ವಿಷಯಕ್ಕೆ ಹೋಗು

ಜಬಾಂಗ್.ಕಾಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಬಾಂಗ್.ಕಾಂ
ತಾಣದ ಪ್ರಕಾರಇ-ಕಾಮರ್ಸ್
ಸಧ್ಯದ ಸ್ಥಿತಿಫೆಬ್ರವರಿ ೨೦೨೦ ರಿಂದ ನಿಷ್ಕ್ರಿಯವಾಗಿದೆ

೨೦೧೨ ರಲ್ಲಿ ಆರಂಭಿಸಿದ ಜಬಾಂಗ್.ಕಾಂ (Jabong.com) ಭಾರತದ ಪ್ರಮುಖ ಫ್ಯಾಷನ್ ಮತ್ತು ಜೀವನಶೈಲಿ ಪೋರ್ಟಲ್ ಆಗಿದೆ. ಪ್ರವೀಣ್‍ ಸಿನ್ಹಾ, ಲಕ್ಷ್ಮಿ ಪೊಟ್ಲೂರಿ, ಅರುಣ್ ಚಂದ್ರ ಮೋಹನ್ ಮತ್ತು ಮನು ಕುಮಾರ್ ಜೈನ್ ಅವರು ಇದರ ಸ್ಥಾಪಕರಾಗಿದ್ದಾರೆ. ಈ ಪೋರ್ಟಲ್‍ನಲ್ಲಿ ಉಡುಪು, ಪಾದರಕ್ಷೆಗಳು, ಸೌಂದರ್ಯ ಉತ್ಪನ್ನಗಳು, ಮನೆ ಉತ್ಪನ್ನಗಳು ಹಾಗೂ ಮುಂತಾದ ಫ್ಯಾಷನ್ ಉಪಕರಣಗಳು ಲಭಿಸುತ್ತದೆ.[೧][೨] ಜಬಾಂಗ್‍ನ ಪ್ರಧಾನ ಕಚೇರಿ ಹರಿಯಾಣದ ಗುರಗಾಂವ್‍ನಲ್ಲಿದೆ.[೩] ಜುಲೈ ೨೦೧೬ ರಲ್ಲಿ, ಜಬಾಂಗ್‍ ಅನ್ನು ಫ್ಲಿಪ್‌ಕಾರ್ಟ್ ತಮ್ಮ ಘಟಕವಾದ ಮಿಂತ್ರಾದ ಮೂಲಕ ಸುಮಾರು $೭೦ ಮಿಲಿಯನ್‍ಗೆ ಸ್ವಾಧೀನಪಡಿಸಿಕೊಂಡಿತು.[೪][೫] ಇದರ ನಂತರ, ಅನಂತ್ ನಾರಾಯಣ ಅವರನ್ನು ಜಬಾಂಗ್‍ನ ಹೊಸ ಸಿಇಒ ಆಗಿ ಘೋಷಿಸಲಾಯಿತು.

ಇತಿಹಾಸ[ಬದಲಾಯಿಸಿ]

ಅರುಣ್ ಚಂದ್ರ ಮೋಹನ್, ಪ್ರವೀಣ್‍ ಸಿನ್ಹಾ ಮತ್ತು ಲಕ್ಷ್ಮಿ ಪೊಟ್ಲೂರಿ ಮತ್ತು ಮನು ಕುಮಾರ್ ಜೈನ್‍ ಜಬೊಂಗಿನ ಸಹ-ಸಂಸ್ಥಾಪಕರು. ಎಲ್ಲಾ ಸಹ-ಸಂಸ್ಥಾಪಕರು ಈಗ ಕಂಪನಿಯನ್ನು ತೊರೆದಿದ್ದಾರೆ.[೬][೭][೮]

ಮಾರ್ಚ್ ೨೦೧೩ ರಲ್ಲಿ, ಜಬಾಂಗ್‍ ದಿನಕ್ಕೆ ೬೦೦೦ ಕ್ಕೂ ಹೆಚ್ಚು ಆದೇಶಗಳನ್ನು ರವಾನಿಸುತ್ತಿತ್ತು.[೯] ದಿ ಎಕನಾಮಿಸ್ಟ್ ಪ್ರಕಾರ, ಜಬಾಂಗ್ ೨೦೧೨ ರಲ್ಲಿ ಸುಮಾರು $೧೦೦-೧೫೦ ಮಿಲಿಯನ್ ನಷ್ಟು ಒಟ್ಟು ಮಾರಾಟವನ್ನು ಗಳಿಸಿತು.[೧೦]

