ಚಿಕನ್ ಟಿಕ್ಕಾ
Jump to navigation
Jump to search
ಚಿಕನ್ ಟಿಕ್ಕಾ ಭಾರತ ಮತ್ತು ಪಾಕಿಸ್ತಾನದಲ್ಲಿ ಜನಪ್ರಿಯವಾಗಿ ಉಳಿದುಕೊಂಡಿರುವ ದಕ್ಷಿಣ ಏಷ್ಯಾದಲ್ಲಿ ಹುಟ್ಟಿಕೊಂಡ ಒಂದು ಕೋಳಿ ಮಾಂಸದ ಖಾದ್ಯ. ಇದು ಸಾಂಪ್ರದಾಯಿಕವಾಗಿ ಸಂಬಾರ ಪದಾರ್ಥಗಳು ಮತ್ತು ಮೊಸರಿನಲ್ಲಿ ಮ್ಯಾರಿನೇಟ್ ಮಾಡಿದ ನಂತರ ಬಾಡುಕೋಲುಗಳನ್ನು ಬಳಸಿ ತಂದೂರ್ ಎಂದು ಕರೆಯಲಾದ ಮಣ್ಣಿನ ಒಲೆಯಲ್ಲಿ ಬೇಕ್ ಮಾಡಲಾದ ಮೂಳೆರಹಿತ ಕೋಳಿಯ ಸಣ್ಣ ಚೂರುಗಳು—ಮೂಲಭೂತವಾಗಿ ತಂದೂರಿ ಚಿಕನ್‍ನ ಮೂಳೆರಹಿತ ಸ್ವರೂಪ. ಟಿಕ್ಕಾ ಶಬ್ದದ ಅರ್ಥ ತುಣುಕುಗಳು ಅಥವಾ ಚೂರುಗಳು.