ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್
ಚಿತ್ರ:Mar.jpg
ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್, 2002.
ಜನನGabriel José de la Concordia García Márquez
(೧೯೨೭-೦೩-೦೬)೬ ಮಾರ್ಚ್ ೧೯೨೭
Aracataca, ಕೊಲಂಬಿಯಾ
ರಾಷ್ಟ್ರೀಯತೆColombian
ವಿದ್ಯಾಭ್ಯಾಸUniversity of Cartagena
ಪ್ರಕಾರ/ಶೈಲಿಕಾದಂಬರಿಗಳು,ಸಣ್ಣ ಕಥೆಗಳು
ಸಾಹಿತ್ಯ ಚಳುವಳಿLatin American Boom
Magic realism
ಪ್ರಮುಖ ಕೆಲಸ(ಗಳು)One Hundred Years of Solitude, Autumn of the Patriarch, Love in the Time of Cholera
ಪ್ರಮುಖ ಪ್ರಶಸ್ತಿ(ಗಳು)ಸಾಹಿತ್ಯದಲ್ಲಿ ನೋಬೆಲ್ ಪ್ರಶಸ್ತಿ
೧೯೮೨
ಬಾಳ ಸಂಗಾತಿMercedes Barcha Pardo
ಮಕ್ಕಳುRodrigo García Barcha, Gonzalo García Barcha


ಸಹಿ

ಗೇಬ್ರಿಯೆಲ್ ಗಾರ್ಸಿಯಾ ಮಾರ್ಕ್ವೆಜ್,' ಸ್ಪಾನಿಷ್ ಭಾಷೆಯಲ್ಲಿ ಹಲವಾರು ಮಹತ್ವದ ಕೃತಿಗಳನ್ನು ಬರೆದು, ತಾನು ಹುಟ್ಟಿ ಬೆಳೆದ ಲ್ಯಾಟಿನ್ ಅಮೆರಿಕದ ಸರ್ಕಾರದ ನೀತಿ, ಅಸಮಾನತೆ, ಜನರ ಚಿಂತೆನೆ, ಭಾವನೆಗಳು, ಕಂದಾಚಾರದ ಆಚರಣೆಗಳನ್ನು ತಮ್ಮ ಅದ್ಭುತ ಬರವಣಿಗೆಯ ಮೂಲಕ ಜನಜಾಗೃತಿಯನ್ನು ಮೂಡಿಸುವಲ್ಲಿ ಯಶಸ್ವಿಯಾದರು.

ಜನನ, ವಿದ್ಯಾಭ್ಯಾಸ, ಲೇಖಕನಾಗಿ[ಬದಲಾಯಿಸಿ]

ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಲ್ಯಾಟಿನ್ ಅಮೇರಿಕಾದ ಕೊಲಂಬಿಯಾದ ಸಣ್ಣ ಗ್ರಾಮ,'ಅರಕಟಕ'ದಲ್ಲಿ 192೭ರ, ಮಾರ್ಚ್, ೬ ರಂದು ಜನಿಸಿದರು. ತನ್ನ ತಾತ-ಅಜ್ಜಿ, ಹಾಗೂ ಚಿಕ್ಕಮ್ಮ ನ ಆರೈಕೆಯಲ್ಲಿ ಬಾಲ್ಯವನ್ನು ಕಳೆದರು. ಕೊಲಂಬಿಯಾದ 'ಸಾವಿರ ದಿನಗಳು ಯುದ್ದ'ದಲ್ಲಿ ಕರ್ನಲ್ ಆಗಿದ್ದ ತಾತ, ತನ್ನ ಯೌವನದ ಸಾಹಸ ಕತೆಗಳನ್ನು ಹೇಳುತ್ತಾ, ಹೇಳುತ್ತಾ ಇತಿಹಾಸಕ್ಕೂ ನನಗೂ ಕಳ್ಳುಬಳ್ಳಿಯಾಗಿದ್ದ ಎನ್ನುತ್ತಾನೆ ಮಾರ್ಕ್ವೆಜ್. ಅಜ್ಜಿ ಕಟ್ಟುಕತೆಗಳನ್ನು ಹೇಳುವುದರಲ್ಲಿ ನಿಷ್ಣಾತೆ. ಕುಟುಂಬದವರ ಜೀವನ ಕತೆಗಳನ್ನು ಸಹ ಅವಳ ಕನಸಿನಲ್ಲಿ ಪಡೆದ ಸಂದೇಶಗಳನ್ನು ಅನುಸರಿಸಿ ಕಟ್ಟುತ್ತಿದ್ದಳು. ವಾಸ್ತವವನ್ನು ಅಲೌಕಿಕತೆ, ಯಕ್ಷಿಣೀ ಗುಣ ಹಾಗು ಮೂಢಾಚಾರಣೆಯ ನೋಟದಿಂದ ಅರಿಯಬಹುದು, ಎಂಬ ತಿಳುವಳಿಕೆಯನ್ನು ಅವಳಿಂದಲೇ ಅವನು ಕಲಿತದ್ದು. 20ನೇ ವಯಸ್ಸಿನಲ್ಲಿ 'ಸಾಯದೆ ಬದುಕಬೇಕೆಂದರೆ ಬರೆಯಲೇ ಬೇಕು' ಎಂಬ ಹಂಬಲದಲ್ಲಿ ಮಾಕ್ರ್ವೆಜ್ ಬರವಣಿಗೆ ಶುರುಮಾಡುತ್ತಾನೆ. ಮಾರ್ಕ್ವೆಜ್, ರಷ್ಯ, ಅಮೇರಿಕಾ ಹಾಗು ಇಂಗ್ಲೀಷ್ ಲೇಖಕರನ್ನು ತುಂಬಾ ಓದುತ್ತಾನೆ. "ನನ್ನಲ್ಲಿ ಒಳಅರಿವಿದೆ, ಸ್ವಯಂಪ್ರಕಾಶವಿದೆ ಎಂಬುದು ನಾನೇ ಸೃಷ್ಟಿಸಿರುವ ಮಿಥ್ಯ. ನನ್ನ ದಾರಿಯನ್ನು ಸಾಹಿತ್ಯದ ಮೂಲಕ ಕಟ್ಟಿಕೊಂಡೆ, ಓದುವುದು, ಬರೆಯುವುದು. ಅದೊಂದೇ ಹಾದಿ" ಎಂದು ಸಂತೋಷವಾಗಿ ಒಪ್ಪಿಕೊಳ್ಳುವ ಮಾಕ್ರ್ವೆಜ್‍ನನ್ನು ತೀವ್ರವಾಗಿ ಪ್ರಭಾವಿಸಿದವರು ಎಚಿmes ಎoಥಿಛಿe, ಏಚಿಜಿಞಚಿ, ಇಡಿsಞiಟಿe ಅಚಿಟಜತಿeಟಟ ಮತ್ತು ಊemmiಟಿgತಿಚಿಥಿ. ಆದರೆ ವಿಲಕ್ಷಣವಾದದ್ದನ್ನು ನಂಬಲಸಾಧ್ಯವಾದದ್ದನ್ನು ಓದುಗರು ನಂಬುವಂತೆ ಮಾಡುವ ಕಲೆಯನ್ನು ಮಾತ್ರ ಪತ್ರಿಕೋದ್ಯಮದಿಂದ ಕಲಿತೆ' ಎನ್ನುತ್ತಾನೆ.[೬] "ಸೊಗಸು ಇರುವುದೇ ನೇರವಾಗಿ ಹೇಳುವುದರಲ್ಲಿ. ಪತ್ರಕರ್ತರು ಹಾಗು ಹಳ್ಳಿಗಾಡು ಮಂದಿ ಮಾತ್ರ ಹಾಗೆ ಹೇಳುತ್ತಾರೆ".