ಲೈವ್ ಮಿಂಟ್ ಲೇಖನದ ಪ್ರಕಾರ, ಜಬಾಂಗ್‍ ಸೆಪ್ಟೆಂಬರ್ ೨೦೧೩ ರ ಅವಧಿಯಲ್ಲಿ ಪ್ರತಿದಿನ ೧೪೦೦೦ ಆದೇಶಗಳನ್ನು ರವಾನಿಸುತ್ತಿತ್ತು ಹಾಗೂ ಇದು ೬೦% ಸಣ್ಣ ಪಟ್ಟಣಗಳಿಂದಿದ್ದವು. ೨೦೧೩ ರ ದಿ ಗ್ರೇಟ್ ಇಂಡಿಯನ್ ಶಾಪಿಂಗ್ ಫೆಸ್ಟಿವೆಲ್‍ನ ಸಮಯದಲ್ಲಿ ಅತ್ಯಂತ ಭೇಟಿಯಾದ ಕಾಮರ್ಸ್ ಸೈಟ್‍ಗಳಲ್ಲಿ ಜಬಾಂಗ್‍ ಕೂಡ ಒಂದಾಗಿತ್ತು.

ರಾಕೆಟ್ ಇಂಟರ್ನೆಟ್ ಹೂಡಿಕೆದಾರರ ಪ್ರಸ್ತುತಿಯ ಪ್ರಕಾರ, ಜಬಾಂಗ್‍ ೨೦೧೬ ರ ಮೊದಲ ತ್ರೈಮಾಸಿಕದಲ್ಲಿ ೩೨.೬ ಮಿಲಿಯನ್ ಯುರೋಗಳ ನಿವ್ವಳ ಆದಾಯವನ್ನು ಹೊಂದಿತ್ತು, ಇದು ಅದರ ಹಿಂದಿನ ವರ್ಷದ ಅವಧಿಯಲ್ಲಿ ೨೮.೬ ಮಿಲಿಯನ್ ಯುರೋಗಳಿಂದ ೧೪% ಹೆಚ್ಚಾಗಿದೆ. ಹಣಕಾಸು ವರ್ಷ ೨೦೧೫ ರಲ್ಲಿ, ಅದರ ಆದಾಯವು ೧೨೨.೧ ಮಿಲಿಯನ್ ಯುರೋಗಳಷ್ಟಿತ್ತು. [೧೧] ಸೆಪ್ಟೆಂಬರ್ ೨೦೧೭ ರಲ್ಲಿ, ಜಬಾಂಗ್‍ ಡೊರೊಥಿ ಪರ್ಕಿನ್ಸ್‌ಗೆ ೩ ನೇ ಅತಿದೊಡ್ಡ ಜಾಗತಿಕ ಇ-ಕಾಮರ್ಸ್ ಪಾಲುದಾರ ಎಂದು ವರದಿಯಾಗಿದೆ.[೧೨]

ಪ್ರೊಫೈಲ್[ಬದಲಾಯಿಸಿ]

ಜಬಾಂಗ್‍ ೧೦೦೦ ಕ್ಕೂ ಹೆಚ್ಚು ಬ್ರಾಂಡ್‍ಗಳು ಮತ್ತು ೯೦೦೦೦ ಕ್ಕೂ ಹೆಚ್ಚು ಉತ್ಪನ್ನಗಳೊಂದಿಗೆ ಶೂಗಳು, ಉಡುಪುಗಳು, ಪರಿಕರಗಳು, ಗೃಹಾಲಂಕಾರ ಮತ್ತು ಪೀಠೋಪಕರಣಗಳನ್ನು ಮಾರಾಟ ಮಾಡಿತು.[೧೩][೧೪][೧೫] ಹಾಗೂ ಇತರ ಉತ್ಪನ್ನಗಳಾದ ಆಭರಣಗಳು ಮತ್ತು ಚಿನ್ನದ ನಾಣ್ಯಗಳನ್ನು ಸಹ ಮಾರಾಟ ಮಾಡಿತು.[೧೬][೧೭]

೨೦೧೨ ನವೆಂಬರ್‌ನಲ್ಲಿ, ಜಬಾಂಗ್‍.ಕಾಂ ಮತ್ತು ಕ್ರಿಕೆಟ್ ಉಪಕರಣ ತಯಾರಿಕೆಗಾರರಾದ ಎಸ್‌ಜಿ ಕ್ರಿಕೆಟ್‍, ವೀರೆಂದ್ರ ಸೆಹ್ವಾಗ್ ಕ್ರಿಕೆಟ್ ಬ್ಯಾಟ್‍ಗಳ ವ್ಯಾಪ್ತಿಯನ್ನು ಮಂಡಿಸಿದರು ಹಾಗೂ ಇದು ಜಬೊಂಗಿನ ಮೂಲಕ ಪ್ರತ್ಯೇಕವಾಗಿ ಮಾರಾಟವಾಯಿತು. ಜಬಾಂಗ್‍ ಈಗ ತಮ್ಮ ಕ್ಯಾಟಲಾಗಿನಲ್ಲಿ ಪ್ರಮುಖ ಅಂತರರಾಷ್ಟ್ರೀಯ ಬ್ರಾಂಡ್‍ಗಳನ್ನು ಸೇರಿಸಿವೆ. ದೊರೊಥಿ ಪರ್ಕಿನ್ಸ್, ಮಿಸ್ ಸೆಲ್ಫ್ರಿಜ್, ರಿವರ್ ಐಲ್ಯಾಂಡ್, ಮುಂತಾದವು ಮತ್ತು ಸ್ಪಾನಿಷ್ ಬ್ರಾಂಡ್‌ಗಳಾದ ಮ್ಯಾಂಗೊವನ್ನು ಸಹ ಈ ಅಂತಾರಾಷ್ಟ್ರೀಯ ಬ್ರಾಂಡ್‌ಗಳ ಕ್ಯಾಟಲಾಗಿನಲ್ಲಿ ಸೇರಿಸಿವೆ. ನವೆಂಬರ್ ೨೦೧೩ ರಲ್ಲಿ ಅಬೌ ಆಂಡ್ ಬಿಯೋಂಡ್ ಬ್ರಾಂಡಿನ ಸರಕುಗಳನ್ನು ಮಾರಾಟ ಮಾಡಲು ಜಬಾಂಗ್‍ ಜ್ಯಾಕ್ ಆಂಡ್ ಜೋನ್ಸ್ ಎಂಬ ಪ್ರಮುಖ ಬ್ರಾಂಡಿನ ಜೊತೆ ಸಹಭಾಗಿತ್ವದಲ್ಲಿ ಪ್ರವೇಶಿಸಿತು. ಜನವರಿ ೨೦೧೪ ರಲ್ಲಿ ಜಬಾಂಗ್‍ ಸ್ಟ್ಯೈಲಿಸ್ಟ ಎಂಬ ಫ್ಯಾಷನ್ ವೇದಿಕೆಯ ಜೊತೆ ಸಹಭಾಗಿಯಾಯಿತು; ಭಾರತೀಯ ವಿನ್ಯಾಸಿಗಳಾದ ವೆಂಡಲ್ ರೋಡ್ರಿಕ್ಸ್, ಪ್ರಿಯದರ್ಶಿನಿ ರಾವ್ ಮತ್ತು ನಿಕ್ಷಾ ಲುಲ್ಲಾರ ಸಂಗ್ರಹವನ್ನು ಇದು ಒಳಗೊಂಡಿತು. ಮೇ ೨೦೧೪ ರಲ್ಲಿ ಎನ್.ಬಿ.ಎ (NBA) ಮತ್ತು ಜಬಾಂಗ್‍ ಭಾರತದಲ್ಲಿ ಮೊದಲ ಅಧಿಕೃತ ಎನ್‍ಬಿಎ ಆನ್ಲೈನ್ ಸ್ಟೋರ್ ಆರಂಭಿಸಲು ಸಹಭಾಗಿತ್ವಕ್ಕೊಳಗೊಂಡರು. ಬ್ಯುಸ್ನೆಸ್ ಸ್ಟಾನ್ಡರ್ಡ್ಸ್.ಕಾಂ ಪ್ರಕಾರ ೨೦೧೫ ರಲ್ಲಿ ಜಬಾಂಗ್‍ ಒಂದು ಶತಕೋಟಿ ಡಾಲರ್ ಕ್ಲಬ್ ಪ್ರವೇಶಿಸಲು ಸಿದ್ದವಾಗಿತ್ತು.

