ವಿಷಯಕ್ಕೆ ಹೋಗು

ಗುರುನಂದನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುರುನಂದನ್
ಹುಟ್ಟು (1989-12-31) 31 December 1989 (age 36)
ಬೇರೆ ಹೆಸರುರಾಜು, ರ್ಯಾಂಕ್ ಸ್ಟಾರ್
ಉದ್ಯೋಗಗಳುActor, Model
ಸಕ್ರಿಯ ವರ್ಷಗಳು೨೦೧೧– ಪ್ರಸ್ತುತ
ಹೆಸರುವಾಸಿfitness,goodlooking,smile,comedy timing, rumoreres free actor

ಗುರುನಂದನ್ ರವರು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಟ.ದೂರದರ್ಶನ ಸರಣಿಗಳಲ್ಲಿ ಸಣ್ಣ ಪಾತ್ರಗಳಲ್ಲಿ ಕೆಲಸ ಮಾಡಿದ ನಂತರ,ಏಷಿಯಾನೆಟ್ ಸುವರ್ಣದಲ್ಲಿ ಪ್ರಸಾರವಾದ ಜನಪ್ರಿಯ ಸರಣಿ ಲಕುಮಿಯೊಂದಿಗೆ ಅವರು ಖ್ಯಾತಿ ಗಳಿಸಿದರು.ಇದರ ನಂತರ,ಅವರು 'ಸೈಬರ್ ಯುಗದೊಳ್ ನವ ಯುವ ಮಧುರಾ ಪ್ರೇಮ ಕಾವ್ಯಂ' ಚಿತ್ರದಲ್ಲಿ ದೊಡ್ಡ ಪರದೆಯಲ್ಲಿ ಪ್ರಮುಖ ಪಾತ್ರ ವಹಿಸಿ ಚೊಚ್ಚಲ ಪ್ರವೇಶವನ್ನು ಮಾಡಿದರು.ಅದು ವಿಮರ್ಶಾತ್ಮಕವಾಗಿ ಪ್ರಶಂಸಿಸಲ್ಪಟ್ಟಿತು ಮತ್ತು ಅತ್ಯುತ್ತಮ ಚೊಚ್ಚಲ ಪ್ರಶಸ್ತಿಗಾಗಿ ಆಯ್ಕೆಯಾಯಿತು.

ಅವರ ಎರಡನೆಯ ಚಿತ್ರ 'ಫಸ್ಟ್ ರ್ಯಾಂಕ್ ರಾಜು'(೨೦೧೫). ಇದರಿಂದ ಅವರು ವಿಮರ್ಶಾತ್ಮಕ ಮೆಚ್ಚುಗೆ ಮತ್ತು ವಾಣಿಜ್ಯ ಯಶಸ್ಸು ಗಳಿಸಿದರು.

ಆರಂಭಿಕ ಜೀವನ

[ಬದಲಾಯಿಸಿ]

ಗುರುನಂದನ್ ರವರು ಕರ್ನಾಟಕಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಜನಿಸಿದರು.ಶಾಲೆಯಲ್ಲಿ ತಮ್ಮ ೮ ನೇ ದರ್ಜೆಯ ನಂತರ ಸಿನಿಮಾದಲ್ಲಿ ಅವರ ಅದೃಷ್ಟವನ್ನು ಪ್ರಯತ್ನಿಸಲು ತಮ್ಮ ಮನೆಯಿಂದ ಬೆಂಗಳೂರಿಗೆ ಓಡಿಹೋದರು.ಆದರೆ ಅವರ ಪ್ರಯತ್ನಗಳೆಲ್ಲವೂ ನಿರರ್ಥಕವಾಗಿ ತಮ್ಮ ಹೆತ್ತವರ ಬಳಿ ಮರಳಬೇಕಾಗಿ ಬಂತು ಮತ್ತು ಅವರ ವಿದ್ಯಾಭ್ಯಾಸವನ್ನು ಮುಂದುವರೆಸಬೇಕಾಯಿತು.ಅವರು ತಮ್ಮ ಪದವಿಯ ನಂತರ, ಮತ್ತೊಮ್ಮೆ ಅವರ ಪೋಷಕರ ಒಪ್ಪಿಗೆಯೊಂದಿಗೆ ಬೆಂಗಳೂರಿಗೆ ತೆರಳಿದರು.ಅವರು ಎರಡನೇ ಪ್ರಮುಖ ಪಾತ್ರಗಳಲ್ಲಿ ಹಲವು ದೂರದರ್ಶನ ಸರಣಿಗಳಲ್ಲಿ ಕಾಣಿಸಿಕೊಂಡರು.[]

ವೃತ್ತಿ

[ಬದಲಾಯಿಸಿ]

