ಗೋಪಿನಾಥ (ಕೃಷ್ಣ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೃಷ್ಣನು ಗೋಪಿಯರ ಸಂಗೀತಕ್ಕೆ ನೃತ್ಯ ಮಾಡುತ್ತಾನೆ.

ಗೋಪಿನಾಥ ಎಂಬುದು ಹಿಂದೂ ದೇವನಾದ ಕೃಷ್ಣನ ಒಂದು ರೂಪವಾಗಿದೆ. ಇದು ಕೃಷ್ಣನ ಪ್ರಾಥಮಿಕ ಹೆಸರುಗಳಲ್ಲಿ ಒಂದಾಗಿದೆ. ಗೋಪಿನಾಥ ಅಂದರೆ "ಗೋಪಾಲಕರ ಅಧಿಪತಿ". [೧][೨]

ಪುರಾಣಗಳಲ್ಲಿ ಗೋಪಿನಾಥನು ಬ್ರಜ್ (ವ್ರಜಾ) ಪ್ರದೇಶದ ಗೋಪಿಯರೊಂದಿಗೆ ಕಂಡುಬರುತ್ತಾನೆ. ಗೋಪಿಯರನ್ನು ನಿಸ್ವಾರ್ಥ ಭಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅವರು ಭಕ್ತಿ, ಪ್ರೀತಿ ಮತ್ತು ಆರಾಧನೆಯಲ್ಲಿ ಅವನ ಸುತ್ತಲೂ ಸೇರುತ್ತಾರೆ. ಹರಿವಂಶ ಭಾಗವತ ಪುರಾಣ ಮತ್ತು ಗೀತ ಗೋವಿಂದ ಮುಂತಾದ ಗ್ರಂಥಗಳಲ್ಲಿ ಗೋಪಿಯರು ಮತ್ತು ಕೃಷ್ಣನ ನಡುವಿನ ಸಂಬಂಧವನ್ನು ವಿವರಿಸಲಾಗಿದೆ.[೩]

ಅರ್ಥಗಳು[ಬದಲಾಯಿಸಿ]

ಗೋಪಿನಾಥ ಎಂಬ ಹೆಸರು ಸಂಸ್ಕೃತ ಸಂಯುಕ್ತ.[೪] ಸಾಮಾನ್ಯವಾಗಿ, ಗೋಪಿನಾಥನನ್ನು "ಭಗವಂತ" ಅಥವಾ "ಗೋಪಿಗಳ ರಕ್ಷಕ" ಎಂಬ ಅರ್ಥವನ್ನು ನೀಡುವ ತತ್-ಪುರುಷ ಸಂಯುಕ್ತ ಎಂದು ಅರ್ಥೈಸಲಾಗುತ್ತದೆ.

ಈ ಹೆಸರಿನ ಗೌಡಿಯ ವ್ಯಾಖ್ಯಾನವೆಂದರೆ ಗೋಪಿನಾಥ್ ಒಂದು ಬಹುರ್ವಿಹಿ ಸಂಯುಕ್ತವಾಗಿದ್ದು, ಇದು "ಕೃಷ್ಣನು ಗೋಪಿಯರ ಒಡೆಯ" ಎಂಬ ಅರ್ಥವನ್ನು ನೀಡುತ್ತದೆ.

ದೇವಾಲಯಗಳು[ಬದಲಾಯಿಸಿ]

ಅನೇಕ ದೇವಾಲಯಗಳಲ್ಲಿ ಕೃಷ್ಣನನ್ನು ಗೋಪಿನಾಥನಾಗಿ ಪೂಜಿಸಲಾಗುತ್ತದೆ. ಗೋಪಿನಾಥನ ಐತಿಹಾಸಿಕ ದೇವಾಲಯಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ.

ಇದನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Rosen, Steven (2023-03-15). Forms of Krishna: Collected Essays on Vaishnava Murtis (in ಇಂಗ್ಲಿಷ್). Rowman & Littlefield. p. 206. ISBN 978-1-6669-3027-6.
  2. Judah, J. Stillson (1974). Hare Krishna and the Counterculture (in ಇಂಗ್ಲಿಷ್). Wiley. p. 229. ISBN 978-0-471-45200-3.
  3. Dalal, Roshen (2014-04-18). Hinduism: An Alphabetical Guide (in ಇಂಗ್ಲಿಷ್). Penguin UK. p. 513. ISBN 978-81-8475-277-9.
  4. Rosen, Steven (2023-03-15). Forms of Krishna: Collected Essays on Vaishnava Murtis (in ಇಂಗ್ಲಿಷ್). Rowman & Littlefield. p. 223. ISBN 978-1-6669-3027-6.
  5. "Gopinath, JAIPUR, RADHAGOPINATH, RADHA GOPINATH, Madhu Pandit, Official Site Of The 5,000 Years Old Rich Heritage, GOPI NATHJI, Pink City Of India, KRISHNA, RADHA KRISHNA, RADHEY GOPINATH". gopinathji.net. Retrieved 2023-06-21.
  6. "Radha Gopinath Temple, Vrindavan". mathura.nic.in.