ವಿಷಯಕ್ಕೆ ಹೋಗು

ಚೆಮ್ಮೀನ್ (ಕಾದಂಬರಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Manappa y Bhajantri/ಚೆಮ್ಮೀನ್(ಕಾದಂಬರಿ)
ಚೆಮ್ಮೀನ್

ಚೆಮ್ಮೀನ್ ಇದು ೧೯೫೬ ರಲ್ಲಿ ತಗಳಿ ಶಿವಶಂಕರ ಪಿಳ್ಳೆ ಬರೆದ ಮಲಯಾಳಂ ಕಾದಂಬರಿ. ಈ ಕಾದಂಬರಿಯು ಹಿಂದೂ ಮೀನುಗಾರನ ಮಗಳು ಕರುತಮ್ಮ ಮತ್ತು ಮುಸ್ಲಿಂ ವ್ಯಾಪಾರಿಯ ಮಗ ಪಾರೀಕುಟ್ಟಿ ನಡುವಿನ ಸಂಬಂಧದ ಕಥೆಯನ್ನು ಹೇಳುತ್ತದೆ. ಕಾದಂಬರಿಯ ವಿಷಯವು ದಕ್ಷಿಣ ಭಾರತದ ಕರಾವಳಿ ರಾಜ್ಯವಾದ ಕೇರಳ ರಾಜ್ಯದ ಮೀನುಗಾರ ಸಮುದಾಯಗಳಲ್ಲಿರುವ ಒಂದು ಕತೆಯಾಗಿದೆ. ಈ ಕಾದಂಬರಿಯು ಮಹಿಳೆಯರ ಪರಿಶುದ್ಧತೆಯ ಬಗ್ಗೆ ತಿಳಿಸುತ್ತದೆ. ವಿವಾಹಿತ ಮೀನುಗಾರ ಮಹಿಳೆ ತನ್ನ ಪತಿ ಸಮುದ್ರದಲ್ಲಿದ್ದಾಗ ವ್ಯಭಿಚಾರ ಮಾಡಿದರೆ ಸಮುದ್ರ ದೇವತೆ (ಕಡಲಮ್ಮ/ಸಮುದ್ರ - ತಾಯಿ ಎಂದರ್ಥ) ಅವನನ್ನು ಸೇವಿಸುತ್ತಾಳೆ. ಈ ನಂಬಿಕೆಯನ್ನು ಶಾಶ್ವತಗೊಳಿಸುವ ರೀತಿಯಲ್ಲಿ ಟಕಳಿ ಶಿವಶಂಕರ ಪಿಳ್ಳೆ ಅವರು ಈ ಕಾದಂಬರಿಯನ್ನು ಬರೆದಿದ್ದಾರೆ. ಇದನ್ನು ಇದೆ ಹೆಸರಿನಲ್ಲಿ ಚಲನಚಿತ್ರವಾಗಿ ಅಳವಡಿಸಲಾಗಿದೆ, ಇದು ಭಾರತದ ಕಾದಂಬರಿ ಲೋಕದಲ್ಲಿ ಪ್ರಶಂಸೆ ಮತ್ತು ಮಾರಾಟದಲ್ಲಿ ಭಾರತದಲ್ಲಿ ಇದುವರೆಗೂ ಕಂಡಿರದ ಯಶಸ್ಸನ್ನು ಗಳಿಸಿದೆ.

ಇಲ್ಲಿ ಲೇಖಕರು ಅವರ ಇತರ ಕೃತಿಗಳಲ್ಲಿ ಸಹಜವಾಗಿ ಕಾಣುವ ವಾಸ್ತವಿಕತೆಯ ಬಗ್ಗೆ ಎಳ್ಳಷ್ಟು ಗಮನ ನೀಡದೆ ಕೇವಲ ಕರಾವಳಿ ಜನರ ನಂಬಿಕೆ, ಅಭಿಪ್ರಾಯ ಮತ್ತು ಭಾವನೆಗಳ ವೈಭವೀಕರಣಕ್ಕೆ ಪ್ರಾಮುಖ್ಯತೆಯನ್ನು ನೀಡುವುದರ ಮೂಲಕ ಕರಾವಳಿ ಜನರ ಅದ್ಬುತ ಕಥೆಯನ್ನು ಅಕ್ಷರ ರೂಪದಲ್ಲಿ ಜಗತ್ತಿಗೆ ನೀಡಿದ್ದಾರೆ. ಜೊತೆಗೆ ಇಲ್ಲಿ ಒಂದು ನೀತಿಕಥೆಯನ್ನು ನೀಡಿದ್ದಾರೆ. ಇದರಲ್ಲಿ ಮೀನುಗಾರರ ಸಮುದಾಯದ ಜನರ ಜೀವನವನ್ನು ಭಾವನಾತ್ಮಕ ವಿವರಗಳೊಂದಿಗೆ ಚಿತ್ರಿಸಲಾಗಿದೆ. ಅತ್ಯಂತ ಕಟುವಾದ ನೋವನ್ನು ಹೊಂದಿರುವ ಜೀವನ ಪದ್ಧತಿಗಳು, ನಿಷೇಧಗಳು, ನಂಬಿಕೆಗಳು, ಆಚರಣೆಗಳು ಮತ್ತು ದೈನಂದಿನ ವ್ಯವಹಾರಗಳನ್ನು ಲೇಖಕರು ತಮ್ಮ ಲೇಖನದ ಮೂಲಕ ಜೀವಂತವಾಗಿರಿಸಿದ್ದಾರೆ. ಈ ಕಾದಂಬರಿಯು ೧೯೫೭ ರಲ್ಲಿ ಭಾರತದ ಎರಡನೇ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಗಳಿಸಿದೆ.

ಕಥಾವಸ್ತು

[ಬದಲಾಯಿಸಿ]

ಚೆಂಬನಕುಂಜು ಅವರ ಜೀವನದ ಆಧಾರ ದೋಣಿ ಮತ್ತು ಬಲೆ. ದೋಣಿಯಲ್ಲಿ ಸಾಗಿಸಿದ ಮೀನುಗಳನ್ನು ತನಗೆ ಮಾರಲಾಗುವುದು ಎಂಬ ಷರತ್ತಿನ ಮೇಲೆ ಯುವ ಮುಸ್ಲಿಂ ವ್ಯಾಪಾರಿ ಪಾರೀಕುಟ್ಟಿಯ ಸಹಾಯದಿಂದ ಎರಡನ್ನೂ ಖರೀದಿಸುವಲ್ಲಿ ಅವನು ಅಂತಿಮವಾಗಿ ಯಶಸ್ವಿಯಾಗುತ್ತಾನೆ. ಚೆಂಬನಕುಂಜು ಅವರ ಸುಂದರ ಮಗಳು ಕರುತಮ್ಮ ಮತ್ತು ಪಾರೀಕುಟ್ಟಿ ಪರಸ್ಪರ ಪ್ರೀತಿಸುತ್ತಾರೆ. ಕರುತಮ್ಮನ ತಾಯಿ, ಚಕ್ಕಿ, ಇದರ ಬಗ್ಗೆ ತಿಳಿದ ತಕ್ಷಣ ತನ್ನ ಮಗಳಿಗೆ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಮತ್ತು ತಮ್ಮ ಕುಟುಂಬದ ಸಾಮಾಜಿಕ ವ್ಯವಸ್ಥೆಯ ಬಗ್ಗೆ ತನ್ನ ಮಗಳಿಗೆ ತಿಳಿಸುತ್ತಾಳೆ. ಕರುತಮ್ಮ ತನ್ನ ಪ್ರಿಯಕರ ಪಾರೀಕುಟ್ಟಿಗಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡುತ್ತಾಳೆ ಮತ್ತು ತನ್ನ ತಂದೆ ಚೆಂಬನಕುಂಜು ತನ್ನ ಮೀನುಗಾರಿಕೆ ಸಂದರ್ಭದಲ್ಲಿ ಪರಿಚಯವಾದ ಅನಾಥ ಕುಶಲ ಮೀನುಗಾರ ಪಳನಿಯನ್ನು ಮದುವೆಯಾಗುತ್ತಾಳೆ. ಮದುವೆಯ ನಂತರ, ಕರುತಮ್ಮ ತನ್ನ ಪತಿಯೊಂದಿಗೆ ಅವನ ಹಳ್ಳಿಗೆ ಹೋಗಲು ನಿರ್ದರಿಸುತ್ತಾಳೆ, ಆದರೆ ತನ್ನ ತಾಯಿಯ ಹಠಾತ್ ಅನಾರೋಗ್ಯದ ಕಾರಣದಿಂದ ಅವಳ ತಂದೆಯು ಅವಳನ್ನು ಅಲ್ಲಿಯೇ ಉಳಿಯಲು ಪದೇ ಪದೇ ವಿನಂತಿಸುತ್ತಾನೆ. ಆದರೆ ತನ್ನ ತಂದೆಯ ಮೇಲಿನ ಕೋಪದಲ್ಲಿಅವಳು ಅಲ್ಲಿ ಉಳಿಯಲು ನಿರಾಕರಿಸುತ್ತಾಳೆ, ಹಾಗಾಗಿ ಚೆಂಬನಕುಂಜು ಅವಳನ್ನು ಕೊನೆಯವರೆಗೂ ವಿರೋಧಿಸುತ್ತಾನೆ.

