ವಿಷಯಕ್ಕೆ ಹೋಗು

ಗಲಿ ಬಾಯ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಲಿ ಬಾಯ್
ಚಿತ್ರಮಂದಿರ ಬಿಡುಗಡೆಯ ಭಿತ್ತಿಪತ್ರ
ನಿರ್ದೇಶನಜ಼ೋಯಾ ಅಖ್ತರ್
ನಿರ್ಮಾಪಕ
 • ಫ಼ರ್ಹಾನ್ ಅಖ್ತರ್
 • ಜ಼ೋಯಾ ಅಖ್ತರ್
 • ರಿತೇಶ್ ಸಿಧ್ವಾನಿ
ಲೇಖಕವಿಜಯ್ ಮೌರ್ಯ
(ಸಂಭಾಷಣೆ)
ಚಿತ್ರಕಥೆರೀಮಾ ಕಾಗ್ತಿ
ಜ಼ೋಯಾ ಅಖ್ತರ್
ಕಥೆರೀಮಾ ಕಾಗ್ತಿ
ಜ಼ೋಯಾ ಅಖ್ತರ್
ಪಾತ್ರವರ್ಗ
 • ರಣ್‍ವೀರ್ ಸಿಂಗ್
 • ಆಲಿಯಾ ಭಟ್
 • ಸಿದ್ಧಾಂತ್ ಚತುರ್ವೇದಿ
ಸಂಗೀತಹಾಡುಗಳು:
ಧ್ವನಿವಾಹಿನಿ ವಿಭಾಗ ನೋಡಿ
ಸಂಗೀತ:
ಕರ್ಶ್ ಕಾಳೆ
ದ ಸ್ಯಾಲ್ವೇಜ್ ಆಡಿಯೊ ಕಲೆಕ್ಟಿವ್
ಛಾಯಾಗ್ರಹಣಜಯ್ ಓಜ಼ಾ
ಸಂಕಲನನಿತಿನ್ ಬೆಯ್ದ್
ಸ್ಟುಡಿಯೋ
 • ಎಕ್ಸೆಲ್ ಎಂಟರ್ಟೇನ್‍ಮಂಟ್
 • ಟೈಗರ್ ಬೇಬಿ ಫ಼ಿಲ್ಮ್ಸ್
ವಿತರಕರು
 • ಎಎ ಫ಼ಿಲ್ಮ್ಸ್
  ಜ಼ೀ ಸ್ಟೂಡಿಯೋಸ್
  ಸಿನೆಸ್ತಾನ್ ಫ಼ಿಲ್ಮ್ ಕಂಪನಿ
  ಸ್ರಾಡ್ವನ್ ಪ್ರೊಡಕ್ಷನ್
ಬಿಡುಗಡೆಯಾಗಿದ್ದು
 • 9 ಫೆಬ್ರವರಿ 2019 (2019-02-09) (ಬರ್ಲಿನ್)[೧]
 • 14 ಫೆಬ್ರವರಿ 2019 (2019-02-14) (ಭಾರತ)[೨]
ಅವಧಿ153 ನಿಮಿಷಗಳು[೩]
ದೇಶಭಾರತ
ಭಾಷೆಹಿಂದಿ
ಬಂಡವಾಳರೂ. 40 ಕೋಟಿ[೪]
ಬಾಕ್ಸ್ ಆಫೀಸ್ಅಂದಾಜು ರೂ. 238.16 ಕೋಟಿ[೫]

ಗಲಿ ಬಾಯ್ ೨೦೧೯ರ ಒಂದು ಹಿಂದಿ ಸಂಗೀತಪ್ರಧಾನ ನಾಟಕೀಯ ಚಲನಚಿತ್ರ. ಇದನ್ನು ಜ಼ೋಯಾ ಅಖ್ತರ್ ನಿರ್ದೇಶಿಸಿದ್ದಾರೆ ಮತ್ತು ಜ಼ೋಯಾ ಅಖ್ತರ್ ಹಾಗೂ ರೀಮಾ ಕಾಗ್ತಿ ಬರೆದಿದ್ದಾರೆ. ಚಿತ್ರವನ್ನು ಟೈಗರ್ ಬೇಬಿ ಫ಼ಿಲ್ಮ್ಸ್ ಹಾಗೂ ಎಕ್ಸೆಲ್ ಎಂಟರ್ಟೆನ್‍ಮಂಟ್ ಪ್ರೊಡಕ್ಷನ್ಸ್ ಲಾಂಛನದಡಿ ರಿತೇಶ್ ಸಿಧ್ವಾನಿ, ಜ಼ೋಯಾ ಅಖ್ತರ್ ಹಾಗೂ ಫರಾನ್ ಅಖ್ತರ್ ನಿರ್ಮಾಣ ಮಾಡಿದ್ದಾರೆ. ನಾಸ್ ಚಿತ್ರದ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದಾರೆ. ಮುಖ್ಯ ಪಾತ್ರಗಳಲ್ಲಿ ರಣ್ವೀರ್ ಸಿಂಗ್ ಮತ್ತು ಆಲಿಯಾ ಭಟ್ ನಟಿಸಿದ್ದರೆ, ಪೋಷಕ ಪಾತ್ರಗಳಲ್ಲಿ ಕಲ್ಕಿ ಕೆಕ್ಲ್ಞಾ, ಸಿದ್ಧಾಂತ್ ಚತುರ್ವೇದಿ ಮತ್ತು ವಿಜಯ್ ರಾಜ಼್ ನಟಿಸಿದ್ದಾರೆ. ಭಾರತೀಯ ಬೀದಿ ರ್‍ಯಾಪರ್‌ಗಳಾದ ಡಿವೈನ್ ಮತ್ತು ನೇಜ಼ಿಯ ಜೀವನಗಳಿಂದ ಸ್ಫೂರ್ತಿಪಡೆದ ಈ ಚಿತ್ರವು ಮುಂಬಯಿಯ ಧಾರಾವಿ ಕೊಳಗೇರಿ ಪ್ರದೇಶಗಳ ಒಬ್ಬ ಆಕಾಂಕ್ಷಿ ಬೀದಿ ರ್‍ಯಾಪರ್ ಬಗ್ಗೆ ಇರುವ ಪ್ರೌಢತ್ವಕ್ಕೆ ಬರುವ ಕಥೆಯಾಗಿದೆ.[೬].

