ಚರ್ಚೆಪುಟ:ಓಂ (ಚಲನಚಿತ್ರ)

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭೂಗತಲೋಕದ ಕಥೆಯನ್ನು ಅಧರಿಸಿದ ಮೊದಲ ಕನ್ನಡ ಚಿತ್ರ
ಈ ವಾಕ್ಯ ಸರಿಯಾದುದಲ್ಲ ಎಂದು ನನ್ನ ಅಭಿಪ್ರಾಯ. ಓಂ ಚಿತ್ರಕ್ಕಿಂತ ಮುಂಚೆ ಕನ್ನಡದಲ್ಲಿ ಯಾವುದೂ ಭೂಗತಲೋಕದ ಕಥಾಹಂದರವುಳ್ಳ ಚಿತ್ರ ಬಂದಿದೆಯಲ್ಲವೇ? ಜೇಡರಬಲೆ, ಆಪರೇಷನ್ ಡೈಮಂಡ್ ರ್ಯಾಕೆಟ್, ಜಾಕಿ, ಚಕ್ರವರ್ತಿ, ಸವ್ಯಸಾಚಿ ಇತ್ಯಾದಿ ಚಿತ್ರಗಳೆಲ್ಲಾ ಭೂಗತಲೋಕದ ಕಥೆಯನ್ನೇ ಹೊಂದಿವೆ. ಓಂ ಚಿತ್ರಕ್ಕೂ ಈ ಚಿತ್ರಗಳಿಗೂ ವ್ಯತ್ಯಾಸವೆಂದರೆ, ಸ್ವತಃ ನಾಯಕನೇ ಭೂಗತಲೋಕದ ಪ್ರಮುಖ ವ್ಯಕ್ತಿಯಾಗಿರುವುದು. ಇತರ ಚಿತ್ರಗಳಲ್ಲಿ, ನಾಯಕನು ಭೂಗತಲೋಕವನ್ನು ಮಟ್ಟಹಾಕುವನು. ನಿಜಜೀವನದ ಭೂಗತಲೋಕದ ರೌಡಿಗಳು ಅಭಿನಯಿಸಿರುವ ಮೊದಲ ಕನ್ನಡ ಚಿತ್ರ ಎಂದು ಹೇಳಬಹುದೆಂದುಕೊಂಡಿರುವೆ. - ಮನ|Mana Talk - Contribs ೧೭:೨೩, ೨೯ July ೨೦೦೬ (UTC)