ಚೆಂಬನಕುಂಜು ಪಾರೀಕುಟ್ಟಿಯ ಸಹಾಯದಿಂದ ಒಂದು ದೋಣಿ ಮತ್ತು ಬಲೆಯನ್ನು ಪಡೆದುಕೊಂಡು ತರುವಾಯ ಅದರ ಸಹಾಯದಿಂದ ಇನ್ನೊಂದನ್ನು ಕೊಂಡುಕೊಂಡರು ಅವನ ದುರಾಸೆ ಕೆಟ್ಟಮನಸ್ಸು ಬದಲಾಗದೆ ಅವನ ಹುಚ್ಚು ಆಸೆಯಿಂದ ಪಾರೀಕುಟ್ಟಿ ದಿವಾಳಿ ಆಗುತ್ತಾನೆ. ಜೊತೆಗೆ ಚೆಂಬನಕುಂಜು ತನ್ನ ಹೆಂಡತಿಯ ಹಠಾತ್ ಮರಣದ ನಂತರ ತನ್ನ ಮೊದಲ ದೋಣಿಯನ್ನು ಖರೀದಿಸಿದ ವ್ಯಕ್ತಿಯ ವಿಧವೆಯಾದ ಪಪ್ಪಿಕುಂಜನ್ನು ಮದುವೆಯಾಗುತ್ತಾನೆ. ಚೆಂಬನಕುಂಜುವಿನ ಕಿರಿಯ ಮಗಳಾದ ಪಂಚಮಿ ತನ್ನ ಮಲತಾಯಿಯ ಕಾರಣದಿಂದ ತನ್ನ ತಂದೆಯಿಂದ ದೂರವಾಗಿ ಕರುತಮ್ಮಳ ಊರಿಗೆ ಮನೆಯಿಂದ ಹೊರಡುತ್ತಾಳೆ. ಏತನ್ಮಧ್ಯೆ, ಕರುತಮ್ಮ ಎಲ್ಲವನ್ನು ಮರೆತು ಉತ್ತಮ ಹೆಂಡತಿ ಮತ್ತು ತಾಯಿಯಾಗಲು ಪ್ರಯತ್ನಿಸುತ್ತಿದ್ದಳು. ಆದರೆ ಪಾರೀಕುಟ್ಟಿಯ ಮೇಲಿನ ಅವಳ ಹಳೆಯ ಪ್ರೀತಿಯ ವಿಷಯವು ಹಳ್ಳಿಯಲ್ಲಿ ಹರಡಿತು. ಈ ಕಾರಣದಿಂದ ಪಳನಿಯ ಸ್ನೇಹಿತರು ಅವನನ್ನು ಅವರಿಂದ ದೂರ ಇಡಲು ಪ್ರಾರಂಭಿಸುತ್ತಾರೆ ಮತ್ತು ಅವರೊಂದಿಗೆ ಮೀನುಗಾರಿಕೆಗೆ ಕರೆದೊಯ್ಯಲು ನಿರಾಕರಿಸುತ್ತಾರೆ. ಕರುತಮ್ಮ ಮತ್ತು ಪಾರೀಕುಟ್ಟಿ ಒಂದು ರಾತ್ರಿ ಆಕಸ್ಮಾತಾಗಿ ಭೇಟಿಯಾಗುತ್ತಾರೆ ಮತ್ತು ಅವರ ಹಳೆಯ ಪ್ರೀತಿಯು ಎಲ್ಲವು ಒಂದೊಂದಾಗಿ ಅವರಿಬ್ಬರ ಕಣ್ಣೆದುರಿಗೆ ಬಂದುಹೋಗುತ್ತದೆ. ಇದೇ ಸಂದರ್ಭದಲ್ಲಿ ಪಳನಿ ಸಮುದ್ರದಲ್ಲಿ ಏಕಾಂಗಿಯಾಗಿ ಮೀನುಗಾರಿಕೆಗಾಗಿ ಹೋಗಿರುತ್ತಾನೆ. ಆಗ ದೊಡ್ಡ ಶಾರ್ಕ್ ಅವನನ್ನು ಬೆನ್ನಟ್ಟುತ್ತದೆ ಮತ್ತು ಇದರಿಂದ ತಪ್ಪಿಸಿಕೊಳ್ಳಲು ಹೋಗಿ ಒಂದು ದೊಡ್ಡ ಸುಳಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ ಮತ್ತು ಸಮುದ್ರದಲ್ಲಿ ಮುಳುಗುತ್ತಾನೆ . ಮರುದಿನ ಬೆಳಿಗ್ಗೆ ಕರುತಮ್ಮ ಮತ್ತು ಪಾರೆಕುಟ್ಟಿಯ ಸತ್ತ ದೇಹಗಳು ಕೈ ಕೈ ಹಿಡಿದ ರೀತಿಯಲ್ಲಿ ಸಮುದ್ರದ ದಡದಲ್ಲಿ ಅನಾಥವಾಗಿ ಮಲಗಿದ್ದವು. ಅಲ್ಲೆ ಸ್ವಲ್ಪ ದೂರದಲ್ಲಿ ಶಾರ್ಕ್‌ನ ದಾಳಿಯಿಂದ ಗಾಯಗೊಂಡು ಸಮುದ್ರದಲ್ಲಿ ಮುಳುಗಿದ ಪಳನಿಯ ಶವ ಬಿದ್ದಿತ್ತು.

ಪಾತ್ರಗಳು

[ಬದಲಾಯಿಸಿ]
  • ಚೆಂಬಂಕುಂಜು - ಒಬ್ಬ ಅಪ್ರಾಮಾಣಿಕ ಮೀನುಗಾರ
  • ಚಕ್ಕಿ - ಚೆಂಬಂಕುಂಜುನ ಸಂಗಾತಿ
  • ಪಾರೀಕುಟ್ಟಿ - ಕರುತಮ್ಮನನ್ನು ಪ್ರೀತಿಸುವ ಮುಸ್ಲಿಂ ವ್ಯಾಪಾರಿ
  • ಕರುತಮ್ಮ - ಚೆಂಬನಕುಂಜು ಅವರ ಮಗಳು
  • ಪಳನಿ - ಕರುತಮ್ಮನನ್ನು ಮದುವೆಯಾಗುವ ಮೀನುಗಾರ
  • ಪಂಚಮಿ - ಚೆಂಬಂಕುಂಜು ಅವರ ಕಿರಿಯ ಮಗಳು. . .

ಸ್ಫೂರ್ತಿ ಮತ್ತು ಪ್ರಭಾವಗಳು

[ಬದಲಾಯಿಸಿ]

ಚೆಮ್ಮೀನ್ ಕೇರಳದ ಮೀನುಗಾರರ ಜೀವನದಲ್ಲಿನ ಆಕಾಂಕ್ಷೆಗಳು, ಹೋರಾಟ ಮತ್ತು ದುಃಖವನ್ನು ವ್ಯಕ್ತಪಡಿಸುವ ಪಿಳ್ಳೈ ಅವರ ಅತ್ಯುತ್ತಮ ಕಾದಂಬರಿಯಾಗಿದೆ. ಚೆಮ್ಮೀನ್ ಓದುಗರಿಗಾಗಿ ತುಂಬಾ ವಿಷಯವನ್ನು ಹೊಂದಿದೆ. ಈ ವಿಮರ್ಶಾತ್ಮಕ ಅಧ್ಯಯನವು ವಿವಿಧ ವಿಶ್ವವಿದ್ಯಾಲಯಗಳ ಉನ್ನತ ಪದವಿ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಮತ್ತು ಸಾಮಾನ್ಯ ಓದುಗರಿಗೆ ಈ ಕಾದಂಬರಿಗೆ ಸಂಬಂಧಿಸಿದ ವಿವಿಧ ಅಂಶಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಬಡ ಮೀನುಗಾರನ ದುರಂತವನ್ನು ಮಹಾಕಾವ್ಯದ ರೀತಿಯಲ್ಲಿ ಚಿತ್ರಿಸಲಾಗಿದೆ.