ವಿಷಯಕ್ಕೆ ಹೋಗು

ಖಡ್ಗ ಬಾಲ ಮೀನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಖಡ್ಗ ಬಾಲ ಮೀನು
ಖಡ್ಗ ಬಾಲ ಮೀನಿನ ಗಂಡು ಕಾಡು ಬಗೆ
ಖಡ್ಗ ಬಾಲ ಮೀನಿನ, ಸೆರೆಯಲ್ಲಿ ಬೆಳೆಸಲಾದ ಕೆಂಪು ರೂಪಾಂತರ, ಗಂಡು (ಮೇಲೆ) ಮತ್ತು ಹೆಣ್ಣು (ಕೆಳಗೆ)
Conservation status

Secure  (NatureServe)
Scientific classification e
ಕ್ಷೇತ್ರ: Eukaryota
ಸಾಮ್ರಾಜ್ಯ: Animalia
ವಿಭಾಗ: ಕಾರ್ಡೇಟಾ
ವರ್ಗ: ಆ್ಯಕ್ಟಿನೋಟೆರಿಜೀ
ಗಣ: ಸಿಪ್ರಿನೊಡಾಂಟಿಫ಼ಾರ್ಮೀಸ್
ಕುಟುಂಬ: ಪೋಯಿಸಿಲಿಡೇ
ಕುಲ: ಕ್ಸಿಫೊಫೋರಸ್
ಪ್ರಜಾತಿ:
ಕ. ಹಿಲೇರಿ
Binomial name
ಕ್ಸಿಫೊಫೋರಸ್ ಹಿಲೇರಿ
Heckel, 1848

ಖಡ್ಗ ಬಾಲ ಮೀನು ಸಿಪ್ರಿನೊಡಾಂಟೀ ಗುಂಪಿನ ಪೋಯಿಸಿಲಿಡೆ ಕುಟುಂಬಕ್ಕೆ ಸೇರಿದ ಸಿಹಿನೀರು ಮೀನು. ಇದರ ಶಾಸ್ತ್ರೀಯನಾಮ ಕ್ಸಿಫೊಫೊರಸ್ ಹಿಲೇರಿ (Xiphophorus hellerii).[] ಗಪ್ಪಿ, ಪ್ಲಾಟಿ ಮೀನು ಮತ್ತು ಮೋಲಿಗಳು ಇದಕ್ಕೆ ಹತ್ತಿರ ಸಂಬಂಧಿಗಳು. ಇದು ಅತ್ಯಂತ ಜನಪ್ರಿಯ ಅಕ್ವೇರಿಯಂ ಮೀನು. ಇದರ ಕಷ್ಟಸಹಿಷ್ಣುತೆ ಮತ್ತು ಸಮುದಾಯ ತೊಟ್ಟಿಗಳಿಗೆ ಇದರ ಯುಕ್ತತೆಯ ಕಾರಣದಿಂದ ಅಕ್ವೇರಿಯಂ ಹವ್ಯಾಸಕ್ಕಾಗಿ ಇದನ್ನು ಬೆಳೆಸಲಾಗುತ್ತದೆ.[]

ದೇಹರಚನೆ, ನಡವಳಿಕೆ, ರೋಗಗಳು

[ಬದಲಾಯಿಸಿ]

ಕತ್ತಿಯಂತಿರುವ ಬಾಲ ಈ ಮೀನಿನ ವಿಶೇಷ ಗುಣ. ಇದು ಪ್ರಾಯಕ್ಕೆ ಬಂದ ಗಂಡುಮೀನಿನಲ್ಲಿ ಕಂಡುಬರುತ್ತದೆ. ಬಾಲದ ರೆಕ್ಕೆಯ (tailfin) ಕೆಳಭಾಗ ನೀಳವಾಗಿ ಬೆಳೆದು ಅದರ ತುದಿ ಮೊನಚಾಗಿ ಖಡ್ಗವನ್ನು ಹೋಲುವುದರಿಂದ ಈ ಮೀನಿಗೆ ಈ ಹೆಸರು. ಮೀನು ಸುಮಾರು 15 ಸೆಂ.ಮೀ. ವರೆಗೂ ಬೆಳೆಯುತ್ತದೆ. ಬಾಲ ದೇಹದ ಅರ್ಧದಷ್ಟಿದೆ. ಈ ಬಾಲದ ಉಪಯೋಗವೇನೆಂದು ಸರಿಯಾಗಿ ತಿಳಿದಿಲ್ಲ. ಪ್ರಣಯ ಕೇಳಿ ಸಂದರ್ಭದಲ್ಲಿ ಗಂಡು ಇದನ್ನು ಪ್ರದರ್ಶಿಸುವುದೆಂಬ ಅಭಿಪ್ರಾಯವಿದೆ. ಈ ಪ್ರದರ್ಶನದಿಂದ ಹೆಣ್ಣು ಉದ್ರೇಕಗೊಳ್ಳುವುದೋ ಅಥವಾ ಮರುಳುಗೊಳ್ಳುವುದೋ ತಿಳಿಯದು. ಇವು ಸಾಮಾನ್ಯವಾಗಿ ಪ್ಲಾಟಿ ಮೀನುಗಳಿಗಿಂತ ಎತ್ತರ ಪ್ರದೇಶ ಮತ್ತು ತಂಪು ನೀರನ್ನು ಇಚ್ಛಿಸುತ್ತವೆ.

ಪ್ಲಾಟಿ ಮೀನು ಮತ್ತು ಖಡ್ಗ ಬಾಲದ ಮೀನುಗಳ ಕೆಲವು ಅಡ್ಡತಳಿಗಳು ಸಾಮಾನ್ಯವಾಗಿ ಕರಿ ಏಡಿಗಂತಿ ರೋಗಕ್ಕೆ (ಬ್ಲ್ಯಾಕ್ ಕ್ಯಾನ್ಸರ್) ಸುಲಭವಾಗಿ ತುತ್ತಾಗುತ್ತವೆ. ಇದಕ್ಕೆ ಕಾರಣವನ್ನು ಕಂಡುಹಿಡಿಯಲು ಕೆಲವು ವೈದ್ಯಕೀಯ ಸಂಶೋಧನಾಲಯಗಳ ತಳಿಶಾಸ್ತ್ರ ಪ್ರಯೋಗಾಲಯಗಳಲ್ಲಿ ಸಂಶೋಧನೆ ನಡೆಯುತ್ತಿದೆ.

ತಳಿ ಸಂಕರ

[ಬದಲಾಯಿಸಿ]

ಖಡ್ಗಬಾಲ ಮೀನು ಮೆಕ್ಸಿಕೋದ ಮೂಲವಾಸಿ. ಇಲ್ಲಿಂದ 1909ರಲ್ಲಿ ಮೊದಲ ಬಾರಿಗೆ ಇದನ್ನು ಜರ್ಮನಿಗೆ ತರಲಾಯಿತು. ಇದಕ್ಕೆ ಎರಡು ವರ್ಷಗಳ ಮುನ್ನ ಪ್ಲಾಟಿ ಮೀನನ್ನು ತರಲಾಗಿತ್ತು. ಈ ಎರಡು ಪ್ರಭೇದಗಳ ಮೀನುಗಳನ್ನೂ ಅಡ್ಡ ಹಾಯಿಸಿ ಅನೇಕ ಅಂದವಾದ ಬಣ್ಣಬಣ್ಣದ ಮಿಶ್ರತಳಿಗಳನ್ನು ಪಡೆಯಲಾಯಿತು. ಈಗಿರುವ ಎಲ್ಲ ಕೆಂಪು ಪ್ಲಾಟಿ ಮೀನುಗಳು ಮತ್ತು ಖಡ್ಗ ಬಾಲದ ಮೀನುಗಳು ಅಡ್ಡ ಹಾಯ್ಕೆಯಿಂದ ಹುಟ್ಟಿದ ಮಿಶ್ರತಳಿಗಳು. ಸೋಜಿಗದ ಸಂಗತಿಯೆಂದರೆ ಸಾಮಾನ್ಯ ಬಗೆಯ ಕೊಳ ಅಥವಾ ಹೊಳೆಯಲ್ಲಿದ್ದರೂ ಅವುಗಳಲ್ಲಿ ತಳಿ ಸಂಕರಣ ಇಲ್ಲ. ಆದರೆ ಜಲಚರ ಪ್ರಾಣಿ ಸಂಗ್ರಹಾಲಯದ ನೀರಿನಲ್ಲಿ ಮಾತ್ರ ತಳಿಸಂಕರ ಕ್ರಿಯೆ ನಡೆಯುತ್ತದೆ.

ಕಂಡುಬರುವ ಪ್ರದೇಶಗಳು

[ಬದಲಾಯಿಸಿ]

ಖಡ್ಗ ಬಾಲ ಮೀನುಗಳು ಹಾಂಡುರಾಸ್, ಬ್ರಿಟಿಷ್ ಹಾಂಡುರಾಸ್, ಗ್ವಾಟೆಮಾಲ ಮತ್ತು ದಕ್ಷಿಣ ಮೆಕ್ಸಿಕೋದಲ್ಲಿ (ಯುಕಟಾನ್ ಬಿಟ್ಟು) ಸಾಮಾನ್ಯವಾಗಿ ಕಂಡುಬರುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. Daniels, A.; Maiz-Tome, L. (2019). "Xiphophorus hellerii". IUCN Red List of Threatened Species. 2019: e.T191780A2002911. doi:10.2305/IUCN.UK.2019-2.RLTS.T191780A2002911.en. Retrieved 19 November 2021.
  2. Froese, Rainer; Pauly, Daniel (eds.) (2013). "Xiphophorus hellerii" in FishBase. November 2013 version.
  3. Edmond, Adam (11 March 2017). "Swordtail Fish Care Guide". The Aquarium Guide. Retrieved 23 June 2021.


ಹೊರಗಿನ ಕೊಂಡಿಗಳು

[ಬದಲಾಯಿಸಿ]


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: