ಗುಜರಾತ್ ಸಮಾಚಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶGujarat Samachar
ગુજરાત સમાચાર
Gujarat Samachar logo.png
ವರ್ಗDaily newspaper
ವಿನ್ಯಾಸBroadsheet
ಮಾಲೀಕLok Prakashan Ltd.
ಪ್ರಕಾಶಕShreyans Shah
ಸಂಪಾದಕShreyans Shah
ಸ್ಥಾಪನೆ1932
ಭಾಷೆGujarati
ಕೇಂದ್ರ ಕಾರ್ಯಾಲಯAhmedabad, India
ಚಲಾವಣೆ46,42,000 (Indian Readership Survey 2014)
ಅಧಿಕೃತ ತಾಣwww.gujaratsamachar.com

ಗುಜರಾತ್ ರಾಜ್ಯಅಹಮದಾಬಾದಿನಿಂದ ಪ್ರಕಟವಾಗುತ್ತಿರುವ ಗುಜರಾತಿ ಭಾಷಾಪತ್ರಿಕೆ. ಪ್ರತಿದಿನ ಬೆಳಗ್ಗೆ ಹೊರಡುತ್ತದೆ. ಪ್ರಸಾರದ ದೃಷ್ಟಿಯಿಂದ ಇದು ಗುಜರಾತಿ ಪತ್ರಿಕೆಗಳಲ್ಲಿ ಎರಡನೆಯದು. ಲೋಕ ಪ್ರಕಾಶನ ಲಿಮಿಟೆಡ್ ಸಂಸ್ಥೆ 1932ರಲ್ಲಿ ಈ ಪತ್ರಿಕೆಯ ಪ್ರಕಾಶನವನ್ನು ಪ್ರಾರಂಭಿಸಿತು. ರಾಷ್ಟ್ರೀಯ ಧೋರಣೆಯುಳ್ಳ ಈ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಶಾಂತಿಲಾಲ ಎ.ಶಹಾ. ಶ್ರೇಯಾಂಸ ಎಸ್. ಶಹಾ ಸಂಪಾದಕರು. ಅಗ್ರಲೇಖನ, ರಾಜಕೀಯ, ಆರ್ಥಿಕ, ಸಾಮಾಜಿಕ ಲೇಖನಗಳು ಇವು ನಿತ್ಯದ ವೈಶಿಷ್ಟ್ಯಗಳು. ಭಾನುವಾರದ ಸಂಚಿಕೆಯಲ್ಲಿ ಸಾಹಿತ್ಯಕ ಲೇಖನಗಳಿರುತ್ತವೆ. ಅಹಮದಾಬಾದ್ ಅಲ್ಲದೆ ವಡೋದರ, ಸೂರತ್, ರಾಜ್ಕೋಟ್, ಭಾವನಗರ ಮತ್ತು ಮುಂಬೈನಿಂದಲೂ ಪ್ರಕಟವಾಗುತ್ತಿದೆ.