ಗುಂಪೆ ಗುಡ್ಡ

ವಿಕಿಪೀಡಿಯ ಇಂದ
Jump to navigation Jump to search
ಗುಂಪೆ ಗುಡ್ಡ

ಗುಂಪೆ ಗುಡ್ಡವು ಕೇರಳದ ಕಾಸರಗೋಡಿನ ಈಶಾನ್ಯಕ್ಕೆ ೩೦ಕಿಮೀ ದೂರದಲ್ಲಿರುವ ಬಾಯಾರು ಗ್ರಾಮದ ಬಳಿ ಇರುವ ಗುಡ್ಡ ಪ್ರದೇಶವಾಗಿದೆ. ಈ ಸ್ಥಳವನ್ನು ರಾಷ್ಟ್ರೀಯ ಹೆದ್ದಾರಿ ೧೭ರಲ್ಲಿ ಬಂದಿಯೋಡು ಹಾಗೂ ಉಪ್ಪಳ ಮೂಲಕ ತಲುಪಬಹುದು.[೧][೨]

ವಿವರಣೆ[ಬದಲಾಯಿಸಿ]

ಗುಂಪೆ ಗುಡ್ಡವು ಸಮುದ್ರ ಮಟ್ಟದಿಂದ ೪೮೭.೬೮ಮೀ ಎತ್ತರದಲ್ಲಿದೆ. ಇದನ್ನು ಪೊಸಡಿಗುಂಪೆ ಎಂದು ಕರೆಯುತ್ತಾರೆ. ಈ ಗುಡ್ಡದ ತುದಿಯಲ್ಲಿ ಅರಬ್ಬೀ ಸಮುದ್ರ, ಕುದುರೆಮುಖ ಹಾಗೂ ಮಂಗಳೂರು ಪ್ರದೇಶಗಳನ್ನು ಕಾಣಬಹುದು. ಇದು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿಗೆ ಒಳಪಟ್ಟಿದೆ. ಕಾಡಿನಿಂದ ತುಂಬಿರುವ ಗುಡ್ಡದಲ್ಲಿ ಔಷಧೀಯ ಸಸ್ಯಗಳನ್ನು ಕಾಣಬಹುದು. ಇಲ್ಲಿನ ಜನರು ಶ್ರಾವಣ ಮಾಸದ ತೀರ್ಥ ಅಮವಾಸ್ಯೆಯಂದು ಗುಂಪೆ ಗುಡ್ಡದಲ್ಲಿರುವ ಗುಹೆ ಪ್ರವೇಶಿಸಿ ವಿಭೂತಿ ಪಡೆಯುತ್ತಾರೆ.[೩]

ಪ್ರಾದೇಶಿಕ ಭಾಷೆ[ಬದಲಾಯಿಸಿ]

ಗುಂಪೆ ಗುಡ್ಡದಲ್ಲಿ ಜನ ವಾಸ್ತವ್ಯವಿಲ್ಲ. ಇದರ ಹತ್ತಿರದ ಜನರ ಪ್ರಾದೇಶಿಕ ಭಾಷೆ ಮಲಯಾಳಂ, ತುಳು, ಕನ್ನಡ, ಬ್ಯಾರಿ ಹಾಗೂ ಕೊಂಕಣಿ. ವಲಸೆ ಬಂದ ಜನರು ಹಿಂದಿ ಹಾಗೂ ತಮಿಳು ಭಾಷೆಯನ್ನು ಮಾತನಾಡುತ್ತಾರೆ.[೪][೫]

Posadi Gumpe.jpg

ಪ್ರವಾಸೋದ್ಯಮ[ಬದಲಾಯಿಸಿ]

ಗುಂಪೆ ಗುಡ್ಡವು ದಟ್ಟ ಕಾಡಿನಿಂದ ಆವರಿಸಿದೆ. ಇದೊಂದು ಪ್ರವಾಸಿ ತಾಣ. ವಿವಿಧ ಊರುಗಳಿಂದ ಜನರು ಇಲ್ಲಿಗೆ ಪ್ರವಾಸ ಹಾಗೂ ಮನೋಲ್ಲಾಸಕ್ಕೆ ಬರುತ್ತಾರೆ. ಧರ್ಮತಡ್ಕವು ಗುಂಪೆ ಗುಡ್ಡದ ಬುಡದಲ್ಲಿರುವ ಪ್ರದೇಶ. ಜನರು ಚಾರಣಕ್ಕಾಗಿ ಇಲ್ಲಿ ಬರುತ್ತಾರೆ. ಪೊಸಡಿ ಗುಂಪೆ ಜಲಪಾತವು ಇಲ್ಲಿನ ಮತ್ತೊಂದು ಆಕರ್ಷಣೀಯ ಸ್ಥಳ.[೬][೭]

ಉಲ್ಲೇಖ[ಬದಲಾಯಿಸಿ]

  1. http://www.keralatourism.org/malabar/posadi-gumpe-kasaragod.php
  2. http://posadigumpe.blogspot.com/
  3. https://www.pinterest.com/pin/856598791600146222/
  4. https://www.tourtokeralam.com/posadigumpe-hill-station/
  5. http://www.onefivenine.com/india/villages/Kasaragod/Manjeshwar/Bayar
  6. https://www.google.co.in/search?q=posadi%20gumpe&rlz=1C1CHBD_enIN792IN792&oq=posadi+gumpe&aqs=chrome.0.69i59j0l3.3583j0j7&sourceid=chrome&ie=UTF-8&npsic=0&rflfq=1&rlha=0&rllag=12664163,75024900,1614&tbm=lcl&rldimm=9619439274000942977&ved=2ahUKEwiGtPvysMvdAhUG54MKHcceBRsQvS4wAHoECAAQJw&rldoc=1&tbs=lrf:!2m1!1e2!2m1!1e3!2m1!1e16!3sIAE,lf:1,lf_ui:1#rlfi=hd:;si:9619439274000942977;mv:!3m12!1m3!1d14881.671650278473!2d75.02490085!3d12.664163299999998!2m3!1f0!2f0!3f0!3m2!1i130!2i367!4f13.1;tbs:lrf:!2m1!1e2!2m1!1e3!2m1!1e16!3sIAE,lf:1,lf_ui:1
  7. https://www.keralatourism.org/destination/possadi-gumpe-kasaragod/503