರ್ಥಿಕ ಬಿಕ್ಕಟ್ಟಿಗೆ ಸಂಬಂಧಿಸಿದ ಸಂದರ್ಶನವೊಂದರಲ್ಲಿ, ಸೊರೊಸ್‌ ಇದನ್ನು 1930ರ ದಶಕದಿಂದೀಚೆಗಿನ ಅತ್ಯಂತ ಗಂಭೀರಸ್ವರೂಪದ ಬಿಕ್ಕಟ್ಟು ಎಂದು ಉಲ್ಲೇಖಿಸಿದ. ಸೊರೊಸ್‌ನ ಪ್ರಕಾರ‌, ಹಣಕಾಸಿನ ವ್ಯವಹಾರಗಳಲ್ಲಿ ಸರ್ಕಾರದ ಹಸ್ತಕ್ಷೇಪದ ಯಾವುದೇ ಅಗತ್ಯವಿಲ್ಲದೆಯೇ ಮಾರುಕಟ್ಟೆಗಳು ತಮ್ಮನ್ನು ತಾವು ಸರಿಪಡಿಸಿಕೊಳ್ಳುತ್ತವೆ ಎಂಬ ತನ್ನ ಕಲ್ಪನೆಯೊಂದಿಗಿನ ಮಾರುಕಟ್ಟೆ ಮೂಲಭೂತವಾದವು, "ಒಂದು ರೀತಿಯ ಸೈದ್ಧಾಂತಿಕ ಅತಿರೇಕ ಎನಿಸಿಕೊಳ್ಳುತ್ತದೆ". ಸೊರೊಸ್‌ನ ದೃಷ್ಟಿಕೋನದಲ್ಲಿ, ಮಾರುಕಟ್ಟೆಗಳ ಮನೋಧರ್ಮಗಳು - ಚಾಲ್ತಿಯಲ್ಲಿರುವ ಒಂದು ಪೂರ್ವಗ್ರಹ ಅಥವಾ ಆಶಾವಾದ/ನಿರಾಶಾವಾದದೊಂದಿಗೆ ವಾಸ್ತವತೆಯ ಕಡೆಗೆ ನೋಡುವ ಮಾರುಕಟ್ಟೆಗಳ ಒಂದು "ಮನೋಧರ್ಮ" - "ವಾಸ್ತವವಾಗಿ ತಮ್ಮನ್ನು ತಾವು ಬಲಪಡಿಸಿಕೊಳ್ಳಬಹುದು. ಇದರಿಂದಾಗಿ ಆರಂಭದಲ್ಲಿ ಸ್ವಯಂ-ಬಲಪಡಿಸಿಕೊಳ್ಳುವ ಆದರೆ ಅಂತಿಮವಾಗಿ ಸಮರ್ಥನೀಯವಾಗಲಾರದ ಮತ್ತು ಸ್ವಯಂ-ಸೋಲುಣ್ಣುವ ಉತ್ಕರ್ಷ/ಹಠಾತ್‌ ಕುಸಿತದ ಸನ್ನಿವೇಶಗಳು ಅಥವಾ ಭ್ರಮೆಗಳು ಅಲ್ಲಿ ಕಂಡುಬರುತ್ತವೆ".

ಯೆಹೂದ್ಯ ಪಕ್ಷಪಾತ-ವಿರೋಧಿ ನೀತಿಯ ಕುರಿತಾದ ದೃಷ್ಟಿಕೋನಗಳು

[ಬದಲಾಯಿಸಿ]

2003ರ ನವೆಂಬರ್‌ 5ರಂದು ನ್ಯೂಯಾರ್ಕ್‌ ನಗರದಲ್ಲಿನ ಯೆಹೂದ್ಯ ಮತದ ಒಂದು ವೇದಿಕೆಯಲ್ಲಿ, ಯೆಹೂದ್ಯ ಪಕ್ಷಪಾತ-ವಿರೋಧಿ ನೀತಿಯ ಇತ್ತೀಚಿನ ಒಂದು ಪುನರ್ಜಾಗೃತಿಗೆ, ಭಾಗಶಃವಾಗಿ ಇಸ್ರೇಲ್ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಕಾರ್ಯನೀತಿಗಳು, ಮತ್ತು ತನ್ನಂಥ ಯಶಸ್ವೀ ಯೆಹೂದಿಗಳು ಕಾರಣ ಎಂದು ಸೊರೊಸ್‌ ಹೇಳಿದ:

ಯುರೋಪ್‌ನಲ್ಲಿ ಯೆಹೂದ್ಯ ಪಕ್ಷಪಾತ-ವಿರೋಧಿ‌ ನೀತಿಯ ಒಂದು ಪುನರ್ಜಾಗೃತಿ ಕಂಡುಬಂದಿದೆ. ಬುಷ್‌ ಆಡಳಿತ ಹಾಗೂ ಷರೋನ್‌ ಆಡಳಿತದ ಕಾರ್ಯನೀತಿಗಳು ಇದಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿವೆ. ನಿರ್ದಿಷ್ಟವಾಗಿ ಇದು ಯೆಹೂದ್ಯ ಪಕ್ಷಪಾತ-ವಿರೋಧಿ ನೀತಿಯಾಗಿಲ್ಲದಿದ್ದರೂ, ಇದು ಸ್ವತಃ ತನ್ನನ್ನು ಯೆಹೂದ್ಯ ಪಕ್ಷಪಾತ-ವಿರೋಧಿಯಾಗಿ ವೇಷಧರಿಸುತ್ತದೆ. ಆ ಕಾರ್ಯನೀತಿಗಳು ಕುರಿತು ವಿಮರ್ಶಾತ್ಮಕ ದೃಷ್ಟಿಕೋನವನ್ನು ಹೊಂದಿರುವೆ... ಒಂದು ವೇಳೆ ಆ ದಿಕ್ಕನ್ನು ನಾವು ಬದಲಿಸಿದ್ದೇ ಆದಲ್ಲಿ, ಆಗ ಯೆಹೂದ್ಯ ಪಕ್ಷಪಾತ-ವಿರೋಧಿ ನೀತಿಯೂ ಸಹ ಕಣ್ಮರೆಯಾಗುತ್ತದೆ. ಇದನ್ನು ಓರ್ವರು ಹೇಗೆ ನೇರವಾಗಿ ಎದುರಿಸಬಲ್ಲರು ಎಂಬುದು ನನಗೆ ಕಾಣುತ್ತಿಲ್ಲ... ಯೆಹೂದಿಗಳು ಪ್ರಪಂಚವನ್ನು ಆಳುತ್ತಾರೆ ಎಂಬುದನ್ನು ಹೊಸ ಯೆಹೂದ್ಯ ಪಕ್ಷಪಾತ-ವಿರೋಧಿ ನೀತಿಯು ಎತ್ತಿಹಿಡಿಯುವುದರಿಂದ, ನನ್ನದೇ ಆದ ಪಾತ್ರದ ಕುರಿತು ನಾನೂ ಸಹ ತುಂಬಾ ಆಸ್ಥೆ ವಹಿಸಿರುವೆ... ನನ್ನ ಕ್ರಿಯೆಗಳ ಒಂದು ಉದ್ದೇಶಿಸಿರದ ಪರಿಣಾಮದ ರೂಪದಲ್ಲಿ... ನಾನೂ ಸಹ ಆ ಪರಿಕಲ್ಪನೆಗೆ ಕೊಡುಗೆ ನೀಡುವೆ.[೫೬]

