ವಿಷಯಕ್ಕೆ ಹೋಗು

ಚಿಟ್ಟು ಮರಕುಟುಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿಟ್ಟು ಮರಕುಟುಕ
Conservation status
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
ಎಹ್.ಕ್ಯಾನೆಂಟೆ
Binomial name
ಹೆಮಿಸಿರ್ಕಸ್ ಕ್ಯಾನೆಂಟೆ
(Lesson, 1830)
Synonyms

ಹೆಮಿಸಿರ್ಕಸ್ ಕೊರ್ಡಾಟಸ್

ಚಿಟ್ಟು ಮರಕುಟುಕ (Hemicircus canente ) ವು ಮರಕುಟುಕ ಪಕ್ಷಿಗಳಲ್ಲಿನ ಒಂದು ವರ್ಗವಾಗಿದೆ. ಈ ಪ್ರಕಾರದ ಪಕ್ಷಿಗಳು ಎದ್ದುಕಾಣುವಂತೆ ಬಿಳಿ ಮತ್ತು ಕಪ್ಪು ಬಣ್ಣಗಳಿಂದ ಕೂಡಿದ ಹೊರಮೈಯನ್ನು ಹೊಂದಿರುತ್ತವೆ. ಇವುಗಳ ವಿಶಿಷ್ಟವಾದ ಮೋಟುಮೊಟಾದ ದೇಹಾಕೃತಿ ಮತ್ತು ಬೆಣೆಯಾಕಾರದ ತಲೆಯು ಅವುಗಳನ್ನು ಗುರುತಿಸಲು ಸಹಾಯ ಮಾಡುತ್ತವೆ. ಅವುಗಳು ತಮ್ಮ ಆಹಾರವಾದ ಮರದ ತೊಗಟೆಯ ಹೊರಭಾಗದಲ್ಲಿ ಅಡಗಿರುವ ಅಕಶೇರುಕ ಜೀವಿಗಳನ್ನು ಹುಡುಕುವಾಗ ಆಗಾಗ ಕೂಗುವುದು ಅವುಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಅವುಗಳು ಜೋಡಿಯಾಗಿ ಇಲ್ಲವೇ ಸಣ್ಣ ಸಣ್ಣ ಗುಂಪುಗಳಾಗಿ ಸಂಚರಿಸುತ್ತವೆ ಮತ್ತು ತನ್ನ ಆಹಾರವಾದ ಹುಳ ಹುಪ್ಪಟೆಗಳನ್ನು ಹುಡುಕುವ ಮಿಶ್ರ ವರ್ಗದ ಪಕ್ಷಿಗಳೊಂದಿಗೆ ಕಾಣಿಸಿಕೊಳ್ಳುತ್ತವೆ. ಇವುಗಳ ಸಂಖ್ಯೆಯು ಎಷ್ಯಾದ ತುಂಬ ಹರಡಿಕೊಂಡಿದ್ದು, ಭಾರತದ ನೈರುತ್ಯ ಕಾಡುಗಳಲ್ಲಿ ಮತ್ತು ಮಧ್ಯಭಾರತದಲ್ಲಿ ಇರುವ ಪಕ್ಷಿಗಳು ನೈರುತ್ಯ ಏಷ್ಯಾ ಮತ್ತು ಹಿಮಾಲಯದಲ್ಲಿರುವ ಪ್ರಮಾಣಕ್ಕಿಂತ ಸ್ವಲ್ಪ ವ್ಯತ್ಯಾಸವಿದೆ.

