ಚಿಕ್ಕಿಸೊಪ್ಪು
ಇದು ಮೃದುವಾದ ಕಾಂಡವನ್ನು ಹೊಂದಿದ್ದು,ಭೂಮಿಯ ಮೇಲೆ ತೆವಳುತ್ತಾ ಸಾಗುವ ಒಂದು ಬಳ್ಳಿ. ಎಲೆಯ ಸಸಿಗಳು ನೆಟ್ಟಗೆ ಬೆಳೆಯುತ್ತವೆ[೧]. ಕಾಂಡಗಳು ಕೋನಗಳನ್ನು ಹೊಂದಿರುತ್ತವೆ. ಎಲೆಗಲು ಅಂಡಾಕಾರ ಅಥಾವ ವಜ್ರಾಕೃತಿಯಲ್ಲಿದ್ದು ಮಂದವಾದ ತೊಟ್ಟು ಹೊಂದಿರುತ್ತವೆ. ಹೂಗಳ ಹೊರಭಾಗ ಹಸಿರಾಗಿದ್ದು, ಒಳಭಾಗ ಹಸಿರು ಮಿಶ್ರಿತ ಹಳದಿಯಾಗಿರುತ್ತದೆ. ಧಾರವಾಡದ ಕಡೆ ಹುಳಿಸೊಪ್ಪು ಎನ್ನುತ್ತಾರೆ.
ಕುಟುಂಬ: ಟೆಟ್ರಾಗೋನಿಯೇಸಿ (tetragoniaceae)
ಉಪಯೋಗಗಳು
[ಬದಲಾಯಿಸಿ]ಸಸ್ಯದ ಎಲೆ ಮತ್ತು ಕಾಂಡಗಳು ಒಳ್ಳೆಯ ತರಕಾರಿಯಾಗಿದ್ದು ಸುಣ್ಣ, ರಂಜಕ, 'ಎ' 'ಬಿ' 'ಸಿ' ಮುಂತಾದ ಅನ್ನಾಂಗಗಳನ್ನು ಹೊಂದಿರುತ್ತವೆ. 'ಸಿ' ಅನ್ನಾಂಗ ಬಹಳವಾಗಿ ಇರುವುದರಿಂದ ತುರಿಕೆ ಕಡಿಮೆಯಾಗುತ್ತದೆ. ಇದನ್ನು ರಕ್ತಲೋಮನಾಳ, ಕರುಳಿನ ಕ್ಯಾನ್ಸರ್ ತೊಂದರೆ ಇರುವವರು ಬಳಸಿದರೆ ಒಳ್ಳೆಯದೆಂದು ಹೇಳುತ್ತಾರೆ. ಇದು ರುಚಿಯಲ್ಲಿ ಹುಳಿಯಗಿರುವುದರಿಂದ ಇದನ್ನು ಉಪಯೋಗಿಸಿದಾಗ ಹುಳಿಪದಾರ್ಥದ ಅವಶ್ಯಕತೆ ಇಲ್ಲ.
ಈ ಬೆಳೆಯನ್ನು ಉತ್ತರ ಬಂಗಾಳ, ಷಿಲ್ಲಾಂಗ್ ಮತ್ತು ಇತರೆ ರಾಜ್ಯದ ಗುಡ್ಡಗಾಡು ಪ್ರದೇಶಗಳಲ್ಲಿ ಕಾಣಬಹುದು. ದಕ್ಷಿಣ ಭಾರತದ ಕರ್ಣಾಟಕದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ಬೆಳೆಯುವ ಗತಿ ನಿಧಾನ, ಸ್ಪಿನಾಚ್ ಬೆಳೆಗೆ ಹೋಲಿಸಿದರೆ ಸೊಪ್ಪು ಇಳುವರಿ ಕಡಿಮೆ, ಬೆಳವಣಿಗೆಗೆ ತಂಪು ಹವಾಗುಣ ಬೇಕು. ನೀರಿನ ಅಭಾವವನ್ನು ಎದುರಿಸಿ ಬೆಳೆಯಬಲ್ಲದು ಮತ್ತು ಕತ್ತರಿಸಿದ ಕೂಡಲೇ ಚಿಗುರಿ ಬೆಳೆಯುತ್ತದೆ. ಆದರೆ ಹಿಮಪಾತಕ್ಕೆ ಸತ್ತು ಹೋಗುತ್ತದೆ.
ಬೇಸಾಯ ಕ್ರಮ
[ಬದಲಾಯಿಸಿ]ಇದರ ಬೇಸಾಯ ಕ್ರಮಗಳು ಬಹುತೇಕ ವಿಲಾಯತಿ ಪಾಲಕ್ನ್ಂತೆಯೇ. ಮೈದಾನ ಪ್ರದೇಶಗಳಲ್ಲಿ ಅಕ್ಟೋಬರನಲ್ಲಿ ಬಿತ್ತಿದರೆ ಬೆಟ್ಟ ಪ್ರದೇಶಗಳಲ್ಲಿ ವಸಂತದಲ್ಲಿ ಬಿತ್ತಬಹುದು. ಬಿತ್ತಿದ ಬೀಜಗಳು ೭-೩೦ ದಿನಗಳಲ್ಲಿ ಮೊಳಕೆಯೊಡೆಯುತ್ತವೆ. ಸಸಿಗಳು ೨-೩ ಎಲೆಗಳನ್ನು ಪಡೆದಾಗ ೩ ರಿಂದ ೫ ಅಡಿ ಇರುವಷ್ಟು ಅಂತರದಲ್ಲಿ ನಾಟಿ ಮಾಡಬಹುದು. ಬೆಳೆಗೆ ವಾರಕ್ಕೊಂದಾವರ್ತಿ ಬೇಸಿಗೆಯಲ್ಲಿ ನೀರಾವರಿ ಕೊಟ್ಟು ಕ್ರಮವಾಗಿ ಕಳೆ ತೆಗೆಯಬೇಕು. ಸಸ್ಯ ಬೆಳವಣಿಗೆ ಕಡಿಮೆ ಇದ್ದರೆ ೧೦-೧೫ ಸೆಂ.ಮೀ. ಎತ್ತರದ ಕಾಂಡಗಳನ್ನು ೨-೪ ವಾರಗಲ್ಲಿ ಪಡೆದುಕೊಳ್ಳಲಾಗುತ್ತದೆ.
ಬೆಳವಣಿಗೆಯ ವೇಗ ಚೆನ್ನಾಗಿದ್ದರೆ ವಾರಕ್ಕೊಂದು ಬಾರಿ ಕೊಯ್ಲು ಮಾಡಬೇಕು. ಸಾಮಾನ್ಯವಾಗಿ ನೆಲಮಟ್ಟದಿಂದ ೫-೮ ಸೆಂ.ಮೀ. ಎತ್ತರಕ್ಕೆ ಬೆಳೆದಾಗ ಇಡಿ ಸಸ್ಯವನ್ನು ಕೊಯ್ಲು ಮಾಡಬೇಕು. ಚೆನ್ನಾಗಿ ಬೆಳೆದ ಈ ಸೊಪ್ಪು ಪ್ರತಿ ಎಕ್ಕರೆಗೆ ಸುಮಾರು ೬ ಟನ್ ಇಳುವರಿ ದೊರೆಯುತ್ತದೆ. ಮುಂದಿನ ಬೆಳೆಯನ್ನು ಅದೇ ಭೂಮಿಯಲ್ಲಿ ಸುಲಭವಾಗಿ ಬೆಳೆಯಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ ಸೊಪ್ಪು ತರಕಾರಿಗಳು; ಪಿ.ನಾರಾಯಣ ಸ್ವಾಮಿ, ಎಂ.ಎಂ.ಖಾನ್, ಕೆ.ಕೆಂಪೇಗೌಡ ಮತ್ತು ಡಾ:ಎಲ್.ವಸಂತ page no:32-33
<reference/>