ಚತುರ್ಮುಖ ಬಸದಿ, ಕಾರ್ಕಳ

ವಿಕಿಪೀಡಿಯ ಇಂದ
Jump to navigation Jump to search

ಜೈನ ಪರಂಪರೆಯ ಅತೀ ಪುರಾತನ ಸ್ಮಾರಕಗಳಲ್ಲಿ ಕಾರ್ಕಳದಲ್ಲಿ ನೆಲೆಸಿರುವ ಚರ್ತುರ್ಮುಖ ಬಸದಿ ಒಂದು.

ವಾಸ್ತುಶಿಲ್ಪ[ಬದಲಾಯಿಸಿ]

ನಾಲ್ಕು ದಿಕ್ಕುಗಳಿಂದಲೂ ಸಮರೂಪವಾದ ಜೈನ ತೀರ್ಥಂಕರರ ಶಿಲೆಗಳನ್ನುಳ್ಳ ಕಾರಣ ಈ ಬಸದಿಗೆ ಚರ್ತುರ್ಮುಖ ಬಸದಿ ಎಂಬ ಹೆಸರು ಬಂದಿದೆ. ಈ ಬಸದಿಯಲ್ಲಿ ಒಳಗಡೆ ಹಾಗೂ ಹೊರಗಡೆ ಒಟ್ಟು ೧೦೮ ಕಂಬಗಳಿದ್ದು, ಪ್ರವೇಶ ದ್ವಾರದ ನಾಲ್ಕು ಬದಿಗಳಲ್ಲೂ ಶಿಲೆಯ ಕಂಬಗಳನ್ನು ಕಾಣಬಹುದು. ಈ ಕಂಬಗಳು ಸರಾಸರಿ ೧೮ ಅಡಿ ಎತ್ತರವಾಗಿವೆ. ಇತರ ಪುರಾತನ ದೇವಸ್ಥಾನಗಳಲ್ಲಿ ಕಾಣಸಿಗುವಂತೆ ಇಲ್ಲಿಯೂ ಕಂಬಗಳ ಮೇಲೆ ಶಿಲಾಕೃತಿ ಹಾಗೂ ಶಾಸನಗಳ ಕೆತ್ತನೆಗಳನ್ನು ಕಾಣಬಹುದು. ಕೆತ್ತನೆಗಳ ವಿಚಾರದಲ್ಲಿ ಚರ್ತುರ್ಮುಖ ಬಸದಿಯು ಸಾಧಾರಣವಾಗಿದ್ದರೂ, ಶಿಲಾ ವಾಸ್ತುಶಿಲ್ಪಕ್ಕೆ ಪ್ರಸಿದ್ಧವಾಗಿದೆ. ಇಲ್ಲಿನ ಪ್ರತಿಯೊಂದು ಕಂಬವೂ ಏಕಶಿಲಾ ಆಕೃತಿಗಳಾಗಿವೆ. ಚರ್ತುರ್ಮುಖ ಬಸದಿಯ ಚಾವಣಿಯ ಒಳಮೈ ಗ್ರೆನೈಟ್ ಕಲ್ಲಿನಿಂದ ನಿರ್ಮಿಸಲ್ಪಟ್ಟಿದೆ. ಗರ್ಭಗೃಹದಲ್ಲಿ ನಾಲ್ಕು ದಿಕ್ಕುಗಳಲ್ಲಿ ಅರ, ಮಲ್ಲಿ, ಮುನಿಸುವೃತ ಜೈನ ತೀರ್ಥಂಕರರ ಕರಿಯಕಲ್ಲಿನ ಮೂರ್ತಿಗಳು, ಹಾಗೂ ಪ್ರವೇಶದ ದಿಕ್ಕಿನಲ್ಲಿ ಪದ್ಮಾವತಿ ದೇವಿಯ ವಿಗ್ರಹವನ್ನು ಹೊಂದಿದೆ. ಬಸದಿಗೆ ಹೋಗುವ ದಾರಿ ೫೮ ಮೆಟ್ಟಿಲುಗಳನ್ನು ಹೊಂದಿದೆ. [೧]

ಇತಿಹಾಸ[ಬದಲಾಯಿಸಿ]

ಚತುರ್ಮುಖ ಬಸದಿಯ ನಿರ್ಮಾಣ ೧೪೩೨ನೇ ಇಸವಿಯಲ್ಲಿ ಜೈನ ರಾಜ ವೀರ ಪಾಂಡ್ಯದೇವನ ಆಡಳಿತದಡಿ ಪ್ರಾರಂಭವಾಗಿ, ೧೫೮೬ರಲ್ಲಿ ಇಮ್ಮಡಿ ಭೈರವ ರಾಜನ ಆಡಳಿತದಡಿ ಪೂರ್ಣಗೊಂಡಿತು.[೨] ಕಾರ್ಕಳಬಾಹುಬಲಿ ಏಕಶಿಲಾ ಮೂರ್ತಿಯನ್ನು ಎದುರುಗೊಂಡು ಈ ಬಸದಿಯನ್ನು ನಿರ್ಮಿಸಲಾಗಿದೆ. ಇದರ ಸಾಂಪ್ರದಾಯಿಕ ಹೆಸರು 'ತ್ರಿಭುವನ ತಿಲಕ ಜಿನ ಚೈತ್ಯಾಲಯ' ಅಥವಾ 'ರತ್ನತ್ರಯ ಧಾಮ'.[೩]

ಭಾರತದ ಪುರಾತತ್ವ ಇಲಾಖೆಯು ದೇಶದ ಅತೀ ಪುರಾತನ ಹಾಗೂ ಸಂರಕ್ಷಿತ ಸ್ಮಾರಕಗಳಲ್ಲಿ ಚರ್ತುರ್ಮುಖ ಬಸದಿಯೂ ಒಂದು ಎಂದು ಗುರುತಿಸಿದೆ.

ಮಾರ್ಗಸೂಚಿ[ಬದಲಾಯಿಸಿ]

ಕಾರ್ಕಳ ತಾಲೂಕು ಮಂಗಳೂರು ಮಹಾನಗರದಿಂದ ೫೨ ಕಿಲೋಮೀಟರ್ ದೂರದಲ್ಲಿದ್ದು, ಉಡುಪಿಯಿಂದ ೩೮ ಕಿಲೋಮೀಟರ್ ದೂರದಲ್ಲಿದೆ. ಉಡುಪಿ ಹಾಗೂ ಮಂಗಳೂರಿಗೆ ರೈಲ್ವೆ ಸೌಲಭ್ಯ ಹಾಗೂ ಮಂಗಳೂರಿಗೆ ವಿಮಾನ ಸೌಲಭ್ಯಗಳು ಲಭ್ಯವದೆ. ರಾಜ್ಯದ ಎಲ್ಲಾ ಪ್ರಮುಖ ನಗರಗಳೊಂದಿಗೆ ಕಾರ್ಕಳ ಹೆದ್ದಾರಿ ಮೂಲಕ ಸಂಬಂಧ ಹೊಂದಿದೆ.


ಉಲ್ಲೇಖಗಳು[ಬದಲಾಯಿಸಿ]

  1. http://www.karnatakaholidays.com/chaturmukha-basadi-karkala.php
  2. http://www.deccanherald.com/content/114327/chaturmukha-basadi-four-doors-divinity.html
  3. http://www.trayaan.com/2015/03/chaturmukha-basadi-jain-temple-karkala-historical-architecture-monument-udupi-karnataka.html#.V8p-BIX8VJQ