ದಿ ನ್ಯೂಯಾರ್ಕ್‌ ರಿವ್ಯೂ ಆಫ್‌ ಬುಕ್ಸ್‌‌ ಗಾಗಿ ತರುವಾಯ ನೀಡಿದ ಲೇಖನವೊಂದರಲ್ಲಿ, ಸೊರೊಸ್‌ ಈ ರೀತಿಯಲ್ಲಿ ಒತ್ತು ನೀಡಿದ:

ಇಸ್ರೇಲ್‌ನ ಶತ್ರುಗಳಿಂದ ಹಬ್ಬಿಸಲ್ಪಟ್ಟಿರುವ ಮಿಥ್ಯಾಕಲ್ಪನೆಗಳಿಗೆ ನಾನು ಸಮ್ಮತಿ ಸೂಚಿಸುವುದಿಲ್ಲ ಮತ್ತು ಯೆಹೂದ್ಯ ಪಕ್ಷಪಾತ-ವಿರೋಧಿ ನೀತಿಗಾಗಿ ನಾನು ಯೆಹೂದಿಗಳನ್ನು ದೂಷಿಸುತ್ತಿಲ್ಲ. ಯೆಹೂದ್ಯ ಪಕ್ಷಪಾತ-ವಿರೋಧಿ ನೀತಿಯು ಇಸ್ರೇಲ್ ಜನ್ಮತಳೆದುದಕ್ಕೆ ಮುಂಚಿನಿಂದಲೂ ಇದೆ. ಇಸ್ರೇಲ್‌ನ ಕಾರ್ಯನೀತಿಗಳನ್ನಾಗಲೀ ಅಥವಾ ಆ ಕಾರ್ಯನೀತಿಗಳ ಟೀಕಾಕಾರರನ್ನಾಗಲೀ ಯೆಹೂದ್ಯ ಪಕ್ಷಪಾತ-ವಿರೋಧಿ ನೀತಿಗೆ ಹೊಣೆಗಾರರನ್ನಾಗಿ ಮಾಡಬಾರದು. ಅದೇ ವೇಳೆಗೆ, ಇಸ್ರೇಲ್‌ ಕಡೆಗಿನ ವರ್ತನೆಗಳು ಇಸ್ರೇಲ್‌ನ ಕಾರ್ಯನೀತಿಗಳಿಂದ ಪ್ರಭಾವಿತಗೊಂಡಿವೆ ಎಂಬುದನ್ನಾಗಲೀ, ಮತ್ತು ಭಿನ್ನದಿಕ್ಕಿಗೆ ಸಾಗುವ ದೃಷ್ಟಿಕೋನಗಳನ್ನು ದಮನಮಾಡುವಲ್ಲಿನ ಇಸ್ರೇಲ್-ಪರವಾದ ವಶೀಲಿಯ ಯಶಸ್ಸಿನಿಂದ ಯೆಹೂದಿ ಸಮುದಾಯದೆಡೆಗಿನ ವರ್ತನೆಗಳು ಪ್ರಭಾವಿತಗೊಂಡಿವೆ ಎಂಬುದನ್ನಾಗಲೀ ನಾನು ನಂಬುವುದಿಲ್ಲ.[೫೭]

ಸಂಪತ್ತು

[ಬದಲಾಯಿಸಿ]

...US$೧೩.೦ billionನಷ್ಟು ನಿವ್ವಳ ಗಳಿಕೆಯ ಅಂದಾಜಿನೊಂದಿಗೆ ಫೋರ್ಬ್ಸ್‌ ನಿಯತಕಾಲಿಕವು ಸೊರೊಸ್‌ನನ್ನು ವಿಶ್ವದಲ್ಲಿನ 29ನೇ-ಅತ್ಯಂತ ಶ್ರೀಮಂತ ವ್ಯಕ್ತಿಯನ್ನಾಗಿ ಪಟ್ಟಿಮಾಡಿದೆ. 1979ರಿಂದೀಚೆಗೆ ಹಲವಾರು ಉದ್ದೇಶಗಳಿಗಾಗಿ ಸೊರೊಸ್‌ 7 ಶತಕೋಟಿ $ನಷ್ಟು ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾನೆ.[೫೮]

ಹಂಗರಿಯ ರಾಜಕೀಯದೊಂದಿಗಿನ ಸಂಬಂಧ

[ಬದಲಾಯಿಸಿ]

1980ರ ದಶಕದಲ್ಲಿ, ವಿಕ್ಟರ್‌ ಓರ್ಬಾನ್‌ -ಫಿಡೆಸ್ಜ್‌ನ ಸಭಾಪತಿ (1994–2000, 2000-) ಮತ್ತು ಪ್ರಧಾನ ಮಂತ್ರಿ (1998–2002) - ಹಾಗೂ ಲಾಸ್‌ಜ್ಲೊ ಕೊವೆರ್‌ - ಫಿಡೆಸ್ಜ್‌ನ ಸಭಾಪತಿ (2000) ಮತ್ತು ಗುಪ್ತಚರ ಸೇವಾ ಸಚಿವ (1998–2002) - ಇವರುಗಳು ಸೊರೊಸ್‌ ವಿದ್ವತ್‌ ವೈಶಿಷ್ಟ್ಯದ ಪುರಸ್ಕಾರಗಳ ಭಾಜನರಾಗಿದ್ದರು. ಇಷ್ಟೇ ಅಲ್ಲದೇ, ಓರ್ಬಾನ್‌ ಸಂಪುಟದ ಉಪ ಪ್ರಧಾನ ಮಂತ್ರಿಯಾಗಿದ್ದ ಇಸ್ಟ್‌ವಾನ್‌ ಸ್ಟುಂಪ್ಫ್‌ ಎಂಬಾತ, 1994 ಮತ್ತು 2002ರ ನಡುವಿನ ಅವಧಿಯಲ್ಲಿ ಸೊರೊಸ್‌ ಫೌಂಡೇಷನ್‌ನ ಧರ್ಮದರ್ಶಿಗಳ ಮಂಡಳಿಯ ಓರ್ವ ಸದಸ್ಯನಾಗಿದ್ದ. ಒಂದು ಪ್ರಾಸಂಗಿಕ ಮಾತಾಗಿ ಹೇಳುವುದಾದರೆ, ವಿಕ್ಟರ್‌ ಓರ್ಬಾನ್‌ ಓರ್ವ ವಿದ್ಯಾರ್ಥಿಯಾಗಿದ್ದ ಮತ್ತು ಇಸ್ಟ್‌ವಾನ್‌ ಸ್ಟುಂಪ್ಫ್‌ ವ್ಯವಸ್ಥಾಪಕನಾಗಿದ್ದ ಬಿಬೋ ಕಾಲೇಜು, ಸೊರೊಸ್‌ ಫೌಂಡೇಷನ್ ಸಂಸ್ಥಾಪಿಸಲ್ಪಟ್ಟ ವರ್ಷವಾದ 1983ರಲ್ಲಿಯೇ ಸ್ಥಾಪಿಸಲ್ಪಟ್ಟಿತು.

ಪುಸ್ತಕಗಳು

[ಬದಲಾಯಿಸಿ]

