ವಿಷಯಕ್ಕೆ ಹೋಗು

ಚಾರ್ಲ್‍ಟನ್ ಹೆಸ್ಟನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಚಾರ್ಲ್ಸ್‍ಟನ್ ಹೆಸ್ಟನ್ ಇಂದ ಪುನರ್ನಿರ್ದೇಶಿತ)
ಚಾರ್ಲ್‍ಟನ್ ಹೆಸ್ಟನ್

೧೯೬೩ರಲ್ಲಿ ಹೆಸ್ಟನ್
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಜಾನ್ ಚಾರ್ಲ್ಸ್ ಕಾರ್ಟರ್
(೧೯೨೩-೧೦-೦೪)೪ ಅಕ್ಟೋಬರ್ ೧೯೨೩
ಎವಾನ್ಸ್ಟನ್, ಇಲಿನೋಯ್,
ಅಮೇರಿಕ ಸಂಯುಕ್ತ ಸಂಸ್ಥಾನ
ನಿಧನ April 5, 2008(2008-04-05) (aged 84)
ಬೆವರ್ಲಿ ಹಿಲ್ಸ್, ಕ್ಯಾಲಿಫೋರ್ನಿಯ, ಅಮೇರಿಕ ದೇಶ
ವರ್ಷಗಳು ಸಕ್ರಿಯ ೧೯೪೧-೨೦೦೩
ಪತಿ/ಪತ್ನಿ ಲಿಡಿಯ ಕ್ಲಾರ್ಕ್ (೧೯೪೪-೨೦೦೮)


ಚಾರ್ಲ್‌ಟನ್ ಹೆಸ್ಟನ್ (ಅಕ್ಟೋಬರ್ ೪, ೧೯೨೩ - ಏಪ್ರಿಲ್ ೫, ೨೦೦೮) ಅಮೇರಿಕ ದೇಶದ ಒಬ್ಬ ನಟ.

ಜನನ ಹಾಗೂ ಬಾಲ್ಯ

[ಬದಲಾಯಿಸಿ]

ಚಾರ್ಲ್‍ಟನ್ ಹೇಸ್ಟನ್‍ರವರು, ಲಿಲ್ಲ ಮತ್ತು ರಝೆಲ್ ವೈಟ್ಫುಡ್ ಕಾರ್ಟರ್‍ರ ಮಗನಾಗಿ ಜನಿಸಿದರು. ತಂದೆ ಮಿಲ್ ಕೆಲಸಗಾರರಾಗಿದ್ದರು. ದುರದೃಷ್ಟವಶಾತ್ ವಿವಾಹ ವಿಚ್ಛೇದನವಾಗಿ ಅವರ ತಾಯಿಯವರು, ಚೆಸ್ಟರ್ ಹೇಸ್ಟನ್‍ರನ್ನು ಮದುವೆಯಾದರು. ಆಗ ಹೇಸ್ಟನ್‍ರಿಗೆ, ೧೦ ವರ್ಷ ವಯಸ್ಸು. ಇಲ್ಲಿನಾಯ್‍ನ ಮೆಟ್ ಎಂಬ ಸ್ಥಳಕ್ಕೆ ಅವರ ಪರಿವಾರ ವಾಸಿಸಲು ಹೋಯಿತು. ಚಿಕಾಗೊ ಉಪನಗರದ ಟ್ರೈಅರ್ ಹೈಸ್ಕೂಲ್ ಸೇರಿದರು. ನಾಟಕಕಲೆಯನ್ನು ಅಭಿವೃದ್ಧಿಪಡಿಸಲು ಕೊಡುವ ಶಿಷ್ಯವೇತನವನ್ನು ಗಿಟ್ಟಿಸಿಕೊಂಡರು. ನಂತರ ನಾರ್ತ್‍ವೆಸ್ಟ್ ವಿಶ್ವವಿದ್ಯಾಲಯ ಸೇರಿದರು. ಆಗಲೇ ಅವರು ಡೇವಿಡ್ ಬ್ರಾಡ್ಲಿಯವರ, ಮೂಕಿ ಚಿತ್ರದಲ್ಲಿ ಅಭಿನಯಿಸಿದ್ದರು. ೧೬ ಮಿ.ಮಿ 'Peer gynt' ನಲ್ಲಿ. ಜ್ಯೂಲಿಯಸ್ ಸೀಝರ್, ಚಿತ್ರದಲ್ಲಿ ಪಾತ್ರ ವಹಿಸುವಾಗ, ಅವರ ಜೊತೆಗಾರರೆಲ್ಲಾ ಪಾಲುಗೊಂಡಿದ್ದರು. ವಿಶ್ವಯುದ್ಧದ ಸಮಯದಲ್ಲಿ ಕಾಲೇಜ್‍ಗೆ ಶರಣು ಹೊಡೆದು, ಯು. ಎಸ್ ಆರ್ಮಿ ಏರ್ ಫೋರ್ಸ್‍ಗೆ ಸೇರಿದರು. ಸ್ಟಾಫ್ ಸಾರ್ಜೆಂಟ್ ಪದವಿಯನ್ನು ಪಡೆದರು. ಕಾಲೇಜ್‍ನಲ್ಲಿ ಓದುತ್ತಿರುವಾಗ, ಲಿಡಿಯ ಮೇರಿ ಕ್ಲಾರ್ಕ್‍ರನ್ನು ಪ್ರೀತಿಸಿ ಮದುವೆ. ನ್ಯೂಯಾರ್ಕ್ ನ ಹೆಲ್ಸ್ ಕಿಚನ್‍ನಲ್ಲಿ ಮಾಡೆಲ್, ಆಗಿ ಇಬ್ಬರೂ ಕೆಲಸಮಾಡಿದರು. ನಾಟಕಗಳಲ್ಲಿ ಅವರಿಗೆ, "ಮ್ಯಾಕ್‍ಬೆತ್" ಪಾತ್ರ ಸಿಗುತ್ತಿತ್ತು. ಸರ್ ಥಾಮಸ್ ಮೊರ್, ಮ್ಯಾನ್ ಫಾರ್ ಆಲ್ ದ ಸೀಸನ್, ಮಾರ್ಕ್ ಆಂಟೋನಿ, ಜೂಲಿಯಸ್ ಸೀಝರ್, ಮಿ. ರಾಬರ್ಟ್ಸ್ ಅವರ ಮೆಚ್ಚಿನಪಾತ್ರ.

ಅಮೆರಿಕನ್ ಆರ್ಮಿಯಿಂದ, ಬ್ರಾಡ್ವೆ ಥಿಯೇಟರ್‍ವರೆಗೆ, ಅವರ ಕಾರ್ಯವ್ಯಾಪ್ತಿ

[ಬದಲಾಯಿಸಿ]

ಮನೆಯಲ್ಲಿ ಅವರಿಗಿಟ್ಟ ಹೆಸರು, ಚಾರ್ಲ್ಟನ್ ಕಾರ್ಟರ್ ಎಂದು, ಆ ಹೆಸರಿನಲ್ಲಿ ತಾಯಿಯವರ ಮದುವೆಗೆ ಮುಂಚಿನ ಹೆಸರು ಸೇರಿದೆ ; ಚಾರ್ಲ್‍ಟನ್, ಮಲತಂದೆಯವರ ಹೆಸರು, ಹೇಸ್ಟನ್, ಜೊತೆಯಲ್ಲಿ ಇಟ್ಟುಕೊಂಡಿದ್ದಾರೆ. ಹುಟ್ಟಿದ್ದು, ಅಮೆರಿಕೆಯ ಇಲಿನಾಯ್‍ನ, ಎವನ್ ಸ್ಟನ್‍ನಲ್ಲಿ, ಅಕ್ಟೋಬರ್, ೪, ರ ೧೯೨೩ ರಲ್ಲಿ. ಹುಟ್ಟಿನಿಂದಲೇ ಅವರಿಗೆ, ನಟನ-ಕಲೆ ರಕ್ತಗತವಾಗಿ ಬಂದಿತ್ತು. ಚಿಕಾಗೊ ಮುಖ್ಯನಗರದಿಂದ ಹತ್ತಿರದ ಉಪನಗರಕ್ಕೆ ವಾಸಿಸಲು ಅವರು ಹೋದಾಗ, ಅಲ್ಲಿನ ಶಾಲೆ-ಸ್ಕೂಲ್‍ಗಳಲ್ಲಿನ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾಯಕನಾಗಿ ನಟಿಸಿ ಒಳ್ಳೆಯ ಹೆಸರುಮಾಡಿದ್ದರು. ೨ ನೆಯ ವಿಶ್ವಯುದ್ಧದ ಸಮಯದಲ್ಲಿ, ಅಮೆರಿಕನ್ ಏರ್‍ಫೋರ್ಸ್‍ನಲ್ಲಿ ಸೇವೆ, ಕೊನೆಗೆ ಬ್ರಾಡ್ವೇ ಥಿಯೇಟರ್‍ಗೆ ಬಂದು ಸೇರಿದರು. ಆಂಟೊನಿ ಅಂಡ್ ಕ್ಲಿಯೋಪಾತ್ರ ನಾಟಕದಲ್ಲಿ, ತಮ್ಮ ಅದ್ಭುತ ಪಾತ್ರದಿಂದ ಪ್ರಾರಂಭವಾಯಿತು ಅವರ ವೃತ್ತಿ ಜೀವನ. ೧೯೪೧ ರಲ್ಲಿ " ರ್ ಗೈಂಟ್," ಎಂಬ ಫೀಚರ್ ಚಿತ್ರದಲ್ಲಿ ಕಾಣಿಸಿಕೊಂಡರು. ಲಿಡಿಯ ಹಾಗೂ ಹೇಸ್ಟನ್ ಒಟ್ಟುಗೂಡಿ, ೧೯೪೭ ರಲ್ಲೇ ಉತ್ತರ ಕೆರೋಲಿನದ ಹತ್ತಿರ, ಆಶ್‍ವಿಲ್ಲೆ ಎಂಬ ಜಾಗದಲ್ಲಿ, ಷೋ ಹೌಸ್ ಪ್ರಾರಂಭಿಸಿದರು.

ಚಾರ್ಲ್‍ಟನ್ ಹೇಸ್ಟನ್ ರವರಿಗೆ ಸಿಕ್ಕ ಪಾತ್ರಗಳೆಲ್ಲಾ, ವೀರ ಯೋಧ, ಅಥವಾ ಮತಸುಧಾರಕ, ಹಾಗೂ ಒಬ್ಬ ದಿಟ್ಟ ಪ್ರತಿಭಾನ್ವಿತ ವ್ಯಕ್ತಿಯದಾಗಿತ್ತು

[ಬದಲಾಯಿಸಿ]

ಮೊದಲಿನಿಂದಲೂ ಅವರಿಗೆ, ಚಾರಿತ್ರಿಕ, ಹಾಗೂ ಪೌರಾಣಿಕ ರೋಲ್‍ಗಳಲ್ಲಿ ಕಾಣಿಸಿಕೊಳ್ಳುವ ತವಕ. ೧೯೫೦ ಜ್ಯೂಲಿಯಸ್ ಸೀಸರ್‍ನಲ್ಲಿ ಮಾರ್ಕ್ ಆಂಟೋನಿಯ ಪಾತ್ರ ಅವರಿಗೆ ಹೇಳಿಮಾಡಿಸಿದಂತಿತ್ತು. ’The Greatest Show on the Earth', ಸಿಸೆಲ್ ಡಿಮೆಲೊ ರವರ, ಬ್ರಾಡ್ ಬೇಡನ್ ಎಂಬ ಸರ್ಕಸ್ ಮ್ಯಾನೇಜರ್‍ನ ಪಾತ್ರ, ಅವರಲ್ಲಿನ ನಟನಾ ಸಾಮರ್ಥ್ಯದ ಹಿರಿಮೆಯನ್ನು ಹೊರತಂದಿತು. ಇನ್ನೊಂದು ಚಿತ್ರ, ದ ಟೆನ್ ಕಮ್ಯಾಂಡ್‍ಮೆಂಟ್ಸ್‌ನಲ್ಲಿ, ಮೋಸೆಸ್ ಪಾತ್ರಾಭಿನಯ. ಬೆನ್ ಹುರ್ ಚಿತ್ರದಲ್ಲಿ, ಜೂಡಾ ಬೆನ್ ಹುರ್ ಪಾತ್ರ, ರೋಮನ್ ಯೋಧ, ರಥದ ಕುದುರೆಗಳನ್ನೋಡಿಸುವ ದೃಶ್ಯ. ೪ ಗಂಟೆಗಳ ಚಿತ್ರೀಕರಣ. ಈ ಬೈಬಲ್ ಆಧಾರಿತ ಚಿತ್ರ ಹಾಲಿವುಡ್ ವಲಯಗಳಲ್ಲಿ ವಿಕ್ರಮವನ್ನೇ ಮಾಡಿತು. ಮುಂದೆ ಅನೇಕ, ಚರಿತ್ರೆಯಮೇಲೆ ಆಧಾರಿತ ಹಾಗೂ ಫಿಕ್ಷನ್ ಮಾಡಿ ೧೯೬೧ ರಲ್ಲಿ ಎಲ್ ಸಿಡ್ ಎಂಬ ಚಿತ್ರದಲ್ಲಿ ನಾಯಕನ ಪಾತ್ರ. ೧೯೬೫ ಮೈಖೇಲ್ ಎಂಜಿಲೊ, 'The egony & the ectasy' ೧೯೬೮, ರಲ್ಲಿ ತಯಾರಿಸಿದ, 'The Planet of the Apes', ನಲ್ಲಿ, ಕರ್ನಲ್ ಜಾರ್ಜ್ ಟೈಲರ್ ಪಾತ್ರ. ಒಬ್ಬ ಆಸ್ಟ್ರೊನಾಟ್ ಕಳೆದುಹೋದ ಹಾದಿಯ ಸೈನ್ಸ್ ಫಿಕ್ಷನ್ ನಲ್ಲಿ ಪಾತ್ರಾಭಿನಯ. ೧೯೭೩ ರ Soylent Green ಎಂಬ ಪತ್ತೆದಾರಿ ಪಾತ್ರ ಅವರಿಗೆ ಚೆನ್ನಾಗಿ ಹಿಡಿಸಿತ್ತು.

