ಗೀತು ಅನ್ನಾ ಜೋಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Geethu Anna Jose
Southern Railways
Center
ವೈಯಕ್ತಿಕ ಮಾಹಿತಿ
ಜನನKerala, India
ರಾಷ್ಟ್ರೀಯತೆಭಾರತ Indian
ಪಟ್ಟಿ ಮಾಡಲಾದ ಎತ್ತರ6 ft 3 in
ವೃತ್ತಿ ಮಾಹಿತಿ
ಪರ ವೃತ್ತಿಜೀವನ೨೦೦೪ (International)
೨೦೦೨ (Junior International)–present http://www.geethuannajose.co.nr/

ಗೀತು ಅನ್ನಾ ಜೋಸ್ (ಜನನ ೩೦ ಜೂನ್ ೧೯೮೫)ಒಬ್ಬ ಭಾರತೀಯ ಬ್ಯಾಸ್ಕೆಟ್ ಬಾಲ್ ಆಟಗಾರ್ತಿ.[೧] ಪ್ರಸಕ್ತ ಈಕೆ ಭಾರತದ ರಾಷ್ಟ್ರೀಯ ಬ್ಯಾಸ್ಕೆಟ್ ಬಾಲ್ ತಂಡದ ನಾಯಕಿಯಾಗಿದ್ದಾರೆ. (ಮಹಿಳೆಯರ)[೨] ಕೇರಳ ಜೂನಿಯರ್ ಬ್ಯಾಸ್ಕೆಟ್ ಬಾಲ್ ಅಸೋಸಿಯೇಶನ್, ಇಂಡಿಯಾ, ಅವರ ಜೂನಿಯರ್ ಅಸೋಸಿಯೇಶನ್ ಆಗಿದೆ. ದಕ್ಷಿಣ ರೈಲ್ವೆಗೆ ಅವರು ೨೦೦೩ರಲ್ಲಿ ಸೇರ್ಪಡೆಯಾದರು.[೧] ನಂತರ ಅವರು ೨೦೦೬, ೨೦೦೭ರಲ್ಲಿ ರಿಂಗ್ ವುಡ್ (ಆಸ್ಟ್ರೇಲಿಯ) ಹಾಕ್ಸ್ ಪರ ಹಾಗು ೨೦೦೮ರ ಋತುವಿನಲ್ಲಿ ಬಿಗ್ V ಪರ ಆಡಿದರು. ಅಲ್ಲದೇ ಈ ನಡುವೆ ಆಸ್ಟ್ರೇಲಿಯನ್ WNBL ೨೦೦೮/೦೯ ಕ್ರೀಡಾ ಋತುವಿನಲ್ಲಿ ದಂಡೆನೊಂಗ್ ಪರ ಆಡಲು ಆಯ್ಕೆಯಾದರು; ಆದರೆ ನಂತರ ಅವರು ಈ ಪ್ರಸ್ತಾಪ ತಳ್ಳಿಹಾಕಿದರು. ಆಸ್ಟ್ರೇಲಿಯದ ಒಂದು ಕ್ಲಬ್ ಪರ ವೃತ್ತಿಪರವಾಗಿ ಆಡಿದ ಅವರು, ಮೊದಲ ಭಾರತೀಯ ಮಹಿಳಾ ಬ್ಯಾಸ್ಕೆಟ್ ಬಾಲ್ ಆಟಗಾರ್ತಿ ಎನಿಸಿದ್ದಾರೆ.