ಗಲಿ ಬಾಯ್ ಚಿತ್ರದ ಪ್ರಧಾನ ಛಾಯಾಗ್ರಹಣವು ಜನವರಿ ೨೦೧೮ರಲ್ಲಿ ಆರಂಭವಾಗಿ ಏಪ್ರಿಲ್ ೨೦೧೮ರಲ್ಲಿ ಮುಕ್ತಾಯವಾಯಿತು. ಬರ್ಲಿನ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ೯ ಫ಼ೆಬ್ರುವರಿ ೨೦೧೯ರಂದು ಈ ಚಿತ್ರದ ಪ್ರಥಮ ಪ್ರದರ್ಶನವಾಯಿತು. ಈ ಚಿತ್ರವು ೧೫ ಫ಼ೆಬ್ರುವರಿ ೨೦೧೯ರಂದು ಬಿಡುಗಡೆಯಾಗಿ ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಜಾಗತಿಕವಾಗಿ $37 ದಶಲಕ್ಷಕ್ಕಿಂತ ಹೆಚ್ಚು ಗಳಿಸಿದ ಈ ಚಿತ್ರವು ವರ್ಷದ ಏಳನೇ ಅತಿ ಹೆಚ್ಚು ಹಣಗಳಿಸಿದ ಹಿಂದಿ ಚಿತ್ರವೆಂದು ಹೊರಹೊಮ್ಮಿತು.[೭] ೯೨ನೇ ಅಕ್ಯಾಡೆಮಿ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರಕ್ಕೆ ಭಾರತೀಯ ಸ್ಪರ್ಧಿಯಾಗಿ ಈ ಚಿತ್ರವನ್ನು ಆಯ್ಕೆಮಾಡಲಾಯಿತು, ಆದರೆ ಈ ಚಿತ್ರವು ನಾಮನಿರ್ದೇಶನಗೊಳ್ಳಲಿಲ್ಲ.[೮][೯] ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ (ಸಿಂಗ್) ಮತ್ತು ಅತ್ಯುತ್ತಮ ನಟಿ ಪ್ರಶಸ್ತಿ ಸೇರಿದಂತೆ, ಗಲಿ ಬಾಯ್ ದಾಖಲೆ ೧೩ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಗೆದ್ದಿತು ಮತ್ತು ಕುಛ್ ಕುಛ್ ಹೋತಾ ಹೆ (೧೯೯೮) ನಂತರ ಎಲ್ಲ ನಾಲ್ಕು ನಟನಾ ಪ್ರಶಸ್ತಿಗಳನ್ನು ಗೆದ್ದ ಎರಡನೇ ಚಿತ್ರವೆನಿಸಿಕೊಂಡಿತು.[೧೦]

ಕಥಾವಸ್ತು

[ಬದಲಾಯಿಸಿ]

ಅಂತಿಮ ವರ್ಷದ ಕಾಲೇಜು ವಿದ್ಯಾರ್ಥಿಯಾದ ಮುರಾದ್ ಅಹ್ಮದ್ (ರಣ್‍ವೀರ್ ಸಿಂಗ್) ಮುಂಬಯಿಯ ಧಾರಾವಿ ಕೊಳೆಗೇರಿ ಪ್ರದೇಶಗಳಲ್ಲಿ ವಾಸಿಸುತ್ತಿರುತ್ತಾನೆ. ಅವನ ನಿಂದಿಸುವ ಅಪ್ಪ ಆಫ಼್ತಾಬ್ ಶಾಕಿರ್ ಅಹ್ಮದ್ (ವಿಜಯ್ ರಾಜ಼್) ಬಹಳ ಯುವ ಎರಡನೇ ಹೆಂಡತಿಯನ್ನು ಮನೆಗೆ ತರುತ್ತಾನೆ. ಇದು ಕುಟುಂಬಕ್ಕೆ ಬಹಳ ಯಾತನೆ ಉಂಟುಮಾಡುತ್ತದೆ. ಮುರಾದ್ ರ್‍ಯಾಪ್ ಸಂಗೀತದ ಬಗ್ಗೆ ಮೋಹ ಬೆಳೆಸಿಕೊಂಡಿರುತ್ತಾನೆ. ಅವನ ದೀರ್ಘಕಾಲದ ಮತ್ತು ಪ್ರತ್ಯಕ್ಷವಾಗಿ ಸ್ವಾಮ್ಯ ಪ್ರವೃತ್ತಿಯ ಗೆಳತಿ ಸಫ಼ೀನಾ ಫ಼ಿರ್ದೌಸಿ (ಆಲಿಯಾ ಭಟ್) ಶಸ್ತ್ರವೈದ್ಯೆಯಾಗಲು ತರಬೇತಿ ಪಡೆಯುತ್ತಿರುತ್ತಾಳೆ ಮತ್ತು ಅವನನ್ನು ವಾಡಿಕೆಯಿಂದ ರಹಸ್ಯವಾಗಿ ಭೇಟಿಯಾಗುತ್ತಿರುತ್ತಾಳೆ.