ಪ್ರಚಾರಗಳು[ಬದಲಾಯಿಸಿ]

ಕಂಪನಿಯು ತನ್ನ ಮೊದಲ ಟಿವಿ ಅಭಿಯಾನವನ್ನು ಮಾರ್ಚ್ ೨೦೧೨ ರಲ್ಲಿ ಪ್ರಾರಂಭಿಸಿತು.[೧೮] ಸೆಪ್ಟೆಂಬರ್ ೨೦೧೨ ರಲ್ಲಿ ಹಾಗೂ ೨೦೧೩ ರ ಅವಧಿಯಲ್ಲಿ ಜಬೊಂಗಿನ ಇತರ ಅಭಿಯಾನಗಳು ದೂರದರ್ಶನದಲ್ಲಿ ಕಾಣಿಸಿಕೊಂಡಿತು.[೧೯][೨೦][೨೧][೨೨]

ನವೆಂಬರ್ ೨೦೧೩ ರಲ್ಲಿ, ಜಬಾಂಗ್‍ ಪೂಮಾದೊಂದಿಗೆ, ಬಾಲಿವುಡ್ ನಟಿ ಚಿತ್ರಾಂಗದಾ ಸಿಂಗ್ ಅವರೊಂದಿಗೆ ಡಿಜಿಟಲ್ ಫಿಟ್ನೆಸ್ ಅಭಿಯಾನ ಗೇರ್ ಅಪ್ ಬಡ್ಡಿ ಅನ್ನು ಪ್ರಾರಂಭಿಸಿತು.[೨೩][೨೪]

ಆನ್‍ಲೈನ್ ಫ್ಯಾಷನ್ ತಾಣವಾಗಿ ಸ್ವತಃ ಸ್ಥಾನಗಳನ್ನು ಪಡೆಯಲು ಜಬಾಂಗ್‍ ಲ್ಯಾಕ್ಮೆ ಫ್ಯಾಷನ್ ವೀಕಿನ ಮುಂದಿನ ನಾಲ್ಕು ಕ್ರೀಡಾಋತುಗಳಲ್ಲಿ ಮತ್ತು ವಿನ್ಯಾಸಕ ರೋಹಿತ್ ಬಾಲಿನ ಜೊತೆ ಸಹಭಾಗಿತ್ವ ಮಾಡಿದ್ದರು. ಜಬಾಂಗ್‍.ಕಾಂ ೨೦೧೪ ರಲ್ಲಿ ಇಂಡಿಯಾ ಆನ್‍ಲೈನ್ ಫ್ಯಾಷನ್ ವೀಕ್ ಅನ್ನು ಪ್ರಾರಂಭಿಸಿದರು. ಸೆಲೆಬ್ರಿಟಿ ಮೆಂಟರ್ ಯಾಮಿ ಗೌತಮ್ ಸೇರಿದಂತೆ ಫ್ಯಾಷನ್ ಉದ್ಯಮದ ತಜ್ಞರು ಮಾರ್ಗದರ್ಶನ ನೀಡಿದರು. ಇದು ಯುವ ಮತ್ತು ಮಹತ್ವಾಕಾಂಕ್ಷಿ ವಿನ್ಯಾಸಕರು, ಸ್ಟೈಲಿಸ್ಟ್‌ಗಳು, ಮಾಡೆಲ್‍ಗಳು ಮತ್ತು ಛಾಯಾಗ್ರಾಹಕರಿಗೆ ಒಂದು ವೇದಿಕೆಯಾಯಿತು.[೨೫]

ಜಬಾಂಗ್‍.ಕಾಂ ಎಪ್ರಿಲ್, ೨೦೧೪ ರಲ್ಲಿ ದಿ ಜ್ಯೂಸ್ ಎಂಬ ಮಾಸಿಕ ಫ್ಯಾಷನ್ ನಿಯತಕಾಲಿಕವನ್ನು ಪ್ರಾರಂಭಿಸಿದರು. ನಿಯತಕಾಲಿಕವು ಫ್ಯಾಷನ್, ಸೌಂದರ್ಯ, ಜನರು, ಪ್ರವೃತ್ತಿಗಳು, ಪ್ರಯಾಣ ಮತ್ತು ಪಾಪ್ ಸಂಸ್ಕೃತಿಯ ಸುತ್ತಲಿನ ಕಥೆಗಳು ಮತ್ತು ವೈಶಿಷ್ಟ್ಯಗಳನ್ನು ಒಳಗೊಂಡಿದೆ.[೨೬][೨೭]

ಪಾಲುದಾರಿಕೆಗಳು[ಬದಲಾಯಿಸಿ]

ಮೇ ೨೦೧೩ ರಲ್ಲಿ, ಜಬಾಂಗ್‍ ಬಾಲಿವುಡ್ ಚಲನಚಿತ್ರ ಯೇ ಜವಾನಿ ಹೈ ದಿವಾನಿ ಆಧಾರಿತ ಫ್ಯಾಷನ್ ಸಂಗ್ರಹವನ್ನು ಪ್ರಸ್ತುತಪಡಿಸಿದರು. ಚಲನಚಿತ್ರ ತಾರೆಯರು ಚಲನಚಿತ್ರದಲ್ಲಿ ಬಳಸಿದ ಫ್ಯಾಷನ್ ಉಡುಪನ್ನು ಜಬಾಂಗ್‍ ಪ್ರದರ್ಶಿಸಿದರು.[೨೮]

ನವೆಂಬರ್ ೨೦೧೩ ರಲ್ಲಿ, ಜಬಾಂಗ್‍.ಕಾಂ ಮತ್ತು ಕ್ರಿಕೆಟ್ ಉಪಕರಣಗಳ ತಯಾರಕ ಎಸ್‍ಜಿ ಕ್ರಿಕೆಟ್ ವೀರೇಂದ್ರ ಸೆಹ್ವಾಗ್ ಕ್ರಿಕೆಟ್ ಬ್ಯಾಟ್‍ಗಳ ಶ್ರೇಣಿಯನ್ನು ಪ್ರಸ್ತುತಪಡಿಸಿತು.[೨೯]

ಜುಲೈ ೨೦೧೩ ರಲ್ಲಿ, ಜಬಾಂಗ್‍ ಭಾಗ್ ಮಿಲ್ಖಾ ಭಾಗ್ ಚಿತ್ರದ ಮೂಲಕ ಮತ್ತೆ ಬಾಲಿವುಡ್‌ನೊಂದಿಗೆ ಸಂಬಂಧ ಹೊಂದಿದರು ಮತ್ತು ಚಲನಚಿತ್ರದಿಂದ ಸ್ಫೂರ್ತಿ ಪಡೆದ ಸಂಗ್ರಹವನ್ನು ನೀಡಿದರು.[೩೦][೩೧]

ಜಬಾಂಗ್‍ನ ಮೂರನೇ ಬಾಲಿವುಡ್ ಸಹಯೋಗದಿಂದ, ಧೂಮ್-೩ ಎಂಬ ಚಿತ್ರದಿಂದ ಪ್ರೇರಿತಗೊಂಡು ಡಿಸೆಂಬರ್ ೨೦೧೩ ರಲ್ಲಿ ಫ್ಯಾಷನ್‍ ಉತ್ಪನ್ನಗಳ (ಚೀಲಗಳು, ಟೋಪಿಗಳು, ಉಂಗುರಗಳು ಮುಂತಾದವು ಸೇರಿದ) ಸಂಗ್ರಹವನ್ನು ಪ್ರದರ್ಶಿಸಿತು. ೨೦೧೪ ರಲ್ಲಿ, ಹಂಪ್ಟಿ ಶರ್ಮ ಕಿ ದುಲ್ಹನಿಯಾ ಜೊತೆ ಜಬಾಂಗ್‍ ಸಹಭಾಗಿಯಾಯಿತು.

ಅಕ್ಟೋಬರ್ ೨೦೧೪ ರಲ್ಲಿ, ಅಮೆಜಾನ್ ಜಬಾಂಗ್‍ ಅನ್ನು ಸ್ವಾಧೀನಪಡಿಸಿಕೊಳ್ಳಲು ಆರಂಭಿಕ ಮಾತುಕತೆಯಲ್ಲಿದೆ ಎಂದು ವರದಿಯಾಗಿದೆ.[೩೨] ಆದರೆ ಯಾವುದೇ ಸ್ವಾಧೀನ ಒಪ್ಪಂದ ಸಂಭವಿಸಲಿಲ್ಲ ಮತ್ತು ಯಾವುದೇ ಪಕ್ಷಗಳು ಕಾರಣಗಳನ್ನು ದೃಢಪಡಿಸಲಿಲ್ಲ.

ಜುಲೈ ೨೦೧೬ ರಲ್ಲಿ, ಜಬಾಂಗ್‍ ಅನ್ನು ಫ್ಲಿಪ್ಕಾರ್ಟ್‌ನ ಅಂಗಸಂಸ್ಥೆಯಾದ ಮಿಂತ್ರಾ ಬಹಿರಂಗಪಡಿಸದ ಮೊತ್ತಕ್ಕೆ ಸ್ವಾಧೀನಪಡಿಸಿಕೊಂಡಿತು. ವಿಲೀನವು ಎರಡು ವ್ಯವಹಾರಗಳ ಕಾರ್ಯಗಳ ಏಕೀಕರಣದ ಪ್ರಕ್ರಿಯೆಯ ಭಾಗವಾಗಿ ೧೫೦ ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲು ಕಾರಣವಾಗಿದೆ.[೩೩]

೨೦೧೪-೧೫ ರ ಇಂಡಿಯನ್ ಸೂಪರ್ ಲೀಗ್ ಋತುವಿನಲ್ಲಿ, ಜಬಾಂಗ್‍ ಮುಂಬೈ ಮೂಲದ ವೃತ್ತಿಪರ ಸಾಕರ್ ಕ್ಲಬ್ ಮುಂಬೈ ಸಿಟಿ ಎಫ್‍ಸಿಯ ಮುಖ್ಯ ಶರ್ಟ್‌ನ ಪ್ರಾಯೋಜಕರಾದರು.[೩೪]

ಆನ್ಲೈನ್ ಸಂಚಾರ[ಬದಲಾಯಿಸಿ]

ಸೆಪ್ಟೆಂಬರ್ ೨೦೧೨ ರ ಕಾಮ್‍ಸ್ಕೋರ್ ವರದಿಯ ಪ್ರಕಾರ, ಜಬಾಂಗ್‍.ಕಾಂ ಪ್ರಾರಂಭವಾದ ಕೆಲವೇ ತಿಂಗಳುಗಳಲ್ಲಿ ಭಾರತೀಯ ಇ-ಕಾಮರ್ಸ್ ವೆಬ್‍ಸೈಟ್‍ಗಳಲ್ಲಿ ತನ್ನ ವೆಬ್‍ಸೈಟ್‍ನಲ್ಲಿ ಎರಡನೇ ಅತಿ ಹೆಚ್ಚು ದಟ್ಟಣೆಯನ್ನು ಹೊಂದಿತ್ತು.[೩೫] ನವೆಂಬರ್ ೨೦೧೩ ರಲ್ಲಿ, ಜಬಾಂಗ್‍.ಕಾಂ ಭಾರತದಲ್ಲಿ ಅಲೆಕ್ಸಾ ಟ್ರಾಫಿಕ್ ಶ್ರೇಯಾಂಕದಲ್ಲಿ ೩೭ ನೇ ಸ್ಥಾನದಲ್ಲಿತ್ತು.[೩೬] ಗೂಗಲ್ ಝೀಟ್ಜಿಸ್ಟ್ ಇಂಡಿಯಾ ಟ್ರೆಂಡ್‍ಗಳಲ್ಲಿ ಜಬಾಂಗ್‍ ೧೦ ನೇ ಸ್ಥಾನದಲ್ಲಿದೆ. ಇದು ಭಾರತದಲ್ಲಿ ೨೦೧೨ ರಲ್ಲಿ ೧೦ ನೇ ಅತಿ ಹೆಚ್ಚು ಹುಡುಕಲ್ಪಟ್ಟ ಪದವಾಗಿದೆ.[೩೭]

ಫ್ಲಿಪ್‍ಕಾರ್ಟ್ ಒಡೆತನದ ಜಬಾಂಗ್‍ ಫ್ಯಾಷನ್ ಪೋರ್ಟಲ್ ಅನ್ನು ಫೆಬ್ರವರಿ ೨೦೨೦ ರಲ್ಲಿ ಸಂಪೂರ್ಣವಾಗಿ ಮುಚ್ಚಲಾಯಿತು ಮತ್ತು ಜಬಾಂಗ್‍ ವೆಬ್‍ಸೈಟ್ ಬಳಕೆದಾರರನ್ನು ಶಾಶ್ವತವಾಗಿ ಮಿಂತ್ರಾ ವೆಬ್‍ಸೈಟ್‍ಗೆ ಮರುನಿರ್ದೇಶಿಸಲಾಗಿದೆ.[೩೮] [೩೯] [೪೦]

