ಖಲೀಲ್ ಅಹ್ಮದ್
ಖಲೀಲ್ ಅಹ್ಮದ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಎಡಗೈ ವೇಗದ ಬೌಲರ್ ಹಾಗು ಬಲಗೈ ಕೆಳ ಕ್ರಮಾಂಕದ ಬ್ಯಾಟ್ಸಮಾನ್. ರಣಜಿ ಟ್ರೋಫೀಯಲ್ಲಿ ರಾಜಸ್ಥಾನ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸನ್ ರೈಸರ್ಸ್ ಹೈದೆರಾಬಾದ್ ತಂಡದ ಪರ ಆಡುತ್ತಾರೆ.[೧]
ಆರಂಭಿಕ ಜೀವನ[ಬದಲಾಯಿಸಿ]
ಖಲೀಲ್ ಅಹ್ಮದ್ ಡಿಸೆಂಬರ್ ೦೫, ೧೯೯೭ ರಂದು ರಾಜಸ್ಥಾನ ನಗರದಲ್ಲಿ ಜನಿಸಿದರು. ಇವರು ೨೦೧೬-೧೭ರ ಅಂತರರಾಜ್ಯ ಟಿ-೨೦ ಕ್ರಿಕೆಟ್‍ನ ಮೂಲಕ ದೇಶೀ ಕ್ರಿಕೆಟ್‌ನಲ್ಲಿ ರಾಜಸ್ಥಾನ ತಂಡದ ಪರವಾಗಿ ಪಾದಾರ್ಪನೆ ಮಾಡಿದರು. ೨೦೧೬ರ ೧೯ರ ವಯ್ಯೋಮಿತಿ ವಿಶ್ವಕಪ್‍ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಸದಸ್ಯರು. ೦೬ ಅಕ್ಟೋಬರ್ ೨೦೧೭ರಂದು ೨೦೧೭-೧೮ರ ರಣಜಿ ಟ್ರೋಫೀಯ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪನೆ ಮಾಡಿದರು. ಫೆಬ್ರವರಿ ೦೫ ೨೦೧೮ರಂದು ವಿಜಯ್ ಹಜಾರೆ ಟ್ರೋಫಿಯಲ್ಲಿ ಪಾದಾರ್ಪನೆ ಮಾಡಿದರು.ಇವರ ವೃತ್ತಿಜೀವನ ರೂಪುಗೊಳ್ಳಲು ದ್ರಾವಿಡ್ ಭಾರೀ ಪ್ರಭಾವಬೀರಿದ್ದಾರೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಯ್ಕೆಯಾದಗ ಇವರು ತಿಳಿಸಿದ್ದರು .[೨][೩][೪][೫][೬]
ವೃತ್ತಿ ಜೀವನ[ಬದಲಾಯಿಸಿ]
ಐಪಿಎಲ್ ಕ್ರಿಕೆಟ್[ಬದಲಾಯಿಸಿ]
ಖಲೀಲ್ ಅವರನ್ನು ಡೆಲ್ಲಿ ಡೇರ್ಡೆವಿಲ್ಸ್ ತಂಡ ೧೦ ಲಕ್ಷ ರೂಪಾಯಿ ಮೂಲ ಬೆಲೆಗೆ ಖರೀದಿಸಿತ್ತು. ಆದರೆ ಅವರು ಆ ಐಪಿಎಲ್ನಲ್ಲಿ ಒಂದೂ ಪಂದ್ಯವನ್ನಾಡಿರಲಿಲ್ಲ. ನಂತರ ಮೇ ೨೫, ೨೦೧೮ರಂದು ಕೊಲ್ಕತ್ತದ ಈಡನ್ ಗಾರ್ಡನ್ಸ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಕ್ವಾಲಿಫೈಯರ್ ೨ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದೆರಾಬಾದ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು. ೦೩ ಕೋಟಿ ರೂ. ನೀಡಿ ಸನ್ರೈಸರ್ಸ್ ಹೈದರಾಬಾದ್ ತಂಡ ಖಲೀಲ್ರನ್ನು ಖರೀದಿಸಿತ್ತು.[೭][೮][೯]
ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]
ಸೆಪ್ಟಂಬರ್ ೧೮, ೨೦೧೮ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಹಾಂಗ್ ಕಾಂಗ್ ವಿರುದ್ದ ನಡೆದ ಏಷ್ಯಾ ಕಪ್‌ನ ನಾಲ್ಕನೇ ಏಕದಿನ ಪಂದ್ಯದ ಮೂಲಕ ಖಲೀಲ್ ಅಹ್ಮದ್ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ತಮ್ಮ ಚೊಚ್ಚಲ ಪಂದ್ಯದಲ್ಲಿ ೦೩ ವಿಕೇಟ್‌ಗಳನ್ನು ಪಡೆದರು.[೧೦][೧೧][೧೨][೧೩]
ಪಂದ್ಯಗಳು[ಬದಲಾಯಿಸಿ]
ವಿಕೇಟ್‍ಗಳು[ಬದಲಾಯಿಸಿ]
- ಏಕದಿನ ಪಂದ್ಯಗಳಲ್ಲಿ : ೦೪
ಉಲ್ಲೇಖಗಳು[ಬದಲಾಯಿಸಿ]
- ↑ https://www.iplt20.com/teams/sunrisers-hyderabad/squad/2964/khaleel-ahmed
- ↑ https://www.cricbuzz.com/profiles/10952/k-khaleel-ahmed#/profile
- ↑ https://publictv.in/rahul-dravid-turned-my-career-around-khaleel-ahmed/amp
- ↑ https://kannada.mykhel.com/cricket/khaleel-ahmed-pacer-from-tonk-team-india-odi-squad-006073.html
- ↑ https://m.dailyhunt.in/news/india/kannada/varthabharathi-epaper-varthabh/draavid+nanna+vruttibadukige+tiruvu+nididaru+khalil+ahmadh-newsid-95954830
- ↑ https://www.hindustantimes.com/cricket/asia-cup-2018-khaleel-ahmed-5-things-to-know-about-india-s-222nd-odi-player/story-oEfpotIT2ckF0MyCTXDViI.html
- ↑ http://vijayavani.net/5-things-to-know-about-team-india-player-khaleel-ahmed/
- ↑ https://www.cricbuzz.com/live-cricket-scorecard/20119/sunrisers-hyderabad-vs-kolkata-knight-riders-qualifier-2-indian-premier-league-2018
- ↑ "ಆರ್ಕೈವ್ ನಕಲು". Archived from the original on 2018-10-04. Retrieved 2018-09-29.
- ↑ https://www.cricbuzz.com/live-cricket-scorecard/20742/india-vs-hong-kong-4th-match-group-a-asia-cup-2018
- ↑ https://vijaykarnataka.indiatimes.com/sportshome/cricket/khaleel-ahmed-becomes-222nd-player-to-represent-india-in-odis/articleshow/65857678.cms
- ↑ http://www.kannadaprabha.com/cricket/asia-cup-2018-all-you-need-to-know-about-indias-left-arm-fast-bowling-sensation-khaleel-ahmed/324616.html
- ↑ https://indianexpress.com/article/sports/cricket/young-fast-and-in-a-hurry-khaleel-ahmed-breaks-into-indian-team-5335560/
- ↑ https://www.news18.com/cricketnext/profile/khaleel-ahmed/65867.html
- ↑ http://www.espncricinfo.com/india/content/player/942645.html