ಅಮೆರಿಕನ್ ಟೆಲೆವಿಶನ್ ನಲ್ಲಿ ಚಾರ್ಲ್‍ಟನ್ ಹೇಸ್ಟನ್, ಅತ್ಯಂತ ಜನಪ್ರಿಯತೆಯನ್ನು ಗಳಿಸಿದ್ದರು

[ಬದಲಾಯಿಸಿ]

ಅಮೆರಿಕದ ಟೆಲಿವಿಶನ್ ಧಾರಾವಾಹಿಗಳಲ್ಲಿ ಮತ್ತು Dynasty, and its spinoff The Golbys, ಇತ್ಯಾದಿಗಳಲ್ಲಿ ತಮ್ಮ ಯೋಗದಾನ ಮಾಡಿದರು. ಅವರ ಜೀವನದ ಅಂತಿಮ ೧೦ ವರ್ಷಗಳ ಜೀವನದಲ್ಲಿ, ಅಮೆರಿಕದ ರಾಜಕೀಯ ರಂಗದಲ್ಲಿ ಜರುಗುತ್ತಿರುವ ಬೆಳವಣಿಗೆಗಳ ಬಗ್ಗೆ ತಮ್ಮ ಹೇಳಿಕೆಗಳನ್ನು ಕೊಡಲು ಆರಂಭಿಸಿದರು. ನ್ಯಾಷನಲ್ ರೈಫಲ್ ಅಸೋಸಿಯೇಶನ್‍ಗೆ ಸಹಾಯಮಾಡುತ್ತಿದ್ದರು. ಮಾರ್ಟಿನ್ ಲೂಥರ್ ಕಿಂಗ್, ಜೊತೆಗೂಡಿ ಕೆಲಸಮಾಡಿದರು. ೧೯೬೩ ರ ಸಿವಿಲ್ ರೈಟ್ಸ್ ಆಂದೋಳನದಲ್ಲಿ, ವಾಷಿಂಗ್ಟನ್ ನಗರದಲ್ಲಿ. ೧೯೯೮ ರಲ್ಲಿ ಹಿಪ್ ರೀಪ್ಲೇಸ್‍ಮೆಂಟ್ ಶಸ್ತ್ರಚಿಕಿತ್ಸೆಯಾಯಿತು. ಅಮೆರಿಕದ ಅಧ್ಯಕ್ಷರ ಮೆಡಲ್ ಬಂತು. ಹೇಸ್ಟನ್ ಮತ್ತು ಲಿಡಿಯರಿಗೆ, ಇಬ್ಬರು ಮಕ್ಕಳು. ಫ್ರೇಸರ್ ಕ್ಲಾರ್ಕ್ ಹೇಸ್ಟನ್, ಹಾಲಿ ಹೇಸ್ಟನ್ ರಾಕೆಲ್. ೨೦೦೨ ರಿಂದ, ಆಲ್ಝಿಮರ್ಸ್ ಕಾಯಿಲೆ ಯಿಂದ ನರಳುತ್ತಿದ್ದರು. ಇದಕ್ಕೆ ಮೊದಲು ಪ್ರೋಸ್ಟ್ರೇಟ್ ಕ್ಯಾನ್ಸರ್ ಜಡ್ಡಿನಿಂದ ತೊಂದರೆಗೀಡಾಗಿದ್ದರು. ಅವರೇ ಹೇಳುವಂತೆ, ಯಾವುದನ್ನು ಸರಿಪಡಿಸಲಾಗುವುದಿಲ್ಲವೋ, ಅದರ ಜೊತೆ ಕಾಲಹಾಕುವುದನ್ನು ಕಲಿಯುವುದೇ ಜಾಣತನವೆಂದು, ಹೇಳುತ್ತಿದ್ದರು. ಅವರ ೩ ಜನ ಮೊಮ್ಮಕ್ಕಳ ಹೆಸರುಗಳು ಹೀಗಿವೆ.

