ಗೇಮ್ ಸ್ಪಾಟ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
For the video game store with a similar name, see GameStop.
GameSpot
Logo of GameSpot.svg
URL http://www.gamespot.com/
ತಾಣದ ಗುಂಪು Video game journalism
ದಾಖಲಿಸಿದ Optional (free and paid)
ಮಾಲೀಕ CBS Interactive
ನಿರ್ಮಾತೃರು Pete Deemer
Vince Broady
Jon Epstein
ಪ್ರಾರಂಭಿಸಿದ May 1, 1996[೧]

ಗೇಮ್ ಸ್ಟಾಟ್[ಬದಲಾಯಿಸಿ]

 • ಗೇಮ್ ಸ್ಪಾಟ್ ನ ಸಿಬ್ಬಂದಿ ವರ್ಗ ನೀಡಿರುವಂತಹ ಮಾಹಿತಿಯ ಜೊತೆಯಲ್ಲಿ, ಈ ಸೈಟ್ ತನ್ನ ಬಳಕೆದಾರರಿಗೆ ಅವರದೆ ಸ್ವಂತ ವಿಮರ್ಶೆಗಳನ್ನು, ಬ್ಲಾಗ್ ಗಳನ್ನು ಬರೆಯಲು ಹಾಗು ಅದನ್ನು ಸೈಟ್ ನ ಫೋರಮ್ಸ್ ಗೆ ಕಳುಹಿಸಲು ಕೊಟ್ಟಿರುವ ಅವಕಾಶವನ್ನು ಕೂಡ ಸೇರಿಸಿ ಕೊಳ್ಳಬಹುದು. CNET ನಡೆಸುತ್ತಿರುವಂತಹ ಮತ್ತೊಂದು ವೆಬ್‌ಸೈಟಾದ ಗೇಮ್FAQsನಲ್ಲಿ ಇರುವವರ ಜೊತೆಯಲ್ಲಿ ಮಾತ್ರ ಈ ಫೋರಮ್ಸ್ ಳನ್ನು ಹಂಚಿಕೊಳ್ಳಲಾಗುತ್ತದೆ.
 • ಸ್ಪೈಕ್ ಟಿವಿ ನಡೆಸುವ ಎರಡನೆ ವಿಡಿಯೋ ಗೇಮ್ ಅವಾರ್ಡ್ ಶೋ [೨] ವೀಕ್ಷಕರಿಂದ ಆಯ್ಕೆಯಾದ ಗೇಮ್ ಸ್ಪಾಟ್ 2004ರಲ್ಲಿ "ಅತ್ಯುತ್ತಮ ಗೇಮ್ ಗಳ ವೆಬ್‌ಸೈಟ್‌ " ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಅಲ್ಲದೇ ಹಲವು ವರ್ಷಗಳು ವೆಬ್ಬಿ ಪ್ರಶಸ್ತಿಯನ್ನು ಪಡೆದು ಕೊಂಡಿದೆ. ಗೇಮ್ ಗಳ ಇತರ ವೆಬ್‌ಸೈಟ್‌ ಗಳು ಉದಾಹರಣೆಗೆ IGN, 1UP.com ಮತ್ತು ಗೇಮ್Spyಗಳಂಥವು ಇದರ ಅತ್ಯಂತ ದೊಡ್ಡ ಪ್ರತಿಸ್ಪರ್ಧಿಗಳಾಗಿವೆ. Compete.com ಅಧ್ಯಯನದ ಪ್ರಕಾರ 2008ರಷ್ಟರಲ್ಲಿ gamespot.com ವರ್ಷಕ್ಕೆ ಕನಿಷ್ಠ 60 ದಶಲಕ್ಷ ಭೇಟಿ ನೋಡುಗರನ್ನು ಆಕರ್ಷಿಸಿದೆ.[೩]

ಇತಿಹಾಸ[ಬದಲಾಯಿಸಿ]

 • ಈ ವೆಬ್ ಸೈಟ್ ಅನ್ನು ಪ್ರಾರಂಭಿಸಿದಾಗ ಸೈಟ್ ವಿಶೇಷವಾಗಿ PC ಗೇಮ್ ಗಳ ಮೇಲೆ ಅದರ ಗಮನವನ್ನು ಕೇಂದ್ರಿಕರಿಸಿತು. console ಗೇಮ್ ಗಳನ್ನು ಒಳಗೊಳ್ಳಲು ಡಿಸೆಂಬರ್ 1996ರಲ್ಲಿ ಇದರದೇ ಮತ್ತೊಂದು ಸೈಟ್, VideoGameSpot.com ಅನ್ನು ಪ್ರಾರಂಭಿಸಿತು.
 • VideoGameSpot.com 1997ರಲ್ಲಿ ಸ್ವಲ್ಪ ಕಾಲಕ್ಕೆ VideoGames.com ಆಗಿ ಬದಲಾಯಿತು. PC ಮತ್ತು console ವಿಭಾಗಗಳು 1998ರಲ್ಲಿ GameSpot.com ನಲ್ಲಿ ಸೇರಿಕೊಂಡವು.[೪]
 • ಆಕ್ಟೋಬರ್ 3ರ 2005ರಲ್ಲಿ ಗೇಮ್ ಸ್ಪಾಟ್ TV.comಗೆ ಸದೃಶ್ಯವಾಗಿರುವಂತಹ ಹೊಸ ವಿನ್ಯಾಸವನ್ನು ಅಳವಡಿಸಿಕೊಂಡಿತು. ಈಗ ಇದನ್ನು ಗೇಮ್ ಸ್ಪಾಟ್ ಗೆ ಸೇರಿದ ಮತ್ತೊಂದು ಸೈಟ್ ಎಂದು ಪರಿಗಣಿಸಲಾಗುತ್ತದೆ.[೫]

ಅಂತರರಾಷ್ಟ್ರೀಯ ಇತಿಹಾಸ[ಬದಲಾಯಿಸಿ]

 • ಗೇಮ್ ಸ್ಪಾಟ್ UK (ಯುನೈಟೆಡ್ ಕಿಂಗ್ಡಮ್ )ಯನ್ನು ಆಕ್ಟೋಬರ್ 1997ರಲ್ಲಿ ಪ್ರಾರಂಭಿಸಲಾಯಿತು. ಇದು 2002ರ ಮಧ್ಯದವರೆಗೆ ಕಾರ್ಯವನ್ನು ನಿರ್ವಹಿಸಿತು. ಅಲ್ಲದೇ ಯುರೋಪ್-ಆಧಾರಿತ ವಿಷಯಸೂಚಿಯನ್ನು ಒದಗಿಸಿತು. ಈ ವಿಷಯಸೂಚಿಯು U.S.ಸೈಟ್ ಗಿಂತ ಭಿನ್ನವಾಗಿದೆ.
 • ಈ ಸಮಯದಲ್ಲಿ ಗೇಮ್ ಸ್ಪಾಟ್ UK ಅತ್ಯುತ್ತಮ ವೆಬ್‌ಸೈಟ್‌ ಗಳಿಗೆ ಕೊಡುವಂತಹ PPAi (ಪಿರಿಯೋಡಿಕಲ್ ಪಬ್ಲಿಷರ್ಸ್ ಅಸೋಸಿಏಷನ್ ಇಂಟರ್ ಆಕ್ಟಿವ್ ) ಪ್ರಶಸ್ತಿಯನ್ನು 1999ರಲ್ಲಿ ಗೆದ್ದುಕೊಂಡಿತು.[೬] ಮತ್ತು 2001ರಲ್ಲಿ ಆಯ್ಕೆಯಾಯಿತು .[೭] CNET ZDNetಅನ್ನು ಖರೀದಿಸಿದ ನಂತರ ಗೇಮ್ ಸ್ಪಾಟ್ UK ಪ್ರಧಾನ US ಸೈಟ್ ನೊಂದಿಗೆ ಸೇರಿಕೊಂಡಿತು.
 • ಏಪ್ರಿಲ್ 24ರ 2006ರಲ್ಲಿ ಗೇಮ್ ಸ್ಪಾಟ್ UK ಯನ್ನು ಪುನಃ ಪ್ರಾರಂಭಿಸಲಾಯಿತು.[೮]
 • ಇದೇ ರೀತಿಯಲ್ಲಿ ಗೇಮ್ ಸ್ಪಾಟ್ AU (ಆಸ್ಟ್ರೇಲಿಯ) ಆಸ್ಟ್ರೇಲಿಯನ್ನರು -ಬರೆದಂತಹ ವಿಮರ್ಶೆಗಳೊಂದಿಗೆ 1990ರ ಕೊನೆಯಲ್ಲಿ ಸ್ಥಳೀಯ ಪ್ರಮಾಣದಲ್ಲಿ ಅಸ್ತಿತ್ವಕ್ಕೆ ಬಂತು. 2003ರಲ್ಲಿ ಕೊನೆಗೊಂಡಿತು. ಪ್ರಧಾನ CNET ಪೋರ್ಟಲ್ ನ ಸ್ಥಳಿಯ ಆವೃತ್ತಿಯನ್ನು CNET. com.au 2003ರಲ್ಲಿ ಪ್ರಾರಂಭಿಸಿತು. ಆಗ CNET.com.au ನಲ್ಲಿ Gamespot.com.au ನ ವಿಷಯಸೂಚಿಯನ್ನು ಸೇರಿಸಲಾಯಿತು.
 • ಸೈಟ್ಅನ್ನು 2006 ರ ಮಧ್ಯಂತರದಲ್ಲಿ ಪ್ರಾದೇಶಿಕ ವಿಮರ್ಶೆಗಳು, ವಿಶೇಷ ಗುಣಲಕ್ಷಣಗಳು, AUDಆಸ್ಟ್ರೇಲಿಯನ್ ರಿಲೀಸ್ ಡೇಟ್ಸ್ ನಲ್ಲಿ ಪ್ರಾದೇಶಿಕ ಬೆಲೆಗಳು ಹಾಗು ಹೆಚ್ಚು ಪ್ರಾದೇಶಿಕ ಸುದ್ದಿಗಳಲ್ಲಿ ಪರಿಣಿತಿ ಹೊಂದಿರುವ ಫೋರಮ್ ನೊಡನೆ ಪೂರ್ಣವಾಗಿ ಪುನಃ ಪ್ರಾರಂಭಿಸ ಲಾಯಿತು.
 • ಪ್ರಸ್ತುತ ಸ್ವರೂಪದಲ್ಲಿ ಗೇಮ್ ಸ್ಪಾಟ್ ಜಪಾನ್ (ಜಪಾನ್ )ಅನ್ನು 2007ರಲ್ಲಿ ಪ್ರಾರಂಭಿಸಲಾಯಿತು. ಇದು ಜಪಾನೀಯರ ವಿಡಿಯೋ ಗೇಮ್ ಉದ್ಯಮಗಳ ಸುದ್ದಿ, ಮುನ್ನೋಟ, ಗುಣಲಕ್ಷಣ, ವಿಡಿಯೋ ಹಾಗು ಇತರ ಗೇಮ್ ಸ್ಪಾಟ್ ಸೈಟ್ ಗಳ ಅನುವಾದಿತ ಲೇಖನ ಗಳನ್ನು ಒದಗಿಸುತ್ತದೆ. ಇತ್ತೀಚೆಗೆ ಇದು ದೊಡ್ಡ ವಿಡಿಯೋ ಪ್ಲೇಯರ್ ಮತ್ತು ಸೈಟ್ ಗೆ ಬೇಕಾದ ಸಾಮೂಹಿಕ ಫೋರಮ್ಸ್ ಅನ್ನು ಸೇರಿಸಿಕೊಂಡಿದೆ.

ಗಣ್ಯ ಸಿಬ್ಬಂದಿವರ್ಗ[ಬದಲಾಯಿಸಿ]

 • ಗ್ರೆಗ್ ಕ್ಯಾಸವಿನ್ – ಕಾರ್ಯನಿರ್ವಹಣ ಸಂಪಾದಕ ಹಾಗು ಗೇಮ್ ಸ್ಪಾಟ್ ಸೈಟ್ ನ ನಿರ್ದೇಶಕ. ಗೇಮ್ ಗಳ ಅಭಿವರ್ಧಕನಾಗಲು 2007ರಲ್ಲಿ ಹೊರನಡೆದನು. ಈಗ ಅವನು 2K ಗೇಮ್ಸ್ ಗೆ ನಿರ್ಮಾಪಕನಾಗಿದ್ದಾನೆ.[೯]
 • ಜೆಫ್ ಜರ್ಸ್ಟ್ ಮನ್ – ಸೈಟ್ ನ ಸಂಪಾದಕೀಯ ನಿರ್ದೇಶಕ , GiantBomb.com[೧೦] ಪ್ರಾರಂಭಿಸಿದ ನಂತರ 2007 ನವೆಂಬರ್ 28ರಂದು ಬಹಿರಂಗಪಡಿಸಲಾಗದಂತಹ ಕಾರಣಕ್ಕಾಗಿ ಗೇಮ್ ಸ್ಪಾಟ್ ನಿಂದ ತೆಗೆದುಹಾಕಲಾಯಿತು.
 • ಅಲೆಕ್ಸ್ ನ್ಯಾವರೋ – ಸೈಟ್ ನ ಸಂಪಾದಕ, ಜರ್ಸ್ಟ್ ಮನ್ ನನ್ನು ತೆಗೆದುಹಾಕಿದ್ದಕ್ಕಾಗಿ ರಾಜೀನಾಮೆ ಸಲ್ಲಿಸಿದ. ಹರ್ ಮೊನಿಕ್ಸ್ ನ ಸಾಮೂಹಿಕ ತಂಡದ ಸದಸ್ಯನಾಗಿ ನಂತರ ಸೇವೆಸಲ್ಲಿಸಿದ, ಆದರೆ ಪ್ರಸ್ತುತ ಅವನು ವಿಷ್ ಕಿ ಮೀಡಿಯಕ್ಕೆ ಮೂವೀ ವೆಬ್ ಸೈಟ್ ನ್ನು ರೂಪಿಸುತ್ತಿದ್ದಾನೆ.

ವಿಮರ್ಶೆಗಳು ಮತ್ತು ರೇಟಿಂಗ್ ಸಿಸ್ಟಮ್ (ಪ್ರಮಾಣೀಕರಣ ವ್ಯವಸ್ಥೆ)[ಬದಲಾಯಿಸಿ]