ಅವನ ತಂದೆ ಗಾಯಗೊಂಡ ನಂತರ ಅವನು ಅರೆಕಾಲಿಕವಾಗಿ ಕಾರುಚಾಲಕನಾಗಿ ಕೆಲಸಮಾಡಬೇಕಾಗುತ್ತದೆ. ಈ ಸಮಯದಲ್ಲಿ ಮುರಾದ್ ಬರೆಯಲು ಆರಂಭಿಸುತ್ತಾನೆ, ಮತ್ತು ಅವನ ಸಾಹಿತ್ಯವು ಅವನು ಕೆಲಸ ಮಾಡುವಾಗ ಗಮನಿಸುವ ಅಸಮಾನತೆಗಳಿಂದ ಪ್ರೇರಿತವಾಗಿರುತ್ತದೆ. ತನ್ನ ಕಾಲೇಜಿನ ಉತ್ಸವದಲ್ಲಿ ಪ್ರದರ್ಶನ ನೀಡಿದ್ದಾಗ ನೋಡಿ ಸ್ಥಳೀಯ ರ್‍ಯಾಪರ್ ಶ್ರೀಕಾಂತ್ "ಎಮ್‍ಸಿ ಶೇರ್" ಭೋಸ್ಲೆಯ ಪರಿಚಯವಾಗಿ (ಸಿದ್ಧಾಂತ್ ಚತುರ್ವೇದಿ), ಮುರಾದ್ ಭೂಗತ ಕಾರ್ಯಕ್ರಮಗಳು ಮತ್ತು ರ್‍ಯಾಪ್ ಕಾಳಗಗಳಲ್ಲಿ ತನ್ನ ಸಾಹಿತ್ಯವನ್ನು ಪ್ರದರ್ಶಿಸುವುದಕ್ಕೆ ಆಕರ್ಷಿತನಾಗುತ್ತಾನೆ ಮತ್ತು ಅಂತಿಮವಾಗಿ ಯೂಟ್ಯೂಬ್‍ಗೆ ಒಂದು ವೀಡಿಯೊವನ್ನು ಅಪ್‍ಲೋಡ್ ಮಾಡುತ್ತಾನೆ.

ವೀಡಿಯೊವನ್ನು ನೋಡಿದ ನಂತರ, ಬೆಳೆಯುತ್ತಿರುವ ಸಂಗೀತಗಾರ್ತಿಯಾದ ಬರ್ಕಲಿ ಕಾಲೇಜಿನ ವಿದ್ಯಾರ್ಥಿನಿ ಶ್ವೇತಾ "ಸ್ಕೈ" ಮೆಹ್ತಾ (ಕಲ್ಕಿ ಕೆಕ್ಲ್ಞಾ) ಮುರಾದ್‍ ಮತ್ತು ಶೇರ್‌ರನ್ನು ಸಂಪರ್ಕಿಸಿ ಒಂದು ಹೊಸ ಹಾಡಿನ ಮೇಲೆ ಒಟ್ಟಾಗಿ ಕೆಲಸ ಮಾಡುವ ಪ್ರಸ್ತಾಪ ಮಾಡುತ್ತಾಳೆ. ಧಾರಾವಿಯಲ್ಲಿ ಚಿತ್ರೀಕರಿಸಲಾದ ಜೊತೆಗಿರುವ ವೀಡಿಯೊ ಕ್ಷಿಪ್ರವಾಗಿ ಜನಪ್ರಿಯವಾಗುತ್ತದೆ. ಮುರಾದ್ ಸ್ಕೈಳೊಂದಿಗೆ ಒಂದು ನಿಕಟ ಕ್ಷಣವನ್ನು ಹಂಚಿಕೊಳ್ಳುತ್ತಾನೆ, ಮತ್ತು ನಂತರ ಸಫ಼ೀನಾಗೆ ಅದರ ಬಗ್ಗೆ ಸುಳ್ಳು ಹೇಳುತ್ತಾನೆ. ಸಫ಼ೀನಾಗೆ ಸತ್ಯ ಗೊತ್ತಾದಾಗ, ಅವಳು ಸ್ಕೈ ವಿರುದ್ಧ ಹಿಂಸಾತ್ಮಕವಾಗಿ ವರ್ತಿಸಿ ಸ್ಕೈ ತಲೆಗೆ ಬಿಯರ್‌ನ ಬಾಟಲಿಯಿಂದ ಹೊಡೆಯುತ್ತಾಳೆ.