  • ೧. ಜ್ಯಾಕ್ ಅಲೆಕ್ಸಾಂಡರ್ ಹೇಸ್ಟನ್
  • ೨. ರಿಡ್ಲಿ ರಾಚೆಲ್
  • ೩. ಚಾರ್ಲಿ ರಾಚೆಲ್

ಅಮೆರಿಕದ ಚಲನಚಿತ್ರರಂಗದಲ್ಲಿ ಮೂಕಿಚಿತ್ರದ ದಿನಗಳಿಂದ ತಮ್ಮ ಕಲಾ-ಕೃಷಿಯನ್ನು ಪ್ರಾರಂಭಮಾಡಿದ ಹೇಸ್ಟನ್, ಅತ್ಯಂತ ಪ್ರತಿಭಾನ್ವಿತ ನಟ

[ಬದಲಾಯಿಸಿ]

ಬ್ರಾಡ್ ವೆನಲ್ಲಿ ಸಿಕ್ಕ, ಆಂಥೊನಿ ಅಂಡ್ ಕ್ಲಿಯೊಪಾತ್ರ, ೧೯೪೭ರಲ್ಲಿ, ಚಿತ್ರರಂಗದಲ್ಲಿ ಸಿಕ್ಕ ಪ್ರವೇಶ Dark City ೧೯೫೦ ರಲ್ಲಿ. 'The Greatest Show on the Earth', ನಿಜವಾಗಿಯೂ ಅವರಲ್ಲಿ ಸುಪ್ತವಾಗಿ ಹುದುಗಿದ್ದ ಪ್ರತಿಭೆಗೆ, ಮೆರುಗುಕೊಟ್ಟಂತಾಯಿತು. ಆ ಚಿತ್ರದ ನಂತರ ನಿಜವಾಗಿಯೂ ಅವರು ಸ್ಟಾರ್ ಆದರು. ೬ ಅಡಿ ೩ ಅಂಗುಲ ಎತ್ತರದ ಭಾರಿ ಆಳು. ಚಲನಚಿತ್ರ ದಿಗ್ದರ್ಶಕರ, ತಯಾರಕರ ಆಶೆಗಳಿಗೆ ಸ್ಪಂದಿಸುವ ಅವರ ಆಕರ್ಶಕ ವ್ಯಕ್ತಿತ್ವ ಎಲ್ಲರನ್ನೂ ಮರುಳುಗೊಳಿಸಿತ್ತು. ಅಜಾನುಬಾಹು, ವಿಸ್ತಾರವಾದ ಚೌಕಟ್ಟಿನ ಮುಖ, ಬಲಿಷ್ಠವಾದ ಬಾಹುಗಳು, ತೀಕ್ಷ್ಣವಾದ ಕಣ್ಣುಗಳು, ಹೃದಯದಿಂದ ಮೂಡಿಬರುವ ಸ್ಪಷ್ಟ ಸಾಂತ್ವನಕೊಡುವ ಮಾತಿನ ಎಳೆಗಳು, ವಿನಯ, ಆತ್ಮವಿಶ್ವಾಸ, ಗಾಂಭೀರ್ಯ, ಹಾಗೂ ನೋಡಿದರೆ ಗೌರವ ಬರುವ ವ್ಯಕ್ತಿತ್ವ. ಒಬ್ಬ ಮಹಾಯೋಧ, ಅಥವಾ, ಪವಾಡಪುರುಷನಿಗಾಗಿಯೇ ಹೇಳಿಮಾಡಿಸಿದ ಆಕೃತಿ. 'The Planet of the Apes' [೧೯೬೮] The Three Musketeers [೧೯೭೩] ಆಂಥೊನಿ ಆಂಡ್ ಕ್ಲಿಯೊಪಾತ್ರದಲ್ಲಿ ನಟನೆಯೊಂದಿಗೆ ಆ ಚಿತ್ರದ ನಿರ್ದೇಶನವನ್ನೂ ಮಾಡಿದರು. ೧೯೮೨ ರಲ್ಲಿ Mother Lode ಎಂಬ ಚಿತ್ರದಲ್ಲಿ ನಟಿಸಿದ್ದರು. ೧೯೬೬-೭೧ ರ ಕಾಲಾವಧಿಯಲ್ಲಿ, "Actors guild" ನ ಅಧ್ಯಕ್ಷರಾಗಿದ್ದರು.