ಒಂದು ನೂರು ವರ್ಷಗಳ ಏಕಾಂತ[ಬದಲಾಯಿಸಿ]

ಆತ್ಮಕ್ಕೆ ತಟ್ಟುವ ಸತ್ಯ, ಅನುಕಂಪ, ಕಾವ್ಯಾತ್ಮಕ ಮಾಂತ್ರಿಕತೆಯಿಂದ ತುಂಬಿ ತುಳುಕುವ ಮಾರ್ಕ್ವೆಜ್ ರ ಪ್ರಮುಖ ಕೃತಿ, 'ಒಂದು ನೂರು ವರ್ಷಗಳ ಏಕಾಂತ' ಲ್ಯಾಟಿನ್ ಅಮೇರಿಕಾದ ಗುಡ್ಡದ ತಪ್ಪಲಿನ ಹಳ್ಳಿಯೊಂದರ ಕತೆ. ವ್ಯಸನ, ಕ್ರೌರ್ಯ, ಪ್ರೇತಗಳ ಮತ್ತು ಕನಸುಗಳ ಕಲ್ಪನಾಕಾವ್ಯ ಈ ಕಥನ. ಕಾಲದ ಜೋಕಾಲಿಯಲ್ಲಿ ಜೀಕುವ ಮಾಕ್ರ್ವೆಜ್‍ನ ಹೆಣೆಗೆಗಳು ರೀವಾಜಿನ, ಕ್ರಮಬದ್ಧವಾದ ಕಾಲಗತಿಯನ್ನು ಉಲ್ಲಂಘಿಸುತ್ತವೆ. ಅತಿಲೌಕಿಕವಾದ ಮತ್ತು ದಿನನಿತ್ಯದ ಜೀವನವೆರಡನ್ನು ಕೂಡಿಸಿ ಕಲ್ಪನೆ ಕಟ್ಟುವ ಮಾಕ್ರ್ವೆಜ್‍ನ ರೀತಿಗೆ ಇಡೀ ಪ್ರಪಂಚ ಮಾರುಹೋಯಿತು. ಕಾಳ್ಗಿಚ್ಚಿನಂತೆ 'ಮಾಂತ್ರಿಕ ವಾಸ್ತವವಾದ' (ಒಚಿgiಛಿ ಖeಚಿಟism) ಬಗ್ಗೆ ಆಸಕ್ತಿ ಮೂಡಿತು. ಮಾಕ್ವೆಜ್, ಪದಗಳ ಆಡಂಬರದ ಬಳಕೆಯಿಂದ ಸಣ್ಣ ಘಟನೆಯನ್ನು ವೈಭವೀಕರಿಸುತ್ತ, ಪವಿತ್ರವಾದದ್ದನ್ನು ಕ್ಷುಲಕವಾಗಿಸುತ್ತಾ ನಿರಂತರವಾಗಿ ಕತೆ ಹೆಣೆಯುತ್ತಾನೆ. ಸಣ್ಣ ಘಟನೆಯೊಂದು ಅವನ ಕೈಯಲ್ಲಿ ಜೀವಸೆಲೆ ಉಕ್ಕಿಸುವ ಮಹಾಕಾವ್ಯವಾಗಿ ಬದಲಾಗುತ್ತದೆ. ಅವನು ಹೆಣೆಯುವ ಕಥೆ, ಬದುಕುವ, ಮಾತಾಡುವ ರೀತಿಯಲ್ಲಿ ಹೆಚ್ಚು ವ್ಯತ್ಯಾಸಗಳಿಲ್ಲ.[೭]

ರಾಜಕಾರಣಿಯಾಗಿಯೂ ಪ್ರಸಿದ್ಧ[ಬದಲಾಯಿಸಿ]