ಅಂತಾರಾಷ್ಟ್ರೀಯ ಸ್ಟೋರ್[ಬದಲಾಯಿಸಿ]

ಜಬಾಂಗ್‍ ಜಬಾಂಗ್‍ವರ್ಲ್ಡ್.ಕಾಂ ಎಂಬ ಅಂತರರಾಷ್ಟ್ರೀಯ ಆನ್‍ಲೈನ್ ಶಾಪಿಂಗ್ ಅಂಗಡಿಯನ್ನು ಸಹ ಹೊಂದಿತ್ತು, ಇದು ಯುನೈಟೆಡ್ ಸ್ಟೇಟ್ಸ್, ಮಲೇಷ್ಯಾ ಮತ್ತು ಮಾರಿಷಸ್ ಹಾಗೂ ಇತರ ದೇಶಗಳಲ್ಲಿ ಅತಿ ಹೆಚ್ಚು ದಟ್ಟಣೆಯನ್ನು ಪಡೆಯುತ್ತದೆ.[೪೧]

ಜಬಾಂಗ್‍ವರ್ಲ್ಡ್.ಕಾಂ ಅನ್ನು ೨೦೧೬ ರ ಮಧ್ಯದಲ್ಲಿ ಮುಚ್ಚಲಾಯಿತು.

ಪ್ರಶಸ್ತಿಗಳು[ಬದಲಾಯಿಸಿ]

ಟ್ರಸ್ಟ್ ರಿಸರ್ಚ್ ಅಡ್ವೈಸರಿ ನಡೆಸಿದ ಬ್ರಾಂಡ್ ಟ್ರಸ್ಟ್ ರಿಪೋರ್ಟ್ ಇಂಡಿಯಾ ಸ್ಟಡಿ - ೨೦೧೩ ರ ಪ್ರಕಾರ, ಜಬಾಂಗ್‍ ಭಾರತದ ಅಗ್ರ ೨೫ ವಿಶ್ವಾಸಾರ್ಹ ಆನ್ಲೈನ್ ಬ್ರಾಂಡ್‍ಗಳಲ್ಲಿ ಒಂದಾಗಿದೆ.[೪೨]

ವರ್ಷ ಸಂಸ್ಥೆ ವರ್ಗ ನಾಮನಿರ್ದೇಶಿತ(ಗಳು) ಫಲಿತಾಂಶ
೨೦೧೭ ಮಾಧ್ಯಮ ಪ್ರಶಸ್ತಿಗಳಲ್ಲಿ ವೈವಿಧ್ಯತೆ ವರ್ಷದ ಮಾರ್ಕೆಟಿಂಗ್ ಅಭಿಯಾನ ಬಿ ಯು ನಾಮನಿರ್ದೇಶನ

ಉಲ್ಲೇಖಗಳು[ಬದಲಾಯಿಸಿ]