ಲೇಖಕನಾಗಿರುವುದು ಅಥವಾ ಸಹಲೇಖಕನಾಗಿರುವುದು

[ಬದಲಾಯಿಸಿ]
  • ದಿ ನ್ಯೂ ಪ್ಯಾರಡೈಮ್‌ ಫಾರ್‌ ಫೈನಾನ್ಷಿಯಲ್‌ ಮಾರ್ಕೆಟ್ಸ್‌: ದಿ ಕ್ರೆಡಿಟ್‌ ಕ್ರೈಸಿಸ್‌ ಆಫ್‌ 2008 ಅಂಡ್‌ ವಾಟ್‌ ಇಟ್‌ ಮೀನ್ಸ್‌ (ಪಬ್ಲಿಕ್ ಅಫೇರ್ಸ್‌, 2008). ISBN 1-58648-683-7
  • ದಿ ಏಜ್‌ ಆಫ್‌ ಫ್ಯಾಲಿಬಿಲಿಟಿ: ಕಾನ್ಸೀಕ್ವೆನ್ಸಸ್‌ ಆಫ್‌ ದಿ ವಾರ್‌ ಆನ್‌ ಟೆರರ್‌ (ಪಬ್ಲಿಕ್ ಅಫೇರ್ಸ್‌, 2006) ISBN 1-58648-359-5
  • MoveOn‌.org ಜೊತೆಯಲ್ಲಿ, ಮೂವ್‌ಆನ್‌'ಸ್‌ 50 ವೇಸ್‌ ಟು ಲವ್‌ ಯುವರ್‌ ಕಂಟ್ರಿ: ಹೌ ಟು ಫೈಂಡ್‌ ಯುವರ್‌ ಪೊಲಿಟಿಕಲ್‌ ವಾಯ್ಸ್‌ ಅಂಡ್‌ ಬಿಕಮ್‌ ಎ ಕೆಟಲಿಸ್ಟ್‌ ಫಾರ್‌ ಚೇಂಜ್‌ ಇನ್ನರ್ ಓಷನ್‌ ಪಬ್ಲಿಷಿಂಗ್‌, 2004 ISBN 1-930722-29-X
  • ದಿ ಬಬಲ್‌ ಆಫ್‌ ಅಮೆರಿಕನ್‌ ಸುಪ್ರಿಮೆಸಿ: ಕರೆಕ್ಟಿಂಗ್‌ ದಿ ಮಿಸ್ಯೂಸ್‌ ಆಫ್‌ ಅಮೆರಿಕನ್‌ ಪವರ್‌‌ (ಪಬ್ಲಿಕ್ ಅಫೇರ್ಸ್‌, 2003) ISBN 1-58648-217-3 (ಕಾಗದದ ಹೊದಿಕೆಯ ಪುಸ್ತಕ; ಪಬ್ಲಿಕ್ ಅಫೇರ್ಸ್‌, 2004; ISBN 1-58648-292-0)
  • ಜಾರ್ಜ್‌ ಸೊರೊಸ್‌ ಆನ್‌ ಗ್ಲೋಬಲೈಸೇಷನ್‌ (ಪಬ್ಲಿಕ್ ಅಫೇರ್ಸ್‌, 2002) ISBN 1-58648-125-8 (ಕಾಗದದ ಹೊದಿಕೆಯ ಪುಸ್ತಕ; ಪಬ್ಲಿಕ್ ಅಫೇರ್ಸ್‌, 2005; ISBN 1-52648-278-5)
  • ಓಪನ್‌ ಸೊಸೈಟಿ: ರಿಫಾರ್ಮಿಂಗ್‌ ಗ್ಲೋಬಲ್‌ ಕ್ಯಾಪಿಟಲಿಸಂ (ಪಬ್ಲಿಕ್ ಅಫೇರ್ಸ್‌, 2001) ISBN 1-58648-039-7
  • ಮಾರ್ಕ್‌ ಅಮೆಡಿಯಸ್‌ ನೊಟರ್ನೊ ಜೊತೆಯಲ್ಲಿ, ಸೈನ್ಸ್‌ ಅಂಡ್‌ ದಿ ಓಪನ್‌ ಸೊಸೈಟಿ: ದಿ ಫ್ಯೂಚರ್‌ ಆಫ್‌ ಕಾರ್ಲ್‌ ಪೊಪ್ಪರ್‌'ಸ್‌ ಫಿಲಾಸಫಿ (ಸೆಂಟ್ರಲ್‌ ಯುರೋಪಿಯನ್‌ ಯೂನಿವರ್ಸಿಟಿ ಪ್ರೆಸ್‌, 2000) ISBN 963-9116-69-6 (ಕಾಗದದ ಹೊದಿಕೆಯ ಪುಸ್ತಕ: ಸೆಂಟ್ರಲ್‌ ಯುರೋಪಿಯನ್‌ ಯೂನಿವರ್ಸಿಟಿ ಪ್ರೆಸ್‌, 2000; ISBN 943-9116-70-X)
  • ದಿ ಕ್ರೈಸಿಸ್‌ ಆಫ್‌ ಗ್ಲೋಬಲ್‌ ಕ್ಯಾಪಿಟಲಿಸಂ: ಓಪನ್‌ ಸೊಸೈಟಿ ಎಂಡೇಂಜರ್ಡ್‌ (ಪಬ್ಲಿಕ್ ಅಫೇರ್ಸ್‌, 1998) ISBN 1-891220-27-4
  • ಸೊರೊಸ್‌ ಆನ್‌ ಸೊರೊಸ್‌: ಸ್ಟೇಯಿಂಗ್‌ ಅಹೆಡ್‌ ಆಫ್‌ ದಿ ಕರ್ವ್‌ (ಜಾನ್‌ ವೈಲಿ, 1995) ISBN 0-471-12014-6 (ಕಾಗದದ ಹೊದಿಕೆಯ ಪುಸ್ತಕ; ವೈಲಿ, 1995; ISBN 0-371-11977-6)
  • ಅಂಡರ್‌ರೈಟಿಂಗ್‌ ಡೆಮಾಕ್ರಸಿ: ಎನ್‌ಕರೇಜಿಂಗ್‌ ಫ್ರೀ ಎಂಟರ್‌ಪ್ರೈಸ್‌ ಅಂಡ್‌ ಡೆಮಾಕ್ರಟಿಕ್‌ ರಿಫಾರ್ಮ್‌ ಅಮಾಂಗ್‌ ದಿ ಸೋವಿಯೆಟ್ಸ್‌ ಅಂಡ್‌ ಇನ್‌ ಈಸ್ಟರ್ನ್‌ ಯುರೋಪ್‌ (ಫ್ರೀ ಪ್ರೆಸ್‌, 1991) ISBN 0-02-930285-4 (ಕಾಗದದ ಹೊದಿಕೆಯ ಪುಸ್ತಕ; ಪಬ್ಲಿಕ್ ಅಫೇರ್ಸ್‌, 2004; ISBN 1-58948-227-0)
  • ಓಪನಿಂಗ್‌ ದಿ ಸೋವಿಯೆಟ್‌ ಸಿಸ್ಟಮ್‌ (ವೀಡನ್‌ಫ್ಲೆಡ್‌ & ನಿಕಲ್ಸನ್‌, 1990) ISBN 0-297-82155-9 (ಕಾಗದದ ಹೊದಿಕೆಯ ಪುಸ್ತಕ: ಪರ್ಷಿಯಸ್‌ ಬುಕ್ಸ್‌, 1996; ISBN 0-8133-1205-1)
  • ದಿ ಆಲ್ಕೆಮಿ ಆಫ್‌ ಫೈನಾನ್ಸ್‌ (ಸೈಮನ್‌ & ಷುಸ್ಟರ್‌, 1988) ISBN 0-671-66338-4 (ಕಾಗದದ ಹೊದಿಕೆಯ ಪುಸ್ತಕ: ವೈಲಿ, 2003; ISBN 0-471-44549-5)

ಜೀವನಚರಿತ್ರೆಗಳು

[ಬದಲಾಯಿಸಿ]
  • ಮೈಕೇಲ್‌ T. ಕೌಫ್‌ಮನ್‌ ಬರೆದಿರುವ ಸೊರೊಸ್‌: ದಿ ಲೈಫ್‌ ಅಂಡ್‌ ಟೈಮ್ಸ್‌ ಆಫ್‌ ಎ ಮೆಸ್ಸಿಯಾನಿಕ್‌ ಬಿಲಿಯನೇರ್‌‌ (ಆಲ್‌ಫ್ರೆಡ್‌ A. ಕ್ನೊಫ್‌, 2002) ISBN 0-375-40585-2
  • ರಾಬರ್ಟ್‌ ಸ್ಲೇಟರ್‌ ಬರೆದಿರುವ ಸೊರೊಸ್‌: ದಿ ವರ್ಲ್ಡ್ಸ್‌ ಮೋಸ್ಟ್‌ ಇನ್‌ಫ್ಲುಯೆನ್ಷಿಯಲ್‌ ಇನ್ವೆಸ್ಟರ್‌ (ಮೆಕ್‌ಗ್ರಾ-ಹಿಲ್‌ ಪ್ರೊಫೆಷನಲ್‌, 2009) ISBN 978-0-07-160844-2

ಪತ್ರಿಕೋದ್ಯಮ

[ಬದಲಾಯಿಸಿ]

ಲೇಖಕನಾಗಿರುವುದು

[ಬದಲಾಯಿಸಿ]

ಕುರಿತಾಗಿ

[ಬದಲಾಯಿಸಿ]

ವಿದ್ವತ್ಪೂರ್ಣ ದೃಷ್ಟಿಕೋನಗಳು

[ಬದಲಾಯಿಸಿ]
  • Bryant, C. G. A. (2002). "George Soros's theory of reflexivity: a comparison with the theories of Giddens and Beck and a consideration of its practical value". Economy and Society. 31 (1): 112–131. doi:10.1080/03085140120109277. {{cite journal}}: Cite has empty unknown parameters: |month= and |coauthors= (help)
  • Cross, R. (1997). "On George Soros and economic analysis". Kyklos. 50: 561–574. doi:10.1111/1467-6435.00030. {{cite journal}}: Cite has empty unknown parameter: |month= (help); Unknown parameter |coauthors= ignored (|author= suggested) (help)
  • Kwong, C.P. (2008). "Mathematical analysis of Soros's theory of reflexivity". arXiv:. 0901.4447. {{cite journal}}: Cite has empty unknown parameters: |month= and |coauthors= (help)CS1 maint: extra punctuation (link)
  • Pettis, Michael (2001). The Volatility Machine: Emerging Economies and the Threat of Financial Collapse. Oxford: Oxford University Press. ISBN 0195143302. {{cite book}}: Cite has empty unknown parameter: |coauthors= (help)
  • Stone, Diane (2007). "Market Principles, Philanthropic Ideals and Public Service Values: The Public Policy Program at the Central European University". PS: Political Science and Politics: 545–551. {{cite journal}}: Cite has empty unknown parameters: |month= and |coauthors= (help)

ಭಾಷಣಗಳು

[ಬದಲಾಯಿಸಿ]

ವ್ಯಾಖ್ಯಾನಗಳು

[ಬದಲಾಯಿಸಿ]