ಸಾಮಾಜಿಕ ವಲಯಗಳಲ್ಲೂ ಅವರು ತಮ್ಮ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ

[ಬದಲಾಯಿಸಿ]

೧೯೯೮-೨೦೦೩ ರವರೆಗೆ, National Rifle Association ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. Ben Hur ಚಿತ್ರಕ್ಕೆ ಬಂದ ೧೧ ಆಸ್ಕರ್ ಅವಾರ್ಡ್‍ಗಳಲ್ಲಿ ಅತ್ಯಂತ ನೈಜ ಅಭಿನಯಕ್ಕಾಗಿ ಅವರಿಗೆ ಪ್ರಶಸ್ತಿ ಆಸ್ಕರ್ ಪ್ರಶಸ್ತಿ ದೊರಯಿತು. ಅವರ ಸಮಯದಲ್ಲಿ ಅಮೆರಿಕ ದೇಶದ ಸಿವಿಲ್ ರೈಟ್ಸ್ ಬಗ್ಗೆ ಕನಿಕರ ಸೂಚಿಸುವ ಕೆಲವೇ ವ್ಯಕ್ತಿಗಳಲ್ಲಿ ಹೇಸ್ಟನ್ ಒಬ್ಬರು. 'The Omega man,' Soylent Green,' ಮತ್ತು, ಚಿತ್ರಗಳಲ್ಲಿ ಪರಿಸರದ ಬಗ್ಗೆ ಕಾಳಜಿಯನ್ನು ವ್ಯಕ್ತಪಡಿಸಿ ಸುಧಾರಿಸುವ ನಿಟ್ಟಿನಲ್ಲಿ ಒಟ್ಟು ೭೦ ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದರು. ಅವರಿಗೆ ಬಂದ ಎರಡನೆಯ ಆಸ್ಕರ್ ಪ್ರಶಸ್ತಿ, ಅನೇಕ ಕಪ್ಪು ಅಮೆರಿಕನ್ನರನ್ನು ಹಾಲಿವುಡ್ಡಿನ ಸಿನಿಮಾ ರಂಗದಲ್ಲಿ ಪರಿಚಯಿಸಿ, ತಾಂತ್ರಿಕ ಸಿಬ್ಬಂದಿವರ್ಗದಲ್ಲಿ ಕೆಲಸಮಾಡಲು ಪ್ರೇರೇಪಿಸಿದರು. ೧೯೮೨ ರಲ್ಲಿ ಭಾರತ, ಬಂಗ್ಲಾದೇಶ್, ಮತ್ತು ಪಾಕಿಸ್ತಾನಕ್ಕೆ ಭೇಟಿನೀಡಿದ್ದರು. ಆಗ ಅವರು ವಿಶ್ವದ ಬೆಳೆಯುವ ಭೂಮಿಗಳು ಕ್ಷಯಿಸುತ್ತಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ, ಮುಂದಿನ ಜನಾಂಗದವರು ಎದುರಿಸಬಹುದಾದ ಕ್ಷಾಮದ ಬಗ್ಗೆ, ಒಂದು ವೃತ್ತಿ ಚಿತ್ರವನ್ನು ತಯಾರಿಸುವ ಕೆಲಸದಲ್ಲಿ ತೊಡಗಿದ್ದರು. ೧೯೮೪ ರಲ್ಲಿ ರೆಡ್ ಕ್ರಾಸ್ ಸಂಸ್ಥೆಯವರ ಕಾರ್ಯಕ್ರಮದಲ್ಲಿ ಭಾಗವಹಿಸಿ, ಇಥಿಯೋಪಿಯ ಕ್ಕೆ ಭೇಟಿಕೊಟ್ಟರು. ಹೇಸ್ಟನ್, ಪ್ರೆಸಿಡೆಂಟ್ ರೀಗನ್, ರ ನಿಕಟವರ್ತಿಯಾಗಿ ಕೆಲಸಮಾಡಿದರು. [ಸ್ಪೆಶಲ್ ಟಾಸ್ಕ್ ಫೋರ್ಸ್ ನಲ್ಲಿ ಕೆಲಸ. ಮುಂದಿನ ವರ್ಷ ಮೆಕ್ಸಿಕೊ ನಗರ ಕ್ಕೆ ವೀಕ್ಷಕರಾಗಿ. ಅಮೆರಿಕದ ಡೆಲಿಗೇಟ್ ಆಗಿ, ಅನೇಕ ಫಿಲ್ಮ್ ಫೆಸ್ಟಿವಲ್‍ಗಳಲ್ಲಿ ಭಾಗವಹಿಸಿದ್ದರು. ಸಾಂಸ್ಕೃತಿಕ ರಾಯಭಾರಿಯಾಗಿ, ಇಂಗ್ಲೆಂಡ್, ಈಜಿಪ್ಟ್, ನೈಜೀರಿಯ, ಆಸ್ಟ್ರೇಲಿಯ, ಹಾಗೂ ಪಶ್ಚಿಮ ಬರ್ಲಿನ್. ದೇಶವಿದೇಶಗಳಲ್ಲಿ ಪ್ರಯಾಣಮಾಡಿದ್ದಾರೆ. ಅಮೆರಿಕದ ಫಿಲ್ಮ್ ಇನ್‍ಸ್ಟಿಟ್ಯೂಟ್‍ನ ಪ್ರಥಮ ಅಧ್ಯಕ್ಷರಾಗಿ, ಮೆಂಬರ್ ಆಫ್ ನ್ಯಾಷನಲ್ ಕೌನ್ಸಿಲ್ ಆನ್ ದ ಆರ್ಟ್ಸ್ ಗೆ ಆಯ್ಕೆಯಾಗಿದ್ದರು. ಪತ್ನಿ, ಲಿಡಿಯ ರವರು ಫೋಟೋಗ್ರಫಿಯಲ್ಲಿ ಆಸಕ್ತರು. ಅವರ ಫೋಟೊಗ್ರಫಿಯ ಅನೇಕ ಪ್ರದರ್ಶನಗಳು ಪ್ರತಿಶ್ಠಿತ ಗ್ಯಾಲರಿಗಳಲ್ಲಿ ಎಲ್ಲರ ಮನವನ್ನು ಸೆಳೆದಿದ್ದವು.

ಚಾರ್ಲ್‍ಟನ್ ಹೇಸ್ಟನ್ ರ ಹಲವು ಪ್ರಸಿದ್ಧಿಪಡೆದ ಚಲನ-ಚಿತ್ರಗಳು

[ಬದಲಾಯಿಸಿ]
  • 55 days in Peking,
  • The egony & the ectasy,
  • michailenjilo
  • Khartoum ಬೆನ್ ಹುರ್, ಚಿತ್ರದಲ್ಲಿ ನಟಿಸಲು ಬರ್ಟ್ ಲಂ ಕ್ಯಾಸ್ಟರ್ ಒಪ್ಪದೆ ಹೋದದ್ದರಿಂದ ಚಾರ್ಲ್‍ಟನ್ ಹೇಸ್ಟನ್‍ರವರು ಮಾಡಬೇಕಾಯಿತು. ಚಾರ್ಲ್‍ಟನ್ ಹೇಸ್ಟನ್‍ರವರಿಗೆ, ಬೆಸ್ಟ್ ಆಕ್ಟರ್ ಪ್ರಶಸ್ತಿ ದೊರೆಯಿತು. ೧೯೬೮-೧೯೭೪ ರ ವರೆಗೆ, ವಿಜ್ಞಾನದ ಆಧಾರದಮೇಲೆ ತಯಾರಿಸಿದ ಚಿತ್ರಗಳಲ್ಲಿ ಅಭಿನಯಿಸಿದರು.
  • Soylent Gmt,
  • Earth quake,
  • The naked jungle,
  • The Greatest story ever told,
  • will penny,
  • The Hawayian years,
  • Earthquake
  • The Battle of mind way,
  • Omega man,
  • Sky jacked,
  • The mountain men,
  • Mother Lode,
  • Treasure Island,
  • Tombstone,
  • Dirty city,
  • The Three Musketeers

ಒಟ್ಟಾರೆ, ೧೨೬ ಚಲನಚಿತ್ರಗಳಲ್ಲಿ ಹಾಗೂ ಟೆಲಿವಿಶನ್ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಶಸ್ತಿಗಳು

[ಬದಲಾಯಿಸಿ]
  • Jean Hershalt Humanitarian Award,
  • Best Acting Award for Ben hur. ಒಟ್ಟಾರೆ ಚಿತ್ರಕ್ಕೆ ಸಿಕ್ಕ 11 oscars ಪ್ರಶಸ್ತಿಗಳಲ್ಲಿ,

ಹೇಸ್ಟನ್ ನಿಧನದಿಂದ ಅಮೆರಿಕನ್ ಚಲನಚಿತ್ರರಂಗ ಬಡವಾಯಿತು

[ಬದಲಾಯಿಸಿ]

ಆಸ್ಕರ್ ಪ್ರಶಸ್ತಿ ವಿಜೇತ ೮೪ ವರ್ಷ ವಯಸ್ಸಿನ ಚಾರ್ಲ್‍ಟನ್ ಹೇಸ್ಟನ್ ರವರು, ೫ ನೆ ಶನಿವಾರ, ಏಪ್ರಿಲ್, ೨೦೦೮ ರಂದು ಬೆವರ್ಲಿ ಹಿಲ್ಸ್ ನ ತಮ್ಮ ಸ್ವಂತ ಗೃಹದಲ್ಲಿ ಕಣ್ಣುಮುಚ್ಚಿದರು. ಜೀವನದುದ್ದಕ್ಕೂ ಜೊತೆಗಾತಿಯಾಗಿದ್ದ ೬೪ ವರ್ಷದ ಅವರ ಪ್ರೀತಿಯ ಪತ್ನಿ ಲಿಡಿಯ, ರವರನ್ನು ಅಗಲಿ ಹೊರಟುಹೋದರು. ಅಮೆರಿಕದ ಮಾಜಿ ಅಧ್ಯಕ್ಷ ಮಿ. ರೋನಾಲ್ದ್ ರೀಗನ್ ರ ಪತ್ನಿ ನ್ಯಾನ್ಸಿ ರೀಗನ್, ಹೇಸ್ಟನ್‍ರ ಬಗ್ಗೆ ಮಾತನಾಡುತ್ತಾ, ಹೇಸ್ಟನ್ ಮರಣದಿಂದ ಅವರಿಗೆ ಬಹಳ ದುಖಃವಾಗಿದೆ. ಹೇಸ್ಟನ್‍ರನ್ನು ಮರೆಯಲು ಅಸಾಧ್ಯ. ಅವರು ಪರದೆಯಮೇಲೆ ಹೇಗೆ ಶೌರ್ಯವನ್ನು ಪ್ರದರ್ಶಿಸುತ್ತಿದ್ದರೊ, ಹಾಗೆಯೇ ನಿಜಜೀವನದಲ್ಲಿಯೂ ಇದ್ದರು. ಪ್ರೆಸಿಡೆಂಟ್ ರೀಗನ್‍ರಿಗೆ ಯಾವಾಗಲೂ ಬಲಗೈಯಾಗಿ ಸಹಾಯಮಾಡುತ್ತಿದ್ದರು, ಎಂದು ನುಡಿದರು.