ಗುಪ್ಪಟ್ಟೆ ಗಿಡ

ವಿಕಿಪೀಡಿಯ ಇಂದ
Jump to navigation Jump to search
ಗುಪ್ಪಟ್ಟೆ ಗಿಡ

ಗುಪ್ಪಟ್ಟೆ ಗಿಡ ರಸ್ತೆಬದಿ ಹಾಗೂ ಖಾಲಿ ಜಾಗದಲ್ಲಿ ಹೆಚ್ಚಾಗಿ ಕಂಡುಬರುವ ಸಸ್ಯ. ಇದು ಸೊಲನೇಶಿಯೆ ಕುಟುಂಬಕ್ಕೆ ಸೇರದೆ. ಇದರ ವೈಜ್ಞಾನಿಕ ಹೆಸರು ಪೈಸೇಲಿಯ ಮಿನಿಮ. ಸಾಮಾನ್ಯವಾಗಿ ಕನ್ನಡದಲ್ಲಿ ಗದ್ದೆ ಹಣ್ಣಿನ ಗಿಡ ಹಾಗೂ ಆಂಗ್ಲ ಭಾಷೆಯಲ್ಲಿ ನೇಟಿವ್ ಗೂಸ್ಬೆರ್ರಿ ಮತ್ತು ಫೋರೆಸ್ಟ್ ಕ್ರೇಪ್ ಗೂಸ್ಬೆರ್ರಿ ಎಂದು ಕರೆಯಲಾಗುತ್ತದೆ.[೧]

ಬೆಳೆಯುವ ಪ್ರದೇಶಗಳು[ಬದಲಾಯಿಸಿ]

ಈ ಸಸ್ಯವು ಭಾರತ,ಮಲೇಶಿಯ,ಆಸ್ಟ್ರೇಲಿಯಾ ಹಾಗೂ ಬಲೂಚಿಸ್ತಾನ್ದಲ್ಲಿ ಬೆಳೆಯುತ್ತದೆ.[೨]

ಸಸ್ಯದ ವಿವರಣೆ[ಬದಲಾಯಿಸಿ]

ಈ ಗಿಡವು ೨೦-೫೦ಸೆಂ.ಮೀ ಎತ್ತರ ಇರುತ್ತದೆ. ತಿಳಿನೇರಳೆ ಕಂದು ಮಿಶ್ರಿತ ಬಣ್ಣದ ಕಾಂಡ ,ಬಿಳಿಬಣ್ಣದ ಹೂವು ಹಾಗೂ ಹಸಿರು ಬಣ್ಣದ ಎಲೆಯನ್ನು ಹೊಂದಿದೆ. ಇದರ ಪದರ ಬಲೂನಿನಂತೆ ಕಾಣುತ್ತದೆ. ಅದರ ಒಳಗೆ ಇರುವ ಗೋಲಿಯಾಕಾರದ ಕಾಯಿ ಚೆರ್ರಿ ಟೊಮಾಟೊಗಳಂತೆ ಕಾಣುತ್ತದೆ. ಫಿನೋಲಿಕ್ಸ್, ಆಲ್ಕಲೋಯಿಡ್, ಸ್ಟೀರೋಯಿಡ್, ಫ್ಲೇವನೋಯಿಡ್, ಎಂಬ ರಾಸಾಯನಿಕ ಸಂಯುಕ್ತಗಳನ್ನು ಹೊಂದಿದೆ. ಇದರ ಹಣ್ಣು, ಬೇರು, ಎಲೆ ವಿಷಕಾರಿಯಲ್ಲದಿದ್ದರೂ ಹಣ್ಣಿನ ಸುತ್ತ ಇರುವ ಪದರ ವಿಷಯುಕ್ತವಾಗಿದೆ. ಇದು ಹಣ್ಣನ್ನು ರಕ್ಷಿಸಲು ಸಸ್ಯದ ರಕ್ಷಣಾತಂತ್ರವಾಗಿದೆ.

ಉಪಯೋಗಗಳು[ಬದಲಾಯಿಸಿ]

ಸಂಪೂರ್ಣ ಸ‍ಸ್ಯವನ್ನು ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯಲ್ಲಿ ಬಳಸಲಾಗುತ್ತದೆ. ತಲೆನೋವು, ಕಿವಿನೋವು, ಕೀಲುನೋವು ಮುಂತಾದ ಅಸ್ವಸ್ಥತೆಗಳ ನಿವಾರಣೆಯಲ್ಲಿ ಬಳಸಲಾಗುತ್ತದೆ.

ಉಲ್ಲೇಖ[ಬದಲಾಯಿಸಿ]

  1. http://bushtuckerrecipes.com/bush_food/shrubs/native-gooseberry-2/
  2. https://ag.umass.edu/fruit/ne-small-fruit-management-guide/currants-gooseberries