ವಿಷಯಕ್ಕೆ ಹೋಗು

ಜ಼ುಲುಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜ಼ುಲುಕ್‍ನಲ್ಲಿನ ಏರಿಳಿತದ ರಸ್ತೆ

ಜ಼ುಲುಕ್ ಅಥವಾ ಝುಲುಕ್ ಅಥವಾ ಜಲುಕ್ ಭಾರತದ ಸಿಕ್ಕಿಂ ರಾಜ್ಯದಲ್ಲಿನ ಪಾಕ್ಯಾಂಗ್ ಜಿಲ್ಲೆಯ ರೋಂಗ್ಲಿ ಉಪವಿಭಾಗದಲ್ಲಿರುವ ಒಂದು ಸಣ್ಣ ಹಳ್ಳಿ. ಈ ಸ್ಥಳವು ತುಲನಾತ್ಮಕವಾಗಿ ಪೂರ್ವ ಸಿಕ್ಕಿಂನಲ್ಲಿನ ಉದಯೋನ್ಮುಖ ಹಾಗೂ ವಿಲಕ್ಷಣ ತಾಣವಾಗಿದೆ. ಇಂದು ಇದು ಕಾಂಚನಜುಂಗಾ ಸೇರಿದಂತೆ ಪೂರ್ವ ಹಿಮಾಲಯ ಪರ್ವತ ಶ್ರೇಣಿಯ ವೀಕ್ಷಣೆಗೆ ಒಂದು ಪ್ರವಾಸಿ ತಾಣವಾಗಿದೆ.[]

ಸಿಕ್ಕಿಂನಿಂದ ಕಾಂಚನಜುಂಗಾ

ಸಸ್ಯ ಮತ್ತು ಪ್ರಾಣಿ ಸಂಕುಲ

[ಬದಲಾಯಿಸಿ]

ಜ಼ುಲುಕ್ ಪಾಂಗೋಲಾಖಾ ವನ್ಯಜೀವಿ ಅಭಯಾರಣ್ಯದಲ್ಲಿ ಸ್ಥಿತವಾಗಿದೆ ಮತ್ತು ಅರಣ್ಯದಿಂದ ಆವೃತವಾಗಿದೆ. ಅವುಗಳಲ್ಲಿ ಕೆಲವು ಸಂಪೂರ್ಣವಾಗಿ ಅಸ್ಪರ್ಶಿತವಾಗಿವೆ. ಜಿಂಕೆ, ಕಾಡು ನಾಯಿಗಳು, ಹಿಮಾಲಯದ ಕರಡಿ ಮತ್ತು ಕೆಂಪು ಪಾಂಡಾಗಳು ಕಾಣುವುದು ಸಾಮಾನ್ಯವಾಗಿವೆ. ಕೆಲವು ಹುಲಿಗಳು ಕೂಡ ಈ ಪ್ರದೇಶದಲ್ಲಿ ಕಂಡುಬಂದಿವೆ ಎಂದು ವರದಿಯಾಗಿದೆ.

ಸಮೃದ್ಧ ವನ್ಯಜೀವಿಗಳು

ಬ್ಲಡ್ ಫೆಸೆಂಟ್, ಹಿಮಾಲಯನ್ ಮೊನಾಲ್, ಕಾಲಿಜ್ ಫೆಸೆಂಟ್, ಸ್ನೋ ಫೆಸೆಂಟ್ ಮತ್ತು ಇತರ ಹಲವು ಪಕ್ಷಿಗಳನ್ನು ಸಹ ಕಾಣಬಹುದು. ಬೇಸಿಗೆಯ ತಿಂಗಳುಗಳಲ್ಲಿ, ಈ ಪ್ರದೇಶ ಮತ್ತು ಅದರ ಸುತ್ತಮುತ್ತಲಿನ ಬೆಟ್ಟಗಳು ಸಾವಿರಾರು ಹೂಬಿಡುವ ರೋಡೋಡೆಂಡ್ರಾನ್‌ಗಳಿಂದ ಆವೃತವಾಗಿರುತ್ತವೆ. ರೋಡೋಡೆಂಡ್ರಾನ್‌ನ ವೈವಿಧ್ಯತೆಯಿಂದಾಗಿ ಈ ತಿಂಗಳುಗಳಲ್ಲಿ ಜ಼ುಲುಕ್ ವರ್ಣಮಯವಾಗಿರುತ್ತದೆ.

ಜ಼ುಲುಕ್‍ನ ನೋಟ

ಹತ್ತಿರದ ಸ್ಥಳಗಳು

[ಬದಲಾಯಿಸಿ]

ಜ಼ುಲುಕ್‌ನ ಮೂರು ಹಂತದ ಏರಿಳಿತದ ರಸ್ತೆಗಳು ಕಾಂಚನಜುಂಗಾ ಮತ್ತು ಅದರ ಪರ್ವತ ಶ್ರೇಣಿಯ ವೀಕ್ಷಣೆಗಳನ್ನು ಒದಗಿಸುತ್ತವೆ. ಈ ಸ್ಥಳದ ಇತರ ಆಕರ್ಷಣೆಗಳಲ್ಲಿ ಸರೋವರಗಳು, ದೇವಾಲಯಗಳು, ಕಾಡುಗಳು ಮತ್ತು ಟಿಬೆಟ್‌ಗೆ ಹೋಗುವ ಮಾರ್ಗ ಸೇರಿವೆ.

ಉಲ್ಲೇಖಗಳು

[ಬದಲಾಯಿಸಿ]

 

  1. Freshfield, D. W. (1903). Round Kangchenjunga: a narrative of mountain travel and exploration. London: Edward Arnold.
"https://kn.wikipedia.org/w/index.php?title=ಜ಼ುಲುಕ್&oldid=1084396" ಇಂದ ಪಡೆಯಲ್ಪಟ್ಟಿದೆ