ವಿಷಯಕ್ಕೆ ಹೋಗು

ಕ್ರೊಸ್ಟಾಟಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕ್ರೊಸ್ಟಾಟಾ ಬೇಕ್ ಮಾಡಲಾದ ಒಂದು ಇಟ್ಯಾಲಿಯನ್ ಟಾರ್ಟ್ ಅಥವಾ ಪೈ ಮತ್ತು ನೇಪಲ್ಸ್‌ನಲ್ಲಿ ಕೋಪಿ ಹಾಗೂ ಲಾಂಬರ್ಡಿಯಲ್ಲಿ ಸ್ಫೊಲಿಯಾಟೆ ಎಂದು ಕರೆಯಲ್ಪಡುತ್ತದೆ. ಸಾಂಪ್ರದಾಯಿಕವಾಗಿ, ಕ್ರೊಸ್ಟಾಟಾ ಒಂದು ಅಡಿಪಾಯ, ಸಾಮಾನ್ಯವಾಗಿ ತುಪ್ಪ ಮತ್ತು ಬೆಣ್ಣೆಯಿಂದ ಪರಿಮಳಯುಕ್ತವಾಗಿಸಿದ ಪುಡಿಪುಡಿಯಾಗುವ ಕಣಕದ ಮೂರು ಪದರಗಳನ್ನು ಹೊಂದಿರುತ್ತದೆ. ಇಂದು, ಅದರ ಬದಲು ಶಾರ್ಟ್‍ಕ್ರಸ್ಟ್ ಪೇಸ್ಟ್ರಿಯನ್ನು ಬಳಸಲಾಗುತ್ತದೆ. ಸಿಹಿ ಮತ್ತು ಉಪ್ಪುಖಾರದ ಕ್ರೊಸ್ಟಾಟಾಗಳ ಅಂತ್ಯವಿಲ್ಲದ ಭಿನ್ನ ಉದಾಹರಣೆಗಳಿವೆ. ಸಿಹಿ ಉದಾಹರಣೆಗಳು ಹೂರಣವಾಗಿ ಹಣ್ಣಿನ ಪ್ರಿಜ಼ರ್ವ್‍ಗಳನ್ನು ಬಳಸುತ್ತವೆ, ವಿಶಿಷ್ಟವಾಗಿ ಜರ್ದಾಳು, ಚೆರಿ, ಪೀಚ್ ಅಥವಾ ನೆಕ್ಟರೀನ್, ಅಥವಾ ಬೆರಿಗಳು.