'ಗೇಬ್ರಿಯೆಲ್ ಗಾರ್ಸಿಯಾ ಮಾರ್ಕ್ವೆಜ್',[೮] ನಂಬಲೇ ಅಸಾಧ್ಯವಾದ ಪ್ರತಿಭೆಯುಳ್ಳ ಈ ಲ್ಯಾಟಿನ್ ಅಮೇರಿಕಾದ ಕ್ರಾಂತಿಕಾರಿ ಲೇಖಕ, ರಾಜಕಾರಣೀ ಕೂಡಾ ಹೌದು. ಸಾಹಿತ್ಯಕ್ಕಾಗಿ ಇರುವ ನೋಬಲ್ ಪಾರಿತೋಷಕವನ್ನು 1982ರಲ್ಲಿ ಪಡೆದಾಗ ಮಾಡಿದ ಭಾಷಣದಲ್ಲಿ ಲ್ಯಾಟಿನ್ ಅಮೇರಿಕಾದ ಜನರ ನೋವು, ಏಣೆಯಿಲ್ಲದ ಅವರ ಸಂಕಟ ಹಾಗು ಬಂಡವಾಳಶಾಹಿ ಯಜಮಾನಿಕೆಯಿಂದ ಬೇಕಂತಲೇ ತಪ್ಪಾಗಿ ‘ಅರ್ಥೈಸಲ್ಪಡುತ್ತಿರುವ ತನ್ನ ಜನರ ಔuಣsizeಜ ಡಿeಚಿಟiಣಥಿ’ ಕುರಿತು ಹೇಳುವ ಮಾತುಗಳು ದಾಖಲಾರ್ಹ: ನನ್ನ ಜನರದ್ದು "ಕಾಗದದ ಮೇಲಿನ ವಾಸ್ತವವಲ್ಲ, ಆದರೆ ನಮ್ಮೊಳಗೆ ಬದುಕುವ ಮತ್ತು ನಾವು ದಿನಾದಿನಾ ಸಾಯುವ ಎಣೆಯಿಲ್ಲದ ಸಾವುಗಳ ಕ್ಷಣಕ್ಷಣಗಳನ್ನು ನಿರ್ಧರಿಸುವ ವಾಸ್ತವ, ಆದರೆ ಈ ವಾಸ್ತವವೇ ನಮ್ಮ ತಣಿಸಲಾಗದ ಸೃಜನಶೀಲತೆಯ ಸೆಲೆಯನ್ನು ಪೋಷಿಸುತ್ತಿರುವುದು, ಅಲೆಮಾರಿಯಂತೆ, ಮೈದುಂಬಿದವನಂತೆ ಕಾಣುವ ನಾನೇ ಅದರ ಗೂಢ ಸಂಕೇತ, ಅದೃಷ್ಟವಶಾತ್ ಪ್ರತ್ಯೇಕವಾಗಿದ್ದೇನೆ". ಕ್ಯೂಬಾದ ಸರ್ವಾಧಿಕಾರಿ, 'ಫಿಡಲ್ ಕ್ಯಾಸ್ಟ್ರೋ', ಮಾರ್ಕ್ವೆಜ್ ರಿಗೆ ಪ್ರಿಯ ಮಿತ್ರರಾಗಿದ್ದರು.

ನಿಧನ[ಬದಲಾಯಿಸಿ]

೮೭ ವರ್ಷ ಪ್ರಾಯದ 'ಮಾರ್ಕ್ವೆಜ್' [೯] ರವರು 'ನ್ಯೂಮೋನಿಯಾ ಜ್ವರ'ದಿಂದ ನರಳುತ್ತಿದ್ದರು. ೨೦೧೪ ರ ಮಾರ್ಚ್, ೩೧ ರಂದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲುಮಾಡಲಾಯಿತು. ಒಂದು ವಾರದ ಚಿಕಿತ್ಸೆಯಿಂದ ಸ್ವಲ್ಪ ಗುಣಮುಖರಾಗಿ ಮನೆಗೆ ಕಳಿಸಲ್ಪಟ್ಟರು. ಅಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದಾಗಲೇ ಏಪ್ರಿಲ್, ೧೭ ರಂದು, ಕೊನೆಯುಸಿರೆಳೆದರು.[೧೦]

