ವಿಷಯಕ್ಕೆ ಹೋಗು

ಚಿಕ್ಕ ಮೇಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡಗಳಲ್ಲಿ ನಾಲ್ಕು ಐದು ಜನ ಕಲಾವಿದರ ಗುಂಪು ಮನೆಮನೆಗೆ ತೆರಳಿ ಅಲ್ಪ ಕಾಲಾವಧಿಯಲ್ಲಿ ನೀಡುವ ಪ್ರದರ್ಶನವನ್ನು ಚಿಕ್ಕಮೇಳ ಎನ್ನುತ್ತಾರೆ. ಇದು ಯಕ್ಷಗಾನ ಕಲೆಯ ಒಂದು ಪ್ರಕಾರ. ಇದನ್ನು ಗೆಜ್ಜೆನಾದ ಸೇವೆ ಎಂದೂ ಕರೆಯಲಾಗುತ್ತದೆ[].

ಪರಿಚಯ

[ಬದಲಾಯಿಸಿ]

ಪತ್ತನಾಜೆಯ ಬಳಿಕ ಮಳೆಗಾಲದಲ್ಲಿ ಯಕ್ಷಗಾನದ ತಿರುಗಾಟಗಳು ಇಲ್ಲದೇ ಇರುವ ಕಾರಣದಿಂದ, ಈ ಸಮಯದಲ್ಲಿ ಯಕ್ಷಗಾನ ಕಲಾವಿದರು ತಮ್ಮ ದೈನಂದಿನ ಜೀವನದ ನಿರ್ವಹಣೆಗಾಗಿ ಚಿಕ್ಕಮೇಳದ ಮುಖಾಂತರ ತಿರುಗಾಟ ನಡೆಸುತ್ತಾರೆ. ಸಾಮಾನ್ಯವಾಗಿ ಸಂಜೆ ೭ರಿಂದ ರಾತ್ರಿ ೧೦ರ ತನಕ ಈ ಚಿಕ್ಕಮೇಳಗಳು ತಿರುಗಾಟ ನಡೆಸುತ್ತಾ ಕಲಾಪ್ರದರ್ಶನವನ್ನು ನೀಡುತ್ತವೆ. ವರ್ಷದ ಮಳೆಗಾಲವನ್ನು ಹೊರತು ಪಡಿಸಿ ನವೆಂಬರ್ ನಿಂದ ಮೇವರೆಗೂ ಅವಿಭಜಿತ ದಕ್ಷಿಣ ಕನ್ನಡ ಉಡುಪಿ ಮತ್ತು ಕಾಸರಗೊಡು ಜಿಲ್ಲೆಗಳಲ್ಲಿ ಸುಮಾರು ೪೦ಕ್ಕೂ ಹೆಚ್ಚು ಮೇಳಗಳು ತಿರುಗಾಟ ನಡೆಸುತ್ತವೆ[].

ಒಂದು ಚಿಕ್ಕಮೇಳದ ಒಂದು ತಂಡದಲ್ಲಿ ಸಾಮಾನ್ಯವಾಗಿ ಒಬ್ಬ ಭಾಗವತ, ಮದ್ದಳೆಗಾರ, ಒಬ್ಬ ಸ್ತ್ರೀವೇಷಧಾರಿ, ಒಬ್ಬ ಪುರುಷವೇಷಧಾರಿ ಮತ್ತು ಒಬ್ಬ ನಿರ್ವಾಹಕ- ಹೀಗೆ ೫ ಮಂದಿ ಇರುತ್ತಾರೆ. ಮೊದಲೇ ನಿರ್ಧರಿಸಲಾದ ಯಾವುದಾದರೊಂದು ಊರಿನಲ್ಲಿರುವ ಮನೆಗಳಿಗೆ ತೆರಳಿ ಚಿಕ್ಕ ಮೇಳ ಬರುವ ಸಮಯವನ್ನು ಮೊದಲೇ ತಿಳಿಸಲಾಗುತ್ತದೆ. ಮನೆಗೆ ಬಂದ ಕಲಾವಿದರ ತಂಡವನ್ನು ಹೂ ಹಣ್ಣು, ಅಕ್ಕಿ ತೆಂಗಿನಕಾಯಿ ದೀಪವಿಟ್ಟು ಸ್ವಾಗತಿಸಲಾಗುತ್ತದೆ. ನಂತರ, ಯಾವುದಾದರೊಂದು ಪೌರಾಣಿಕ ಕಥೆಯ ಒಂದು ಪುಟ್ಟ ಭಾಗವನ್ನು ಆಯ್ದುಕೊಂಡು ಸೀಮಿತ ಸಮಯದಲ್ಲಿ ಪ್ರದರ್ಶಿಸಲಾಗುತ್ತದೆ[][].