ಗೀತು ೨೦೦೩ರಲ್ಲಿ ದಕ್ಷಿಣ ಭಾರತ ರೈಲ್ವೆಗೆ ಸೇರ್ಪಡೆಯಾಗುತ್ತಾರೆ. ತಂಡವು ೧೯೭೦ ಹಾಗು ೧೯೮೦ರಲ್ಲಿ ಭಾರತೀಯ ಚ್ಯಾಂಪಿಯನ್ಶಿಪ್ ಗಳಲ್ಲಿ ಉತ್ತಮ ಪ್ರದರ್ಶನ ತೋರಿತ್ತು, ಆದರೆ ಕೆಲವು ನಿರ್ಬಂಧಗಳಿಂದಾಗಿ ಸ್ವಲ್ಪ ದಿನಗಳ ಮಟ್ಟಿಗೆ ತನ್ನ ಸಾಮರ್ಥ್ಯದಲ್ಲಿ ಇಳಿಮುಖತೆ ಪ್ರದರ್ಶಿಸಿತು. ಇವರು ಹಲವು ಅತ್ಯುತ್ತಮ ಗೋಲ್ಡನ್ ಎರಾ (ಸುವರ್ಣಯುಗದ) ಆಟಗಾರರ ಮಾದರಿಯಲ್ಲಿ ಕೇರಳದ ಕೊಟ್ಟಾಯಂ ತಂಡದ ಪರವಾಗಿಯೂ ಸಹ ಉತ್ತಮ ಆಟ ಪ್ರದರ್ಶಿದ್ದರು. ರೈಲ್ವೇಸ್ ತಂಡಕ್ಕೆ ಸೇರ್ಪಡೆಗೊಳ್ಳುವ ಮುಂಚೆಯೂ ಉತ್ತಮವಾಗಿ ಆಡಿದ್ದಾರೆ. ಬ್ಯಾಸ್ಕೆಟ್ ಬಾಲ್ ಚ್ಯಾಂಪಿಯನ್ಶಿಪ್ಸ್ ನಲ್ಲಿ ಕೇರಳ ತಂಡವನ್ನು ಪ್ರತಿನಿಧಿಸಿದ ನಂತರ, ಇವರೊಂದಿಗೆ ದಕ್ಷಿಣ ರೈಲ್ವೆ ತಂಡವು ಕ್ರೀಡಾ ಒಪ್ಪಂದವೊಂದನ್ನು ಮಾಡಿಕೊಂಡಿತು. ಬ್ಯಾಸ್ಕೆಟ್ ಬಾಲ್ ಕ್ರೀಡೆಯನ್ನು ಹೊರತುಪಡಿಸಿದರೆ, ಮಾಡೆಲಿಂಗ್ ಅನ್ನು ವೃತ್ತಿಯಾಗಿ ಸ್ವೀಕರಿಸುವ ಬಗ್ಗೆಯೂ ಅವರು ಆಸಕ್ತಿ ಹೊಂದಿದ್ದಾರೆ.

ಅಂತಾರಾಷ್ಟ್ರೀಯ ಕ್ರೀಡಾ ಸಾಧನೆಗಳು[ಬದಲಾಯಿಸಿ]

 • ವಿಯೆಟ್ನಾಂನಲ್ಲಿ, ೨೦೦೯ರಲ್ಲಿ ನಡೆದ ಏಶಿಯನ್ ಇನ್ಡೋರ್ ಗೇಮ್ಸ್ ನಲ್ಲಿ ಭಾಗವಹಿಸಿ ೩-ಆನ್-೩ ಬ್ಯಾಸ್ಕೆಟ್ ಬಾಲ್ ನಲ್ಲಿ ರಜತ ಪದಕ [೩]
 • ಭಾರತೀಯ ತಂಡದ ನಾಯಕಿ, ೨೦೦೯ರಲ್ಲಿ ಚೆನ್ನೈನಲ್ಲಿ ನಡೆದ FIBA ಏಶಿಯನ್ ಬ್ಯಾಸ್ಕೆಟ್ ಬಾಲ್ ಚ್ಯಾಂಪಿಯನ್ಶಿಪ್ ನಲ್ಲಿ ಸೀನಿಯರ್ ಮಹಿಳಾ ವಿಭಾಗಕ್ಕೆ ನಾಯಕಿ
 • ಆಸ್ಟ್ರೇಲಿಯನ್ ಲೀಗ್ ಗಾಗಿ ೨೦೦೮ರಲ್ಲಿ ಆಕರ್ಷಣೀಯ ಆಟ,(ವರ್ಷದ ಅತ್ಯಮೂಲ್ಯ ಆಟಗಾರ್ತಿ)[೪][೫]
 • ಆಸ್ಟ್ರೇಲಿಯನ್ ಲೀಗ್ ಗಾಗಿ ೨೦೦೮ರಲ್ಲಿ ಆಡಿದ್ದು (ಜುಲೈ ತಿಂಗಳ ಉತ್ತಮ ಆಟಗಾರ್ತಿ ಪ್ರಶಸ್ತಿ)
 • ಜೂನ್ ೩ ರಿಂದ ೧೦, ೨೦೦೭, ಇಂಚೆಯೋನ್, ದಕ್ಷಿಣ ಕೊರಿಯ FIBA ಮಹಿಳೆಯರ ಏಶಿಯ ಚ್ಯಾಂಪಿಯನ್ಶಿಪ್ ನಲ್ಲಿ ಪೂಲ್-Bಯಲ್ಲಿ ಜಯ[೬]
 • ೨೦೦೬ರ ಮಾರ್ಚ್ ೧೫ ರಿಂದ ೨೬, ಮೆಲ್ಬಾರ್ನ್ (ಆಸ್ಟ್ರೇಲಿಯ) ಕಾಮನ್ವೆಲ್ತ್ ಗೇಮ್ಸ್. "ಅತ್ಯಮೂಲ್ಯ ಆಟಗಾರ್ತಿ" ಹಾಗು ಅಗ್ರ ಸ್ಕೋರರ್ ಎಂದು ಪ್ರಶಸ್ತಿಗಳು, ಉತ್ತಮ ರೀಬೌಂಡರ್(ಹಿನ್ನೆಗೆದ ಚೆಂಡನ್ನು ಹಿಡಿಯುವುದರಲ್ಲಿ ನಿಪುಣತೆ) ಹಾಗು ಪಂದ್ಯಾವಳಿಯಲ್ಲಿ ಅತ್ಯುತ್ತಮ ಶಾಟ್ ಬ್ಲಾಕರ್ ಪ್ರಶಸ್ತಿಗಳು.[೧]
 • ೨೦೦೬ರ ಮಾರ್ಚ್ ೭ ರಿಂದ ೧೨, ಆಕ್ಲೆಂಡ್, ನ್ಯೂಜಿಲೆಂಡ್ ಸೌಹಾರ್ದ ಪಂದ್ಯ ಸರಣಿ
 • ೨೦೦೬ರಲ್ಲಿ ವೃತ್ತಿಪರ ಲೀಗ್ ಗಾಗಿ ಆಟ (ರಿಂಗ್ ವುಡ್ ಹಾಕ್ಸ್ ಕ್ಲಬ್, ಮೆಲ್ಬಾರ್ನ್, ಆಸ್ಟ್ರೇಲಿಯ(ತಿಂಗಳ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ-೨೦೦೬ (ಜುಲೈ ತಿಂಗಳು)
 • ೨೦೦೬ರ ಸೆಪ್ಟೆಂಬರ್ ೨೨ ರಿಂದ ೨೫, ಫುಕೆಟ್, ಥೈಲ್ಯಾಂಡ್, ಮೊದಲ ಫುಕೆಟ್ ಇಂಟರ್ನ್ಯಾಷನಲ್ ಇನ್ವಿಟೇಶನಲ್ ಬ್ಯಾಸ್ಕೆಟ್ ಬಾಲ್ ಚ್ಯಾಂಪಿಯನ್ಶಿಪ್ ನಲ್ಲಿ ಚಿನ್ನ[೧](ಐದು ಪ್ರಶಸ್ತಿಗಳು, MVP, ಉತ್ತಮ ಆಟಗಾರ್ತಿ, ಅಗ್ರ ಸ್ಕೋರರ್, ಅಗ್ರ ರೀಬೌಂಡರ್, ಹಾಗು ಅತ್ಯಂತ ಜನಪ್ರಿಯ ಆಟಗಾರ್ತಿ ಪ್ರಶಸ್ತಿ)
 • ೨೦೦೫ ಜನವರಿ ೧೩ ರಿಂದ ೧೯, ಸೆಂಡೈ, ಜಪಾನ್, ಸೀನಿಯರ್ ಮಹಿಳಾ ವಿಭಾಗದ ೨೦ನೇ ಏಶಿಯನ್ ಬ್ಯಾಸ್ಕೆಟ್ ಬಾಲ್ ಕಾನ್ಫೆಡರೇಶನ್ ಚ್ಯಾಂಪಿಯನ್ಶಿಪ್ ನಲ್ಲಿ ರಜತ ಪದಕ
 • ಜಪಾನ್ ನಲ್ಲಿ ಸೀನಿಯರ್ ABC - ೨೦೦೪
 • ಮಲೇಶಿಯದಲ್ಲಿ ಆಹ್ವಾನ ಪಂದ್ಯಾವಳಿ - ೨೦೦೪
 • ಚೈನೀಸ್ ತೈಪೆಯಲ್ಲಿ ಜೂನಿಯರ್ ABC - ೨೦೦೨

ಪ್ರಶಸ್ತಿಗಳು ಮತ್ತು ಸಾಧನೆಗಳು[ಬದಲಾಯಿಸಿ]

 • ಏಷಿಯಾದ ಅಗ್ರ ಸ್ಕೋರರ್
 • ೨೦೦೯ರಲ್ಲಿ ವಿಯೆಟ್ನಾಂನಲ್ಲಿ ನಡೆದ ಏಶಿಯನ್ ಇನ್ಡೋರ್ ಗೇಮ್ಸ್ ನಲ್ಲಿ ಭಾಗವಹಿಸಿ ೩-ಆನ್-೩ ಬ್ಯಾಸ್ಕೆಟ್ ಬಾಲ್ ನಲ್ಲಿ ರಜತ ಪದಕ
 • ಚೆನ್ನೈನಲ್ಲಿ ಆಯೋಜಿಸಲಾಗಿದ್ದ ABCಯ ಅಗ್ರ ಸ್ಕೋರರ್ – ೨೦೦೯
 • WNBLಗಾಗಿ ಆಯ್ಕೆ – ೨೦೦೮
 • ಐದು ಬಾರಿ ಭಾರತೀಯ ರೈಲ್ವೇಸ್ ನ ಪ್ರತಿನಿಧಿ ಹಾಗು ಐದು ಬಾರಿ ೨೦೦೪-೨೦೦೮ರವರೆಗೂ ಸೀನಿಯರ್ ನ್ಯಾಶನಲ್ಸ್ ನಲ್ಲಿ ಗೆಲುವು(ಅನುಕ್ರಮವಾಗಿ ಲುಧಿಯಾನ, ಪುಣೆ,ಜೈಪುರ,ಪಾಂಡಿಚೆರ್ರಿ,ಹಾಗು ಸೂರತ್)
 • ಆಸ್ಟ್ರೇಲಿಯನ್ ಲೀಗ್ ಗಾಗಿ ಆಟ ಹಾಗು ವರ್ಷದ ಅತ್ಯಮೂಲ್ಯ ಆಟಗಾರ್ತಿ ಪ್ರಶಸ್ತಿ - ೨೦೦೮
 • ಆಸ್ಟ್ರೇಲಿಯನ್ ಲೀಗ್ ಗಾಗಿ ಆಟ(ಜುಲೈ ತಿಂಗಳ ಉತ್ತಮ ಆಟಗಾರ್ತಿ ಪ್ರಶಸ್ತಿ) - ೨೦೦೭
 • ಆಸ್ಟ್ರೇಲಿಯನ್ ಲೀಗ್ ಗಾಗಿ ಆಟ(ತಿಂಗಳ ಆಟಗಾರ್ತಿ ಪ್ರಶಸ್ತಿ) - ೨೦೦೬ (ಜುಲೈ ತಿಂಗಳು)
 • ಫುಕೆಟ್ ನಲ್ಲಿ ನಡೆದ ಆಹ್ವಾನ ಪಂದ್ಯಾವಳಿಯಲ್ಲಿ ಆಟ(ಐದು ಪ್ರಶಸ್ತಿಗಳ ಗಳಿಕೆ, MVP, ಉತ್ತಮ ಆಟಗಾರ್ತಿ, ಅಗ್ರ ಸ್ಕೋರರ್, ಅಗ್ರ ರೀಬೌಂಡರ್ ಹಾಗು ಅತ್ಯಂತ ಜನಪ್ರಿಯ ಆಟಗಾರ್ತಿ ಪ್ರಶಸ್ತಿ) - ೨೦೦೫

ರಾಷ್ಟ್ರೀಯ ಕ್ರೀಡಾ ಸಾಧನೆ[ಬದಲಾಯಿಸಿ]

ಗೀತು ಅನ್ನಾ ಜೋಸ್
 • ಪಂಜಾಬ್ ನಲ್ಲಿ ನಡೆದ ಜೂನಿಯರ್ ನ್ಯಾಶನಲ್ಸ್ -೨೦೦೩
 • ಹೈದರಾಬಾದ್ ನಲ್ಲಿ ನಡೆದ ಸೀನಿಯರ್ ನ್ಯಾಶನಲ್ಸ್ -೨೦೦೩
 • ಗೋವಾದಲ್ಲಿ ನಡೆದ ಜೂನಿಯರ್ ನ್ಯಾಶನಲ್ಸ್ -೨೦೦೧
 • M.Pಯಲ್ಲಿ ನಡೆದ ಯೂತ್ ಚ್ಯಾಂಪಿಯನ್ಶಿಪ್ -೨೦೦೦(ಕೇರಳದ ಪರ)

ಭಾರತೀಯ ರೈಲ್ವೇಸ್ ಪರ ಸಾಧನೆ[ಬದಲಾಯಿಸಿ]

 • ಲುಧಿಯಾನದಲ್ಲಿ ಆಯೋಜಿಸಲಾಗಿದ್ದ ೬೦ನೇ ಸೀನಿಯರ್ ನ್ಯಾಶನಲ್ಸ್ ನಲ್ಲಿ ಭಾರತೀಯ ರೈಲ್ವೇಸ್ ತಂಡದ ಪ್ರತಿನಿಧಿ: (೨೦೦೯–೨೦೧೦)(ಜಯ)
 • ಸೂರತ್ ನಲ್ಲಿ ಆಯೋಜಿಸಲಾಗಿದ್ದ ೫೯ನೇ ಸೀನಿಯರ್ ನ್ಯಾಶನಲ್ಸ್ ನಲ್ಲಿ ಭಾರತೀಯ ರೈಲ್ವೇಸ್ ತಂಡದ ಪ್ರತಿನಿಧಿ:(೨೦೦೯–೨೦೧೦)(ಜಯ)
 • ಪಾಂಡಿಚೆರ್ರಿಯಲ್ಲಿ ಆಯೋಜಿಸಲಾಗಿದ್ದ ೫೮ನೇ ಸೀನಿಯರ್ ನ್ಯಾಶನಲ್ಸ್ ನಲ್ಲಿ ಭಾರತೀಯ ರೈಲ್ವೇಸ್ ತಂಡದ ಪ್ರತಿನಿಧಿ: (೨೦೦೭)(ಜಯ)
 • ಜೈಪುರದಲ್ಲಿ ಆಯೋಜಿಸಲಾಗಿದ್ದ ೫೭ನೇ ಸೀನಿಯರ್ ನ್ಯಾಶನಲ್ಸ್ ನಲ್ಲಿ ಭಾರತೀಯ ರೈಲ್ವೇಸ್ ತಂಡದ ಪ್ರತಿನಿಧಿ: (೨೦೦೬-೨೦೦೭)(ಜಯ)


 • ಪುಣೆಯಲ್ಲಿ ಆಯೋಜಿಸಲಾಗಿದ್ದ ೫೬ನೇ ಸೀನಿಯರ್ ನ್ಯಾಶನಲ್ಸ್ ನಲ್ಲಿ ಭಾರತೀಯ ರೈಲ್ವೇಸ್ ತಂಡದ ಪ್ರತಿನಿಧಿ: (೨೦೦೫–೨೦೦೬)(ಜಯ)
 • ಲೂಧಿಯಾನದಲ್ಲಿ ಆಯೋಜಿಸಲಾಗಿದ್ದ ೫೫ನೇ ಸೀನಿಯರ್ ನ್ಯಾಶನಲ್ಸ್ ನಲ್ಲಿ ಭಾರತೀಯ ರೈಲ್ವೇಸ್ ತಂಡದ ಪ್ರತಿನಿಧಿ: (೨೦೦೪–೨೦೦೫)(ಜಯ)


ಅಂತರ ರೈಲ್ವೇಸ್ ಪರ ಸಾಧನೆ[ಬದಲಾಯಿಸಿ]

 • ಜಬಲ್ಪುರದಲ್ಲಿ ೨೦೦೯ರಲ್ಲಿ ಆಯೋಜಿಸಲಾಗಿದ್ದ ೩೩ನೇ ಆಲ್ ಇಂಡಿಯ ರೈಲ್ವೆ ಬ್ಯಾಸ್ಕೆಟ್ ಬಾಲ್ ಚ್ಯಾಂಪಿಯನ್ಶಿಪ್ ನಲ್ಲಿ ಆಟ- (ಜಯ)
 • ಗುವಹಾಟಿಯಲ್ಲಿ ೨೦೦೮ರಲ್ಲಿ ಆಯೋಜಿಸಲಾಗಿದ್ದ ೩೨ನೇ ಆಲ್ ಇಂಡಿಯ ರೈಲ್ವೆ ಬ್ಯಾಸ್ಕೆಟ್ ಬಾಲ್ ಚ್ಯಾಂಪಿಯನ್ಶಿಪ್ ನಲ್ಲಿ ಆಟ-(ಮೂರನೇ ಸ್ಥಾನ)
 • ಚೆನ್ನೈನಲ್ಲಿ ೨೦೦೭ರಲ್ಲಿ ಆಯೋಜಿಸಲಾಗಿದ್ದ ೩೧ನೇ ಆಲ್ ಇಂಡಿಯ ರೈಲ್ವೆ ಬ್ಯಾಸ್ಕೆಟ್ ಬಾಲ್ ಚ್ಯಾಂಪಿಯನ್ಶಿಪ್ ನಲ್ಲಿ ಆಟ-(ಜಯ)
 • ೨೦೦೬ರಲ್ಲಿ ಗುವಹಾಟಿಯಲ್ಲಿ ಆಯೋಜಿಸಲಾಗಿದ್ದ ೩೦ನೇ ಆಲ್ ಇಂಡಿಯ ರೈಲ್ವೆ ಬ್ಯಾಸ್ಕೆಟ್ ಬಾಲ್ ಚ್ಯಾಂಪಿಯನ್ಶಿಪ್ ನಲ್ಲಿ ಆಟ-(ಜಯ)
 • ಗೊರಖಪುರದಲ್ಲಿ ಆಯೋಜಿಸಲಾಗಿದ್ದ ೨೦೦೫ರಲ್ಲಿನ ೨೯ನೇ ಆಲ್ ಇಂಡಿಯ ರೈಲ್ವೆ ಬ್ಯಾಸ್ಕೆಟ್ ಬಾಲ್ ಚ್ಯಾಂಪಿಯನ್ಶಿಪ್ ನಲ್ಲಿ ಆಟ-(ಉಪಾಂತ್ಯ ವಿಜಯಿ)
 • ಆಗಿನ RDSO-ಲಕ್ನೌನಲ್ಲಿ ಆಯೋಜಿಸಲಾಗಿದ್ದ ೨೦೦೪ರಲ್ಲಿನ ೨೮ನೇ ಆಲ್ ಇಂಡಿಯ ರೈಲ್ವೆ ಬ್ಯಾಸ್ಕೆಟ್ ಬಾಲ್ ಚ್ಯಾಂಪಿಯನ್ಶಿಪ್ ನಲ್ಲಿ ಆಟ(ಜಯ)
 • ಆಗ DLW-ವಾರಣಾಸಿಯಲ್ಲಿ ಆಯೋಜಿಸಲಾಗಿದ್ದ ೨೦೦೩ರಲ್ಲಿನ ೨೭ನೇ ಆಲ್ ಇಂಡಿಯ ರೈಲ್ವೆ ಬ್ಯಾಸ್ಕೆಟ್ ಬಾಲ್ ಚ್ಯಾಂಪಿಯನ್ಶಿಪ್ ನಲ್ಲಿ ಆಟ-(ಮೂರನೇ ಸ್ಥಾನ)