  1. "Excl: Groupon promoters to launch new e-commerce biz". The Times of India. Archived from the original on 2013-08-20. Retrieved 2011-11-15.
  2. "Indian Online Retailer Flipkart Raises $200 Million". WSJ. Retrieved 2013-07-11.
  3. "India absent in top global e-tailing market rankings". Livemint.com. Retrieved 2011-11-22.
  4. "Flipkart formally shut down Jabong to shift focus completely on its premium clothing platform Myntra".
  5. "Jabong out of picture. Flipkart to focus on Myntra".
  6. "Jabong bangs into top rung of Indian e-commerce; Can it sustain?". Techcircle.com. Retrieved 2013-08-01.
  7. "Indian businesses have patience tested over online ventures". BBC. 2012-11-27. Retrieved 2013-11-20.
  8. "Jabong co-founder quits to launch own venture". Retrieved 2014-01-24.
  9. "Myntra's Big Leap Forward". Forbes. Retrieved 2013-11-20.
  10. "Excl: The screen revolution". The Economist. 2013-03-16. Retrieved 2013-05-16.
  11. "Flipkart-owned Myntra acquires Jabong for $70 mn". The Times of India. 2017-05-04. Retrieved 2017-05-04.
  12. Kumar, Meenakshi. "For Dorothy Perkins Jabong is the 3rd largest global e-tailer" (in ಬ್ರಿಟಿಷ್ ಇಂಗ್ಲಿಷ್). Retrieved 2017-10-16.
  13. "Jabong to raise $ 100 million in fresh round of funding". indiatimes.com. Retrieved 2014-02-05.
  14. "Jabong fuels the shopping madness". Best Media info. Retrieved 2013-11-18.
  15. "Must haves for 2013 by Jabong.com". Right Column Media. Retrieved 2013-01-07.
  16. "Browse for the best". New Indian Express. Archived from the original on 31 October 2013. Retrieved 2013-11-21.
  17. "E-shopping for the unusual". Hindustan Times. Archived from the original on 3 December 2013. Retrieved 2013-11-21.
  18. "Excl: Now, an online portal with a strange name comes knocking". 4Ps Business & Marketing. Retrieved 2013-02-15.
  19. "Bolder attempts". Hindu Business Line. Retrieved 2013-11-20.
  20. "Jabong.com does a fun take on 'shopaholism'". Best Media Info. Retrieved 2013-04-23.
  21. "Jabong fuels the shopping madness". Best Media Info. Retrieved 2013-11-18.
  22. "Jabong.com invites shopaholics to 'Go Crazy Shopping'". CampaignIndia. Retrieved 2013-11-20.
  23. "Jabong, Puma launch digital fitness campaign with Chitrangada Singh". Financial Express. Retrieved 2013-11-18.
  24. "Chitrangda Singh dazzles Delhiites with her fitness". Times of India. Retrieved 2013-11-20.
  25. "India's first e-fashion week starts July 25". India Today. Retrieved 2014-06-05.
  26. "Jabong launches its fashion magazine, The Juice". Afaqs. Retrieved 2014-05-05.
  27. "Arun Chandra Mohan - The pacemaker". Mint. Retrieved 2014-07-05.
  28. "Social media drives 'Yeh Jawaani Hai Deewani' marketing blitz". Exchange4Media. Retrieved 2013-05-07.
  29. "Online shopping portal offers Virender Sehwag's special cricket bats". India Today (in ಇಂಗ್ಲಿಷ್). Retrieved 21 January 2020.
  30. "Running for eyeballs". Afaqs. Retrieved 2013-11-21.
  31. "'Bhaag Milkha Bhaag' to be promoted through shopping websites". IndianTelevision. Retrieved 2013-12-07.
  32. "Amazon in talks to acquire Jabong; move a counter to Flipkart's Myntra buy?". The Economic Times. Retrieved 16 October 2014.
  33. Variyar, Mugdha (2018-11-17). "Jabong merged with Myntra, over 150 laid off". The Economic Times. Retrieved 2019-07-26.
  34. Iyer, Krishnan (2014-10-11). "Indian Super League: Mumbai City FC announce Jabong as Principal Sponsor for ISL 2014". India News, Breaking News | India.com (in ಇಂಗ್ಲಿಷ್). Retrieved 2021-05-31.
  35. "Excl: Jabong bangs into top rung of Indian e-commerce; Can it sustain?". Techcircle. Retrieved 2013-08-01.
  36. "Excl: Statistics Summary for jabong.com". Alexa. Archived from the original on 23 June 2018. Retrieved 2013-04-23.
  37. "Excl: 2012 Search Trends India". Retrieved 2013-03-25.
  38. "Flipkart shuts down fashion portal Jabong, to focus fully on Myntra". Livemint (in ಇಂಗ್ಲಿಷ್). 2020-02-06. Retrieved 2020-03-23.
  39. Mittal, Aarzoo (2020-02-05). "Finally, Flipkart shuts down Jabong". Entrackr (in ಅಮೆರಿಕನ್ ಇಂಗ್ಲಿಷ್). Retrieved 2020-03-23.
  40. "Jabong Out Of Picture, Flipkart To Focus On Myntra". Inc42 Media (in ಅಮೆರಿಕನ್ ಇಂಗ್ಲಿಷ್). 2020-02-05. Retrieved 2020-03-23.
  41. "Excl: Jabong Goes International With Jabongworld.com". MediaNama. Retrieved 2013-02-04.
  42. "Google, Facebook, eBay, Naukri among most trusted internet brands". exchange4media. Retrieved 2013-02-22.