ಪ್ರದರ್ಶನದ ಕಥೆಗಳು

[ಬದಲಾಯಿಸಿ]

ರಾಮಾಯಣ, ಮಹಾಭಾರತ ಹಾಗೂ ಇನ್ನಿತರ ಪುರಾಣದ ಕಥೆಗಳನ್ನು ೫ ರಿಂದ ಹತ್ತು ನಿಮಿಷಗಳ ಕಾಲ ಪ್ರದರ್ಶಿಸುತ್ತಾರೆ[].

ಪ್ರಯೋಜನಗಳು

[ಬದಲಾಯಿಸಿ]

ಕಲಾವಿದರ ದೈನಂದಿನ ಜೀವನ ನಿರ್ವಹಣೆಯ ಜೊತೆಜೊತೆಗೆ, ಮನೆಯಂಗಳದಲ್ಲಿ ಅದೂ ಸೀಮಿತ ಅವಧಿಯಲ್ಲಿ ಮಕ್ಕಳಿಗೆ ಯಕ್ಷಗಾನ ಕಲೆಯ ಪರಿಚಯ ಮಾಡಿಸಿದಂತೆ ಆಗುತ್ತದೆ[].

ಉಲ್ಲೇಖಗಳು

[ಬದಲಾಯಿಸಿ]
  1. "ಸಣ್ಣಾಟ: ಸಣ್ಣಗೆ ಮಳೆ ಹನಿಯುವಾಗ ಯಕ್ಷರು ಮನೆಗೆ ಬಂದರು". bayalata.com/. ಸತೀಶ್ ನಾಯಕ್ , ಪಕಳಕು೦ಜ. Retrieved 22 November 2020.
  2. "ಮನೆಮನೆಗೆ ಯಕ್ಷಗಾನದ ಕಂಪನ್ನು ಪಸರಿಸುವ ಚಿಕ್ಕಮೇಳ ಬಗ್ಗೆ ನಿಮಗೆಷ್ಟು ಗೊತ್ತು?". kannada.oneindia.com. One.in Digitech Media Pvt. Ltd. Retrieved 22 November 2020.
  3. "ಮನೆಮನೆಗೆ ಯಕ್ಷಗಾನದ ಕಂಪನ್ನು ಪಸರಿಸುವ ಚಿಕ್ಕಮೇಳ ಬಗ್ಗೆ ನಿಮಗೆಷ್ಟು ಗೊತ್ತು?". kannada.oneindia.com. One.in Digitech Media Pvt. Ltd. Retrieved 22 November 2020.
  4. "Chikka Mela spreads the culture of Yakshagana among people". timesofindia.indiatimes.com. TOI. Retrieved 22 November 2020.
  5. "ಸಣ್ಣಾಟ: ಸಣ್ಣಗೆ ಮಳೆ ಹನಿಯುವಾಗ ಯಕ್ಷರು ಮನೆಗೆ ಬಂದರು". bayalata.com/. ಸತೀಶ್ ನಾಯಕ್ , ಪಕಳಕು೦ಜ. Retrieved 22 November 2020.
  6. "ಸಣ್ಣಾಟ: ಸಣ್ಣಗೆ ಮಳೆ ಹನಿಯುವಾಗ ಯಕ್ಷರು ಮನೆಗೆ ಬಂದರು". bayalata.com/. ಸತೀಶ್ ನಾಯಕ್ , ಪಕಳಕು೦ಜ. Retrieved 22 November 2020.