 • ಜನವರಿ 2001 ರಲ್ಲಿ ಗೇಮ್ ಸ್ಪಾಟ್ ಗೇಮ್ಸ್ ಗಳಿಗೆ ವಿಡಿಯೋ ವಿಮರ್ಶೆಗಳನ್ನು ಪರಿಚಯಿಸಿತು. ಇವು ಎಲ್ಲಾ ಪ್ರಮುಖ ಗೇಮ್ಸ್ ಗಳಿಗೂ ಬಿಡುಗಡೆಯಾಗುತ್ತವೆ. ಸಂಪಾದಕರ ದೃಷ್ಟಿಯಲ್ಲಿ ವಿಶೇಷವಾಗಿ ಹೇಳುವಂತಹ ಇತರ ಗೇಮ್ಸ್ ಗಳು (ಉದಾಹಾರಣೆಗೆ, ಅತ್ಯಂತ ಕೆಟ್ಟ ಗೇಮ್ ಅನ್ನು) ವಿಡಿಯೋ ನಿಂದ ಚೆನ್ನಾಗಿ ವಿಮರ್ಶಿಸಲಾಗುತ್ತದೆ. ವಿಡಿಯೋ ವಿಮರ್ಶೆಗಳು ಸಾಮಾನ್ಯವಾಗಿ ಸೇರಿಸಿಕೊಂಡಂತಹ ಗೇಮ್ ಪ್ಲೇ ಕ್ಲಿಪ್ ಗಳ ಜೊತೆಯಲ್ಲಿ ವಿಷಯಗಳ ಬರಹದ ವಿಮರ್ಶೆಗಳಿಗೆ ಹೆಚ್ಚು ಒತ್ತನ್ನು ನೀಡಿದೆ .
 • ಗೇಮ್ ಸ್ಪಾಟ್ ಸವಿಸ್ತಾರವಾದ ಮಾರ್ಗದರ್ಶಕವಾಗಿದ್ದು, ಅದರ ವಿಮರ್ಶಾತ್ಮಕ ಕಾರ್ಯನೀತಿಗಳ ಬಗ್ಗೆ ವಿವರಿಸುತ್ತದೆ ಮತ್ತು ಪದೇ ಪದೇ ಅದರ ವಿಮರ್ಶೆಗಳ ಬಗ್ಗೆ ಕೇಳುವಂತಹ ಪ್ರಶ್ನೆಗಳಿಗೆ ಉತ್ತರವನ್ನು ಕೊಡುತ್ತದೆ .[೧೧]
 • 2001 ರ ಕೊನೆಯಲ್ಲಿ ಗೇಮ್ ಸ್ಪಾಟ್ ನ್ನು ಅಂತ್ಯಗೊಳಿಸಬೇಕೆಂದಾಗ ಹಳೆಯ ವಿಮರ್ಶೆಗಳು ಅಂತ್ಯಗೊಳಿಸಲು ಸದಸ್ಯರನ್ನು ತಡೆದವು ; ಹಾಗಿದ್ದರು ಆ ವಿಮರ್ಶೆಗಳು ಕೆಲವು ತಿಂಗಳ ನಂತರ ಎಲ್ಲರಿಗು ಲಭ್ಯವಾದವು .
 • ಎಲ್ಲಾ ಗೇಮ್ಸ್ ಗಳನ್ನು ಐದು ವಿವಿಧ ಭಾಗಗಳಾಗಿ ವಿಂಗಡಿಸಲಾಗಿದೆ : ಗೇಮ್ ಪ್ಲೇ , ಗ್ರಾಫಿಕ್ಸ್, ಸೌಂಡ್, ವ್ಯಾಲ್ಯೂ ಮತ್ತು ವಿಮರ್ಶಕರ ಸ್ಪರ್ಧೆ. ಪ್ರತಿ ವಿಭಾಗಗಳಿಗು ಒಂದರಿಂದ ಹತ್ತರವರೆಗೆ ಪೂರ್ಣಾಂಕಸ್ಕೋರ್ (ಅಂಕ)ಗಳನ್ನು ನಿಯೋಜಿಸಲಾಗಿರುತ್ತದೆ. ಪೂರ್ತಿ ಸ್ಕೋರ್ ಗಳಿಗೆ ಹತ್ತಿರವಾಗುವಂತೆ ಸಾಧಾರಣ ಸ್ಕೋರ್ ಗಳನ್ನಾದರು ಗಳಿಸಲು ಈ ಐದು ಪೂರ್ಣಾಂಕಗಳು ಒಟ್ಟಿಗೆ ಸೇರಿಕೊಂಡವು.
 • ಗೇಮ್ ನಲ್ಲಿ ಕನಿಷ್ಠ ಪಕ್ಷ 9.೦ ಅಷ್ಟು ಸ್ಕೋರ್ ನ್ನಾದರು ಮಾಡಬೇಕು. ಇದನ್ನು "ಅತ್ಯುತ್ತಮ" ಎಂದು ಹೆಸರಿಸಲಾಗುವುದು ಹಾಗು "ಸಂಪಾದಕರ ಆಯ್ಕೆ" ಯನ್ನು ನೀಡಲಾಗುವುದು. ಹಲವು ಗೇಮ್ಸ್ ಗಳು ಪ್ರತಿವರ್ಷ ಈ ಮಟ್ಟವನ್ನು ಮುಟ್ಟುತ್ತಿದ್ದರು ಗೇಮ್ ಸ್ಪಾಟ್'ನ ಇತಿಹಾಸದಲ್ಲಿ ಕೇವಲ ಆರು ಗೇಮ್ ಗಳು ಮಾತ್ರ ಯಾವಾಗಲೂ ಈ ಸಂಪೂರ್ಣ ಹತ್ತು ಅಂಕಗಳನ್ನು ಗಳಿಸುತ್ತವೆ .
 • ಜೂನ್ 25ರ 2007ರಲ್ಲಿ ಗೇಮ್ ಸ್ಪಾಟ್ ನಿಗದಿತ ಸ್ಕೋರ್ ಗಳಲ್ಲಿ 0.1 ನ ಬದಲು 0.5 ರಷ್ಟು ಹೆಚ್ಚಳವನ್ನು ಮಾಡಲು ಪ್ರಾರಂಭಿಸಿತು .[೧೨]
 • ಇದು ಗೇಮ್ ಪ್ಲೇ, ಗ್ರಾಫಿಕ್ಸ್, ಸೌಂಡ್, ವ್ಯಾಲ್ಯೂ ಮತ್ತು ಸ್ಪರ್ಧೆಗಳಿಗೆ ಕೊಡುತ್ತಿದ್ದಂತಹ ಉಪ- ಅಂಕಗಳನ್ನು ನಿಲ್ಲಿಸಿತು. ಬದಲಿಗೆ ಬಳಕೆದಾರರ ವಿಮರ್ಶೆಗಳು ಈಗ ಮೆಡಲ್ ಸಿಸ್ಟಮ್ ಅನ್ನು ಹೊಂದಿವೆ. ಇದು ವಿಮರ್ಶಕರಿಗೆ ಕೊಟ್ಟಿರುವಂತಹ ಗೇಮ್ ನ ಉದಾಹಾರಣೆಗೆ ಕಲಾತ್ಮಕ ವಿನ್ಯಾಸ, ಮೂಲ ಧ್ವನಿವಾಹಿನಿ ಅಥವಾ ಕಷ್ಟಗಳ ಗುಣಲಕ್ಷಣಗಳನ್ನು ಎತ್ತಿ ತೋರಿಸಲು ಅವಕಾಶ ನೀಡುತ್ತದೆ. ಇದು ಹಳೆಯದಕ್ಕಿಂತ ಹೆಚ್ಚು ಸವಿವರವಾದ ರೇಟಿಂಗ್ ಸಿಸ್ಟಮ್ಅನ್ನು ಸೃಷ್ಟಿಸುವುದೆಂದು ಗೇಮ್ ಸ್ಪಾಟ್ ನಂಬುತ್ತದೆ. "ಸಂಪೂರ್ಣ" ಅಂಕವನ್ನು ಗಳಿಸುವುದರ ಬದಲಿಗೆ 10. 0 ಸ್ಕೋರ್ ಅನ್ನು ಗಳಿಸುವಂತಹ ಗೇಮ್ಸ್ ಗಳಿಗೆ ಹೊಸ ಪ್ರಮುಖ ನಿಯಮವನ್ನು ಮಾಡಿರುವುದೆ ನಿಯಮಗಳಲ್ಲಿ ಆದಂತಹ ಬದಲಾವಣೆಯಾಗಿದೆ. ಮುಖ್ಯ ಸಂಪಾದಕರಾದ ಜೆಫ್ ಜರ್ಸ್ಟ್ ಮನ್ ಈ ಬದಲಾವಣೆಯ ಬಗ್ಗೆ ಮತ್ತು ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುತ್ತ ಬ್ಲಾಗ್ ಬರೆದರು. [೧೩]
 • ಗೇಮ್ ಗಳು ಸಮಾನ್ಯವಾಗಿ ನಿರ್ದಿಷ್ಟ ವೇದಿಕೆಯಲ್ಲಿರುವಂತಹ ಇತರ ಗೇಮ್ಸ್ ಗಳ ಜೊತೆಯಲ್ಲಿ ಹೇಗೆ ಅವುಗಳನ್ನು ಹೋಲಿಸಲಾಗುತ್ತದೆಂಬುದರ ಆಧಾರದ ಮೇಲೆ ಅವುಗಳನ್ನು ರೇಟ್ ಮಾಡಲಾಗುತ್ತದೆ. ಏಕಕಾಲದಲ್ಲಿ ಬಹು ವೇದಿಕೆಗಳಿಗೆ ಬಿಡುಗಡೆಯಾಗುತ್ತಿರುವಂತಹ ಗೇಮ್ಸ್ ಗಳನ್ನು ಕೂಡ ಸಿಸ್ಟಮ್ ಗಳ ನಡುವೆ ಹೋಲಿಸಲಾಗುತ್ತದೆ. ಇದು ಸಾಮಾನ್ಯವಾಗಿ ಒಂದೇ ಗೇಮ್ ಗೆ ಅದರ ಸಿಸ್ಟಮ್ ನ ಆಧಾರದ ಮೇಲೆ ವಿವಿಧ ಸ್ಕೋರ್ ಗಳನ್ನು ನೀಡುವಂತಹ ಫಲಿತಾಂಶವನ್ನು ನೀಡಿತು. ಇದಕ್ಕೆ ಕಾರಣ ಪ್ರತಿ ವೇದಿಕೆಯ ಸ್ವಾಭಾವಿಕ ಶಕ್ತಿ ಮತ್ತು ಅಶಕ್ತತೆ.

ಅಗ್ರ( ಅತ್ಯುತ್ತಮ)ವೆಂದು ಪರಿಗಣಿಸಲ್ಪಟ್ಟ ಗೇಮ್ ಗಳು /ಕೆಳಮಟ್ಟದೆಂದು -ಪರಿಗಣಿಸಲ್ಪಟ್ಟ ಗೇಮ್[ಬದಲಾಯಿಸಿ]

 • ವಿಶ್ಲೇಷಣೆಯ ಇನ್ನೊಂದು ಭಾಗದಲ್ಲಿ, Big Rigs: Over the Road Racing ಯಾವಾಗಲು 1.0 ("ಬಹಳ ಕೆಟ್ಟ") ಕಡಿಮೆ ಸ್ಕೋರ್ ಗಳನ್ನು ಪಡೆಯುವಂತಹ ಏಕಮಾತ್ರ ಗೇಮ್ ಆಗಿದೆ .[೨೮]
 • ಟಿಪ್ಪಣಿ: ಜೂನ್ 2007ರಲ್ಲಿ ಜಾರಿಗೊಳಿಸಿದಂತಹ ಹೊಸ ರೇಟಿಂಗ್ ಸಿಸ್ಟಮ್ ನಲ್ಲಿ ಸಮೀಪದ-ಪರಿಪೂರ್ಣ ಸ್ಕೋರ್ 9.9 ಹೆಚ್ಚು ಕಾಲದವರೆಗೆ ಸಾಧ್ಯವಿಲ್ಲ .

ವರ್ಷದ ಅತ್ಯುತ್ತಮ ಆಟ[ಬದಲಾಯಿಸಿ]

 • ಪ್ರತಿ ವರ್ಷ, ಗೇಮ್ ಸ್ಪಾಟ್ ಅತ್ಯುತ್ತಮ ಹಾಗು ಅತಿಕೆಟ್ಟ ವರ್ಷದ ಆಟ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಇದು ಗೇಮಿಂಗ್ ಉದ್ಯಮದ ಸಾಧನೆಗಳನ್ನು ಒಳ್ಳೆಯದು ಮತ್ತು ಕೆಟ್ಟದನ್ನು ಗುರುತ್ತಿಸುತ್ತದೆ. ("ಸಂಶಯಾಸ್ಪದವಾದ ಗೌರವ"ದ ರೀತಿಯಲ್ಲಿ, ಈ ವಿಭಾಗಗಳನ್ನು ಒಳಗೊಂಡಿದೆ. ಉದಾಹಾರಣೆಗೆ "ಅತ್ಯಂತ ನಿರಾಶೆಗೊಳಿಸಿದಂತಹ ಗೇಮ್ ", "ಎಲ್ಲರು ಆಡಿದಂತಹ ಅತ್ಯಂತ ಕಳಪೆ ಆಟ", "ಯಾರು ಆಡದಂತಹ ಅತ್ಯುತ್ತಮ ಆಟ" ಮತ್ತು "ಅತ್ಯಂತ ತಿರಸ್ಕೃತ Product Placement").
 • ಗೇಮ್ ಸ್ಪಾಟ್ ತನ್ನ ಸೈಟ್ ನಲ್ಲಿ "ರೀಡರ್ಸ್' ಚಾಯ್ಸ್ " ಪ್ರಶಸ್ತಿಗಳ ಸ್ಪರ್ಧಾಳನ್ನು ಆಯ್ಕೆ ಮಾಡಲು ಬಳಕೆದಾರರಿಗೆ ಮತಚಲಾಯಿಸುವ ಅವಕಾಶವನ್ನು ಕೂಡ ನೀಡಿದೆ.
 • ಗೇಮ್ ಸ್ಪಾಟ್ 1998 ರಿಂದ 2001ರವರೆಗೆ ಒಂದು PC ಗೇಮ್ ಮತ್ತು ಒಂದು console ಗೇಮ್ ನ್ನು ಅಗ್ರ ಪ್ರಶಸ್ತಿಗಾಗಿ ಆಯ್ಕೆಮಾಡಿಕೊಂಡಿತ್ತು. ಆದರೆ ಅಲ್ಲಿಂದ ಮುಂದೆ ಅವರು ಎಲ್ಲಾ ಮಾಧ್ಯಮಗಳಿಂದ ಕೇವಲ ಒಂದು ಗೇಮ್ ಅನ್ನು ಮಾತ್ರ ಆಯ್ಕೆ ಮಾಡಿಕೊಂಡರು .
 • ಇದುವರೆಗೆ ವರ್ಷದ ಅತ್ಯುತ್ತಮ ಆಟದ ಪ್ರಶಸ್ತಿಯನ್ನು ಗೇಮ್ ಸ್ಪಾಟ್ಸ್ ನಿಂದ ಗೆದ್ದವರು( 1997 ರಿಂದ 1999 ರವರೆಗೆ videogames.com ನಿಂದ ಆರಿಸಲ್ಪಟ್ಟಂತಹ console ಗೇಮ್ಸ್ ) :

ವರ್ಷದ ಅತ್ಯಂತ ಕಳಪೆ ಆಟ /ಫ್ಯ್ಲಾಟ್-ಜೌಟ್ ಕಳಪೆ ಆಟ[ಬದಲಾಯಿಸಿ]

ಪ್ರತಿವರ್ಷ ಗೇಮ್ ಸ್ಪಾಟ್ ಕೂಡ ಪ್ಲ್ಯಾಟ್ -ಜೌಟ್ ಕಳಪೆ ಆಟ ಪ್ರಶಸ್ತಿಯನ್ನು ನೀಡುತ್ತದೆ (2003ರ ಮೊದಲ ವರ್ಷದ ಕಳಪೆ ಆಟವೆಂದು ಕರೆಯಾಲಾಗುತ್ತದೆ ). ಈ ಪ್ರಶಸ್ತಿಯನ್ನು ಪ್ರತಿವರ್ಷ ಸಂಶಯಾಸ್ಪದ ಗುಂಪಿನಲ್ಲಿ ಕಾಣಬಹುದು. ವರ್ಷದ ಅತ್ಯತ್ತಮ ಆಟ ಪ್ರಶಸ್ತಿಯ ರೀತಿಯಲ್ಲಿ, ಗೇಮ್ ಸ್ಪಾಟ್ ಅತ್ಯಂತ ಕಳಪೆ ಆಟಗಳಿಗೆ ರೀಡರ್ಸ್ ' ಚಾಯ್ಸ್ ಪ್ರಶಸ್ತಿಗಳನ್ನು ಕೊಡವ ಅವಕಾಶವನ್ನು ನೀಡಿದೆ.

ಟಿಪ್ಪಣಿ : Big Rigs: Over the Road Racing 2003ರಲ್ಲಿ ಬಿಡುಗಡೆಯಾಯಿತು

ಪ್ರದರ್ಶನಗಳು ಮತ್ತು ಪೊಡಕ್ಯಾಸ್ಟ್ಸ್[ಬದಲಾಯಿಸಿ]

ಗೇಮ್ ಸ್ಪಾಟ್ ಅದರ US, UK, ಮತ್ತು AU ವೆಬ್‌ಸೈಟ್‌ ಗಳಿಗೆ ಕ್ರಮಬದ್ಧವಾದ ಪೊಡೊಕ್ಯಾಸ್ಟ್ಸ್ ನ್ನು ,ಜೊತೆಯಲ್ಲಿ ಈ ಕೆಳಕಂಡ ವಿಡಿಯೋ ಶೋ ಗಳನ್ನು ಹೊಂದಿದೆ :

 • ಟುಡೇ ಆನ್ ದಿ ಸ್ಪಾಟ್ [೧] - Gamespot.com (US/ಅಂತರರಾಷ್ಟ್ರೀಯ ) ಪರ್ಯಾಯ ಅಥಿತಿಗಳಿಂದ ಯಾವಾಗಲು ನಡೆಸುವಂತಹ ವಿಡಿಯೋ ಶೋ.
 • Start/Select [೨] - ಗೇಮ್ ಸ್ಪಾಟ್ UK's ಗೈ ಕಾಕರ್ ನಡೆಸಿಕೊಡುವಂತಹ ಕ್ರಮಬದ್ಧ ವಿಡಿಯೋ ಶೋ.
 • Crosshairs [೩] - ಗೇಮ್ ಸ್ಪಾಟ್ AU's ವಾರಕೊಮ್ಮೆ ರಾನ್ಡೊಲ್ಫ್ ರಾಮ್ಸೇ ನಡೆಸಿಕೊಂಡುವಂತಹ ವಿಡಿಯೋ ಶೋ.

ಸಮುದಾಯದ ಗುಣ ಲಕ್ಷಣಗಳು[ಬದಲಾಯಿಸಿ]

ಫೋರಮ್ಸ್ (ವೇದಿಕೆ)[ಬದಲಾಯಿಸಿ]

 • ಗೇಮ್ ಸ್ಪಾಟ್ಸ್ ಫೋರಮ್ಸ್ ನ್ನು ಮೊದಲಿನಿಂದ ZDNet, ನಂತರ ಲಿತಿಅಮ್ ನಡೆಸುತ್ತಿದ್ದೆ.[ಸಾಕ್ಷ್ಯಾಧಾರ ಬೇಕಾಗಿದೆ] ಗೇಮ್ ಸ್ಪಾಟ್ ಅನೇಕ ಸ್ವಯಂ ಸೇವ ನಿಯಂತ್ರಕರುಗಳನ್ನು ಹೊಂದಿರುವಂತಹ ಅರೆ- ಸ್ವಯಂಚಾಲಿತ ಪರಿಷ್ಕರಣ ವ್ಯವಸ್ಥೆಯನ್ನು ಉಪಯೋಗಿಸುತ್ತಿದೆ. ಗೇಮ್ ಸ್ಪಾಟ್ ನಿಯಂತ್ರಕರು ಸ್ವಯಂಸೇವ ನಿಯಂತ್ರಕರಾಗಿದ್ದು, ಇವರನ್ನು ಸಮೂಹದ ನಂಬಿಕಸ್ಥ ಸದಸ್ಯಗಳಿಂದ ಆರಿಸಲಾಗಿದೆ. ಆದರೂ ಪೋಸ್ಟ್ ಮತ್ತು ಬೋರ್ಡ್ಸ್ ಗಳ ಗಾತ್ರ ಹಾಗು ದೊಡ್ಡ ಪರಿಮಾಣದ ಕಾರಣ ಗೇಮ್ ಸ್ಪಾಟ್ ನಲ್ಲಿ "ವರದಿ" ಯನ್ನು ಮಾಡುವ ಅವಕಾಶವಿದೆ. ಈ ಅವಕಾಶದಿಂದ ಸಮಾನ್ಯ ಬಳಕೆದಾರ ವರದಿಯನ್ನು ನಿಯಂತ್ರಕನಿಗೆ ಪೋಸ್ಟ್ ಮಾಡಬಹುದು. ಈ ವರದಿ ಮಾಡುವಂತಹ ಅವಕಾಶವು ಹೆಚ್ಚು ಸಮಯವನ್ನು ಉಳಿಸುವುದಲ್ಲದೆ ಹೆಚ್ಚು ವಿಷಯಗಳು ಸರಿಯಾಗಿ ಬಳಕೆಯಾಗಿದೆಯೆಂಬುದನ್ನು ಇದು ಖಚಿತಪಡಿಸುತ್ತದೆ .
 • ಗೇಮ್ ಸ್ಪಾಟ್ ಸಮುದಾಯದ ಒಂದು ವಿಭಿನ್ನ ಗುಣಲಕ್ಷಣವೆಂದರೆ ಬಳಕೆದಾರರು ತಮ್ಮದೇ ಆದಂತಹ ಬಳಕೆದಾರರ- ರಚಿಸಲ್ಪಟ್ಟ ಬೋರ್ಡ್ ಅನ್ನು ರಚಿಸಿಕೊಳ್ಳುವಂತಹ ಒಟ್ಟು ಆಕ್ಸೆಸ್ ಹಾಗು ಅಧಿಕ ಆಕ್ಸೆಸ್ ನ ಸಾಮರ್ಥ್ಯವನ್ನು ಹೊಂದಿರುವುದು. ಈ ಬೋರ್ಡ್ ಗಳನ್ನು ಸಾರ್ವಜನಿಕ ವಾಗಿ ಅಥವಾ ಖಾಸಗಿಯಾಗಿ ರೂಪಿಸಿಕೊಳ್ಳಬಹುದು.
 • ಬೋರ್ಡ್ ಅನ್ನು ರಚಿಸಿದಂತವರು ತಮ್ಮದೇ ಆದಂತಹ ನಿಯಂತ್ರಕರನ್ನು ನೇಮಿಸಿಕೊಳ್ಳಬಹುದು ಹಾಗು ಅವರ ಬೋರ್ಡ್ ನ ಶಿರ್ಷಿಕೆಯಲ್ಲಿ HTML ಮಾರ್ಕ್ಅಪ್ ಗಳನ್ನು ಪ್ರದರ್ಶಿಸಬಹುದು. ಇದರ ಜೊತೆಯಲ್ಲಿ, ಎಲ್ಲಾ ಬಳಕೆದಾರರು ರಚಿಸುವಂತಹ ಸಾಮರ್ಥ್ಯವನ್ನು ಅಥವಾ "ಯೂನಿಯನ್" ನಲ್ಲಿ ಸೇರಿಕೊಳ್ಳುವ ಅವಕಾಶವನ್ನು ಹೊಂದಿರುತ್ತಾರೆ. ಯುನಿಯನ್ ಬಳಕೆದಾರರು -ರಚಿಸಿದಂತಹ ಬೋರ್ಡ್ಅನ್ನು ಒಳಗೊಂಡಿರುತ್ತದೆ. ಇದು ಸಂಪಾದಕೀಯ ಪುಟ ಹಾಗು ಸದಸ್ಯರ ಪಟ್ಟಿ ಸುದ್ದಿ ಸಂಗ್ರಹಗಳ ಜೊತೆಯಲ್ಲಿ ಮುಖಪುಟದೊಂದಿಗೆ ಕೂಡಿಕೊಂಡಿರುತ್ತದೆ .
 • ಮೆಸೇಜ್ ಬೋರ್ಡ್ ಸಿಸ್ಟಮ್ ಗೆ ಸೇರಿಕೊಂಡಂತೆ, ಗೇಮ್ ಸ್ಪಾಟ್ ಅದರ ಫೀಚರ್ಸ್(ಲಕ್ಷಣ)ಗಳನ್ನು ಇನ್ನಷ್ಟು ಹೆಚ್ಚಿಸುವುದರ ಮೂಲಕ ಅದರ ಸಮೂಹವನ್ನು ವಿಸ್ತರಿಸಿದೆ. ಉದಾಹಾರಣೆಗೆ ಬಳಕೆದಾರರ ಬ್ಲಾಗ್ಸ್(ಜೌಪಚಾರಿಕವಾಗಿ "ನಿಯತಕಾಲಿಕೆ"[೪೭]ಗಳೆಂದು ಕರೆಯಲ್ಪಡುವ )ಮತ್ತು ಬಳಕೆದಾರರ ವಿಡಿಯೋ ಬ್ಲಾಗ್ಸ್.
 • ಬಳಕೆದಾರರು ಇತರ ಬಳಕೆದಾರರನ್ನು ಟ್ರಾಕ್ ಮಾಡಬಹುದು. ಅವರ ನೆಚ್ಚಿನ ಬ್ಲಾಗ್ಸ್ ಗಳಲ್ಲಿ ಪ್ರಸ್ತುತವಾಗಿ ಹಾಕಲಾಗಿರುವಂತಹ ಮಾಹಿತಿಯನ್ನು ನೋಡಲು ಅವಕಾಶವಿದೆ. ಇಬ್ಬರು ಬಳಕೆದಾರರು ಒಬ್ಬರನ್ನೊಬ್ಬರು ಟ್ರ್ಯಾಕ್ ಮಾಡಿದಾಗ, ಅವರ ಹೆಸರು ಅವರಿಬ್ಬರ ಸ್ನೇಹಿತರ ಪಟ್ಟಿಯಲ್ಲಿ ಸೇರಿಕೊಳ್ಳುವುದು.
 • ಮೇ 2004ರಲ್ಲಿ, ಗೇಮ್FAQs ಮೆಸೇಜ್ ಬೋರ್ಡ್ಸ್ ಹಾಗು ಗೇಮ್ ಸ್ಪಾಟ್ ಬೋರ್ಡ್ಸ್ ಅವರ ಬಹುಮಟ್ಟಿನ ಆಟಗಳನ್ನು ಒಂದು ನಿರ್ದಿಷ್ಟ ಬೋರ್ಡ್ ನಲ್ಲಿ ಸೇರಿಸಿದರು . [೪೮]
 • 2008 ನವೆಂಬರ್ 11 ರಂದು, ಗೇಮ್ ಸ್ಪಾಟ್ ಅದರ ಫೋರಮ್ ಸಾಫ್ಟ್ ವೇರ್ ಅನ್ನು ಪರಿಷ್ಕರಿಸಿತು. ಕೆಲವು ಬದಲಾವಣೆಗಳು ಅಗಲವಾದ ಪುಟ ಹಾಗು ಸೈಡ್ ಬಾರ್ ಅನ್ನು ಒಳಗೊಂಡಿತು.

