ವಿಷಯಕ್ಕೆ ಹೋಗು

ಚಿಕ್ಕಬೆಟ್ಟಹಳ್ಳಿ ಶಿಲಾಶಾಸನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿಕ್ಕಬೆಟ್ಟಹಳ್ಳಿ ಶಿಲಾಶಾಸನ
ಗುಡಿಯ ಹೊರಗಡೆ ಶಾಸನವಿರುವ ಜಾಗ

ಈ ಶಿಲಾಶಾಸನವು ಬೆಂಗಳೂರಿನ ಚಿಕ್ಕಬೆಟ್ಟಹಳ್ಳಿ ಪ್ರದೇಶದಲ್ಲಿರುವ ಶಾಸನವಾಗಿದೆ. ಇದು ಸ್ಥಾಪಿತವಾದ ಕಾಲ ಕ್ರಿ.ಶ. 1524ನೇ ಇಸವಿ. ಇದು ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯನ ಆಳ್ವಿಕೆಯ ಕಾಲದ ಶಾಸನವಾಗಿದೆ. ಈ ಶಾಸನ ಕಲ್ಲಿನ ಗಾತ್ರ 6’ 2” x 2’ 4”. ಬರಹವು ಕನ್ನಡ ಲಿಪಿಯಲ್ಲಿ ಬರೆಯಲ್ಪಟ್ಟಿದೆ. ಚಿಕ್ಕಬೆಟ್ಟಹಳ್ಳಿಯ ಸಿಂಗಾಪುರದ ದೇವರಿಗೆ ದಾನ ಕೊಟ್ಟ ಬಗ್ಗೆ ಇದರಲ್ಲಿ ಉಲ್ಲೇಖಿಸಿದೆ.

ಶಾಸನ ಪಠ್ಯ

[ಬದಲಾಯಿಸಿ]

ಎಪಿಗ್ರಾಫಿಯ ಕರ್ನಾಟಿಕ ಗ್ರಂಥ ಒಂಬತ್ತನೇ ಸಂಪುಟದಲ್ಲಿ BN19 ಸಂಖ್ಯೆಯಡಿ ದಾಖಲಾಗಿರುವ ಈ ಶಾಸನದ ಪಠ್ಯ ಇಂತಿದೆ.[]

ಅದೇ ಹೋಬಳಿ ಚಿಕ್ಕ ಬೆಟ್ಟಹಳ್ಳಿ ಗ್ರಾಮದ ಹನುಮಂತ ದೇವಾಲ್ಯದ ಬಲಗಡೆ ನೆಟ್ಟಿರುವ ಕಲ್ಲು.

1 ಶುಭಮಸ್ತು
2 ತಾರಣಸಂವತ್ಸರದಮಾರ್ಗಸಿ
3 ರಶು1ಲುಕ್ರಿಷ್ಣರಾಯರಕಾಲದಲಿ
4 ಸಿಂಗಪನಾಯಕರುಸಿಂಗಾಪುರದಲಿರು
5 ವಂತದೇವರಮೃತಪಡಿಯನೈವೇದ್ಯಕ್ಕೆ
6 ರಾಮಾನುಜಕೂಟಕ್ಕೆ ಪಟ್ಟಣತಿಂಮಣಯ್ಯ
7 ನವರಮಕ್ಕಳುಹಿರಿಆಯವರದರಾಜ
8 ಯನವರಿಗೆಚಿಗಬೆಠಹಳ್ಳಿಯನುಬಿ
9 ಟ್ಟೆವಾಗಿಯೀಧಮ್ರ್ಮಕ್ಕೆಆರುಆಳಿ
10 ಪಿದವರುಗಂಗೆಯತಡಿ
11 ಯಲಿಕಪಿಲೆಯವಧಿಸಿದಷಾಪ
12 ಕ್ಕೆಹೋಹರುಯೀತಿರುವೆಂಗಳ . .
13 . . . ಯೀಧರ್ಮಕ್ಕೆ ತಪ್ಪಿದವರು
14 ತಂಮತಂದೆತಾಯಿಕಾಶಿ
15 ಲಿಕೊಂದವರು ||"

ಅರ್ಥವಿವರಣೆ

[ಬದಲಾಯಿಸಿ]

May it be prosperous. (In the year specified) , in the time of Krishna-Raya, - Singapa- Nayaka granted for the offerings to the god in Singapura, the Chiga Bettahalli (village), to Hiriaya Varada- rajaya, son of Timmanayya of Pattana, of the Ramanuja-kuta.

ಆಕರಗಳು/ಉಲ್ಲೇಖಗಳು

[ಬದಲಾಯಿಸಿ]
  1. Rice, B. Lewis. ಎಪಿಗ್ರಾಫಿಯ ಕರ್ನಾಟಿಕ, ಸಂಪುಟ ೯ (in English) (1905 ed.). Mysore. Dept. of Archaeology.{{cite book}}: CS1 maint: unrecognized language (link)


ಹೊರಕೊಂಡಿಗಳು

[ಬದಲಾಯಿಸಿ]