ಗ್ಲೋರಿಯಾ ಮೊಹಾಂತಿ
ಗ್ಲೋರಿಯಾ ಮೊಹಾಂತಿ | |
---|---|
ಜನನ | ೨೭ ಜೂನ್ ೧೯೩೨ |
ಮರಣ | 11 December 2014 ಒಡಿಶಾ, ಭಾರತ | (aged 82)
ವೃತ್ತಿ | ನಟಿ |
ಸಕ್ರಿಯ ವರ್ಷಗಳು | ೧೯೪೯ – ೨೦೦೯ |
ಸಂಗಾತಿ | ಕಮಲ ಪ್ರಸಾದ್ ಮೊಹಂತಿ |
ಮಕ್ಕಳು | 4 |
ಗ್ಲೋರಿಯಾ ಮೊಹಾಂತಿ (೨೭ ಜೂನ್ ೧೯೩೨ - ೧೧ ಡಿಸೆಂಬರ್ ೨೦೧೪) ಒಬ್ಬ ಭಾರತೀಯ ರಂಗಭೂಮಿ, ದೂರದರ್ಶನ ಮತ್ತು ಒಡಿಯಾ ಚಲನಚಿತ್ರೋದ್ಯಮದಲ್ಲಿ ಚಲನಚಿತ್ರನಟಿಯಾಗಿ ಕೆಲಸ ಮಾಡಿದವರು. [೧] ಒಡಿಯಾ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಅವರು ರಾಜ್ಯದ ಅತ್ಯುನ್ನತ ಗೌರವವನ್ನು ಪಡೆದರು. ೧೯೯೪ ರಲ್ಲಿ ಜಯದೇಬ್ ಪುರಸ್ಕಾರ ಮತ್ತು ೧೯೯೨ ರಲ್ಲಿ ಒಡಿಶಾ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದರು. ಸಾಂಸ್ಕತಿಕ ಸಂಸ್ಥೆ ಸ್ರ್ಜನ್ ಅವರಿಗೆ ೨೦೧೧ರ ವರ್ಷಕ್ಕೆ ಗುರು ಕೇಳುಚರಣ್ ಮೊಹಾಪಾತ್ರ ಪ್ರಶಸ್ತಿಯನ್ನು ನೀಡಿತು. [೨] ಇವರು ೨೦೧೨ ರಲ್ಲಿ ಸಾಂಸ್ಕೃತಿಕ ಸಂಸ್ಥೆ ಘುಂಗೂರ್‌ನಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದಿದ್ದಾರೆ. [೩] [೪]
ಆರಂಭಿಕ ಜೀವನ
[ಬದಲಾಯಿಸಿ]ಚಿಕ್ಕ ವಯಸ್ಸಿನಲ್ಲಿ, ಮೊಹಾಂತಿ ಅವರಿಗೆ ತಮ್ಮ ಚಿಕ್ಕಮ್ಮ ನಟಿ ಅನಿಮಾ ಪೆದಿನಿ ಅವರಿಂದ ನೃತ್ಯ ಮತ್ತು ಸಂಗೀತ ಪರಿಚಯವಾಯಿತು. ಅವರು ಗುರು ಕೇಲುಚರಣ್ ಮೊಹಾಪಾತ್ರ ಅವರ ಬಳಿ ಒಡಿಸ್ಸಿ ನೃತ್ಯವನ್ನು ಕಲಿತರು. ಕಟಕ್‌ನ ನ್ಯಾಷನಲ್ ಮ್ಯೂಸಿಕ್ ಅಸೋಸಿಯೇಷನ್‌ನಲ್ಲಿ ಸಂಗೀತ ತರಬೇತಿ ಪಡೆದರು. ಅವರಿಗೆ ಬಾಲಕೃಷ್ಣ ದಾಶ್ ಮತ್ತು ಭುವನೇಶ್ವರ ಮಿಶ್ರಾ ಎಂಬ ಪ್ರಸಿದ್ಧ ಗಾಯಕರು ಮಾರ್ಗದರ್ಶನ ನೀಡಿದರು. <ref:2">"Gloria's era comes to an end". The Telegraph. Archived from the original on 25 June 2015. Retrieved 2017-11-10.</ref> ಚಿಕ್ಕ ವಯಸ್ಸಿನಲ್ಲೇ ಅವರ ಆಸಕ್ತಿ ಮತ್ತು ಪ್ರತಿಭೆ ಅವರ ಸುದೀರ್ಘ ವೃತ್ತಿಜೀವನಕ್ಕೆ ಕಾರಣವಾಯಿತು. [೫]
ಮೊಹಾಂತಿ ಒಬ್ಬ ಕ್ರೀಡಾಪಟು ಮತ್ತು ೧೯೫೭ ರಿಂದ ೧೯೬೦ ರವರೆಗೆ ರಾಜ್ಯ ಮಹಿಳಾ ವಾಲಿಬಾಲ್ ತಂಡವನ್ನು ಪ್ರತಿನಿಧಿಸಿದರು.
ವೃತ್ತಿ
[ಬದಲಾಯಿಸಿ]ಮೊಹಾಂತಿ ಅವರು ಆಲ್ ಇಂಡಿಯಾ ರೇಡಿಯೊದಲ್ಲಿ ಗಾಯಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ೨೦ ವರ್ಷಗಳ ಕಾಲ ಸಂಸ್ಥೆಯ ಭಾಗವಾಗಿ ಮುಂದುವರೆದರು. [೬] ೧೯೪೪ ರಲ್ಲಿ, ಅವರು 'ಭಟ' ನಾಟಕದ ಮೂಲಕ ರಂಗಭೂಮಿಗೆ ಪರಿಚಿತವಾದರು, ಅಲ್ಲಿ ಅವರು ಪ್ರಮುಖ ನಟಿಯ ಪಾತ್ರವನ್ನು ನಿರ್ವಹಿಸಿದರು. [೭] ೧೯೪೯ ರಲ್ಲಿ, ಆಕೆಗೆ ಒಡಿಯ ಚಲನಚಿತ್ರ ಶ್ರೀ ಜಗನ್ನಾಥದಲ್ಲಿ ಪಾತ್ರವನ್ನು ನೀಡಲಾಯಿತು. ಗೋಪಾಲ್ ಘೋಷ್ ಎದುರು ಲಲಿತಾ ಪಾತ್ರವು ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿತು ಮತ್ತು ಅವರನ್ನು ಪ್ರಮುಖ ನಟಿಯಾಗಿ ಮಾಡಿತು. [೮] [೯]
ರಂಗಭೂಮಿಯಲ್ಲಿನ ಅವರ ವೃತ್ತಿಜೀವನದ ಅವಧಿಯಲ್ಲಿ, ಒಡಿಯಾ, ಹಿಂದಿ, ಬೆಂಗಾಲಿ, ಉರ್ದು ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ೧೦೦ ಕ್ಕೂ ಹೆಚ್ಚು ನಾಟಕಗಳನ್ನು ಪ್ರದರ್ಶಿಸಿದರು ಮತ್ತು ಈ ನಾಟಕಗಳನ್ನು ವಿವಿಧ ಭಾರತೀಯ ನಗರಗಳಲ್ಲಿ ಪ್ರದರ್ಶಿಸಲಾಯಿತು. [೭] ಮೊಹಾಂತಿ ಅವರು ಜಿಬಾಕು ದೇಬಿ ನಹಿ, ಠಾಕುರಾ ಘರಾ, ಸಾರಾ ಆಕಾಶ ಮತ್ತು ಪನಾಟಾ ಕಣಿಯಂತಹ ಒಡಿಯಾ ಟೆಲಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. [೧೦]
ಪ್ರಶಸ್ತಿಗಳು
[ಬದಲಾಯಿಸಿ]- ೧೯೫೨ ರಲ್ಲಿ ಪ್ರಜಾತಂತ್ರ ಪ್ರಚಾರ ಸಮಿತಿಯಿಂದ ಅತ್ಯುತ್ತಮ ರಂಗ ನಟಿ ಪ್ರಶಸ್ತಿ
- ೧೯೯೨ ರಲ್ಲಿ ಒಡಿಸ್ಸಾ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
- ೧೯೯೨ ರಲ್ಲಿ ಜಯದೇವ್ ಸಮ್ಮಾನ್
- ೨೦೧೧ ರಲ್ಲಿ ಗುರುಕೇಲುಚರಣ್ ಮಹಾಪಾತ್ರ ಪ್ರಶಸ್ತಿ
ಚಿತ್ರಕಥೆ
[ಬದಲಾಯಿಸಿ]ಚಲನಚಿತ್ರ/ನಾಟಕ | ವರ್ಷ | ಪಾತ್ರ |
---|---|---|
ಶ್ರೀ ಜಗನ್ನಾಥ | ೧೯೫೦ | ಲಲಿತಾ |
ಕೇದಾರ ಗೌರಿ | ೧೯೫೪ | ಗ್ಲೋರಿಯಾ ರೂಟ್ |
ಮಾ | ||
ಸಿತಾರತಿ | ೧೯೮೧ | |
ತಾಪೋಯಿ | ||
ತಪಸ್ಯ | ||
ಉಲ್ಕಾ | ೧೯೮೧ | |
ಉದಯ ಭಾನು | ೧೯೮೩ | |
ಜನನಿ | ||
ಛಮನ ಆತಗುಂತಾ | ||
ಆದಿ ಮೀಮಾಂಸ | ೧೯೯೧ | |
ಶಸುಘರ ಚಾಲಿಜಿಬಿ | ೨೦೦೬ |
ಮೊಹಾಂತಿ ಅವರಿಗೆ ಪಾರ್ಶ್ವವಾಯುವಿನಿಂದ ೧೧ ಡಿಸೆಂಬರ್ ೨೦೧೪ ರಂದು ನಿಧನರಾದರು. ಅವರ ಅಂತಿಮ ವಿಧಿಗಳನ್ನು ಒಡಿಶಾದ ಕಟಕ್‌ನಲ್ಲಿರುವ ಸತಿಚೌರಾ ಸ್ಮಶಾನದಲ್ಲಿ ನೆರವೇರಿಸಲಾಯಿತು. [೧೧]
ಉಲ್ಲೇಖಗಳು
[ಬದಲಾಯಿಸಿ]- ↑ "Veteran artiste Gloria Mohanty passes away". Business Standard India. Press Trust of India. 2014-12-12. Retrieved 2017-11-09.
- ↑ "Noted Odissi danseuse Kumkum Mohanty and veteran artist Gloria Mohanty will get the prestigious 17th Guru Kelucharan Mohapatra Award for 2011. - Times of India". The Times of India. Retrieved 2017-11-09.
- ↑ "Odia veteran actress Gloria Mohanty passed away". Odia Songs l Oriya Films | New Oriya Film News | Latest Oriya Films. Archived from the original on 2017-11-10. Retrieved 2017-11-09.
- ↑ "Gloria Mohanty Oriya Actress Biography, Movies, Wiki, Videos, Photos". Oriya Films (in ಅಮೆರಿಕನ್ ಇಂಗ್ಲಿಷ್). 2012-08-18. Retrieved 2017-11-09.
- ↑ "Gloria Mohanty | Ollywood | | Odialive.com". odialive.com (in ಅಮೆರಿಕನ್ ಇಂಗ್ಲಿಷ್). 19 August 2012. Retrieved 2017-11-10.
- ↑ "Gloria's era comes to an end". The Telegraph. Archived from the original on 25 June 2015. Retrieved 2017-11-10."Gloria's era comes to an end". The Telegraph. Archived from the original on 25 June 2015. Retrieved 10 November 2017.
- ↑ ೭.೦ ೭.೧ "Gloria Mohanty Odia Oriya Film Star Celebrity Ollywood Biography | Gallery". www.nuaodisha.com. Retrieved 2017-11-10."Gloria Mohanty Odia Oriya Film Star Celebrity Ollywood Biography | Gallery". www.nuaodisha.com. Retrieved 10 November 2017.
- ↑ "Veteran artiste Gloria Mohanty passes away". Business Standard India. Press Trust of India. 2014-12-12. Retrieved 2017-11-09."Veteran artiste Gloria Mohanty passes away". Business Standard India. Press Trust of India. 12 December 2014. Retrieved 9 November 2017.
- ↑ "Gloria Mohanty passed away : Odia veteran actress - Ollywood". Incredible Orissa (in ಅಮೆರಿಕನ್ ಇಂಗ್ಲಿಷ್). 2014-12-12. Retrieved 2017-11-10.
- ↑ Bureau, Odisha Sun Times. "Veteran Odisha actress Gloria Mohanty is dead | OdishaSunTimes.com". odishasuntimes.com (in ಅಮೆರಿಕನ್ ಇಂಗ್ಲಿಷ್). Retrieved 2017-11-10.
{{cite web}}
:|last=
has generic name (help) - ↑ "Veteran artiste Gloria Mohanty passes away". Business Standard India. Press Trust of India. 2014-12-12. Retrieved 2017-11-09."Veteran artiste Gloria Mohanty passes away". Business Standard India. Press Trust of India. 12 December 2014. Retrieved 9 November 2017.