ಪ್ರೋಫೈಲ್[ಬದಲಾಯಿಸಿ]

 • ನೊಂದಾಯಿಸಲ್ಪಟ್ಟ ಸದಸ್ಯರು ಅವರದೇ ಆದಂತಹ ಪ್ರೋಫೈಲ್ಅನ್ನು ಹೊಂದಿರುತ್ತಾರೆ. ಅವರ ಪ್ರೋಫೈಲ್ ಅವರ ಇಚ್ಛೆಯಂತೆ ಅವರ ಸ್ನೇಹಿತರು, ಎಲ್ಲರು ಅಥವಾ ಅವರಿಗೆ ಮಾತ್ರ ಕಾಣಿಸುವಂತೆ ಮಾಡಿಕೊಳ್ಳಬಹುದು .[೪೯]
 • ಪ್ರೋಫೈಲ್ಸ್ ಉಪಯೋಗಕರವಾಗಿದ್ದು, ಬಳಕೆದಾದರರಿಗೆ ಮತ್ತು ಇತರರಿಗೆ ಅನುಕೂಲಕರವಾಗಿದೆ. ಪ್ರೋಫೈಲ್ ನಲ್ಲಿ ಬ್ಲಾಗ್ ಅನ್ನು ಪ್ರಾರಂಭಿಸಬಹುದು ಹಾಗು ಪರಿಷ್ಕರಿಸಬಹುದು.
 • ಬ್ಲಾಗ್ಅನ್ನು TV.com, MP3.com ಮತ್ತು MovieTome ಪ್ರೋಫೈಲ್ಸ್ ಬಳಕೆ ದಾರರೊಂದಿಗೆ ಹಂಚಿಕೊಳ್ಳಲಾಗುತ್ತದೆ. ಇತರ ಬಳಕೆದಾರರು ನಿಯಂತ್ರಕರಿಗೆ ಬ್ಲಾಗ್ ಮೂಲಕ ವರದಿಯನ್ನು ಕಳುಹಿಸಬಹುದು .
 • ಬಳಕೆದಾರರು ಅವರ ಗೇಮ್ ಸ್ಪಾಟ್ ಪ್ರೋಫೈಲ್ ನಲ್ಲಿ ಗೇಮ್ಸ್ ಗಳ ಪಟ್ಟಿಯನ್ನು ಇಟ್ಟುಕೊಳ್ಳಬಹುದು. ಇದು ಅವರಿಗೆ (ಹಾಗು ಇತರರಿಗೆ) ಗೇಮ್ಸ್ ಗಳನ್ನು ನಾಲ್ಕು ಬೇರೆ ಬೇರೆ ವಿಭಾಗಗಳಲ್ಲಿ ಟ್ರ್ಯಾಕ್ ಮಾಡುವಂತಹ ಅವಕಾಶವನ್ನು ನೀಡುತ್ತದೆ.
 • ಬಳಕೆದಾರರು ಟ್ರ್ಯಾಕ್ಡ್ ಗೇಮ್ಸ್ ಪಟ್ಟಿಗೆ ಗೇಮ್ಸ್ ಗಳನ್ನು ಸೇರಿಸುತ್ತ ಸುದ್ದಿ ಮತ್ತು ಪರಿಷ್ಕರಣಗಳ ಜಾಡನ್ನು ಕಂಡು ಹಿಡಿಯಬಹುದು. ಬಳಕೆದಾರರು ತಮಗೆಂದು ಇಟ್ಟುಕೊಂಡಿರುವಂತಹ ಗೇಮ್ಸ್ ಗಳಿಗೆ "ಕಲೆಕ್ಷನ್ಸ್" ಎಂಬ ಪದವನ್ನು ಬಳಸಬಹುದು.
 • "ವಿಷ್ ಲಿಸ್ಟ್" ಎಂಬುದು ಬಳಕೆದಾರರು ಪ್ರಯೋಗಿಸುವಂತಹ ಅಥವಾ ಮುಂದೆ ಕೊಂಡುಕೊಳ್ಳಬೇಕೆಂಬ ಉದ್ದೇಶವಿರುವ ಗೇಮ್ಸ್ ಗಳಿಗೆ ಬಳಸಲಾಗುತ್ತದೆ.
 • ಮೊದಲೇ ಬಿಡುಗಡೆಯಾಗಿರುವಂತಹ ಅಥವಾ ಮುಂದೆ ಬಿಡುಗಡೆಯಾಗಲಿರುವ ಯಾವುದೇ ಗೇಮ್ಅನ್ನು ವಿಷ್ ಲಿಸ್ಟ್ ಗೆ ಸೇರಿಸಬಹುದು. "ನವ್ ಪ್ಲೇಯಿಂಗ್ " ಲಿಸ್ಟ್ ಗೆ ಸೇರಿಸಿದಂತಹ ಯಾವ ಆಟ ವನ್ನು ಬಳಕೆದಾರರು ಪ್ರಸ್ತುತದಲ್ಲಿ ಆಡುತ್ತಿದ್ದಾರೆಂದು ತಿಳಿಸಬಹುದು .
 • ವಿವಿಧ ಆಟಗಳನ್ನು ಮುಗಿಸಿದ ಕೂಡಲೇ ಬಳಕೆದಾರರಿಗೆ ಚಿಹ್ನೆಗಳನ್ನು ನೀಡಲಾಗುತ್ತದೆ. ಕೆಲವು ಚಿಹ್ನೆಗಳು ಬಳಕೆದಾರರ ಸ್ಥಾನ(ಸ್ಥಿತಿ)ವನ್ನು ತೋರಿಸುತ್ತವೆ (ಉಚಿತವಾಗಿ ಪಡೆಯುವುದು ಮತ್ತು ಹಣವನ್ನು ಕೊಟ್ಟು ಪಡೆಯುವುದು ).
 • ಇತರ ಚಿಹ್ನೆಗಳು ಸ್ಪರ್ಧೆಯಲ್ಲಿ ಜಯಗಳಿಸಿದವರನ್ನು, ಮತಚಲಾಯಿಸುವುದರಲ್ಲಿ ಪಾಲ್ಗೊಂಡವರನ್ನು, ಸಿಬ್ಬಂದ್ಧಿ/ನಿಯಂತ್ರಕರನ್ನು ತೋರಿಸುತ್ತದೆ.
 • ಒಮ್ಮೆ ಒಬ್ಬ ಗೇಮ್ ಸ್ಪಾಟ್ ಪ್ರೋಫೈಲ್ಅನ್ನು ಹೊಂದಿದನೆಂದರೆ, ಅದನ್ನು ಅವನು ತಿದ್ದಬಹುದು, ಆದರೆ ತೆಗೆದುಹಾಕುವಂತಿಲ್ಲ.
 • ಒಬ್ಬನ ಪ್ರೋಫೈಲ್ ಅನ್ನು ತೆಗೆದುಹಾಕಲು ನಿಯಂತ್ರಕನನ್ನು ಕೇಳಿದರೆ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಗೇಮ್ ಸ್ಪಾಟ್ ನಿಯಮಗಳನ್ನು ಅಧಿಕೃತ ವಾಗಿ ಕಳುಹಿಸದಿರುವವರೆಗೆ ಅದು ಮಿಶ್ರ ಪ್ರತಿಕ್ರಿಯೆಯನ್ನು ಪಡೆಯುತ್ತದೆ.
 • ಒಬ್ಬನ ಪ್ರೋಫೈಲ್ ಲಕ್ಷಣಗಳು ಉದಾಹಾರಣೆಗೆ ಒಬ್ಬರ ಬ್ಲಾಗ್ ಅನ್ನು "ಖಾಸಗಿಯಾಗಿ ಹಾಗು ಸ್ನೇಹಿತರಿಗೆ ಮಾತ್ರ ಕಾಣಿಸುವಂತೆ "ಅಥವಾ" ಯಾರಿಗು ಕಾಣಿಸದಂತೆ "ವ್ಯವಸ್ಥೆಗೊಳಿಸಬಹುದು. ಅದೇನೇ ಆದರೂ ಓದುಗರ ವಿಮರ್ಶೆಗಳನ್ನು ಬಳಕೆದಾರರು ವೈಯಕ್ತಿಕವಾಗಿ ತೆಗೆದುಹಾಕದಿದ್ದಲ್ಲಿ ಅವುಗಳನ್ನು ಯಾವಾಗಲು "ಸಾರ್ವಜನಿಕ"ವಾಗಿ ತೆರೆದಿಡಲಾಗುತ್ತದೆ

ಯೂನಿಯನ್ಸ್[ಬದಲಾಯಿಸಿ]

 • ಯೂನಿಯನ್ಸ್ ಗೇಮ್ ಸ್ಪಾಟ್ ನಲ್ಲಿ ಆನ್ ಲೈನ್ ಸಮೂಹವಾಗಿ ಕಾರ್ಯನಿರ್ವಹಿಸುತ್ತದೆ. ಪ್ರತಿ ಯೂನಿಯನ್ ಬ್ಲಾಗ್ -ಮಾದರಿಯ ಮುಖಪುಟವನ್ನು ಹಾಗು ನಿರ್ದಿಷ್ಟವಾದ ವಿಷಯವನ್ನೊಳಗೊಂಡತಹ ಮೆಸೇಜ್ ಬೋರ್ಡ್ಅನ್ನು ಹೊಂದಿರುತ್ತದೆ.
 • ಯೂನಿಯನ್ ನ ಸದಸ್ಯರುಗಳು ಬೋರ್ಡ್ ನಲ್ಲಿ ಸಂದೇಶಗಳನ್ನು ಮತ್ತು ವಿಷಯಗಳನ್ನು ಕಳುಹಿಸಬಹುದು ಹಾಗು ಯೂನಿಯನ್ ನ ಇತರ ಸದಸ್ಯರು ಅದಕ್ಕೆ ಪ್ರತಿಕ್ರಿಯಿಸಬಹುದು. ಪ್ರತಿ ಯೂನಿಯನ್ ದರ್ಜೆಯನ್ನು ಹೊಂದಿದ್ದು ಕಾರ್ಯ ನಿರ್ವಹಿಸುತ್ತ ಬೆಳೆಯುತ್ತಿರುವುದಕ್ಕೆ ಅಥವಾ ಉತ್ತಮ ವಿಷಯಗಳನ್ನು ಕಳುಹಿಸುತ್ತಿರುವುದಕ್ಕೆ ಚಿಹ್ನೆಗಳನ್ನು ಪಡೆಯಬಹುದು .
 • ಯೂನಿಯನ್ ಸದಸ್ಯರುಗಳಿಗೆ ಯೂನಿಯನ್ ನಲ್ಲಿಯೇ ಸ್ಥಾನಗಳನ್ನು ಕೊಡಬಹುದು. ಪ್ರಸ್ತುತದಲ್ಲಿ ಮೂರು ಸ್ಥಾನಗಳಿವೆ : ಮುಖ್ಯಸ್ಥ, ಅಧಿಕಾರಿ ಮತ್ತು ಅನನುಭವಿ.
 • ಮುಖ್ಯಸ್ಥರು - ಯೂನಿಯನ್ ನ ಕಾರ್ಯನಿರ್ವಾಹಕರಿದ್ದಂತೆ ಹೆಸರು, ರೂಪ, ಚಿಹ್ನೆ ಮತ್ತು ಸಾಧಾರಣವಾದ ವಿಷಯಗಳು /ಸಂದೇಶಗಳನ್ನು ಒಳಗೊಂಡಂತೆ ಯೂನಿಯನ್ ಗೆ ಸಂಬಂಧಿಸಿದ ಯಾವುದೇ ಬದಲಾವಣೆಯನ್ನು ಮಾಡಬಲ್ಲಂತಹ ಅಧಿಕಾರವನ್ನು ಹೊಂದಿರುತ್ತಾರೆ. *ಅಧಿಕಾರಿಗಳು- ವಿಷಯಗಳನ್ನು ಮತ್ತು ಸಂದೇಶಗಳನ್ನು ಬದಲಾಯಿಸುವ ಅಧಿಕಾರವನ್ನು ಹೊಂದಿರುತ್ತಾರೆ ಹಾಗು ಮುಖ್ಯಸ್ಥರು ಕೊಡಬಯಸಿದಂತಹ ಇತರ ಅಧಿಕಾರಗಳನ್ನು ಹೊಂದಿರುತ್ತಾರೆ.
 • ಅನನುಭವಿಗಳು- ಸಾಮಾನ್ಯ ಸದಸ್ಯರಾಗಿದ್ದು ವಿಷಯ ಮತ್ತು ಸಂದೇಶಗಳನ್ನು ಕಳುಹಿಸುವುದಕ್ಕೆ ಸಂಬಂಧಪಟ್ಟಂತೆ ಕಾರ್ಯನಿರ್ವಹಿಸುವ ಅಧಿಕಾರವನ್ನು ಹೊಂದಿರುತ್ತಾರೆ.

ಜರ್ಸ್ಟ್ ಮನ್ ನ ವಜಾ[ಬದಲಾಯಿಸಿ]

 • ಅವನನ್ನು ತೆಗೆದು ಹಾಕಿದ ಕೂಡಲೇ, ಗೇಮ್ ಸ್ಪಾಟ್ ವೆಬ್ ಸೈಟ್ ನಲ್ಲಿ ಜಾಹಿರಾತುಗಳಿಗೆ ಅಧಿಕ ಪ್ರಮಾಣದ ಜಾಗವನ್ನು ಕೊಂಡು ಕೊಂಡಂತಹ ಇಡಸ್ ಇನ್ ಟ್ರ್ಯಾಕ್ಟೀವ್ ನ , ಪ್ರಕಾಶಕನಿಂದ Kane & Lynch: Dead Menಬಂದ ಒತ್ತಡದ ಕಾರಣ ಜರ್ಸ್ಟ್ ಮನ್ ಅನ್ನು ತೆಗೆದು ಹಾಕಲಾಯಿತು ಎಂದು ಗಾಳಿ ಸುದ್ಧಿಗಳು ಹರಡಿದವು. ಜರ್ಸ್ಟ್ ಮನ್ ಮೊದಲೇ ಕನೆ ಮತ್ತು ಲಿಂಚ್ ನ ಬಗ್ಗೆ ಉತ್ತಮವಾದ ಅಥವಾ ವಿಮರ್ಶೆಯ ಜೊತೆ ರೇಟಿಂಗ್(ವೀಕ್ಷಕರ ದರ)ಅನ್ನು ನೀಡಿದ್ದ .[೫೦]
 • ಗೇಮ್ ಸ್ಪಾಟ್ ಮತ್ತು ಮಾತೃ ಸಂಸ್ಥೆಯಾದCNET, ಅವನನ್ನು ವಜಾಮಾಡಿದ್ದಕ್ಕೂ ವಿಮರ್ಶೆಗು ಯಾವುದೇ ಸಂಬಂಧವಿಲ್ಲ ಆದರೆ ಸಂಸ್ಥೆಯ ಹಾಗು ಕಾನೂನಿನ ನಿರ್ಬಂಧದಿಂದ ಕಾರಣವನ್ನು ಬಹಿರಂಗಪಡಿಸಲಾಗುತ್ತಿಲ್ಲವೆಂದು ಘೋಷಿಸಿತು.[೫೦][೫೧]
 • ಜರ್ಸ್ಟ್ ಮನ್' ನ ವಜಾ ಮಾಡಿದ ಒಂದು ತಿಂಗಳ ನಂತರ ಎಂಟು ವರ್ಷಗಳಿಂದ ಸ್ವತಂತ್ರ ವಿಮರ್ಶಕನಾಗಿದ್ದಂತಹ ಫ್ರಾಂಕ್ ಪ್ರೊವೊ CNET ಆಡಳಿತ ಸರಿಯಾದ ಕಾರಣವಿಲ್ಲದೆ ಜೆಫ್ ನನ್ನು ಕೆಲಸದಿಂದ ತೆಗೆದುಹಾಕಿದೆಯೆಂಬ ಕಾರಣ ನೀಡಿ ಗೇಮ್ ಸ್ಪಾಟ್ಅನ್ನು ಬಿಟ್ಟ.
 • CNET ಸೈಟ್ಸ್ ಟೋನ್ ಅನ್ನು ಮೃದುಗೊಳಿಸುವ ಹಾಗು ಜಾಹಿರಾತುಗಾರರನ್ನು ಸಂತೋಷಪಡಿಸಲು ಸ್ಕೋರ್ ಗಳನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ ಎಂದು ನಾನು ನಂಬುತ್ತೇನೆ ."[೫೨]
 • ಗೇಮ್ ಸ್ಪಾಟ್ ನ ಸಿಬ್ಬಂದಿಗಳಾದ ಅಲೆಕ್ಸ್ ನ್ಯಾವರೊ, ಜಾಸನ್ ಒಕ್ಯಾಂಪೊ, ರೈನ್ ಡೇವಿಸ್ , ಬ್ರ್ಯಾಡ್ ಶೂಮೇಕರ್ ಹಾಗೂ ವಿನ್ನಿ ಕಾರ್ವೆಲ್ಲ, ಕೂಡ ಜಸ್ಟ್ ಮನ್ ನನ್ನು ವಜಾಗೊಳಿಸಿದ ಕಾರಣದಿಂದ ಗೇಮ್ ಸ್ಪಾಟ್ ಅನ್ನು ಬಿಟ್ಟುಹೋದರು .[೫೩][೫೪]
 • ಜರ್ಸ್ಟ್ ಮನ್ಸ್ ನ ನಂತರದಲ್ಲಿ ಡೇವಿಸ್ ಸಹ ಸ್ಥಾಪಿಸಿದಂತಹ ಜೈಂಟ್ ಬಾಂಬ್ ಯೋಚನೆಗೆ ಶೂ ಮೇಕರ್ ಮತ್ತು ಕಾರವೆಲ್ಲ ಅನಂತರ ಸೇರಿಕೊಂಡರು. ನ್ಯಾವರೊ ಹರ್ ಮೊನಿಕ್ಸ್ ಮತ್ತು ಒಕ್ಯಾಂಪೊದ ಸಮೂಹ ವ್ಯವಸ್ಥಪಕನಾಗಿರುವಾಗಲೆ IGN PC ತಂಡದ ಮುಖ್ಯ ಸಂಪಾದಕನಾದನು. ಈ ಎಲ್ಲಾ ಸ್ಥಾನದಲ್ಲಿದ್ದುಕೊಂಡೆ 2010 ರಲ್ಲಿ ನ್ಯಾವರೊ ವಿಷ್ ಕಿ ಮೀಡಿಯ ಕ್ಕೆ ಸೇರಿ ಕೊಂಡನು. ಇದು ಸೈಟ್ಸ್ ಗಳ ಕುಟುಂಬವಾಗಿದ್ದು ಸಿನಿಮಾಗಳ ಮೇಲೆ ಹೆಚ್ಚು ಕೇಂದ್ರಿಕರಿಸಿರುವಂತಹ, ಜೆರ್ಸ್ಟ್ ಮೆನ್ ನ ಜೈಂಟ್ ಬಾಂಬ್ ಸೈಟ್ ಭಾಗವನ್ನು ಒಳ ಗೊಂಡಿರುವಂತಹ new site Screend.com ಆಗಿದೆ .

