ವಿಷಯಕ್ಕೆ ಹೋಗು

ಗುಜರಾತು ಸರ್ಕಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Gujarat ಸರ್ಕಾರ
ವಿಧಾನ ಮಂಡಲಗಾಂಧಿನಗರ
ಕಾರ್ಯಾಂಗ
ರಾಜ್ಯಪಾಲರುಓಂಮ್ ಪ್ರಕಾಶ ಕೊಹ್ಲಿ
ಮುಖ್ಯಮಂತ್ರಿವಿಜಯ ರೂಪಾಣಿ.
ಉಪಮುಖ್ಯಮಂತ್ರಿನಿತಿನ್ ಪಟೇಲ್
ಶಾಸಕಾಂಗ
ಸಭಾಪತಿ_(ಸ್ಪೀಕರ್)ಗಣಪತ್ ವಾಸವ
ವಿಧಾನ ಸಭೆ ಸದಸ್ಯರು182
ನ್ಯಾಯಾಂಗ
ಉಚ್ಚನ್ಯಾಯಲಯಗುಜರಾತ್ ಹೈಕೋರ್ಟ್
ಮುಖ್ಯ_ನ್ಯಾಯಾಧೀಶರುJustice ವಿಎಮ್.ಸಹಾಯ್ (Acting CJ)

ಪೀಠಿಕೆ

[ಬದಲಾಯಿಸಿ]
  • ಗುಜರಾತ್ ಸರ್ಕಾರವೂ ಗುಜರಾತ್ ರಾಜ್ಯ ಸರ್ಕಾರ ಎಂದು ಕರೆಯಲಾಗುತ್ತದೆ ಅಥವಾ ಸ್ಥಳೀಯವಾಗಿ ರಾಜ್ಯ ಸರ್ಕಾರವು, ಗುಜರಾತ್ ಮತ್ತು 33 ಜಿಲ್ಲೆಗಳಲ್ಲಿ ಭಾರತದ ರಾಜ್ಯ ಸರ್ವೋಚ್ಚ ಆಡಳಿತ ಅಧಿಕಾರವನ್ನು ಹೊಂದಿದೆ. ಇದು ನಿರ್ವಾಹಕ ಗವರ್ನರ್ ಗುಜರಾತ್, ಒಂದು ನ್ಯಾಯಾಂಗ ಮತ್ತು ಶಾಸಕಾಂಗ ವಿಭಾಗದಲ್ಲಿ ನೇತೃತ್ವ ಹೊಂದಿದೆ.
  • ಭಾರತದ ಇತರ ರಾಜ್ಯಗಳಂತೆ, ಗುಜರಾತ್ ರಾಜ್ಯದ ಮುಖ್ಯಸ್ಥ ಗವರ್ನರ್‍ರನ್ನು ಕೇಂದ್ರ ಸರ್ಕಾರದ ಸಲಹೆಯಂತೆ ಭಾರತದ ಅಧ್ಯಕ್ಷರು ನೇಮಕ ಮಾಡುವರು. ಇದು ದೊಡ್ಡ ಶಿಷ್ಟಾಚಾರಗಳ ಪದವಿ ಆಗಿದೆ. ಮುಖ್ಯಮಂತ್ರಿ ಸರ್ಕಾರದ ಮುಖ್ಯಸ್ಥರಾಗಿರುತ್ತಾರೆ ಮತ್ತು ಆಡಳಿತಾತ್ಮಕ ಅಧಿಕಾರವನ್ನು ಮಂಡಿಸುತ್ತದೆ. ಗಾಂಧಿನಗರ ಗುಜರಾತ್ ರಾಜಧಾನಿ, ಮತ್ತು ವಿಧಾನಸಭೆಯ (ವಿಧಾನಸಭೆ) ಮತ್ತು ಕಾರ್ಯದರ್ಶಿ ಕಛೇರಿಯ ನೆಲೆಯಾಗಿದೆ. ಗುಜರಾತ್ ಹೈಕೋರ್ಟ್, ಅಹಮದಾಬಾದ್‍ನಲ್ಲಿ ಇದೆ, ಇಡೀ ರಾಜ್ಯದ ಮೇಲೆ ತನ್ನ ಅಧಿಕಾರವನ್ನು ಹೊಂದಿದೆ. [1]
  • ಗುಜರಾತ್ ಪ್ರಸ್ತುತ ವಿಧಾನಸಭೆಯ ವಿಧಾನಸಭೆಯ 182 ಸದಸ್ಯರು (M.L.A) ಒಳಗೊಂಡಿರುವ ಉಭಯಸದನಗಳ ಆಗಿದೆ. ಬೇಗ ವಿಸರ್ಲಸದಿದ್ದರೆ ಅದರ ಅವಧಿ, 5 ವರ್ಷಗಳು. [2] [3]

೨೦೧೪-೨೦೧೬ರ ಗುಜರಾತ್ ರಾಜ್ಯ ಸರ್ಕಾರ

[ಬದಲಾಯಿಸಿ]
  • ೨೦೧೪-ಮುಖ್ಯ ಮಂತ್ರಿ ಆಯ್ಕೆ:
  • ಗುಜರಾತ್ ಸರ್ಕಾರದ ಹಿರಿಯ ಸಚಿವೆ ಆನಂದಿ ಬೆನ್ ಪಟೇಲ್ ಅವರು ೨೧-೫-೨೦೧೪,/21/05/2014 ಬುಧವಾರ ಅವಿರೋಧವಾಗಿ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದು, ೨೨-೫-೨೦೧೪/ 22/05/2014 ಗುರುವಾರ ಗುಜರಾತ್-ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯೆಂಬ ಹೆಗ್ಗಳಿಕೆ ಇವರದಾಗಿದೆ.ರಾಜ್ಯ ಕಂದಾಯ ಮಂತ್ರಿಯಾಗಿರುವ 73 ವಯಸ್ಸಿನ ಆನಂದಿ ಅವರು ಮೋದಿ ಅವರ ನಂತರ ,ಅವರ ಉತ್ತರಾಧಕಾರಿಯಾಗಿ ಆಯ್ಕೆಯಾಗಿದ್ದಾರೆ.ಮುಖ್ಯ ಮಂತ್ರಿ ನರೇಂದ್ರ ಮೋದಿ ಭಾರತದ ಪ್ರಧಾನಿಯಾಗಿ ಆಯ್ಕೆಯಾದ್ದರಿಂದ ಅವರ ನಂತರ ಆನಂದಿ ಬೆನ್ ಪಟೇಲ್ ಮುಖ್ಯ ಮಂತ್ರಿಯಾಗಿ ಆಯ್ಕಯಾದರು.

