ಗೋಳಿಬಜೆ
Jump to navigation
Jump to search
ಗೋಳಿ ಬಜೆ (ಮೂಲ ತುಳು) ಮೈದಾ ಹಾಗೂ ಮೊಸರಿನಿಂದ ಮಾಡಿದಂತಹ ಒಂದು ಕರಿದ ತಿಂಡಿ.[೧] ಇದನ್ನು ಮಂಗಳೂರು ಬಜ್ಜಿ ಎಂದೂ ಕರೆಯುತ್ತಾರೆ. ಇದು ಕರ್ನಾಟಕದ ಕರಾವಳಿ ಭಾಗದ ಜನಪ್ರಿಯ ಸಂಜೆ ತಿಂಡಿ.
ಸಾಮಗ್ರಿಗಳು[ಬದಲಾಯಿಸಿ]
ಗೋಳಿ ಬಜೆಯನ್ನು ತಯಾರಿಸಲು ಮೈದಾ, ಮೊಸರು, ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಹೆಚ್ಚಿದ ಶುಂಠಿ, ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ, ಜೀರಿಗೆ, ಹಸಿರು ಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಅಡುಗೆ ಸೋಡ ಮತ್ತು ಉಪ್ಪು ಬಳಸಲಾಗುವುದು. ಇವೆಲ್ಲಾ ಸಾಮಾಗ್ರಿಗಳನ್ನು ಚೆನ್ನಾಗಿ ಕಲಸಿ, ಮೆದುವಾದ ಹಿಟ್ಟನ್ನು ಪುಟ್ಟ ಚೆಂಡಿನ ಆಕಾರ ಮಾಡಿ ಎಣ್ಣೆಯಲ್ಲಿ ಕರಿಯಲಾಗುತ್ತದೆ.
ಬಡಿಸುವ ವಿಧಾನ[ಬದಲಾಯಿಸಿ]
ಗೋಳಿ ಬಜೆಯನ್ನು ಹೆಚ್ಚಾಗಿ ಕಾಯಿ ಚಟ್ನಿಯೊಂದಿಗೆ ಅಥವಾ ಕೆಚಪ್‍ನೊಂದಿಗೆ ನೀಡಲಾಗುವುದು.[೨]
ಉಲ್ಲೇಖಗಳು[ಬದಲಾಯಿಸಿ]
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |