ಗಾವಳಿ, ಉಡುಪಿ
ಗಾವಳಿಯು ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿರುವ ಒಂದು ಗ್ರಾಮವಾಗಿದ್ದು, ಇಲ್ಲಿ ಇತಿಹಾಸಪೂರ್ವ ಶಿಲಾ ಚಿತ್ರಗಳು ಕಂಡುಬರುತ್ತವೆ.
ಪುರಾತತ್ವ ಸಂಶೋಧನೆಗಳು
[ಬದಲಾಯಿಸಿ]ಗಾವಳಿಯ ಗ್ರಾಮದೇವತೆ ಬ್ರಹ್ಮಸ್ಥಾನ ದೇವಾಲಯದ ಸಮೀಪ ಬಂಡೆಯ ಮೇಲೆ ಕಲ್ಲಿನ ರೇಖಾಚಿತ್ರಗಳು ಕೆತ್ತನೆಯ ರೂಪದಲ್ಲಿವೆ. ಭಾರತೀಯ ಮೂಲದ್ದೇ ಆಗಿರುವ ಅಮೆರಿಕಾದ 'ಬ್ರಹ್ಮನ್' ಹಸುವಿನ ಆಕೃತಿಯನ್ನು ಬಂಡೆಯ ಮೇಲೆ ಕೆತ್ತಲಾಗಿದೆ ಮತ್ತು ಈ ರೇಖಾ ರೇಖಾಚಿತ್ರವನ್ನು ರಂಗೋಲಿ ರೇಖಾಚಿತ್ರಗಳಿಗೆ ವಿಸ್ತರಿಸಲಾಗಿದೆ. [೧] ಬಂಡೆಗಳ ಮೇಲೆ ಇದೇ ರೀತಿಯ ಕೆತ್ತನೆಯ ರೇಖಾಚಿತ್ರಗಳು ಹಿರೇ ಬೆಣಕಲ್, ಬಳ್ಳಾರಿ ಜಿಲ್ಲೆಯ ರಾಂಪುರ, ಉತ್ತರ ಕನ್ನಡ ಜಿಲ್ಲೆಯ ಸೋಂದಾದಲ್ಲಿ ಕಂಡುಬರುತ್ತವೆ. [೨]
ಈ ಸ್ಥಳದಲ್ಲಿ ಹೊಸ ಶಿಲಾಯುಗಕ್ಕೆ ಸೇರಿದ ಒಂದು ಬದಿಯ ಆಯುಧದ ರೂಪದಂತೆ ಕಾಣಿಸುವ ಕಲ್ಲಿನ ಉಪಕರಣಗಳು ಮತ್ತು ಮರಳುಗಲ್ಲಿನ ಆಯುಧಗಳು ಕಂಡುಬಂದಿವೆ. [೩] ಇಂತಹ ಆಯುಧಗಳನ್ನು ಡೊಲೊರೈಟ್ ಕಲ್ಲಿನಿಂದ ತಯಾರಿಸಲಾಗುತ್ತದೆ ಮತ್ತು ಅವುಗಳು ಉತ್ತಮವಾದ ಮೇಲ್ಮೈಯನ್ನು ಹೊಂದಿರುತ್ತದೆ ಮತ್ತು ಈಟಿಯನ್ನು ಹೋಲುತ್ತದೆ. [೪]
ಕ್ರಿಸ್ತಪೂರ್ವ ೮೦೦-೬೦೦ ಇಸವಿಯದ್ದೆಂದು ಗುರುತಿಸಲಾದ, ಸಮುದ್ರಮಟ್ಟದಿಂದ 250 ಅಡಿ ಎತ್ತರದಲ್ಲಿ ಸ್ಥಿತಗೊಂಡಿರುವ ಈ ಸ್ಥಳವನ್ನು ಪ್ರಸಿದ್ಧ ಇತಿಹಾಸಕಾರ ಡಾ.ಎ.ಸುಂದರ ಅವರು ಗುರುತಿಸಿರುತ್ತಾರೆ. ಇಲ್ಲಿ ಕಂಡುಬಂದಿರುವ ಕಲ್ಲಿನ ಆಯುಧಗಳು ಕ್ರಿ.ಪೂ. 2000-1500 BCE ರಷ್ಟು ಹಳೆಯದ್ದೆಂದೂ ಗುರುತಿಸಲಾಗಿದೆ. [೫]
ಉಡುಪಿ ಜಿಲ್ಲೆಯಲ್ಲಿ ಕಂಡುಬರುವ ಮಧ್ಯಶಿಲಾಯುಗದ ತಾಣಗಳಾದ ಅವರ್ಸೆ, ಮಸಿಕೆರೆ, ಗುಡ್ಡೆಟ್ಟು, ಕೊಳನಕಲ್ಲು, ನಂಚಾರು, ಪೇತ್ರಿ ಸಮೀಪದ ಸಾಸ್ತಾವು ಇತ್ಯಾದಿಗಳ ಪಟ್ಟಿಯಲ್ಲಿ ಗಾವಳಿಯನ್ನೂ ಸೇರಿಸಲಾಗಿದೆ. [೬]
ಈ ಪುಟವನ್ನೂ ನೋಡಿ
[ಬದಲಾಯಿಸಿ]ಬಾಹ್ಯ ಕೊಂಡಿಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ Dr. A, Sundara. "Pre historic art in Karnataka". Indira Gandhi National Centre for Arts(IGNCA). Archived from the original on 15 July 2013. Retrieved 4 August 2012.
- ↑ kannada, classical.org. "Mural Paintings of Karnataka". classicalkannada.org. Archived from the original on 12 April 2013. Retrieved 4 August 2012.
- ↑ DHNS. "Stone Age weapons and carvings found at Gavali, Kundapur". brahmavara.com/news. Retrieved 4 August 2012.
- ↑ Udayavani. "Neolithic weapons found". Udayavani 20.7.2010. Retrieved 4 August 2012.[ಮಡಿದ ಕೊಂಡಿ]
- ↑ mega media, news. "Gavali in Udupi points a new stone Age-site: Several stone weapons discovered". megamedianews dt.20.7.2012. Archived from the original on 4 March 2016. Retrieved 4 August 2012.
{{cite web}}
:|first=
has generic name (help) - ↑ Vol.31, Issue 1 (2006). Man and Environment. New Delhi: Indian Society for Prehistoric and Quaternary Studies. p. 42.
{{cite book}}
: CS1 maint: numeric names: authors list (link)