ಚರ್ಚೆಪುಟ:ಭೂಮಿ

ವಿಕಿಪೀಡಿಯ ಇಂದ
Jump to navigation Jump to search

ಮಾನ್ಯರೇ,

ಕನ್ನಡ ವಿಕಿಪೀಡಿಯದಲ್ಲಿ ವಿಜ್ಞಾನ ವಿಭಾಗಕ್ಕೆ ಸೇರಿದಂತೆ ಒಂದು ಬದಲಾವಣೆ ಮಾಡಬೇಕಾಗಿದೆ. ವಿಜ್ಞಾನ ಲೇಖಕರೆಲ್ಲರೂ ಒಪ್ಪಿರುವಂತೆ, ಹಾಗೆಯೇ ವಿಜ್ಞಾನ ನಿಘಂಟುಗಳಲ್ಲಿ ಶಿಷ್ಟಗೊಳಿಸಿದಂತೆ ಈಗ `ಶಾಸ್ತ್ರ' ಎಂಬ ಪದವನ್ನು ಸಂಪೂರ್ಣವಾಗಿ ಕೈಬಿಟ್ಟು ಅದರ ಬದಲು ಎಲ್ಲ ಕಡೆಯೂ ವಿಜ್ಞಾನ ಎಂದು ಬಳಸಲಾಗುತ್ತಿದೆ. ದಯವಿಟ್ಟು ನಿಮ್ಮ ನಮೂದುಗಳಲ್ಲಿ ಎಲ್ಲೆಲ್ಲಿ ಶಾಸ್ತ್ರ ಎಂದು ಬಂದಿದೆಯೋ ವಿಜ್ಞಾನಕ್ಕೆ ಸಂಬಂಧಿಸಿದಂತೆ ಅಲ್ಲಿ `ವಿಜ್ಞಾನ'ಎಂದು ಬದಲಾಯಿಡಿ. ಹಾಗೆಯೇ ಉಳಿಸಿಕೊಂಡರೆ ಪ್ರತಿಬಾರಿಯೂ ಇದನ್ನು ತಿದ್ದಲೇ ಸಾಕಷ್ಟು ಸಮಯ ವ್ಯಯವಾಗುತ್ತದೆ. ಕೆಳಗಿನ ಒಂದೆರಡು ಉದಾಹರಣೆ ಗಮನಿಸಬಹುದು.

ಭೂಶಾಸ್ತ್ರ = ಭೂವಿಜ್ಞಾನ. ರಸಾಯನ ಶಾಸ್ತ್ರ = ರಸಾಯನ ವಿಜ್ಞಾನ ಭೌತಶಾಸ್ತ್ರ = ಭೌತವಿಜ್ಞಾನ

ಇತ್ಯಾದಿ.

ವಿಶ್ವಾಸದಿಂದ

ಟಿ.ಆರ್. ಅನಂತರಾಮು


ಹೆಚ್ಚು ಜನ ಓದಿ ಪ್ರತಿಕ್ರಿಯಿಸಲಿ ಎಂದು ಇದನ್ನು ಅರಳಿಕಟ್ಟೆಯಲ್ಲಿ ಹಾಕಿದ್ದೇನೆ--Pavanaja (talk) ೧೮:೦೨, ೪ ಏಪ್ರಿಲ್ ೨೦೧೩ (UTC)

ಭೂಗರ್ಭ[ಬದಲಾಯಿಸಿ]

  • ನಮ್ಮ ಪೃಥ್ವಿಯನ್ನು ಸುರಕ್ಷಿತ ಜೀವಲೋಕವನ್ನಾಗಿ ಉಳಿಸಿರುವುದೇ ಭೂಗರ್ಭದ ಅತ್ಯಂತ ಪ್ರಮುಖ ಮಹತ್ವ. ನಮಗೆ ಆಧಾರವಾಗಿರುವ ಭೂ ನೆಲದಿಂದ ಮೂರು ಸಾವಿರ ಕಿಲೋ ಮೀಟರ್‌ ಆಳದಲ್ಲಿ ಸಂಪೂರ್ಣ ಅಗೋಚರವಾಗಿದ್ದು, ಹಾಗಿದ್ದೂ ಭೂಮಿಯ ಜೀವಜಾಲವನ್ನೂ, ಅದಕ್ಕೆ ಪೋಷಕವಾದ ಇತರ ಸರ್ವ ವ್ಯವಸ್ಥೆಗಳನ್ನೂ ನೇರವಾಗಿಯೋ ಪರೋಕ್ಷವಾಗಿಯೋ ಕಾಪಾಡುತ್ತಿರುವ ‘ಭೂ ಅಂಗ’ ಇದೇ! ಹಾಗಾಗಿರುವುದು ಹೇಗೆಂದು ಯೋಚಿಸುವ ಭೂ ಸ್ವಾಸ್ಥದಲ್ಲಿ ಇಷ್ಟೆಲ್ಲ ಪ್ರಾಮುಖ್ಯ ಪಡೆದಿರುವ ಭೂಗರ್ಭದ ವಿಶಿಷ್ಟ ವಿಸ್ಮಯಕರ ಸ್ವರೂಪ– ಸಂಯೋಜನೆಗಳನ್ನು ಗಮನಿಸಿ:
  • ಪ್ರಸ್ತುತ ಜಲಭರಿತ ಸುಂದರ ಜೀವಲೋಕವಾಗಿರುವ ನಮ್ಮ ಭೂಮಿ ಅವತರಿಸಿದ್ದು ಈಗ್ಗೆ ಸುಮಾರು ನಾಲ್ಕುನೂರ ಐವತ್ತು ಕೋಟಿ ವರ್ಷ ಹಿಂದೆ. ಆದರೆ ಭೂಗರ್ಭ ರೂಪುಗೊಂಡದ್ದು ಈಗ್ಗೆ ಒಂದು ನೂರು ಕೋಟಿ ವರ್ಷ ಹಿಂದೆ ಅಷ್ಟೆ. ಆ ಮೊದಲು ಜನನ ಕಾಲದ ಬಿಸಿಯಿಂದಲೂ, ಅವರತ ಕ್ಷುದ್ರಗ್ರಹ– ಉಲ್ಕೆಗಳ ಧಾಳಿಯಿಂದಲೂ ಇಡೀ ಭೂ ದ್ರವ್ಯ ಕರಗಿ ಕರಗಿ ಕಡೆಗೆ ಈಗ್ಗೆ ಒಂದು ಶತಕೋಟಿ ವರ್ಷ ಹಿಂದಿನ ಸುಮಾರಿಗೆ ತಣಿಯಲಾರಂಭಿಸಿತು. ಆ ವೇಳೆಗೆ ಭೂ ದ್ರವ್ಯದಲ್ಲಿದ್ದು ಸ್ವತಂತ್ರವಾಗಿದ್ದ ‘ಭಾರ ಧಾತು’ಗಳು ಗುರುತ್ವದಿಂದಾಗಿ ಭೂ ಕೇಂದ್ರದತ್ತ ಇಳಿದು ಸಂಗ್ರಹಗೊಂಡು, ಹಗುರ ಧಾತುಗಳು ಮೇಲೆ ಮೇಲೆ ಉಳಿದು ಕಡೆಗೆ ಭೂಮಿ ಈಗಿನ ಪದರ ಪದರ ಸಂರಚನೆ ಪಡೆಯಿತು. ಧರೆಯ ಪ್ರಧಾನ ಪದರಗಳಾದ ಒಳಗರ್ಭ, ಹೊರ ಗರ್ಭ, ಅದರ ಸುತ್ತಲಿನ ಕವಚ ಮತ್ತು ಅತ್ಯಂತ ಹೊರಗಿನ ತೊಗಟೆ ಎಂದರ ಭೂ ನೆಲ ರೂಪುಗೊಂಡದ್ದೇ ಹೀಗೆ. ಸರಾಸರಿ 12,750 ಕಿಮೀ ವ್ಯಾಸದ ಭೂಮಿಯಲ್ಲಿ ಒಳಗರ್ಭ 1210 ಕಿಮೀ ತ್ರಿಜ್ಯದ ಘನ ಸ್ಥಿತಿಯ ಗೋಳ.
  • ಹೊರಗರ್ಭದ ದಪ್ಪ 2270 ಕಿಮೀ ಕವಚದ ದಪ್ಪ 2900 ಕಿಮೀ ಉಳಿದದ್ದೇ ತೆಳ್ಳನ್ನ ಸಿಪ್ಪೆಯಂತೆ ಅತ್ಯಂತ ಹೊರಗೆ ಇಡೀ ಧರೆಯನ್ನಾವರಿಸಿರುವ ಗಟ್ಟಿ ನೆಲದ ತೊಗಟೆ.
  • ಪ್ರಧಾನವಾಗಿ ಕಬ್ಬಿಣ ಮತ್ತು ನಿಕ್ಕಲ್‌ ಲೋಹಗಳ ಮಿಶ್ರಣದ ಗಟ್ಟಿ ಗೋಳವಾಗಿರುವ ಒಳಗರ್ಭದ ತಾಪಮಾನ 5500 ಡಿಗ್ರಿ ಸೆಲ್ಷಿಯಸ್‌–ಸರಿಸುಮಾರು ನಮ್ಮ ಸೂರ್ಯನ ಮೇಲ್ಮೈ ತಾಪಮಾನದಷ್ಟು. ಅಲ್ಲಿನ ಒತ್ತಡ ಭೂ ವಾಯುಭಾರದ ಮೂರೂವರೆ ದಶಲಕ್ಷ ಮಡಿ! ಹೊರಗರ್ಭದ್ದೂ ಕಬ್ಬಿಣದ್ದೇ ದ್ರವ ಸ್ಥಿತಿಯ ಸಂಯೋಜನೆ. ಒಳಗರ್ಭ ಮತ್ತು ಹೊರಗರ್ಭ ಎರಡೂ ಸೇರಿ ಒಟ್ಟು ಭೂರ್ಗಭದ ಗಾತ್ರ ‘ಮಂಗಳ ಗ್ರಹ’ದಷ್ಟಾಗುತ್ತದೆ. ಇಡೀ ಭೂಮಿಯ ಶೇ. 30 ರಷ್ಟು ದ್ರವ್ಯರಾಶಿ ಭೂಗರ್ಭದಲ್ಲೇ ಅಡಕವಾಗಿದೆ!
  • ಭೂಮಿಯ ಒಳಚರನೆಯ ಒಂದು ವಿಸ್ಮಯ ಏನೆಂದರೆ ಭೂಗರ್ಭ ಭೂ ಕವಚದೊಡನೆ ದೃಢವಾಗಿ ಬಂಧಗೊಂಡಿಲ್ಲ. ಅಷ್ಟೇ ಅಲ್ಲದೆ ಭೂ ಗರ್ಭದಲ್ಲಿನ ಶಾಖ ಸಂವಹನ ಪ್ರವಾಹಗಳು ಕವಚದಲ್ಲಿನ ಪ್ರವಾಹಗಳಿಗಿಂತ ಹೆಚ್ಚು ಪ್ರಬಲವಾಗಿವೆ. ಈ ವ್ಯತ್ಯಾಸದಿಂದಾಗಿ ಧರೆಯೊಳಗೇ ಅಡಕಗೊಂಡಿದ್ದರೂ ಕೂಡ ಕಬ್ಬಿಣ ಮತ್ತಿತರ ಕಾಂತೀಯ ವಸ್ತುಗಳೇ ತುಂಬಿರುವ ಭೂಗರ್ಭ ಇಡೀ ಭೂಮಿಗಿಂತ ಸ್ವಲ್ಪವೇ ಸ್ವಲ್ಪ ಅಧಿಕ ವೇಗದಲ್ಲಿ ಸ್ವಭ್ರಮಣ ನಡೆಸಿದೆ. ಇದರ ಪರಿಣಾಮವಾಗಿ ಇಡೀ ಧರೆಗೇ ಕಾಂತ ಗುಣ ಪ್ರಾಪ್ತವಾಗಿ ಅಗೋಚರ ಕಾಂತೀಯ ಬಲ ರೇಖೆಗಳು ಭೂಮಿಯನ್ನು ಪರಿವರಿಸಿವೆ. ಹಾಗೆಂದರೆ ವಾಯುಮಂಡಲದಂತೆಯೇ– ಆದರೆ ಅದರಾಚೆಗೂ ಹಲವಾರು ಸಾವಿರ ಕಿಮೀ ದೂರದವರೆಗೆ– ‘ಕಾಂತಗೋಳ’ವೊಂದು ಧರೆಯನ್ನಾವರಿಸಿ ನಿಂತಿದೆ; ವಿಶಿಷ್ಟ ರಕ್ಷಣಾ ಕವಚವಾಗಿದೆ.
  • ಭೂಕಾಂತ ಕವಚಕ್ಕೆ ಒಂದು ಅದ್ಭುತ ಸಹಜ ಸಾಮರ್ಥ್ಯ ಇದೆ. ವಿಶೇಷವಾಗಿ ನಮ್ಮ ಸೂರ್ಯನಿಂದ ಉತ್ಸರ್ಜನೆಗೊಂಡು ಹರಿದುಬರುತ್ತಿರುವ, ಧರೆಯ ಕಡೆಗೂ ಎರಗುತ್ತಿರುವ ವಿದ್ಯುದಾವಿಷ್ಟ ಕಣಗಳ ನಿರಂತರ ಮಹಾಪೂರವನ್ನು ಕಾಂತಗೋಳ ತಡೆದು ವಿಕರ್ಷಿಸುತ್ತಿದೆ. ವಾಯುಮಂಡಲವನ್ನೂ, ನೆಲದ ಮೇಲಿನ ಜೀವ ಜಾಲವನ್ನೂ ರಕ್ಷಿಸುತ್ತಿದೆ
  • ವಾಸ್ತವ ಏನೆಂದರೆ ಕಾಂತಗೋಳದ ಈ ರಕ್ಷಣೆ ಇಲ್ಲವಾಗಿದ್ದಿದ್ದರೆ ಸೌರಕಣಗಳು ಭೂ ವಾಯುಮಂಡಲವನ್ನು ನಿಧಾನವಾಗಿತೊಡೆದು ಹಾಕಿ ಕಡೆಗೆ ಧರೆಯ ಜೀವಧಾರಕ, ಜೀವಿಪೋಷಕ ಗುಣಗಳನ್ನೇ ನಾಶಗೊಳಿಸುತ್ತಿದ್ದುವು!

ಪೃಥ್ವಿ-ವಿಸ್ಮಯದ-ಎರಡು-ಪ್ರಶ್ನೆಗಳುದಿ೧೬-೬-೨೦೧೬:ಪ್ರಜಾವಾಣಿ.Bschandrasgr (ಚರ್ಚೆ) ೧೧:೨೩, ೧೯ ಜೂನ್ ೨೦೧೬ (UTC)