ವಿಷಯಕ್ಕೆ ಹೋಗು

ಗೋಬಿ ಮರುಭೂಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೋಬಿ ಮರುಭೂಮಿ (Говь)
Desert
[[Image:| 256px|none
]]
Kintras ಮಂಗೋಲಿಯ, ಚೀನಾ
Lenth ೧,೫೦೦ km (೯೩೨ mi), SE/NW
Width ೮೦೦ km (೪೯೭ mi), N/S
Area ೧೨,೯೫,೦೦೦ km² (೫,೦೦,೦೦೨ sq mi)
[[Image:| 256px|none
]]


ಗೋಬಿ ಮರುಭೂಮಿ ಏಷ್ಯಾ ಭೂಖಂಡದ ದೊಡ್ಡ ಮರುಭೂಮಿ ಪ್ರದೇಶಗಳಲ್ಲಿ ಒಂದು. ಚೀನಾದ ಉತ್ತರ ಮತ್ತು ವಾಯವ್ಯ ಭಾಗಗಳು ಮತ್ತು ಮಂಗೋಲಿಯದ ದಕ್ಷಿಣ ಭಾಗಗಳನ್ನು ಗೋಬಿ ಮರುಭೂಮಿಯು ಆವರಿಸಿದೆ. ಗೋಬಿ ಮರುಭೂಮಿಯ ಉತ್ತರದಲ್ಲಿ ಅಲ್ಟಾಯ್ ಪರ್ವತಗಳು ಮತ್ತು ಮಂಗೋಲಿಯಾದ ವಿಶಾಲ ಹುಲ್ಲುಗಾವಲುಗಳಿದ್ದರೆ ನೈಋತ್ಯದಲ್ಲಿ ಟಿಬೆಟ್ ಪ್ರಸ್ತಭೂಮಿ ಮತ್ತು ಹೆಕ್ಸಿ ಕಾರಿಡಾರ್‌ಗಳಿವೆ. ಆಗ್ನೇಯದಲ್ಲಿ ಉತ್ತರ ಚೀನಾ ಬಯಲು ಪ್ರದೇಶವಿದೆ. ಜಗತ್ತಿನ ಅತಿ ವಿಶಾಲ ಮರುಭೂಮಿಗಳಲ್ಲಿ ಗೋಬಿ ಮರುಭೂಮಿ ಐದನೆಯದಾಗಿದೆ. ಹಿಮಾಲಯ ಪರ್ವತಗಳು ಮಳೆಯ ಮೋಡಗಳನ್ನು ತಡೆಯುವುದರಿಂದ ಗೋಬಿ ಮರುಭೂಮಿಯಲ್ಲಿ ಬೀಳುವ ಮಳೆ ಅತ್ಯಲ್ಪ. ಮಂಗೋಲ್ ಸಾಮ್ರಾಜ್ಯದೊಂದಿಗೆ ಹಾಸುಹೊಕ್ಕಾಗಿ ಸೇರಿರುವ ಗೋಬಿ ಮರುಭೂಮಿ ಪ್ರಾಚೀನ ರೇಷ್ಮೆ ಮಾರ್ಗ ಹಾದುಹೋಗಿದ್ದ ಪ್ರದೇಶ ಕೂಡ. ಗೋಬಿ ಮರುಭೂಮಿಯ ಉದ್ದ ನೈಋತ್ಯದಿಂದ ಈಶಾನ್ಯಕ್ಕೆ ೧೬೧೦ ಕಿ.ಮೀ.ಗಳಷ್ಟಿದ್ದರೆ ಅಗಲ ಉತ್ತರದಿಂದ ದಕ್ಷಿಣಕ್ಕೆ ೮೦೦ ಕಿ.ಮೀ. ಜಗತ್ತಿನ ಇತರ ಮರುಭೂಮಿಗಳಿಗೆ ಹೋಲಿಸಿದರೆ ಗೋಬಿ ಮರುಭೂಮಿಯ ವೈಶಿಷ್ಟ್ಯವೆಂದರೆ ಇಲ್ಲಿನ ಹೆಚ್ಚಿನ ಪ್ರದೇಶವು ಮರಳಿನಿಂದ ಕೂಡಿರದೆ ಬರಿಯ ಬಂಡೆಗಳನ್ನು ಒಳಗೊಂಡಿದೆ.

ಗೋಬಿ ಮರುಭೂಮಿಯು ಒಂದು ಶೀತಲ ಮರುಭೂಮಿಯಾಗಿದೆ. ಇಲ್ಲಿ ಆಗಾಗ್ಗೆ ಹಿಮಪಾತವು ಸಹ ಆಗುವುದಿದೆ. ಗೋಬಿ ಮರುಭೂಮಿಯ ಹೆಚ್ಚಿನ ಭಾಗವು ಸಮುದ್ರಮಟ್ಟದಿಂದ ೩ರಿಂದ ೫ ಸಾವಿರ ಅಡಿಗಳ ಎತ್ತರದಲ್ಲಿರುವುದರಿಂದ ವಾತಾವರಣ ಸಾಮಾನ್ಯವಾಗಿ ತಂಪಾಗಿರುತ್ತದೆ. ಸರಾಸರಿ ವಾರ್ಷಿಕ ಮಳೆ ಸುಮಾರು ೧೯೪ ಮಿಲಿಮೀಟರ್. ಚಳಿಗಾಲದಲ್ಲಿ ಸೈಬೀರಿಯಾದ ಕಡೆಯಿಂದ ಬೀಸುವ ಶೀತಮಾರುತಗಳು ಹಿಮವನ್ನು ಜೊತೆಗೆ ಸಾಗಿಸಿಕೊಂಡು ಬರುವುದಿದೆ. ಇದರಿಂದಾಗಿ ಈ ಸಮಯದಲ್ಲಿ ವಾತಾವರಣ ಕೊರೆಯುವಷ್ಟು ತಂಪಾಗಿದ್ದು ತಾಪಮಾನ -೪೦ ಡಿಗ್ರಿ ಗಳಿಗೆ ಕುಸಿಯುವುದು. ಬೇಸಗೆಯ ಅತಿ ಹೆಚ್ಚಿನ ತಾಪಮಾನ ೪೦ ಡಿಗ್ರಿಗಳಷ್ಟು.


ಗೋಬಿ ಮರುಭೂಮಿಯು ಒಣ ಪ್ರದೇಶವಾಗಿದ್ದರೂ ಸಾಕಷ್ಟು ಜೀವವೈವಿಧ್ಯವನ್ನು ಹೊಂದಿದೆ. ಕಪ್ಪು ಬಾಲದ ಗ್ಯಾಝೆಲ್‌, ಬ್ಯಾಕ್ಟ್ರಿಯನ್ ಒಂಟೆ, ಹಿಮಚಿರತೆ, ಕಂದು ಕರಡಿ ಮತ್ತು ತೋಳಗಳು ಇಲ್ಲಿ ಕಾಣಬರುತ್ತವೆ. ಅಲ್ಲದೆ ಮರುಭೂಮಿಗೆ ಒಗ್ಗಿಕೊಂಡಿರುವ ಅನೇಕ ವಿಧದ ಹುಲ್ಲುಗಳು ಮತ್ತು ಕುರುಚಲು ಪೊದೆ ಗಿಡಗಳು ವ್ಯಾಪಕವಾಗಿವೆ. ಗೋಬಿ ಮರುಭೂಮಿಗೆ ಹೊಂದಿಕೊಂಡಿರುವ ಹುಲ್ಲುಗಾವಲು ಮತ್ತು ಬಯಲು ಪ್ರದೇಶಗಳಲ್ಲಿ ಪಶುಪಾಲನೆ ಒಂದು ಮುಖ್ಯ ಜೀವನೋಪಾಯವಾಗಿದ್ದು ಜಾನುವಾರುಗಳ ಮೇಯಿಸುವಿಕೆ ಅತಿಯಾಗಿ ಆ ಪ್ರದೇಶಗಳು ಸಹ ಕ್ರಮೇಣ ಮರುಭೂಮಿಗೆ ಸೇರಿಹೋಗುತ್ತಿವೆ.

ಚೀನಾದ ಇನ್ನರ್ ಮಂಗೋಲಿಯ ಪ್ರಾಂತ್ಯದಲ್ಲಿ ಮರಳು ದಿಣ್ಣೆಗಳು.
ಗೋಬಿ ಮರುಭೂಮಿಯಲ್ಲಿ ಬ್ಯಾಕ್ಟ್ರಿಯನ್ ಒಂಟೆಗಳು.
ಗೋಬಿ ಮರುಭೂಮಿಯ ಇನ್ನೊಂದು ಚಿತ್ರ

ಇವನ್ನೂ ನೋಡಿ

[ಬದಲಾಯಿಸಿ]

ಬಾಹ್ಯ ಸಂಪರ್ಕಕೊಂಡಿಗಳು

[ಬದಲಾಯಿಸಿ]