ಈ ಕಾದಂಬರಿಯು ಯುನೆಸ್ಕೋದ ಪ್ರತಿನಿಧಿ ಕೃತಿಗಳ ಸಂಗ್ರಹಕ್ಕೆ - ಭಾರತೀಯ ಸರಣಿಯ ಭಾಗವಾಗಿ ಅಂಗೀಕರಿಸಲ್ಪಟ್ಟಿದೆ, ಇದನ್ನು ವಿ.ಕೆ.ನಾರಾಯಣ ಮೆನನ್ ಅನುವಾದಿಸಿದ್ದಾರೆ ಮತ್ತು ೧೯೬೨ ರಲ್ಲಿ ಲಂಡನ್‌ನ ವಿಕ್ಟರ್ ಗೊಲ್ಲನ್ಜ್ ಅವರು ಪ್ರಕಟಿಸಿದರು. ಇದು ಸ್ವಾತಂತ್ರ್ಯದ ನಂತರ ಅಥವಾ ವಸಾಹತುಶಾಹಿ ನಂತರದ ಯುಗದ ಆರಂಭದಲ್ಲಿ ಇಂಗ್ಲಿಷ್‌ಗೆ ಅನುವಾದಗೊಂಡ ಮೊದಲ ಮಲಯಾಳಂ ಕಾದಂಬರಿಯಾಗಿದೆ. []

ಅನುವಾದಗಳು

[ಬದಲಾಯಿಸಿ]

ವಿಶ್ವದದ್ಯಾಂತ ಯಶಸ್ವಿಯಾದ ಚೆಮ್ಮೀನ್ ಅನ್ನು ಹಲವಾರು ಭಾರತೀಯ ಭಾಷೆಗಳೊಂದಿಗೆ ಇಂಗ್ಲಿಷ್, ರಷ್ಯನ್, ಜರ್ಮನ್, ಇಟಾಲಿಯನ್, ಅರೇಬಿಕ್ ಮತ್ತು ಫ್ರೆಂಚ್ ಭಾಷೆಗಳಿಗೆ ಅನುವಾದಿಸಲಾಗಿದೆ. []

ಚೆಮ್ಮೀನ್ ಅನೇಕ ಬಾರಿ ಇಂಗ್ಲಿಷ್‌ಗೆ ಅನುವಾದಗೊಂಡಿದೆ. ನಾರಾಯಣ ಮೆನನ್ ಅವರ ಅನುವಾದದ ಆಂಗರ್ ಆಫ಼್ ದ ಸೀ ಗಾಡೆಸ್ ಎಂಬ ಶೀರ್ಷಿಕೆಯು ಇಂದಿಗೂ ಜನಪ್ರಿಯವಾಗಿದೆ. ಮತ್ತೊಂದು ಇಂಗ್ಲಿಷ್ ಅನುವಾದವು ಅನಿತಾ ನಾಯರ್ ಅವರದ್ದು, ಮಲಯಾಳಂನಲ್ಲಿರುವಂತೆ ಚೆಮ್ಮೀನ್ ಎಂಬ ಶೀರ್ಷಿಕೆಯಿದೆ. [] ಇದು ಹಲವಾರು ಆವೃತ್ತಿಗಳಿಗೆ ಹೋಗಿದೆ ಮತ್ತು ಭಾರತದಾದ್ಯಂತ ಪುಸ್ತಕದ ಅಂಗಡಿಗಳಲ್ಲಿ ಸುಲಭವಾಗಿ ಲಭ್ಯವಿದೆ.