ವಿವರಣೆ

[ಬದಲಾಯಿಸಿ]
ಲೆಸನ್‌ನ 1830 ವಿವರಣೆಯಲ್ಲಿರುವ ಚಿತ್ರ[]

ಸಣ್ಣ ವಿಶಿಷ್ಟಾಕಾರದ ಆಕಾರವಿರುವ ಕಪ್ಪು ಮರಕುಟುಕವು ದೊಡ್ಡ ಜುಟ್ಟು ಹೊಂದಿದ್ದು, ಈ ಪಕ್ಷಿಯ ಸಣ್ಣ ದೇಹಕ್ಕೆ ಮತ್ತು ಬಾಲಕ್ಕೆ ಹೋಲಿಸಿದರೆ ತಲೆ ದೊಡ್ಡದಾಗಿ ತೋರುತ್ತದೆ. ಗಂಡು ಮತ್ತು ಹೆಣ್ಣು ಎರಡೂ ಪಕ್ಷಿಗಳು ಪ್ರಧಾನವಾಗಿ ಕಪ್ಪು ಬಣ್ಣವನ್ನು ಹೊಂದಿರುತ್ತವೆ. ಬಿಳಿಯಾದ ತಮ್ಮ ಪಕ್ಕೆಗಳ ಮೇಲೆ ಕಪ್ಪು ಹೃದಯಾಕಾರದ ಚಿನ್ಹೆಯನ್ನು ಹೊಂದಿರುತ್ತವೆ ಮತ್ತು ಹಾರುವ ಗರಿಗಳನ್ನು ಹೊರತುಪಡಿಸಿದರೆ ಹೆಗಲ ಬಳಿ ಅಗಲವಾದ ಬಿಳಿ ಬಣ್ಣವಿರುತ್ತದೆ. ಹೆಣ್ಣು ಪಕ್ಷಿಯು ನೊಸಲಿಗೆ ಮಾಸಲು ಬಿಳಿಯ ಬಣ್ಣವನ್ನು ಹೊಂದಿರುತ್ತದೆ ಮತ್ತು ಇದೇ ಜಾಗದಲ್ಲಿ ಗಂಡು ಕಪ್ಪು ಬಣ್ಣವನ್ನು ಹೊಂದಿರುತ್ತದೆ. ಗಂಟಲು ಭಾಗವು ಸ್ವಲ್ಪ ಬಿಳಿ ಬಣ್ಣವನ್ನು ಹೊಂದಿದ್ದು ಕೆಳಭಾಗವು ಬೂದುಬಣ್ಣವನ್ನು ಹೊಂದಿರುತ್ತದೆ. ಗೊಂಚಲಾಗಿರುವ ಗರಿಗಳು ಕೊಬ್ಬನ್ನು ಹೊಂದಿದ್ದು ಒಂದಕ್ಕೊಂದು ಹೊಂದಿಕೊಂಡು ಗೊಂಚಲಾಗಿರುವಂತೆ ಹೊಂದಿಕೊಂದಿರುತ್ತವೆ.[][] ಈ ವಿಶೇಷ ಗರಿಗಳು ಅಥವಾ "ದಪ್ಪ ಗರಿಗಳ" ಮೂಲದ ಭಾಗವು ಮಾಸಲು ಹಳದಿಯಂತೆ ಕಂಡು "ಶೃಂಗಾರಮಯ ವರ್ಣ ವಿನ್ಯಾಸ" ಹೊಂದಿದ್ದು, ಅಲ್ಲಿಂದ ಬರುವ ದ್ರವ್ಯವು ಸುಗಂಧ ಪರಿಮಳವನ್ನು ಬೀರುತ್ತವೆ ಎಂದು ಹೇಳಲಾಗುತ್ತಿದ್ದು, ಅದರ ಕಾರ್ಯಾತ್ಮಕ ಉಪಯುಕ್ತತೆಯು ಇನ್ನೂ ಗೊತ್ತಾಗಿಲ್ಲ.[][][][]

ವಾಸಸ್ಥಾನಗಳು ಮತ್ತು ಹಂಚಿಕೆ

[ಬದಲಾಯಿಸಿ]

ಇವುಗಳು ಸಾಮಾನ್ಯವಾಗಿ ಉಷ್ಣ ವಲಯ ಅಥವಾ ಉಪೋಷ್ಣ ವಲಯಗಳ ಅರಣ್ಯಗಳಲ್ಲಿ ವಾಸಮಾಡುತ್ತವೆ. ಇವುಗಳು ಭಾರತದ ಹಿಮಾಲಯದ ಅರಣ್ಯಗಳಲ್ಲಿ ಮತ್ತು ಬಾಂಗ್ಲಾದಿಂದ ಮ್ಯಾನ್ಮಾರ್‌ ವರೆಗೂ ಥೈಲೆಂಡ್‌ ಲಾವೋಸ್‌ ಕಾಂಬೋಡಿಯಾ ಮತ್ತು ವಿಯೆಟ್ನಾಂವರೆಗೂ ಕಂಡುಬರುತ್ತವೆ. ಭಾರತದ ಒಳಗೆ ಅವು ಪಶ್ಚಿಮ ಘಟ್ಟಗಳಲ್ಲಿಯೂ ಮತ್ತು ಮಧ್ಯ ಭಾರತದ ಕಾಡುಗಳಲ್ಲಿಯೂ ಕಂಡುಬರುತ್ತವೆ.[] ಥಾಮಸ್ ಸಿ.ಜೆರ್ಡೊನ್‌ರ ಪ್ರಕಾರ ಪಶ್ಚಿಮ ಘಟ್ಟಗಳಲ್ಲಿ ಇರುವ ಕಾರ್ಡಾಟಸ್ ಎಂಬ ಉಪವರ್ಗದ ಈ ಹಕ್ಕಿಗಳು ಬೇರೆ ರೀತಿಯವು ಎಂದು ಪರಿಗಣಿಸಲ್ಪಟ್ಟಿಲ್ಲ ಮತ್ತು ಅವುಗಳಲ್ಲಿ ಗರಿಗಳ ಬಣ್ಣದಲ್ಲಿ ವ್ಯತ್ಯಾಸವಿರುತ್ತದೆ ಮತ್ತು ಗಾತ್ರದ ಶ್ರೇಣಿಯಲ್ಲಿ ವ್ಯತ್ಯಾಸವಿದೆ. (ಉತ್ತರದಲ್ಲಿನ ಪಕ್ಷಿಗಳು ಸಮಭಾಜಕ ವೃತ್ತದಲ್ಲಿನವುಗಳಿಗಿಂತ ದೊಡ್ಡದಾಗಿವೆ.)[][೧೦][೧೧]

ನಡಾವಳಿ ಮತ್ತು ಪರಿಸರ ವಿಜ್ಞಾನ

[ಬದಲಾಯಿಸಿ]
ಜಾನ್ ಗೌಲ್ಡ್‌ರ ಬರ್ಡ್ಸ್‌ ಆಫ್ ಏಷ್ಯಾದಲ್ಲಿರುವ ಚಿತ್ರಗಳು

ಈ ಮರಕುಟುಕ ಪಕ್ಷಿಗಳು ತಮ್ಮ ಆಹಾರಕ್ಕಾಗಿ ಜೋಡಿ ಜೋಡಿಯಾಗಿ ಮತ್ತು ಕೆಲವೊಮ್ಮೆ ಆಹಾರ ಹುಡುಕುವ ಮಿಶ್ರಪಕ್ಷಿಗಳ ಗುಂಪಿನಲ್ಲಿ ಹೋಗುತ್ತವೆ. ಕೆಲವು ಬಾರಿ ಬೇರೆ ವರ್ಗಗಳ ಜೊತೆಗೂ ಸೇರಿಕೊಳ್ಳುತ್ತವೆ. ಅವು ಮರದಿಂದ ಮರಕ್ಕೆ ಹಾರುತ್ತಾ ತಮ್ಮ ಬಲವಾದ ಕೊಕ್ಕಿನಿಂದ ಮರವನ್ನು ಕುಕ್ಕಿ ನೋಡುತ್ತವೆ. ತಮ್ಮ ಆಹಾರವಾದ ಹುಳುಗಳನ್ನು ತೊಗಟೆಗಳಿಂದ ಹೆಕ್ಕಿಕೊಳ್ಳುತ್ತವೆ. ಅವುಗಳು ಹೆಚ್ಚಾಗಿ ಕ್ಯಾಸಿಯಾ ಫಿಸ್ತುಲ ಮರದ ತೊಗಟೆಯನ್ನು ಕುಟುಕಿ ಅದರಲ್ಲಿನ ಹುಳಹುಪ್ಪಡಿಗಳನ್ನು ಹಿಡಿದು ತಿನ್ನುತ್ತವೆ.[೧೨] ಅವು ಮತ್ತೊಂದು ಪಕ್ಷಿಯನ್ನು ಕರೆಯಲು ಟ್ವೀ-ಟ್ವೀ-ಟ್ವೀ ಎಂಬ ರಾಗದಲ್ಲಿ ಕೂಗುತ್ತವೆ. ಕೆಲವೊಮ್ಮೆ ಅವು ಅನೇಕ ಬಾರಿ ಈ ರೀತಿ ಕೂಗುತ್ತವೆ,[೧೩] ಅದು ಮೂಗಿನಿಂದ ಹೊರಡುವ ಕಿ-ಇವ್‌ [೧೪] ಮತ್ತು ಸು-ಸುಯಿ ಎಂಬ ಶಬ್ದವಾಗಿ ಕೇಳಿಸುತ್ತದೆ.[೧೫] ಅವು ತಮ್ಮ ಸಂತಾನೋತ್ಪತ್ತಿಯನ್ನು ಚಳಿಗಾಲದಿಂದ ಮಳೆಗಾಲದ ಅವಧಿಯಲ್ಲಿ ಮಾಡುತ್ತಿದ್ದು ಆ ಕಾಲದಲ್ಲಿ ಅವು ಮೇಲಿಂದ ಮೇಲೆ ಕುಟ್ಟುವ ಸದ್ದು ಮಾಡುತ್ತವೆ. ಅವುಗಳು ತಮ್ಮ ಗೂಡನ್ನು ಮರದ ಒಣಗಿದ ಕೊಂಬೆಗಳಲ್ಲಿ ಅವುಗಳನ್ನು ಮೂರರಿಂದ ನಾಲ್ಕು ಸೆಂಟಿಮಿಟರ್‌ಗಳಷ್ಟು ವ್ಯಾಸದಲ್ಲಿ ಕೊರೆದು ಮುಖ್ಯದ್ವಾರದಿಂದ ಸುಮಾರು ಇಪ್ಪತ್ತು ಸೆಂಟಿಮಿಟರ್‌ಗಳಷ್ಟು ಆಳದಲ್ಲಿ ಕೊರೆದು ನಂತರ ಸ್ವಲ್ಪ ದೊಡ್ಡಗಾತ್ರದಲ್ಲಿ ಕೊರೆಯುತ್ತವೆ. ಗೂಡುಗಳು ಕೆಲವು ಬಾರಿ ಬೇಲಿಗಳಲ್ಲಿಯೂ ಕಟ್ಟಲ್ಪಟ್ಟಿರುತ್ತವೆ.[೧೬] ಸಾಮಾನ್ಯವಾಗಿ ಅವು ಎರಡರಿಂದ ಮೂರು ಮೊಟ್ಟೆಗಳನ್ನು ಇಡುತ್ತವೆ. ಅವು ಕಂದು ಬಿಳಿ ಬಣ್ಣದಲ್ಲಿರುತ್ತವೆ.[] ಈ ವರ್ಗದ ಪಕ್ಷಿಗಳನ್ನು ಅವುಗಳ ಕೂಗಿನ ಆಧಾರದ ಮೇಲೆ ಹೆಮಾಫಿಸಾಲಿಸ್‌ ಸ್ಪಿನಿಗೆರಾ ಪಕ್ಷಿಗಳ ಸಂಕುಲದಲ್ಲಿ ಸೇರಿಸಲಾಗಿದೆ.[೧೭]

