ವಿಷಯಕ್ಕೆ ಹೋಗು

ಗಂಧಗರಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಂಧಗರಿಗೆ
ಗಂಧಗರಿಗೆಯ ಸಸಿ(T. ciliata)
Scientific classification
ಸಾಮ್ರಾಜ್ಯ:
Division:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
T. ciliata
Binomial name
ಟೂನ ಸಿಲಿಯಾಟ
M. Roem.
Synonyms

T. australis

ದಾರುವು

ಗಂಧಗರಿಗೆ(Toon tree)ಆಸ್ಟ್ರೇಲಿಯಾ ಮೂಲದ ಕಾಡು ಮರ.ಇದು ದಕ್ಷಿಣ ಎಷಿಯಾದೆಲ್ಲೆಡೆ ಬೆಳೆಯುತ್ತದೆ. ಇದು ಕರ್ನಾಟಕದಲ್ಲಿ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಕಂಡುಬರುತ್ತದೆ.

ಸಸ್ಯಶಾಸ್ತ್ರೀಯ ವರ್ಗೀಕರಣ

[ಬದಲಾಯಿಸಿ]

ಇದು ಮೆಲಿಯೇಸೀ ಕುಟುಂಬಕ್ಕೆ ಸೇರಿದ್ದು ಟೂನ ಸಿಲಿಯಾಟ (Toona ciliata)ಎಂದು ಸಸ್ಯಶಾಸ್ತ್ರೀಯ ಹೆಸರು.ಆಂಗ್ಲ ಭಾಷೆಯಲ್ಲಿ Red ceader,Indian mahogany ಎಂದೂ ಕರೆಯುತ್ತಾರೆ.ಕನ್ನಡದಲ್ಲಿ ನೊಗೆ,ಕಂಡಗರಿಗೆ, ಬೆಳಂದಿ ಮುಂತಾಗಿಹೆಸರುಗಳಿವೆ.

ಭಾರತೀಯ ಬೇರೆ ಭಾಷಾಗಳಲ್ಲಿ ಕರೆಯಲಾಗುವ ಹೆಸರು

[ಬದಲಾಯಿಸಿ]

ಸಸ್ಯದ ಗುಣಲಕ್ಷಣಗಳು

[ಬದಲಾಯಿಸಿ]

ದೊಡ್ಡ ಪ್ರಮಾಣದ ಮರ[].ಎಲೆಯುದುರಿಸುವ ಮರ ಇದು.ಮರ ೪೫ ಮೀಟರುಗಳ ಎತ್ತರ ಬೆಳಯುತ್ತದೆ.ಇದರ ಕಾಂಡ ವ್ಯಾಸ ೨.೦ಮೀಟರು ಗಳಸ್ಟು ಬೆಳಯುತ್ತದೆ.ಹೂವುಗಳು ಬೆಳ್ಳಗಿರುತ್ತವೆ.ಉದ್ದ ೫ಮಿ.ಮೀ ಇರುತ್ತವೆ. ಎಲೆಗಳು ದೊಡ್ಡಗಾತ್ರದ ಸಮಲತಾ ಸಂಯುಕ್ತ ಪರ್ಣಿಗಳಾಗಿದ್ದು(Paripinnate)೩೦ ರಿಂದ ೬೦ ಸೆ.ಮೀ.ವರೆಗೆ ಉದ್ದವಿರುತ್ತದೆ.(ಚಿತ್ರ ನೋಡಿ) ಜನವರಿ ತಿಂಗಳಲ್ಲಿ ಹೊಸತಳಿರು ಕಡುಕೆಂಪು ಬಣ್ಣದಲ್ಲಿ ಹೊರಟು ಸ್ವಲ್ಪ ಸಮಯದಲ್ಲೇ ಉಜ್ವಲ ಹಸಿರಿಗೆ ತಿರುಗುತ್ತದೆ.ಇದು ನೋಡಲು ಬಲು ಸುಂದರ.ದಾರುವು ನಸುಗೆಂಪು ಬಣ್ಣದಲ್ಲಿದ್ದು,ಹೊಳಪಿನಿಂದ ಕೂಡಿದೆ.ದಾರುವು ನಸು ಪರಿಮಳಯುಕ್ತವಾಗಿದೆ. ಸು. 70'-100' ಎತ್ತರಕ್ಕೆ ಬೆಳೆಯುವ ಈ ಮರಕ್ಕೆ 6'-10' ದಪ್ಪದ ಕಾಂಡವಿದೆ. ಎಲೆಗಳು ಬೇವಿನ ಎಲೆಯಂತೆ, ಜೋಡಣೆ ಪರ್ಯಾಯ ರೀತಿಯದು, ಚಳಿಗಾಲದಲ್ಲಿ ಉದುರಿಹೋಗುತ್ತವೆ. ಫೆಬ್ರವರಿ-ಏಪ್ರಿಲ್ ತಿಂಗಳುಗಳು ಹೂ ಬಿಡುವ ಕಾಲ. ಹೂಗಳು ದ್ವಿಲಿಂಗಿಗಳು. ಬಣ್ಣ ಬಿಳಿ, ಸಣ್ಣ ರೆಂಬೆಗಳ ತುದಿಯಲ್ಲಿನ ಸಂಕೀರ್ಣ ಪುಷ್ಪಗುಚ್ಛದಲ್ಲಿ ಜೋಡಣೆಗೊಂಡಿವೆ. ಪುಷ್ಪದಳ ಐದು. ಬಿಡಿಬಿಡಿಯಾಗಿವೆ. ಕೇಸರಗಳೂ 4-6, ಬಿಡಿಯಾಗಿವೆ. ಕೆಲವೊಮ್ಮೆ ಬರಡು ಕೇಸರಗಳೂ ಇರುವುದುಂಟು. ಅಂಡಾಶಯ ಉಚ್ಚಸ್ಥಾನದ್ದು; ಅಂಡಕಗಳಿವೆ. ಕಾಯಿ ಸಂಪುಟ (ಕ್ಯಾಪ್ಸ್ಯುಲ್) ಮಾದರಿಯದು. ಬೀಜಗಳು ಬಲು ಸಣ್ಣವು (ಸು. 15,300 ಬೀಜಗಳು ಕೇವಲ ಒಂದು ಔನ್ಸು ತೂಗುತ್ತವೆ). ಸಹಜವಾಗಿ ಬೀಜ ಮೊಳೆಯುವುದು ತುಂಬ ಕಡಿಮೆ. ಶೇಖರಿಸಿ ನರ್ಸರಿಗಳಲ್ಲಿ ಬಿತ್ತಿದರೆ ಸು.70%ರಷ್ಟು ಬೀಜಗಳು ಮೊಳೆತು ಸಸಿಗಳಾಗುತ್ತವೆ.

ಉಪಯೊಗಗಳು

[ಬದಲಾಯಿಸಿ]

ದಾರುವು ಹಗುರವಾಗಿದ್ದು,ನಸುಗೆಂಪು ಬಣ್ಣ ಹೊಂದಿದೆ.ಚೆನ್ನಾಗಿ ಹೊಳಪು ಬರುವುದರಿಂದ ಹಲಗೆಗಳಾಗಿ ಬಹು ಉಪಯೋಗಿ ಮರವಾಗಿದೆ.ಉತ್ತಮ ದರ್ಜೆಯ ಪದರಹಲಗೆ(Plywood)ತಯಾರಿಕೆಯಲ್ಲಿ,ಟೀ ಪೆಟ್ಟಿಗೆಗಳ ತಯಾರಿಯಲ್ಲಿ,ಗಾಡಿಯ ನೊಗಗಳಿಗೆ ಉಪಯೋಗದಲ್ಲಿದೆ. ಕಂಡಗರಿಗೆಯ ರಸಕಾಷ್ಠ (ಸ್ಯಾಪ್ವುಡ್) ಸ್ವಲ್ಪ ಕೆಂಪು ಅಥವಾ ಬೂದುಮಿಶ್ರಿತ ಬಿಳಿ ಬಣ್ಣದ್ದು. ಚೇಗು (ಹಾರ್ಟ್ವುಡ್) ಹೊಸದಾಗಿ ಕತ್ತರಿಸಿದಾಗ ಕೆಂಪು ಬಣ್ಣದ್ದಾಗಿದ್ದು ಕ್ರಮೇಣ ಕಂದು ಮಿಶ್ರಿತ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಚೌಬೀನೆ ಹಗುರ ನೆರ ಕಣ ವಿನ್ಯಾಸ ಮತ್ತು ಮಧ್ಯಮದರ್ಜೆಯ ಗಡುಸುಳ್ಳದ್ದು. ಇದನ್ನು ಪೀಠೋಪಕರಣ, ಮೇಲ್ಚಾವಣಿ, ಬಾಗಿಲು, ಟೀ ಪೆಟ್ಟಿಗೆಗಳು ಮುಂತಾದವನ್ನು ಮಾಡಲೂ ನೆಲದ ಮೇಲೆ ಹಾಸಲೂ ಉಪಯೋಗಿಸುತ್ತಾರೆ. ಹೂಗಳಲ್ಲಿ ನಿಕ್ಟ್ಯಾಂತಿನ್ ಎಂಬ ಕೆಂಪುಬಣ್ಣದ ವಸ್ತು ಹಾಗೂ ಫ್ಲೇವೋನ್ ಮತ್ತು ಫ್ಲೇವೊನಾಲ್ ಎಂಬ ಬಣ್ಣಗಳೂ ಇವೆ. ಬಂಗಾಳದಲ್ಲಿ ಹೂಗಳಿಂದ ಗುನಾರಿ ಎಂಬ ಬಣ್ಣವನ್ನು ತಯಾರಿಸುತ್ತಾರೆ. ಅಲ್ಲದೆ ಅವನ್ನು ಕುಸುಬೆ ಹೂ ಮತ್ತು ಅರಿಸಿನಗಳ ಜೊತೆಯಲ್ಲಿ ಸೇರಿಸಿ ಬಸಂತಿ ಎಂಬ ಗಂಧಕದ ಹಳದಿ ಬಣ್ಣವನ್ನು ಪಡೆಯಬಹುದು.

ಔಷಧವಾಗಿ ಉಪಯೋಗ

[ಬದಲಾಯಿಸಿ]
ಆಯುರ್ವೇದ ಔಷಧ ಪದ್ಧತಿಯಲ್ಲಿ ಕಂಡಗರಿಗೆಯ ಉಪಯೋಗ ಉಂಟು. ಇದರ ತೊಗಟೆಗೆ ಬಂಧಕ (ಆಸ್ಟ್ರಿಂಜೆಂಟ್) ಮತ್ತು ಕಾಲಿಕ ಜ್ವರರೋಧಕ (ಆ್ಯಂಟಿಪೀರಿಯಾಡಿಕ್) ಗುಣಗಳಿವೆ. ಇದನ್ನು ಎಳೆಯಕೂಸುಗಳಿಗೆ ಬರುವ ಆಮಶಂಕೆಯ ನಿವಾರಣೆಗೂ ವ್ರಣಗಳ ಬಾಹ್ಯಲೇಪನಕ್ಕೂ ಬಳಸುತ್ತಾರೆ.

ಉಲ್ಲೇಖನಗಳು

[ಬದಲಾಯಿಸಿ]

ಆಧಾರ ಗ್ರಂಥಗಳು

[ಬದಲಾಯಿಸಿ]

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಚಿತ್ರಶಾಲೆ

[ಬದಲಾಯಿಸಿ]