ವಿಷಯಕ್ಕೆ ಹೋಗು

ರೇಷ್ಮೆ ಮಾರ್ಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರೇಷ್ಮೆ ಮಾರ್ಗ  ಬಹುಶತಮಾನಗಳವರೆಗೆ ಇದ್ದ ಒ೦ದು ಪ್ರಾಚೀನ ವ್ಯಾಪಾರ ಮಾರ್ಗ. ಕೊರಿಯಾ ಪರ್ಯಾಯ ದ್ವೀಪ ಮತ್ತು ಜಪಾನ್ನಿಂದ ಮೆಡಿಟರೇನಿಯನ್ ಸಮುದ್ರದ ವರೆಗೆ ಹರಡಿ ಯುರೇಷಿಯಾ ಖ೦ಡದ ಪೂರ್ವ ಮತ್ತು ಪಶ್ಚಿಮಕ್ಕೆ ಸ೦ಪರ್ಕ ಕಲ್ಪಿಸಿತ್ತು. ರೇಷ್ಮೆ ಮಾರ್ಗವು ಭೂಮಾರ್ಗ ಮತ್ತು ಕಡಲಮಾರ್ಗವನ್ನು ಹೊ೦ದಿದ್ದು   ಏಷ್ಯಾವನ್ನು ಆಫ್ರಿಕಾ, ಮಧ್ಯ ಪ್ರಾಚ್ಯ ಮತ್ತು ದಕ್ಷಿಣ ಯುರೋಪ್ಗಳೊಂದಿಗೆ ಸಂಪರ್ಕ ಕಲ್ಪಿಸುತ್ತಿತ್ತು. [][][] 

 ರೇಷ್ಮೆ ಮಾರ್ಗದ ವ್ಯಾಪಾರದಿ೦ದ  ನಾಗರಿಕತೆಯ ಅಭಿವೃದ್ಧಿಯಲ್ಲಿ  ಮಹತ್ವದ ಪಾತ್ರ ವಹಿಸಿದೆ.  ಚೀನಾದ ನಾಗರಿಕತೆಗಳು, ಗೊಗುರಿಯೊ ಸಾಮ್ರಾಜ್ಯ (ಕೊರಿಯಾ),  ಜಪಾನ್, ಭಾರತೀಯ ಉಪಖಂಡ, ಪರ್ಷಿಯಾ, ಯುರೋಪ್, ಹಾರ್ನ್ ಆಫ್ ಆಫ್ರಿಕಾ ಮತ್ತು ಅರಬ್  ನಾಗರಿಕತೆಗಳ ನಡುವೆ ದೀರ್ಘ ರಾಜಕೀಯ ಮತ್ತು ಆರ್ಥಿಕ ಸಂಬಂಧಗಳನ್ನು ತೆರೆದಿತ್ತು.  ರೇಷ್ಮೆಯು  ಚೀನಾದಿಂದ ರಫ್ತು ಮಾಡುವ ಪ್ರಮುಖ ವಸ್ತುವಾಗಿದ್ದರು ಇತರ ಅನೇಕ ಸರಕುಗಳನ್ನು ಸಹ ವ್ಯಾಪಾರ ಮಾಡಲಾಗುತ್ತಿತ್ತು. ರೋಗಗಳು, ಮುಖ್ಯವಾಗಿ ಪ್ಲೇಗ್ ಸಹ ರೇಷ್ಮೆ ಮಾರ್ಗದ ಮೂಲಕ ಹರಡಿತು.  ಆರ್ಥಿಕ ವ್ಯಾಪಾರದ ಜೊತೆಗೆ, ರೇಷ್ಮೆ ಮಾರ್ಗವು  ನಾಗರಿಕತೆಗಳ ನಡುವೆ ಸಾಂಸ್ಕೃತಿಕ ವ್ಯಾಪಾರದ ಮಾರ್ಗ ಕೂಡ ಆಗಿತ್ತು.    []  [] []

ಚೀನಿಯರು, ಅರಬ್ಬರು, ಹಿ೦ದುಸ್ತಾನಿಯರು, ಸೊಮಾಲಿಯರು, ಸಿರಿಯರು,ಯಹೂದಿಗಳು, ಪರ್ಶಿಯನ್ನರು, ಗ್ರೀಕರು, ರೋಮನ್ನರು, ಜಾರ್ಜಿಯನ್ನರು, ಅರ್ಮೇನಿಯನ್ನರು, ಬ್ಯಾಕ್ಟ್ರಿಯನ್ನರು, ತುರ್ಕಮೆನ್ನರು ಮತ್ತು (5 ರಿಂದ 8 ನೇ ಶತಮಾನದಿಂದ) ಸೋಗ್ಡಿಯನ್ನರು ಮುಖ್ಯ ವ್ಯಾಪಾರಿಗಳಾಗಿದ್ದರು.  []

ಜೂನ್ 2014 ರಲ್ಲಿ, ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗವು ರೇಷ್ಮೆ ಮಾರ್ಗದ ಚಾಂಗಾನ್-ಟಿಯಾನ್ಸಾನ್ ಕಾರಿಡಾರ್ ಅನ್ನು   ವಿಶ್ವ ಪರಂಪರೆಯ ತಾಣವೆ೦ದು ಘೋಷಿಸಿತು. 

ರೋಮನ್ನರ ಕಾಲದಲ್ಲಿ ಮಧ್ಯ ಏಷ್ಯಾ
Caravan on the Silk Road, 1380
ಯುರೇಷಿಯಾ ಮತ್ತು ಆಫ್ರಿಕಾ ನಡುವೆ  ವ್ಯಾಪಾರ ಜಾಲದ ನಕ್ಷೆ, c.೮೭೦
1 ನೇ ಶತಮಾನದಲ್ಲಿ 
ರೇಶ್ಮೆ ಮಾರ್ಗ

ಉಲ್ಲೇಖಗಳು

[ಬದಲಾಯಿಸಿ]
  1. Miho Museum News (Shiga, Japan) Volume 23 (March 2009). "Eurasian winds toward Silla".{{cite web}}: CS1 maint: numeric names: authors list (link)
  2. Gan, Fuxi (2009). "The silk road and ancient Chinese glass". Shanghai Institute of Optics and Fine Mechanics, Chinese Academy of Sciences (Ancient Glass Research along the Silk Road, World Scientific ed.). p. 41. ISBN 9812833560.
  3. Elisseeff, Vadime (2001). The Silk Roads: Highways of Culture and Commerce. UNESCO Publishing / Berghahn Books. ISBN 978-92-3-103652-1.
  4. "Republic of Korea | Silk Road". en.unesco.org (in ಇಂಗ್ಲಿಷ್). Retrieved 2017-02-23.
  5. Jerry Bentley, Old World Encounters: Cross-Cultural Contacts and Exchanges in Pre-Modern Times (New York: Oxford University Press, 1993), 32.
  6. Jerry Bentley, Old World Encounters: Cross-Cultural Contacts and Exchanges in Pre-Modern Times (New York: Oxford University Press, 1993), 33.
  7. Compare: Hansen, Valerie (2012-10-11). The Silk Road. OUP US. p. 218. ISBN 9780195159318. Retrieved 2016-07-22. Jewish merchants have left only a few traces on the Silk Road.