ಅಡಿಟಿಪ್ಪಣಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. [೧]"The Journal of the Plague Year by Daniel Defoe"
 2. [೨]" At the university in Bogotá, I started making new friends and acquaintances, who introduced me to contemporary writers. One night a friend lent me a book of short stories by Franz Kafka. I went back to the pension where I was staying and began to read The Metamorphosis. The first line almost knocked me off the bed."
 3. ೩.೦ ೩.೧ [೩]"I had never read Joyce, so I started reading Ulysses. I read it in the only Spanish edition available. Since then, after having read Ulysses in English as well as a very good French translation, I can see that the original Spanish translation was very bad. But I did learn something that was to be very useful to me in my future writing—the technique of the interior monologue. I later found this in Virginia Woolf, and I like the way she uses it better than Joyce."
 4. [೪]"I’m not sure whether I had already read Faulkner or not, but I know now that only a technique like Faulkner’s could have enabled me to write down what I was seeing. The atmosphere, the decadence, the heat in the village were roughly the same as what I had felt in Faulkner. It was a banana-plantation region inhabited by a lot of Americans from the fruit companies which gave it the same sort of atmosphere I had found in the writers of the Deep South. Critics have spoken of the literary influence of Faulkner, but I see it as a coincidence: I had simply found material that had to be dealt with in the same way that Faulkner had treated similar material."
 5. [೫]" My influence had been Faulkner; now it was Hemingway."
 6. http://vijaykarnataka.indiatimes.com/articleshow/33919579.cms?fb_action_ids=10203686630945498&fb_action_types=og.recommends&fb_source=aggregation&fb_aggregation_id=288381481237582
 7. http://economictimes.indiatimes.com/et-now/daily/gabriel-garcia-marquez-nobel-laureate-dies-at-87/videoshow/33917758.cms
 8. http://vijaykarnataka.indiatimes.com/articleshow/33921438.cms?fb_action_ids=10203686643385809&fb_action_types=og.recommends&fb_source=aggregation&fb_aggregation_id=288381481237582
 9. http://epaper.timesofindia.com/Default/Scripting/ArticleWin.asp?From=Archive&Source=Page&Skin=ETNEW&BaseHref=ETM/2014/04/19&PageLabel=10&EntityId=Ar01001&ViewMode=HTML
 10. http://www.prajavani.net/article/%E0%B2%AE%E0%B2%BE%E0%B2%B0%E0%B3%8D%E0%B2%95%E0%B3%8D%E0%B2%B5%E0%B3%86%E0%B2%9C%E0%B3%8D%E2%80%8C%E0%B2%97%E0%B3%86-%E0%B2%95%E0%B2%82%E0%B2%AC%E0%B2%A8%E0%B2%BF-%E0%B2%AE%E0%B2%B9%E0%B2%BE%E0%B2%AA%E0%B3%82%E0%B2%B0 ಮಾರ್ಕ್ವೆಜ್‌ಗೆ ಕಂಬನಿಯ ಮಹಾಪೂರ ಪ್ರಜಾವಾಣಿ, ೧೯, ಏಪ್ರಿಲ್, ೨೦೧೪

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

 • ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ ಐ ಎಮ್ ಡಿ ಬಿನಲ್ಲಿ
 • Works about ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್ in libraries (WorldCat catalog)
 • Gabriel García Márquez at Nobelprize.org
 • Gabriel García Márquez Before and After
 • García Márquez, Gabriel. "Colombian writer Gabriel García Márquez reading the first chapter of One Hundred Years of Solitude" (in Spanish).CS1 maint: unrecognized language (link)
 • Peter H. Stone (Winter 1981). "Gabriel Garcia Marquez, The Art of Fiction No. 69". The Paris Review (82).