ಇತರ ಮೂಲಗಳು

[ಬದಲಾಯಿಸಿ]
  • ಮೆನನ್, ಜಿಕೆ (1985): ಚಿಟ್ಟು ಮರಕುಟುಕದ ಗರಿಯಲ್ಲಿರುವ 'ರೇಸಿನ್‌ನ' ಮೂಲದ ಕುರಿತು, ಹೆಮಿಸರ್ಕಸ್ ಕೆಂಟೆಂಟೆ . ಪಾವೋ 23(1&2), 107-109.
  • ನೀಲಕಂಟನ್,ಕೆ.ಕೆ (1965): ದ ನೆಸ್ಟಿಂಗ್ ಆಫ್ ದ ಹಾರ್ಟ್‌ಸ್ಪಾಟೆಡ್ ವುಡ್‌ಪೆಕರ್. ಪಕ್ಷಿವೀಕ್ಷಕರಿಗೆ ಸುದ್ದಿಪತ್ರ. 5(3), 6-8.

ಬಾಹ್ಯ ಕೊಂಡಿಗಳು‌

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. BirdLife International (2009). Hemicircus canente. In: IUCN 2008. IUCN Red List of Threatened Species. Retrieved 12 October 2010.
  2. [1]
  3. Menon GK & J Menon (2000). "Avian Epidermal Lipids: Functional Considerations and Relationship to Feathering". Amer. Zool. 40 (4): 540–552. doi:10.1093/icb/40.4.540.
  4. Bock, WJ & LL Short, Jr (1971). ""Resin secretion" in Hemicircus (Picidae)". Ibis. 113 (2): 234–238. doi:10.1111/j.1474-919X.1971.tb05149.x.{{cite journal}}: CS1 maint: multiple names: authors list (link)
  5. Delhey, K; A Peters & B Kempenaers (2007). "Cosmetic Coloration in Birds: Occurrence, Function, and Evolution" (PDF). American Naturalist. 169: S145–S158. doi:10.1086/510095. PMID 19426089. Archived from the original (PDF) on 2011-07-19. Retrieved 2011-03-31.{{cite journal}}: CS1 maint: multiple names: authors list (link)
  6. ೬.೦ ೬.೧ ೬.೨ Ali, S & SD Ripley (1983). Handbook of the birds of India and Pakistan. Volume 4 (2 ed.). Oxford University Press. pp. 236–237.
  7. Blanford WT (1895). Fauna of British India. Bird. Volume 3. Taylor and Francis, London. pp. 68–70.
  8. Hargitt, E (1884). "Notes on woodpeckers VIII. The genus Hemicircus". Ibis. 26 (3): 244–259. doi:10.1111/j.1474-919X.1884.tb01163.x.
  9. Kanoje, R (1995). "Heartspotted Woodpecker in the Kanha National Park". Newsletter for Birdwatchers. 35 (5): 96.
  10. Ali,S (1951). "The Heart-spotted Woodpecker - Hemicircus canente". J. Bombay Nat. Hist. Soc. 49 (4): 786–787.
  11. Jerdon,T C (1840). "Catalogue of the birds of the peninsula of India". Madras Jour. Lit. Sc. 11 (27): 209–239.
  12. Santharam,V (1998). "Woodpeckers feeding of Cassia pods". J. Bombay Nat. Hist. Soc. 95 (3): 505–506.
  13. Betts, FN (1934). "South Indian woodpeckers". J. Bombay Nat. Hist. Soc. 37: 197–203.
  14. Rasmussen PC & JC Anderton (2005). Birds of South Asia: The Ripley Guide. Volume 2. Smithsonian Institution & Lynx Edicions. p. 291.
  15. Santharam, V. (2004). "Duetting calls of the Heart-spotted Woodpeckers Hemicircus canente (Lesson)". J. Bombay Nat. Hist. Soc. 101 (1): 157–158.
  16. Inglis, Charles M (1931). "The nesting of the Malabar Heart-spotted Woodpecker (Hemicircus canante cordatus) in Travancore". J. Bombay Nat. Hist. Soc. 35 (1): 207–208.
  17. Rajagopalan,PK (1972). "Ixodid Ticks (Acarina: Ixodidae) parasitizing wild birds in the Kyasanur forest disease area of Shimoga District, Mysore State, India". J. Bombay Nat. Hist. Soc. 69 (1): 55–78.