ಸಂದರ್ಶನಗಳು

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. Forbes World's Billionaires -#35 George Soros, Forbes, March 10, 2009
  2. Kaufman, Michael T., Soros: The Life and Times of a Messianic Billionaire, Alfred A. Knopf: 2002, 133.
  3. "ಆಥರ್ಸ್‌‌@ಗೂಗಲ್‌: ಜಾರ್ಜ್‌ ಸೊರೊಸ್‌". Archived from the original on ಅಕ್ಟೋಬರ್ 20, 2006. Retrieved ಮೇ 6, 2010.
  4. ವಿಲಿಯಂ ಷಾಕ್ರಾಸ್‌, "ಟರ್ನಿಂಗ್‌ ಡಾಲರ್ಸ್‌ ಇನ್‌ಟು ಚೇಂಜ್‌ಟ," Archived May 8, 2010[Date mismatch], ವೇಬ್ಯಾಕ್ ಮೆಷಿನ್ ನಲ್ಲಿ. ಟೈಮ್‌ ನಿಯತಕಾಲಿಕ, ಸೆಪ್ಟೆಂಬರ್‌ 1, 1997
  5. "ಮುಕ್ತ ವಿಶ್ವವಿದ್ಯಾಲಯ". Archived from the original on ಮೇ 28, 2010. Retrieved ಮೇ 6, 2010.
  6. ೬.೦ ೬.೧ "ದಿ ಅಟ್ಲಾಂಟಿಕ್‌". Archived from the original on ಡಿಸೆಂಬರ್ 2, 2008. Retrieved ಜುಲೈ 20, 2021.
  7. http://www.encyclopedia.com/doc/1G1-79165556.html
  8. ೮.೦ ೮.೧ ಕೌಫ್‌ಮನ್‌, ಮೈಕೇಲ್‌ T., ಸೊರೊಸ್‌: ದಿ ಲೈಫ್‌ ಅಂಡ್‌ ಟೈಮ್ಸ್‌ ಆಫ್‌ ಎ ಮೆಸ್ಸಿಯಾನಿಕ್‌ ಬಿಲಿಯನೇರ್‌‌, ಆಲ್‌ಫ್ರೆಡ್‌ A. ಕ್ನೊಫ್‌: 2002
  9. Soros, George (2008). The New Paradigm for Financial Markets: The Credit Crisis of 2008 and What It Means. PublicAffairs. p. 13. ISBN 1586486837.
  10. ಕೌಫ್‌ಮನ್‌, ಮೈಕೇಲ್‌ T., ಸೊರೊಸ್‌: ದಿ ಲೈಫ್‌ ಅಂಡ್‌ ಟೈಮ್ಸ್‌ ಆಫ್‌ ಎ ಮೆಸ್ಸಿಯಾನಿಕ್‌ ಬಿಲಿಯನೇರ್ , ಆಲ್‌ಫ್ರೆಡ್‌ A. ಕ್ನೊಫ್‌: 2002, ಪುಟ 24.
  11. ಸ್ಲೇಟರ್‌‌, R.: ಸೊರೊಸ್‌: ದಿ ಅನ್‌ಆಥರೈಸ್ಡ್‌ ಬಯಾಗ್ರಫಿ , ಪುಟ 30.
  12. "Background and History". Paul and Dora Soros Fellowships for Young Americans. Archived from the original on ಮಾರ್ಚ್ 27, 2009. Retrieved ಮಾರ್ಚ್ 22, 2009.
  13. Elisabeth Bumiller (ಜೂನ್ 17, 1998). "Public Lives: An Overshadowed Altruist Sees the Light". ದ ನ್ಯೂ ಯಾರ್ಕ್ ಟೈಮ್ಸ್. New York Times Company. Retrieved ಮಾರ್ಚ್ 22, 2009.
  14. "Peter Soros and Flora Fraser". ದ ನ್ಯೂ ಯಾರ್ಕ್ ಟೈಮ್ಸ್. New York Times Company. ಫೆಬ್ರವರಿ 2, 1997. Retrieved ಮಾರ್ಚ್ 22, 2009.
  15. "Holocaust Encyclopedia". Ushmm.org. Retrieved ಅಕ್ಟೋಬರ್ 16, 2009.
  16. ಮೈಕೇಲ್‌ ಲೆವಿಸ್‌, "ದಿ ಸ್ಪೆಕ್ಯುಲೇಟರ್‌‌: ವಾಟ್‌ ಆನ್‌ ಅರ್ತ್‌ ಈಸ್‌ ಮಲ್ಟಿಬಿಲಿಯನೇರ್‌ ಜಾರ್ಜ್‌ ಸೊರೊಸ್‌ ಡೂಯಿಂಗ್‌ ಥ್ರೋಯಿಂಗ್‌ ವ್ಯಾಡ್ಸ್‌ ಆಫ್‌ ಮನಿ ಅರೌಂಡ್‌ ಇನ್‌ ಈಸ್ಟರ್ನ್‌ ಯುರೋಪ್‌?", ದಿ ನ್ಯೂ ರಿಪಬ್ಲಿಕ್‌ , ಜನವರಿ 10, 1994. ಇದನ್ನೂ ನೋಡಿ: ಕೌಫ್‌ಮನ್‌, ಮೈಕೇಲ್‌ T., ಸೊರೊಸ್‌: ದಿ ಲೈಫ್‌ ಅಂಡ್‌ ಟೈಮ್ಸ್‌ ಆಫ್‌ ಎ ಮೆಸ್ಸಿಯಾನಿಕ್‌ ಬಿಲಿಯನೇರ್, ಆಲ್‌ಫ್ರೆಡ್‌ A. ಕ್ನೊಫ್‌: 2002, ಪುಟಗಳು 32-33
  17. O'Brien, Timothy L (ಡಿಸೆಂಬರ್ 6, 1998). "He's Seen The Enemy. It Looks Like Him". New York Times. Retrieved ಜುಲೈ 28, 2008.
  18. ೧೮.೦ ೧೮.೧ All Things Considered (ಆಗಸ್ಟ್ 11, 2009). "Soros Uses Leverage To Aid New York Children". Npr.org. Retrieved ಅಕ್ಟೋಬರ್ 16, 2009.
  19. ೧೯.೦ ೧೯.೧ ೧೯.೨ ೧೯.೩ ೧೯.೪ ೧೯.೫ Soros, George (2008). The New Paradigm for Financial Markets. Public Affairs, New York. ISBN 978-1-58648-683-9.
  20. Anderson, Jenny (ಏಪ್ರಿಲ್ 16, 2008). "Wall Street Winners Get Billion-Dollar Paydays". New York Times. Retrieved ಜುಲೈ 28, 2008.
  21. ಸ್ಟೀವನ್‌ ಡ್ರೊಬ್ನಿ, "ಇನ್‌ಸೈಡ್‌ ದಿ ಹೌಸ್‌ ಆಫ್‌ ಮನಿ", ಜಾನ್‌ ವೈಲಿ & ಸನ್ಸ್‌: ಹೊಬೊಕೆನ್‌, NJ, 2006.
  22. ಸೊರೊಸ್‌ ಆನ್‌ ಸೊರೊಸ್‌: ಸ್ಟೇಯಿಂಗ್‌ ಅಹೆಡ್‌ ಆಫ್‌ ದಿ ಕರ್ವ್‌ (ಜಾನ್‌ ವೈಲಿ, 1995) ISBN 0-471-12014-6
  23. ೨೩.೦ ೨೩.೧ "Soros, the Man Who Cries Wolf, Now Is Warning of a 'Superbubble'" by Greg Ip, B1, June 21–22, 2008 The Wall Street Journal.
  24. ಸೊರೊಸ್‌ ಸೀಸ್‌ ನೋ ಬಾಟಮ್‌ ಫಾರ್‌ ವರ್ಲ್ಡ್‌ ಫೈನಾನ್ಷಿಯಲ್‌ "ಕೊಲ್ಯಾಪ್ಸ್‌", ರಾಯಿಟರ್ಸ್‌ , ಫೆಬ್ರುವರಿ 21, 2009, 2009ರ ಆಗಸ್ಟ್‌ 17ರಂದು ಮರುಸಂಪಾದಿಸಲಾಯಿತು.
  25. ೨೫.೦ ೨೫.೧ ಡೇವಿಡ್‌ ಬ್ರಾಂಕಾಸ್ಸಿಯೊ ಇಂಟರ್‌ವ್ಯೂಸ್‌ ಜಾರ್ಜ್‌ ಸೊರೊಸ್‌, ನೌ , PBS, ಸೆಪ್ಟೆಂಬರ್‌ 12, 2003, 2007ರ ಫೆಬ್ರುವರಿ 8ರಂದು ಸಂಪರ್ಕಿಸಲಾಯಿತು.
  26. ಆಂತರ್ಯದವರ ವ್ಯಾಪಾರದ ಕನ್ವಿಕ್ಷನ್‌ ಆಫ್‌ ಸೊರೊಸ್‌ ಈಸ್‌ ಅಪ್‌ಹೆಲ್ಡ್‌ (ಇಂಟರ್‌ನ್ಯಾಷನಲ್‌ ಹೆರಾಲ್ಡ್‌ ಟ್ರಿಬ್ಯೂನ್‌)
  27. ಸೊರೊಸ್‌ ಅಪೀಲ್ಸ್‌ ಕನ್ವಿಕ್ಷನ್‌ ಫಾರ್‌ ಆಂತರ್ಯದವರ ವ್ಯಾಪಾರದ, ಬಿಲಿಯನೇರ್‌ ಟೇಕ್ಸ್‌ ಫ್ರೆಂಚ್‌ ಕನ್ವಿಕ್ಷನ್‌ ಟು ಯುರೋಪಿಯನ್‌ ಕೋರ್ಟ್‌ (ಇಂಟರ್‌ನ್ಯಾಷನಲ್‌ ಹೆರಾಲ್ಡ್‌ ಟ್ರಿಬ್ಯೂನ್‌)ಡಿಸೆಂಬರ್‌ 14, 2006
  28. "Soros's Nats Bid Irks Republicans". Washingtonpost.com. Retrieved ಅಕ್ಟೋಬರ್ 16, 2009.
  29. "United's Ownership Uncertain; After Sale Fell Through, MLS Might Take Over Operation". Pqasb.pqarchiver.com. Archived from the original on ಮೇ 11, 2011. Retrieved ಅಕ್ಟೋಬರ್ 16, 2009.
  30. TIME 100, ದಿ ಪವರ್‌ ಗಿವರ್ಸ್‌, ಜಾರ್ಜ್‌ ಸೊರೊಸ್‌, TIME ನಿಯತಕಾಲಿಕ, ಮೇ 14, 2007 Archived December 5, 2010[Date mismatch], ವೇಬ್ಯಾಕ್ ಮೆಷಿನ್ ನಲ್ಲಿ. 2007ರ ಮೇ 21ರಂದು ಸಂಪರ್ಕಿಸಲಾಯಿತು
  31. ಯಾರ್ಕ್‌, ಬೈರನ್‌, ಸೊರೊಸ್‌ ಫಂಡೆಡ್‌ ಸ್ಟೀವರ್ಟ್‌ ಡಿಫೆನ್ಸ್‌ Archived January 30, 2010[Date mismatch], ವೇಬ್ಯಾಕ್ ಮೆಷಿನ್ ನಲ್ಲಿ., ನ್ಯಾಷನಲ್‌ ರಿವ್ಯೂ ಆನ್‌ಲೈನ್‌ . 2007ರ ಫೆಬ್ರುವರಿ 7ರಂದು ಮರುಸಂಪಾದಿಸಲಾಯಿತು.
  32. Dugger, Celia W. (ಸೆಪ್ಟೆಂಬರ್ 13, 2006). "Philanthropist Gives $50 Million to Help Aid the Poor in Africa". Africa: Travel2.nytimes.com. Retrieved ಅಕ್ಟೋಬರ್ 16, 2009.
  33. ಲೌರಾ ಬ್ಲೂಮೆನ್‌ಫೆಲ್ಡ್‌, ಡೀಪ್‌ ಪಾಕೆಟ್ಸ್ vs. ಬುಷ್‌, ಫೈನಾನ್ಷಿಯರ್‌ ಕಾಂಟ್ರಿಬ್ಯೂಟ್ಸ್‌ $5 ಮಿಲಿಯನ್‌ ಮೋರ್‌ ಇನ್‌ ಎಫೆಕ್ಟ್‌ ಟು ಔಸ್ಟ್‌ ಪ್ರೆಸಿಡೆಂಟ್‌, ವಾಷಿಂಗ್ಟನ್‌ ಪೋಸ್ಟ್‌, ನವೆಂಬರ್‌ 11, 2003; ಪುಟ A03
  34. "Why We Must Not Re-elect President Bush". Commondreams.org. ಸೆಪ್ಟೆಂಬರ್ 28, 2004. Archived from the original on ಅಕ್ಟೋಬರ್ 3, 2009. Retrieved ಅಕ್ಟೋಬರ್ 16, 2009.
  35. Suellentrop, Chris (ಅಕ್ಟೋಬರ್ 6, 2004). "Cheney Drops the Ball". Slate.com. Retrieved ಅಕ್ಟೋಬರ್ 16, 2009.
  36. "New Alliance Of Democrats Spreads Funding". Retrieved ಜುಲೈ 17, 2006.
  37. Clark, Neil. "Soros Profile". the New Statesman. Archived from the original on ಸೆಪ್ಟೆಂಬರ್ 30, 2007. Retrieved ಜೂನ್ 6, 2007.
  38. "Soros Downplays Role in Georgia Revolution". Archive.newsmax.com. ಜೂನ್ 1, 2005. Retrieved ಅಕ್ಟೋಬರ್ 16, 2009.
  39. "Alexander Lomaia — Minister of Education and Science (Georgia)". Oecd.org. Archived from the original on ಫೆಬ್ರವರಿ 11, 2009. Retrieved ಅಕ್ಟೋಬರ್ 16, 2009.
  40. ಸಲೋಮೆ ಝೌರಾಬಿಚ್ವಿಲ್‌, ಹೆರೊಡೋಟ್‌ (ಭೂರಾಜ್ಯಶಾಸ್ತ್ರಕ್ಕೆ ಸಂಬಂಧಿಸಿದ ಫ್ರೆಂಚ್‌ ಶಿಕ್ಷಣಸಂಸ್ಥೆಯ ನಿಯತಕಾಲಿಕ, ಏಪ್ರಿಲ್‌, 2008
  41. ಫ್ರೆಡ್‌ ವೀರ್‌: ಡೆಮಾಕ್ರಸಿ ರೈಸಿಂಗ್‌ ಇನ್‌ ದಿ ಎಕ್ಸ್‌-ಸೋವಿಯೆಟ್‌ ಸ್ಟೇಟ್ಸ್‌, ಕ್ರಿಶ್ಚಿಯನ್‌ ಸೈನ್ಸ್‌ ಮಾನಿಟರ್‌ , ಫೆಬ್ರುವರಿ 10, 2005
