ಚೌಡಂಗಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Solanum erianthum
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
Subgenus:
Section:
ಪ್ರಜಾತಿ:
S. erianthum
Binomial name
Solanum erianthum

ಚೌಡಂಗಿ ಸಸ್ಯದ ವೈಜ್ಞಾನಿಕ ಹೆಸರು ಸೊಲಾನ್ಂ ಇರಿಯಾಂತಂ

ಇದು ಸೊಲನೇಸಿ ಕುಟುಂಬಕ್ಕೆ ಸೇರಿದೆ[೨]

ಕನ್ನಡದ ಇತರ ಹೆಸರುಗಳು[ಬದಲಾಯಿಸಿ]

  • ಅರಿಮಣಿಗಿಡ
  • ಕಲ್ಲಟ್ಟಿ
  • ಕಾಡುಸುಂಡೆ
  • ಕಲ್ಲಾರತಿ
  • ಸವುಡಂಗಿ
  • ಸೌಡಂಗಿ

ಇತರ ಭಾಷೆಯ ಹೆಸರುಗಳು[ಬದಲಾಯಿಸಿ]

  • ಸಂಸ್ಕೃತ-ಗಂಧಿರ, ಪಥಿ, ಪ್ರಿಯಂಕರಿ.
  • ಹಿಂದಿ-ಅಶೇತ.
  • ತಮಿಳು-ಅನೈಚುಂಡೈ,ಮಲೈಚುಂಡೆ,ಸುಂಡೈ.
  • ತೆಲುಗು-ರಸಗಡಿ,ಬುಡಮ.

ಪರಿಚಯ[ಬದಲಾಯಿಸಿ]

ಚೌಡಂಗಿ ಸಾಮಾನ್ಯವಾಗಿ ಹಳ್ಳಿಗಳ ಸುತ್ತಮುತ್ತ,ಗೊಬ್ಬರಗುಂಡಿಯ ಹತ್ತಿರ,ಪಾಳುಬಿದ್ದ ಕೋಟೆಕೊತ್ತಲ,ಮನೆಗಳ ಹತ್ತಿರ ಮತ್ತು ಬೀಳು ಭೂಮಿಯಲ್ಲಿ ಬೆಳೆಯುತ್ತದೆ.ಪ್ರಾಕೃತಿಕವಾಗಿ ಇದು ಕಾಡುಗಳಲ್ಲಿ ಕಂಡುಬರುವುದು ಅಪರೂಪ.ಚೌಡಂಗಿ ೮-೧೨ ಅಡಿ ಎತ್ತರ ಬೆಳೆಯುವ ಮಧ್ಯಮ ತರಹದ ಒಂದು ಮರ.ಕಾಂಡ ಅಷ್ಟೊಂದು ಗಟ್ಟಿಯಾಗಿರುವುದಿಲ್ಲ.ಮರದಲ್ಲಿ ಮುಳ್ಳುಗಳಿರುವುದಿಲ್ಲ.ಸರಳವಾದ ಕರ್ನೆಯಾಕಾರದ ಅಥವಾ ಉದ್ದ ಅಂಡಾಕಾರದ ಎಲೆಗಳು ಪರ್ಯಾಯವಾಗಿರುತ್ತವೆ ಆದರೆ ಕಾಂಡದ ತುದಿಯಲ್ಲಿ ಒತ್ತಾಗಿ ಜೋಡಣೆಯಾಗಿರುವುದರಿಂದ ಅಲ್ಪ ಸ್ವಲ್ಪ ಎದುರುಬದರಾಗಿರುತ್ತವೆ.ಹಸಿರು ಮಿಶ್ರಿತ ಬದನೆ ಗಿಡದ ಹೂಗಳಂತಹ ಹೂಗಳು ಎಲೆಯ ಕಂಕುಳಲ್ಲಿ ಗೊಂಚಲೋಪಾದಿಯಾಗಿರುತ್ತವೆ.ಸಣ್ಣ ಗೋಲಿಗಾತ್ರದ ಹಣ್ಣುಗಳು ಎಳಸಾಗಿರುವಾಗ ಹಸಿರಾಗಿರುತ್ತವೆ ಬಲಿತಂತೆ ಕಿತ್ತಳೆ ಬಣ್ಣಕ್ಕೆ ತಿರುಗುತ್ತವೆ.ಕಾಯಿಯ ಮೇಲೆ ಯಾವುದೇ ರೀತಿಯ ಗೆರೆಗಳಾಗಲಿ,ಪಟ್ಟಿಗಳಾಗಲಿ ಇರುವುದಿಲ್ಲ.

ಉಪಯೋಗಗಳು[ಬದಲಾಯಿಸಿ]

  1. ಒಣಗಿದ ಚೌಡಂಗಿ ಗಿಡದ ಸಮೂಲವನ್ನು ಬಿಸಿನೀರಿನೊಡನೆ ಅರೆದು ಪಟ್ಟು ಹಾಕುವುದರಿಂದ ಊತ ಮತ್ತು ಉರಿ ಶಮನವಾಗುತ್ತದೆ.
  2. ಗರ್ಭಿಣಿ ಹೆಂಗಸರ ಕೆಮ್ಮಿಗೆ ಚೌಡಂಗಿ ಸೊಪ್ಪಿನ ರಸಕ್ಕೆ ರಾಗಿ ಹಿಟ್ಟು ಹಾಕಿ ಕಲಸಿ ರೊಟ್ಟಿ ಮಾಡಿ ಕೊಡುತ್ತಾರೆ.
  3. ಚೌಡಂಗಿ ಸೊಪ್ಪಿನೊಡನೆ ಅರಿಶಿನ,ಮೆಣಸು ಸೇರಿಸಿ ಅರೆದು ವಾಯು ನೋವಿರುವ ಜಾಗದ ಮೇಲೆ ಪಟ್ಟು ಹಾಕುತ್ತಾರೆ.
  4. ಪ್ಲೇಗಿನ ಗಡ್ಡೆಗೂ ಚೌಡಂಗಿ ಸೊಪ್ಪನ್ನು ಅರೆದು ಲೇಪಿಸುತ್ತಾರೆ ಇದರಿಂದ ಗಡ್ಡೆ ಕರಗಿ ಜ್ವರ ಕಡಿಮೆಯಾಗುತ್ತದೆ.[೩]

ಉಲ್ಲೇಖ[ಬದಲಾಯಿಸಿ]

  1. "Taxon: Solanum erianthum D. Don". Germplasm Resources Information Network. United States Department of Agriculture. 2010-11-30. Retrieved 2013-02-05.
  2. http://m.dailyhunt.in/news/india/kannada/prajavani-epaper-praj/musuku-badanege-aashraya-newsid-46553263
  3. ಕರ್ನಾಟಕದ ಔಷಧಿಯ ಸಸ್ಯಗಳು ಡಾ|| ಮಾಗಡಿ ಆರ್. ಗುರುದೇವ, ಪ್ರಕಾಶಕರು:ದಿವ್ಯಚಂದ್ರ ಪ್ರಕಾಶನ,ಬೆಂಗಳೂರು,ಮುದ್ರಣ:೨೦೧೦ ,ಪು.ಸ.೧೩೯
"https://kn.wikipedia.org/w/index.php?title=ಚೌಡಂಗಿ&oldid=684780" ಇಂದ ಪಡೆಯಲ್ಪಟ್ಟಿದೆ