೧೯೮೦ ರಲ್ಲಿ [] ಕಮಲ್ ಜಸಾಪರಾ ಅವರು ಈ ಕಾದಂಬರಿಯನ್ನು ಗುಜರಾತಿಗೆ ಅನುವಾದಿಸಿದ್ದಾರೆ. ಚೆಮ್ಮೀನ್ ಅನ್ನು ಅರೇಬಿಕ್ ಭಾಷೆಗೆ ಮುಹಿಯುದ್ದೀನ್ ಅಲುವೇ ಅವರು ಶೆಮ್ಮೀನ್ ಎಂದು ಅನುವಾದಿಸಿದ್ದಾರೆ.

ಚಲನಚಿತ್ರ ರೂಪಾಂತರ

[ಬದಲಾಯಿಸಿ]

ಇದು ೧೯೬೫ ರಲ್ಲಿ ಚಲನಚಿತ್ರವಾಯಿತು, ಇದು ಎಲ್ಲ ಕಡೆ ವಿಮರ್ಶಾತ್ಮಕ ಮೆಚ್ಚುಗೆ ಮತ್ತು ಹಣವನ್ನು ಗಳಿಸಿತು. ಚೆಮ್ಮೀನ್ ಎಂಬ ಶೀರ್ಷಿಕೆಯ ಚಿತ್ರವನ್ನು ರಾಮು ಕರಿಯಾಟ್ ನಿರ್ದೇಶಿಸಿದ್ದಾರೆ. ಶೀಲಾ, ಮಧು, ಕೊಟ್ಟಾರಕ್ಕರ ಶ್ರೀಧರನ್ ನಾಯರ್ ಮತ್ತು ಸತ್ಯನ್ ಚಿತ್ರದ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇದು ೧೯೬೫ ರ ಅತ್ಯುತ್ತಮ ಚಲನಚಿತ್ರಕ್ಕಾಗಿ ಕೊಡುವ ಚಿನ್ನದ ಪದಕವನ್ನು ಭಾರತದ ರಾಷ್ಟ್ರಪತಿಗಳಿಂದ ಪಡೆದುಕೊಂಡಿತು. ಚಿತ್ರಕಥೆಯನ್ನು ಎಸ್ಎಲ್ ಪುರಂ ಸದಾನಂದನ್ ಬರೆದಿದ್ದಾರೆ, ಮಾರ್ಕಸ್ ಬಾರ್ಟ್ಲಿ ಅವರ ಛಾಯಾಗ್ರಹಣ ಮತ್ತು ಹೃಷಿಕೇಶ್ ಮುಖರ್ಜಿ ಮತ್ತು ಕೆಡಿ ಜಾರ್ಜ್ ಸಂಕಲನ ಮಾಡಿದ್ದಾರೆ. ವಯಲಾರ್ ಅವರ ಸಾಹಿತ್ಯದೊಂದಿಗೆ ಸಲೀಲ್ ಚೌಧರಿ ಅವರ ಸಂಗೀತದಲ್ಲಿ ಹಾಡುಗಳನ್ನು ರಚಿಸಲಾಗಿದೆ ಮತ್ತು ಮನ್ನಾ ಡೇ, ಕೆಜೆ ಯೇಸುದಾಸ್ ಮತ್ತು ಪಿ. ಲೀಲಾ ಅವರು ಹಾಡನ್ನು ಹಾಡಿದ್ದಾರೆ

ಉಲ್ಲೇಖಗಳು

[ಬದಲಾಯಿಸಿ]
  1. http://unesdoc.unesco.org/images/0008/000822/082219eo.pdf "India: yesterday's heritage, tomorrow's hopes"
  2. "Anger of the Sea-Goddess - excerpt from Indian novel Chemmeen"
  3. "Shinie Antony recommends: Must reads of 2011"
  4. Rao, D. S. (2004). Five Decades: The National Academy of Letters, India : a Short History of Sahitya Akademi. New Delhi: Sahitya Akademi. p. 48. ISBN 978-81-260-2060-7.

ಬಾಹ್ಯ ಕೊಂಡಿಗಳು

[ಬದಲಾಯಿಸಿ]