ವಿಷಯಕ್ಕೆ ಹೋಗು

ಚರ್ಚೆಪುಟ:ಗೋಪಾಲಕೃಷ್ಣ ಅಡಿಗ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಲೇಖನಕ್ಕೆ ಸೇರಿಸಲಾದ ಹಲವು ಭಾಗಗಳು (ಮೊದಲ ಆವೃತ್ತಿ - ಬರಹದ ವ್ಯತ್ಯಾಸ ನೋಡಿ) ಮಾನ್ಯ ಪವನಜರವರ ಕೊಡುಗೆ. ಪ್ರಾರಂಭವಾಗಿ ಹಾಕಲಾದ ಲೇಖನ ಕೊಡುಗೆ ನೀಡಿದ ಗೌರವ ಕೆಳಗಿನಂತೆ ಮಾನ್ಯ ಪವನಜರವರಿಗೆ ಸಲ್ಲುತ್ತದೆ:
ಕೃಪೆ - ವಿಶ್ವ ಕನ್ನಡ (ಕನ್ನಡದ ಪ್ರಥಮ ಅಂತರಜಾಲ ಪತ್ರಿಕೆ)
ಯುನಿಕೋಡ್‌ಗೆ ಬದಲಾವಣೆ - ಯು. ಬಿ. ಪವನಜ

--hpnadig ೧೯:೪೩, ೧೩ ನವೆಂಬರ್ ೨೦೦೪ (UTC)

ನವ್ಯದ ನಾಯಕತ್ವ

[ಬದಲಾಯಿಸಿ]

೧೯೫೫ರ ನಂತರ ಸುಮಾರು ಕಾಲು ಶತಮಾನ ಕಾಲ ಅಡಿಗರು ಕನ್ನಡ ಕಾವ್ಯ ಲೋಕದ ಶಿಖರದಲ್ಲಿದ್ದರು. ಹೊಸ ಪೀಳಿಗೆಯ ಯು.ಆರ್.ಅನಂತಮೂರ್ತಿ, ಎ.ಕೆ. ರಾಮಾನುಜನ್, ರಾಮಚಂದ್ರ ಶರ್ಮಾ, ನಿಸಾರ್ ಅಹಮದ್, ಲಂಕೇಶ್, ತೇಜಸ್ವಿ, ಲಕ್ಶ್ಮಿ ನಾರಾಯಣ ಭಟ್ಟ, ಕೆ.ವಿ.ತಿರುಮಲೇಶ್, ಎಚ್.ಎಂ. ಚೆನ್ನಯ್ಯ, ಗಿರಡ್ಡಿ ಗೋವಿಂದರಾಜ, ಸಿದ್ಧಲಿಂಗ ಪಟ್ಟಣಶೆಟ್ಟಿ, ಚಂದ್ರಶೇಖರ ಪಾಟೀಲ, ಎಂ.ಎನ್. ವ್ಯಾಸರಾವ್, ಜಯಂತ ಕಾಯ್ಕಿಣಿ, ಕ.ವೆಂ.ರಾಜಗೋಪಾಲ್, ಮಾಧವ ಕುಲಕರ್ಣಿ, ಜಿ.ಎಚ್. ನಾಯಕ್, ಶ್ರೀಕೃಷ್ಣ ಆಲನಹಳ್ಳಿ ನಾ.ಮೊಗಸಾಲೆ ಮುಂತಾದ ಅನೇಕ ಲೇಖಕರು ತಮ್ಮದೇ ಆದ ರೀತಿಯಲ್ಲಿ ನವ್ಯಪ್ರಜ್ಞೆಯ ಸಾಹಿತ್ಯವನ್ನು ರಚಿಸಿದರು. ಇವರಲ್ಲಿ ಚಂಪಾ ಮತ್ತು ತೇಜಸ್ವಿ ಮುಂತಾದ ಕೆಲವರು ಕೆಲಕಾಲದ ನಂತರ ನವ್ಯ ಮಾರ್ಗದಿಂದ ಕೊಂಚ ಭಿನ್ನವಾದ ಮಾರ್ಗವನ್ನು ಹಿಡಿದರೂ ಆರಂಭದಲ್ಲಿ ಅಡಿಗರು ಪ್ರವರ್ತಿಸಿದ ನವ್ಯತೆಯ ಪ್ರಭಾವಾದಲ್ಲೇ ತಮ್ಮ ಸೃಜನಶೀಲತೆಯನ್ನು ರೂಪಿಸಿಕೊಂಡುದುದನ್ನು ಮರೆಯುವಂತಿಲ್ಲ.

ನವ್ಯ ಕಾವ್ಯದ ಅತಿ ಮುಖ್ಯ ಕವಿ ಎಂದು ಅಡಿಗರಿಂದ ಹೊಗಳಿಸಿಕೊಂಡ ಬಿ.ಸಿ.ರಾಮಚಂದ್ರಶರ್ಮರ ಒಂದು ಕವಿತೆ ಕೂಡಾ ಯಾರಿಗೂ ನೆನಪಿಲ್ಲ. ಕೆ.ವಿ.ತಿರುಮಲೇಶ್, ಎಚ್.ಎಂ. ಚೆನ್ನಯ್ಯ, ಗಿರಡ್ಡಿ ಗೋವಿಂದರಾಜ, ಸಿದ್ಧಲಿಂಗ ಪಟ್ಟಣಶೆಟ್ಟಿ, ಚಂದ್ರಶೇಖರ ಪಾಟೀಲ, ಇವರ ಕವಿತೆಗಳೂ ಸಹ ಉಳಿದಿಲ್ಲ. Mallikarjunasj (talk) ೨೦:೧೬, ೧೧ ಮೇ ೨೦೨೩ (IST)[reply]