ವಿಜಯ್ ರೂಪಾಣಿ ಹೊಸ ಮುಖ್ಯ ಮಂತ್ರಿ

[ಬದಲಾಯಿಸಿ]
ಗುಜರಾತು ವಿಧಾನ ಸಭೆ ಪಕ್ಷಗಳ ಬಲಾಬಲ. ಸೆಪ್ಟಂಬರ್ 14; *ಬಿಜಪಿ=123.ಹಳದಿ; *ಕಾಂಗ್ರೆಸ್=56.ಹಸಿರು; *ರಾಷ್ಟ್ರೀಯ ಕಾಂ=2.ನೀಲಿ; *ಜಡಿ(ಯು)=1.ತಿಳಿಹಸಿರು.
  • 06/08/2016:75 ವರ್ಷ ವಯಸ್ಸಾದವರು ಅಧಿಕಾರ ಬಿಟ್ಟುಕೊಡಬೇಕೆನ್ನುವ ನೀತಿಯ ಹಿನ್ನೆಲೆಯಲ್ಲಿ ಆನಂದಿಬೆನ್ ಸಿಎಂ ಸ್ಥಾನಕ್ಕೆ ಸ್ವಯಂಪ್ರೇರಿತರಾಗಿ ರಾಜೀನಾಮೆ ಸಲ್ಲಿಸಿದ್ದರು. ಆರ್​ಎಸ್​ಎಸ್ ಹಿನ್ನೆಲೆಯಿಂದ ಬಂದಿರುವ 60 ವರ್ಷ ಪ್ರಾಯದ ವಿಜಯ ರೂಪಾಣಿ ಕಳೆದ ಅನೇಕ ಚುನಾವಣೆಗಳಲ್ಲಿ ಪಕ್ಷದ ನಾಯಕತ್ವ ವಹಿಸಿಕೊಂಡು ಯಶಸ್ವಿಯಾಗಿದ್ದರು.ಗುಜರಾತಿನ ಗಾಂಧಿನಗರದ ಮಹತ್ಮಾ ಮಂದಿರದಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ಒಪಿ ಕೊಹ್ಲಿ ಅವರು 24 ಸಚಿವರು ಹಾಗೂ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಈ ವೇಳೆ ಆನಂದಿ ಬೆನ್ ತಂಡದಲ್ಲಿದ್ದ 9 ಮಂದಿ ಸಚಿವರನ್ನು ಕೈಬಿಡಲಾಗಿದ್ದು, 9 ಹೊಸ ಶಾಸಕರಿಗೆ ಸಚಿವರಾಗಿ ಭಡ್ತಿ ನೀಡಲಾಗಿದೆ. ಆನಂದಿಬೆನ್‌ ಪಟೇಲ್‌ ಅವರು ರಾಜೀನಾಮೆ ನೀಡಿರುವ ಸ್ಥಾನಕ್ಕೆ ಖಚಿತ ಆಯ್ಕೆ ಎಂದೇ ಬಿಂಬಿತವಾಗಿದ್ದ ನಿತಿನ್‌ ಪಟೇಲ್‌ ಅವರು ಉಪ ಮುಖ್ಯಮಂತ್ರಿ ಸ್ಥಾನ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಗುಜರಾತ್‌ನಲ್ಲಿ ಈ ಹುದ್ದೆ ಸೃಷ್ಟಿಸಲಾಗಿದೆ.
  • ಬಿಜೆಪಿ ಶಾಸಕಾಂಗ ಪಕ್ಷವು ರೂಪಾಣಿ ಅವರನ್ನು ತನ್ನ ನಾಯಕನನ್ನಾಗಿ ಶುಕ್ರವಾರ ಆಯ್ಕೆ ಮಾಡಿದ್ದು, ರೂಪಾಣಿ ಅವರು ಮುಖ್ಯಮಂತ್ರಿಯಾಗಿ ಭಾನುವಾರ ಮಧ್ಯಾಹ್ನ 12.40ಕ್ಕೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
  • ಬರ್ಮಾದ ರಂಗೂನ್‌ನಲ್ಲಿ (ಈಗಿನ ಮ್ಯಾನ್ಮಾರ್‌ನ ಯಾಂಗೂನ್) ಜನಿಸಿದ ರೂಪಾಣಿ ಬೆಳೆದದ್ದು ರಾಜ್‌ಕೋಟ್‌ನಲ್ಲಿ. ವಿದ್ಯಾರ್ಥಿ ದೆಸೆಯಿಂದಲೇ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನಲ್ಲಿ (ಎಬಿವಿಪಿ) ಸಕ್ರಿಯವಾಗಿದ್ದ ಅವರು ನಂತರ ಆರ್‌ಎಸ್‌ಎಸ್ ಸೇರಿದರು, ಜನಸಂಘದಲ್ಲಿಯೂ ಇದ್ದರು. ಬಿಜೆಪಿ ಸ್ಥಾಪನೆಯಾದಾಗಿನಿಂದ ಆ ಪಕ್ಷದಲ್ಲಿ ಇದ್ದಾರೆ.
  • ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಒಂದು ವರ್ಷ ಜೈಲು ವಾಸವನ್ನೂ ಅವರು ಅನುಭವಿಸಿದ್ದಾರೆ. ರಾಜ್‌ಕೋಟ್ ನಗರಪಾಲಿಕೆಯಲ್ಲಿ ದೀರ್ಘ ಕಾಲ ಸಕ್ರಿಯರಾಗಿದ್ದರು, ಅಲ್ಲಿನ ಮೇಯರ್ ಆಗಿದ್ದರು. ಒಂದು ಅವಧಿಗೆ ರಾಜ್ಯಸಭೆ ಸದಸ್ಯರಾಗಿದ್ದರು. ವಜುಭಾಯಿ ವಾಲಾ ಅವರು ಕರ್ನಾಟಕದ ರಾಜ್ಯಪಾಲರಾಗಿ ನೇಮಕವಾದಾಗ ಅವರು ಪ್ರತಿನಿಧಿಸಿದ್ದ ರಾಜ್‌ಕೋಟ್ ಪಶ್ಚಿಮ ಕ್ಷೇತ್ರ ತೆರವಾಯಿತು. ಈ ಕ್ಷೇತ್ರಕ್ಕೆ 2014ರಲ್ಲಿ ಉಪಚುನಾವಣೆ ನಡೆದಾಗ ಅಲ್ಲಿ ಸ್ಪರ್ಧಿಸಿ 24 ಸಾವಿರ ಮತಗಳ ಅಂತರದಿಂದ ಗೆದ್ದರು. ಆನಂದಿಬೆನ್ ಸಂಪುಟದಲ್ಲಿ ಸಚಿವರಾದರು. ಈ ವರ್ಷ ಫೆಬ್ರುವರಿಯಲ್ಲಿ ಗುಜರಾತ್ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡರು.
  • ರಾಜ್ಯ ಘಟಕದ ಅಧ್ಯಕ್ಷರಾದ ನಂತರವೂ ಸಚಿವ ಸ್ಥಾನವನ್ನು ಉಳಿಸಿಕೊಂಡರು (ಬಿಜೆಪಿಯಲ್ಲಿ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎಂಬ ಅಲಿಖಿತ ನಿಯಮವೊಂದು ಇದೆ). ಪಟೇಲ್ ಸಮುದಾಯ ಪ್ರಬಲವಾಗಿರುವ ಗುಜರಾತ್‌ನ ಸೌರಾಷ್ಟ್ರ ಪ್ರದೇಶ ಅವರ ಕಾರ್ಯಕ್ಷೇತ್ರ.
  • ಬಾಲ್ಯದಿಂದಲೇ ಆರ್‌ಎಸ್‌ಎಸ್ ಗರಡಿಯಲ್ಲಿ ಬೆಳೆದಿರುವ ಅವರಿಗೆ ಆರ್‌ಎಸ್‌ಎಸ್‌ನ ಗಟ್ಟಿ ಬೆಂಬಲ ಇದೆ. ಸದಾ ಹಸನ್ಮುಖಿ, ಮಾತು ಸ್ನೇಹಪರ; ಸಂಧಾನದ ಮೂಲಕವೇ ಎಲ್ಲ ವಿವಾದಗಳನ್ನು ಬಗೆಹರಿಸಬೇಕು ಎಂಬ ಮನಸ್ಥಿತಿಯ ರೂಪಾಣಿ ಅವರ ವಿರುದ್ಧ ಯಾವುದೇ ಆರೋಪಗಳಿಲ್ಲ. []

ಗುಜರಾತ್

ಉಲ್ಲೇಖ

[ಬದಲಾಯಿಸಿ]
  1. "ವಿಜಯ ರೂಪಾಣಿ ಮುಖ್ಯ ಮಂತ್ರಿ". Archived from the original on 2016-08-10. Retrieved 2016-08-07.


  • ೧."Jurisdiction and Seats of Indian High Courts". Eastern Book Company. Retrieved 2008-05-12.
  • ೨."Gujarat Legislative Assembly". Legislative Bodies in India. National Informatics Centre, Government of India. Retrieved 2008-05-12.
  • ೩."Conversation with the living legend of law — Fali Sam Nariman". Bar and Bench.