ಪರಿಣಾಮವಾಗಿ, ಅವಳನ್ನು ಪೋಲಿಸರು ಕರೆತರುತ್ತಾರೆ ಆದರೆ ಸ್ಕೈ ಅವಳ ವಿರುದ್ಧ ದೂರು ನೀಡದಿದ್ದರಿಂದ ಅವಳನ್ನು ಬಂಧಿಸಲಾಗುವುದಿಲ್ಲ. ಅಂತಿಮವಾಗಿ ಅವಳ ಸ್ವಾಮ್ಯಸೂಚಕ ಮನೋಭಾವದ ಕಾರಣ ಮುರಾದ್ ಸಫ಼ೀನಾಳೊಂದಿಗೆ ಸಂಬಂಧ ಕಡಿದುಕೊಳ್ಳುತ್ತಾನೆ. ತನ್ನ, ತನ್ನ ಸೋದರ, ಮತ್ತು ತನ್ನ ತಾಯಿಯ ವಿಷಯದಲ್ಲಿ ಆಫ಼್ತಾಬ್‍ನ ಹಿಂಸೆ ಹೆಚ್ಚಾದಾಗ, ಮುರಾದ್ ತನ್ನ ತಾಯಿ ಮತ್ತು ಸೋದರನೊಂದಿಗೆ ಮನೆ ಬಿಟ್ಟು ಪೂರ್ಣ ಸಮಯ ತನ್ನ ಚಿಕ್ಕಪ್ಪ ಅತೀಕ್ ಖಾನ್‍ನಿಗಾಗಿ (ವಿಜಯ್ ಮೌರ್ಯ) ಕೆಲಸಮಾಡಲು ನಿರ್ಧರಿಸುತ್ತಾನೆ.

ನಂತರ, ಸ್ಕೈ ಅವನ ಬಗ್ಗೆ ತನಗಿರುವ ಪ್ರೇಮದ ಅನಿಸಿಕೆಗಳನ್ನು ವ್ಯಕ್ತಪಡಿಸಿದಾಗ, ಅವನು ಇನ್ನೂ ಸಫ಼ೀನಾಳನ್ನು ಪ್ರೀತಿಸುತ್ತಿರುವುದರಿಂದ ಅವಳನ್ನು ನಿರಾಕರಿಸಿ ಸಫ಼ೀನಾಳೊಂದಿಗೆ ರಾಜಿ ಮಾಡಿಕೊಳ್ಳಲು ನಿರ್ಧರಿಸುತ್ತಾನೆ. ನ್ಯಾಸ್‍ನೊಂದಿಗೆ ಅವನ ಮುಂಬೈ ಸಂಗೀತ ಮೇಳದಲ್ಲಿ ಪ್ರದರ್ಶನ ನೀಡಲು ಮುರಾದ್ ಮತ್ತು ಶೇರ್ ಒಂದು ಸ್ಪರ್ಧೆಯನ್ನು ಪ್ರವೇಶಿಸುತ್ತಾರೆ. ಒಂದು ಯಶಸ್ವಿ ರ್‍ಯಾಪ್ ಕಾಳಗದ ನಂತರ ಮುರಾದ್ ಫ಼ೈನಲ್ ಪ್ರವೇಶಿಸುತ್ತಾನೆ. ತನ್ನ ಪ್ರದರ್ಶನಗಳ ಬಗ್ಗೆ ರ್‍ಯಾಪ್ ಅಭಿಮಾನಿಗಳ ಮೆಚ್ಚುಗೆ ಮತ್ತು ಅವರೊಂದಿಗೆ ಭೇಟಿಯಾದಾಗ ಮುರಾದ್‍ನ ಆತ್ಮವಿಶ್ವಾಸ ಬೆಳೆಯುತ್ತದೆ. ಅಂತಿಮವಾಗಿ ಆಫ಼್ತಾಬ್ ಮತ್ತು ಅತೀಕ್ ಅವನ ತೀವ್ರಾಸಕ್ತಿಯನ್ನು ತೃಣೀಕರಿಸಿದಾಗ ಅವನು ಅದಕ್ಕೆ ಆಕ್ಷೇಪಿಸುತ್ತಾನೆ. ನಂತರ ಅವನು ಸಫ಼ೀನಾಳೊಂದಿಗೆ ರಾಜಿ ಮಾಡಿಕೊಳ್ಳುತ್ತಾನೆ. ಅವನು ಸ್ಪರ್ಧೆಯನ್ನು ಗೆದ್ದು ಭಾರತದ ಅಗ್ರ ರ್‍ಯಾಪರ್‌ಗಳಲ್ಲಿ ಒಬ್ಬನಾಗುತ್ತಾನೆ. ಅವನು ತನ್ನ ಆರಂಭಿಕ ಪ್ರದರ್ಶನವನ್ನು ಆರಂಭಿಸುವುದನ್ನು ಅವನ ಸ್ನೇಹಿತರು, ಕುಟುಂಬ ಮತ್ತು ಸಫ಼ೀನಾ ಸಂತೋಷದಿಂದ ನೋಡುತ್ತಿರುವುದರೊಂದಿಗೆ ಚಲನಚಿತ್ರವು ಮುಗಿಯುತ್ತದೆ.

ಪಾತ್ರವರ್ಗ

[ಬದಲಾಯಿಸಿ]
 • ಮುರಾದ್ ಅಹ್ಮದ್ ಉರ್ಫ್ ಗಲಿ ಬಾಯ್ ಪಾತ್ರದಲ್ಲಿ ರಣ್‍ವೀರ್ ಸಿಂಗ್
 • ಸಫ಼ೀನಾ ಫ಼ಿರ್ದೌಸಿ ಪಾತ್ರದಲ್ಲಿ ಆಲಿಯಾ ಭಟ್
 • ಶ್ರೀಕಾಂತ್ ಭೋಸ್ಲೆ ಉರ್ಫ್ ಎಮ್‍ಸಿ ಶೇರ್ ಪಾತ್ರದಲ್ಲಿ ಸಿದ್ಧಾಂತ್ ಚತುರ್ವೇದಿ
 • ಆಫ಼್ತಾಬ್ ಅಹ್ಮದ್ ಪಾತ್ರದಲ್ಲಿ ವಿಜಯ್ ರಾಜ಼್
 • ಮೋಯೀನ್ ಆರಿಫ಼್ ಪಾತ್ರದಲ್ಲಿ ವಿಜಯ್ ವರ್ಮಾ
 • ರಜ಼ಿಯಾ ಅಹ್ಮದ್ ಪಾತ್ರದಲ್ಲಿ ಅಮೃತಾ ಸುಭಾಷ್
 • ನಾಸಿರ್ ಫ಼ಿರ್ದೌಸಿ ಪಾತ್ರದಲ್ಲಿ ಇಖ್ಲಾಕ್ ಖಾನ್
 • ಹಮೀದಾ ಫ಼ಿರ್ದೌಸಿ ಪಾತ್ರದಲ್ಲಿ ಶೀಬಾ ಚಡ್ಢಾ
 • ಶ್ವೇತಾ ಉರ್ಫ್ ಸ್ಕೈ ಪಾತ್ರದಲ್ಲಿ ಕಲ್ಕಿ ಕೆಕ್ಲ್ಞಾ
 • ಸಫ಼ೀನಾ ಸೋದರನ ಪಾತ್ರದಲ್ಲಿ ಅಯಾನ್ ಜ಼ುಬೇರ್ ರಹ್ಮನಿ
 • ಚಿಂಟೂ ಪಾತ್ರದಲ್ಲಿ ರಾಹುಲ್ ಪಿಸ್ಕೆ
 • ದಾದಿ ಪಾತ್ರದಲ್ಲಿ ಜ್ಯೋತಿ ಸುಭಾಷ್
 • ಸಲ್ಮಾನ್ ಪಾತ್ರದಲ್ಲಿ ನಕುಲ್ ರೋಶನ್ ಸಹದೇವ್
 • ಮಾಯಾ ಪಾತ್ರದಲ್ಲಿ ಶ್ರುತಿ ಚೌಹಾಣ್
 • ಆತೀಕ್ ಖಾನ್ ಪಾತ್ರದಲ್ಲಿ ವಿಜಯ್ ಮೌರ್ಯ
 • ಆಲ್ಬೀನಾ ದಾದರ್ಕರ್ ಪಾತ್ರದಲ್ಲಿ ಸೃಷ್ಟಿ ಶ್ರೀವಾಸ್ತವ
 • ಸುಹಾನಿ ಪಾತ್ರದಲ್ಲಿ ಮಲಿಕಾ ಸಿಂಗ್
 • ಪರ್ವೀನ್ ಪಾತ್ರದಲ್ಲಿ ಟೀನಾ ಭಾಟಿಯಾ
 • ರಿಶಿ ಪಾತ್ರದಲ್ಲಿ ರಾಹಿಲ್ ಗಿಲಾನಿ
 • ಶಾಹ್ ರೂಲ್ ಪಾತ್ರದಲ್ಲಿ ರಾಹುಲ್ ಶಹಾನಿ
 • ಸುಹೇಲ್ ಪಾತ್ರದಲ್ಲಿ ಸ್ವರ್ ಕಾಂಬ್ಳೆ
 • ಎಮ್‍ಸಿ ಚೆಕ್‍ಮೇಟ್ ಪಾತ್ರದಲ್ಲಿ ಚೈತನ್ಯ ಶರ್ಮಾ
 • ಜೂಹಿ ಪಾತ್ರದಲ್ಲಿ ಜಸ್ಲೀನ್ ರಾಯಲ್
 • ಗೆಮಾ ಪಾತ್ರದಲ್ಲಿ ಮೈಕೇಲಾ ತನ್ವರ್
 • ಸ್ಕಾರ್ಲೆಟ್ ಪಾತ್ರದಲ್ಲಿ ಕುಬ್ರಾ ಸೇಟ್
 • ಸ್ವಪಾತ್ರದಲ್ಲಿ ಮಂಜ್ ಮ್ಯೂಸಿಕ್
 • ಸ್ವಪಾತ್ರದಲ್ಲಿ ಕೃಷ್ಣಾ
 • ಸ್ವಪಾತ್ರದಲ್ಲಿ ಬಿಲಾಲ್ ಶೇಖ್
 • ಚಾಲಕನ ಪಾತ್ರದಲ್ಲಿ ಓಮಿ ಕಶ್ಯಪ್
 • ಸ್ವಪಾತ್ರದಲ್ಲಿ ರಾಜಾ ಕುಮಾರಿ
 • ಎಮಿವೇ ಬಂಟಾಯ್ ಪಾತ್ರದಲ್ಲಿ ಎಮಿವೇ
 • ಸ್ವಪಾತ್ರದಲ್ಲಿ ಡಿವೈನ್

ಧ್ವನಿವಾಹಿನಿ

[ಬದಲಾಯಿಸಿ]

ಧ್ವನಿವಾಹಿನಿಯಲ್ಲಿ ೧೮ ಹಾಡುಗಳಿದ್ದು ಇದನ್ನು ೧೨ ಜನವರಿ ೨೦೧೯ರಂದು ಬಿಡುಗಡೆ ಮಾಡಲಾಯಿತು.

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯसंगीतकारಗಾಯಕ(ರು)ಸಮಯ
1."ಅಸ್ಲಿ ಹಿಪ್ ಹಾಪ್"ಸ್ಪಿಟ್‍ಫ಼ಾಯರ್ಸ್ಪಿಟ್‍ಫ಼ಾಯರ್ರಣ್‍ವೀರ್ ಸಿಂಗ್1:40
2."ಮೇರೆ ಗಲಿ ಮೇ"
 • ಡಿವೈನ್
 • ನೇಜ಼ಿ
 • ಡಿವೈನ್
 • ನೇಜ಼ಿ
 • ಸೇಜ಼್ ಆನ್ ದ ಬೀಟ್
 • ರಣ್‌ವೀರ್ ಸಿಂಗ್
 • ಡಿವೈನ್
 • ನೇಜ಼ಿ
3:05
3."ದೂರಿ ಪೋಯಮ್"ಜಾವೇದ್ ಅಖ್ತರ್ರಿಶಿ ರಿಚ್ರಣ್‍ವೀರ್ ಸಿಂಗ್1:05
4."ದೂರಿ"
 • ಜಾವೇದ್ ಅಖ್ತರ್
 • ಡಿವೈನ್
ರಿಶಿ ರಿಚ್ರಣ್‍ವೀರ್ ಸಿಂಗ್2:15
5."ಟ್ರೇನ್ ಸಾಂಗ್"
 • ಜಾವೇದ್ ಅಖ್ತರ್
 • ಕರ್ಶ್ ಕಾಳೆ
 • ಗೌರವ್ ರೈನಾ
 • ತಪನ್ ರಾಜ್
 • ಮಿಡಿವಲ್ ಪಂಡಿತ್ಸ್
 • ಕರ್ಶ್ ಕಾಳೆ
 • ರಘು ದೀಕ್ಷಿತ್
 • ರಘು ದೀಕ್ಷಿತ್
 • ಕರ್ಶ್ ಕಾಳೆ
3:58
6."ಜಿಂಗೋಸ್ತಾನ್ ಬೀಟ್‍ಬಾಕ್ಸ್"ಡಬ್ ಶರ್ಮಾಡಬ್ ಶರ್ಮಾಡಬ್ ಶರ್ಮಾ2:21
7."ಶೇರ್ ಆಯಾ ಶೇರ್"ಡಿವೈನ್ಚಂದ್ರಶೇಖರ್ ಕುಂದರ್ಡಿವೈನ್2:14
8."ಜಹ್ಞಾ ತೂ ಚಲಾ"ಆದಿತ್ಯ ಶರ್ಮಾಜಸ್ಲೀನ್ ರಾಯಲ್ಜಸ್ಲೀನ್ ರಾಯಲ್2:20
9."ಆಜ಼ಾದಿ"
 • ಡಿವೈನ್
 • ಡಬ್ ಶರ್ಮಾ
 • ಡಿವೈನ್
 • ಡಬ್ ಶರ್ಮಾ
 • ಡಿವೈನ್
 • ಡಬ್ ಶರ್ಮಾ
2:35
10."ಕಬ್ ಸೇ ಕಬ್ ತಕ್"
 • ಕಾಮ್ ಭಾರಿ
 • ಅಂಕುರ್ ತಿವಾರಿ
 • ಅಂಕುರ್ ತಿವಾರಿ
 • ಕರ್ಶ್ ಕಾಳೆ
 • ರಣ್‍ವೀರ್ ಸಿಂಗ್
 • ವಿಭಾ ಸರಾಫ಼್
3:33
11."ಕಾಮ್ ಭಾರಿ"ಕಾಮ್ ಭಾರಿಟೆಂಪ್ಲೇಟು:Hlistಅಂಕುರ್ ತಿವಾರಿಕಾಮ್ ಭಾರಿ2:18
12."ಏಕ್ ಹೀ ರಾಸ್ತಾ"ಜಾವೇದ್ ಅಖ್ತರ್ರಿಶಿ ರಿಚ್ರಣ್‍ವೀರ್ ಸಿಂಗ್1:11
13."ಅಪ್ನಾ ಟೈಮ್ ಆಯೇಗಾ"
 • ಡಿವೈನ್
 • ಅಂಕುರ್ ತಿವಾರಿ
 • ಡಬ್ ಶರ್ಮಾ
 • ಡಿವೈನ್
 • ರಣ್‍ವೀರ್ ಸಿಂಗ್
 • ಡಿವೈನ್
2:20
14."ಜೀನೆ ಮೇ ಆಯೆ ಮಜ಼ಾ"ಅಂಕುರ್ ತಿವಾರಿ
 • ಅಂಕುರ್ ತಿವಾರಿ
 • ಮೈಕಿ ಮೆಕ್ಲಿಯರಿ
ಅಂಕುರ್ ತಿವಾರಿ3:19
15."ಹರ್ ಗಮ್ ಮೇ ಖುಶಿ ಹೇ"ಏಸ್ಇಶ್ಕ್ ಬೆಕ್ಟರ್ಏಸ್2:48
16."ಜಿಂಗೋಸ್ತಾನ್"ಡಬ್ ಶರ್ಮಾಡಬ್ ಶರ್ಮಾಡಬ್ ಶರ್ಮಾ2:34
17."ಗೋರಿಯೆ"
 • ಭಿಂದರ್ ಖಾನ್‍ಪುರಿ
 • ಅರ್ಜುನ್
 • ಬ್ಲಿಟ್ಝ್
 • ದೇಸಿ ಮಾ
 • ಪ್ರೇಮ್
 • ಹರ್ದೀಪ್
 • ಕಾಕಾ ಭನಿಯಾವಾಲಾ
 • ಅರ್ಜುನ್
 • ಬ್ಲಿಟ್ಝ್
 • ದೇಸಿ ಮಾ
3:48
18."ಇಂಡಿಯಾ 91"
 • ಎಮ್‍ಸಿ ಅಲ್ತಾಫ಼್
 • ಎಮ್‍ಸಿ ತೋಡ್‍ಫ಼ೋಡ್
 • 100 ಆರ್‌ಬಿಎ‍ಚ್
 • ಮಹಾರ್ಯಾ
 • ನಾಕ್ಷಿಯಸ್ ಡಿ
 • ಎಮ್‍ಸಿ ಮವಾಲಿ
 • ವಿವೇಕ್ ರಾಜಗೋಪಾಲನ್
 • ಅಕ್ಷಯ್ ಧವನ್
 • ಎಮ್‍ಸಿ ಅಲ್ತಾಫ಼್
 • ಎಮ್‍ಸಿ ತೋಡ್‍ಫ಼ೋಡ್
 • 100 ಆರ್‌ಬಿಎಚ್
 • ಮಹಾರ್ಯಾ
 • ನಾಕ್ಷಿಯಸ್ ಡಿ
3:14
ಒಟ್ಟು ಸಮಯ:46:38

ಮಾರಾಟಗಾರಿಕೆ ಮತ್ತು ಬಿಡುಗಡೆ

[ಬದಲಾಯಿಸಿ]

ಚಿತ್ರದ ಮೊದಲ ನೋಟದ ಅಧಿಕೃತ ಭಿತ್ತಿಪತ್ರವನ್ನು ೧ ಜನವರಿ ೨೦೧೯ರಂದು ಬಿಡುಗಡೆ ಮಾಡಲಾಯಿತು.[೨] ಚಿತ್ರದ ಅಧಿಕೃತ ಟ್ರೇಲರ್‌ನ್ನು ೯ ಜನವರಿ ೨೦೧೯ರಂದು ಬಿಡುಗಡೆ ಮಾಡಲಾಯಿತು.[೧೧]

ಕೆಲವು ಬರಹಗಾರರು ಗಲಿ ಬಾಯ್ ಮತ್ತು ಎಮಿನೆಮ್ ಅಭಿನಯದ ಏಟ್ ಮೈಲ್ (೨೦೦೨) ಚಿತ್ರದ ನಡುವಿನ ಹೋಲಿಕೆಗಳ ಬಗ್ಗೆ ಅನುಮಾನಿಸಿದರು. ಆದರೆ ನಿರ್ದೇಶಕಿ ಜ಼ೋಯಾ ಅಖ್ತರ್ ಈ ಆರೋಪಗಳನ್ನು ನಿರಾಕರಿಸಿದರು.

ಹೋಮ್ ವೀಡಿಯೊ

[ಬದಲಾಯಿಸಿ]

ಚಿತ್ರವನ್ನು ವಿಒಡಿ ಆಗಿ ಪ್ರೈಮ್ ವೀಡಿಯೊದಲ್ಲಿ ೧೬ ಎಪ್ರಿಲ್ ೨೦೧೯ ರಂದು ಲಭ್ಯವಾಗಿಸಲಾಯಿತು.[೧೨]

ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ

[ಬದಲಾಯಿಸಿ]

ವಿಮರ್ಶಾತ್ಮಕ ಪ್ರತಿಕ್ರಿಯೆ

[ಬದಲಾಯಿಸಿ]

ಗಲಿ ಬಾಯ್ ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯುತು. ಅಖ್ತರ್‌ರ ನಿರ್ದೇಶನ, ಮೌರ್ಯರ ಸಂಭಾಷಣೆ ಮತ್ತು ಸಿಂಗ್, ಚತುರ್ವೇದಿ ಹಾಗೂ ಭಟ್‍ರ ಅಭಿನಯಗಳನ್ನು ಪ್ರಶಂಸಿಸಲಾಯಿತು.[೧೩][೧೪][೧೫]

ಬಾಕ್ಸ್ ಆಫ಼ಿಸ್

[ಬದಲಾಯಿಸಿ]

ಈ ಚಲನಚಿತ್ರವು ಭಾರತದಲ್ಲಿ ₹೧೬೫.೫೮ crore ಕೋಟಿ ಮತ್ತು ವಿದೇಶದಲ್ಲಿ ₹೭೨.೫೮ crore ಕೋಟಿಯಷ್ಟು ಗಳಿಸಿತು ಮತ್ತು ಇದರ ಒಟ್ಟಾರೆ ವಿಶ್ವಾದ್ಯಂತ ಹಣಗಳಿಕೆಯು ₹೨೪೫.೨೧ crore ಕೋಟಿಯಷ್ಟಾಯಿತು.[೧೬]