ಚಂದಾಹಣ ಪಾವತಿಸಿ ಪಡೆಯುವಂತದ್ದು[ಬದಲಾಯಿಸಿ]

 • ಗೇಮ್ ಸ್ಪಾಟ್ ಮೊದಲು ಚಂದಾಹಣ ಪಾವತಿಸಿ ಪಡೆಯುವಂತಹ ಸೇವೆಯನ್ನು ಹೊಂದಿತ್ತು. ಅದನ್ನು "ಗೇಮ್ ಸ್ಪಾಟ್ ಕಂಪ್ಲೀಟ್"ಎಂದು ಕರೆಯಲಾಗುತ್ತದೆ. ಫೆಬ್ರುವರಿ 21 ರ , 2006ರಲ್ಲಿ , ಚಂದಾಹಣ ಪಾವತಿಸಿ ಪಡೆಯುವಂತಹದ್ದರ ಮಾದರಿ ಬದಲಾಯಿತು [೫೫] ಈಗ ಇದು ಪಾವತಿಸಿದಂತಹ ಎರಡು ಸದಸ್ಯತ್ವ ಸೇವೆಯನ್ನು ಹೊಂದಿದೆ : ಟೋಟಲ್ ಆಕ್ಸೆಸ್ ಮತ್ತು ಪ್ಲಸ್.[೫೬]
 • ಟೋಟಲ್ ಆಕ್ಯೆಸ್ ಅತ್ಯಾವಶ್ಯಕವಾಗಿ ಗೇಮ್ ಸ್ಪಾಟ್ ಕಂಪ್ಲೀಟ್ ನ ಪತಿನಿಧಿಯಾಗಿದ್ದು, ಒಂದು ತಿಂಗಳಿಗೆ US$5.95 ಅಥವಾ ಒಂದು ವರ್ಷಕ್ಕೆ $39.95 ಅದೇ ಬೆಲೆಯಾಗಿದ್ದು, ಅದೇ ಲಾಭವನ್ನು ಪಡೆಯುವ ಅವಕಾಶವನ್ನು ನೀಡಿದೆ.
 • ಎರಡನೇಯ ಉತ್ಕೃಷ್ಟ ಸೇವೆ, ಗೇಮ್ ಸ್ಪಾಟ್ ಪ್ಲಸ್, ಕಡಿಮೆ , ಮಧ್ಯಸ್ಥ -ದರ್ಜೆಯ ಸೇವೆಯಾಗಿದೆ .[೫೬]
 • ಚಂದಾ ಪಾವತಿಸಿ ಪಡೆಯುವಂತಹ ಸೇವೆಯ ಮುಖ್ಯ ಉಪಯೋಗವೆಂದರೆ ಉಚಿತ ಗೇಮ್ ಸ್ಪಾಟ್ ಅಕೌಂಟ್ ನ ಜೊತೆ ಕಾಣಿಸಿಕೊಳ್ಳುವಂತಹ ಜಾಹೀರಾತುಗಳನ್ನು ತೆಗೆದುಹಾಕುತ್ತದೆ.
 • ಗೇಮ್ ಸ್ಪಾಟ್ ಸ್ಪರ್ಧೆಗಳನ್ನು ಪ್ರಯೋಜಿಸಿ ಆ ಸ್ಪರ್ಧೆಗಳು ಮತ್ತೆ ಜಾಹೀರಾತುಗಾರರಿಂದ ಪ್ರಾಯೋಜಿಸಲ್ಪಟ್ಟಾಗ ಕೆಲವು ಜಾಹೀರಾತುಗಳು ಇನ್ನೂ ಚಂದಾಪಾವತಿಸಿರುವಂತಹ ಸೇವೆಯಲ್ಲಿ ಬರುತಿರುತ್ತವೆ. ಉದಾಹಾರಣೆಗೆ- 2008ರಲ್ಲಿ , ಬಳಕೆದಾರರು ಪಾವತಿಸುತ್ತಿರುವಂತಹ ಚಂದದಾರ ನಾದರು ಕೂಡ ಸ್ಟ್ರೈಡ್ ಗಮ್ ಜಾಹಿರಾತು ಇಡೀ ವೆಬ್ ಸೈಟ್ ನಲ್ಲಿ ಕಾಣಿಸಿಕೊಂಡಿತ್ತು.
 • ಹಳೆಯ ಮತ್ತು ಹೊಸ ಸದಸ್ಯತ್ವ ಸೇವೆಯಲ್ಲಿರುವಂತಹ ವ್ಯತ್ಯಾಸವೆಂದರೆ EBGames.comನ ಮೇಲಿರುವ ಗೇಮ್ ಸ್ಪಾಟ್ ಕಂಪ್ಲೀಟ್ ನ 10 ಪ್ರತಿಶತ ರಿಯಾಯಿತಿಯ ಕೊರತೆ. ಈ ನಿರ್ಧಾರದ ಬಗ್ಗೆ ಹೆಚ್ಚು ಅಸಮಧಾನವಿದ್ದು ಸ್ವಲ್ಪಕಾಲಕ್ಕೆ ಗೇಮ್ ಸ್ಪಾಟ್ ಅದರ ಅನಿರ್ದಿಷ್ಟ ಕೆಲಸಕ್ಕಾಗಿ ಟೀಕಿಸಲ್ಪಟ್ಟಿತು. ಇದರ ಮುಂದಿನ ವಿವರಗಳು ಇದುವರೆಗೆ ಲಭ್ಯವಾಗಿಲ್ಲ .

