ಜಾನಕಿ ಅಮ್ಮಾಲ್

ವಿಕಿಪೀಡಿಯ ಇಂದ
Jump to navigation Jump to search
ಜಾನಕಿ ಅಮ್ಮಾಲ್
ജാനകി അമ്മാൾ
ಚಿತ್ರ:Janaki Ammal.jpg
ಜಾನಕಿ ಅಮ್ಮಾಲ್
ಜನನ4 ನವೆಂಬರ್ 1897
ತೆಲ್ಲಿಚೇರಿ, ಕೇರಳ
ಮರಣFebruary 1984 (aged 87)
ವಾಸಸ್ಥಳIndia
ರಾಷ್ಟ್ರೀಯತೆIndian
ಕಾರ್ಯಕ್ಷೇತ್ರಸಸ್ಯಶಾಸ್ತ್ರ
ಸಂಸ್ಥೆಗಳುUniversity Botany Laboratory, Madras

ಜೀವನ[ಬದಲಾಯಿಸಿ]

ಎಡವಲತ್ ಕಕ್ಯಾಡ್ ಜಾನಕಿ ಅಮ್ಮಾಲ್ ಒಬ್ಬ ಭಾರತೀಯ ಮಹಿಳಾ ವಿಜ್ಞಾನಿ. ಅಮ್ಮಾಳ್ ಒಬ್ಬ ಖ್ಯಾತ ಸಸ್ಯಶಾಸ್ತ್ರ ಹಾಗು ಜೀವಕೋಶ ವಿಜ್ಞಾನಿಯಾಗಿದ್ದರು. ಇವರು ಸಸ್ಯಗಳ ಅನುವಂಶಿಕತೆ, ಮತ್ತು ಸಸ್ಯಶಾಸ್ತ್ರ ಭೂಗೋಳ ಸಂಶೋಧನೆಯಲ್ಲಿ ಅಪಾರವಾದ ಸೇವೆಯನ್ನ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ, ಇವರು ಕೇರಳದಲ್ಲಿ ದೊರೆಯುವ ಔಷಧಿಯ ಗಿಡಮೂಲಿಕೆಗಳನ್ನು ಸಂರಕ್ಷಿಸಿದ್ದಾರೆ. ಇವರು ವಿಶ್ವದ ಶ್ರೇಷ್ಠ ಗಣಿತಜ್ಞರೆಂದು ಪ್ರಖ್ಯಾತರಾದ ಶ್ರೀನಿವಾಸ ರಾಮಾನುಜನ್ ರವರ ಧರ್ಮಪತ್ನಿ .[೧].

ಬಾಲ್ಯ[ಬದಲಾಯಿಸಿ]

ಜಾನಕಿ ಅಮ್ಮಾಲ್ ರವರು ಕೇರಳದ ತೆಲ್ಲಿಚೇರಿ ಎಂಬಲ್ಲಿ 1897 ನವೆಂಬರ್ 4 ರಂದು ಜನಿಸಿದರು. ಒಂದು ಸುಸಂಸ್ಕೃತ ಮಧ್ಯವರ್ಗ ಕುಟುಂಬದಲ್ಲಿ ಜನಿಸಿದ ಅಮ್ಮಾಲ್ ಅವರ ತಂದೆ ಮದ್ರಾಸ್ ತ್ವರಿತ ನ್ಯಾಯಾಲಯದಲ್ಲಿ ಉಪ ನ್ಯಾಯದೀಶರಾಗಿದ್ದರು. ಅಮ್ಮಾಲ್ ಅವರಿಗೆ ಆರುಜನ ಸಹೋದರರು ಹಾಗು ಐದುಜನ ಸಹೋದರಿಯರಿದ್ದರು.

ವಿದ್ಯಾಭ್ಯಾಸ,ಉದ್ಯೋಗ[ಬದಲಾಯಿಸಿ]

ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೆಲ್ಲಿಚೇರಿಯಲ್ಲಿ ಮುಗಿಸಿದ ನಂತರ ಉನ್ನತ ಶಿಕ್ಷಣಕ್ಕಾಗಿ ಮದ್ರಾಸ್ ತೆರಳಿದರು. ತಮ್ಮ ಶಿಕ್ಷಣದ ನಂತರ ಅವರು ವಿಮೆನ್ಸ್ ಕ್ರಿಶ್ಚಿಯನ್ ಕಾಲೇಜ್, ಮದ್ರಾಸ್ ನಲ್ಲಿ ಪ್ರಾಧ್ಯಾಪಕರಾಗಿ ಸೇವೆಯನ್ನ ಸಲ್ಲಿಸಿದರು. ಅಷ್ಟೇ ಅಲ್ಲದೆ, ಅಮೇರಿಕಾದ ಮಿಷಿಗನ್ ವಿಶ್ವವಿದ್ಯಾಲಯದಿಂದ ಶಿಷ್ಯವೆತನವನ್ನ ಪಡೆದ ಇವರು ಕೆಲಕಾಲ ಅಮೆರಿಕದಲ್ಲೇ ಇದ್ದು ಸ್ನಾತಕೋತ್ತರ ಪದವಿಯನ್ನು ಪಡೆದರು. [೨]

ಪ್ರಶಸ್ತಿಗಳು[ಬದಲಾಯಿಸಿ]

ಅಮ್ಮಾಳ್ ಅವರಿಗೆ 1935 ರಲ್ಲಿ ಭಾರತೀಯ ವಿಜ್ಞಾನ ಅಕಾಡಮಿಯ ವತಿಯಿಂದ ಪ್ರಶಸ್ತಿ ಲಭಿಸಿದೆ. 1957ರಲ್ಲಿ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡಮಿ ಇವರಿಗೆ ಫೆಲೋಶಿಪ್ ನೀಡಿ ಗೌರವಿಸಿತು. 1956ರಲ್ಲಿ ಅಮೇರಿಕಾದ ಮಿಷಿಗನ್ ವಿಶ್ವವಿದ್ಯಾಲಯ ಇವರಿಗೆ ಎಲ್.ಎಲ್. ಡಿ ಪದವಿ ನೀಡಿ ಗೌರವಿಸಿತು. [೩] 1957ರಲ್ಲಿ ಭಾರತ ಸರ್ಕಾರವು ಅಮ್ಮಾಲ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. ಅಷ್ಟೇ ಅಲ್ಲದೆ 2000ನೇ ಇಸವಿಯಲ್ಲಿ ಭಾರತ ಸರ್ಕಾರದ ಪರಿಸರ ಹಾಗು ವನ್ಯಸಂರಕ್ಷಣ ಇಲಾಖೆ, ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಇವರ ಹೆಸರಿನ ಪ್ರಶಸ್ತಿ ನೀಡುವುದನ್ನ ಪ್ರಾರಂಭಿಸಿತು.

ಉಲ್ಲೇಖಗಳು[ಬದಲಾಯಿಸಿ]

  1. http://www.ias.ac.in/womeninscience/Janaki.pdf
  2. http://www.hindu.com/2010/10/27/stories/2010102758040300.htm
  3. http://www.thehindu.com/news/national/kerala/article496900.ece