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು

[ಬದಲಾಯಿಸಿ]

ಈ ಚಲನಚಿತ್ರವು ೬೫ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ೧೩ ಪ್ರಶಸ್ತಿಗಳನ್ನು ಗೆದ್ದು ೨೦೦೬ರಲ್ಲಿ ೧೧ ಪ್ರಶಸ್ತಿಗಳನ್ನು ಗೆದ್ದ ಬ್ಲ್ಯಾಕ್ ಚಿತ್ರದ ದಾಖಲೆಯನ್ನು ಮುರಿಯಿತು.[೧೭][೧೮] ಜೊತೆಗೆ, ಈ ಚಿತ್ರವು ೨೬ನೇ ಸ್ಕ್ರೀನ್ ಪ್ರಶಸ್ತಿ ಸಮಾರಂಭದಲ್ಲಿ ೧೨ ಪ್ರಶಸ್ತಿಗಳು ಮತ್ತು ಜ಼ೀ ಸಿನೆ ಪ್ರಶಸ್ತಿ ಸಮಾರಂಭದಲ್ಲಿ ೯ ಪ್ರಶಸ್ತಿಗಳನ್ನು ಗೆದ್ದಿತು.[೧೯][೨೦]

ಉಲ್ಲೇಖಗಳು

[ಬದಲಾಯಿಸಿ]
 1. "Ranveer Singh, Alia Bhatt, Zoya Akhtar take Gully Boy global. See pics from Berlin Film Festival". Hindustan Times. 9 February 2019.
 2. ೨.೦ ೨.೧ "Ranveer Singh, Alia Bhatt share first Gully Boy poster". Hindustan Times. 1 January 2019. Retrieved 1 January 2019.
 3. "Gully Boy 2019 | British Board of Film Classification". Bbfc.co.uk. 7 February 2019. Archived from the original on 17 ಡಿಸೆಂಬರ್ 2019. Retrieved 28 ಏಪ್ರಿಲ್ 2020.
 4. Dogra, Tavishi (2 February 2019). "Bollywood goes big on budget! Here are the top mega budget upcoming movies of 2019". The Financial Express. Retrieved 18 February 2019.
 5. "Gully Boy Box Office Collection till Now - Bollywood Hungama". Bollywood Hungama. Retrieved 17 April 2019.
 6. "Meet the real-life Gully Boys, Divine and Naezy". The New Indian Express. Archived from the original on 16 ಫೆಬ್ರವರಿ 2019. Retrieved 14 February 2019.
 7. "Bollywood Top Grossers Worldwide". Bollywood Hungama. Retrieved 27 June 2019.
 8. "Ranveer Singh starrer Gully Boy is India's entry for Oscars 2020". 21 September 2019.
 9. "'Gully Boy': Ranveer Singh and Alia Bhatt starrer is out of the Oscars 2020 race, read more - Times of India". The Times of India (in ಇಂಗ್ಲಿಷ್). Retrieved 17 December 2019.
 10. "Filmfare Awards 2020 full list of winners: Gully Boy's 13 wins make history, Alia Bhatt and Ranveer Singh take top awards". Hindustan Times. 16 February 2020. Retrieved 17 February 2020.
 11. "Gully Boy - Official Trailer - Ranveer Singh - Alia Bhatt - Zoya Akhtar".
 12. "Gully Boy Is Now Available on Amazon Prime Video in India". NDTV Gadgets 360.
 13. "QuickE: Amol Palekar on NGMA Controversy; 'Gully Boy' Reviews". Thequint.com. 10 February 2019. Retrieved 14 February 2019.
 14. "Gully Boy FIRST reviews out! Ranveer Singh's career best performance, Alia Bhatt is terrific say critics and fans - Bollywood News". Timesnownews.com. Retrieved 14 February 2019.
 15. Jha, Shefali (10 February 2019). "Gully Boy movie reviews: Ranveer Singh's career best, Alia a firecracker, say Rajeev Masand & Anupama Chopra". Ibtimes.co.in. Retrieved 14 February 2019.
 16. "Gully Boy Box Office Collection till Now". Bollywood Hungama. Retrieved 11 April 2019.
 17. Bagrecha, Vayushi (16 February 2020). "Gully Boy Bags 13 Awards At Filmfare; Breaks All the Records". LADPOINT. Archived from the original on 21 ಮಾರ್ಚ್ 2020. Retrieved 14 March 2020.
 18. "Farhan Akhtar ecstatic as Gully Boy breaks record to win most awards for a single film ever at Filmfare 2020". PINKVILLA (in ಇಂಗ್ಲಿಷ್). Archived from the original on 24 ಮಾರ್ಚ್ 2020. Retrieved 14 March 2020.
 19. "Gully Boy dominates Star Screen Awards 2019 - Full list of winners". The New Indian Express. Retrieved 24 March 2020.
 20. "Gully Boy Grabs Maximum Awards Yet Again at Zee Cine Awards 2020". India Forums (in ಇಂಗ್ಲಿಷ್). Retrieved 24 March 2020.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]