ಗೇಮ್ ಸೆಂಟರ್[ಬದಲಾಯಿಸಿ]

 • ಗೇಮ್ ಸೆಂಟರ್ ಗೇಮ್ ಗಳ ಸೇವೆಯಾಗಿದ್ದು ಆಟಗಾರರಿಗೆ ಅವರದೇ ಆದೇಶಾನುಸಾರ ನೀಡಲಾಗುವಂತಹ ಸಹಾಯಕರನ್ನು ಪಡೆಯಲು, ಸ್ನೇಹಿತರೊಡನೆ ಚಾಟ್ ಮಾಡಲು, ಆನ್ ಲೈನ್ ನಲ್ಲಿ ಪ್ರಪಂಚದ ಎಲ್ಲಾಕಡೆಯ ಆಟಗಾರರೊಂದಿಗೆ ತೃಪ್ತಿಕರ PC ಗೇಮ್ಸ್ ಗಳನ್ನು ಆಡುವ ಆವಕಾಶವನ್ನು ನೀಡುತ್ತದೆ.
 • ಮಾರ್ಚ್ 6ರ, 2006ರಲ್ಲಿ , ಗೇಮ್ ಸೆಂಟರ್ ನ ಚಂದಾ ಪಾವತಿಸಿ ಪಡೆಯುವಂತಹ ಸೇವೆಯನ್ನು ನಿಲ್ಲಿಸಲಾಯಿತು ಹಾಗು ಟೋಟಲ್ ಆಕ್ಸೆಸ್ ಸೇವೆಯೊಡನೆ ಅದನ್ನು ಸೇರಿಸಲಾಯಿತು. ಇದರ ಫಲಿತಾಂಶವಾಗಿ, ಗೇಮ್ ಸ್ಪಾಟ್ ಗೇಮ್ ಸೆಂಟರ್ ಗ್ರಾಹಕನಿಗೆ ನೀಡುತ್ತಿದ್ದಂತಹ ನೆರವನ್ನು ನಿಲ್ಲಿಸಿತು. ಆದರೆ ಟೋಟಲ್ ಆಕ್ಸೆಸ್ ಸದಸ್ಯರಿಗೆ ಕ್ರೀಡಾ ಸ್ಪರ್ಧೆಗಳನ್ನು ಮುಂದುವರೆಸಿತು.[ಸಾಕ್ಷ್ಯಾಧಾರ ಬೇಕಾಗಿದೆ]
 • ಪ್ರಸ್ತುತದಲ್ಲಿರುವ ಗೇಮ್ ಸೆಂಟರ್ ಗೆ ಮೂಲ ಗೇಮ್ ಸೆಂಟರ್ ನ ಜೊತೆ ಯಾವ ಸಂಬಂಧವು ಇಲ್ಲ. CNET ನೆಟ್ ವರ್ಕ್ಸ್ 1995 ರಿಂದ 2001ರ ವರೆಗೆ ಗೇಮ್ ಸ್ಪಾಟ್ ನ ಸ್ಪಾರ್ಧಿಯಾಗಿತ್ತು. CNET ನೆಟ್ ವರ್ಕ್ಸ್ 2000 ದಲ್ಲಿ ZDNet ಮತ್ತು ಗೇಮ್ ಸ್ಪಾಟ್ ಅನ್ನು ತನ್ನದಾಗಿಸಿಕೊಂಡ ಕೂಡಲೇ ಮೂಲ ಗೇಮ್ ಸೆಂಟರ್ ಅನ್ನು ವಿಸರ್ಜಿಸಲಾಯಿತು .

ಆಕರ ಸೂಚನೆಗಳು[ಬದಲಾಯಿಸಿ]

 1. The oldest content on the site is dated May 1, 1996 — Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 2. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 3. "Site Profile for gamespot.com". 
 4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 6. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 7. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 8. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 9. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 10. ಜೆಫ್ ಜರ್ಸ್ಟ್ ಮನ್ - ವರ್ಚ್ಯುಅಲ್ ಫೂಲ್ಸ್
 11. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 12. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 13. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 14. ವೆಸ್ಟಲ್, ಆನ್ ಡ್ರೀವ್. ಕ್ರೋನೊ ಕ್ರಾಸ್ (ಪ್ಲೇ ಸ್ಟೇಷನ್) ವಿಮರ್ಶೆ. ಗೇಮ್ ಸ್ಪಾಟ್. ಜನವರಿ 6, 2000.
 15. ಜರ್ಸ್ಟ್ ಮನ್, ಜೆಫ್. legendofzeldaoot/review. html ದಿ ಲೆಜೆಂಡ್ ಆಪ್ ಜೆಲ್ಡಾ: ಒಕರಿನ ಆಫ್ ಟೈಮ್ (ನಿನ್ ಟೆಂಡೊ 64) ವಿಮರ್ಶೆ. ಗೇಮ್ ಸ್ಪಾಟ್. ನವೆಂಬರ್ 23, 1998.
 16. ಮಿಯೆಲ್ಕ್, ಜೇಮ್ಸ್. ಸೋಲ್ ಕ್ಯಾಲಿಬರ್ (ಡ್ರೀಮ್ ಕ್ಯಾಸ್ಟ್) ವಿಮರ್ಶೆ. ಗೇಮ್ ಸ್ಪಾಟ್. ಆಗಸ್ಟ್ 9, 1999.
 17. ಜರ್ಸ್ಟ್ ಮನ್, ಜೆಫ್. ಟೋನಿ ಹಾಕ್ ಪ್ರೊ ಸ್ಕೇಟರ್ 3 (ಪ್ಲೇ ಸ್ಟೇಷನ್ 2) ವಿಮರ್ಶೆ. ಗೇಮ್ ಸ್ಪಾಟ್. ಆಕ್ಟೋಬರ್ 29, 2001.
 18. ಕ್ಯಾಲ್ವರ್ಟ್ , ಜಸ್ಟೀನ್ .ಗ್ರ್ಯಾಂಡ್ ತೆಫ್ಟ್ ಆಟೋ IV (Xbox 360) ವಿಮರ್ಶೆ ಗೇಮ್ ಸ್ಪಾಟ್. ಏಪ್ರಿಲ್ 28, 2008.
 19. ಕ್ಯಾಲ್ವರ್ಟ್, ಜಸ್ಟೀನ್.convert&om_clk=gssummary&tag=summary%3Bread-review ಗ್ರ್ಯಾಂಡ್ ತೆಫ್ಟ್ ಆಟೋ IV(ಪ್ಲೇ ಸ್ಟೇಷನ್ 3) ವಿಮರ್ಶೆ ಗೇಮ್ ಸ್ಪಾಟ್. ಏಪ್ರಿಲ್ 28, 2008.
 20. ವ್ಯಾನಾರ್ಡ್, ಕೆಲ್ವಿನ್ ;om_clk=gssummary&tag=summary;review ಮೆಟಲ್ ಗಿರ್ ಸಾಲಿಡ್ 4: ಗನ್ಸ್ ಆಫ್ ದಿ ಪೆಟ್ರಿಯಾಟ್ಸ್ (ಪ್ಲೇ ಸ್ಟೇಷನ್ 3) ವಿಮರ್ಶೆ. ಗೇಮ್ ಸ್ಪಾಟ್. ಜೂನ್ 12, 2008.
 21. ಮ್ಯಾಕ್ ಡೊನಾಲ್ಡ್, ರೈನ್. NFL 2K (ಡ್ರೀಮ್ ಕ್ಯಾಸ್ಟ್) ವಿಮರ್ಶೆ. ಗೇಮ್ ಸ್ಪಾಟ್. ಸೆಪ್ಟೆಂಬರ್ 1, 1999.
 22. ಮ್ಯಾಕ್ ಡೊನಾಲ್ಡ್, ರೈನ್. NFL 2K1(ಡ್ರೀಮ್ ಕ್ಯಾಸ್ಟ್) ವಿಮರ್ಶೆ. ಗೇಮ್ ಸ್ಪಾಟ್. ಸೆಪ್ಟೆಂಬರ್ 8, 2000.
 23. ಫೀಲ್ಡರ್, ಜೊ. ಪರ್ಫೆಕ್ಟ್ ಡಾರ್ಕ್ (ನಿನ್ ಟೆಂಡೊ 64) ವಿಮರ್ಶೆ. ಗೇಮ್ ಸ್ಪಾಟ್. ಮೇ 22, 2000
 24. ಡೇವಿಸ್, ಕ್ಯಾಮರಾನ್. ಸೂಪರ್ ಮರಿಯೊ ಬ್ರೊಸ್. ಡಿಲಕ್ಸ್(ಗೇಮ್ ಬಾಯ್ ಕಲರ್) ವಿಮರ್ಶೆ. ಗೇಮ್ ಸ್ಪಾಟ್. ಜನವರಿ 28, 2000.
 25. ಜರ್ಸ್ಟ್ ಮನ್, ಜೆಫ್. ಟೆಕ್ಕೆನ್ 3(ಪ್ಲೇ ಸ್ಟೇಷನ್) ವಿಮರ್ಶೆ. ಗೇಮ್ ಸ್ಪಾಟ್ . ಮಾರ್ಚ್ 30, 1998.
 26. ಜರ್ಸ್ಟ್ ಮನ್, ಜೆಫ್. dreamcast/sports/ tonyhawk sproskater2/review.html ಟೋನಿ ಹಾಕ್ಸ್ ಪ್ರೊ ಸ್ಕೇಟರ್ 2 (ಡ್ರೀಮ್ ಕ್ಯಾಸ್ಟ್) ವಿಮರ್ಶೆ. ಗೇಮ್ ಸ್ಪಾಟ್. ನವೆಂಬರ್ 7, 2000.
 27. ಜರ್ಸ್ಟ್ ಮನ್, ಜೆಫ್. sports/ tonyhawk sproskater2/review.html ಟೋನಿ ಹಾಕ್ಸ್ ಪ್ರೊ ಸ್ಕೇಟರ್ 2 (ಪ್ಲೇ ಸ್ಟೇಷನ್) ವಿಮರ್ಶೆ. ಗೇಮ್ ಸ್ಪಾಟ್. ಸೆಪ್ಟೆಂಬರ್ 20, 2000.
 28. ನ್ಯಾರ್ವರೊ, ಅಲೆಕ್ಸ್. gamespot.com/pc/driving/bigrigsotrr/review.html ಬಿಗ್ ರಿಗ್ಸ್ : ಒವರ್ ದಿ ರೋಡ್ ರೇಸಿಂಗ್ (PC) ವಿಮರ್ಶೆ. ಗೇಮ್ ಸ್ಪಾಟ್. ಜನವರಿ 14, 2004.
 29. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 30. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 31. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 32. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 33. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 34. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 35. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 36. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 37. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 38. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 39. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 40. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 41. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 42. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 43. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 44. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.[dead link]
 45. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 46. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 47. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 48. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 49. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 50. ೫೦.೦ ೫೦.೧ ೫೦.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 51. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 52. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 53. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 54. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 55. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 56. ೫೬.೦ ೫೬.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.

ಹೊರಗಿನ ಕೊಂಡಿಗಳು[ಬದಲಾಯಿಸಿ]