ಗುರುನಂದನ್ ರವರು ದೂರದರ್ಶನದಲ್ಲಿ ತಮ್ಮ ಮೊದಲನೆಯ ಪ್ರದರ್ಶನದಿಂದ ಹೆಚ್ಚು ಜನಪ್ರಿಯತೆಯನ್ನು ಪಡೆಯಲು ಸಾಧ್ಯವಾಗಲಿಲ್ಲ.ಅವರ ಮುಂದಿನ ಸರಣಿಯು ಟಿ.ಎನ್.ಸೀತಾರಾಂ ನಿರ್ದೇಶನದ 'ಮುಕ್ತ ಮುಕ್ತ' ಆಗಿದ್ದು,ಅದು ವ್ಯಾಪಕವಾಗಿ ಜನಪ್ರಿಯವಾಯಿತು.ಇದರ ನಂತರ, ಲಕುಮಿ ಯಲ್ಲಿ ಸೂರ್ಯನ ಪಾತ್ರವನ್ನು ನಿರ್ವಹಿಸಿದ್ದಾರೆ.ಈ ಸರಣಿಯು ೩೫೦ ಕ್ಕೂ ಹೆಚ್ಚಿನ ಕಂತುಗಳವರೆಗೆ ನಡೆಯಿತು.ನಂತರದಲ್ಲಿ ಅವರು ದೂರದರ್ಶನ ವಲಯಗಳಲ್ಲಿ ಚಿರಪರಿಚಿತರಾದರು.ಗುರುನಂದನ್ ರವರು ಮುಖ್ಯ ವಾಹಿನಿಯ ಸಿನಿಮಾದಲ್ಲಿ ಪ್ರಾಯೋಗಿಕ ರೋಮ್ಯಾಂಟಿಕ್ ಚಿತ್ರ 'ಸೈಬರ್ ಯುಗದೊಳ್ ನವ ಯುವ ಮಧುರಾ ಪ್ರೇಮ ಕಾವ್ಯಂ' ನಲ್ಲಿ ಶ್ವೇತಾ ಶ್ರೀವಾತ್ಸವ್ ಎದುರು ಪ್ರಮುಖ ಪಾತ್ರದಲ್ಲಿ ನಟಿಸಿದರು.ಅವರ ಅಭಿನಯವು ಅನೇಕರ ಗಮನ ಸೆಳೆಯಿತು.ಅವರ ಮುಂದಿನ ಹಾಸ್ಯಮಯ ಚಲನಚಿತ್ರ 'ಫಸ್ಟ್ ರ್ಯಾಂಕ್ ರಾಜು' ೨೦೧೫ ರಲ್ಲಿ ಬಿಡುಗಡೆಯಾಯಿತು[]ಹಾಗೂ ನಂತರದ ಚಲನಚಿತ್ರ 'ಚಿರವಾದ ನೆನಪು' ೨೦೧೬ ರಲ್ಲಿ ಬಿಡುಗಡೆಯಾಯಿತು.[]

ಚಲನಚಿತ್ರಗಳ ಪಟ್ಟಿ

[ಬದಲಾಯಿಸಿ]
ವರ್ಷಚಲನಚಿತ್ರಪಾತ್ರ ಭಾಷೆಟಿಪ್ಪಣಿ
೨೦೧೨ಸೈಬರ್ ಯುಗದೊಳ್ ನವ ಯುವ ಮಧುರಾ ಪ್ರೇಮ ಕಾವ್ಯಂಜಯಂತ ಕನ್ನಡಆಯ್ಕೆಯಾಗಿದ್ದು- ಸೈಮಾ ಅತ್ಯುತ್ತಮ ಪುರುಷ ಚೊಚ್ಚಲ ಪ್ರಶಸ್ತಿ
೨೦೧೫ಚಾರ್ಲಿ ಅತಿಥಿ ಪಾತ್ರ
೨೦೧೫ಫಸ್ಟ್ ರ‍್ಯಾಂಕ್ ರಾಜುರಾಜು ಕನ್ನಡಬ್ಲಾಕ್ಬಸ್ಟರ್ ೧೦೦ ದಿನ
೨೦೧೬ಚಿರವಾದ ನೆನಪುರಾಜ್
೨೦೧೬ಜಾನ್ ಜಾನಿ ಜನಾರ್ಧನ್ ಕನ್ನಡಅತಿಥಿ ಪಾತ್ರ
೨೦೧೭ಸ್ಮೈಲ್ ಪ್ಲೀಜ್ ಮನಮೋಹನ್/ಮನು
೨೦೧೭ಎಂ ಟಿ ವಿ ಸುಬ್ಬುಲಕ್ಷ್ಮಿಸುಬ್ಬು ಚಿತ್ರೀಕರಣ
೨೦೧೭ಮಿಸ್ಸಿಂಗ್ ಬಾಯ್NA ಚಿತ್ರೀಕರಣ
೨೦೧೭ರಾಜು ಕನ್ನಡ ಮೀಡಿಯಂರಾಜು ಕನ್ನಡಬಿಡುಗಡೆ ಮಾಡಲಾಗಿದೆ
೨೦೧೯ನಾಗತಿಹಳ್ಳಿ ಸಿನಿಮಾಸ್TBA ಇನ್ನೂ ಚಿತ್ರೀಕರಣಕ್ಕೆ

[][]

ಉಲ್ಲೇಖಗಳು

[ಬದಲಾಯಿಸಿ]
  1. https://www.veethi.com/india-people/gurunandan-profile-11390-17.htm
  2. "FIRST RANK in second attempt!". Deccan Chronicle. 23 December 2015. Retrieved 13 March 2015.
  3. https://www.filmibeat.com/celebs/gurunandan/biography.html
  4. https://m.timesofindia.com/topic/Gurunandan
  5. https://www.filmibeat.com/celebs/gurunandan/upcoming-movies.html