ಚದರವಳ್ಳಿ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಚದರವಳ್ಳಿ ಕರ್ನಾಟಕ ರಾಜ್ಯದ, ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹಳ್ಳಿ. ಸಾಗರದಿಂದ ಸುಮಾರು ೩೦ ಕಿಲೋಮೀಟರು ದೂರದಲ್ಲಿದೆ. ಇಲ್ಲಿ ಶ್ರೀ ಹರೀಶ ಶರ್ಮಾ ಶ್ರೀಮತಿ ವಿಜಯಲಕ್ಷ್ಮೀ ಮತ್ತು ಶ್ರೀನಿವಾಸ ಭಟ್ಟರು ದಂಪತಿಗಳ ಮಗನಾಗಿ ಜನಿಸಿದ್ದರು. ಇವರೇ ಮುಂದೆ ಸಂನ್ಯಾಸ ಸ್ವೀಕರಿಸಿ ರಾಮಚಂದ್ರಾಪುರ ಮಠದ ಪೀಠಾಧ್ಯಕ್ಷರಾದರು.

ಸಾಗರದಿಂದ ಚದರವಳ್ಳಿಗೆ ಹೋಗುವ ದಾರಿಯಲ್ಲಿ ಶರಾವತಿ ನದಿ ಹರಿಯುತ್ತಿದೆ. ಲಿಂಗನಮಕ್ಕಿ ಅಣಿಕಟ್ಟೆಯಿಂದಾಗಿ ಈ ದಾರಿಗೆ ಅಡ್ಡಲಾಗಿ ಹಿನ್ನೀರು ನಿಂತಿದ್ದು ಲಾಂಚಿನ ಮೂಲಕ ದಾಟಿ ಸಾಗಬೇಕು. ಹೀಗೆ ಸಾಗುವಾಗ ಪ್ರಕೃತಿ ಸೌಂದರ್ಯವನ್ನು ಆರಾಧಿಸುವವು ವಿಶೇಷವಾದ ಆನಂದವನ್ನು ಅನುಭವಿಸುತ್ತಾರೆ. ಈ ಆನಂದವನ್ನು ಸವಿಯಲೋಸ್ಕರವೇ ಅನೇಕರು ಈ ದಾರಿಯಲ್ಲಿ ಪ್ರಯಾಣ ಮಾಡುತ್ತಾರೆ.