  42. "Does Foreign Funding Make NGOs into Puppets?". Globalpolicy.org. ಅಕ್ಟೋಬರ್ 11, 2006. Retrieved ಅಕ್ಟೋಬರ್ 16, 2009.
  43. Miller, Judith (ಸೆಪ್ಟೆಂಬರ್ 4, 1997). "Soros Closes Foundation In Belarus — The". New York Times. Retrieved ಅಕ್ಟೋಬರ್ 16, 2009.
  44. ಸೊರೊಸ್‌ ಡೊನೇಟ್ಸ್‌ $100 ಮಿಲಿಯನ್‌ ಟು ಯುರೋಪ್‌, UNIAN (ಜೂನ್‌ 19, 2009)
  45. ಲೆಬ್ಲಾಂಕ್‌, ಸ್ಟೀವ್‌, ಸೊರೊಸ್‌ ಬಿಹೈಂಡ್‌ ಮಾಸ್‌. ಎಫರ್ಟ್‌ ಟು ಡೀಕ್ರಿಮಿನಲೈಜ್‌ ಪಾಟ್‌ Archived August 31, 2008[Date mismatch], ವೇಬ್ಯಾಕ್ ಮೆಷಿನ್ ನಲ್ಲಿ., ಅಸೋಸಿಯೇಟೆಡ್‌ ಪ್ರೆಸ್‌, ಆಗಸ್ಟ್‌ 27, 2008
  46. Norml.org Archived October 23, 2008[Date mismatch], ವೇಬ್ಯಾಕ್ ಮೆಷಿನ್ ನಲ್ಲಿ., ಮರಿಜುವಾನಾದ ಕಾನೂನುಗಳ ಸುಧಾರಣೆಗೆ ಸಂಬಂಧಿಸಿದ ರಾಷ್ಟ್ರೀಯ ಸಂಸ್ಥೆ
  47. "Wealthy Californians put their agendas to a vote — Los Angeles Times". Latimes.com. ನವೆಂಬರ್ 1, 2008. Retrieved ಅಕ್ಟೋಬರ್ 16, 2009.
  48. ಜಾರ್ಜ್‌ ಸೊರೊಸ್‌. ಎಕೊಟ್ಸ್‌ ಲಾರ್ಡಾಗ್ಸಿಂಟೆವ್ಜು ಸ್ವೀಡಿಷ್‌ ರೇಡಿಯೋ, ಅಕ್ಟೋಬರ್‌ 10 2009. 12:55
  49. "ಅಮೆರಿಕಾದಲ್ಲಿನ ಸಾವುಗಳ ಕುರಿತಾದ ಯೋಜನೆ". Archived from the original on ಅಕ್ಟೋಬರ್ 9, 2003. Retrieved ಮೇ 6, 2010.
  50. "George Soros: Reflections on Death in America | Project on Death in America". Web.archive.org. ಜೂನ್ 22, 2001. Archived from the original on ಜೂನ್ 22, 2001. Retrieved ಅಕ್ಟೋಬರ್ 16, 2009.{{cite web}}: CS1 maint: bot: original URL status unknown (link)
  51. "George Soros: Reflections on Death in America contd. 2 | Project on Death in America". Web.archive.org. ಮಾರ್ಚ್ 25, 2002. Archived from the original on ಮಾರ್ಚ್ 25, 2002. Retrieved ಅಕ್ಟೋಬರ್ 16, 2009.{{cite web}}: CS1 maint: bot: original URL status unknown (link)
  52. "Fatal prescription — re-enactment of the Oregon Death With Dignity Act on physician-assisted suicide | Commonweal | Find Articles at BNET". Findarticles.com. Archived from the original on ಜುಲೈ 11, 2012. Retrieved ಅಕ್ಟೋಬರ್ 16, 2009.
  53. ಸ್ಟೀವ್‌ ಕ್ರೊಫ್ಟ್‌: ಆರ್‌ ಯು ಎ ರಿಲಿಜಿಯಸ್‌ ಮ್ಯಾನ್‌? ಸೊರೊಸ್‌: ನೋ. ಕ್ರೊಫ್ಟ್‌: ಡು ಯು ಬಿಲೀವ್‌ ಇನ್‌ ಗಾಡ್‌? ಸೊರೊಸ್‌: ನೋ. 60 ಮಿನಿಟ್ಸ್‌ , 1998ರ ಡಿಸೆಂಬರ್‌ 20ರಂದು ಪ್ರಸಾರವಾದದ್ದು.
  54. ಅಧ್ಯಾಯ 10 "ದಿ ಡೆವಲಪ್‌ಮೆಂಟಲ್‌ ಸ್ಟೇಟ್ಸ್‌ ಆಫ್‌ ಈಸ್ಟ್‌ ಏಷ್ಯಾ." ಹೂಗ್‌ವೆಲ್ಟ್‌, ಆಂಕೀ. 2001. ಇನ್‌ ಗ್ಲೋಬಲೈಸೇಷನ್‌ ಅಂಡ್‌ ದಿ ಪೋಸ್ಟ್‌ಕಲೋನಿಯಲ್‌ ವರ್ಲ್ಡ್‌: ದಿ ನ್ಯೂ ಪೊಲಿಟಿಕಲ್‌ ಇಕಾನಮಿ ಆಫ್‌ ಡೆವಲಪ್‌ಮೆಂಟ್‌. ಬ್ಯಾಲಿಮೋರ್‌‌, MD: ಜಾನ್ಸ್‌ ಹಾಪ್ಕಿನ್ಸ್‌ ಪ್ರೆಸ್‌.
  55. ಮ್ಯಾಗೀ ಫಾರ್ಲೆ: ಮಲೇಷಿಯನ್‌ ಲೀಡರ್‌, ಸೊರೊಸ್‌ ಟ್ರೇಡ್‌ ಬಾರ್ಬ್ಸ್, ಲಾಸ್‌ ಏಂಜಲೀಸ್‌ ಟೈಮ್ಸ್‌ , ಸೆಪ್ಟೆಂಬರ್‌ 22, 1997
  56. Kampeas, Ron (ಅಕ್ಟೋಬರ್ 12, 2009). "jta.org". jta.org. Archived from the original on ಜೂನ್ 3, 2009. Retrieved ಅಕ್ಟೋಬರ್ 16, 2009.
  57. ಸೊರೊಸ್‌, ಜಾರ್ಜ್‌. "ಆನ್‌ ಇಸ್ರೇಲ್, ಅಮೆರಿಕಾ ಮತ್ತು AIPAC." ನ್ಯೂಯಾರ್ಕ್‌ ರಿವ್ಯೂ ಆಫ್‌ ಬುಕ್ಸ್‌ , ಏಪ್ರಿಲ್‌ 12, 2007.
  58. ಫೋರ್ಬ್ಸ್‌ 400 -#15 ಜಾರ್ಜ್‌ ಸೊರೊಸ್‌, ಫೋರ್ಬ್ಸ್‌, ಸೆಪ್ಟೆಂಬರ್‌ 30, 2009
  59. "The Perilous Price of Oil — The New York Review of Books". Nybooks.com. ಸೆಪ್ಟೆಂಬರ್ 25, 2008. Retrieved ಅಕ್ಟೋಬರ್ 16, 2009.


ಬಾಹ್ಯ ಕೊಂಡಿಗಳು

[ಬದಲಾಯಿಸಿ]