ಫೆಡರೇಶನ್ ಕಪ್[ಬದಲಾಯಿಸಿ]

 • ರೂರ್ಕೆಲಾದಲ್ಲಿ ೨೦೦೭ರಲ್ಲಿ ಆಯೋಜಿಸಲಾಗಿದ್ದ ೨೩ನೇ ಫೆಡರೇಶನ್ ಕಪ್ ನಲ್ಲಿ ದಕ್ಷಿಣ ರೈಲ್ವೆ ತಂಡದ ಪ್ರತಿನಿಧಿ(ಉಪಾಂತ ವಿಜಯಿ,ರನ್ನರ್ಸ್)
 • ದಕ್ಷಿಣ ರೈಲ್ವೆ ತಂಡ ಪ್ರತಿನಿಧಿಸಿದ್ದಾಗ ೨೦೦೫ರಲ್ಲಿ ಭಾವನಗರ್ ನಲ್ಲಿ ಆಯೋಜಿಸಿದ್ದ ೨೧ನೇ ಫೆಡರೇಶನ್ ಕಪ್ ನಲ್ಲಿ ಗೆಲುವು(ಜಯ)

ಶಿಕ್ಷಣ[ಬದಲಾಯಿಸಿ]

 • ಮೌಂಟ್ ಕಾರ್ಮಲ್ ಆಂಗ್ಲ ಮಾಧ್ಯಮ ಶಾಲೆ, ಕೊಟ್ಟಾಯಂ
 • ಅಸಂಪ್ಶನ್ ಕಾಲೇಜ್, ಚಂಗನಚೆರ್ರಿ

ಕುಟುಂಬ[ಬದಲಾಯಿಸಿ]

ಗೀತು, ಕೇರಳದ ಕೊಟ್ಟಾಯಂನಲ್ಲಿ ಒಂದು ಕ್ಯಾಥೊಲಿಕ್ ಕುಟುಂಬದಲ್ಲಿ ಜನಿಸಿದ್ದಾರೆ.[ಸೂಕ್ತ ಉಲ್ಲೇಖನ ಬೇಕು] ಕ್ಲಬ್ ನ ಪರ ಆಟವಾಡುತ್ತಿದ್ದ ಇವರ ಸಹೋದರನನ್ನು ಹೊರತುಪಡಿಸಿ ಇವರ ಕುಟುಂಬವು ಬ್ಯಾಸ್ಕೆಟ್ ಬಾಲ್ ಆಡುವ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರಲಿಲ್ಲ. ಎಳೆವಯದಲ್ಲಿ ಸ್ವಲ್ಪ ದಿನಗಳ ಮಟ್ಟಿಗೆ ವಾಲಿಬಾಲ್ ಆಡುತ್ತಿದ್ದರು. ತಮ್ಮ ಆಕರ್ಷಕ ಎತ್ತರದಿಂದಾಗಿ ಭಾರತದ ಮಹಿಳಾ ವಾಲಿಬಾಲ್ ತಂಡಕ್ಕೂ ಅರ್ಹತೆ ಪಡೆಯಬಹುದಿತ್ತು, ಆದರೆ ಇವರು ಬ್ಯಾಸ್ಕೆಟ್ ಬಾಲ್ ನ್ನು ಆಯ್ಕೆ ಮಾಡಿಕೊಂಡರು.

 • ತಂದೆ: (ದಿ.) ಜೋಸ್ ಥಾಮಸ್(ಪುಲಿಕ್ಕಲ್ ಮನೆ, ಕೊಲ್ಲಡ್, ಕೊಟ್ಟಾಯಂ)
 • ತಾಯಿ: ರೋಸಮ್ಮ ಜೋಸ್ (ಇವರು ಕೊಲ್ಲಮನ ಕುಟುಂಬಕ್ಕೆ ಸೇರಿದವರಾಗಿದ್ದಾರೆ, ವಲಪ್ಪಲ್ಲಿ, ಚಂಗನಚೆರ್ರಿ)
 • ಸಹೋದರಿ: ನೀತು ಎಲ್ಸಾ ಜೋಸ್, ಇವರು ಶ್ರೀ. ವಿಜೋ ಜಚರಿಯರನ್ನು ವರಿಸಿದ್ದಾರೆ
 • ಸಹೋದರ : ಟಾಮ್ ಜೋಸ್ (ಇವರೂ ಸಹ ಬ್ಯಾಸ್ಕೆಟ್ ಬಾಲ್ ಆಟಗಾರ)

ಉಲ್ಲೇಖಗಳು[ಬದಲಾಯಿಸಿ]

 1. ೧.೦ ೧.೧ ೧.೨ ೧.೩ "Shooting star". ದಿ ಹಿಂದೂ. 2006-06-08. Archived from the original on 2012-11-04. Retrieved 2009-05-14.
 2. "Geethu to lead". ದಿ ಹಿಂದೂ. 2009-09-11. Archived from the original on 2009-09-18. Retrieved 2009-10-30.
 3. "ಆರ್ಕೈವ್ ನಕಲು". Archived from the original on 2016-03-03. Retrieved 2021-08-10.
 4. "ಆರ್ಕೈವ್ ನಕಲು". Archived from the original on 2008-09-18. Retrieved 2010-12-14.
 5. "ಆರ್ಕೈವ್ ನಕಲು". Archived from the original on 2012-10-05. Retrieved 2010-12-14.
 6. http://www.fiba.com/pages/eng/fe/07/fibaAsia/wome/news/inte/p/newsid/19644/FE_news_inteArti.html Archived 2012-10-05 ವೇಬ್ಯಾಕ್ ಮೆಷಿನ್ ನಲ್ಲಿ.

ಬಾಹ್ಯ ಕೊಂಡಿಗಳು[ಬದಲಾಯಿಸಿ]

1.http://www.hindu.com/mp/2006/06/08/stories/2006060800410800.htm
2. http://www.fiba.com/pages/eng/fe/07/fibaAsia/wome/news/inte/p/newsid/19644/FE_news_inteArti.html Archived 2012-10-05 ವೇಬ್ಯಾಕ್ ಮೆಷಿನ್ ನಲ್ಲಿ.
3. http://www.hindu.com/2007/10/13/stories/2007101363952400.htm Archived 2007-10-14 ವೇಬ್ಯಾಕ್ ಮೆಷಿನ್ ನಲ್ಲಿ.
4. http://www.hindu.com/2007/10/10/stories/2007101057052000.htm Archived 2007-10-13 ವೇಬ್ಯಾಕ್ ಮೆಷಿನ್ ನಲ್ಲಿ.
5. http://www.pbachennai.com/newshonour.html Archived 2009-10-03 ವೇಬ್ಯಾಕ್ ಮೆಷಿನ್ ನಲ್ಲಿ.
6. http://sports.indiainfo.com/article/0903030551_geethu/314776.html[ಶಾಶ್ವತವಾಗಿ ಮಡಿದ ಕೊಂಡಿ]
7. http://www.hindu.com/tss/tss3026/stories/20070630009203600.htm Archived 2012-11-05 ವೇಬ್ಯಾಕ್ ಮೆಷಿನ್ ನಲ್ಲಿ.
8.http://www.fiba.com/pages/eng/fe/07/fibaAsia/wome/teamPlay/play/p/competitioncode//eventid/3971/langlc/en/playernumber/61606/roundid/3971/season//teamnumber/301/fe_teamPlay_playStat.html[ಶಾಶ್ವತವಾಗಿ ಮಡಿದ ಕೊಂಡಿ]
9.http://www.fiba.com/pages/eng/fe/07/fibaAsia/wome/teamPlay/team/p/eventid/3971/langlc/en/lid_15366_newsid/19836/roundid/3971/teamnumber/2607/fe_teamPlay_teamRostNews.html[ಶಾಶ್ವತವಾಗಿ ಮಡಿದ ಕೊಂಡಿ]
10.http://www.dandenongbasketball.com.au/show_news_item.asp?news=73