ಗಣಿಗಲ ತೋರ

ವಿಕಿಪೀಡಿಯ ಇಂದ
Jump to navigation Jump to search
ಗಣಿಗಲ ತೋರ
Barringtonia racemosa1.JPG
Barringtonia racemosa flowers
Egg fossil classification
Kingdom:
(unranked):
(unranked):
Eudicots
(unranked):
Order:
Family:
Genus:
Species:
B. racemosa
Binomial nomenclature
Barringtonia racemosa
(L.) Spreng.
Synonym (taxonomy)
 • Barringtonia apiculata (Miers) R.Knuth [Illegitimate]
 • Barringtonia caffra (Miers) E.Mey. ex R.Knuth
 • Barringtonia caffra E. Mey.
 • Barringtonia celebesensis R.Knuth
 • Barringtonia ceramensis R.Knuth
 • Barringtonia ceylanica (Miers) Gardner ex C.B.Clarke
 • Barringtonia elongata Korth.
 • Barringtonia excelsa A.Gray
 • Barringtonia inclyta Miers ex B.D.Jacks. [Invalid]
 • Barringtonia lageniformis Merr. & L.M.Perry
 • Barringtonia longiracemosa C.T.White
 • Barringtonia obtusangula (Blume) R.Knuth
 • Barringtonia pallida (Miers) Koord. & Valeton
 • Barringtonia racemosa Oliv.
 • Barringtonia racemosa (L.) Blume ex DC.
 • Barringtonia racemosa var. elongata (Korth.) Blume
 • Barringtonia racemosa var. minor Blume
 • Barringtonia racemosa var. procera Blume
 • Barringtonia racemosa var. subcuneata Miq.
 • Barringtonia rosaria Oken
 • Barringtonia rosata (Sonn.) R.Knuth
 • Barringtonia rumphiana (Miers) R.Knuth
 • Barringtonia salomonensis Rech.
 • Barringtonia stravadium Blanco
 • Barringtonia terrestris (Miers) R.Knuth
 • Barringtonia timorensis Blume
 • Butonica alba (Pers.) Miers [Illegitimate]
 • Butonica apiculata Miers
 • Butonica caffra Miers
 • Butonica ceylanica Miers
 • Butonica inclyta Miers
 • Butonica racemosa (L.) Juss.
 • Butonica rosata (Sonn.) Miers
 • Butonica rumphiana Miers
 • Butonica terrestris Miers
 • Caryophyllus racemosus (L.) Stokes
 • Eugenia racemosa L.
 • Huttum racemosum (L.) Britten
 • Megadendron ambiguum Miers
 • Megadendron pallidum Miers
 • Menichea rosata Sonn.
 • Michelia apiculata (Miers) Kuntze
 • Michelia ceylanica (Miers) Kuntze
 • Michelia racemosa (L.) Kuntze
 • Michelia rosata (Sonn.) Kuntze
 • Michelia timorensis (Blume) Kuntze
 • Stravadium album Pers. [Illegitimate]
 • Stravadium obtusangulum Blume
 • Stravadium racemosum (L.) Sweet
 • Stravadium rubrum DC. [Illegitimate] [೧]

ಗಣಿಗಲ ತೋರ ಭಾರತದ ಎಲ್ಲೆಡೆಯೂ ಕಾಣಬರುವ ಒಂದು ಅಲಂಕಾರಿಕ ಸಸ್ಯ.

ಲಕ್ಷಣಗಳು[ಬದಲಾಯಿಸಿ]

ಸದಾ ಹಸಿರಿನ ಸಸ್ಯ.ಜೋಲು ರೆಂಬೆಗಳಿರುತ್ತವೆ.ಸಾಧಾರಣ ಗಾತ್ರವಿದ್ದು,ಹೂವು ಬಿಳಿ ಬಣ್ಣವಿದೆ.

ವೈಜ್ಞಾನಿಕ ಹೆಸರು[ಬದಲಾಯಿಸಿ]

ಬ್ಯಾರಿಂಗ್ಟೋನಿಯ ರೆಸೆಮೊಸ ಎಂಬುದು ವೈಜ್ಞಾನಿಕ ನಾಮ.ಲೆಸಿಥಿಡೇಸೀ ಕುಟುಂಬಕ್ಕೆ ಸೇರಿದೆ.ನೀವಾರ ಎಂಬುದು ಇದರ ಪರ್ಯಾಯ ನಾಮ.

ಹರಡುವಿಕೆ[ಬದಲಾಯಿಸಿ]

ಸಮುದ್ರ ತೀರ ಪ್ರದೇಶದ ಚೌಗು ಕಾಡುಗಳಲ್ಲಿ,ಅಳಿವೆಗಳಲ್ಲಿ ಹೆಚ್ಚಾಗಿ ಬೆಳೆಯುತ್ತದೆ.ಮೊಜಾಂಬಿಕ್, ದಕ್ಷಿಣ ಆಫ್ರಿಕದಿಂದ ಹಿಡಿದು,ಭಾರತ,ಶ್ರೀಲಂಕಾ,ಮಲೇಷಿಯಾ,ಚೀನಾ,ಲಾವೋಸ್ ಮತ್ತು ಆಸ್ಟ್ರೇಲಿಯ ಸಮುದ್ರ ತೀರಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.ದಕ್ಷಿಣ ಆಫ್ರಿಕ ದೇಶದಲ್ಲಿ ಇದು ಸಂರಕ್ಷಿತ ಸಸ್ಯವಾಗಿದೆ.[೨] ಸ್ವಾಭಾವಿಕವಾಗಿ ನದೀದಂಡೆಗಳಲ್ಲಿ ತಾನೇತಾನಾಗಿ ಬೆಳೆಯುತ್ತದೆ. ಭಾರತದಲ್ಲಿ ಹೆಚ್ಚು ಕಡಿಮೆ ಎಲ್ಲ ಕಡೆಗಳಲ್ಲೂ ಇದನ್ನು ಕಾಣಬಹುದು.

ಲಕ್ಷಣಗಳು[ಬದಲಾಯಿಸಿ]

ಸದಾ ಹಸುರಾಗಿರುವ ಜೋಲುರೆಂಬೆಗಳು ಈ ಮರದ ವೈಶಿಷ್ಟ್ಯ. ನಸುಗೆಂಪು ಬಣ್ಣದ ಹೂ ಬಿಡುತ್ತದೆ. ಬೀಜಗಳಲ್ಲಿರುವ ಪಿಷ್ಟದ ಪರಿಣಾಮ ಹೆಚ್ಚು. ಈ ಪಿಷ್ಟವನ್ನು ಸಂಗ್ರಹಿಸಿ ಆಹಾರ ಪದಾರ್ಥವಾಗಿ ಬಳಸುವ ಪದ್ಧತಿ ಮಲಯದಲ್ಲಿ ಉಂಟು. ಅಲ್ಲದೆ ಮರದ ಎಳೆ ಎಲೆಗಳನ್ನು ಸಹ ತಿನ್ನುವುದಿದೆ. ಗಣಿಗಲ ತೋರ ಸಾಧಾರಣ ಗಾತ್ರದ ಸುಂದರ ಮರ.

ಉಪಯೋಗಗಳು[ಬದಲಾಯಿಸಿ]

ಇದರ ವೃದ್ಧಿ ಬೀಜಗಳ ಮೂಲಕ. ಬೀಜ, ಕಾಯಿ ಮತ್ತು ಬೇರುಗಳಿಗೆ ಔಷಧೀಯ ಗುಣಗಳಿವೆ. ಕಾಯಿಯನ್ನು ಕೆಮ್ಮು, ಉಬ್ಬಸ, ಅತಿಸಾರ ಮುಂತಾದ ಕಾಯಿಲೆಗಳ ನಿವಾರಣೆಗೂ ಬೀಜಗಳನ್ನು ಹಸುವಿನ ತುಪ್ಪದೊಂದಿಗೆ ಸೇರಿಸಿ ಅರೆದು ಕಾಡಿಗೆಯ ರೂಪದಲ್ಲಿ ಹಲವು ಬಗೆಯ ಕಣ್ಣುಬೇನೆಗಳಿಗೂ ಬಳಸುವುದಿದೆ. ಇದರ ಬೀಜ, ತೊಗಟೆಗಳಲ್ಲಿ ಮೀನು ಮತ್ತು ಕಾಡುಹಂದಿಗಳಿಗೆ ಮಾರಕವಾದ ವಿಷವಿರುವುದರಿಂದ ಆ ಪ್ರಾಣಿಗಳನ್ನು ಕೊಲ್ಲಲು ಇವನ್ನು ಉಪಯೋಗಿಸುತ್ತಾರೆ.ಇದನ್ನು ಉದ್ಯಾನರಸ್ತೆಗಳ ಅಕ್ಕ ಪಕ್ಕಗಳಲ್ಲಿ ಬೆಳೆಸುತ್ತಾರೆ.

ಛಾಯಾಂಕಣ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. http://www.theplantlist.org/tpl/record/kew-313527
 2. "Protected Trees" (PDF). Department of Water Affairs and Forestry, Republic of South Africa. 3 May 2013.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: